Showing posts with label ವಿಷ್ಣು ರಕ್ಷಮಾಂ ರಂಗೇಶ ರವಿಕೋಟಿ ಸಂಕಾಶ ವಿಷ್ಣು ಸ್ತೋತ್ರ ಶ್ರೀಪಾದರಾಜ ವಿರಚಿತಮ್. Show all posts
Showing posts with label ವಿಷ್ಣು ರಕ್ಷಮಾಂ ರಂಗೇಶ ರವಿಕೋಟಿ ಸಂಕಾಶ ವಿಷ್ಣು ಸ್ತೋತ್ರ ಶ್ರೀಪಾದರಾಜ ವಿರಚಿತಮ್. Show all posts

Friday, 20 December 2019

ವಿಷ್ಣು ರಕ್ಷಮಾಂ ರಂಗೇಶ ರವಿಕೋಟಿ ಸಂಕಾಶ ವಿಷ್ಣು ಸ್ತೋತ್ರ ಶ್ರೀಪಾದರಾಜ ವಿರಚಿತಮ್ vishnu stotra by sripadaraja

ಶ್ರೀ ಶ್ರೀಪಾದರಾಯರ ಕೃತಿ

 ರಾಗ ಸಾವೇರಿ        ಖಂಡಛಾಪುತಾಳ 

ರಕ್ಷಮಾಂ ರಂಗೇಶ ॥
ರಕ್ಷಮಾಂ ರಂಗೇಶ ರವಿಕೋಟಿ ಸಂಕಾಶ ।
ಪಕ್ಷಿವಾಹನ ಶ್ರೀಶ ಭವ್ಯಗುಣಕೋಶ ॥ ಪ ॥

ಅಕ್ಷರಾದಿ ಪಿಪೀಲಿಕಾಂತ ಸಂರಕ್ಷಕಾಮಯ ಹರಣ 
ಸರ್ವ ಲಕ್ಷಣ ಪರಿಪೂರ್ಣ ಪರಮೇಶ ದಕ್ಷಿಣಾಧೀಶ ॥ ಅ ಪ ॥

ಕಮಲದಳ ನೇತ್ರ ಕಮಲಾರಿ ಸಮವಕ್ತ್ರ 
ಕಮಲವಿರಚಿತ ಸ್ತೋತ್ರ ಕರಧೃತ ಗೋತ್ರ 
ಕಮಲಜನುತಿ ಪಾತ್ರ ಕರಿರಾಜ ಯಾತ್ರ ॥
ಕಮಲಧರ ಕರಕಮಲ ಸಮಪದ 
ಕಮಲ ಸನ್ನಿಭ ವಿನುತ ಕಂಧರ 
ಕಮಲ ಸನ್ನಿಭ ಸುಗಾತ್ರ ಕಮಲಾ ಕಳತ್ರ ॥ 1 ॥

ಅನಿಮಿಷ ಸುಪ್ರೀತ ಅಖಿಳ ದೋಷ ನಿರ್ಧೂತ 
ಸನಕಾದಿ ಶೃತಿಗೀತ ಅರ್ಜುನ ಸೂತ 
ದಿನಮಣಿಕುಲಜಾತ ದೇವಕೀ ಪೋತ ॥
ಕನಕವಸನ ಕಿರೀಟಧರ ಕೋ-
ಕನದ ಹಿತ ಕಮಲಾಪ್ತ ನಯನ 
ವನದವಾಹನ ವೈರಿಕುಲಘಾತ ವನಜಭವತಾತ ॥ 2 ॥

ಅಂಗನಾಂಬರ ಹರಣ ಅನುಪಮ ಸಪ್ತಾವರಣ 
ಮಂಗಳಕರ ಚರಣ ಭಕ್ತಸಂರಕ್ಷಣ 
ಗಾಂಗೇಯ ಕೃತಸ್ಮರಣ ಕರುಣಾಭರಣ ॥
ರಂಗವಿಠಲ ಭುಜಂಗಶಯನ ಕು -
ರಂಗಧರ ಕಾವೇರಿ ತೀರ ಶ್ರೀ -
ರಂಗನಿಲಯ ತುರಂಗ ಸಂಚರಣ ಗಂಗಾಚರಣ ॥ 3 ॥
************