Tuesday, 1 October 2019

ಮಹಾ ಮೃತ್ಯುಂಜಯ ಮಾಲಾ ಮಂತ್ರ maha mrutyunjaya mala mantra


ಮಹಾಮೃತ್ಯುಂಜಯಮಾಲಾಮನ್ತ್ರಃ -  ಧ್ಯಾನಮ್

ಧ್ಯಾಯೇನ್ಮೃತ್ಯುಂಜಯಂ ಸಾಮ್ಬಂ ನೀಲಕಂಠಂ ಚತುರ್ಭುಜಮ್ ।
ಚನ್ದ್ರಕೋಟಿಪ್ರತೀಕಾಶಂ ಪೂರ್ಣಚನ್ದ್ರನಿಭಾನನಮ್ ॥ 1॥

ಬಿಮ್ಬಾಧರಂ ವಿಶಾಲಾಕ್ಷಂ ಚನ್ದ್ರಾಲಂಕೃತಮಸ್ತಕಮ್ ।
ಅಕ್ಷಮಾಲಾಮ್ಬರಧರಂ ವರದಂ ಚಾಭಯಪ್ರದಮ್ ॥ 2॥

ಮಹಾರ್ಹಕುಂಡಲಾಭೂಷಂ ಹಾರಾಲಂಕೃತವಕ್ಷಸಮ್ ।
ಭಸ್ಮೋದ್ಧೂಲಿತಸರ್ವಾಂಗಂ ಫಾಲನೇತ್ರವಿರಾಜಿತಮ್ ॥ 3॥

ವ್ಯಾಘ್ರಚರ್ಮಪರೀಧಾನಂ ವ್ಯಾಲಯಜ್ಞೋಪವೀತಿನಮ್ ।
ಪಾರ್ವತ್ಯಾ ಸಹಿತಂ ದೇವಂ ಸರ್ವಾಭೀಷ್ಟವರಪ್ರದಮ್ ॥ 4॥

1.  ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ ।
ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ ಹೌಂ ಹೈಂ ಹಾಂ ।
ಓಂ ಮೃತ್ಯುಂಜಯಾಯ ನಮಶ್ಶಿವಾಯ ಹುಂ ಫಟ್ ಸ್ವಾಹಾ ॥

2.  ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಚನ್ದ್ರಶೇಖರಾಯ
ಜಟಾಮಕುಟಧಾರಣಾಯ, ಅಮೃತಕಲಶಹಸ್ತಾಯ,
ಅಮೃತೇಶ್ವರಾಯ ಸರ್ವಾತ್ಮರಕ್ಷಕಾಯ ।
ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ  ।
ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ ಜುಂ ಪಾಲಯ ಪಾಲಯ,
ಮಹಾಮೃತ್ಯುಂಜಯಾಯ ಸರ್ವರೋಗಾರಿಷ್ಟಂ ನಿವಾರಯ
ನಿವಾರಯ, ಆಯುರಭಿವೃದ್ಧಿಂ ಕುರು ಕುರು ಆತ್ಮಾನಂ ರಕ್ಷ ರಕ್ಷ,
ಮಹಾಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ ॥

3.  ಓಂ ನಮೋ ಭಗವತೇ ಮಹಾಮೃತ್ಯುಂಜಥೇಶ್ವರಾಯ ಪಾರ್ವತೀಮನೋಹರಾಯ
ಅಮೃತಸ್ವರೂಪಾಯ ಕಾಲಾನ್ತಕಾಯ ಕರುಣಾಕರಾಯ ಗಂಗಾಧರಾಯ । ಓಂ ಹಾಂ
ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ । ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ
ಜುಂ ಸಃ ಜುಂ ಪಾಲಯ ಪಾಲಯ । ಮಹಾಮೃತ್ಯುಂಜಯಾಯ ಸರ್ವರೋಗಾರಿಷ್ಟಂ
ನಿವಾರಯ ನಿವಾರಯ ಸರ್ವದುಷ್ಟಗ್ರಹೋಪದ್ರವಂ ನಿವಾರಯ ನಿವಾರಯ, ಆತ್ಮಾನಂ
ರಕ್ಷ ರಕ್ಷ, ಆಯುರಭಿವೃದ್ಧಿಂ
ಕುರು ಕುರು ಮಹಾಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ ॥

4। ಓಂ ನಮೋ ಭಗವತೇ ಮಹಾಮೃತ್ಯುಜಯೇಶ್ವರಾಯ ಜಟಾಮಕುಟಧಾರಣಾಯ
ಚನ್ದ್ರಶೇಖರಾಯ ಶ್ರೀಮಹಾವಿಷ್ಣುವಲ್ಲಭಾಯ, ಪಾರ್ವತೀಮನೋಹರಾಯ,
ಪಂಚಾಕ್ಷರ ಪರಿಪೂರ್ಣಾಯ, ಪರಮೇಶ್ವರಾಯ, ಭಕ್ತಾತ್ಮಪರಿಪಾಲನಾಯ,
ಪರಮಾನನ್ದಾಯ ಪರಬ್ರಹ್ಮಪರಾಪರಾಯ । ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ
ಹೌಂ ಹಾಂ । ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ ಜುಂ ಪಾಲಯ ಪಾಲಯ ।
ಮಹಾಮೃತ್ಯುಂಜಯಾಯ ಲಂ ಲಂ ಲೌಂ ಇನ್ದ್ರದ್ವಾರಂ ಬನ್ಧಯ ಬನ್ಧಯ ।
ಆತ್ಮಾನಂ ರಕ್ಷ ರಕ್ಷ, ಸರ್ವಗ್ರಹಾನ್ ಬನ್ಧಯ ಬನ್ಧಯ ಸ್ತಮ್ಭಯ
ಸ್ತಮ್ಭಯ ಸರ್ವರೋಗಾರಿಷ್ಟಂ ನಿವಾರಯ ನಿವಾರಯ, ದೀರ್ಘಾಯುಷ್ಯಂ ಕುರು
ಕುರು । ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ ॥

5.  ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ,
ಕಾಲಕಾಲಸಂಹಾರರುದ್ರಾಯ,ವ್ಯಾಘ್ರಚರ್ಮಾಮ್ಬರಧರಾಯ,
ಕೃಷ್ಣಸರ್ಪಯಜ್ಞೋಪವೀತಾಯ, ಅನೇಕಕೋಟಿಬ್ರಹ್ಮಕಪಾಲಾಲಂಕೃತಾಯ ।
ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ । ಓಂ ಶ್ಲೀಂ ಪಂ ಶುಂ
ಹುಂ ಜುಂ ಸಃ ಜುಂ ಸಃ ಪಾಲಯ ಪಾಲಯ । ಮಹಾಮೃತ್ಯುಂಜಯಾಯ ರಂ
ರಂ ರೌಂ ಅಗ್ನಿದ್ವಾರಂ ಬನ್ಧಯ ಬನ್ಧಯ, ಆತ್ಮಾನಂ ರಕ್ಷ ರಕ್ಷ ।
ಸರ್ವಗ್ರಹಾನ್ಬನ್ಧಯ ಬನ್ಧಯ । ಸ್ತಮ್ಭಯ ಸ್ತಮ್ಭಯ, ಸರ್ವರೋಗಾರಿಷ್ಟಂ
ನಿವಾರಯ ನಿವಾರಯ । ಅರೋಗದೃಢಗಾತ್ರ ದೀರ್ಘಾಯುಷ್ಯಂ ಕುರು ಕುರು ।
ಓಂ ನಮೋ ಭಗವತೇ ಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ ॥

6.  ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ತ್ರಿನೇತ್ರಾಯ
ಕಾಲಕಾಲಾನ್ತಕಾಯ  ಆತ್ಮರಕ್ಷಾಕರಾಯ ಲೋಕೇಶ್ವರಾಯ ಅಮೃತಸ್ವರೂಪಾಯ ।
ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ । ಓಂ ಶ್ಲೀಂ ಪಂ ಶುಂ ಹುಂ
ಜುಂ ಸಃ ಜುಂ ಸಃ ಪಾಲಯ ಪಾಲಯ ಮಹಾಮೃತ್ಯುಂಜಯಾಯ ಹಂ ಹಂ ಹೌಂ
ಯಮದ್ವಾರಂ ಬನ್ಧಯ ಬನ್ಧಯ ಆತ್ಮಾನಂ ರಕ್ಷ ರಕ್ಷ, ಸರ್ವಗ್ರಹಾನ್
ಬನ್ಧಯ ಬನ್ಧಯ ಸ್ತಮ್ಭಯ ಸ್ತಮ್ಭಯ ಸರ್ವರೋಗಾರಿಷ್ಟಂ ನಿವಾರಯ
ನಿವಾರಯ ಮಹಾಮೃತ್ಯುಭಯಂ ನಿವಾರಯ ನಿವಾರಯ ಅರೋಗದೃಢಗಾತ್ರ
ದೀರ್ಘಾಯುಷ್ಯಂ ಕುರು ಕುರು । ಓಂ ನಮೋ ಭಗವತೇ ಮೃತ್ಯುಂಜಯೇಶ್ವರಾಯ
ಹುಂ ಫಟ್ ಸ್ವಾಹಾ ॥

7.  ಓಂ ನಮೋ ಭಗವತೇ ಮೃತ್ಯುಂಜಯೇಶ್ವರಾಯ ತ್ರಿಶೂಲ ಡಮರುಕಪಾಲ
ಮಾಲಿಕಾವ್ಯಾಘ್ರಚರ್ಮಾಮ್ಬರಧರಾಯ, ಪರಶುಹಸ್ತಾಯ, ಶ್ರೀನೀಲಕಂಠಾಯ
ನಿರಂಜನಾಯ, ಕಾಲಕಾಲಾನ್ತಕಾಯ, ಭಕ್ತಾತ್ಮಪರಿಪಾಲಕಾಯ,
ಅಮೃತೇಶ್ವರಾಯ । ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ । ಓಂ
ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ ಪಾಲಯ ಪಾಲಯ ಮಹಾಮೃತ್ಯುಂಜಯಾಯ
ಷಂ ಷಂ ಷೌಂ ನಿರೃತಿದ್ವಾರಂ ಬನ್ಧಯ ಬನ್ಧಯ । ಆತ್ಮಾನಂ ರಕ್ಷ
ರಕ್ಷ । ಸರ್ವಗ್ರಹಾನ್ಬನ್ಧಯ ಬನ್ಧಯ । ಸ್ತಮ್ಭಯ ಸ್ತಮ್ಭಯ ।
ಮಹಾಮೃತ್ಯುಜಯೇಶ್ವರಾಯ ಅರೋಗದೃಢ ಗಾತ್ರದೀರ್ಘಾಯುಷ್ಯಂ ಕುರು ಕುರು ।
ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ ॥

8.  ಓಂ ನಮೋ ಭಗವತೇ ಮಹಾಮೃತ್ಯುಜಯೇಶ್ವರಾಯ ಮಹಾರುದ್ರಾಯ
ಸರ್ವಲೋಕರಕ್ಷಾಕರಾಯ ಚನ್ದ್ರಶೇಖರಾಯ ಕಾಲಕಂಠಾಯ ಆನನ್ದ
ಭುವನಾಯ ಅಮೃತಶ್ವರಾಯ ಕಾಲಕಾಲಾನ್ತಕಾಯ ಕರುಣಾಕರಾಯ ಕಲ್ಯಾಣಗುಣಾಯ
ಭಕ್ತಾತ್ಮಪರಿಪಾಲಕಾಯ ।
ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ ।
ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ । 
ಪಾಲಯ ಪಾಲಯ ಮಹಾಮೃತ್ಯುಜಯೇಶ್ವರಾಯ ಪಂ ಪಂ ಪೌಂ
ವರುಣದ್ವಾರಂ ಬನ್ಧಯ ಬನ್ಧಯ । ಆತ್ಮಾನಂ ರಕ್ಷ ರಕ್ಷ । 
ಸರ್ವಗ್ರಹಾನ್ ಸ್ತಮ್ಭಯ ಸ್ತಮ್ಭಯ । ಮಹಾಮೃತ್ಯುಂಜಯಮೂರ್ತಯೇ ರಕ್ಷ ರಕ್ಷ ।
ಸರ್ವರೋಗಾರಿಷ್ಟಂ ನಿವಾರಯ ನಿವಾರಯ ।
 ಮಹಾಮೃತ್ಯುಭಯಂ ನಿವಾರಯ ನಿವಾರಯ । ಮಹಾಮೃತ್ಯುಂಜಯೇಶ್ವರಾಯ ।
ಅರೋಗದೃಢಗಾತ್ರದೀರ್ಘಾಯುಷ್ಯಂ ಕುರು ಕರು । 
ಓಂ ನಮೋ ಭಗವತೇ ಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ ॥

9.  ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಗಂಗಾಧರಾಯ
ಪರಶುಹಸ್ತಾಯ ಪಾರ್ವತೀಮನೋಹರಾಯ ಭಕ್ತಪರಿಪಾಲನಾಯ ಪರಮೇಶ್ವರಾಯ
ಪರಮಾನನ್ದಾಯ । ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ । ಓಂ ಶ್ಲೀಂ
ಪಂ ಶುಂ ಹುಂ ಜುಂ ಸಃ ಜುಂ ಸಃ ಪಾಲಯ ಪಾಲಯ,
ಮಹಾಮೃತ್ಯುಂಜಯಾಯ ಯಂ ಯಂ ಯೌಂ ವಾಯುದ್ವಾರಂ ಬನ್ಧಯ ಬನ್ಧಯ, 
ಆತ್ಮಾನಂ ರಕ್ಷ ರಕ್ಷ । ಸರ್ವಗ್ರಹಾನ್ ಬನ್ಧಯ ಬನ್ಧಯ,
ಸ್ತಮ್ಭಯ ಸ್ತಮ್ಭಯ, ಮಹಾಮೃತ್ಯುಂಜಯಮೂರ್ತಯೇ ರಕ್ಷ ರಕ್ಷ
ಸರ್ವರೋಗಾರಿಷ್ಟಂ ನಿವಾರಯ ನಿವಾರಯ, ಮಹಾಮೃತ್ಯುಜಯೇಶ್ವರಾಯ
ಅರೋಗದೃಢಗಾತ್ರ ದೀರ್ಘಾಯುಷ್ಯಂ ಕುರು ಕುರು ।
ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ ॥

10.  ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಚನ್ದ್ರಶೇಖರಾಯ
ಉರಗಮಣಿಭೂಷಿತಾಯ ಶಾರ್ದೂಲಚರ್ಮಾಮ್ಬರಧರಾಯ, ಸರ್ವಮೃತ್ಯುಹರಾಯ
ಪಾಪಧ್ವಂಸನಾಯ ಆತ್ಮರಕ್ಷಕಾಯ ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ
ಹೌಂ ಹಾಂ । ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ ಪಾಲಯ ಪಾಲಯ ।
ಮಹಾಮೃತ್ಯುಂಜಯಾಯ ಸಂ ಸಂ ಸೌಂ ಕುಬೇರದ್ವಾರಂ ಬನ್ಧಯ ಬನ್ಧಯ ।
ಆತ್ಮಾನಂ ರಕ್ಷಂ ರಕ್ಷ । ಸರ್ವಗ್ರಹಾನ್ ಬನ್ಧಯ ಬನ್ಧಯ । ಸ್ತಮ್ಭಯ
ಸ್ತಮ್ಭಯ । ಮಹಾಮೃತ್ಯುಂಜಯಮೂರ್ತಯೇ ರಕ್ಷ ರಕ್ಷ । ಸರ್ವರೋಗಾರಿಷ್ಟಂ
ನಿವಾರಯ ನಿವಾರಯ । ಮಹಾಮೃತ್ಯುಂಜಯೇಶ್ವರಾಯ ಅರೋಗದೃಢಗಾತ್ರ
ದೀರ್ಘಾಯುಷ್ಯಂ ಕುರು ಕುರು । ಓಂ ನಮೋ ಭಗವತೇ ಮಹಾಮೃತ್ಯುಜಯೇಶ್ವರಾಯ
ಹುಂ ಫಟ್ ಸ್ವಾಹಾ ॥

11.  ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಸರ್ವಾತ್ಮರಕ್ಷಾಕರಾಯ
ಕರುಣಾಮೃತಸಾಗರಾಯ ಪಾರ್ವತೀಮನೋಹರಾಯ ಅಘೋರವೀರಭದ್ರಾಟ್ಟಹಾಸಾಯ
ಕಾಲರಕ್ಷಾಕರಾಯ ಅಚಂಚಲಸ್ವರೂಪಾಯ ಪ್ರಲಯಕಾಲಾಗ್ನಿರುದ್ರಾಯ
ಆತ್ಮಾನನ್ದಾಯ ಸರ್ವಪಾಪಹರಾಯ ಭಕ್ತಪರಿಪಾಲನಾಯ ಪಂಚಾಕ್ಷರಸ್ವರೂಪಾಯ
ಭಕ್ತವತ್ಸಲಾಯ ಪರಮಾನನ್ದಾಯ । ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ
ಹೌಂ ಹಾಂ । ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ ಪಾಲಯ ಪಾಲಯ
ಮಹಾಮೃತ್ಯುಂಜಯಾಯ । ಶಂ ಶಂ ಶೌಂ ಈಶಾನದ್ವಾರಂ ಬನ್ಧಯ ಬನ್ಧಯ,
ಸ್ತಮ್ಭಯ ಸ್ತಮ್ಭಯ, ಶಂ ಶಂ ಶೌಂ ಈಶಾನಮೃತ್ಯುಂಜಯ ಮೂರ್ತಯೇ
ಆತ್ಮಾನಂ ರಕ್ಷ ರಕ್ಷ, ಸರ್ವಗ್ರಹಾನ್ ಬನ್ಧಯ ಬನ್ಧಯ ಸ್ತಮ್ಭಯ
ಸ್ತಮ್ಭಯ । ಶಂ ಶಂ ಶೌ ಈಶಾನಮೃತ್ಯುಂಜಯ ಮೂರ್ತಯೇ ರಕ್ಷ
ರಕ್ಷ ಸರ್ವರೋಗಾರಿಷ್ಟಂ ನಿವಾರಯ, ನಿವಾರಯ, ಮಹಾಮೃತ್ಯುಭಯಂ ನಿವಾರಯ
ನಿವಾರಯ । ಮಹಾಮೃತ್ಯುಂಜಯೇಶ್ವರಾಯ ಅರೋಗದೃಢಗಾತ್ರದೀರ್ಘಾಯುಷ್ಯಂ
ಕುರು ಕರು । ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಹುಂ ಫಟ್
ಸ್ವಾಹಾ ॥

12.  ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ
ಆಕಾಶತತ್ವಭುವನೇಶ್ವರಾಯ ಅಮೃತೋದ್ಭವಾಯ ನನ್ದಿವಾಹನಾಯ
ಆಕಾಶಗಮನಪ್ರಿಯಾಯ ಗಜಚರ್ಮಧಾರಣಾಥ ಕಾಲಕಾಲಾಯ ಭೂತಾತ್ಮಕಾಯ
ಮಹಾದೇವಾಯ ಭೂತಗಣಸೇವಿತಾಯ (ಆಕಾಶತತ್ತ್ವಭುವನೇಶ್ವರಾಯ)
ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ ।
ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ
ಪಾಲಯ ಪಾಲಯ ಮಹಾಮೃತ್ಯುಂಜಯಾಯ ಟಂ ಟಂ ಟೌಂ
ಆಕಾಶದ್ವಾರಂ ಬನ್ಧಯ ಬನ್ಧಯ ಆತ್ಮಾನಂ ರಕ್ಷ ರಕ್ಷ 
ಸರ್ವಗ್ರಹಾನ್ಬನ್ಧಯ ಬನ್ಧಯ । ಸ್ತಮ್ಭಯ ಸ್ತಮ್ಭಯ ।
ಟಂ ಟಂ ಟೌಂ ಪರಮಾಕಾಶಮೂರ್ತಯೇ ಮೃತ್ಯುಂಜಯೇಶ್ವರಾಯ ರಕ್ಷ ರಕ್ಷ । 
ಸರ್ವರೋಗಾರಿಷ್ಟಂ ನಿವಾರಯ ನಿವಾರಯ, ಮಹಾಮೃತ್ಯುಭಯಂ ನಿವಾರಯ ನಿವಾರಯ । 
ಮಹಾಮೃತ್ಯುಂಜಯೇಶ್ವರಾಯ ಅರೋಗದೃಢಗಾತ್ರ ದೀರ್ಘಾಯುಷ್ಯಂ ಕುರು ಕುರು । 
ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ ॥

13.  ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಮಹಾರುದ್ರಾಯ ಕಾಲಾಗ್ನಿ  
ರುದ್ರಭುವನಾಯ ಮಹಾಪ್ರಲಯತಾಂಡವೇಶ್ವರಾಯ ಅಪಮೃತ್ಯುವಿನಾಶನಾಯ
ಕಾಲಕಾಲೇಶ್ವರಾಯ ಕಾಲಮೃತ್ಯು ಸಂಹಾರಣಾಯ ಅನೇಕಕೋಟಿಭೂತಪ್ರೇತಪಿಶಾಚ
ಬ್ರಹ್ಮರಾಕ್ಷಸಯಕ್ಷರಾಕ್ಷಸಗಣಧ್ವಂಸನಾಯ ಆತ್ಮರಕ್ಷಾಕರಾಯ
ಸರ್ವಾತ್ಮಪಾಪಹರಾಯ ।
ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ ।
ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ ಪಾಲಯ ಪಾಲಯ
ಮಹಾಮೃತ್ಯುಂಜಯಾಯ ಕ್ಷಂ ಕ್ಷಂ ಕ್ಷೌಂ ಅನ್ತರಿಕ್ಷದ್ವಾರಂ
ಬನ್ಧಯ ಬನ್ಧಯ ಆತ್ಮಾನಂ ರಕ್ಷ ರಕ್ಷ, ಸರ್ವಗ್ರಹಾನ್ ಬನ್ಧಯ, ಬನ್ಧಯ,
ಸ್ತಮ್ಭಯ ಸ್ತಮ್ಭಯ ।
ಕ್ಷಂ ಕ್ಷಂ ಕ್ಷೌಂ ಚಿದಾಕಾಶಮೂರ್ತಯೇ ಮಹಾಮೃತ್ಯುಂಜಯೇಶ್ವರಾಯ ರಕ್ಷ ರಕ್ಷ ।
 ಸರ್ವರೋಗಾರಿಷ್ಟಂ ನಿವಾರಯ ನಿವಾರಯ । 
ಮಹಾಮೃತ್ಯುಭಯಂ ನಿವಾರಯ ನಿವಾರಯ ।
ಮಹಾಮೃತ್ಯುಂಜಯೇಶ್ವರಾಯ ಅರೋಗದೃಢಗಾತ್ರ ದೀರ್ಘಾಯುಷ್ಯಂ ಕುರು ಕುರು । 
ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ ॥

14.  ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಸದಾಶಿವಾಯ
ಪಾರ್ವತೀಪರಮೇಶ್ವರಾಯ ಮಹಾದೇವಾಯ ಸಕಲತತ್ವಾತ್ಮರೂಪಾಯ
ಶಶಾಂಕಶೇಖರಾಯ ತೇಜೋಮಯಾಯ ಸರ್ವಸಾಕ್ಷಿಭೂತಾಯ
ಪಂಚಾಕ್ಷರಾಯ ಪಶ್ಚಭೂತೇಶ್ವರಾಯ ಪರಮಾನನ್ದಾಯ ಪರಮಾಯ
ಪರಾಪರಾಯ ಪರಂಜ್ಯೋತಿಃಸ್ವರೂಪಾಯ । 
ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ ।
ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ ಜುಂ ಪಾಲಯ ಪಾಲಯ, 
ಮಹಾಮೃತ್ಯುಂಜಯಾಯ ಹಂ ಹಾಂ ಹಿಂ ಹೀಂ ಹೈಂ ಹೌಂ
ಅಷ್ಟಮೂರ್ತಯೇ ಮಹಾಮೃತ್ಯುಂಜಯ ಮೂರ್ತಯೇ ಆತ್ಮಾನಂ ರಕ್ಷ ರಕ್ಷ 
ಸರ್ವಗ್ರಹಾನ್ಬನ್ಧಯ ಬನ್ಧಯ ಸ್ತಮ್ಭಯ ಸ್ತಮ್ಭಯ
ಮಹಾಮೃತ್ಯುಂಜಯಮೂರ್ತಯೇ ರಕ್ಷ ರಕ್ಷ ಸರ್ವರೋಗಾರಿಷ್ಟಂ ನಿವಾರಯ ನಿವಾರಯ
ಸರ್ವಮೃತ್ಯುಭಯಂ ನಿವಾರಯ ನಿವಾರಯ, 
ಮಹಾಮೃತ್ಯುಂಜಯೇಶ್ವರಾಯ ಅರೋಗದೃಢಗಾತ್ರದೀರ್ಘಾಯುಷ್ಯಂ ಕುರು ಕುರು ।
ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ ॥

15.  ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಲೋಕೇಶ್ವರಾಯ
ಸರ್ವರಕ್ಷಾಕರಾಯ ಚನ್ದ್ರಶೇಖರಾಯ ಗಂಗಾಧರಾಯ ನನ್ದಿವಾಹನಾಯ
ಅಮೃತಸ್ವರೂಪಾಯ ಅನೇಕಕೋಟಿಭೂತಗಣಸೇವಿತಾಯ ಕಾಲಭೈರವ ಕಪಾಲಭೈರವ
ಕಲ್ಪಾನ್ತಭೈರವ ಮಹಾಭೈರವಾದಿ ಅಷ್ಟತ್ರಿಂಶತ್ಕೋಟಿಭೈರವಮೂರ್ತಯೇ
ಕಪಾಲಮಾಲಾಧರ ಖಟ್ವಾಂಗಚರ್ಮಖಡ್ಗಧರ ಪರಶುಪಾಶಾಂಕುಶಡಮರುಕ
ತ್ರಿಶೂಲ ಚಾಪ ಬಾಣ ಗದಾ ಶಕ್ತಿ ಭಿಂಡಿ ಮುದ್ಗರಪ್ರಾಸ ಪರಿಘಾ ಶತಘ್ನೀ
ಚಕ್ರಾಯುಧಭೀಷಣಾಕಾರ ಸಹಸ್ರಮುಖ ದಂಷ್ಟ್ರಾಕರಾಲವದನ ವಿಕಟಾಟ್ಟಹಾಸ
ವಿಸ್ಫಾಟಿತ ಬ್ರಹ್ಮಾಂಡಮಂಡಲ ನಾಗೇನ್ದ್ರಕುಂಡಲ ನಾಗೇನ್ದ್ರವಲಯ ನಾಗೇನ್ದ್ರಹಾರ
ನಾಗೇನ್ದ್ರ ಕಂಕಣಾಲಂಕೃತ ಮಹಾರುದ್ರಾಯ ಮೃತ್ಯುಂಜಯ ತ್ರ್ಯಮ್ಬಕ
ತ್ರಿಪುರಾನ್ತಕ ವಿರೂಪಾಕ್ಷ ವಿಶ್ವೇಶ್ವರ ವೃಷಭವಾಹನ ವಿಶ್ವರೂಪ
ವಿಶ್ವತೋಮುಖ ಸರ್ವತೋಮುಖ ಮಹಾಮೃತ್ಯುಂಜಯಮೂರ್ತಯೇ ಆತ್ಮಾನಂ ರಕ್ಷ ರಕ್ಷ,
ಮಹಾಮೃತ್ಯುಭಯಂ ನಿವಾರಯ ನಿವಾರಯ, ರೋಗಭಯಂ ಉತ್ಸಾದಯ ಉತ್ಸಾದಯ,
ವಿಷಾದಿಸರ್ಪಭಯಂ ಶಮಯ ಶಮಯ, ಚೋರಾನ್ ಮಾರಯ ಮಾರಯ,
ಸರ್ವಭೂತಪ್ರೇತಪಿಶಾಚ ಬ್ರಹ್ಮರಾಕ್ಷಸಾದಿ ಸರ್ವಾರಿಷ್ಟಗ್ರಹಗಣಾನ್
ಉಚ್ಚಾಟಯ ಉಚ್ಚಾಟಯ ।
ಮಮ ಅಭಯಂ ಕುರು ಕುರು । ಮಾಂ ಸಂಜೀವಯ ಸಂಜೀವಯ ।
ಮೃತ್ಯುಭಯಾತ್ ಮಾಂ ಉದ್ಧಾರಯ ಉದ್ಧಾರಯ । ಶಿವಕವಚೇನ ಮಾಂ ರಕ್ಷ ರಕ್ಷ ।
ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ ।
ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ ।
ಪಾಲಯ ಪಾಲಯ ಮಹಾಮೃತ್ಕುಂಜಯಮೂರ್ತಯೇ ಆತ್ಮಾನಂ ರಕ್ಷ ರಕ್ಷ ।
ಸರ್ವಗ್ರಹಾನ್ ನಿವಾರಯ ನಿವಾರಯ । ಮಹಾಮೃತ್ಯುಭಯಂ ನಿವಾರಯ ನಿವಾರಯ ।
ಮಹಾಮೃತ್ಯುಭಯಂ ನಿವಾರಯ । ಸರ್ವರೋಗಾರಿಷ್ಟಂ ನಿವಾರಯ ನಿವಾರಯ ।
ಮಹಾಮೃತ್ಯುಂಜಯೇಶ್ವರಾಯ ಅರೋಗದೃಢಗಾತ್ರ ದೀರ್ಘಾಯುಷ್ಯಂ ಕುರು ಕುರು ।
ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ ॥

16.  ಓಂ ನಮೋ ಭಗವತೇ ಮಹಾಮೃತ್ಯುಂಜಯೇಶ್ವರಾಯ ಅಮೃತೇಶ್ವರಾಯ
ಅಖಿಲಲೋಕಪಾಲಕಾಯ ಆತ್ಮನಾಥಾಯ ಸರ್ವಸಂಕಟ
ನಿವಾರಣಾಯ ಪಾರ್ವತೀಪರಮೇಶ್ವರಾಯ । 
ಓಂ ಹಾಂ ಹೌಂ ನಂ ಮಂ ಶಿಂ ವಂ ಯಂ ಹೌಂ ಹಾಂ ।
ಓಂ ಶ್ಲೀಂ ಪಂ ಶುಂ ಹುಂ ಜುಂ ಸಃ ಜುಂ ಸಃ ಜುಂ ಪಾಲಯ ಪಾಲಯ ।
ಮಹಾಮೃತ್ಯುಂಜಯೇಶ್ವರಾಯ ಹಂ ಹಾಂ ಹೌಂ ಜುಂ ಸಃ ಜುಂ ಸಃ ಜುಂ
ಮೃತ್ಯುಂಜಯಮೂರ್ತಯೇ ಆತ್ಮಾನಂ ರಕ್ಷ ರಕ್ಷ ಸರ್ವಗ್ರಹಾನ್ ನಿವಾರಯ ನಿವಾರಯ ।
ಮಹಾಮೃತ್ಯುಂಜಯಮೂರ್ತಯೇ ಸರ್ವಸಂಕಟಂ ನಿವಾರಯ ನಿವಾರಯ
ಸರ್ವರೋಗಾರಿಷ್ಟಂ ನಿವಾರಯ ನಿವಾರಯ । ಮಹಾಮೃತ್ಯುಭಯಂ ನಿವಾರಯ ನಿವಾರಯ । 
ಮಹಾಮೃತ್ಯುಂಜಯಮೂರ್ತಯೇ ಸರ್ವಸಂಕಟಂ ನಿವಾರಯ ನಿವಾರಯ
ಸಕಲದುಷ್ಟಗ್ರಹಗಣೋಪದ್ರವಂ ನಿವಾರಯ ನಿವಾರಯ । 
ಅಷ್ಟ ಮಹಾರೋಗಂ ನಿವಾರಯ ನಿವಾರಯ । ಸರ್ವರೋಗೋಪದ್ರವಂ ನಿವಾರಯ ನಿವಾರಯ ।
ಹೈಂ ಹಾಂ ಹಂ ಜುಂ ಸಃ ಜುಂ ಸಃ ಜುಂ ಮಹಾಮೃತ್ಯುಂಜಯ ಮೂರ್ತಯೇ
ಅರೋಗದೃಢಗಾತ್ರ ದೀರ್ಘಾಯುಷ್ಯಂ ಕುರು ಕುರು । ದಾರಾಪುತ್ರಪೌತ್ರ
ಸಬಾನ್ಧವ ಜನಾನ್ ರಕ್ಷ ರಕ್ಷ, ಧನ ಧಾನ್ಯ ಕನಕ ಭೂಷಣ
ವಸ್ತು ವಾಹನ ಕೃಷಿಂ ಗೃಹ ಗ್ರಾಮರಾಮಾದೀನ್ ರಕ್ಷ ರಕ್ಷ ।
ಸರ್ವತ್ರ ಕ್ರಿಯಾನುಕೂಲಜಯಕರಂ ಕುರು ಕುರು ಆಯುರಭಿವೃದ್ಧಿಂ ಕುರು ಕುರು । 
ಜುಂ ಸಃ ಜು ಸಃ ಜುಂ ಸಃ ಮಹಾಮೃತ್ಯುಂಜಯೇಶ್ವರಾಯ ಹುಂ ಫಟ್ ಸ್ವಾಹಾ
 ॥ ಓಂ ॥ 
ಓಂ ಮೃತ್ಯುಂಜಯಾಯ ವಿದ್ಮಹೇ ಭೀಮರುದ್ರಾಯ ಧೀಮಹಿ ।
ತನ್ನೋ ರುದ್ರಃ ಪ್ರಚೋದಯಾತ್ ।
*********


ಮಹಾ ಮೃತ್ಯುಂಜಯ ಮಂತ್ರ|

ಬಹುತೇಕರು ಮೃತ್ಯುಂಜಯ ಮಹಾ ಮಂತ್ರವನನ್ನು ಪ್ರತಿದಿನ ಪಠನೆ ಮಾಡುವ ಅಭ್ಯಾಸ ರೂಢಿಸಿಕೊಂಡಿರುವುದು ಉತ್ತಮ ಮಾರ್ಗವೇ ಸರಿ.
ಅದು ಬೆಳಗಿನ ಜಾವ ಅಥವ ರಾತ್ರಿ ಮಲಗುವ ಮೊದಲು ಕನಿಷ್ಠ ಹನ್ನೊಂದು ಬಾರಿ ಪಠನೆ ಮಾಡುವುದು ಸಾಮಾನ್ಯ ಕ್ರಮ.

ಈ ಮಂತ್ರವನ್ನು ಪಠನ ಮಾಡುವುದು ಒಂದು ಭಾಗವಾದರೆ, ಅದರ ಅರ್ಥ ತಿಳಿದು ಪಠನೆ ಮಾಡುವುದು ಮತ್ತೊಂದು ಭಾಗ, ಇದರಿಂದ ಮನಸ್ಸಿಗೆ ಹೆಚ್ಚು ನೆಮ್ಮದಿ ಮತ್ತು ಫಲವೂ ಅಧಿಕ.


ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ|

ಊರ್ವಾರು ಕಮಿವ ಬಂಧನಾತ್‌ ಮೃತ್ಯೋಮೃಕ್ಷೀಯ ಮಾಮೃತಾತ್‌||

||ಮೃತ್ಯುಂಜಯ ಮಂತ್ರದಲ್ಲಿ ಬರುವ 'ಉರ್ವಾರು' (ಸೌತೆಕಾಯಿಯ) ಸಂಭಂದ ಹೇಗೆ ಎಂಬುದನ್ನು ತಿಳಿಯೋಣ.||

ಓಂ = ಪ್ರಣವ 🕉
ತ್ರಯಂಬಕಂ = ಮೂರು ಕಣ್ಣಿನ ಪರಮೇಶ್ವರನೇ...
ಯಜಾಮಹೇ = ಪೂಜನೀಯನೇ....
ಸುಗಂಧಿಂ = ಸುಗಂಧದಿಂದ ಕೂಡಿದ,
ಪುಷ್ಟಿ ವರ್ಧನಂ = ಇಷ್ಟ ಕಾಮ್ಯ, ಆರೋಗ್ಯವು ವೃದ್ಧಿಯಾಗಲಿ
ಊರ್ವಾರು+ಕಮಿವ+ ಬಂಧನಾತ್ = (ಊರ್ವಾರುಕಮಿವ ಬಂಧನಾತ್)  =  ಹೇಗೆ ಸೌತೆಕಾಯಿಯ ತೊಟ್ಟು ತನ್ನ ಬಳ್ಳಿಯೊಂದಿಗೆ ಬಹಳ ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ ಆ ರೀತಿಯಲ್ಲಿ..... 
ಮೃತ್ಯೋಮೃಕ್ಷೀ = ಅಂತಹ ಮೃತ್ಯುವಿನಿಂದ, ಮುಕ್ತಿ ದೊರೆಯಲಿ.
ಮಾಮೃತಾತ್ = ಅಮೃತತ್ವವನ್ನು ಪಡಯುವಂತಾಗಲಿ.

ಇಲ್ಲಿ "ಊರ್ವಾರು ಕಮಿಕ" ಬಂಧನದ ಬಗ್ಗೆ ಸ್ವಲ್ಪ ಹೆಚ್ಚಿನ ವಿವರಣೆಯ ಅಗತ್ಯವಿದೆ. ಆ ಅದ್ಭುತ ವಿವರಣೆಯನ್ನು ನೋಡೋಣ.


ಪರಶಿವನೇ......

ಈ ಜಗತ್ತಿನೊಂದಿಗೆ ನಮ್ಮ ಬಂಧನವು ಹೇಗಿರಬೇಕು ಎಂದರೆ, ಸೌತೆಕಾಯಿಯು ತನ್ನ ಬಳ್ಳಿಯೊಂದಿಗೆ ಎಷ್ಟು ಸೂಕ್ಷ್ಮವಾಗಿ ಅಂಟಿಕೊಂಡಿರುತ್ತದೆಯೋ, ಅದೇ ರೀತಿಯಲ್ಲಿ ಈ ಲೌಕಿಕ ಜಗತ್ತಿನೊಂದಿಗಿನ ನಮ್ಮ ಬಂಧನವು ಸಾಕು ಎಂಬ ಅರ್ಥ ಅಧ್ಬುತ.

| ಅದು ಹೇಗೆಂಬುದನ್ನು ನೋಡೋಣ |


ನಾವು ಇಲ್ಲಿ ಗಮನಿಸಬೇಕಾದದ್ದು, ಗಿಡದ ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳಿಗೂ ಮತ್ತು ಅದೇರೀತಿ ಬಳ್ಳಿಯಿಂದ ಬೆಳೆಯುವ  ಸೌತೆಕಾಯಿಗೂ  ಕಾಣುವ ವ್ಯತ್ಯಾಸ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದಾಗ......!

1. ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸುವಾಗ, ಕಾಯಿಯ ಜೊತೆ ಬಳ್ಳಿಯ ತೊಟ್ಟು ಅಂಟಿಕೊಂಡು ಬರುವುದಿಲ್ಲ, ಅದು ಗಿಡದ ಬಳ್ಳಿಯೊಂದಿಗೆ ಗಿಡದಲ್ಲೇ ಉಳಿಯುತ್ತದೆ. 
2. ಆದರೆ, ಬಳ್ಳಿಯಿಂದ ಬೆಳೆಯುವ ಕುಂಬಳಕಾಯಿ, ಸೋರೇಕಾಯಿ, ಹೀರೇಕಾಯಿ ಮುಂತಾದವುಗಳು ಬಳ್ಳಿಯ ತೊಟ್ಟು ಕಾಯಿಯೊಂದಿಗೆ ಗಟ್ಟಿಯಾಗಿ ಅಂಟಿಕೊಂಡಿವುದನ್ನು ನಾವು ಗಮನಿದ್ದೇವೆ. 
3. ಗಿಡದ ಬಳ್ಳಿಯಿಂದ ಉತ್ಪತ್ತಿಯಾದ
ತರಕಾರಿಗಳನ್ನು ಮಾರುಕಟ್ಟೆಯಿಂದ ತರುವಾಗ ಕುಂಬಳಕಾಯಿ, ಹೀರೇಕಾಯಿ, ಸೋರೇಕಾಯಿ ಮುಂತಾದವುಗಳು ತೊಟ್ಟಿನ ಸಮೇತ ಕೊಳ್ಳುತ್ತೇವೆ. ಆದರೆ ತೊಟ್ಟಿನೊಂದಿಗೆ ಇರುವ ಸೌತೆಕಾಯಿ ಮಾರುಕಟ್ಟೆಯಲ್ಲಿ ದೊರೆಯುವುದು ಅತಿ ವಿರಳ..!
ಕಾರಣ....!  ಸೌತೆಕಾಯಿ ಮತ್ತು ಅದರ ಗಿಡದ ಬಳ್ಳಿಯ  ಸಂಭಂದ ಬಹಳ ಸೂಕ್ಷ್ಮ. ಸೌತೆಕಾಯಿಯನ್ನು ಗಿಡದ ಬಳ್ಳಿಯಿಂದ ಬೇರ್ಪಡಿಸು ಸಮಯದಲ್ಲಿ, ಕಾಯಿಯೊಂದಿಗೆ  ಅಂಟಿಕೊಂಡಿದ್ದ ಅದರ ತೊಟ್ಟು ಬಳ್ಳಿಯಲ್ಲೇ ಉಳಿಯುತ್ತದೆ ಎನ್ನುವ ಅಧ್ಬುತವಾದ ವಿವರಣೆ. ಅದೇ ರೀತಿಯಲ್ಲಿ ಲೌಕಿಕ ಜಗತ್ತಿನ ನಮ್ಮ ಬಂಧನಗಳು ಇರಬೇಕು ಎಂಬ ಸಂದೇಶ.

ಮೃತ್ಯುಂಜಯ ಮಂತ್ರವನ್ನು ಪ್ರತಿದಿನವೂ ಹೇಳುವುದು ಮೃತ್ಯುವನ್ನು ಜಯಿಸುವ ಕಾರಣಕ್ಕಾಗಿ ಅಲ್ಲ. ಮೃತ್ಯುವು ಸುಲಭವಾಗಿ, ರೋಗ ರುಜಿನಗಳಿಲ್ಲದೆ ಅನಾಯಾಸವಾಗಿ ಬರಲಿ ಎಂಬ ಅರ್ಥ.

ಇದನ್ನೇ ಗುರು ದ್ರೋಣಾಚಾರ್ಯರೂ ಸಹಾ....
"ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ, ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಲಂ "  ಎಂದು ತಿಳಿಸಿದ್ದು.
ಮಾನವರಾಗಿ ಜನಿಸಿದ ನಾವು ಈ ಲೌಕಿಕ ಜಗತ್ತಿನೊಂದಿಗೆ ಅತಿ ಸೂಕ್ಷ್ಮವಾದ, ಕನಿಷ್ಠ ಮೋಹದ ಬದುಕನ್ನು ಆಯ್ಕೆ ಮಾಡಿಕೊಳ್ಳಬೇಕು. ಅತಿಯಾದ ಗಟ್ಟಿ ಬಂಧನಗಳಿಗೆ ಅಂಟಿಕೊಂಡಾಗ, ಅನಭವಿಸುವ ನೋವೇ ಹೆಚ್ಚು,
The less attached YOU are, the more peaceful YOU are.
ಎನ್ನುವುದನ್ನು ಸರಳವಾಗಿ ವಿವರಿಸಲಾಗಿದೆ.

"ಹರ ಹರ ಮಹಾದೇವ, ಶಂಭೋ ಶಂಕರ
*********

No comments:

Post a Comment