Showing posts with label ನವಗ್ರಹ ಧ್ಯಾನ ಶ್ಲೋಕಮ್ ವ್ಯಾಸ ಮಹರ್ಷಿ ವಿರಚಿತಮ್. Show all posts
Showing posts with label ನವಗ್ರಹ ಧ್ಯಾನ ಶ್ಲೋಕಮ್ ವ್ಯಾಸ ಮಹರ್ಷಿ ವಿರಚಿತಮ್. Show all posts

Friday, 20 December 2019

ನವಗ್ರಹ ಧ್ಯಾನ ಶ್ಲೋಕಮ್ ವ್ಯಾಸ ಮಹರ್ಷಿ ವಿರಚಿತಮ್ navagraha dhyan shlokam

ನವಗ್ರಹ ಧ್ಯಾನ ಶ್ಲೋಕಮ್  navagraha dhyan shlokam

ನವಗ್ರಹ ಧ್ಯಾನಶ್ಲೋಕಮ್ಆದಿತ್ಯಾಯ ಚ ಸೋಮಾಯ ಮಂಗಳಾಯ ಬುಧಾಯ ಚ |
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||

ರವಿಃಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ತಮೋರಿಯಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||

ಚಂದ್ರಃದಥಿಶಜ್ಞ ತುಷಾರಾಭಂ ಕ್ಷೀರಾರ್ಣವ ಸಮುದ್ಭವಮ್ |
ನಮಾಮಿ ಶಶಿನಂ ಸೋಮಂ ಶಂಭೋರ್-ಮಕುಟ ಭೂಷಣಮ್ ||

ಕುಜಃಧರಣೀ ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ |
ಕುಮಾರಂ ಶಕ್ತಿ ಹಸ್ತಂ ತಂ ಮಂಗಳಂ ಪ್ರಣಮಾಮ್ಯಹಮ್ ||

ಬುಧಃಪ್ರಿಯಂಗು ಕಲಿಕಾಶ್ಯಾಮಂ ರೂಪೇಣಾ ಪ್ರತಿಮಂ ಬುಧಮ್ |
ಸೌಮ್ಯಂ ಸತ್ವ ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ||

ಗುರುಃದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನ ಸನ್ನಿಭಮ್ |
ಬುದ್ಧಿಮಂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ ||

ಶುಕ್ರಃಹಿಮಕುಂದ ಮೃಣಾಳಾಭಂ ದೈತ್ಯಾನಂ ಪರಮಂ ಗುರುಮ್ |
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ||

ಶನಿಃನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ |
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ ||

ರಾಹುಃಅರ್ಥಕಾಯಂ ಮಹಾವೀರಂ ಚಂದ್ರಾದಿತ್ಯ ವಿಮರ್ಧನಮ್ |
ಸಿಂಹಿಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ ||

ಕೇತುಃಫಲಾಸ ಪುಷ್ಪ ಸಂಕಾಶಂ ತಾರಕಾಗ್ರಹಮಸ್ತಕಮ್ |
ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್ ||

ಫಲಶ್ರುತಿಃಇತಿ ವ್ಯಾಸ ಮುಖೋದ್ಗೀತಂ ಯಃ ಪಠೇತ್ಸು ಸಮಾಹಿತಃ |
ದಿವಾ ವಾ ಯದಿ ವಾ ರಾತ್ರೌ ವಿಘ್ನ ಶಾಂತಿರ್ಭವಿಷ್ಯತಿ ||

ನರ ನಾರೀ ನೃಪಾಣಾಂ ಚ ಭವೇ ದ್ದುಸ್ವಪ್ನನಾಶನಮ್ |
ಐಶ್ವರ್ಯಮತುಲಂ ತೇಷಾಮಾರೋಗ್ಯಂ ಪುಷ್ಟಿ ವರ್ಧನಮ್ ||

ಗ್ರಹ ನಕ್ಷತ್ರಜಾಃ ಪೀಡಾ ಸ್ತಸ್ಕರಾಗ್ನಿ ಸಮುದ್ಭವಾಃ |
ತಾಸ್ಸರ್ವಾಃ ಪ್ರಶಮಂ ಯಾಂತಿ ವ್ಯಾಸೋ ಬ್ರೂತೇ ನಸಂಶಯಃ ||
***

ನವಗ್ರಹ ಮಂತ್ರವನ್ನು ಅದರ ಭಾವಾರ್ಥ ಸಹಿತ ವಿವರಿಸಲಾಗಿದೆ ಸನ್ಮಾನ್ಯಆಸ್ತಿಕ   ಶ್ರದ್ಧಾವಂತರು ಮನುಷ್ಯಪ್ರಯತ್ನದ ಜೊತೆ ಗ್ರಹಬಲಕ್ಕಾಗಿ ಈ ಮಂತ್ರಗಳನ್ನು ಪಠಿಸುವುದರಿಂದ ಉತ್ತಮ ಫಲ ಕಂಡುಕೊಳ್ಳಬಹುದಾಗಿದೆ

🌟🌷ನವಗ್ರಹ ಸ್ತೋತ್ರ🌷🌟

🌷ಸೂರ್ಯ ಗ್ರಹ ಮಂತ್ರ

ಓಂ ಜಪಾಕುಸುಮ ಸಂಕಾಶಂ । ಕಾಶ್ಯಪೇಯಂ ಮಹಾದ್ಯುತಿಂ ।
ತಮೋsರಿಮ್ ಸರ್ವಪಾಪಘ್ನಮ್ । ಪ್ರಣತೋsಸ್ಮಿ ದಿವಾಕರಂ

ಭಾವಾರ್ಥ : ದಾಸವಾಳ ಹೂಗಳಂತೆ ಕಂಗೊಳಿಸುವ, ಕಶ್ಯಪನ ಮಗನಾದ, ಶತ್ರುವೋ ಎಂಬಂತೆ ಕತ್ತಲನ್ನು ಅಟ್ಟುವ, ಸಕಲ ಪಾಪಗಳನ್ನು ಪರಿಹರಿಸುವ ದಿವಾಕರನಿಗೆ ನಮಸ್ಕರಿಸುತ್ತೇನೆ.

🌷ಚಂದ್ರ ಗ್ರಹ ಮಂತ್ರ

ಓಂ ದಧಿಶಂಖತುಷಾರಾಭಂ । ಕ್ಷೀರೋದಾರ್ಣವಸಂಭವಮ್।
ನಮಾಮಿ ಶಶಿನಂ ಸೋಮಂ । ಶಂಬೋರ್ಮುಕುಟ ಭೂಷಣಂ ।।

ಭಾವಾರ್ಥ : ಮೊಸರು, ಶ೦ಖ, ಹಿಮದ೦ತೆ ಹೊಳೆಯುವ; ಕ್ಷೀರಸಾಗರದಿಂದ ಹೊರಹೊಮ್ಮಿದ, ಕಾಂತಿಯುಕ್ತನಾದ, ಮಹಾದೇವನ ಶಿರಸ್ಸನ್ನು ಅಲಂಕರಿಸಿರುವ ಚಂದ್ರದೇವನಿಗೆ ನಮಸ್ಕರಿಸುತ್ತೇನೆ.

🌷ಕುಜ ಗ್ರಹ ಮಂತ್ರ

ಓಂ ಧರಣೀಗರ್ಭ ಸಂಭೂತಂ । ವಿದ್ಯುತ್ ಕಾಂತಿ ಸಮಪ್ರಭಮ್ ।
ಕುಮಾರಂ ಶಕ್ತಿ ಹಸ್ತಾಂಚ । ಮಂಗಳಂ ಪ್ರಣಮಾಮ್ಯಹಮ್ ।।

ಭಾವಾರ್ಥ : ಧರಣೀದೇವಿಯ ಗರ್ಭದಲ್ಲಿ ಜನಿಸಿದ, ವಿದ್ಯುತ್ ಕಾಂತಿಗೆ ಸಮನಾದ ಪ್ರಭಾವಳಿಯುಳ್ಳ, ಶಕ್ತ್ಯಾಯುಧದಿಂದ ಶೋಭಿಸುವ, ತರುಣನಾದ ಮಂಗಳನಿಗೆ (ಕುಜ / ಅಂಗಾರಕ) ನಮಸ್ಕರಿಸುತ್ತೇನೆ.

🌷ಬುಧ ಗ್ರಹ ಮಂತ್ರ

ಓಂ ಪ್ರಿಯಂಗುಕಾಲಿಕ ಶ್ಯಾಮಂ । ರೂಪೇಣಾಮ್ ಪ್ರತಿಮಂ ಬುಧಮ್ ।
ಸೌಮ್ಯಮ್ ಸೌಮ್ಯ ಗುಣೋಪೇತಂ । ತಮ್ ಬುಧಮ್ ಪ್ರಣಮಾಮ್ಯಹಮ್ ।।

ಭಾವಾರ್ಥ : ಪ್ರಿಯ೦ಗು ಲತೆಯ ಚಿಗುರಿನ೦ತೆ ಶ್ಯಾಮವರ್ಣದವನೂ ಸುಂದರನೂ ಸೌಮ್ಯಗುಣಸಂಪನ್ನನೂ ಆದ ಬುಧ ದೇವನನ್ನು ನಮಸ್ಕರಿಸುತ್ತೇನೆ.

🌷ಗುರು ಗ್ರಹ ಮಂತ್ರ

ಓಂ ದೇವಾನಾಮ್ ಚ ಋಷಿಣಾಮ್ ಚ । ಗುರುಮ್ ಕಾಂಚನ ಸನ್ನಿಭಮ್ ।
ಬುದ್ಧಿ ಭೂತಂ ತ್ರಿಲೋಕೇಶಂ । ತಮ್ ನಮಾಮಿ ಬೃಹಸ್ಪತಿಮ್ ।।

ಭಾವಾರ್ಥ : ದೇವತೆಗಳಿಗೂ ಋಷಿಗಳಿಗೂ ಪ್ರಿಯನಾದ, ಚಿನ್ನದ೦ತೆ ಹೊಳೆಯುವ, ಮೂರುಲೋಕಗಳಲ್ಲೂ ಸಾಟಿಯಿಲ್ಲದಷ್ಟು ಬುದ್ಧಿಮತ್ತೆ ಹೊಂದಿರುವ ಬೃಹಸ್ಪತಿಗೆ ನಮಸ್ಕರಿಸುತ್ತೇನೆ.

🌷ಶುಕ್ರ ಗ್ರಹ ಮಂತ್ರ

ಓಂ ಹಿಮಕುಂದ ಮೃಣಾಲಾಭಂ
। ದೈತ್ಯಾನಾಮ್ ಪರಮಮ್ ಗುರುಮ್ ।
ಸರ್ವಶಾಸ್ತ್ರ ಪ್ರವಕ್ತಾರಮ್ । ಭಾರ್ಗವಂ ಪ್ರಣಮಾಮ್ಯಹಮ್ ।।

ಭಾವಾರ್ಥ : ಹಿಮದ ಹಾಗೆ ಹಾಗೂ ಕು೦ದ ಪುಷ್ಪ ಮೃಣಾಲದ ಹಾಗೆ ಶೋಭಿಸುವ, ದೈತ್ಯರ ಪರಮಗುರುವಾದ, ಸಕಲ ಶಾಸ್ತ್ರ ಪರಿಣತನಾದ, ಭೃಗು ಮಹರ್ಷಿಯ ಕುಲದವನಾದ ಶುಕ್ರನಿಗೆ ನಮಸ್ಕರಿಸುತ್ತೇನೆ.

🌷ಶನಿ ಗ್ರಹ ಮಂತ್ರ

ಓಂ ನೀಲಾಂಜನ್ ಸಮಾಭಾಸಂ । ರವಿಪುತ್ರಂ ಯಮಾಗ್ರಜಮ್ ।
ಛಾಯಮಾರ್ತಾಂಡ ಸಮಭೂತಂ । ತಮ್ ನಮಾಮಿ ಶನೈಶ್ಚರಮ್ ।।

ಭಾವಾರ್ಥ : ನೀಲವರ್ಣದಿಂದ ಶೋಭಿಸುವ, ಸೂರ್ಯದೇವನ ಮಗನೂ ಯಮನ ಹಿರಿಯ ಸಹೋದರನೂ ಆದ ಛಾಯಾಪುತ್ರ ಶನಿದೇವನಿಗೆ ನಮಸ್ಕರಿಸುತ್ತೇನೆ.

🌷ರಾಹು ಗ್ರಹ ಮಂತ್ರ

ಓಂ ಅರ್ಧಕಾಯಂ ಮಹಾವೀರ್ಯಮ್ । ಚಂದ್ರಾದಿತ್ಯ ವಿಮರ್ದನಂ ।
ಸಿಂಹಿಕಾಗರ್ಭಸಂಭೂತಂ । ತಮ್ ರಾಹುಮ್ ಪ್ರಣಮಾಮ್ಯಹಮ್ ।।

ಭಾವಾರ್ಥ : ಅರ್ಧ ದೇಹವನ್ನು ಹೊಂದಿದ್ದರೂ ವೀರನಾದ, ಸೂರ್ಯ ಚಂದ್ರರನ್ನು ಗ್ರಹಣದ ಮೂಲಕ ಪೀಡಿಸುವ, ಸಿಂಹಿಕೆಯ ಮಗನಾದ ರಾಹುವಿಗೆ ನಮಸ್ಕರಿಸುತ್ತೇನೆ.

🌷ಕೇತು ಗ್ರಹ ಮಂತ್ರ

ಓಂ ಪಲಾಶಪುಷ್ಪ ಸಂಕಾಶಂ । ತಾರಕಾಗ್ರಹ ಮಸ್ತಕಂ ।
ರೌದ್ರಂ ರೌದ್ರಾತ್ಮಕಂ ಘೋರಂ । ತಮ್ ಕೇತುಂ ಪ್ರಣಮಾಮ್ಯಹಮ್ ।।

ಭಾವಾರ್ಥ : ಪಲಾಶ ಹೂವಿನ೦ತೆ ಕೆ೦ಪಾದ, ನಕ್ಷತ್ರ ಹಾಗೂ ಗ್ರಹಗಳ ನೆತ್ತಿಯಲ್ಲಿ ಶೋಭಿಸುವ, ಅತ್ಯ೦ತ ರೌದ್ರನಾದ ಹಾಗೂ ಘೋರನಾದ ಕೇತುವಿಗೆ ನನ್ನ ಪ್ರಣಾಮಗಳು

🌷ನಮಃ ಸೂರ್ಯಾಯ ಸೋಮಾಯ ಮಂಗಲಾಯ ಬುಧಾಯ ಚ|
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||

ಇತಿ ವ್ಯಾಸಮುಖೋದ್ಗೀತಂ ಯಃ ಪಠೇತ್ ಸುಸಮಾಹಿತಃ|
ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ ||

ವೇದವ್ಯಾಸರು ಹೇಳಿದ ಈ ನವಗ್ರಹಸ್ತೋತ್ರವನ್ನು ಹಗಲು ಅಥವಾ ರಾತ್ರಿ ವೇಳೆ ಏಕಾಗ್ರತೆ ಯಿಂದ ಪಠಿಸಿದರೆ ಉತ್ತಮ ಫಲಗಳು ದೊರೆಯುವುವು🙏🏻

🌻🥀ಶ್ರೀ ಕೃಷ್ಣಾರ್ಪಣಮಸ್ತು🥀🌻
***