Showing posts with label ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿಃ. Show all posts
Showing posts with label ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿಃ. Show all posts

Monday, 31 May 2021

ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿಃ

 "ಪುಷ್ಯಾರ್ಕ ಯೋಗ" ದಂದು ರಾಯರ ಅಷ್ಟೋತ್ತರ ಪಾರಾಯಣದ ಮಹತ್ವ ಮತ್ತು ಫಲ


ಪುಷ್ಯ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ “ಪೋಷಿಸುವುದು”.  ಗುರುವಾರ ಅಥವಾ ಭಾನುವಾರ ಪುಷ್ಯ ನಕ್ಷತ್ರ ಬಿದ್ದಾಗ ಜ್ಯೋತಿಷಿಗಳು ಇದನ್ನು ಆಧ್ಯಾತ್ಮಿಕ ಸಾಧನೆಗೆ  ಅನುಕೂಲಕರವೆಂದು ಪರಿಗಣಿಸಿ ಅದನ್ನು ಪುಷ್ಯ ಅಮೃತ ಸಿದ್ಧಿ ಯೋಗ ಎಂದು ಕರೆಯುತ್ತಾರೆ. 

ಪುಷ್ಯ ನಕ್ಷತ್ರದ ದಿನ ಗುರುಗಳ ಆಶೀರ್ವಾದ ಪಡೆಯಲು ಶುಭ ದಿನವಾಗಿದೆ. ಈ ರೀತಿಯಾಗಿಯೇ ಪುಷ್ಯ ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯಗಳೊಂದಿಗೆ ಶುಭ ಸಂಬಂಧವನ್ನು ಹೊಂದಿದೆ.

ರಾಯರ ಅಂತರಂಗ ಭಕ್ತರಾದ ಅಪ್ಪಣಾಚಾರ್ಯರು, ಪುಷ್ಯ ನಕ್ಷತ್ರದ ದಿನ ಗುರುರಾಯರ ಸ್ತೋತ್ರದ ಪಾರಾಯಣದ ಪ್ರಯೋಜನಗಳನ್ನು ಉಲ್ಲೇಖಿಸಿದ್ದಾರೆ.

ಅವರು ರಚಿಸಿರುವ ರಾಘವೇಂದ್ರ ಸ್ತೋತ್ರದಲ್ಲಿ ಶ್ರೀ ಅಪ್ಪಣಾಚಾರ್ಯರು,

“ಸೋಮ- ಸೂರ್ಯ ಪರಾಗೇಚ ಪುಷ್ಯಾರ್ಕಾಧಿ ಸಮಾಗಮೇ,
ಯೋನುತ್ತಮ ಮಿದಂ ಸ್ತೋತ್ರಂ   ಅಷ್ಟೋತ್ತರ ಶತಮ್ ಜಪೆತ್, ಭೂತಾ ಪ್ರೇತಾ ಪಿಶಾಚಾದಿ ಪೀಡಾsಥಸ್ಯ ನಾ ಜಾಯಥೇ ”

ಇದರ ಅರ್ಥವೇನೆಂದರೆ, ಚಂದ್ರ ಅಥವಾ ಸೂರ್ಯಗ್ರಹಣ ಇದ್ದಾಗ ಅಥವಾ ಭಾನುವಾರ ಪುಷ್ಯ ನಕ್ಷತ್ರದ ಸಮಯದಲ್ಲಿ, ಯಾವುದೇ ವ್ಯಕ್ತಿಯು ರಾಯರ ಅಷ್ಟೋತ್ತರ  ಶ್ಲೋಕಗಳನ್ನು ಪಠಿಸಿದರೆ ಜಾತಕದಲ್ಲಿ ಇರುವ ದೋಷ ಮುಕ್ತವಾಗಿ, ಸನ್ಮಾರ್ಗ ದೊರಕುವುದು. ಯಾರು ರಾಘವೇಂದ್ರ ಸ್ತೋತ್ರವನ್ನು 108 ಬಾರಿ ಪಠಿಸುವರೋ ಅ ವ್ಯಕ್ತಿಗೆ  ಯಾವುದೇ ದುಷ್ಟಶಕ್ತಿಗಳು ತೊಂದರೆಗೊಳಿಸುವುದಿಲ್ಲ.

ಆದ್ದರಿಂದ ನಾವೆಲ್ಲರೂ 2021 ಜುಲೈ ,೧೧ ರ ಭಾನುವಾರದಂದು ಶ್ರೀ ರಾಯರ ಮೃತಿಕ ಬೃಂದಾವನ ಅಥವಾ ಅವರ ಚಿತ್ರಪಟದ ಮುಂದೆ ಆಸೀನರಾಗಿ ಪ್ರಸಿದ್ಧ ಶ್ರೀ ರಾಯರ ಸ್ತೋತ್ರವನ್ನು ಸಾಧ್ಯವಾದಷ್ಟು ಬಾರಿ ಜಪಿಸಿ, ಅವರ ಆಶೀರ್ವಾದವನ್ನು ಗಳಿಸುವ ಮೂಲಕ ಈ ಶುಭ ದಿನವನ್ನು ಬಳಸಿಕೊಳ್ಳೋಣ. ಅಜ್ಞಾನವನ್ನು ನಾಶಮಾಡಿ, ಸುಜ್ಞಾನನವನ್ನು ನೀಡಿ, ಅನಂದವನ್ನು ಸದಾ ನೀಡುವ ರಾಯರ ಅನುಗ್ರಹ ನಮ್ಮೆಲ್ಲರ ಮೇಲೆ ಸದಾ ಇರಲಿ.

ಶ್ರೀ ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿಃ

ಓಂ ಸ್ವವಾಗ್ದೇವತಾ ಸರಿದ್ಭಕ್ತವಿಮಲೀಕರ್ತ್ರೇ ನಮಃ |
ಓಂ ಶ್ರೀರಾಘವೇಂದ್ರಾಯ ನಮಃ |
ಓಂ ಸಕಲಪ್ರದಾತ್ರೇ ನಮಃ |                                                ಓಂ ಭಕ್ತಾಘಸಂಭೇದನದೃಷ್ಟಿ ವಜ್ರಾಯ ನಮಃ  |                                                ಓಂ ಕ್ಷಮಾ ಸುರೇಂದ್ರಾಯ ನಮಃ |
ಓಂ ಹರಿಪಾದ ಪದ್ಮನಿಷೇವಣಾಲ್ಲಬ್ಧ ಸರ್ವಸಂಪದೇ ನಮಃ |
ಓಂ ದೇವಸ್ವಭಾವಾಯ ನಮಃ |
ಓಂ ದಿವಿಜದ್ರುಮಾಯ ನಮಃ |                                  ಓಂ ಇಷ್ಟಪ್ರದಾತ್ರೇ ನಮಃ |
ಓಂ ಭವ್ಯಸ್ವರೂಪಾಯ ನಮಃ | ೧೦
ಓಂ ಭವದುಃಖಶೂಲ ಸಂಘಾಗ್ನಿಚರ್ಯಾಯ ನಮಃ
ಓಂ ಸುಖಧೈರ್ಯಶಾಲಿನೇ ನಮಃ |
ಓಂ ಸಮಸ್ತ ದುಷ್ಟಗ್ರಹನಿಗ್ರಹಕರ್ತ್ರೇ ನಮಃ |
ಓಂ ದುರತ್ಯಯೋಪಪ್ಲವಸಿಂಧುಸೇತವೇ ನಮಃ |
ಓಂ ನಿರಸ್ತದೋಷಾಯ ನಮಃ |                     ಓಂ ನಿರವದ್ಯದೇಹಾಯ ನಮಃ |                              ಓಂ ಪ್ರತ್ಯರ್ಥಿಮೂಕತ್ವನಿಧಾನಭಾಷಾಯ ನಮಃ |                                                     ಓಂ ವಿದ್ವತ್ಪರಿಜ್ಞೇಯ ಮಹಾವಿಶೇಷಾಯ ನಮಃ |                                 ಓಂ ವಾಗ್ವೈಖರೀನಿರ್ಜಿ ಭವ್ಯ ಶೇಷಾಯ ನಮಃ
ಓಂ ಸಂತಾನಸಂಪತ್ ಪರಿಶುದ್ಧ ಭಕ್ತಿ ವಿಜ್ಞಾನ ವಾಗ್ತೇಹ ಸುಪಾಟವಾದಿದಾತ್ರೇ ನಮಃ |  ೨೦
ಓಂ ತಾಪತ್ರಯವಿನಾಶಕಾಯ ನಮಃ |
ಓಂ ಚಕ್ಷುಪ್ರದಾಯಕಾಯ ನಮಃ |
ಓಂ ಹರಿಚರಣ ಸರೋಜರಜೋಭೂಷಿತಾಯ ನಮಃ |
ಓಂ ದುರಿತಕಾನನದಾವಭೂತಾಯ ನಮಃ | 
ಓಂ ಸರ್ವತಂತ್ರಸ್ವತಂತ್ರಾಯ ನಮಃ |
ಓಂ ಶ್ರೀಮಧ್ವಮತವರ್ಧನಾಯ ನಮಃ |
ಓಂ ಸತತಸನ್ನಿಹಿತಾಶೇಷದೇವತಾಸಮುದಾಯಾಯ ನಮಃ |
ಓಂ ಶ್ರೀಸುಧೀಂದ್ರವರಪುತ್ರಕಾಯ ನಮಃ |
ಓಂ ಶ್ರೀವೈಷ್ಣವಸಿದ್ಧಾಂತಪ್ರತಿಷ್ಠಾಪಕಾಯ ನಮಃ |
ಓಂ ಯತಿಕುಲತಿಲಕಾಯ ನಮಃ | ೩೦
ಓಂ ಜ್ಞಾನಭಕ್ತ್ಯಾಯುರಾರೋಗ್ಯ ಸುಪುತ್ರಾದಿವರ್ಧನಾಯ ನಮಃ |
ಓಂ ಪ್ರತಿವಾದಿಮಾತಂಗ ಕಂಠೀರವಾಯ ನಮಃ |
ಓಂ ಸರ್ವವಿದ್ಯಾಪ್ರವೀಣಾಯ ನಮಃ | 
ಓಂ ದಯಾದಾಕ್ಷಿಣ್ಯ ವೈರಾಗ್ಯಶಾಲಿನೇ ನಮಃ |
ಓಂ ರಾಮಪಾದಾಂಬುಜಾಸಕ್ತಾಯ ನಮಃ |
ಓಂ ರಾಮದಾಸಪದಾಸಕ್ತಾಯ ನಮಃ |
ಓಂ ರಾಮಕಥಾಸಕ್ತಾಯ ನಮಃ |
ಓಂ ದುರ್ವಾದಿದ್ವಾಂತರವಯೇ ನಮಃ |
ಓಂ ವೈಷ್ಣವೇಂದೀವರೇಂದವೇ ನಮಃ |
ಓಂ ಶಾಪಾನುಗ್ರಹಶಕ್ತಾಯ ನಮಃ | ೪೦
ಓಂ ಅಗಮ್ಯಮಹಿಮ್ನೇ ನಮಃ |
ಓಂ ಮಹಾಯಶಸೇ ನಮಃ | 
ಓಂ ಶ್ರೀಮಧ್ವಮತ ದುಗ್ದಾಬ್ಧಿಚಂದ್ರಮಸೇ ನಮಃ |
ಓಂ ಪದವಾಕ್ಯಪ್ರಮಾಣಪಾರಾವಾರ ಪಾರಂಗತಾಯ ನಮಃ |
ಓಂ ಯೋಗೀಂದ್ರಗುರವೇ ನಮಃ |
ಓಂ ಮಂತ್ರಾಲಯನಿಲಯಾಯ ನಮಃ |
ಓಂ ಪರಮಹಂಸ ಪರಿವ್ರಾಜಕಾಚಾರ್ಯಾಯ ನಮಃ |
ಓಂ ಸಮಗ್ರಟೀಕಾವ್ಯಾಖ್ಯಾಕರ್ತ್ರೇ ನಮಃ |
ಓಂ ಚಂದ್ರಿಕಾಪ್ರಕಾಶಕಾರಿಣೇ ನಮಃ |
ಓಂ ಸತ್ಯಾದಿರಾಜಗುರವೇ ನಮಃ |
ಓಂ ಭಕ್ತವತ್ಸಲಾಯ ನಮಃ | ೫೦

ಓಂ ಪ್ರತ್ಯಕ್ಷಫಲದಾಯ ನಮಃ |
ಓಂ ಜ್ಞಾನಪ್ರದಾಯ ನಮಃ |
ಓಂ ಸರ್ವಪೂಜ್ಯಾಯ ನಮಃ |
ಓಂ ತರ್ಕತಾಂಡವವ್ಯಾಖ್ಯಾಕರ್ತ್ರೇ ನಮಃ |
ಓಂ ಕೃಷ್ಣೋಪಾಸಕಾಯ ನಮಃ |
ಓಂ ಕೃಷ್ಣದ್ವೈಪಾಯನಸುಹೃದೇ ನಮಃ |
ಓಂ ಆರ್ಯಾನುವರ್ತಿನೇ ನಮಃ |
ಓಂ ನಿರಸ್ತದೋಷಾಯ ನಮಃ |
ಓಂ ನಿರವದ್ಯವೇಷಾಯ ನಮಃ | 
ಓಂ ಪ್ರತ್ಯರ್ಧಿಮೂಕತ್ವನಿದಾನಭಾಷಾಯ ನಮಃ | ೬೦
ಓಂ ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನಧಾರಣ ಸಮಾಧ್ಯಷ್ಟಾಂಗಯೋಗಾನುಷ್ಟಾನ ನಿಷ್ಟಾಯ ನಮಃ | 
ಓಂ ಸಾಂಗಾಮ್ನಾಯಕುಶಲಾಯ ನಮಃ |
ಓಂ ಜ್ಞಾನಮೂರ್ತಯೇ ನಮಃ |
ಓಂ ತಪೋಮೂರ್ತಯೇ ನಮಃ |
ಓಂ ಜಪಪ್ರಖ್ಯಾತಾಯ ನಮಃ |
ಓಂ ದುಷ್ಟಶಿಕ್ಷಕಾಯ ನಮಃ |
ಓಂ ಶಿಷ್ಟರಕ್ಷಕಾಯ ನಮಃ |
ಓಂ ಟೀಕಾಪ್ರತ್ಯಕ್ಷರಾರ್ಥಪ್ರಕಾಶಕಾಯ ನಮಃ | 
ಓಂ ಶೈವಪಾಷಂಡಧ್ವಾಂತ ಭಾಸ್ಕರಾಯ ನಮಃ |
ಓಂ ರಾಮಾನುಜಮತಮರ್ದಕಾಯ ನಮಃ | ೭೦
ಓಂ ವಿಷ್ಣುಭಕ್ತಾಗ್ರೇಸರಾಯ ನಮಃ |
ಓಂ ಸದೋಪಾಸಿತಹನುಮತೇ ನಮಃ |
ಓಂ ಪಂಚಭೇದಪ್ರತ್ಯಕ್ಷಸ್ಥಾಪಕಾಯ ನಮಃ |
ಓಂ ಅದ್ವೈತಮೂಲನಿಕೃಂತನಾಯ ನಮಃ |
ಓಂ ಕುಷ್ಠಾದಿರೋಗನಾಶಕಾಯ ನಮಃ |
ಓಂ ಅಗ್ರಸಂಪತ್ಪ್ರದಾತ್ರೇ ನಮಃ |
ಓಂ ಬ್ರಾಹ್ಮಣಪ್ರಿಯಾಯ ನಮಃ | 
ಓಂ ವಾಸುದೇವಚಲಪ್ರತಿಮಾಯ ನಮಃ |
ಓಂ ಕೋವಿದೇಶಾಯ ನಮಃ |
ಓಂ ಬೃಂದಾವನರೂಪಿಣೇ ನಮಃ | ೮೦
ಓಂ ಬೃಂದಾವನಾಂತರ್ಗತಾಯ ನಮಃ |
ಓಂ ಚತುರೂಪಾಶ್ರಯಾಯ ನಮಃ |
ಓಂ ನಿರೀಶ್ವರಮತ ನಿವರ್ತಕಾಯ ನಮಃ |
ಓಂ ಸಂಪ್ರದಾಯಪ್ರವರ್ತಕಾಯ ನಮಃ |
ಓಂ ಜಯರಾಜ ಮುಖ್ಯಾಭಿಪ್ರಾಯವೇತ್ರೇ ನಮಃ |
ಓಂ ಭಾಷ್ಯಟೀಕಾದ್ಯವಿರುದ್ಧಗ್ರಂಥಕರ್ತ್ರೇ ನಮಃ | 
ಓಂ ಸದಾಸ್ವಸ್ಥಾನಕ್ಷೇಮಚಿಂತಕಾಯ ನಮಃ |
ಓಂ ಕಾಷಾಯಚೇಲಭೂಷಿತಾಯ ನಮಃ |
ಓಂ ದಂಡಕಮಂಡಲುಮಂಡಿತಾಯ ನಮಃ |
ಓಂ ಚಕ್ರರೂಪಹರಿನಿವಾಸಾಯ ನಮಃ |‌ ೯೦
ಓಂ ಲಸದೂರ್ಧ್ವಪುಂಡ್ರಾಯ ನಮಃ |
ಓಂ ಗಾತ್ರಧೃತ ವಿಷ್ಣುಧರಾಯ ನಮಃ |
ಓಂ ಸರ್ವಸಜ್ಜನವಂದಿತಾಯ ನಮಃ |
ಓಂ ಮಾಯಿಕರ್ಮಂದಿಮತಮರ್ದಕಾಯ ನಮಃ |
ಓಂ ವಾದಾವಲ್ಯರ್ಥವಾದಿನೇ ನಮಃ | 
ಓಂ ಸಾಂಶಜೀವಾಯ ನಮಃ |
ಓಂ ಮಾಧ್ಯಮಿಕಮತವನಕುಠಾರಾಯ ನಮಃ |
ಓಂ ಪ್ರತಿಪದಂ ಪ್ರತ್ಯಕ್ಷರಂ ಭಾಷ್ಯಟೀಕಾರ್ಥ (ಸ್ವಾರಸ್ಯ) ಗ್ರಾಹಿಣೇ ನಮಃ |
ಓಂ ಅಮಾನುಷನಿಗ್ರಹಾಯ ನಮಃ | ೧೦೦
ಓಂ ಕಂದರ್ಪವೈರಿಣೇ ನಮಃ |
ಓಂ ವೈರಾಗ್ಯನಿಧಯೇ ನಮಃ |
ಓಂ ಭಾಟ್ಟಸಂಗ್ರಹಕರ್ತ್ರೇ ನಮಃ |
ಓಂ ದೂರೀಕೃತಾರಿಷಡ್ವರ್ಗಾಯ ನಮಃ |
ಓಂ ಭ್ರಾಂತಿಲೇಶವಿಧುರಾಯ ನಮಃ | 
ಓಂ ಸರ್ವಪಂಡಿತಸಮ್ಮತಾಯ ನಮಃ |
ಓಂ ಅನಂತಬೃಂದಾವನನಿಲಯಾಯ ನಮಃ |
ಓಂ ಸ್ವಪ್ನಭಾವ್ಯರ್ಥವಕ್ತ್ರೇ ನಮಃ |
ಓಂ ಯಥಾರ್ಥವಚನಾಯ ನಮಃ |
ಓಂ ಸರ್ವಗುಣಸಮೃದ್ಧಾಯ ನಮಃ |
ಓಂ ಅನಾದ್ಯವಿಚ್ಛಿನ್ನ ಗುರುಪರಂಪರೋಪದೇಶ ಲಬ್ಧಮಂತ್ರಜಪ್ತ್ರೇ ನಮಃ |
ಓಂ ಧೃತಸರ್ವದ್ರುತಾಯ ನಮಃ |
ಓಂ ರಾಜಾಧಿರಾಜಾಯ ನಮಃ |
ಓಂ ಗುರುಸಾರ್ವಭೌಮಾಯ ನಮಃ |                                                             ಓಂ ಮಂತ್ರಾಲಯ ನಿವಾಸಿನೇ ನಮಃ
ಓಂ ಶ್ರೀಮೂಲರಾಮಾರ್ಚಕ ಶ್ರೀರಾಘವೇಂದ್ರ ಯತೀಂದ್ರಾಯ ನಮಃ |

ಇತಿ ಶ್ರೀ ರಾಘವೇಂದ್ರ ಅಷ್ಟೋತ್ತರಶತನಾಮಾವಳೀ |

|| ಶ್ರೀ ಕೃಷ್ಣಾರ್ಪಣಮಸ್ತು ||
****