Showing posts with label ಮಹಾಲಕ್ಷ್ಮೀ ಅಷ್ಟಕಂ ಇಂದ್ರ ವಿರಚಿತಮ್ MAHALAKSHMI ASHTAKAM by indra. Show all posts
Showing posts with label ಮಹಾಲಕ್ಷ್ಮೀ ಅಷ್ಟಕಂ ಇಂದ್ರ ವಿರಚಿತಮ್ MAHALAKSHMI ASHTAKAM by indra. Show all posts

Thursday, 2 December 2021

ಮಹಾಲಕ್ಷ್ಮೀ ಅಷ್ಟಕಂ ಇಂದ್ರ ವಿರಚಿತಮ್ MAHALAKSHMI ASHTAKAM by indra




Actor Vijay Raghavendra



ಮಹಾಲಕ್ಷ್ಮ್ಯಷ್ಟಕಂ 
ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತುತೇ || ೧ ||

ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ |
ಸರ್ವಪಾಪಹರೇ ದೇವಿ ಮಹಾಲಕ್ಷಿ ನಮೋಸ್ತುತೇ || ೨ ||

ಸರ್ವಜ್ಞೇ ಸರ್ವವರದೇ ಸರ್ವದುಷ್ಟಭಯಂಕರಿ |
ಸರ್ವದುಃಖಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತುತೇ || ೩ ||

ಸಿದ್ಧಿಬುದ್ಧಿಪ್ರದೇ ದೇವಿ ಭುಕ್ತಿಮುಕ್ತಿಪ್ರದಾಯಿನಿ |
ಮಂತ್ರಪೂತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತುತೇ || ೪ ||

ಆದ್ಯಂತರಹಿತೇ ದೇವಿ ಆದ್ಯಶಕ್ತಿಮಹೇಶ್ವರಿ |
ಯೋಗಜೇ ಯೋಗಸಂಭೂತೇ ಮಹಾಲಕ್ಷ್ಮಿ ನಮೋಽಸ್ತುತೇ || ೫ ||

ಸ್ಥೂಲಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿಮಹೋದರೇ |
ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋಽಸ್ತುತೇ || ೬ ||

ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮಸ್ವರೂಪಿಣಿ |
ಪರಮೇಶಿ ಜಗನ್ಮಾತರ್ಮಹಾಲಕ್ಷ್ಮಿ ನಮೋಽಸ್ತುತೇ || ೭ ||

ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ |
ಜಗತ್‍ಸ್ಥಿತೇ ಜಗನ್ಮಾತರ್ಮಹಾಲಕ್ಷ್ಮಿ ನಮೋಽಸ್ತುತೇ || ೮ ||

ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರಂ ಯಃ ಪಠೇದ್ಭಕ್ತಿಮಾನ್ನರಃ |
ಸರ್ವಸಿದ್ಧಿಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ || ೯ ||

ಏಕಕಾಲೇ ಪಠೇನ್ನಿತ್ಯಂ ಮಹಾಪಾಪವಿನಾಶನಮ್ |
ದ್ವಿಕಾಲಂ ಯಃ ಪಠೇನ್ನಿತ್ಯಂ ಧನಧಾನ್ಯಸಮನ್ವಿತಃ || ೧೦ ||

ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರುವಿನಾಶನಮ್ |
ಮಹಾಲಕ್ಷ್ಮೀರ್ಭವೇನ್ನಿತ್ಯಂ ಪ್ರಸನ್ನಾ ವರದಾ ಶುಭಾ || ೧೧ ||


|| ಇತೀಂದ್ರಕೃತಂ ಮಹಾಲಕ್ಷ್ಮ್ಯಷ್ಟಕಂ ಸಂಪೂರ್ಣಮ್ ||
***

Mahālakshmyashtakam
Namaste'stu Mahāmāye Śrīpīṭhe Surapūjite | 
Śaṅkhacakragadāhaste Mahālakṣmi Namo'stute || 1 ||

Namaste Garuḍārūḍhe Kolāsurabhayaṅkari | 
Sarvapāpahare Devī Mahālakṣmi Namo'stute || 2 ||

Sarvajñe Sarvavarade Sarvaduṣṭabhayaṅkari | 
Sarvaduḥkhahare Devī Mahālakṣmi Namo'stute || 3 ||

Siddhibuddhiprade Devī Bhuktimuktipradāyini | 
Mantrapūte Sadā Devī Mahālakṣmi Namo'stute || 4 ||

Ādyantarahite Devī Ādyaśaktimaheśvari | 
Yogaje Yogasaṁbhūte Mahālakṣmi Namo'stute || 5 ||

Sthūlasūkṣma Mahāraudre Mahāśaktimahodare | 
Mahāpāpahare Devī Mahālakṣmi Namo'stute || 6 ||

Padmāsanasthite Devī Parabrahmasvarūpiṇi | 
Parameśi Jaganmātar Mahālakṣmi Namo'stute || 7 ||

Śvetāmbaradhare Devī Nānālaṁkārabhūṣite | 
Jagat‍sthite Jaganmātar Mahālakṣmi Namo'stute || 8 ||

Mahālakṣmyaṣṭakaṁ Stotraṁ Yaḥ Paṭhedbhaktimānnaraḥ |
 Sarvasiddhimavāpnoti Rājyaṁ Prāpnoti Sarvadā || 9 ||

Ekakāle Paṭhennityaṁ Mahāpāpavināśanam | 
Dvikālaṁ Yaḥ Paṭhennityaṁ Dhanadhānyasamanvitaḥ || 10 ||

Trikālaṁ Yaḥ Paṭhennityaṁ Mahāśatruvināśanam |
 Mahālakṣmīrbhavenityam Prasannā Varadā Śubhā || 11 ||

|| Itīndrakṛtaṁ Mahālakṣmyaṣṭakaṁ Sampūrṇam ||

***


ಶ್ರೀ ಮಹಾಲಕ್ಷ್ಮಿ ಅಷ್ಟಕ
ನಮಸ್ತೇಸ್ತು ಮಹಾ ಮಾಯೇ ಶ್ರೀಪೀಠೆ ಸುರಪೂಜಿತೇ |
ಶಂಖಚಕ್ರಗಧಾ ಹಸ್ತೇ ಮಹಾಲಕ್ಷ್ಮೀ ನಮೊಸ್ತುತೇ ||೧||

ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |
ಸರ್ವ ಪಾಪ ಹರೇ ದೇವೀ ಮಹಾಲಕ್ಷ್ಮೀ ನಮೊಸ್ತುತೇ ||೨||

ಸರ್ವಗೆ ಸರ್ವ ವರದೆ ಸರ್ವದುಷ್ಟ ಭಯಂಕರೀ |
ಸರ್ವ ದುಃಖ ಹರೇ ದೇವೀ ಮಹಾಲಕ್ಷ್ಮೀ ನಮೊಸ್ತುತೇ ||೩||

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನೀ|
ಮಂತ್ರ ಮೂರ್ತೇ ಸದಾದೇವೀ ಮಹಾಲಕ್ಷ್ಮೀ ನಮೊಸ್ತುತೇ ||೪||

ಆಧ್ಯಾಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರೀ |
ಯೋಗಗ್ಜೆ ಯೋಗ ಸಂಭೂತೇ ಮಹಾಲಕ್ಷ್ಮೀ ನಮೊಸ್ತುತೇ ||೫||

ಸ್ಥೂಲ ಸೂಕ್ಷ್ಮ ಮಹಾರೌಧ್ರೇ ಮಹಾ ಶಕ್ತೀ ಮಹೊಧರೇ |
ಮಹಾ ಪಾಪ ಹರೆ ದೆವೀ ಮಹಾಲಕ್ಷ್ಮೀ ನಮೊಸ್ತುತೇ ||೬||

ಪದ್ಮಾಸನಸ್ಥಿತೇ ದೇವೀ ಪರಬ್ರಹ್ಮ ಸ್ವರೂಪಿಣೀ |
ಪರಮೇಶಿ ಜಗನ್ಮಾತ ಮಹಾಲಕ್ಷ್ಮೀ ನಮೊಸ್ತುತೇ ||೭||

ಶ್ವೇತಾಂಬರ ಧರೇ ದೇವಿ ನಾನಾಲಂಕಾರ ಭೂಶಿತೇ |
ಜಗತ್ ಸ್ಥಿತೇ ಜಗನ್ಮಾತ ಮಹಾಲಕ್ಷ್ಮೀ ನಮೊಸ್ತುತೇ ||೮||

ಮಹಾಲಕ್ಷ್ಮ್ಯಾಷ್ಟಕಂ ಸ್ತೊತ್ರಂ ಯಃ ಪಠೇತ್ ಭಕ್ತಿಮಾನ್ ನರಃ |
ಸರ್ವಸಿದ್ಧಿ ಮವಾಪ್ನೋತಿ ರಾಜ್ಯಮ್ ಪ್ರಾಪ್ನೋತಿ ಸರ್ವದಾ ||೯||
****


|ಶ್ರೀ ಮಹಾಲಕ್ಷ್ಮ್ಯಷ್ಟಕಮ್ ||
 

ನಮಸ್ತೇಸ್ಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ಸ್ತುತೇ ||೧||

ಭಾವಾರ್ಥ:-ಹೇ ಮಹಾಮಯಾರೂಪಿಣಿಯೇ! ಸೌಭಾಗ್ಯದ ಗದ್ದುಗೆಯ  ಮೇಲೆ ವಿರಾಜಿಸುವವಳೇ,ದೇವಾನುದೇವತೆಗಳಿಂದ ಪೂಜಿಸಿಕೊಂಬವಳೇ;  ನಿನಗೆ ನಮಸ್ಕರಿಸುವೆ. ಹೇ! ಶಂಖ, ಚಕ್ರ,ಗಧೆಗಳನ್ನು  ಧರಿಸಿರುವಾಕೆಯೇ, ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ |
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ಸ್ತುತೇ ||೨||

ಭಾವಾರ್ಥ:-ಹೇ ದೇವಿ ಗರುಢ ವಾಹನೆಯೇ! ಕೋಲನೆಂಬರಕ್ಕಸನನ್ನು  ನಾಶಗೊಳಿಸಿದವಳೇ,ನಿನಗಿದೋ ನಮಸ್ಕಾರಗಳು.ಎಲ್ಲಾ ಪಾಪಗಳನ್ನು  ನಾಶ ಮಾಡುವ  ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಸರ್ವಜ್ಞೇ ಸರ್ವವರದೇ ಸರ್ವದುಷ್ಟ ಭಯಂಕರಿ |
ಸರ್ವ ದು:ಖಹರೇ ದೇವಿ ಮಹಾಲಕ್ಷ್ಮಿ ನಮೋಸ್ಸ್ತುತೇ ||೩||

ಭಾವಾರ್ಥ:- ಹೇ! ದೇವಿ; ಸಮಸ್ತವನ್ನೂ ಬಲ್ಲಾಕೆಯೇ,  ಎಲ್ಲವನ್ನೂ ಅನುಗ್ರಹಿಸುವಾಕೆಯೇ,ದುಷ್ಟರಿಗೆ ಭಯಂಕರ  ರೂಪಿಣಿಯೂದವಳೇ,ಸಮಸ್ತ ದು:ಖವನ್ನು ಪರಿಹರಿಸುವವಳೇ, ದೇವಿ  ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |
ಮಂತ್ರಮೂರ್ತೇ ಸದಾ ದೇವೀ ಮಹಾಲಕ್ಷ್ಮಿ ನಮೋಸ್ಸ್ತುತೇ ||೪||

ಭಾವಾರ್ಥ:-ಹೇ ದೇವಿ; ಸಿದ್ಧಿ ಹಾಗೂ ಬುದ್ಧಿಗಳನ್ನು  ಕರುಣಿಸುವವಳೇ, ಭೋಗ ಮತ್ತು ಮುಕ್ತಿಯನ್ನು  ದಯಪಾಲಿಸುವಾಕೆಯೇ, ಮಂತ್ರಗಳಲ್ಲಿ ಅನುದಿನವೂ ನೆಲೆಸಿರುವವಳೇ  ,ದೇವಿ ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಆದ್ಯಂತರಹಿತೇ ದೇವಿ ಆದ್ಯಾಶಕ್ತಿ ಮಹೇಶ್ವರಿ |
ಯೋಗಜೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಸ್ಸ್ತುತೇ ||೫||

ಭಾವಾರ್ಥ:-ಆದಿಯೂ ಅಂತ್ಯವೂ ಇಲ್ಲದಿರುವ ದೇವಿಯೇ,  ಆದಿಶಕ್ತಿಯೇ, ಮಹೇಶ್ವರಿಯೇ, ಯೋಗವನ್ನು ಕರುಣಿಸುವಾಕೆಯೇ,  ಯೋಗಮಾಯೆಯಿಂದ ಜನಿಸಿದಾಕೆಯೇ,ದೇವಿ ಮಹಾಲಕ್ಷ್ಮಿಯೇ  ನಿನಗೆ ನನ್ನ ನಮಸ್ಕಾರಗಳು.

ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ |
ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ಸ್ತುತೇ ||೬||

ಭಾವಾರ್ಥ:-ಅಸಾಮಾನ್ಯಳೂ,ಸಾಮಾನ್ಯಳೂ, ಮಹಾರುದ್ರ  ಸ್ವರೂಪಳೂ, ಮಹಾಶಕ್ತಿರೂಪಿಣಿಯೂ ಆಗಿರುವ ದೇವಿ  ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ |
ಪರಮೇಶಿ ಜಗನ್ಮಾತರ್ಮಹಾಲಕ್ಷ್ಮಿ ನಮೋಸ್ಸ್ತುತೇ ||೭||

ಭಾವಾರ್ಥ:- ಹೇ ದೇವಿ; ಕಮಲದ ಮೇಲೆ ಆರೂಢಳಾಗಿರುವಾಕೆಯೇ,  ಪರಬ್ರಹ್ಮ ರೂಪಿಣಿಯೇ, ಪರಮೇಶ್ವರಿಯೇ, ಜಗತ್ತಿನ  ತಾಯಿಯೇ, ದೇವಿ  ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.

ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ |
ಜಗತ್ ಸ್ಥಿತೇ ಜಗನ್ಮಾತರ್ಮಹಾಲಕ್ಷ್ಮಿ ನಮೋಸ್ಸ್ತುತೇ ||೮||

ಭಾವಾರ್ಥ:-ಶುಭ್ರವಾಗಿರುವ ಬಿಳಿಯ ವಸ್ತ್ರವನ್ನು  ಧರಿಸಿರುವಾಕೆಯೇ, ವಿವಿಧಾಲಂಕಾರಗಳಿಂದ ಶೋಭಿಸುತ್ತಿರುವಾಕೆಯೇ,  ಜಗತ್ತಿಗೆ ಆಧಾರಶಕ್ತಿಯಾಗಿರುವಾಕೆಯೇ, ಜಗತ್ತಿನ ತಾಯಿ  ಮಹಾಲಕ್ಷ್ಮಿಯೇ ನಿನಗೆ ನನ್ನ ನಮಸ್ಕಾರಗಳು.
***