Friday, 20 December 2019

ಸೂರ್ಯ ಕವಚ ಸ್ತೋತ್ರಂ ಯಾಜ್ಞವಲ್ಕ್ಯ ವಿರಚಿತಮ್ surya kavacha stotra by yajnavalkya

sUryakavachastotram 
॥ ಸೂರ್ಯಕವಚಸ್ತೋತ್ರಮ್ ॥

ಶ್ರೀಗಣೇಶಾಯ ನಮಃ ।
ಯಾಜ್ಞವಲ್ಕ್ಯ ಉವಾಚ ।
ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ ।
ಶರೀರಾರೋಗ್ಯದಂ ದಿವ್ಯಂ ಸರ್ವಸೌಭಾಗ್ಯದಾಯಕಮ್ ॥ 1॥

ದೇದೀಪ್ಯಮಾನಮುಕುಟಂ ಸ್ಫುರನ್ಮಕರಕುಂಡಲಮ್ ।
ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತದುದೀರಯೇತ್ ॥ 2॥

ಶಿರೋ ಮೇ ಭಾಸ್ಕರಃ ಪಾತು ಲಲಾಟಂ ಮೇಽಮಿತದ್ಯುತಿಃ ।
ನೇತ್ರೇ ದಿನಮಣಿಃ ಪಾತು ಶ್ರವಣೇ ವಾಸರೇಶ್ವರಃ ॥ 3॥

ಘ್ರಾಣಂ ಘರ್ಮಘೃಣಿಃ ಪಾತು ವದನಂ ವೇದವಾಹನಃ ।
ಜಿಹ್ವಾಂ ಮೇ ಮಾನದಃ ಪಾತು ಕಂಠಂ ಮೇ ಸುರವನ್ದಿತಃ ॥ 4॥

ಸ್ಕನ್ಧೌ ಪ್ರಭಾಕರಃ ಪಾತು ವಕ್ಷಃ ಪಾತು ಜನಪ್ರಿಯಃ ।
ಪಾತು ಪಾದೌ ದ್ವಾದಶಾತ್ಮಾ ಸರ್ವಾಂಗಂ ಸಕಲೇಶ್ವರಃ ॥ 5॥

ಸೂರ್ಯರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೇ ।
ದಧಾತಿ ಯಃ ಕರೇ ತಸ್ಯ ವಶಗಾಃ ಸರ್ವಸಿದ್ಧಯಃ ॥ 6॥

ಸುಸ್ನಾತೋ ಯೋ ಜಪೇತ್ಸಮ್ಯಗ್ಯೋಽಧೀತೇ ಸ್ವಸ್ಥಮಾನಸಃ ।
ಸ ರೋಗಮುಕ್ತೋ ದೀರ್ಘಾಯುಃ ಸುಖಂ ಪುಷ್ಟಿಂ ಚ ವಿನ್ದತಿ ॥ 7॥

॥ ಇತಿ ಶ್ರೀಮದ್ಯಾಜ್ಞವಲ್ಕ್ಯಮುನಿವಿರಚಿತಂ ಸೂರ್ಯಕವಚಸ್ತೋತ್ರಂ ಸಮ್ಪೂರ್ಣಮ್ ॥
*****

ಶ್ರೀ ಯಾಜ್ಞವಲ್ಕ್ಯ ಮುನಿ ವಿರಚಿತಮ್  ಶ್ರೀ ಸೂರ್ಯ ಕವಚ ||
 ಈ ಶ್ಲೋಕವನ್ನು ದಿನಾಗಲೂ ಪಾರಾಯಣ ಮಾಡಬೇಕು .
ದಿನಾ ಆಗದಿದ್ದರೇ   ಪ್ರತಿ  ಭಾನುವಾರ  Sunday   ಪಾರಾಯಣ ಮಾಡ ಬಹುದು.
 ಒಳ್ಳೆಯ ಆರೋಗ್ಯ ಭಾಗ್ಯ  ಶ್ರು ಸೂರ್ಯ ಅಂತರ್ಗತ  ನಾರಾಯಣ ಕೊಡುತ್ತಾನೆ 
***

 || ಶ್ರೀ ಗಣೇಶಾಯ ನಮ: ||


ಯಾಜ್ಞವಲ್ಕ್ಯ ಉವಾಚ:-

ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ |

ಶರೀರಾರೋಗ್ಯದಂ ದಿವ್ಯಂ ಸರ್ವ ಸೌಭಾಗ್ಯದಾಯಕಮ್ ||೧||


ಭಾವಾರ್ಥ:-

ಯಾಜ್ಞವಲ್ಕ್ಯರುಹೇಳಿದರು:-

ಎಲೈ ಮುನಿಪುಂಗವನೇ!ಮಂಗಲದಾಯಕವೂ ಶ್ರೇಷ್ಠವೂ, ಶರೀರಾರೋಗ್ಯವನ್ನು ರಕ್ಷಿಸುವಂತಹದೂ, ಸಮಸ್ತ ಸೌಭಾಗ್ಯವನ್ನು ಒದಗಿಸಿಕೊಡುವಂತಹದೂ ಆಗಿರುವ ಸೂರ್ಯಕವಚವನ್ನು ನಿನಗೆ ಅರುಹುವವನಾಗಿದ್ದೇನೆ.ಕೇಳುವವನಾಗು.


ದೇದೀಪ್ಯಮಾನ ಮುಕುಟಂ ಸ್ಫುರನ್ಮಕರ ಕುಂಡಲಮ್ |

ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತುದುದೀರಯೇತ್ ||೨||


ಭಾವಾರ್ಥ:-ಅತ್ಯಂತ ಪ್ರಕಾಶಿಸುತ್ತಿರುವ ಕಿರೀಟವುಳ್ಳವನೂ, ರಂಜಿಸುತ್ತಿರುವ ಮೊಸಳೆಯಾಕಾರದ ಕಿವಿಯಾಭರಣಗಳನ್ನು ಧರಿಸಿದವನೂ, ಸಾವಿರಕಿರಣಗಳೂಳ್ಳವನೂ ಆಗಿರುವ ಸೂರ್ಯನನ್ನು ಧ್ಯಾನಿಸುತ್ತಾ ಈ ಸ್ತುತಿಯನ್ನು ಪಠಿಸಬೇಕು.


ಶಿರೋಮೇ ಭಾಸ್ಕರ: ಪಾತು ಲಲಾಟಂ ಮೇsಮಿತದ್ಯುತಿ: |

ನೇತ್ರೇ ದಿನಮಣಿ:ಪಾತು ಶ್ರವಣೇವಾಸರೇಶ್ವರ: ||೩||


ಭಾವಾರ್ಥ:-ನನ್ನ ತಲೆಯನ್ನು ಭಾಸ್ಕರನೂ,ಹಣೆಯನ್ನು ಮಿತಿಯಿಲ್ಲದಪ್ರಕಾಶವುಳ್ಳವನೂ ಕಾಪಾಡಲಿ.ದಿನಮಣಿಯು ನಯನಗಳನ್ನೂ,ದಿನಾಧಿಪತಿಯು ನನ್ನ ಕಿವಿಗಳನ್ನೂ ರಕ್ಷಿಸಲಿ.


ಘ್ರಾಣಂ ಫರ್ಮಘೃಣಿ:ಪಾತು ವದನಂ ವೇದವಾಹನ: |

ಜಿಹ್ವಾಂ ಮೇ ಮಾನವ:ಪಾತು ಕಂಠಂ ಮೇ ಸುರವಂದಿತ: ||೪||


ಭಾವಾರ್ಥ:-ನಾಸಿಕವನ್ನು ಉಷ್ಣ ಕಿರಣನೂ,ಮುಖವನ್ನು ವೇದವಾಹನನೂ ಕಾಪಾಡಲಿ.ಹಾಗೆಯೇ ನನ್ನ ನಾಲಿಗೆಯನ್ನು ಗೌರವವನ್ನೊದಗಿಸುವವನೂ,ಕುತ್ತಿಗೆಯನ್ನು ಸುರರಿಂದ ನಮಿಸಲ್ಪಡುವವನೂ ಕಾಪಾಡಲಿ.


ಸ್ಕಂಧೌ ಪ್ರಭಾಕರ: ಪಾತು ವಕ್ಷ: ಪಾತು ಜನಪ್ರಿಯ: |

ಪಾತು ಪಾದೌ ದ್ವಾದಶಾತ್ಮಾ ಸರ್ವಾಂಗಂ ಸಕಲೇಶ್ವರ: ||೫||


ಭಾವಾರ್ಥ:-ಪ್ರಭಾಕರನು ಹಗಲಿನಲ್ಲಿಯೂ, ಜನಪ್ರಿಯನು ಎದೆಯನ್ನೂ ಕಾಪಾಡಲಿ. ದ್ವಾದಶಾತ್ಮನು ಪಾದಗಳನ್ನೂ,ಸರ್ವಾಂಗಗಳನ್ನು ಸಕಲಾಧಿಪನೂ ಕಾಪಾಡಲಿ.


ಸೂರ್ಯ ರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೆ |

ದಧಾತಿ ಯ:ಕರೇತಸ್ಯ ವಶಗಾ: ಸರ್ವಸಿದ್ಧಯ: ||೬||


ಭಾವಾರ್ಥ:-ಸೂರ್ಯನ ರಕ್ಷಣೆ ಪಡೆಯುವ ಈ ಸ್ತುತಿಯನ್ನು ಭುಜಪತ್ರಾವಳಿಯಲ್ಲಿ ಬರೆದು ಹಸ್ತದಲ್ಲಿ ಧರಿಸುಕೊಳ್ಳುವಾತನಿಗೆ ಸಮಸ್ತ ಇಷ್ಟಾರ್ಥಗಳು ಲಭಿಸುವವು.


ಸುಸ್ನಾತೋ ಯೋ ಜಪೇತ್ಸಮ್ಯಗ್ಯೋsಧೀತೇಸ್ವಸ್ಥಮಾನಸ: |

ಸ ರೋಗಮುಕ್ತೋ ಧೀರ್ಘಾಯು: ಸುಖಂ ಪುಷ್ಟಿಂ ಚ ವಿಂದತಿ ||೭||


ಭಾವಾರ್ಥ:-ಸ್ನಾನವನ್ನು ಮಾಡಿ ಶಾಂತ ಮನಸ್ಸಿನಿಂದ ಉತ್ತಮವಾಗಿ ಜಪಿಸುವಾತನು ರೋಗ ಮುಕ್ತನಾಗಿ ಆರೋಗ್ಯಶಾಲಿಯಾಗುವನು.ಧೀರ್ಘಾಯುಶಾಲಿಯಾಗುವನು. ಸೌಖ್ಯವನ್ನೂ ಶರೀರ ಸಾಮರ್ಥ್ಯವಂತನಾಗುವನು.

***

|| ಇತಿ ಸೂರ್ಯ ಕವಚ ಸ್ತೋತ್ರಮ್ ||  || ಈ ರೀತಿಯಾಗಿ ಸೂರ್ಯ ಕವಚ ಸ್ತೋತ್ರಗಳ ಭಾವಾರ್ಥವಾಗಿದೆ ||

***


॥ सूर्यकवचस्तोत्रम् २ ॥

श्रीगणेशाय नमः ।
याज्ञवल्क्य उवाच ।
श‍ृणुष्व मुनिशार्दूल सूर्यस्य कवचं शुभम् ।
शरीरारोग्यदं दिव्यं सर्वसौभाग्यदायकम् ॥ १॥

देदीप्यमानमुकुटं स्फुरन्मकरकुण्डलम् ।
ध्यात्वा सहस्रकिरणं स्तोत्रमेतदुदीरयेत् ॥ २॥

शिरो मे भास्करः पातु ललाटं मेऽमितद्युतिः ।
नेत्रे दिनमणिः पातु श्रवणे वासरेश्वरः ॥ ३॥

घ्राणं घर्मघृणिः पातु वदनं वेदवाहनः ।
जिह्वां मे मानदः पातु कण्ठं मे सुरवन्दितः ॥ ४॥

स्कन्धौ प्रभाकरः पातु वक्षः पातु जनप्रियः ।
पातु पादौ द्वादशात्मा सर्वाङ्गं सकलेश्वरः ॥ ५॥

सूर्यरक्षात्मकं स्तोत्रं लिखित्वा भूर्जपत्रके ।
दधाति यः करे तस्य वशगाः सर्वसिद्धयः ॥ ६॥

सुस्नातो यो जपेत्सम्यग्योऽधीते स्वस्थमानसः ।
स रोगमुक्तो दीर्घायुः सुखं पुष्टिं च विन्दति ॥ ७॥


॥ इति श्रीमद्याज्ञवल्क्यमुनिविरचितं सूर्यकवचस्तोत्रं सम्पूर्णम् ॥
************



ಸೂರ್ಯ ಕವಚ ಸ್ತೋತ್ರಂ surya kavacha stotra

ಯಾಜ್ಞವಲ್ಕ್ಯ  ಉವಾಚ ।


ಶೃಣುಷ್ವ  ಮುನಿಶಾರ್ದೂಲ , ಸೂರ್ಯಸ್ವ ಕವಚಂ  ಶುಭಂ ।

ಶರೀರರೋಗ್ಯದಂ  ದಿವ್ಯಂ ಸರ್ವಸೌಭಾಗ್ಯದಾಯಕಮ್  ।।೧।।

ದೇದೀಷ್ಯಮಾನಮುಕುಟಂ , ಸ್ಫುರನ್  ಮಕರ ಕುಂಡಲಂ ।

ಧ್ಯಾತ್ವಾ  ಸಹಸ್ರ ಕಿರಣಂ  ಸ್ತೋತ್ರಮೇತದುದೀರಯೇತ್ ।।೨।।

ಶಿರೋ ಮೇ  ಭಾಸ್ಕರಃ  ಪಾತು ,ಲಲಾಟಂ  ಮೇಮಿತದ್ಯುತಿಃ ।

ನೇತ್ರೆ  ದಿನಮಣಿಃ  ಪಾತು , ಶ್ರವಣೆ  ವಾಸರೇಶ್ವರಃ ।।೩।।

ಘ್ರಾಣಂ ಧರ್ಮಘ್ರುಣಿಃ  ಪಾತು ,ವದನಂ  ವೇದ ವಾಹನಃ ।

ಜಿಹ್ವಾಂ ಮೇ   ಮಾನದಃ  ಪಾತು , ಕಂಠಮ್  ಮೇ  ಸುರವಂದಿತಃ ।।೪।।

ಸ್ಕಂದೌಪ್ರಭಾಕರಃ  ಪಾತು , ವಕ್ಷಃ ಪಾತು ಜನಪ್ರಿಯಃ ।

ಪಾತು ಪಾದೌ ದ್ವಾದಶಾತ್ಮಾ , ಸರ್ವಾಂಗಃ  ಸಕಲೇಶ್ವರಃ ।।೫।।

ಸೂರ್ಯ ರಕ್ಷಾಕರಂ  ಸ್ತೋತ್ರಂ , ಲಿಖಿತ್ವಾ  ಭೂರ್ಜ  ಪತ್ರಿಕೆ ।

ದದಾತಿ ಯಃ ಕರೆ ತಶ್ಯಾವಶಗಾಃ  ಸರ್ವಸಿದ್ಧಯಃ ।।೬।।

ಸುಸ್ನಾತೊಯೋ  ಜಪೇತ್ಸಮ್ಯಗ್ಯೋsಧೀತೆ  ಸ್ವಸ್ಥ  ಮಾನಸಃ ।

ಸ ರೋಗಮುಕ್ತೋ  ಧೀರ್ಘಾಯುಃ , ಸುಖಂ  ಪುಷ್ಟಿಶ್ಚ  ವಿಂದತಿ ।।೭।।

ಇತಿ ಶ್ರೀಮದ್ಯಾಜ್ಞವಲ್ಕ್ಯ  ವಿರಚಿತಂ ಸೂರ್ಯಕವಚ ಸ್ತೋತ್ರಂ ಸಂಪೂರ್ಣಂ

***********


ಭಾವಾರ್ಥ :

ಯಾಜ್ಞವಲ್ಕ್ಯರು  ಹೇಳಿದ್ದು -

ಕೇಳೈ  ಮುನಿಶಾರ್ದೂಲನೆ , ಶುಭಪ್ರದವೂ ಶರೀರಕ್ಕೆ ಆರೋಗ್ಯವನ್ನು  ಕೊಡತಕ್ಕದ್ದು ದಿವ್ಯವೂ ಮತ್ತು ಎಲ್ಲ ಸೌಭಾಗ್ಯಗಳನ್ನು ಕೊಡತಕ್ಕದ್ದೂ   ಆದ ಸೂರ್ಯಕವಚವನ್ನು ।।೧।।

ಒಳ್ಳೆ ದೀಪ್ತಿಮಂತವಾದ ಮುಕುಟವನ್ನು ಧರಿಸಿದವನೂ  ಹೊಳೆಯುವ ಮೀನಿನಾಕಾರದ ಕುಂಡಲಗಳುಳ್ಳವನೂ  ಆದ ಸಾವಿರ  ಕಿರಣಗಳುಳ್ಳವ (ಸೂರ್ಯ )ನನ್ನು  ಧ್ಯಾನಿಸಿ , ಈ  ಸ್ತೋತ್ರವನ್ನು ಪಠಿಸಬೇಕು ।।೨।।

ಶಿರವನ್ನು  ಭಾಸ್ಕರನೂ  ಹಣೆಯನ್ನು ಅಮಿತದ್ಯುತಿಯೂ , ಕಣ್ಣುಗಳನ್ನು ದಿನಮಣಿಯೂ  ಕಿವಿಗಳನ್ನು ವಾಸರೇಶ್ವರನೂ ಸಂರಕ್ಷಿಸಲಿ  ।।೩।।

ಮೂಗನ್ನು ಧರ್ಮ ಘ್ರುಣಿಯೂ  ಬಾಯಿಯನ್ನು ವೇದವಾಹನನೂ  ನಾಲಿಗೆಯನ್ನು ಮಾನದನೂ ಕಂಠವನ್ನು  ಸುರವಂದಿತನೂ
ಕಾಪಾಡಲಿ ।।೪।।

ಹೆಗಲುಗಳನ್ನು  ಪ್ರಭಾಕರನೂ  ಎದೆಯನ್ನು  ಜನಪ್ರಿಯನೂ ಪಾದಗಳನ್ನು  ದ್ವಾದಶಾತ್ಮನೂ  ಸರ್ವಾಂಗವನ್ನು  ಸಕಲೇಶ್ವರನೂ  ಕಾಯಲಿ ।।೫।।

ಸೂರ್ಯ ರಕ್ಶಾತ್ಮಕವಾದ ಈ ಸ್ತೋತವನ್ನು  ಭೂರ್ಜ  ಪತ್ರದಲ್ಲಿ ಬರೆದು ಯಾವನು ಕೈಯಲ್ಲಿ ಕಟ್ಟಿ ಕೊಳ್ಳುವನೋ  ಅವನಿಗೆ ಎಲ್ಲ ಸಿದ್ಧಿಗಳೂ  ವಶವಾಗುವವೂ ।।೬।।

ಒಳ್ಳೆ ಬಗೆಯಾಗಿ ಸ್ನಾನ ಮಾಡಿ , ಸ್ವಸ್ಥವಾದ ಮನದಿಂದ ಯಾವನು ಚೆನ್ನಾಗಿ ಜಪಿಸುವನೋ , ಕಲಿಯುವನೋ , ಅವನು ರೋಗಮುಕ್ತನಾಗಿ ಧೀರ್ಘಾಯುವಾಗುವನು  ಮತ್ತು ಸುಖವನ್ನೂ  ಪುಷ್ಟಿಯನ್ನು  ಹೊಂದುವನು ।।೭।।
*******

No comments:

Post a Comment