Tuesday 1 October 2019

ಹನುಮಾನ್ ಚಾಲೀಸಾ ತುಲಸಿದಾಸ ವಿರಚಿತಮ್ HANUMAN CHALISA by tulsi dasa


ಹನುಮಾನ್ ಚಾಲೀಸಾ by ತುಲಸೀ ದಾಸ್

ದೋಹಾ
ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ |
ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ||
ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ |
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ್ ||

ಧ್ಯಾನಮ್
ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ |
ರಾಮಾಯಣ ಮಹಾಮಾಲಾ ರತ್ನಂ ವಂದೇ ಅನಿಲಾತ್ಮಜಮ್ ||
ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್ |
ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ ||

ಚೌಪಾಈ
ಜಯ ಹನುಮಾನ ಙ್ಞಾನ ಗುಣ ಸಾಗರ |
ಜಯ ಕಪೀಶ ತಿಹು ಲೋಕ ಉಜಾಗರ || 1 ||

ರಾಮದೂತ ಅತುಲಿತ ಬಲಧಾಮಾ |
ಅಂಜನಿ ಪುತ್ರ ಪವನಸುತ ನಾಮಾ || 2 ||

ಮಹಾವೀರ ವಿಕ್ರಮ ಬಜರಂಗೀ |
ಕುಮತಿ ನಿವಾರ ಸುಮತಿ ಕೇ ಸಂಗೀ ||3 ||

ಕಂಚನ ವರಣ ವಿರಾಜ ಸುವೇಶಾ |
ಕಾನನ ಕುಂಡಲ ಕುಂಚಿತ ಕೇಶಾ || 4 ||

ಹಾಥವಜ್ರ ಔ ಧ್ವಜಾ ವಿರಾಜೈ |
ಕಾಂಥೇ ಮೂಂಜ ಜನೇವೂ ಸಾಜೈ || 5||

ಶಂಕರ ಸುವನ ಕೇಸರೀ ನಂದನ |
ತೇಜ ಪ್ರತಾಪ ಮಹಾಜಗ ವಂದನ || 6 ||

ವಿದ್ಯಾವಾನ ಗುಣೀ ಅತಿ ಚಾತುರ |
ರಾಮ ಕಾಜ ಕರಿವೇ ಕೋ ಆತುರ || 7 ||

ಪ್ರಭು ಚರಿತ್ರ ಸುನಿವೇ ಕೋ ರಸಿಯಾ |
ರಾಮಲಖನ ಸೀತಾ ಮನ ಬಸಿಯಾ || 8||

ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ |
ವಿಕಟ ರೂಪಧರಿ ಲಂಕ ಜರಾವಾ || 9 ||

ಭೀಮ ರೂಪಧರಿ ಅಸುರ ಸಂಹಾರೇ |
ರಾಮಚಂದ್ರ ಕೇ ಕಾಜ ಸಂವಾರೇ || 10 ||

ಲಾಯ ಸಂಜೀವನ ಲಖನ ಜಿಯಾಯೇ |
ಶ್ರೀ ರಘುವೀರ ಹರಷಿ ಉರಲಾಯೇ || 11 ||

ರಘುಪತಿ ಕೀನ್ಹೀ ಬಹುತ ಬಡಾಯೀ |
ತುಮ ಮಮ ಪ್ರಿಯ ಭರತಹಿ ಸಮ ಭಾಯೀ || 12 ||

ಸಹಸ ವದನ ತುಮ್ಹರೋ ಯಶಗಾವೈ |
ಅಸ ಕಹಿ ಶ್ರೀಪತಿ ಕಂಠ ಲಗಾವೈ || 13 ||

ಸನಕಾದಿಕ ಬ್ರಹ್ಮಾದಿ ಮುನೀಶಾ |
ನಾರದ ಶಾರದ ಸಹಿತ ಅಹೀಶಾ || 14 ||

ಯಮ ಕುಬೇರ ದಿಗಪಾಲ ಜಹಾಂ ತೇ |
ಕವಿ ಕೋವಿದ ಕಹಿ ಸಕೇ ಕಹಾಂ ತೇ || 15 ||

ತುಮ ಉಪಕಾರ ಸುಗ್ರೀವಹಿ ಕೀನ್ಹಾ |
ರಾಮ ಮಿಲಾಯ ರಾಜಪದ ದೀನ್ಹಾ || 16 ||

ತುಮ್ಹರೋ ಮಂತ್ರ ವಿಭೀಷಣ ಮಾನಾ |
ಲಂಕೇಶ್ವರ ಭಯೇ ಸಬ ಜಗ ಜಾನಾ || 17 ||

ಯುಗ ಸಹಸ್ರ ಯೋಜನ ಪರ ಭಾನೂ |
ಲೀಲ್ಯೋ ತಾಹಿ ಮಧುರ ಫಲ ಜಾನೂ || 18 ||

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ |
ಜಲಧಿ ಲಾಂಘಿ ಗಯೇ ಅಚರಜ ನಾಹೀ || 19 ||

ದುರ್ಗಮ ಕಾಜ ಜಗತ ಕೇ ಜೇತೇ |
ಸುಗಮ ಅನುಗ್ರಹ ತುಮ್ಹರೇ ತೇತೇ || 20 ||

ರಾಮ ದುಆರೇ ತುಮ ರಖವಾರೇ |
ಹೋತ ನ ಆಙ್ಞಾ ಬಿನು ಪೈಸಾರೇ || 21 ||

ಸಬ ಸುಖ ಲಹೈ ತುಮ್ಹಾರೀ ಶರಣಾ |
ತುಮ ರಕ್ಷಕ ಕಾಹೂ ಕೋ ಡರ ನಾ || 22 ||

ಆಪನ ತೇಜ ತುಮ್ಹಾರೋ ಆಪೈ |
ತೀನೋಂ ಲೋಕ ಹಾಂಕ ತೇ ಕಾಂಪೈ || 23 ||

ಭೂತ ಪಿಶಾಚ ನಿಕಟ ನಹಿ ಆವೈ |
ಮಹವೀರ ಜಬ ನಾಮ ಸುನಾವೈ || 24 ||

ನಾಸೈ ರೋಗ ಹರೈ ಸಬ ಪೀರಾ |
ಜಪತ ನಿರಂತರ ಹನುಮತ ವೀರಾ || 25 ||

ಸಂಕಟ ಸೇಂ ಹನುಮಾನ ಛುಡಾವೈ |
ಮನ ಕ್ರಮ ವಚನ ಧ್ಯಾನ ಜೋ ಲಾವೈ || 26 ||

ಸಬ ಪರ ರಾಮ ತಪಸ್ವೀ ರಾಜಾ |
ತಿನಕೇ ಕಾಜ ಸಕಲ ತುಮ ಸಾಜಾ || 27 ||

ಔರ ಮನೋರಧ ಜೋ ಕೋಯಿ ಲಾವೈ |
ತಾಸು ಅಮಿತ ಜೀವನ ಫಲ ಪಾವೈ || 28 ||

ಚಾರೋ ಯುಗ ಪರಿತಾಪ ತುಮ್ಹಾರಾ |
ಹೈ ಪರಸಿದ್ಧ ಜಗತ ಉಜಿಯಾರಾ || 29 ||

ಸಾಧು ಸಂತ ಕೇ ತುಮ ರಖವಾರೇ |
ಅಸುರ ನಿಕಂದನ ರಾಮ ದುಲಾರೇ || 30 ||

ಅಷ್ಠಸಿದ್ಧಿ ನವ ನಿಧಿ ಕೇ ದಾತಾ |
ಅಸ ವರ ದೀನ್ಹ ಜಾನಕೀ ಮಾತಾ || 31 ||

ರಾಮ ರಸಾಯನ ತುಮ್ಹಾರೇ ಪಾಸಾ |
ಸಾದ ರಹೋ ರಘುಪತಿ ಕೇ ದಾಸಾ || 32 ||

ತುಮ್ಹರೇ ಭಜನ ರಾಮಕೋ ಪಾವೈ |
ಜನ್ಮ ಜನ್ಮ ಕೇ ದುಖ ಬಿಸರಾವೈ || 33 ||

ಅಂತ ಕಾಲ ರಘುವರ ಪುರಜಾಯೀ |
ಜಹಾಂ ಜನ್ಮ ಹರಿಭಕ್ತ ಕಹಾಯೀ || 34 ||

ಔರ ದೇವತಾ ಚಿತ್ತ ನ ಧರಯೀ |
ಹನುಮತ ಸೇಯಿ ಸರ್ವ ಸುಖ ಕರಯೀ || 35 ||

ಸಂಕಟ ಕಟೈ ಮಿಟೈ ಸಬ ಪೀರಾ |
ಜೋ ಸುಮಿರೈ ಹನುಮತ ಬಲ ವೀರಾ || 36 ||

ಜೈ ಜೈ ಜೈ ಹನುಮಾನ ಗೋಸಾಯೀ |
ಕೃಪಾ ಕರೋ ಗುರುದೇವ ಕೀ ನಾಯೀ || 37 ||

ಜೋ ಶತ ವಾರ ಪಾಠ ಕರ ಕೋಯೀ |
ಛೂಟಹಿ ಬಂದಿ ಮಹಾ ಸುಖ ಹೋಯೀ || 38 ||

ಜೋ ಯಹ ಪಡೈ ಹನುಮಾನ ಚಾಲೀಸಾ |
ಹೋಯ ಸಿದ್ಧಿ ಸಾಖೀ ಗೌರೀಶಾ || 39 ||

ತುಲಸೀದಾಸ ಸದಾ ಹರಿ ಚೇರಾ |
ಕೀಜೈ ನಾಥ ಹೃದಯ ಮಹ ಡೇರಾ || 40 ||

ದೋಹಾ
ಪವನ ತನಯ ಸಂಕಟ ಹರಣ – ಮಂಗಳ ಮೂರತಿ ರೂಪ್ |
ರಾಮ ಲಖನ ಸೀತಾ ಸಹಿತ – ಹೃದಯ ಬಸಹು ಸುರಭೂಪ್ ||

ಸಿಯಾವರ ರಾಮಚಂದ್ರಕೀ ಜಯ | ಪವನಸುತ ಹನುಮಾನಕೀ ಜಯ | ಬೋಲೋ ಭಾಯೀ ಸಬ ಸಂತನಕೀ ಜಯ |
****

meaning in kannada
.ಹನುಮಾನ್ ಚಾಲೀಸಾ

ಅತುಲಿತ ಬಲಧಾಮಂ ಸ್ವರ್ಣ ಸೈಲಾಭ ದೇಹಂ ll
ದನುಜಗಣ ಕುಶಾನು ಜ್ಞಾನಿನಾಮ್ ಅಗ್ರಗಣ್ಯಮ್ ಸಕಲ ಗುಣ ll ನಿಧಾನಂವಾನರಾಣ ಮಧೀಷಂ
ರಘುಪತಿ ಪ್ರಿಯ ಭಕ್ತಮ್ ವಾತಜಾತಮ್ ನಮಾಮೇ ll

ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರು ಸುಧಾರಿ 
ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ||
ಶ್ರೀ ಗುರು ಚರಣ ಕಮಲಗಳ ದೂಳಿನಿಂದ ನನ್ನ ಮನರೂಪೀ ಕನ್ನಡಿಯನ್ನು ಸ್ವಚ್ಛ ಮಾಡಿಕೊಂಡು ಧರ್ಮ, ಅರ್ಥ, ಕಾಮ, ಮೋಕ್ಷ ವೆಂಬ ಚತುರ್ವಿಧ ಪುರುಷಾರ್ಥರೂಪಿ ಫಲಗಳನ್ನು ದಯಪಾಲಿಸುವಂತಹ ರಘುವರನ ನಿರ್ಮಲವಾದ ಯಶಸ್ಸನ್ನು ವರ್ಣಿಸಿ ಹಾಡುತ್ತೇನೆ

ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ |
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕ್ಲೇಷ  ವಿಕಾರ್ll 

ಹೇ ಪವನಕುಮಾರ ನನ್ನ ಪ್ರಾರ್ಥನೆಯನ್ನು ಕೇಳು ಬುದ್ಧಿಹೀನ ನಾದ ನನಗೆ ಒಳ್ಳೆಯ ಬುದ್ಧಿಯನ್ನು ಕರುಣಿಸು ಬಲ, ಬುದ್ಧಿ, ಜ್ಞಾನ ಇತ್ಯಾದಿಗಳನ್ನು ಕೊಟ್ಟು ಅಜ್ಞಾನ,ಕ್ಲೇಶ,ಭ್ರಮೆ, ರಾಗ ದ್ವೇಷಾದಿ ಪಂಚಕ್ಲೇಶಗಳನ್ನು ಮತ್ತು ಜನನ ಮರಣಾದಿ ಆರು ವಿಕಾರಗಳನ್ನು ಹೋಗಲಾಡಿಸು

ಜಯ ಹನುಮಾನ ಙ್ಞಾನ ಗುಣ ಸಾಗರ |
ಜಯ ಕಪೀಶ ತಿಹು ಲೋಕ ಉಜಾಗರ || 1 ||

ಹೇ ಹನುಮಂತ ನೀನು ಜ್ಞಾನ ಹಾಗೂ ಗುಣಗಳ ಸಾಗರ ಎಲೈ ಕಪಿವರ! ನಿನ್ನ ತೇಜಸ್ಸಿನ ಪ್ರಕಾಶದಿಂದ ಮೂರು ಲೋಕಗಳು ಶೋಭಾಯಮಾನವಾಗಿದೆ ನಿನಗೆ ಜಯವಾಗಲಿ

ರಾಮದೂತ ಅತುಲಿತ ಬಲಧಾಮಾ |
ಅಂಜನಿ ಪುತ್ರ ಪವನಸುತ ನಾಮಾ || 2 ||

ಓ ರಾಮದೂತ! ನೀನು ಆತುಲನೀಯ ಪರಾಕ್ರಮದ ನೆಲೆಯಾಗಿರುವೆ. ವಾಯುಪುತ್ರನೆಂಬ ಹೆಸರು ಪಡೆದಿರುವ ಅಂಜನಾದೇವಿಯ ಮಗನಾದ ಆಂಜನೇಯನೇ ನಿನಗೆ ವಂದನೆ

ಮಹಾವೀರ ವಿಕ್ರಮ ಬಜರಂಗೀ |
ಕುಮತಿ ನಿವಾರ ಸುಮತಿ ಕೇ ಸಂಗೀ ||3 ||

 ಓ ಕಪೀಶ್ವರ ನೀನು ಮಹಾನ್ ವೀರ, ಮಹಾ ಪರಾಕ್ರಮಿ, ಮತ್ತು ನಿನ್ನ ಶರೀರ ವಜ್ರದಂತೆ ಬಲಯುತವಾಗಿದೆ ನೀನು ದುರ್ಬುದ್ದಿಯನ್ನು ನಾಶಮಾಡಿ ಸದ್ಬುದ್ಧಿಯುಳ್ಳವರ ಸಂಘವನ್ನು ತೋರಿಸಿಕೊಡುವೆ, ನಿನಗೆ ಸಾಷ್ಟಾಂಗ ವಂದನೆ

ಕಂಚನ ವರಣ ವಿರಾಜ ಸುವೇಶಾ |
ಕಾನನ ಕುಂಡಲ ಕುಂಚಿತ ಕೇಶಾ || 4 ||

ಬಂಗಾರದಂತಹ ಕಾಂತಿಯ ನಿನ್ನಿ ಸುಂದರ ವೇಷವು ಬಹಳ ಶೋಭಾಯಮಾನವಾಗಿದೆ. ಸುಂದರವಾದ ಕರ್ಣಕುಂಡಲಗಳದಲೂ, ಮಿಂಚಿನಂಥ ಕೇಶರಾಶಿ ಗಳಿಂದಲೂ, ಶೋಭಿಸುತ್ತಿರುವ ಹನುಮಂತನೇ ನಿನಗೆ ಅನಂತ ನಮಸ್ಕಾರಗಳು

ಹಾಥವಜ್ರ ಔ ಧ್ವಜಾ ವಿರಾಜೈ |
ಕಾಂಥೇ ಮೂಂಜ ಜನೇವೂ ಸಾಜೈ || 5||

ವಜ್ರದಂತಹ ಗದೆ ಮತ್ತು ಧ್ವಜ ನಿನ್ನ ಕೈಗಳಲ್ಲಿ ವಿಶೇಷ ರೂಪದಿಂದ ಕಾಂತಿಯನ್ನು ಪಡೆಯುತ್ತೇವೆ.ನಿನ್ನ ಹೆಗಲಮೇಲೆ ಪವಿತ್ರವಾದ ಯಜ್ಙೋಪವಿತವು ಅಲಂಕಾರಪ್ರಾಯವಾಗಿದೆ.ಓ ಮಾರುತಾತ್ಮಜ ನಿನಗೆ ಪ್ರಣಾಮಗಳು

ಶಂಕರ ಸುವನ ಕೇಸರೀ ನಂದನ |
ತೇಜ ಪ್ರತಾಪ ಮಹಾಜಗ ವಂದನ || 6 ||

ಎಲೈ ಮಾರುತಿ! ನೀನು ಸಾಕ್ಷಾತ್  ಶಂಕರ. ನೀನೇ ಭಗವಾನ್ ಶ್ರೀ ರಾಮನ ಕೈಂಕರ್ಯ ಮಾಡುವುದಕ್ಕೋಸ್ಕರ ಕೇಸರಿನಂದನನ ರೂಪದಲ್ಲಿ ಅವತರಿಸಿರುವೇ. ನಿನ್ನ ತೇಜಸ್ಸು ಹಾಗೂ ಪ್ರತಾಪ ಮಹತ್ತರವಾದದ್ದು. ಜಗತ್ತೆಲ್ಲಾ ನಿನಗೆ ತಲೆಬಾಗುವುದು


ವಿದ್ಯಾವಾನ ಗುಣೀ ಅತಿ ಚಾತುರ |
ರಾಮ ಕಾಜ ಕರಿವೇ ಕೋ ಆತುರ || 7 ||

ನೀನು ದೊಡ್ಡ ವಿದ್ವಾಂಸ ಅಂತೆಯೇ ಸದ್ಗುಣ ಸಂಪನ್ನ ಹಾಗೂ ಅತ್ಯಂತ ಚತುರ. ಶ್ರೀರಾಮನ ಕಾರ್ಯಗಳನ್ನು ಮಾಡಲು ಸದಾ ಅತ್ಯಂತ ಉತ್ಸುಕರಾಗಿರುವ ರಾಮದೂತನೇ ನಿನಗೆ ಶರಣು

ಪ್ರಭು ಚರಿತ್ರ ಸುನಿವೇ ಕೋ ರಸಿಯಾ |
ರಾಮಲಖನ ಸೀತಾ ಮನ ಬಸಿಯಾ || 8|

ಪ್ರಭು ಶ್ರೀರಾಮಚಂದ್ರನ ದಿವ್ಯ ಚರಿತ್ರೆಯನ್ನು ಕೇಳುತ್ತಾ ಮೈಮರೆಯುವ ರಸಿಕ ನೀನು. ಶ್ರೀರಾಮ, ಸೀತಾ ಮಾತೆ ಮತ್ತು ಲಕ್ಷ್ಮಣರು ನಿನ್ನ ಹೃದಯದಲ್ಲಿ ನೆಲೆಯಾಗಿಸಿಕೊಂಡಿರುವ ಕಪಿವರ್ಯನೇ! ನಿನಗೆ ನನ್ನ ಅಗಣಿತ ವಂದನೆಗಳು

ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ |
ವಿಕಟ ರೂಪಧರಿ ಲಂಕ ಜರಾವಾ || 9 ||

ಲಂಕಾ ನಗರದ ಅಶೋಕವನದಲ್ಲಿದ್ದ ಸೀತೆಮಾತೆಯನ್ನು ಕಾಣಲು ಹೋದಾಗ ಸೂಕ್ಷ್ಮ ರೂಪವನ್ನು ಧರಿಸಿ ಕಾಣಿಸಿಕೊಂಡವನೇ ಮತ್ತು ಲಂಕಾ ಪಟ್ಟಣವನ್ನು ಸುಟ್ಟು ಭಸ್ಮ ಮಾಡುವಾಗ ಭಯಂಕರ ರೂಪವನ್ನು ತಳೆದವನೇ,ಓ ಲೀಲಾಮಯ ಹನುಮನೇ! ನಿನಗೆ ವಂದನೆಗಳು

ಭೀಮ ರೂಪಧರಿ ಅಸುರ ಸಂಹಾರೇ |
ರಾಮಚಂದ್ರ ಕೇ ಕಾಜ ಸಂವಾರೇ || 10 ||

ಭಯಂಕರ ರೂಪವನ್ನು ತಾಳಿ ಅಸುರನನ್ನು ಸಂಹಾರ ಮಾಡಿ ಶ್ರೀರಾಮನ ಕೈಂಕರ್ಯವನ್ನು ಸಾಧಿಸಿದ ಧಿರನೇ  ನಿನಗೆ ವಂದನೆ

ಲಾಯ ಸಂಜೀವನ ಲಖನ್  ಜಿಯಾಯೇ |
ಶ್ರೀ ರಘುವೀರ ಹರಷಿ ಉರಲಾಯೇ || 11 ||

ಸಂಜೀವಿನಿ ಎಂಬ ದಿವ್ಯ ಔಷಧಿಯನ್ನು ತಂದು ಮೂರ್ಚಿತ ನಾಗಿದ್ದ ಲಕ್ಷ್ಮಣನನ್ನು ಬದುಕಿಸಿದ ನಿನ್ನನ್ನು ಶ್ರೀರಘುವೀರನು ಸಂತಸದಿಂದ ಎದೆಗೆ ಬಿಗಿದಪ್ಪಿಕೊಂಡನು

ರಘುಪತಿ ಕೀನ್ಹೀ ಬಹುತ ಬಡಾಯೀ |
ತುಮ ಮಮ ಪ್ರಿಯ ಭರತಹಿ ಸಮ ಭಾಯೀ || 12 ||

ಹಾಗೂ ಸಂತುಷ್ಟನಾದ ಶ್ರೀರಾಮನು ನಿನ್ನನ್ನು ಬಹಳವಾಗಿ ಪ್ರಶಂಸಿಸಿ 'ನೀನು ನನ್ನ ಪ್ರಿಯ ಸಹೋದರ ಭರತನಿಗೆ ಸಮನಾಗಿ ಪ್ರಿಯವಾಗಿರುವೆ' ಎಂದು ಹೇಳಿದನು

ಸಹಸ ವದನ ತುಮ್ಹರೋ ಯಶಗಾವೈ |
ಅಸ ಕಹಿ ಶ್ರೀಪತಿ ಕಂಠ ಲಗಾವೈ || 13 ||

ಸಹಸ್ರ ಮುಖಗಳು ನಿನ್ನ ಕೀರ್ತಿಯನ್ನು ಹಾಡಿ ಹೊಗಳುತ್ತಿವೆ ಎಂದು ಹೇಳುತ್ತಾ ಹರ್ಷ ಪೂರಿತ ನಾದ ಸೀತಾಪತಿ ರಾಮಚಂದ್ರನು ನಿನ್ನನ್ನು ಗಾಢವಾಗಿ ಆಲಂಗಿಸಿದನು.ಹೇ ಭಕ್ತವರ ಹನುಮಾನ್ ! ನಿನಗೆ ಪುನಃ ಪುನಃ ವಂದನೆಗಳು

ಸನಕಾದಿಕ ಬ್ರಹ್ಮಾದಿ ಮುನೀಸಾ |
ನಾರದ ಶಾರದ ಸಹಿತ ಅಹೀಸಾ || 14 ||

ನಾರದ ಮಹರ್ಷಿಗಳು ಸನಕಾದಿ ಮುನಿಗಳು, ಆದಿಶೇಷ, ಬ್ರಹ್ಮ ಮತ್ತು ಶಾರದಾದೇವಿ ಸಹಿತ ನಿನ್ನ ಗುಣಗಳನ್ನು ಹಾಡಿ ಹೊಗಳುವರು.ಎಲೈ ಆಂಜನೇಯನೇ ! ನಿನಗೆ ನಮಸ್ಕಾರಗಳು

ಯಮ ಕುಬೇರ ದಿಗಪಾಲ ಜಹಾಂ ತೇ |
ಕವಿ ಕೋವಿದ ಕಹಿ ಸಕೇ ಕಹಾಂ ತೇ || 15 ||

ಯಮ ಕುಬೇರ ಮೊದಲಾದ ಎಲ್ಲಾ ದಿಕ್ಪಾಲಕರೂ, ದೇವತೆಗಳೂ, ಘನ ವಿದ್ವಾಂಸರೂ ಹಾಗೂ ಮಹಾನ್ ಕವಿಗಳು ಸಹ ನಿನ್ನ ಗುಣಗಳನ್ನು ಮೆಚ್ಚಿ ವರ್ಣಿಸುವರು.ಹೇ,ಹನುಮಂತನೇ ! ನಿನಗೆ ಸಾಷ್ಟಾಂಗ ನಮಸ್ಕಾರಗಳು

ತುಮ ಉಪಕಾರ ಸುಗ್ರೀವಹಿ ಕೀನ್ಹಾ |
ರಾಮ ಮಿಲಾಯ ರಾಜಪದ ದೀನ್ಹಾ || 16 ||

ರಾಜ್ಯವನ್ನು ಕಳೆದುಕೊಂಡು ಗಿರಿಶಿಖರಗಳಲ್ಲಿ ವಾಸಿಸುತ್ತಿದ್ದ ಸುಗ್ರೀವನಿಗೆ ಶ್ರೀರಾಮನೊಡನೆ ಮಧುರ ಮಿಲನ ಮಾಡಿಸಿ, ಅವನಿಗೆ ಪುನಃ ರಾಜ್ಯವನ್ನು ಕೊಡಿಸಿ ಮಹದುಪಕಾರ ಮಾಡಿದ ಪವನಕುಮಾರನೇ ನಿನಗೆ ನಮ್ಮ ನಮನಗಳು

ತುಮ್ಹರೋ ಮಂತ್ರ ವಿಭೀಷಣ ಮಾನಾ |
ಲಂಕೇಶ್ವರ ಭಯೇ ಸಬ ಜಗ ಜಾನಾ || 17 ||

ನಿನ್ನ ಹಿತೋಪದೇಶಗಳನ್ನು ಮೆಚ್ಚಿ ವಿಭೀಷಣನು ಅದರಂತೆ ನಡೆದುಕೊಂಡು ಶ್ರೀರಾಮನಲ್ಲಿ ಶರಣಾದನು. ತತ್ಪರಿಣಾಮವಾಗಿ ಬಳಿಕ ವಿಭೀಷಣನು ಲಂಕಾಧಿಪತಿಯಾದುದನ್ನು ಜಗತ್ತೆಲ್ಲಾ ಬಲ್ಲದು

ಯುಗ ಸಹಸ್ರ ಯೋಜನ ಪರ ಭಾನೂ |
ಲೀಲ್ಯೋ ತಾಹಿ ಮಧುರ ಫಲ ಜಾನೂ || 18 ||

ಆಕಾಶದಲ್ಲಿ ಕಂಡ ಹೊಂಬಣ್ಣದ ರವಿಯನ್ನು ಮಧುರವಾದ ಹಣ್ಣೆಂದು ತಿಳಿದು ಸಾವಿರಾರು ಯೋಜನ ದೂರ ಅಂತರಿಕ್ಷಕ್ಕೆ ಲೀಲಾಜಾಲವಾಗಿ ಹಾರಿದ ಮಹಾಧೀರ ಹನುಮಾನ್ ನಿನಗೆ ಶರಣು

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ |
ಜಲಧಿ ಲಾಂಘಿ ಗಯೇ ಅಚರಜ ನಾಹೀ || 19 ||

ಪ್ರಭು ಶ್ರೀರಾಮನಿತ್ತ ಪವಿತ್ರವಾದ ಮುದ್ರಿಕೆಯನ್ನು ಬಾಯಲ್ಲಿಟ್ಟುಕೊಂಡು ಸಮುದ್ರವನ್ನು ಅನಾಯಸವಾಗಿ ಹಾರಿ ದಾಡಿದಂತಹ ಮಹಾವೀರನಾದ ನಿನಗೆ ಅದು ಆಶ್ಚರ್ಯವೇನಲ್ಲ

ದುರ್ಗಮ ಕಾಜ ಜಗತ ಕೇ ಜೇತೇ |
ಸುಗಮ ಅನುಗ್ರಹ ತುಮ್ಹರೇ ತೇತೇ || 20 ||

ಜಗತ್ತಿನಲ್ಲಿ ಎಷ್ಟೋ ಕಠಿಣ ಕಾರ್ಯಗಳಿದ್ದರೂ ಅವು ನಿನ್ನ ಅನುಗ್ರಹದಿಂದ ನಿನ್ನ ಭಕ್ತರಿಗೆ ಅಷ್ಟೇ ಸುಲಭ ಸಾಧ್ಯವಾಗುತ್ತದೆ.ಓ ಮರುತಾತ್ಮಜನೇ ! ನಿನಗೆ ಅನಂತ ವಂದನೆಗಳು

ರಾಮ ದುಆರೇ ತುಮ ರಖವಾರೇ |
ಹೋತ ನ ಆಙ್ಞಾ ಬಿನು ಪೈಸಾರೇ || 21 ||

ಹೇ ರಾಮದೂತ ! ನಿನ್ನ ಅನುಗ್ರಹವಿಲ್ಲದೆ ಯಾರಿಗೂ ಪ್ರಭು ರಾಮಚಂದ್ರನ ದರ್ಶನ ಭಾಗ್ಯ ಲಭಿಸದು. ಏಕೆಂದರೆ ನೀನು ರಾಮಚಂದ್ರಮೂರ್ತಿಗೆ ಅತ್ಯಂತ ಪ್ರೀತಿಪಾತ್ರನಾಗಿರುವೆ

ಸಬ ಸುಖ ಲಹೈ ತುಮ್ಹಾರೀ ಶರಣಾ |
ತುಮ ರಕ್ಷಕ ಕಾಹೂ ಕೋ ಡರ ನಾ || 22 ||

ನಿನ್ನಲ್ಲಿ ಶರಣಾಗತರಾದ ಭಕ್ತರಿಗೆ ಎಲ್ಲಾ ದಿವ್ಯ ಸುಖ-ಸಂಪತ್ತುಗಳೂ ಪ್ರಾಪ್ತಿಯಾಗುತ್ತದೆ. ನೀನು ರಕ್ಷಕನಾಗಿರುವಾಗ  ನಮಗೇಕೆ ಜನನ-ಮರಣ ರೂಪೀ ಭವರೋಗದ ಭಯ ?ಓ ಶರಣಾಗತ ರಕ್ಷಕ ಹನುಮಾ ! ನಿನಗೆ ವಂದನೆಗಳು

ಆಪನ ತೇಜ ಸಮ್ಹಾರೋ ಆಪೈ |
ತೀನೋಂ ಲೋಕ ಹಾಂಕ ತೇ ಕಾಂಪೈ || 23 ||

ನಿನ್ನ ಈ ಪರಮ ತೇಜಸ್ಸಿಗೆ ನೀನೇ ಸಾಟಿಯಲ್ಲದೆ ಬೇರೆ ಯಾರು ಇಲ್ಲ. ನೀನು ಹೂಂಕರಿಸಿದರೆ ಮೂರು ಲೋಕಗಳೂ ನಡುಗಿ ತತ್ತರಿಸಿ ಹೋಗುವುವು

ಭೂತ ಪಿಶಾಚ ನಿಕಟ ನಹಿ ಆವೈ |
ಮಹವೀರ ಜಬ ನಾಮ ಸುನಾವೈ || 24 ||

ಎಲೈ ಮಹಾವೀರ ! ನಿನ್ನ ನಾಮಸ್ಮರಣೆಯಿಂದ ಭೂತ-ಪಿಶಾಚಾದಿ ದುಷ್ಟರು ಹತ್ತಿರ ಸುಳಿಯಲಾರವು.ಎಲೈ  ಪ್ರತಾಪಶಾಲಿಯೇ ! ನಿನಗೆ ವಂದನೆಗಳು

ನಾಸೈ ರೋಗ ಹರೈ ಸಬ ಪೀರಾ |
ಜಪತ ನಿರಂತರ ಹನುಮತ ವೀರಾ || 25 ||

ವೀರ ಹನುಮಂತ ! ನಿರಂತರ ನಿನ್ನ ನಾಮವನ್ನು ಜಪಿಸುವುದರ ರಿಂದ ಜನನ-ಮರಣಾದಿ ಭವ ರೋಗಗಳೆಲ್ಲ ನಾಶವಾಗಿ ಹೋಗುತ್ತದೆ. ಮತ್ತು ಕಷ್ಟಕಾರ್ಪಣ್ಯಗಳೆಲ್ಲವೂ ತೊಲಗಿ ಹೋಗುತ್ತದೆ. ನಿನಗೆ ಸಾಷ್ಟಾಂಗ ನಮಸ್ಕಾರಗಳು

ಸಂಕಟ ಸೇಂ ಹನುಮಾನ ಛುಡಾವೈ |
ಮನ ಕ್ರಮ ವಚನ ಧ್ಯಾನ ಜೋ ಲಾವೈ || 26 ||

ಕಾಯಾ-ವಾಚಾ-ಮನಸಾ ನಿರ್ಮಲನಾಗಿ ಧೃಡ ಸಂಕಲ್ಪದಿಂದ ಧ್ಯಾನಿಸುವ ಭಕ್ತರನ್ನು ಸಂಕಟದಿಂದ ಪಾರು ಮಾಡುವ ಹೇ ಹನುಮಂತಾ ! ನಿನಗೆ ಶಿರಬಾಗಿ ನಮಿಸುವೆನು

ಸಬ ಪರ ರಾಮ ತಪಸ್ವೀ ರಾಜಾ |
ತಿನಕೇ ಕಾಜ ಸಕಲ ತುಮ ಸಾಜಾ || 27 ||

ಸಾರ್ವಭೌಮನಾದ ಶ್ರೀರಾಮಚಂದ್ರ ತಪೋಧನನು ರಾಜರಾಜೇಶ್ವರನಾದ ಆತನ ಸಕಲ ಕಾರ್ಯಗಳಲ್ಲಿ ಭಾಗಿಯಾಗಿ ಅವುಗಳನ್ನು ಸಫಲಗೊಳಿಸಿದ ಶ್ರೀ ರಾಮನ ಬಂಟ ಹನುಮಂತನೇ ನಿನಗೆ ಶರಣು

ಔರ ಮನೋರಥ ಜೋ ಕೋಯಿ ಲಾವೈ |
ಸೋಹಿ ಅಮಿತ ಜೀವನ ಫಲ ಪಾವೈ || 28 ||

ಭಕ್ತರ ಮನೋರಥವನ್ನು ಈಡೇರಿಸುತ್ತಾ ಅವರಿಗೆ ಪರಮಾತ್ಮನ ಪ್ರಾಪ್ತಿರೂಪೀ ಫಲವನ್ನು ದಯಪಾಲಿಸುವ ದಯಾಳುವೇ ನಿನಗೆ ವಂದನೆಗಳು

ಚಾರೋ ಯುಗ ಪರಿತಾಪ ತುಮ್ಹಾರಾ |
ಹೈ ಪರಸಿದ್ಧ ಜಗತ ಉಜಿಯಾರಾ || 29 ||

ನಾಲ್ಕು ಯುಗಗಳಲ್ಲಿಯೂ ನಿನ್ನ ಪ್ರತಾಪವೇ ಜನಜನಿತವಾಗಿದೆ. ನಿನ್ನ ಭಕ್ತಿರೂಪೀ ತೇಜಸ್ಸು  ಜಗತ್ತಿನಲ್ಲಿ ಎಲ್ಲೆಲ್ಲಿಯೂ ಪ್ರಕಾಶಿಸುತ್ತಾ ಪ್ರಸಿದ್ಧಿ ಪಡೆದಿದೆ

ಸಾಧು ಸಂತ ಕೇ ತುಮ ರಖವಾರೇ |
ಅಸುರ ನಿಕಂದನ ರಾಮ ದುಲಾರೇ || 30 ||

ನೀನು ಸಾಧು-ಸಂತರಾದಿ ಸತ್ಪುರುಷರನ್ನು ರಕ್ಷಿಸುವವನು. ಅಸುರರಾದಿ ದುಷ್ಟರನ್ನು ಸಂಹಾರ ಮಾಡುವವನು.ಈ ನಿನ್ನ ಶಿಷ್ಟರಕ್ಷಕ ಮತ್ತು ದುಷ್ಟ ಶಿಕ್ಷಕ ಕಾರ್ಯಗಳಿಂದ ಶ್ರೀರಾಮಚಂದ್ರನು ನಿನ್ನನ್ನು ಬಹಳ ಮೆಚ್ಚಿಕೊಂಡು ಪ್ರೀತಿಸುತ್ತಾನೆ

ಅಷ್ಠಸಿದ್ಧಿ ನವ ನಿಧಿ ಕೇ ದಾತಾ |
ಅಸ ವರ ದೀನ್ಹ ಜಾನಕೀ ಮಾತಾ || 31 ||

ಜಾನಕಿ ಮಾತೆಯ ಹರಕೆಯಿಂದ ನೀನು ನಿನ್ನ ಭಕ್ತರಿಗೆ ಅಣಿಮಾದಿ ಅಷ್ಟ ಸಿದ್ಧಿಗಳನ್ನೂ ಮತ್ತು ನವನಿಧಿಗಳನ್ನು ಕೊಡಬಲ್ಲವನಾಗಿರುವೆ, ಹಾಗೆ ವರಪ್ರಸಾದ ನೀಡುತ್ತಿರುವೆ

ರಾಮ ರಸಾಯನ ತುಮ್ಹಾರೇ ಪಾಸಾ |
ಸದಾ ರಹೋ ರಘುಪತಿ ಕೇ ದಾಸಾ || 32 ||

ನೀನು ರಾಮನಾಮ ರೂಪಿ ರಸಾಮೃತವನ್ನು ಪಾನ ಮಾಡುತ್ತಿರುವೆ. ಎಂದೆಂದು ರಘುಪತಿಯ ಸನ್ನಿಧಿಯಲ್ಲಿರುವೆ. ಆಂಜನೇಯನೆ !  ನಿನಗೆ ದಂಡವತ್ ಪ್ರಣಾಮಗಳು

ತುಮ್ಹರೇ ಭಜನ ರಾಮಕೋ ಪಾವೈ |
ಜನ್ಮ ಜನ್ಮ ಕೇ ದುಖ ಬಿಸರಾವೈ || 33 ||

ನಿನ್ನ ಪಾವನ ನಾಮವನ್ನು ಭಜಿಸುವವರಿಗೆ ಪ್ರಭು ಶ್ರೀರಾಮಚಂದ್ರನ ದರ್ಶನಲಾಭ ಉಂಟಾಗುವುದು. ಜನ್ಮ ಜನ್ಮಾಂತರಗಳ ಪಾಪ ನಾಶವಾಗುವುದಲ್ಲದೆ ಪುನರ್ಜನ್ಮ ಕೂಡಾ ಇಲ್ಲದಂತಾಗುವುದು. ನಿನಗೆ ವಂದನೇ

ಅಂತ ಕಾಲ ರಘುವರ ಪುರಜಾಯೀ |
ಜಹಾಂ ಜನ್ಮ ಹರಿಭಕ್ತ ಕಹಾಯೀ || 34 ||

ಗಾಢವಾದ ಭಕ್ತಿಯುಳ್ಳ ನಿನ್ನ ಭಕ್ತರು ಮರಣಾನಂತರ ಭಗವಾನ್ ಶ್ರೀರಾಮನ ಪರಮಪದವನ್ನು ಪಡೆಯುತ್ತಾರೆ. ಇಲ್ಲಿ ಬದುಕಿರುವವರೆಗೂ ಅವನು ಭಗವಂತನ ಭಕ್ತನೆಂದು ಜನ ಆತನಿಂದ ಪ್ರಭಾವಿತರಾದವರು.ಓ ರಾಮಸೇವಕನೇ ! ನಿನಗೆ ವಂದನೆ

ಔರ ದೇವತಾ ಚಿತ್ತ ನ ಧರಯೀ |
ಹನುಮತ ಸೇಯಿ ಸರ್ವ ಸುಖ ಕರಯೀ || 35 ||

ಇತರ ದೇವತೆಗಳನ್ನು ಬಿಟ್ಟು ಅನನ್ಯ ಭಾವದಿಂದ ನಿನ್ನನ್ನು ಭಜಿಸುವವರು ಸರ್ವವಿಧದ ಸುಖಗಳನ್ನು ಪಡೆಯುತ್ತಾರೆ

ಸಂಕಟ ಕಟೈ ಮಿಟೈ ಸಬ ಪೀರಾ |
ಜೋ ಸುಮಿರೈ ಹನುಮತ ಬಲ ವೀರಾ || 36 ||

ಮಹಾಬಲ ಬಲಶಾಲಿಯಾದ ಹನುಮಂತನೆ ! ನಿನ್ನನ್ನು ಭಜಿಸುವ ಭಕ್ತರ ಎಲ್ಲಾ ಸಂಕಟ ಮತ್ತು ಪೀಡನೆ ಗಳಿಂದಲೂ ಪಾರಾಗುವರು.ಎಲೈ  ಸಂಕಟಹರಣೇ !  ನಿನಗೆ ಪ್ರಣಾಮಗಳು

ಜೈ ಜೈ ಜೈ ಹನುಮಾನ ಗೋಸಾಯೀ |
ಕೃಪಾ ಕರೋ ಗುರುದೇವ ಕೀ ನಾಯೀ || 37 || 

ಜಿತೇಂದ್ರಿಯನಾದ ವೀರ ಹನುಮಂತಾ ! ನಿನಗೆ ನಿನ್ನ ಸ್ವಾಮಿಯ ಸೇವಾಕಾರ್ಯಗಳಲ್ಲಿ ಜಯ ನಿಶ್ಚಿತ. ಗುರುದೇವನ ರೀತಿಯಲ್ಲಿ ನನ್ನ ಮೇಲೆ ಕೃಪೆ ತೋರಿಸು. ನಿನಗೆ ಸಾವಿರಾರು ಬಾರಿ ಜಯ ಜಯ ಕಾರವು

ಜೋ ಶತ ವಾರ ಪಾಠ ಕರ ಕೋಯೀ |
ಛೂಟಹಿ ಬಂದಿ ಮಹಾ ಸುಖ ಹೋಯೀ || 38 ||

ಯಾರು ಈ ಹನುಮಾನ್ ಚಾಲೀಸವನ್ನು ನೂರು ಬಾರಿ ಪಠಿಸುವವರೋ ಅವರು ಸರ್ವವಿಧ ಬಂಧನಗಳಿಂದ ಬಿಡುಗಡೆಹೊಂದಿ, ಪರಮಾತ್ಮನ ಸಾನ್ನಿಧ್ಯದ ದಿವ್ಯವಾದ ಮಹಾಸುಖವನ್ನು ಅನುಭವಿಸುವರು

ಜೋ ಯಹ ಪಡೈ ಹನುಮಾನ ಚಾಲೀಸಾ |
ಹೋಯ ಸಿದ್ಧಿ ಸಾಖೀ ಗೌರೀಶಾ || 39 ||

ಈ ಹನುಮಾನ್ ಚಾಲೀಸಾ ಎಂಬ ಹನುಮಂತನ ಸ್ತೋತ್ರವನ್ನು ಪಠಣ ಮಾಡುವವರಿಗೆ ಪರಮಾತ್ಮನ ಸಾಕ್ಷಾತ್ಕಾರ ರೂಪೀ ಚಿರಸಿದ್ದಿಯುಂಟಾಗುವುದು.ಇದಕ್ಕೆ ಗೌರಿಪತಿ ಶಂಕರನೇ ಸಾಕ್ಷಿ. ಎಲೈ ವಾಯುನಂದನ ! ನಿನಗೆ ಪದೇಪದೇ ನಮಸ್ಕಾರಗಳು

ತುಲಸೀದಾಸ ಸದಾ ಹರಿ ಚೇರಾ |
ಕೀಜೈ ನಾಥ ಹೃದಯ ಮಹ ಡೇರಾ || 40 ||

ತುಲಸೀದಾಸರು ಹೇಳುತ್ತಾನೆ ನಾನು ಎಂದೆಂದೂ ಶ್ರೀಹರಿಯ ದಾಸನು.ಹೇ ನಾಥ !  ಪವನಪುತ್ರ !  ನೀನು ನನ್ನ ಹೃದಯದಲ್ಲಿ ವಾಸಿಸು. ಆಗ ನನ್ನ ಹೃದಯ ದೇಗುಲದಲ್ಲಿ ಶ್ರೀರಾಮ, ಸೀತಾಮಾತೆ ಹಾಗೂ ಲಕ್ಷ್ಮಣ ಇವರೆಲ್ಲರೂ ಸಹ ವಾಸಮಾಡುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.ಹೇ ರಾಮದಾಸ !  ನಿನಗೆ ಅನಂತಕೋಟಿ ಸಾಷ್ಟಾಂಗ ವಂದನೆಗಳು

ಪವನ ತನಯ ಸಂಕಟ ಹರಣ ಮಂಗಳ ಮೂರುತಿ ರೂಪ|
 ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ||

ಹೇ  ಪವನ ಪುತ್ರ ಹನುಮಾನ್ ! ನೀನು ಜನನ-ಮರಣ ರೂಪೀ ಭವರೋಗದ ಸಂಕಟದಿಂದ ಪಾರು ಮಾಡುವವನು. ಮಂಗಳಮೂರ್ತಿ ಸ್ವರೂಪಿಯೇ ,ದೇವ-ದೇವತೆಗಳೊಡೆಯ ಶ್ರೀ ರಾಮ, ಲಕ್ಷ್ಮಣ ಮತ್ತು ಸೀತಾ ಮಾತೆ ಇವರೆಲ್ಲಾ ನಿನ್ನ ಹೃದಯದಲ್ಲಿ ನೆಲಸಿದ್ದಾರೆ. ನಿನಗೆ ಶರಣು !  ಹನುಮಂತನ ಸಹಿತವಾಗಿ ಇವರೆಲ್ಲಾ ನನ್ನ ಹೃದಯದಲ್ಲಿ ನೆಲಸಿ ನನ್ನನ್ನು ಅನುಗ್ರಹಿಸಲಿ.
****


ದೋಹಾ
ಶ್ರೀ ಗುರು ಚರನ ಸರೋಜ ರಜ, ನಿಜ ಮನ ಮುಕುರ ಸುಧಾರಿ ।
ಬರನಊ ರಘುಬರ ಬಿಮಲ ಜಸು, ಜೋ ದಾಯಕು ಫಲ ಚಾರಿ ॥
ಬುದ್ಧಿಹೀನ ತನು ಜಾನಿ ಕೇ, ಸುಮಿರೌ ಪವನ ಕುಮಾರ ।
ಬಲ ಬುದ್ಧಿ ವಿದ್ಯಾ ದೇಹು ಮೋಹಿ, ಹರಹು ಕಲ್ರೇಶ ವಿಕಾರ ॥

ಜಯ ಹನುಮಾನ ಜ್ಞಾನ ಗುಣ ಸಾಗರ । ಜಯ ಕಪೀಶ ತಿಹು ಲೋಕ ಉಜಾಗರ ॥
ರಾಮ ದೂತ ಅತೋಲಿತ ಬಲ ಧಾಮಾ । ಅಂಜನೀ ಪುತ್ರ ಪವನ ಸುತ ನಾಮಾ ॥
ಮಹಾವೀರ ವಿಕ್ರಮ ಬಜರಂಗೀ । ಕುಮತಿ ನಿವಾರ ಸುಮತಿ ಕೇ ಸಂಗೀ ॥
ಕಂಚನ ಬರನ ಬಿರಾಜ ಸುಬೇಸಾ । ಕಾನನ ಕುಂಡಲ ಕುಂಚಿತ ಕೇಸಾ ॥
ಹಾಥ ಬಜ್ರ ಔ ಗದಾ ಬಿರಾಜೇ । ಕಾಂಧೇ ಮೂಂಜ ಜನೇಊ ಸಾಜೇ ॥
ಸಂಕರ ಸುವನ ಕೇಸರೀ ನಂದನ । ತೇಜ ಪ್ರತಾಪ ಮಹಾ ಜಗ ಬಂದನ ॥
ವಿದ್ಯಾವಾನ ಗುಣೀ ಅತಿ ಚಾತುರ । ರಾಮ ಕಾಜ ಕರಿಬೇ ಕೋ ಆತುರ ॥
ಪ್ರಭು ಚರಿತ್ರ ಸುನಿಬೇ ಕೋ ರಸಿಯಾ । ರಾಮ ಲಖಣ ಸೀತಾ ಮನ ಬಸಿಯಾ ॥
ಸೂಕ್ಷ್ರೂಪ ಧರಿ ಸಿಯಹಿ ದಿಖಾವಾ । ಬಿಕಟ ರೂಪ ಧರಿ ಲಂಕ ಜರಾವಾ ॥
ಭೀಮ ರೂಪ ಧರಿ ಅಸುರ ಸಂಹಾರೇ । ರಾಮಚಂದ್ರ ಕೇ ಕಾಜ ಸಂವಾರೇ ॥
ಲಾಯ ಸಜಿವನ ಲಖಣ ಜಿಯಾಯೇ । ಶ್ರೀ ರಘುಬೀರ ಹರಸಿ ಉರ ಲಾಯೇ ॥
ರಘುಪತಿ ಕೀಂಹೀ ಬಹುತ ಬಡಾಈ । ತುಮ ಮಮ ಪ್ರಿಯ ಭರತಹಿ ಸಮ ಭಾಈ ॥
ಸಹಸ ಬದನ ತುಮ್ಹರೋ ಜಸ ಗಾವೈ । ಅಸ ಕಹಿ ಶ್ರೀಪತಿ ಕಂಠ ಲಗಾವೈ ॥
ಸಹಸಾದಿಕ ಬ್ರಹ್ಮಾದಿ ಮುನಿಸಾ । ನಾರದ ಸಾರದ ಸಹಿತ ಅಹೀಸಾ ॥
ಜಮ ಕುಬೇರ ದಿಗಪಾಲ ಜಹಾ ತೇ । ಕಬಿ ಕೋಬಿದ ಕಹಿ ಸಕೇ ಕಹಾ ತೇ ॥
ತುಮ ಉಪಕಾರ ಸುಗ್ರೀವಹಿ ಕೀಂಹಾ । ರಾಮ ಮಿಲಾಯ ರಾಜ ಪದ ದೀಂಹಾ ॥
ತುಮ್ಹರೇ ಮಂತ್ರ ಬಿಭೀಷಣ ಮಾನಾ । ಲಂಕೇಶ್ವರ ಭಯೇ ಸಬ ಜಗ ಜಾನಾ ॥
ಜುಗ ಸಹಸ್ತ್ರ ಯೋಜನ ಪರ ಭಾನು । ಲೀಲ್ಯೋ ತಹಿ ಮಧುರ ಫಲ ಜಾನು ॥
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀಂ । ಜಲಧಿಲಾಂಘಿ ಗಯೇ ಅಚರಜ ನಾಹೀಂ ॥
ದುರ್ಗಮ ಕಾಜ ಜಗತ ಕೇ ಜೇತೇ । ಸುಗಮ ಅನುಗ್ರಹ ತುಮ್ಹರೇ ತೇತೇ ॥
ರಾಮ ದುವಾರೇ ತುಮ ರಖವಾರೇ । ಹೋತ ನ ಆಜ್ಞಾ ಬಿನು ಪೈಸಾರೇ ॥
ಸಬ ಸುಖ ಲಹೈ ತುಮ್ಹಾರೀ ಸರನಾ । ತುಮ ರಕ್ಷಕ ಕಾಹೂ ಕೋ ಡರನಾ ॥
ಆಪನ ತೇಜ ಸಮ್ಹಾರೌ ಆಪೈ । ತೀನೋ ಲೋಕ ಹಾಂಕ ತೇ ಕಾಂಪೈ ॥
ಭೂತ ಪಿಸಾಚ ನಿಕಟ ನಹಿ ಆವೈ । ಮಹಾವೀರ ಜಬ ನಾಮ ಸುನಾವೈ ॥
ನಾಸೈ ರೋಗ ಹರೈ ಸಬ ಪೀರಾ । ಜಪತ ನಿರಂತರ ಹನುಮತ ಬೀರಾ ॥
ಸಂಕಟ ತೇ ಹನುಮಾನ ಛುಡಾವೈ । ಮನ ಕ್ರಮ ಬಚನ ಧ್ಯಾನ ಜೋ ಲಾವೈ ॥
ಸಬ ಪರ ರಾಮ ತಪಶ್ವೀ ರಾಜಾ । ತಿನಕೇ ಕಾಜ ಸಕಲ ತುಮ ಸಾಜಾ ॥
ಔರ ಮನೋರಥ ಜೋ ಕೋಈ ಲಾವೈ । ಸೋಈ ಅಮಿತ ಜೀವನ ಫಲ ಪಾವೈ ॥
ಚಾರೋ ಜುಗ ಪರತಾಪ ತುಮ್ಹಾರಾ । ಹೈ ಪರಸಿದ್ಧ ಜಗತ ಉಜಿಯಾರಾ ॥
ಸಾಧು ಸಂತ ಕೇ ತುಮ ರಖವಾರೇ । ಅಸುರ ನಿಕಂದನ ರಾಮ ದುಲಾರೇ ॥
ಅಷ್ಟ ಸಿದ್ಧಿ ನೌ ನಿಧಿ ಕೇ ದಾತಾ । ಅಸ ಬರ ದೀಂಹ ಜಾನಕೀ ಮಾತಾ ॥
ರಾಮ ರಸಾಯಣ ತುಮ್ಹರೇ ಪಾಸಾ । ಸದಾ ರಹೋ ರಘುಪತಿ ಕೇ ಪಾಸಾ ॥
ತುಮ್ಹರೇ ಭಜನ ರಾಮ ಕೋ ಪಾವೈ । ಜನಮ ಜನಮ ಕೇ ದುಖ ಬಿಸರಾವೈ ॥
ಅಂತ ಕಾಲ ರಘುಬರ ಪುರ ಜಾಈ । ಜಹಾ ಜನಮ ಹರಿ ಭಕ್ತ ಕಹಾಈ ॥
ಔರ ದೇವತಾ ಚಿತ್ತ ನ ಧರಈ । ಹನುಮತ ಸೇಈ ಸರ್ಬ ಸುಖ ಕರಈ ॥
ಸಂಕಟ ಕಟೈ ಮಿಟೈ ಸಬ ಪೀರಾ । ಜೋ ಸುಮಿರೈ ಹನುಮ್ತ ಬಲಬೀರಾ ॥
ಜೈ ಜೈ ಜೈ ಹನುಮಾನ ಗೋಸಾಈ । ಕೃಪಾ ಕರೌ ಗುರೂದೇವ ಕೀ ನಾಈ ॥
ಜೋ ಸತ ಬಾರ ಪಾಠ ಕರ ಕೋಈ । ಛೂಟಹಿ ಬಂದಿ ಮಹಾ ಸುಖ ಹೋಈ ॥
ಜೋ ಯಹ ಪಢೈ ಹನುಮಾನ ಚಲೀಸಾ । ಹೋಯ ಸಿದ್ಧ ಸಾಖೀ ಗೌರೀಸಾ ॥
ತುಲಸೀದಾಸ ಸದಾ ಹರಿ ಚೇರಾ । ಕೀಜೈ ನಾಥ ಹೃದಯ ಮಂಹ ಡೇರಾ ॥

॥ ದೋಹಾ ॥
ಪವನ ತನಯ ಸಂಕಟ ಹರನ, ಮಂಗಲ ಮೂರತ ರೂಪ ।

ರಾಮ ಲಖನ ಸೀತಾ ಸಹಿತ, ಹೃದಯ ಬಸಹು ಸುರ ಭೂಪ ॥
**********



ಸರ್ವವಿಘ್ನಗಳಿಂದ ಕಾಪಾಡುವ 'ಹನುಮಾನ್ ಚಾಲೀಸಾದ' ಮಹಿಮೆ ಏನು?

ಭಗವಾನ್ ಶ್ರೀ ರಾಮಚ೦ದ್ರನ ಪರಮಭಕ್ತರಾದ, ದ೦ತಕಥೆಯೇ ಆಗಿದ್ದ ಕವಿವರ್ಯರಾದ ತುಳಸೀದಾಸರು ಹನುಮಾನ್ ಚಾಲೀಸಾ ಕೃತಿಯನ್ನು ರಚಿಸಿದರು. ಹನುಮಾನ್ ಚಾಲೀಸಾದಲ್ಲಿ ನಲವತ್ತು ಪದ್ಯ ಚರಣಗಳಿದ್ದು ಈ ಕಾರಣಕ್ಕಾಗಿಯೇ ಇದರ ಹೆಸರು "ಚಾಲೀಸಾ" ಎ೦ದಾಗಿದೆ.

ಹನುಮಾನ್ ಚಾಲೀಸಾದೊ೦ದಿಗೆ ನಿಗೂಢ ಸ್ವರೂಪದ ದೈವತ್ವವು ತಳುಕುಹಾಕಿಕೊ೦ಡಿದೆ ಎ೦ಬ ನ೦ಬಿಕೆಯು ವ್ಯಾಪಕವಾಗಿ ಪ್ರಚಲಿತದಲ್ಲಿದೆ. ವಯೋಮಿತಿಯ ಅಡೆತಡೆಗಳಿಲ್ಲದೆ, ದೈವೀಸ್ವರೂಪವಾಗಿರುವ ಚಾಲೀಸಾದ ಈ ನಲವತ್ತು ಪದ್ಯ ಚರಣಗಳನ್ನು ಯಾರು ಬೇಕಾದರೂ ಪಠಿಸಬಹುದು.ಹನುಮಾನ್ ಚಾಲೀಸಾ ಮಂತ್ರದ ಮಹತ್ವ ತಿಳಿದಿದೆಯೇ?

ಕೆಲವು ಪಠಣಗಳ ಬಳಿಕ ಚಾಲೀಸಾವು ತನ್ನಿ೦ತಾನಾಗಿಯೇ ಪಾಠಕರ ಸ್ಮೃತಿ ಪಟಲದಲ್ಲಿ ಅಚ್ಚಾಗಿಹೋಗುತ್ತದೆ. ಹನುಮಾನ್ ಚಾಲೀಸಾಕ್ಕೆ ಸ೦ಬ೦ಧಿಸಿದ ಹಾಗೆ ನಿಮಗೆ ತಿಳಿದಿರದ ಕೆಲವೊ೦ದು ಸ೦ಗತಿಗಳು ಹಾಗೂ ಅದರ ಪಠಣದಿ೦ದಾಗುವ ಪ್ರಯೋಜನಗಳ ಕುರಿತು ಅರಿತುಕೊಳ್ಳಲು ಈ ಲೇಖನವನ್ನು ಓದಿರಿ. ರಾಮ ಭಂಟ ಭಗವಾನ್ ಹನುಮಂತನ ರೋಚಕ ಜನ್ಮ ವೃತ್ತಾಂತ

ಹನುಮಾನ್ ಚಾಲೀಸಾ ಕೃತಿಯ ಹಿ೦ದಿನ ದ೦ತಕಥೆ

ಒಮ್ಮೆ ತುಳಸೀದಾಸರು ಔರ೦ಗಜೇಬನನ್ನು ಭೇಟಿಯಾಗಲು ತೆರಳುತ್ತಾರೆ. ಮತಾ೦ಧ ಚಕ್ರವರ್ತಿಯಾದ ಔರ೦ಗಜೇಬನು ತುಳಸೀದಾಸರ ಕುರಿತು ಪರಿಹಾಸ್ಯಗೈಯ್ಯುತ್ತಾನೆ ಹಾಗೂ ಭಗವ೦ತನನ್ನು ತನಗೆ ತೋರಿಸುವ೦ತೆ ತುಳಸೀದಾಸರಿಗೆ ಪ೦ಥಾಹ್ವಾನವನ್ನು ನೀಡುತ್ತಾನೆ. ಮನದಲ್ಲಿ ನೈಜ ಭಕ್ತಿಭಾವವಿಲ್ಲದೇ ರಾಮನನ್ನು ಕಾಣುವುದು ಸಾಧ್ಯವಿಲ್ಲವೆ೦ದು ಕವಿಯು ಮಾರ್ಮಿಕವಾಗಿ ಔರ೦ಗಜೇಬನಿಗೆ ಉತ್ತರಿಸುತ್ತಾರೆ. ಇದರ ಪರಿಣಾಮವಾಗಿ ತುಳಸೀದಾಸರು ಔರ೦ಗಜೇಬನಿ೦ದ ಬ೦ಧಿಸಲ್ಪಡುತ್ತಾರೆ. ಹನುಮಾನ್ ಚಾಲೀಸಾದ ಅತ್ಯದ್ಭುತವಾಗಿರುವ ನಲವತ್ತು ಪದ್ಯ ಚರಣಗಳನ್ನು ತುಳಸೀದಾಸರು ಸೆರೆವಾಸದಲ್ಲಿದ್ದಾಗಲೇ ರಚಿಸಿದರೆ೦ದು ನ೦ಬಲಾಗಿದೆ.

ಹನುಮಾನ್ ಚಾಲೀಸಾವನ್ನು ಪಠಿಸಲು ಸೂಕ್ತವಾದ ಕಾಲಾವಧಿ ಯಾವುದು?

ಹನುಮಾನ್ ಚಾಲೀಸಾವನ್ನು ಪ್ರಾತ:ಕಾಲ ಸ್ನಾನವನ್ನು ಪೂರೈಸಿದ ಬಳಿಕವಷ್ಟೇ ಪಠಿಸಬೇಕು. ಸೂರ್ಯಾಸ್ತಮಾನದ ಬಳಿಕ ನೀವು ಹನುಮಾನ್ ಚಾಲೀಸಾವನ್ನು ಓದಲು ಬಯಸುವಿರಾದರೆ, ನೀವು ಮೊದಲು ನಿಮ್ಮ ಕೈಕಾಲುಗಳು ಹಾಗೂ ಮುಖವನ್ನು ಚೆನ್ನಾಗಿ ತೊಳೆದುಕೊ೦ಡಿರಬೇಕು. ದುಷ್ಟ ಶಕ್ತಿಗಳ ಉಪಟಳವನ್ನೂ ಒಳಗೊ೦ಡ೦ತೆ ಸ೦ಕಷ್ಟದ, ಸ೦ಧಿಗ್ಧದ, ಅಸಹಾಯಕ ಪರಿಸ್ಥಿತಿಗಳಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ ಭಗವಾನ್ ಹನುಮ೦ತನ ದೈವಿಕ ಚೈತನ್ಯ, ಸಾನ್ನಿಧ್ಯ, ಆವಾಹನೆಯು೦ಟಾಗಿ ಪರಿಸ್ಥಿತಿಯು ತಿಳಿಯಾಗುತ್ತದೆ ಎ೦ಬುದು ಒ೦ದು ಅತ್ಯ೦ತ ಜನಪ್ರಿಯವಾದ ನ೦ಬಿಕೆಯಾಗಿದೆ.

ಶನಿಯ ದುಷ್ಪ್ರಭಾವವನ್ನು ಕಡಿಮೆಮಾಡುತ್ತದೆ ಪುರಾಣಶಾಸ್ತ್ರಗಳ ಪ್ರಕಾರ, ಶನಿಯ ಅಧಿದೇವತೆಯಾದ ಶನಿದೇವನು ಭಗವಾನ್ ಹನುಮ೦ತನ ಕುರಿತು ಭಯವುಳ್ಳವನಾಗಿದ್ದಾನೆ ಎ೦ದು ಹೇಳಲಾಗಿದೆ. ಆದ್ದರಿ೦ದ, ಹನುಮಾನ್ ಚಾಲೀಸಾದ ಪಠಣವು ಸಾಡೇಸಾತಿಯ ದುಷ್ಪರಿಣಾಮಗಳನ್ನು ತಗ್ಗಿಸಲು ನೆರವಾಗುತ್ತದೆ. ಹೀಗಾಗಿ, ತಮ್ಮ ಜಾತಕಗಳಲ್ಲಿ ಶನಿಯ ಸ್ಥಾನದ ಪ್ರಭಾವದ ಕಾರಣದಿ೦ದಾಗಿ ನಾನಾ ಕಷ್ಟಕಾರ್ಪಣ್ಯಗಳಿಗೆ ಗುರಿಯಾದವರು ಹನುಮಾನ್ ಚಾಲೀಸಾವನ್ನು ಶಾ೦ತಿ, ನೆಮ್ಮದಿ, ಮತ್ತು ಅಭ್ಯುದಯಕ್ಕಾಗಿ ವಿಶೇಷವಾಗಿ ಶನಿವಾರಗಳ೦ದು ಪಠಿಸಬೇಕು.

ದುಷ್ಟ ಶಕ್ತಿಗಳನ್ನು ಅಟ್ಟಿಬಿಡುತ್ತದೆ ಭಯಾನಕ ಹಾಗೂ ಅಪಾಯಕಾರಿಯಾದ ಭೂತಪ್ರೇತ ಪಿಶಾಚಿಗಳು ಹಾಗೂ ದುಷ್ಟಶಕ್ತಿಗಳ ಬಾಧೆಯನ್ನು ಹೊಡೆದೋಡಿಸುವ ದೇವನೆ೦ದು ಭಗವಾನ್ ಹನುಮನನ್ನು ಪರಿಗಣಿಸಲಾಗಿದೆ. ರಾತ್ರಿಯ ವೇಳೆಯಲ್ಲಿ ಭಯಾನಕ ದು:ಸ್ವಪ್ನಗಳ ಕಾರಣದಿ೦ದ ನೀವು ಒ೦ದು ವೇಳೆ ತೊ೦ದರೆಗೀಡಾಗಿದ್ದಲ್ಲಿ, ನೀವು ನೆಮ್ಮದಿಯಿ೦ದ ನಿದ್ರೆಮಾಡುವ೦ತಾಗಲು, ಹನುಮಾನ್ ಚಾಲೀಸಾದ ಪುಸ್ತಕವೊ೦ದನ್ನು ನಿಮ್ಮ ತಲೆದಿ೦ಬಿನ ಅಡಿಯಲ್ಲಿಟ್ಟುಕೊ೦ಡು ಮಲಗಬೇಕೆ೦ದು ಹೇಳಲಾಗಿದೆ.

ಹನುಮಾನ್ ಚಾಲೀಸಾ ಪಠಣದ ಮುಖೇನ ಕ್ಷಮಾಯಾಚನೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೆಲ್ಲರೂ ಪಾಪಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ. ಹಿ೦ದೂಧರ್ಮದ ತತ್ವಗಳ ಪ್ರಕಾರ, ನಮ್ಮ ಪಾಪಕರ್ಮಗಳ ಏಕೈಕ ಕಾರಣದಿ೦ದಾಗಿ ನಾವೆಲ್ಲರೂ ಜನನ ಮರಣಗಳ ವಿಷವರ್ತುಲದಲ್ಲಿ ಸಿಲುಕಿ, ಅದರಿ೦ದ ಹೊರಬರಲಾರದೇ ತೊಳಲಾಡುತ್ತಿರುತ್ತೇವೆ. ಹನುಮಾನ್ ಚಾಲೀಸಾದ ಆರ೦ಭದ ಪದ್ಯ ಚರಣಗಳ ಭಕ್ತಿಪೂರ್ವಕ ಪಠಣದಿ೦ದ ವ್ಯಕ್ತಿಯೋರ್ವರು ತಮ್ಮ ಹಿ೦ದಿನ ಹಾಗೂ ಈ ಜನ್ಮದ ಸರ್ವವಿಧದ ಪಾಪಗಳಿ೦ದಲೂ ಬಿಡುಗಡೆಗೊಳ್ಳಲು ಅರ್ಹರಾಗುತ್ತಾರೆ.

ವಿಘ್ನನಿವಾರಕವಾಗಿದೆ ಭಗವಾನ್ ಶ್ರೀ ಗಣೇಶನ೦ತೆಯೇ, ಸಕಲವಿಘ್ನಗಳನ್ನೂ ನಿವಾರಿಸಿಬಿಡುವನೆ೦ಬ ಖ್ಯಾತಿಯೂ ಭಗವಾನ್ ಹನುಮ೦ತನಿಗೂ ಇದೆ. ವ್ಯಕ್ತಿಯೋರ್ವರು ಹನುಮಾನ್ ಚಾಲೀಸಾವನ್ನು ಸ೦ಪೂರ್ಣ ಭಕ್ತಿಭಾವದಿ೦ದ ಪಠಿಸಿದ್ದೇ ಆದಲ್ಲಿ, ಆತನು ಅಥವಾ ಆಕೆಯು ಭಗವಾನ್ ಹನುಮ೦ತನ ದೈವಿಕ ರಕ್ಷಣೆಯನ್ನು ಪಡೆದುಕೊಳ್ಳುವ೦ತಾಗುತ್ತದೆ ಹಾಗೂ ಭಗವಾನ್ ಹನುಮ೦ತನು ಅ೦ತಹ ತನ್ನ ಪರಮಭಕ್ತನು ಜೀವನದಲ್ಲಿ ಯಾವುದೇ ಕಷ್ಟಕಾರ್ಪಣ್ಯಗಳಿಗೆ ಸಿಲುಕದ೦ತೆ ನೋಡಿಕೊಳ್ಳುವುದರ ಮೂಲಕ ಆತನ ಯೋಗಕ್ಷೇಮದ ಹೊಣೆಯನ್ನು ಸ್ವತ: ತಾನೇ ಹೊರುತ್ತಾನೆ.

ಒತ್ತಡದಿ೦ದ ಮುಕ್ತಿ ಹೊ೦ದಲು ಬೆಳಗ್ಗೆ ಎದ್ದು, ಸ್ನಾನವನ್ನು ಪೂರೈಸಿದ ಬಳಿಕ ಪ್ರಥಮತ: ಹನುಮಾನ್ ಚಾಲೀಸಾವನ್ನೇ ಪಠಿಸುವುದರಿ೦ದ ನಿಮ್ಮ ಆ ಇಡಿಯ ದಿನವು ಸುಸೂತ್ರವಾಗಿ ಸಾಗುವ೦ತಾಗುತ್ತದೆ. ಪ್ರಾತ:ಕಾಲದಲ್ಲಿ ಕೈಗೊಳ್ಳುವ ಹನುಮಾನ್ ಚಾಲೀಸಾದ ಪಠಣದಿ೦ದ ನಿಮ್ಮ ಮನಸ್ಸು ನಿರಾಳಗೊಳ್ಳುತ್ತದೆ ಹಾಗೂ ನೀವು ನಿಮ್ಮ ಜೀವನದ ಸ೦ಪೂರ್ಣ ನಿಯ೦ತ್ರಣವು ನಿಮ್ಮ ಕೈಯ್ಯಲ್ಲಿಯೇ ಇರುತ್ತದೆ. ಹನುಮಾನ್ ಚಾಲೀಸಾದ ಪಠಣವು ವ್ಯಕ್ತಿಯೋರ್ವರನ್ನು ದೈವಿಕ ಅನುಗ್ರಹದಿ೦ದ ಸ೦ಪನ್ನಗೊಳಿಸುತ್ತದೆ.

ನಿರಾ೦ತಕದ, ಸುಖಕರ ಪ್ರಯಾಣಕ್ಕಾಗಿ ಕಾರುಗಳಲ್ಲಿ, ಹಿನ್ನೋಟವನ್ನು ಒದಗಿಸುವ ಕನ್ನಡಿಯಲ್ಲಿ ತೂಗುಹಾಕಿರುವ ಹನುಮ೦ತನ ಪುಟ್ಟ ಕಲಾಕೃತಿಯ ಬಿ೦ಬವನ್ನೋ ಅಥವಾ ಕಾರ್ ನ ಡ್ಯಾಶ್ ಬೋರ್ಡ್ ನ ಮೇಲೆ ಹನುಮ೦ತನ ಪುಟ್ಟ ಮೂರುತಿಯನ್ನು ಇರಿಸಿರುವುದನ್ನು ನೀವು ನೋಡಿರಲೇಬೇಕಲ್ಲವೇ? ಕಾರುಗಳಿಗಾಗಿ ಹನುಮ೦ತನು ಅದೇಕೆ ಅಷ್ಟೊ೦ದು ಜನಪ್ರಿಯ ಆಯ್ಕೆಯಾಗಿದ್ದಾನೆ? ಭಗವಾನ್ ಹನುಮ೦ತನು ಅಪಘಾತಗಳನ್ನು ತಡೆಗಟ್ಟುವುದರ ಮೂಲಕ, ಸುರಕ್ಷಿತ ಪ್ರಯಾಣವನ್ನು ಕೈಗೊಳ್ಳಲು ನೆರವಾಗುವನೆ೦ಬ ನ೦ಬಿಕೆಯು ವ್ಯಾಪಕವಾಗಿದೆ.

ನಮ್ಮೆಲ್ಲರ ಸರ್ವಾಭೀಷ್ಟ ಸಿದ್ಧಿಗಾಗಿ ಹನುಮಾನ್ ಚಾಲೀಸಾದ ಪಠಣ ಅಥವಾ ಶ್ರವಣದಿ೦ದಾಗುವ ಪ್ರಯೋಜನಗಳು ಅಪರಿಮಿತವಾಗಿದ್ದು, ಅತ್ಯದ್ಭುತವಾಗಿವೆ.ಭಕ್ತರೋರ್ವರು ಹನುಮಾನ್ ಚಾಲೀಸಾದ ಈ ನಲವತ್ತು ಪದ್ಯ ಚರಣಗಳನ್ನು ಏಕಾಗ್ರಚಿತ್ತದಿ೦ದ ಪರಿಶುದ್ಧ, ಅಸೀಮ ಭಕ್ತಿಭಾವದೊ೦ದಿಗೆ ಪಠಿಸಿದ್ದೇ ಆದಲ್ಲಿ, ಆತನು ಅಥವಾ ಆಕೆಯು ಅನುಗ್ರಹಿತನಾಗುತ್ತಾನೆ(ಳೆ) ಹಾಗೂ ಆತನ ಅಥವಾ ಆಕೆಯ ಎಲ್ಲಾ ಮನೋಕಾಮನೆಗಳು ಈಡೇರುತ್ತವೆ ಎ೦ದು ನ೦ಬಲಾಗಿದೆ. ಹನುಮಾನ್ ಚಾಲೀಸಾದ ನಿಯಮಿತವಾದ ಪಠಣವು ನಿಮಗೆ ಭಗವ೦ತನ ಅನುಗ್ರಹವನ್ನು ಪ್ರಾಪ್ತಿಗೊಳಿಸುತ್ತದೆ ಹಾಗೂ ನಿಮಗೆ ಅಸೀಮ ಸಾಧನೆಗೆ ಬೇಕಾದ ದೈವಿಕ ಶಕ್ತಿಯನ್ನೊದಗಿಸುತ್ತದೆ.

ದೈವಿಕ, ಆಧ್ಯಾತ್ಮಿಕ ಜ್ಞಾನಸ೦ಪಾದನೆಗಾಗಿ ಹನುಮಾನ್ ಚಾಲೀಸಾವನ್ನು ಪಠಣ ಮಾಡುವ ಭಕ್ತನು(ಳು) ದೈವಿಕ, ಆಧ್ಯಾತ್ಮಿಕ ಜ್ಞಾನದೊ೦ದಿಗೆ ಅನುಗ್ರಹಿತನಾಗುತ್ತಾನೆ (ಳೆ). ಆಧ್ಯಾತ್ಮಿಕ ಮಾರ್ಗವನ್ನನುಸರಿಸುತ್ತಿರುವವರು ಹನುಮಾನ್ ಚಾಲೀಸಾದ ಪಠಣವನ್ನು ಮಾಡಿದಲ್ಲಿ, ಅ೦ತಹವರು ಭಗವಾನ್ ಹನುಮ೦ತನಿ೦ದ ಅಪರಿಮಿತ ನೆರವನ್ನು ಪಡೆಯುತ್ತಾರೆ. ಏಕೆ೦ದರೆ, ಹನುಮನು ಅ೦ತಹವರಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡುತ್ತಾನೆ ಹಾಗೂ ಅ೦ತಹವರ ಮನಸ್ಥಿತಿಯನ್ನು ಶಿಸ್ತುಬದ್ಧಗೊಳಿಸುವುದರ ಮೂಲಕ ಲೌಕಿಕದ ಸೋ೦ಕು ಅವರಿಗೆ ತಗಲದ೦ತೆ ಕಾಪಾಡುತ್ತಾನೆ

ವಿವೇಕ ಹಾಗೂ ಶಕ್ತಿಯ ಗಳಿಕೆಗಾಗಿ ಹನುಮಾನ್ ಚಾಲೀಸಾವನ್ನು ಉಚ್ಚಸ್ವರದಲ್ಲಿ ಪಠಿಸುವುದರಿ೦ದ ನಿಮ್ಮ ಪರಿಸರದಲ್ಲಿ ಅದೆ೦ತಹ ಧನಾತ್ಮಕ ಚೈತನ್ಯವು ಆವಿರ್ಭವಿಸುವುದೆ೦ದರೆ, ನೀವು ದಿನವಿಡೀ ಜೀವನೋತ್ಸಾಹದಿ೦ದ ಇರುವ೦ತೆ ಆಗುತ್ತದೆ. ಹನುಮಾನ್ ಚಾಲೀಸಾದ ಪಠಣವು ವ್ಯಕ್ತಿಯೋರ್ವರಲ್ಲಿರಬಹುದಾದ ಆಲಸ್ಯವನ್ನು ಹಾಗೂ ಕೆಲಸವನ್ನು ಮು೦ದೂಡುವ ಅವರ ಸ್ವಭಾವವನ್ನು ರಿಕ್ತಗೊಳಿಸುತ್ತದೆ ಹಾಗೂ ಆತನನ್ನು ದಕ್ಷನನ್ನಾಗಿಸುತ್ತದೆ.ಜೊತೆಗೆ, ಹನುಮಾನ್ ಚಾಲೀಸಾದ ಪಠಣವು ಜೀವನ ಶೈಲಿಗೆ ಸ೦ಬ೦ಧಿಸಿದ ಹಾಗೆ ಸಣ್ಣಪುಟ್ಟ ತೊ೦ದರೆಗಳಾದ ತಲೆನೋವು, ನಿದ್ರಾಹೀನತೆ, ಉದ್ವೇಗ, ಹಾಗೂ ಖಿನ್ನತೆ ಇವೇ ಮೊದಲಾದವುಗಳನ್ನು ಇಲ್ಲವಾಗಿಸುತ್ತದೆ.

ವ್ಯಕ್ತಿಯನ್ನು ಪುನರ್ರೂಪಿಸುವುದಕ್ಕಾಗಿ ದುಷ್ಟಜನರ ಸಹವಾಸಕ್ಕೆ ಬಲಿಬಿದ್ದ ಅಥವಾ ದುರ್ವ್ಯಸನಗಳಿಗೆ ದಾಸರಾಗಿರುವ ವ್ಯಕ್ತಿಗಳನ್ನು ಪುನರ್ರೂಪಿಸುವ ನಿಟ್ಟಿನಲ್ಲಿ ಹನುಮಾನ್ ಚಾಲೀಸಾದ ಪಠಣವು ನೆರವಾಗುತ್ತದೆ. ಚಾಲೀಸಾದ ಪಠಣದಿ೦ದ ಆವಿರ್ಭವಿಸುವ ಚೈತನ್ಯವು ಭಕ್ತನ (ಳ) ಹೃದಯವನ್ನು ಧನಾತ್ಮಕತೆ ಹಾಗೂ ಚೈತನ್ಯದಿ೦ದ ತು೦ಬುವ೦ತೆ ಮಾಡುತ್ತದೆ.

ಐಕ್ಯಮತ್ಯವನ್ನು (ಎಲ್ಲರೂ ಒ೦ದೇ ಎ೦ಬ ಭಾವವನ್ನು) ವೃದ್ಧಿಸುತ್ತದೆ

ಅರ್ಪಣಾ ಮನೋಭಾವ ಹಾಗೂ ಪರಿಶುದ್ಧ ಭಕ್ತಿಭಾವದಿ೦ದ ಪ್ರತಿದಿನವೂ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ, ಕುಟು೦ಬದೊಳಗಿನ ಎಲ್ಲಾ ತೆರನಾದ ಭಿನ್ನಾಭಿಪ್ರಾಯಗಳು ಹಾಗೂ ವಾಗ್ವಾದಗಳನ್ನು ತೊಡೆದುಹಾಕಿ ಅವುಗಳ ಸ್ಥಾನದಲ್ಲಿ ಸರ್ವಾನುಮತ್ಯ (ಐಕ್ಯಮತ್ಯ), ಸ೦ತೃಪ್ತಿ, ಸ೦ತೋಷ, ಹಾಗೂ ಶಾ೦ತಿ ನೆಮ್ಮದಿಗಳನ್ನು ಜೀವನದಲ್ಲಿ ತು೦ಬುತ್ತದೆ. ಹನುಮಾನ್ ಚಾಲೀಸಾವು ಋಣಾತ್ಮಕತೆಯನ್ನು ತೊಡೆದುಹಾಕಿ ಸ೦ಬ೦ಧಗಳ ನಡುವೆ ಸಾಮರಸ್ಯವನ್ನು ಸ್ಥಾಪಿಸುತ್ತದೆ.

ಋಣಾತ್ಮಕ, ದುಷ್ಟ ಶಕ್ತಿಗಳನ್ನು ತೊಡೆದುಹಾಕುವುದಕ್ಕಾಗಿ ಹನುಮಾನ್ ಚಾಲೀಸಾದ ಶ್ಲೋಕಗಳ ಪೈಕಿ ಒ೦ದು ಹೀಗಿದೆ, 'ಭೂತ್ ಪಿಶಾಚ್ ನಿಕಟ್ ನಹಿ ಆವೇ, ಮಹಾವೀರ್ ಜಬ್ ನಾಮ್ ಸುನಾವೇ'. ಇದರ ಭಾವಾನುವಾದವು ಹೀಗಿದೆ: ಭಗವಾನ್ ಹನುಮ೦ತನ ನಾಮಧೇಯವನ್ನು ಹಾಗೂ ಹನುಮಾನ್ ಚಾಲೀಸಾದ ಪಠಣವನ್ನು ಅತ್ಯುಚ್ಚ ಸ್ವರದಲ್ಲಿ ಕೈಗೊಳ್ಳುವ ಯಾವುದೇ ವ್ಯಕ್ತಿಯನ್ನೂ ಸಹ ಯಾವುದೇ ದುಷ್ಟ ಶಕ್ತಿಯು ಏನೂ ಮಾಡಲಾಗದು. ಹನುಮಾನ್ ಚಾಲೀಸಾವು ಕುಟು೦ಬದ ಸದಸ್ಯರ ಮನಸ್ಸು ಹಾಗೂ ಆತ್ಮಗಳಿ೦ದ ಎಲ್ಲಾ ಬಗೆಯ ಋಣಾತ್ಮಕ ಭಾವಗಳನ್ನು ತೊಡೆದುಹಾಕುವುದರ ಮೂಲಕ, ಸ೦ಸಾರದಲ್ಲಿ ಶಾ೦ತಿ, ನೆಮ್ಮದಿ, ಹಾಗೂ ಸಾಮರಸ್ಯವನ್ನು ಸ್ಥಾಪಿಸುತ್ತದೆ.
**********

ಹನುಮಾನ್ ಚಾಲೀಸ್ ರಚಿಸಿದವರು ಖ್ಯಾತ ಕವಿ ಗೋಸ್ವಾಮಿ ತುಳಸಿದಾಸರ ಹಿಂದೂ ಧರ್ಮದಲ್ಲಿ ಈ ಚಾಲೀಸಾಕ್ಕೆ ವಿಶೇಷವಾದ ಮಹತ್ವವಿದ್ದು ಇದನ್ನು ಪಠಿಸುವ ಮೂಲಕ ಆಂಜನೇಯನ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಯಲಾಗುತ್ತದೆ. ಅಲ್ಲದೇ ಸೈತಾನನ ಪ್ರಭಾವವನ್ನೂ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಕೊನೆಗಾಣಿಸಬಹುದು.ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಋಣಾತ್ಮಕ ಶಕ್ತಿಗಳು ಇಲ್ಲವಾಗಿ ಸುಖನಿದ್ದೆ ಆವರಿಸಲು ಸಾಧ್ಯವಾಗುತ್ತದೆ. ರಾತ್ರಿ ನಿದ್ದೆಯಲ್ಲಿ ಹೆದರುವ ಮಕ್ಕಳು ಈ ಹನುಮಾನ್ ಚಾಲೀಸಾವನ್ನು ತಪ್ಪದೇ ಓದಬೇಕು. ವಿಶೇಷವಾಗಿ ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಪಠಿಸುವ ಮೂಲಕ ಜೀವನದಲ್ಲಿ ಎದುರಾಗುವ ಪೀಡೆಗಳಿಂದ ಮುಕ್ತಿ ಪಡೆಯಬಹುದು.ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು. ಹನುಮಾನ್ ಚಾಲೀಸಾವನ್ನು ಪಠಿಸಲು ಅತ್ಯುತ್ತಮ ಸಮಯವೆಂದರೆ ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ.ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಮತ್ತು ಸಮೃದ್ಧಿಗಾಗಿ ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಭಕ್ತಿ ಶ್ರದ್ಧೆಯಿಂದ ಪಠಿಸಿ.ಹನುಮಾನ್ ಚಾಲೀಸವನ್ನು ನಿರಂತರವಾಗಿ ಓದಿದರೆ ನಮ್ಮ ಕಷ್ಟಗಳು ಸುಲಭವಾಗಿ ಬೇಗನೆ ದೂರವಾಗುತ್ತವೆ.ಈಗ ಹನುಮಾನ್ ಚಾಲೀಸ ಮತ್ತು ಅದರ ಅರ್ಥವನ್ನು ತಿಳಿಯೋಣ.

ಶ್ರೀ ಹನುಮಾನ್ ಚಾಲೀಸಾ ಪ್ರಾರಂಭ

1.ಶ್ರೀ ಗುರು ಚರಣ ಸರೋಜ ರಜ ನಿಜ ಮನ ಮುಕುರ ಸುಧಾರಿ ಬರನಉ ರಘುಬರ ವಿಮಲ ಜಸು ಜೋಧಾಯಕ ಫಲ ಚಾರಿ.

ಅರ್ಥ:ಶ್ರೀ ಗುರು ಮಹಾರಾಜರ ಚರಣಕಮಲಗಳ ಧೂಳಿಯಿಂದ ಮನವೆಂಬ ಕನ್ನಡಿಯು ಹೇಗೆ ಪವಿತ್ರವಾಗುವುದೋ ಹಾಗೆ ಪವಿತ್ರಗೊಳಿಸಿಕೊಂಡು ನಾನು ರಘುವೀರನ ನಿರ್ಮಲವಾದ ಯಶಸ್ಸಿನ ವರ್ಣನೆಯು ಧರ್ಮ,ಅರ್ಥ,ಕಾಮ,ಮೋಕ್ಷಗಳನ್ನು ಕೊಡುವದಾಗಿದೆ.

2.“ಬುದ್ದಿ ಹೀನ ತನು ಜಾನಿ ಕೆ,ಸುಮಿರೌ ಪವನ ಕುಮಾರ l ಬಲಬುದ್ಧಿ ವಿದ್ಯಾ ದೇಹು ಮೋಹಿ,ಕರಹು ಕಲೇಶ ವಿಕಾರ”

ಅರ್ಥ:ಹೇ ಪವನ ನಂದನ,ನಾನು ನಿನ್ನ ಸ್ಮರಣೆಯನ್ನು ಮಾಡುತ್ತೇನೆ.ನೀನು ತಿಳಿದಂತೆ ನನ್ನ ಶರೀರ ಮತ್ತು ಬುದ್ಧಿಗಳು ನಿರ್ಬಲವಾಗಿವೆ.ನನಗೆ ಶಾರೀರಿಕ ಬಲ ಮತ್ತು ಸದ್ಬುದ್ಧಿ ಜ್ಞಾನಗಳನ್ನು ಕೊಡು ಮತ್ತು ನನ್ನ ದುಃಖಗಳನ್ನು ನಾಶ ಮಾಡು ಎಂದು ಬೇಡುತ್ತೇನೆ.

3.ಜಯ ಹನುಮಾನ್ ಜ್ಞಾನ ಗುಣಸಾಗರ್ ಜಯ ಕಪೀಶ್ ತಿಹು ಲೋಕ ವುಜಾಗರ.

ಹೇ ಕೇಸರಿನಂದನ ಹನುಮಂತ, ‘ನಿನಗೆ ಜಯವಾಗಲಿ, ನಿನ್ನಲ್ಲಿ ಜ್ಞಾನ ಮತ್ತು ಗುಣಗಳು ಅನಂತವಾಗಿವೆ.ಹೇ ಕಪೀಶ್ವರ್ ನಿನಗೆ ಜಯವಾಗಲಿ, ಸ್ವರ್ಗ, ಭೂಮಿ, ಮತ್ತು ಪಾತಾಳ ಲೋಕಗಳಲ್ಲಿ ನಿನ್ನ ಕೀರ್ತಿಯೂ ಹರದಿರುವುದು.

4.ರಾಮ ದೂತ ಆತುಲಿತ ಬಲಧಾಮ ಅಂಜನಿ ಪುತ್ರ ಪವನ ಸುತನಾಮ.

ಹೇ ಪವನಪುತ್ರ, ಅಂಜನೀ ನಂದನ,ರಾಮದೂತ, ಈ ಸಂಸಾರದಲ್ಲಿ ನಿನಗೆ ಸಮಾನ ಬಲಶಾಲಿಯಾದವನು ಬೇರೆ ಯಾರು ಇಲ್ಲ.

5.ಮಹಾವೀರ ವಿಕ್ರಮ ಭಜರಂಗಿ ಕುಮತಿ ನಿವಾರ್ ಸುಮತಿ ಕೆ ಸಂಗೀ.

ಹೇ ಭಜರಂಗ ಬಲಿ ನೀನು ಪರಾಕ್ರಮ ಶಾಲಿ ಮತ್ತು ಮಹಾವೀರ ನಾಗಿರುವೆ.ದುರ್ಬುದ್ದಿಯನ್ನು ದೂರಮಾಡುವೆ. ಸಮೃದ್ಧಿಯಿರುವವರ ಸಂಗಡ ಸಹಾಯಕನಾಗಿರುವೆ.

6.ಕಂಚನವರಣ ವಿರಾಜ್ ಸುವೇಶ ಕಾನನ ಕುಂಡಲ ಕುಂಚಿತ ಕೇಶ.

ಹೇ ಹನುಮಾನ, ನಿಮ್ಮ ಬಣ್ಣ ಬಂಗಾರದ ಬಣ್ಣವಾಗಿದೆ.ಸುಂದರ ವಸ್ತ್ರಗಳಿಂದ ಅಲಂಕೃತರಾಗಿರುವಿರಿ. ಕಿವಿಗಳಲ್ಲಿ ಬಂಗಾರದ ಕುಂಡಲಗಳಿವೆ ಮತ್ತು ಗುಂಗುರು ಕೂದಲುಗಳಿಂದ ಶೋಭಿಸುವಿರಿ.

7.ಹಾಥವಜ್ರ ಅರುಣದ್ವಜಾವಿರಾಜೈ ಕಾಂಥೇಮೊಂಜಿ ಜನೇವೋಚಾಜೈ.

ಹೇ ಪರಾಕ್ರಮಿ ಹನುಮಾನ್,ನಿಮ್ಮ ಕೈಯಲ್ಲಿ ವಜ್ರ ಮತ್ತು ದ್ವಜಗಳಿವೆ.ಭುಜದಲ್ಲಿ ದರ್ಬೆಯ ಯಗನೋಪವೀತಗಳು ಶೋಭಿಸುತ್ತಿವೆ.

8.ಶಂಕರಸುವನ ಕೇಸರಿನಂದನ್ ತೇಜಪ್ರತಾಪ ಮಹಾಜಗವಂದನ್.

ಹೇ ಹನುಮಾನ್,ನೀವು ಶಂಕರನ ಅವತಾರವಾಗಿರುವಿರಿ.ಕೇಸರಿಯ ಪುತ್ರರಾಗಿರುವಿರಿ.ನಿಮ್ಮ ತೇಜಸ್ಸು ಮತ್ತು ಪರಾಕ್ರಮ ಗಳಿಂದ ಇಡೀ ಜಗತ್ತಿನಲ್ಲಿಯೇ ಕೀರ್ತಿಗಳಿಸಿ ವಂದನೆ ಸ್ವೀಕರಿಸುವಿರಿ.

9.ವಿದ್ಯಾವಾನಗುಣಿ ಅತಿಚಾತುರ್ ರಾಮಕಾಜ್ ಕರಿವೇಕೋ ಆತುರ.

ಹೇ ಹನುಮಾನ್,ನೀವು ವಿದ್ಯಾವಂತರೂ, ಗುಣವಂತರೂ ಆಗಿ ಅತಿ ಚತುರರಾಗಿದ್ದೀರಿ.ಶ್ರೀ ರಾಮಚಂದ್ರನ ಕಾರ್ಯ ಮಾಡಲು ಸದಾ ಆತುರರಾಗಿದ್ದೀರಿ.

10.ಪ್ರಭುಚರಿತ್ರ ಸುನಿಯೆಕೋ ರಸಿಯಾ ರಾಮಲಖನ್ ಸೀತಾ ಮನಬಸಿಯಾ.

ಹೇ ಹನುಮಾನ್,ನೀವು ಪ್ರಭು ಶ್ರೀ ರಾಮನ ಚರಿತ್ರೆಯನ್ನು ಗುಣಗಾನವನ್ನು ಕೇಳಿ ಅನಂದಪಡುವಿರಿ.ನಿಮ್ಮ ಹೃದಯದಲ್ಲಿಯೇ ಸೀತಾ,ರಾಮ,ಲಕ್ಷ್ಮಣರನ್ನು ಹೊಂದಿದ್ದೀರಿ.

11.ಸೂಕ್ಷ್ಮ ರೂಪದರಿಸಿಯಹಿ ದಿಖಾವಾ ವಿಕಟರೂಪಧರಿ ಲಂಕಜರಾವ.

ಹೇ ವಾಯುಪುತ್ರ, ನೀವು ಸೂಕ್ಷ್ಮ ರೂಪ ಧರಿಸಿ ಸೀತೆಯ ಎದುರಿಗೆ ಕಂಡು ಬಂದಿರಿ,ಭಯಂಕರ ರೂಪವನ್ನು ಧರಿಸಿ ಲಂಕೆಯನ್ನು ಸುಟ್ಟು ಹಾಕಿದಿರಿ.

12.ಭೀಮರೂಪಧರಿ ಅಸುರ ಸಂಹಾರೇ ರಾಮಚಂದ್ರಜೀಕೆ ಕಾಜ ಸವಾರೇ.

ಹೇ ಹನುಮಾನ್, ನೀವು ಭಯಂಕರ ರೂಪ ಧರಿಸಿ ರಾಕ್ಷಸರ ಸಂಹಾರ ಮಾಡಿದಿರಿ.ಭಗವಾನ್ ಶ್ರೀ ರಾಮನ ಉದ್ದೇಶವನ್ನು ಸಫಲಗೊಳಿಸಲು ಸಹಾಯ ಮಾಡಿದಿರಿ.

13.ಲಾಯ ಸಂಜೀವನ್ ಲಖನ ಜಿಯಾಯೇ ಶ್ರೀ ರಘುವೀರ ಹರಖೀಪುರಲಾಯೇ.

ದಿವ್ಯ ಸಂಜೀವಿನಿ ಗಿಡವನ್ನು ತಂದು ಮೂರ್ಛೆ ಹೊಂದಿದ್ದ ಲಕ್ಷ್ಮಣನನ್ನು ಬದುಕಿಸಿದಿರಿ.ಶ್ರೀ ರಘುರಾಮನ ಹೃದಯದಲ್ಲಿ ಸಂತೋಷವನ್ನು ಉಂಟು ಮಾಡಿದಿರಿ.

14.ರಘುಪತಿ ಕಿ ನಹೀ ಬಹುತಬಡಾಈ ತುಮ ಮಮ ಪ್ರಿಯ ಭರತಹಿ ಸಮಭಾಈ.

ಹೇ ಅಂಜನಿನಂದನ, ನೀವು ಭಗವಾನ್ ಶ್ರೀ ರಾಮನ ಪ್ರಶಂಸೆಗೆ ಪಾತ್ರರಾದಿರಿ. ಆದುದರಿಂದಲೇ ರಾಮನು ತನ್ನ ಸಹೋದರ ಭರತನಂತೆ ನಿಮ್ಮನ್ನು ಪ್ರೀತಿಯಿಂದ ಕಂಡನು.

15.ಸಹಸ್ರವದನ ತುಮ್ಹಾರೋ ಯಶಗಾವೈ ಅಸ ಕಹಿ ಶ್ರೀಪತಿ ಕಂಠಲ ಗಾವೈ.

“ಸಾವಿರಾರು ಜನರು ನಿನ್ನ ಯಶಸ್ಸನ್ನು ಕೊಂಡಾಡಲಿ”ಎಂದು ಶ್ರೀ ರಾಮನು ನಿಮ್ಮನ್ನು ಅಪ್ಪಿಕೊಂಡು ಪ್ರೀತಿಯಿಂದ ಹಾರೈಸಿದ್ದಾನೆ.

16.ಸನಕಾದಿ ಬ್ರಹ್ಮಾದಿ ಮುನಿಶಾ ನಾರದ ಶಾರದ ಸಹಿತ ಅಹೀಶಾ.

ಶ್ರೀ ಸನಕ , ಸನಂದನ, ಸನಾತನರಾದಿಯಾಗಿ ಸಕಲ ಮುನಿಗಳು, ಬ್ರಹ್ಮಾದಿದೇವತೆಗಳು ನಾರದ,ಶಾರದಾ,ಶೇಷನಾಗ ಮುಂತಾದವರು ನಿಮ್ಮ ಗುಣಗಾನ ಮಾಡಿದ್ದಾರೆ.

17.ಯಮ ಕುಭೇರ ದಿಕ್ ಪಾಲ ಜಹಾತೇ ಕಪಿ ಕೋವಿದ ಕಹಿ ಸಕೆ ಕಹಾತೇ.

ಯಮ,ಕುಭೇರ,ಮುಂತಾದ ದಿಕ್ಪಾಲಕರು,ಕವಿ,ವಿದ್ವಾಂಸರು ನಿಮ್ಮ ಯಶಸ್ಸನ್ನು ಪೂರ್ಣವಾಗಿ ವರ್ಣಿಸಲು ಸಮರ್ಥರಾಗಿಲ್ಲ.

18.ತುಮ ಉಪಕಾರ ಸುಗ್ರೀವಹೀಕಿನ್ಹಾ ರಾಮಮಿಲಾಯ ರಾಜಪದ ದೀನ್ಹಾ.

ಹೇ ಪವನಪುತ್ರ, ನೀನು ವಾನರರಾಜ ಸುಗ್ರೀವನೊಂದಿಗೆ ಶ್ರೀ ರಾಮನ ಭೇಟಿ ಮಾಡಿಸಿದಿರಿ.ಸುಗ್ರೀವನನ್ನು ಕಪಿಗಳ ರಾಜ್ಯದ ರಾಜನನ್ನಾಗಿಸಿದಿರಿ.

19.ತುಮ್ಹಾರೆ ಮಂತ್ರ ವಿಭೀಷಣ ಮಾನಾ ಲಂಕೇಶ್ವರ್ ಭಯೇ ಸಬಜಗಜಾನ.

ನಿಮ್ಮ ಆಲೋಚನೆಗಳನ್ನು ವಿಭೀಷಣನು ಅನುಸರಣೆ ಮಾಡಿದನು.ಲಂಕೇಶ್ವರ ರಾವಣನು ಸತ್ತಾಗ ವಿಭೀಷಣನೇ ಲಂಕೆಯ ರಾಜನಾದನು.ಅದನ್ನು ಎಲ್ಲಾ ಜನರು ತಿಳಿದಿದ್ದಾರೆ.

20.ಜುಗ ಸಹಸ್ರ ಯೋಜನ ಪರ ಬಾನೋ ಲೀಲ್ಯೊತ್ಸಾಹಿ ಮಧರ ಫಲ ಜಾನೊ.

ಸೂರ್ಯನು ಸಹಸ್ರಾರು ಯೋಜನೆ ದೂರದಲ್ಲಿದ್ದಾನೆ. ಅಲ್ಲಿಯ ತನಕ ತಲುಪಲು ಬಹಳ ಯುಗಗಳೇ ಬೇಕಾಗುವವು.ಆದರೆ ಆ ಸೂರ್ಯನನ್ನು ಮಧುರ ಹಣ್ಣೆಂದು ತಿಳಿದು ನುಂಗಲು ಬಯಸಿದಿರಿ.

21.ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ ಜಲಧಿ ಲಾಂಘಿಗಯೇ ಅಚರಜ ನಾಹೀ.

ನೀವು ಪ್ರಭು ಶ್ರೀ ರಾಮಚಂದ್ರನು ಕೊಟ್ಟ ಮುದ್ರೆಯುಂಗುರ ಹಿಡಿದು ಸಮುದ್ರವನ್ನು ಜಿಗಿದ್ದಿದ್ದು ಯಾರಿಗೂ ಆಶ್ಚರ್ಯವೆನಿಸಲಿಲ್ಲ.

22.ದುರ್ಗಮಕಾಜ ಜಗತ ಕೇ ಜೇತೇ ಸುಗಮ ಅನುಗ್ರಹ ತುಮ್ಹರ ತೇತೇ.

ಈ ಜಗತ್ತಿನಲ್ಲಿ ಅತಿ ಕಠಿಣವಾದ ಕಾರ್ಯಗಳೂ ಸಹ ನಿಮ್ಮ ಅನುಗ್ರಹದಿಂದ ಸುಗಮವಾಗುತ್ತವೆ.

23.ರಾಮದುಅರೆ ತುಮ ರಖವಾರೇ ಹೋತನ ಅಜ್ಞಾ ಬಿನಾ ಪೈಸಾರೇ.

ಹೇ ಹನುಮಾನ್, ನೀವು ಶ್ರೀ ರಾಮಚಂದ್ರನ ಮನೆಯ ದ್ವಾರ ಪಾಲಕರಾಗಿದ್ದೀರಿ.ನಿಮ್ಮ ಆಜ್ಞೆಯಿಲ್ಲದೆ ಯಾರೂ ಆ ಮನೆಯನ್ನು ಪ್ರವೇಶ ಮಾಡಲಾರರು.

24.ಸಬ ಸುಖ ಲಹೈ ತುಮ್ಹಾರೆ ಶರನಾ ತುಮ ರಕ್ಷಕ ಕಾಹೂಕೋ ಡರನಾ.

ಹೇ ಪವನಸುತ ನಿಮ್ಮ ಶರಣದಲ್ಲಿರುವಾಗ ಎಲ್ಲಾ ರೀತಿಯ ಸುಖ ಪ್ರಾಪ್ತಿಯಾಗುವುದು.ಯಾವುದೇ ಪ್ರಕಾರದ ಹೆದರಿಕೆಯಿರುವುದಿಲ್ಲ.

25.ಅಪನ್ ತೇಜ ಸಂಹಾರೊ ಆಪೈ ತೀನೋ ಲೋಕ ಹಾಂಕತೇ ಕಾಂಪೈ.

ಹೇ ಭಜರಂಗಬಲಿ, ನಿಮ್ಮ ವೇಗವನ್ನು ನೀವೇ ಬಲ್ಲಿರಿ, ನಿಮ್ಮ ಗರ್ಜನೆಯಿಂದ ಮೂರುಲೋಕದ ಪ್ರಾಣಿಗಳು ನಡುಗುವವು.

26.ಭೂತ ಪಿಶಾಚ ನಿಕಟ ನಹೀ ಅವೈ ಮಹಾವೀರ ಜಬ ನಾಮ ಸುನಾವೈ.

ಹೇ ಆಂಜನೇಯ, ಯಾರು ‘ಮಹಾವೀರ’ನೆಂಬ ಹೆಸರನ್ನು ಜಪಿಸುತ್ತಾರೋ ಅವರ ಬಳಿಗೆ ಭೂತ ಪಿಶಾಚಿಗಳು ಬರುವುದಿಲ್ಲ.

27.ನಾಸೈ ರೋಗ ಹರೈ ಸಬ ಪೀರಾ ಜಪ ತಪ ನಿರಂತರ ಹನುಮಂತ ವೀರಾ.

ಹೇ ಹಾನುಮಾನ್, ನಿಮ್ಮ ಹೆಸರನ್ನು ನಿರಂತರ ಜಪ ಮಾಡುವುದರಿಂದ ಎಲ್ಲ ರೋಗಗಳು ನಾಶ ಹೊಂದುತ್ತವೆ ಮತ್ತು ಎಲ್ಲ ಕಷ್ಟಗಳು ದೂರವಾಗುತ್ತವೆ.

28.ಸಂಕಟ್ ತೇ ಹನುಮಾನ್ ಚುಡಾವೈ ಮನ ಕ್ರಮ ವಚನ ಧ್ಯಾನ ಜೋ ಲಾವೈ.

ಯಾವ ವ್ಯಕ್ತಿ ಕೆಲಸ ಮಾಡುವಾಗ ಮನಸ್ಸು ವ್ಯವಹಾರ ಮಾತುಗಳಲ್ಲೂ ನಿಮ್ಮನ್ನೇ ದ್ಯಾನಿಸುತ್ತಾನೆಯೋ ಅವನೆಲ್ಲ ದುಃಖವನ್ನು ನೀವು ದೂರಮಾಡಿರುವಿರಿ.

29.ಸಬ ಪರ ರಾಮ ತಪಸ್ವಿ ರಾಜಾ ತಿನಕೇ ಕಾಜ ಸಕಲ ತುಮ ಸಾಜಾ.

ರಾಜನಾದ ಶ್ರೀ ರಾಮಚಂದ್ರನು ಶ್ರೇಷ್ಠ ತಪಸ್ವಿಯಾಗಿದ್ದಾನೆ. ಅವನ್ನೆಲ್ಲ ಕಾರ್ಯಗಳನ್ನು ನೀವು ಪೂರ್ಣಗೊಳಿಸಿದಿರಿ.

30.ಔರ್ ಮನೋರಥ ಜೋ ಕೋಯಿ ಲಾವೈ ಸೋಯಿ ಅಮಿತ ಜೀವನ ಫಲ ಪಾವೈ.

ಹೇ ಹನುಮಾನ್, ನಿಮ್ಮ ಕೃಪೆಯಿಂದ ಎಲ್ಲ ಇಷ್ಟಗಳು ಪೂರ್ಣವಾಗುವವು.ಕಲ್ಪನೆ ಮಾಡದ ಫಲಗಳೂ ಸಹ ಬೇಗ ಸಿಗುವವು.

32.ಚಾರೋ ಯುಗ ಪ್ರತಾಪ ತುಮ್ಹಾರಾ ಹೈ ಪರಸಿದ್ದ ಜಗತ ಉಜಿಯಾರಾ.

ಹೇ ಹನುಮಾನ್, ನಿಮ್ಮ ಕೀರ್ತಿಯು ತ್ರೇತಾಯುಗ,ದ್ವಾಪರಯುಗ, ಸತ್ಯಯುಗ ಮತ್ತು ಕಲಿಯುಗಗಳಲ್ಲಿ ಪ್ರಸಿದ್ದವಾಗಿದೆ. ಇಡೀ ಜಗತ್ತೇ ನಿಮ್ಮ ಉಪಾಸನೆಯನ್ನು ಮಾಡುವುದು.

33.ಸಾಧು ಸಂತ ಕೇ ತುಮ ರಖವಾರೆ ಅಸುರ ನಿಕಂದನ ರಾಮ ದುಲಾರೆ.

ಹೇ ರಾಮಭಕ್ತ ರಾಮನ ಪ್ರೀತಿ ಪಾತ್ರನೇ,ನೀವು ಸಾಧು ಸಂತರ ಮತ್ತು ಸಜ್ಜನರ ರಕ್ಷಕರಾಗಿದ್ದೀರಿ. ದುಷ್ಟರ ನಾಶ ಮಾಡುವಿರಿ.

34.ಅಷ್ಟಸಿದ್ದಿ ನವನಿಧಿ ಕೆ ಧಾತಾ ಅಸ ವರ ದೀನ ಜಾನಕೀ ಮಾತಾ.

ಹೇ ಕೇಸರಿನಂದನ,ತಾಯಿ ಸೀತೆಯು ನಿಮಗೆ ನೀಡಿದ ‘ಅಣಿಮಾ’ ಮುಂತಾದ ಎಂಟು ಸಿದ್ದಿಗಳನ್ನು ಮತ್ತು ನವ ನಿಧಿಗಳನ್ನು ನೀವು ಯಾವ ಭಕ್ತರಿಗೆ ಬೇಕಾದರೂ ನೀಡಬಲ್ಲಿರಿ.

35.ರಾಮರಸಾಯನ ತುಮ್ಹರೇ ಪ್ಯಾಸಾ ಸಾಧರಹೊ ರಘುಪತಿ ಕೆ ದಾಸಾ.

ರಾಮನೆಂಬ ರಾಸಾಯನ ಸಿದ್ದ ಔಷಧ ನಿಮ್ಮ ಬಳಿಯಲ್ಲಿ ಸದಾ ಇರುವುದು,ನೀವು ರಘುಪತಿಯ ದಾಸರಾಗಿದ್ದೀರಿ.

36.ತುಮ್ಹಾರೆ ಭಜನ ರಾಮಕೋಪಾವೈ ಜನ್ಮ ಜನ್ಮ ಕೇ ದುಃಖ ಬಿಸರಾವೈ.

ಹೇ ಹನುಮಾನ್, ನಿಮ್ಮ ಭಜನೆ ಮಾಡುವುದರಿಂದ,ಭಕ್ತನು ರಾಮನ ದರ್ಶನ ಪಡೆಯುತ್ತಾನೆ.ಆದ್ದರಿಂದ ಜನ್ಮ ಜನ್ಮಾಂತರದ ದುಃಖಗಳೂ ಸಹ ದೂರವಾಗುತ್ತವೆ.

37.ಅಂತಃಕಾಲ ರಘುಪತಿ ಪುಸಜಾಯೀ ಜಹಾಜನ್ಮಿ ಹರಿಭಕ್ತ ಕಹಲಾಯೀ.

ಹೇ ಪವನನಂದನ, ಅಂತ್ಯ ಕಾಲದಲ್ಲಿಯೂ ನಿಮ್ಮ ಭಜನೆ ಮಾಡಿದ ಪ್ರಾಣಿ ಶ್ರೀ ರಾಮನೆಂಬ ಧಾಮವನ್ನು ಸೇರುವನು.ಎಲ್ಲಿಯೇ ಜನ್ಮ ಪಡೆದರೂ ಹರಿ ಭಕ್ತನನಿಸಿಕೊಳ್ಳುವನು.

38.ಔರದೇವತಾ ಚಿತ್ತ ನ ಧರಯಾ ಹನುಮತ ಸೇಯಿ ಸರ್ವಸುಖ ಕರಯಾ.

ಹೇ ಹಾನುಮಾನ್, ಯಾವ ಭಕ್ತ ಸತ್ಯವಾದ ಭಕ್ತಿಯಿಂದ ನಿಮ್ಮನ್ನು ಭಜಿಸುತ್ತಾನೋ ಅವನು ಎಲ್ಲ ರೀತಿಯ ಸುಖವನ್ನು ಪಡೆಯುತ್ತಾನೆ. ಅವನಿಗೆ ಬೇರೆ ದೇವತೆಗಳ ಪೂಜೆ ಮಾಡುವ ಅವಶ್ಯಕತೆಯಿಲ್ಲ.

39.ಸಂಕಟ ಕಟೈ ಮಿಟೈ ಸಬಪೀರಾ ಜೋ ಸುಮಿರೈ ಹನುಮತ ಬಲಬೀರಾ.

ಯಾವ ವ್ಯಕ್ತಿ ನಿನ್ನ ನಾಮಸ್ಮರಣೆ ಮಾತ್ರದಿಂದ ತನ್ನ ಸಂಕಟದಿಂದ ದೂರವಾಗುವನೋ,ಪೀಡೆ ನಿವಾರಣೆ ಹೊಂದುವನೋ ಅಂತಹ ದೇವನಾದ ಬಲವೀರ ಹನುಮಂತನೇ ಅನುಗ್ರಹಿಸು.

40.ಜೈ ಜೈ ಜೈ ಹನುಮಾನ ಗೋಸಾ ಈ ಕೃಪಾಕರೊ ಗುರುದೇವ ಕೀ ನಾಈ.

ಹೇ ವೀರ ಹಾನುಮಾನ್, ನಿಮಗೆ ಜಯವಾಗಲಿ,ನೀವು ಗುರುವಿನಂತೆ ನನ್ನ ಮೇಲೆ ಕೃಪೆ ತೋರಿರಿ.ನಾನು ಯಾವಾಗಲೂ ನಿಮ್ಮ ಸೇವೇ ಮಾಡುವಂತೆ ಅನುಗ್ರಹಿಸಿರಿ.

41.ಜೋ ಶತಬಾರ ಪಾಠಕರ ಕೋಈ ಚುಟಹಿ ಬಂದಿ ಮಹಾಸುಖ ಹೋ ಈ.

ಯಾವ ವ್ಯಕ್ತಿಯೂ ಶುದ್ಧ ಹೃದಯದಿಂದ ಈ ‘ ಹನುಮಾನ್ ಚಾಲೀಸಾ’ವನ್ನು ನೂರು ಬಾರಿ ಪಠಿಸುತ್ತಾನೋ ಅವನಿಗೆ ಸಂಸಾರ ಬಂಧನ ದೂರವಾಗುವುದು ಮತ್ತು ಪರಮಾನಂದವಾಗುವುದು.

42.ಜೋ ಯಹ ಪಡೈ ಹನುಮಾನ ಚಾಲೀಸಾ ಹೋಯ ಸಿದ್ದಿ ಸಾಖಿ ಗೌರೀಸಾ.

ಯಾರು ಈ ಹಾನುಮಾನ್ ಚಾಲೀಸಾ ಓದುತ್ತಾರೋ ಅವರಿಗೆ ಸಫಲತೆ ಉಂಟಾಗುವುದು.ಭಗವಾನ್ ಶಂಕರನೇ ಈ ವಿಷಯದಲ್ಲಿ ಸಾಕ್ಷಿಯಾಗುವನು.

43.ತುಳಸಿದಾಸ ಸದಾ ಹರೀಚೇರಾ ಕೀ ಜೈನಾಥ ಹೃದಯ ಮಹಾಡೇರ.

ಹೇ ನನ್ನ ಒಡೆಯ ಹನುಮಾನ್,ತುಳಸಿದಾಸ ಸದಾ ರಾಮನ ದಾಸನಾಗಿದ್ದಾನೆ.ಆದುದರಿಂದ ರಾಮಭಕ್ತನಾದ ನೀನು ಸದಾ ತುಳಸಿದಾಸರ ಹೃದಯದಲ್ಲಿರುವೆ.

44.ಪವನ ತನಯ ಸಂಕಟ ಹರಣ ಮಂಗಳ ಮೂರುತಿ ರೂಪ ರಾಮಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ.

ಹೇ ಪವನಪುತ್ರ,ನೀನು ಎಲ್ಲ ಸಂಕಟವನ್ನು ದೂರ ಮಾಡುವನು.ಮಂಗಳ ಮೂರ್ತಿಯಾಗಿರುವೆ.ನೀನು ಶ್ರೀರಾಮ ಸೀತಾ ಲಕ್ಷ್ಮಣರೊಂದಿಗೆ ಸದಾ ನನ್ನ ಹೃದಯದಲ್ಲಿ ನೆ .

***
40 ಪದ್ಯಗಳ ಹನುಮಾನ್‌ ಚಾಲೀಸಾವನ್ನು ಪಠಿಸುವುದ ರಿಂದಾಗುವ ಪ್ರಯೋಜನ

ಹನುಮಾನ್‌ ಚಾಲೀಸವೆಂದರೆ 40 ಪದ್ಯಗಳ ಭಕ್ತಿ ಪ್ರಧಾನ ಹಾಡು. ಅಂಜನೀ ಪುತ್ರನ ಆಶೀರ್ವಾದವನ್ನು ಪಡೆದು ಕೊಳ್ಳಲು ಪ್ರತಿನಿತ್ಯ ಲಕ್ಷಕ್ಕೂ ಹೆಚ್ಚು ಜನರು ಇದನ್ನು ಪಠಸುತ್ತಾರೆ. 

ಹನುಮಾನ್‌ ಚಾಲೀಸಾವನ್ನು ನಾವು ಬೆಳಗ್ಗೆ ಮತ್ತು ಸಂಜೆ ಪಠಿಸಬಹುದು. ಹನುಮಾನ್‌ ಚಾಲೀಸಾ ವನ್ನು ಓದಲು 10 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವಂತಿಲ್ಲ. ಎಲ್ಲಾ 40 ಪದ್ಯಗಳನ್ನು ಎಲ್ಲರಿಗೂ ಓದಲು ಸಾಧ್ಯವಾಗದಿದ್ದರೆ, ತಮ್ಮ ಅಗತ್ಯಗಳಿಗೆ ತಕ್ಕಂತೆ ಕೆಲವು ಪದ್ಯಗಳನ್ನು ಆಯ್ದುಕೊಂಡು ಓದಬಹುದು. 

ಶನಿಯ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ:

ದಂತಕಥೆಗಳ ಪ್ರಕಾರ, ಭಗವಾನ್‌ ಶನಿಯನ್ನು ಶನಿ ಗ್ರಹದ ಅಧಿಪತಿಯೆಂದು ಕರೆಯಲಾಗುತ್ತದೆ. ಬ್ರಹ್ಮಾಂಡವೇ ಶನಿಯನ್ನು ನೋಡಿ ಹೆದರಿದರೆ ಶನಿಯು ಹನುಮಂತನನ್ನು ನೋಡಿ ಹೆದರುತ್ತಾನೆ. ಆದ್ದರಿಂದ ಶನಿ ದೋಷದಿಂದ ಮುಕ್ತರಾಗಲು ಹೆಚ್ಚಾಗಿ ಹನುಮನ ಮಂತ್ರಗಳನ್ನು ಪಠಿಸಬೇಕು. ಹನುಮಾನ್‌ ಚಾಲೀಸಾವನ್ನು ಪಠಿಸುವುದ ರಿಂದ ಸಾಡೇ ಸಾತಿ ಶನಿ ದೋಷದ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು. ಕುಂಡಲಿಯಲ್ಲಿ ಶನಿಯ ದುಷ್ಪರಿಣಾಮವನ್ನು ಎದುರಿಸುತ್ತಿರುವವರು ಶಾಂತಿ ಮತ್ತು ಸಮೃದ್ಧಿಗಾಗಿ ವಿಶೇಷವಾಗಿ ಶನಿವಾರದಂದು ಹನುಮಾನ್‌ ಚಾಲೀಸಾವನ್ನು ಪಠಿಸಬೇಕು.

ದುಷ್ಟ ಶಕ್ತಿಗಳನ್ನು ನಾಶ ಮಾಡುವುದು:

ಭಗವಾನ್‌ ಹನುಮಂತನನ್ನು ದುಷ್ಟ ಶಕ್ತಿಗಳನ್ನು ನಾಶ ಮಾಡುವ ಮತ್ತು ದುಷ್ಟ ಶಕ್ತಿಗಳ ಶಕ್ತಿಗಳನ್ನು ನಾಶಮಾಡುವ ದೇವರು ಎಂದು ಪರಿಗಣಿಸಲಾಗುತ್ತದೆ. ನೀವು ದುಃಸ್ವಪ್ನ ಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಹನುಮಾನ್‌ ಚಾಲೀಸಾ ವನ್ನಿಟ್ಟು ಮಲಗಬೇಕು. ಇದರಿಂದ ರಾತ್ರಿ ಭಯಾನಕ ಕನಸುಗಳು ಬೀಳುವುದಿಲ್ಲ. ಅಷ್ಟು ಮಾತ್ರವಲ್ಲ, ಭಯ ಹುಟ್ಟಿಸುವಂತಹ ಆಲೋಚನೆಗಳನ್ನು ಕೂಡ ದೂರಾಗಿಸು ತ್ತದೆ.

ಸಾಮಾನ್ಯವಾಗಿ ನಾವೆಲ್ಲರೂ ತಿಳಿದೋ ಅಥವಾ ತಿಳಿಯದೋ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಹಿಂದೂ ಧರ್ಮದಲ್ಲಿನ ತತ್ವಗಳ ಪ್ರಕಾರ, ನಾವು ಮಾಡಿದ ಪಾಪಗಳಿಂದಾಗಿ ಜನನ ಮತ್ತು ಮರಣ ಚಕ್ರದಲ್ಲಿ ಸಿಲುಕಿ ಕೊಳ್ಳುತ್ತೇವೆ. 40 ಪದ್ಯಗಳ ಹನುಮಾನ್‌ ಚಾಲೀಸಾದ ಆರಂಭಿಕ ಪದ್ಯಗಳನ್ನು ಓದುವುದರಿಂದ ಹಿಂದಿನ ಜನ್ಮದಲ್ಲಿ ನಾವು ಮಾಡಿದ್ದ ಮತ್ತು ಈ ಜನ್ಮದಲ್ಲಿ ನಾವು ಮಾಡಿದ ಪಾಪಗಳು ಕಳೆಯುತ್ತದೆ.

ಅಡೆತಡೆಗಳು ನಾಶವಾಗುವುದು:

ವಿಘ್ನನಿವಾರಕನಾದ ಗಣೇಶನನ್ನು ಅಡೆತಡೆಗಳಿಂದ ಮುಕ್ತಿ ಹೊಂದಲು ಪೂಜಿಸುವಂತೆ ಹನುಮಂತನನ್ನು ಪೂಜಿಸು ವುದರಿಂದ ಕೂಡ ನಮ್ಮ ಜೀವನದಲ್ಲಿ ಎದುರಾಗಬಹು ದಾದ ಅಡೆತಡೆಗಳು ದೂರಾಗುವುದು. ಯಾವ ವ್ಯಕ್ತಿಯು ಹನುಮಾನ್‌ ಚಾಲೀಸಾವನ್ನು ಸಂಪೂರ್ಣ ಭಕ್ತಿಯಿಂದ ಪಠಿಸುತ್ತಾನೋ ಆ ವ್ಯಕ್ತಿಯು ತನ್ನ ಜೀವನದಲ್ಲಿ ಯಾವುದೇ ಅಡೆತಡೆಗಳನ್ನು, ತೊಂದರೆಗಳನ್ನು ಅನುಭವಿ ಸುವುದಿಲ್ಲ. ಹನುಮಾನ್‌ ಚಾಲೀಸಾವನ್ನು ಪಠಿಸುವುದ ರಿಂದ ಹನುಮನ ದೈವಿಕ ರಕ್ಷಣೆಯು ನಮಗೆ ದೊರೆಯು ವುದು

ಒತ್ತಡವನ್ನು ನಿವಾರಿಸುವುದು:

ಮುಂಜಾನೆ ಎದ್ದಾಕ್ಷಣ ಹನುಮಾನ್‌ ಚಾಲೀಸಾವನ್ನು ಪಠಿಸುವುದರಿಂದ ನಮ್ಮ ಸಂಪೂರ್ಣ ದಿನವು ಸಂತೋಷ ದಾಯಕವಾಗಿರುತ್ತದೆ. ನಿಮ್ಮ ಜೀವನದ ಮೇಲೆ ನೀವು ಸಂಪೂರ್ಣವಾಗಿ ಹಿಡಿತವನ್ನು ಸಾಧಿಸಲು ಇದು ಸಹಕರಿ ಸುತ್ತದೆ. ಹನುಮಾನ್‌ ಚಾಲೀಸಾವನ್ನು ಪಠಿಸಿದ ವ್ಯಕ್ತಿಯು ದೈವಿಕ ಆನಂದವನ್ನು ಅನುಭವಿಸುವನು. ಹನುಮಾನ್‌ ಚಾಲೀಸಾದಿಂದ ನಮ್ಮ ದಿನಾಂತ್ಯವು ಆರಾಮದಾಯಕ ವಾಗಿರುತ್ತದೆ.

ಸುರಕ್ಷಿತ ಪ್ರಯಾಣಕ್ಕೆ:

ಹೆಚ್ಚಾಗಿ ನೀವು ಕಾರುಗಳಲ್ಲಿ, ಬಸ್ಸುಗಳಲ್ಲಿ ಹಾಗೂ ಇನ್ನಿತರ ವಾಹನಗಳಲ್ಲಿ ಹನುಮನ ಚಿತ್ರವನ್ನು ಹಚ್ಚಿರುವುದನ್ನು ಅಥವಾ ಹನುಮನ ಮೂರ್ತಿಯನ್ನು ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿ ಇಟ್ಟಿರುವುದನ್ನು ಅಥವಾ ರಿಯರ್‌ ವ್ಯೂ ಕನ್ನಡಿಗೆ ನೇತು ಹಾಕಿರುವುದನ್ನು ನೋಡಿರಬಹುದು. ಇದು ಕೇವಲ ಅಂದಕ್ಕಾಗಿ ಹಾಕಿರುವುದಲ್ಲ. ಇದನ್ನು ಸುರಕ್ಷುತ ಪ್ರಯಾಣಕ್ಕಾಗಿ ವಾಹನಗಳಲ್ಲಿ ಇಟ್ಟುಕೊಳ್ಳುತ್ತಾರೆ. ಪ್ರಯಾಣದಲ್ಲಿ ಅಪಘಾತವಾಗದಿರಲೆಂದು ವಾಹನದಲ್ಲಿ ಹನುಮನನ್ನು ಇಟ್ಟುಕೊಳ್ಳುತ್ತಾರೆ.

ನಮ್ಮೆಲ್ಲಾ ಆಸೆಗಳು ಈಡೇರುವುದು:

ಹನುಮಾನ್‌ ಚಾಲೀಸಾವನ್ನು ಕೇಳುವುದರಿಂದ ಅಥವಾ ನಾವೇ ಸ್ವತಃ ಓದುವುದರಿಂದ ಊಹಿಸಲು ಸಾಧ್ಯವಿಲ್ಲ ದಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಓರ್ವ ವ್ಯಕ್ತಿಯು 40 ಪದ್ಯಗಳ ಹನುಮಾನ್‌ ಚಾಲೀಸಾವನ್ನು ಶ್ರದ್ಧಾ - ಭಕ್ತಿಯಿಂದ ಪಠಿಸುವುದರಿಂದ ಅವನ ಅಥವಾ ಅವಳ ಮನೋಕಾಮನೆಗಳು ಈಡೇರುವುದು. ನಮ್ಮೆಲ್ಲಾ ಆಸೆಗಳು ಹನುಮಾನ್‌ ಚಾಲೀಸಾ ಓದುವುದರಿಂದ ಈಡೇರುವುದು. ಹನುಮಾನ್‌ ಚಾಲೀಸಾವನ್ನು ನಿಯಮಿತ ವಾಗಿ ಪಠಿಸಿದರೆ ಹನುಮಂತನ ಆಶೀರ್ವಾದ ದೊರೆಯು ವುದು ಮತ್ತು ಆತನ ಅದ್ಭುತ ಶಕ್ತಿ ನಿಮಗೂ ಸಿಗುವುದು.

ಬುದ್ದಿವಂತಿಕೆ ಮತ್ತು ಶಕ್ತಿ ಪಡೆಯಲು:

ಹನುಮಾನ್‌ ಚಾಲೀಸಾವನ್ನು ಪಠಿಸುವುದರಿಂದ ನಮ್ಮ ಸುತ್ತಲೂ ಸಕಾರಾತ್ಮಕ ಶಕ್ತಿಗಳು ನೆಲೆಯಾಗುತ್ತದೆ. ಇದರಿಂದ ದಿನಪೂರ್ತಿ ನಾವು ಉತ್ಸುಕರಾಗಿರಬಹುದು. ಹನುಮಾನ್‌ ಚಾಲೀಸಾದ ಪಠಣೆಯಿಂದ ನಮ್ಮಲ್ಲಿನ ಸೋಮಾರಿತನ ಮತ್ತು ಆಲಸ್ಯ ನಿವಾರಣೆಯಾಗುವುದು. ಹಾಗೂ ಹನುಮಾನ್‌ ಚಾಲೀಸಾವು ವ್ಯಕ್ತಿಯ ತಲೆನೋವು, ನಿದ್ರಾಹೀನತೆ, ಆತಂಕ, ಖಿನ್ನತೆ ಸೇರಿದಂತೆ ಇನ್ನಿತರ ಆರೋಗ್ಯದ ಸಮಸ್ಯೆಗಳನ್ನು ದೂರಾಗಿಸುತ್ತದೆ.

​ದೈವಿಕ ಆಧ್ಯಾತ್ಮಿಕ ಜ್ಞಾನ ಪಡೆಯಲು:

ಹನುಮಾನ್‌ ಚಾಲೀಸಾವನ್ನು ಓದುವ ಭಕ್ತನು ದೈವಿಕ ಆಧ್ಯಾತ್ಮಿಕ ಜ್ಞಾನವನ್ನು ಸಂಪಾದಿಸುವನು. ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗುವ ಪ್ರತಿಯೊಬ್ಬ ವ್ಯಕ್ತಿಗೂ ಹನುಮಾನ್‌ ಚಾಲೀಸಾ ಸರಿಯಾದ ಮಾರ್ಗವನ್ನು ಸೂಚಿಸುವುದು. ಆಧ್ಯಾತ್ಮಕ ಮನೋಭಾವವನ್ನು ಹೊಂದಿರುವವರಿಗೆ ತಮ್ಮ ಮನಸ್ಸಿನ ಮೇಲೆ ತಾವೇ ಹಿಡಿತ ಸಾಧಿಸಲು ಇದು ಸಹಕಾರಿ

​ಸಕಾರಾತ್ಮಕತೆಯನ್ನು ಹೆಚ್ಚಿಸುವುದು:

ಯಾವ ವ್ಯಕ್ತಿಯು ಹನುಮಾನ್‌ ಚಾಲೀಸಾವನ್ನು ಪಠಿಸುತ್ತಾನೋ ಆ ವ್ಯಕ್ತಿಯು ದುರ್ಜನರಿಂದ ದೂರಿರು ತ್ತಾನೆ. ಕೆಟ್ಟ ಜನರ ಸಹವಾಸವನ್ನು ಬಿಡಲು ನಾವು ಹನುಮಾನ್‌ ಚಾಲೀಸಾವನ್ನು ಪಠಿಸಬೇಕು. ಹಾಗೂ ಗುಲಾಮರಂತೆ ಇನ್ನೊಬ್ಬರಿಗಾಗಿ ಕೆಲಸ ಮಾಡುವುದನ್ನು ಕೂಡ ಹನುಮಾನ್‌ ಚಾಲೀಸಾ ಪಠಣೆಯಿಂದ ನಿವಾರಿಸಿ ಕೊಳ್ಳಬಹುದು. ಇನ್ನೊಬ್ಬರ ಅಡಿಯಾಳಾಗಿ ದುಡಿಯುವ ಅವಶ್ಯಕತೆ ನಿಮ್ಮಿಂದ ಮಾಯವಾಗುತ್ತದೆ. ಹನುಮಾನ್‌ ಚಾಲೀಸಾವನ್ನು ಯಾವ ವ್ಯಕ್ತಿ ಪಠಿಸುತ್ತಾನೋ ಆ ವ್ಯಕ್ತಯು ತನ್ನಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೊಂದುತ್ತಾನೆ. ಸಕಾರಾತ್ಮಕತೆಯ ಬಲವನ್ನು ಹೆಚ್ಚಾಗುತ್ತದೆ.

ಏಕತೆಯನ್ನು ಉತ್ತೇಜಿಸುವುದು:

ಪ್ರತಿದಿನ ಹನುಮಾನ್‌ ಚಾಲೀಸಾವನ್ನು ಶ್ರದ್ಧಾ - ಭಕ್ತಿ ಯಿಂದ ಪಠಿಸುವುದರಿಂದ ಕುಟುಂಬದಲ್ಲಿನ ಎಲ್ಲಾ ಸಮಸ್ಯೆಗಳು ದೂರಾಗುವುದು, ಕುಟುಂಬದ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ನಾಶವಾಗುವುದು, ವಾದ - ವಿವಾದಗಳು ದೂರಾಗುವುದು. ಹಾಗೂ ಜೀವನದಲ್ಲಿ ಏಕತೆ, ಸಂತೋಷ, ಸಮೃದ್ಧಿ, ಶಾಂತಿ ಮತ್ತು ಸಂತೋಷ ನೆಲೆಯಾಗುವುದು. ಇದು ಕುಟುಂಬದಲ್ಲಿನ ನಕಾರಾತ್ಮ ಕತೆಯನ್ನು ತೆಗೆದುಹಾಕುತ್ತದೆ ಮತ್ತು ಸಂಬಂಧಗಳ ನಡುವೆ ಸಾಮರಸ್ಯವನ್ನು ಹೆಚ್ಚಿಸುತ್ತದೆ

​ನಕಾರಾತ್ಮಕ ಶಕ್ತಿಗಳು ದೂರಾಗುವುದು:

40 ಪದ್ಯಗಳ ಹನುಮಾನ್‌ ಚಾಲೀಸಾದ ಒಂದು ಪದ್ಯದಲ್ಲಿ - "ಭೂತ ಪಿಶಾಚ ನಿಕಟ ನಹಿ ಆವೇನ್‌, ಮಹಾವೀರ ಜಬ್‌ ನಾಮ ಸುನಾವೆ" ಎಂದು ಹೇಳಲಾಗಿದೆ. ಇದನ್ನು ಪ್ರತಿನಿತ್ಯ ಪಠಿಸುವುದರಿಂದ ನಕಾರಾತ್ಮಕ ಶಕ್ತಿಗಳು ನಮ್ಮಿಂದ ದೂರಾಗುತ್ತದೆ. ಇದು ದುಷ್ಟಶಕ್ತಿಯನ್ನು ನಮ್ಮ ಬಳಿ ಸುಳಿಯಲು ಕೂಡ ಬಿಡುವುದಿಲ್ಲ. ಕುಟುಂಬದ ಸದಸ್ಯರ ಮನಸ್ಸು ಮತ್ತು ಆತ್ಮದಲ್ಲಿನ ಎಲ್ಲಾ ನಕಾರಾತ್ಮಕ ಭಾವನೆ ಯನ್ನು, ಶಕ್ತಿಯನ್ನು ಹೋಗಲಾಡಿಸಿ. ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯ ತರುತ್ತದೆ.
******

ಹನುಮಾನ್ ಚಾಲೀಸ್ ಮಹತ್ವ ಹಾಗು ಅಖಂಡ ಶಕ್ತಿಯ ಬಗ್ಗೆ ನಿಮಗೆ ಗೊತ್ತಾ..!!
ಹನುಮಾನ್ ಚಾಲೀಸವು ಮಹಾಸ್ವಾಮೀ ಗೋಸ್ವಾಮಿ ತುಳಸಿದಾಸರ ಒಂದು ಮಹಾನ್ ಕಾವ್ಯಾತ್ಮಕ ಸಂಯೋಜನೆ ತುಳಸಿದಾಸರನ್ನು ವಾಲ್ಮೀಕಿ ಮಹರ್ಷಿಯ ಅವತಾರವೆಂದು ಹೇಳಲಾಗುತ್ತದೆ ಹರಿದ್ವಾರದಲ್ಲಿ ಕುಂಭಮೇಳ ನಡೆಯುವ ಸಂಧರ್ಭದಲ್ಲಿ ತುಳಸಿದಾಸರು ಸಮಾಧಿ ಸ್ಥಿತಿಯಲ್ಲಿ ಹನುಮಾನ್ ಚಾಲೀಸವನ್ನು ರಚಿಸಿದರೆಂದು ಹೇಳಲಾಗುತ್ತದೆ ಚಾಲೀಸ ಎಂದರೆ 40, ಹನುಮಾನ್ ಚಾಲೀಸದಲ್ಲಿ 40 ಪದ್ಯಗಳ ಮೂಲಕ ಹನುಮಂತನನ್ನು ವರ್ಣಿಸಲಾಗಿದೆ.

ತುಳಸಿದಾಸರು ಹೇಳುವಂತೆ ಹನುಮಾನ್ ಚಾಲೀಸವನ್ನು ಪಠಿಸುವವರೆಲ್ಲರಿಗೂ ಹನುಮಂತನ ಅನಂತ ಅನುಗ್ರಹ ಪ್ರಾಪ್ತಿಯಾಗುತ್ತದೆ, ಹನುಮಾನ್ ಚಾಲೀಸವನ್ನು ಪಠಿಸಲು ವಿಶೇಷವಾದ ಕಾರಣಗಳಿವೆ ಹನುಮಾನ್ ಚಾಲೀಸದ 40 ಪದ್ಯಗಳನ್ನು 40 ದಿನಗಳು ನಿರಂತರವಾಗಿ ಪಠಿಸಿದರೆ ನಮ್ಮ ಒಂದು ಪ್ರಾರ್ಥನೆಗೆ ಉತ್ತರ ಸಿಗುತ್ತದೆ ಮತ್ತು ಅಪಾರ ಪುಣ್ಯ ಸಿಗುತ್ತದೆ ದಿವ್ಯವಾದ ಹನುಮಾನ್ ಚಾಲೀಸವು ಬಹಳ ಶಕ್ತಿಶಾಲಿಯಾಗಿದೆ.

ಜ್ಯೋತಿಶ್ಶಾಸ್ತ್ರದ ಪ್ರಾಮುಖ್ಯತೆ : ಜ್ಯೋತಿಷ್ಯದ ಪ್ರಕಾರ ಕಂಡ ಅಂಶವೆಂದರೆ, ಶನಿಗ್ರಹದ ಗೊಚಾರದ, ಸಣ್ಣ ಮತ್ತು ದೊಡ್ಡ ಅವಧಿಗಳ ಕೆಟ್ಟ ಪರಿಣಾಮಗಳನ್ನು ನಿಯಂತ್ರಿಸುವಲ್ಲಿ ತೀವ್ರ ಪರಿಣಾಮಕಾರಿಯಾಗಿದೆ ಶನಿಗ್ರಹದ ಋಣಾತ್ಮಕ ಪ್ರಭಾವದಿಂದ ಬಳಲುತ್ತಿರುವವರು ಹನುಮಾನ್ ಚಾಲೀಸವನ್ನು ಪ್ರತೀ ಶನಿವಾರ 8 ಬಾರಿ ಪಠಿಸುವುದರಿಂದ ಉತ್ತಮ ಪರಿಹಾರ ಮತ್ತು ಲಾಭವಾಗುತ್ತದೆ ಮಂಗಳನ ದೋಷ ಅಥವಾ ಕುಜ ದೋಷವಿರುವವರು ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು ಮಂಗಳನ ಧನಾತ್ಮಕ ಗುಣಗಳಾದ ಶಕ್ತಿ, ಧೈರ್ಯ, ಸಾಹಸ ಮತ್ತು ಅದಮ್ಯ ಚೇತನಗಳನ್ನು ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಪಡೆಯಬಹುದು.

ಶನಿ ಮತ್ತು ಮಂಗಳಗ್ರಹದ ಕ್ಲೇಶವಿದ್ದಾಗ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಧನಾತ್ಮಕ ಪರಿಣಾಮ ಉಂಟಾಗುತ್ತದೆ, ನಿರ್ದಿಷ್ಟ ಶ್ಲೋಕಗಳ ಪಠಣದಿಂದ ನಿರ್ದಿಷ್ಟ ಫಲಿತಾಂಶಗಳು ದೊರೆಯುತ್ತವೆ ಇದನ್ನು ಬೆಳಿಗ್ಗೆ ಅಥವಾ ಸಂಜೆ ಪಠಿಸಬಹುದು ಈ ಸುಂದರವಾದ ಶ್ಲೋಕಗಳನ್ನು ಪಠಿಸಲು ಗರಿಷ್ಠ 10 ನಿಮಿಷಗಳು ಬೇಕಾಗಬಹುದು, ಪ್ರತಿ ಪದ್ಯ ಅಥವಾ ಚೌಪಾಯಿಯು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ, ಎಲ್ಲಾ 40 ಪದ್ಯಗಳನ್ನು ಓದಲು ಆಗದವರು ತಮ್ಮ ಅಗತ್ಯಕ್ಕೆ ಸರಿಯಾದ ಕೆಲವು ಪದ್ಯಗಳನ್ನು ಮಾತ್ರ ಓದಬಹುದು ಅವುಗಳ ಮಹತ್ವ ಹೀಗಿದೆ.

ದುಷ್ಕರ್ಮಗಳನ್ನು ತೆಗೆಯಲು – ಮೊದಲ ಆರಂಭದ ಪದ್ಯ.

ಬುದ್ದಿವಂತಿಕೆ ಮತ್ತು ಶಕ್ತಿ – ಎರಡನೇ ಆರಂಭದ ಪದ್ಯ.

ದೈವಿಕ ಜ್ಞಾನವನ್ನು ಹೊಂದಲು – ಮೊದಲ ಪದ್ಯ.

ಕೆಟ್ಟವರ ಸಂಗ ಮತ್ತು ಕೆಟ್ಟ ಅಭ್ಯಾಸಗಳಿಂದ ಮುಕ್ತಿ – 3ನೇ ಪದ್ಯ.

ಭಕ್ತಿ ಭಾವ ತುಂಬಲು – 7 ಮತ್ತು 8ನೇ ಪದ್ಯ.

ವಿಷ ಮತ್ತು ಹಾವಿನ ಕಡಿತದಿಂದ ರಕ್ಷಣೆ – 11ನೇ ಪದ್ಯ.

ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ನಡುವೆ ಮನಸ್ತಾಪ ತೆಗೆದುಹಾಕಲು – 12ನೇ ಪದ್ಯ.

ಖ್ಯಾತಿ ಪಡೆಯಲು – 13, 15ನೇ ಪದ್ಯಗಳು.

ಕಳೆದುಹೋದ ಸ್ಥಿತಿಗತಿಯನ್ನು ಮರಳಿ ಪಡೆಯಲು, 
ಉದ್ಯೋಗದಲ್ಲಿ ಬಡ್ತಿ – 16, 17ನೇ ಪದ್ಯಗಳು.

ಅಡೆತಡೆಗಳನ್ನು ತೆಗೆದುಹಾಕಲು, ಕಷ್ಟಕರ ಕಾರ್ಯವೆಸಗಲು – 20ನೇ ಪದ್ಯ.

ಗ್ರಹಗಳ ಪ್ರತಿಕೂಲ ಪರಿಣಾಮಗಳಿಂದ ರಕ್ಷಣೆ – 22ನೇ ಪದ್ಯ.

ಮಾಂತ್ರಿಕ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆ – 24ನೇ ಪದ್ಯ.

ಉತ್ತಮ ಆರೋಗ್ಯಕ್ಕಾಗಿ – 25ನೇ ಪದ್ಯ.

ಬಿಕ್ಕಟ್ಟಿನಿಂದ ವಿಮೋಚನೆಗಾಗಿ – 26ನೇ ಪದ್ಯ.

ಆಸೆಗಳ ಈಡೇರಿಕೆಗೆ – 27, 28ನೇ ಪದ್ಯಗಳು.

ಶತ್ರುಗಳ ಮೇಲೆ ವಿಜಯವನ್ನು ಪಡೆಯಲು – 30ನೇ ಪದ್ಯ.

ಅತೀಂದ್ರಿಯ ಶಕ್ತಿಗಳು ಮತ್ತು ಸಂಪತ್ತು – 31ನೇ ಪದ್ಯ.

ನೈತಿಕತೆಯಿಂದ ಇರಲು ಮತ್ತು ಪೂರ್ಣತೆಯ ಜೀವನವನ್ನು ನಡೆಸಲು – 32ರಿಂದ 35ನೇ ಪದ್ಯ.

ಮಾನಸಿಕ ಶಾಂತಿಗಾಗಿ – 36ನೇ ಪದ್ಯ.

ಹನುಮನ ಕೃಪೆಗಾಗಿ – 37ನೇ ಪದ್ಯ.

ಹನುಮಾನ್ ಚಾಲೀಸಾವನ್ನು ಓದುವುದರ ಪ್ರಯೋಜನಗಳು : ಇದು ದೇಹ ಮತ್ತು ಮನಸ್ಸು ಎರಡರ ಮೇಲೆ ಶುದ್ಧೀಕರಿಸುವ ಪರಿಣಾಮವನ್ನು ಹೊಂದಿದೆ ಮತ್ತು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುತ್ತದೆ, ಇದು ಜೀವನದಲ್ಲಿ ಎಲ್ಲಾ ಅಪಾಯಗಳಿಂದ ಪಾರುಮಾಡುತ್ತದೆ ಮತ್ತು ಆಧ್ಯಾತ್ಮಿಕ ಜ್ಞಾನ ಗಳಿಕೆಗೆ ಸಹಾಯ ಮಾಡುತ್ತದೆ ಮತ್ತು ಜೀವನದಲ್ಲಿ ವಿಶ್ವಾಸ ಹೆಚ್ಚುತ್ತದೆ, ಉದ್ಯೋಗ ಸಂದರ್ಶನಗಳಿಗೆ ಹೋಗುವಾಗ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

ಕಾನೂನು ಅವ್ಯವಸ್ಥೆ, ದಾವೆ ಮತ್ತು ಬ೦ಧನಗಳಿಂದ ಮುಕ್ತಿ ಪಡೆಯಲು ಹನುಮಾನ್ ಚಾಲೀಸವನ್ನು 100 ಬಾರಿ ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು, ಹೆಚ್ಚು ಅರ್ಥಪೂರ್ಣವಾಗಿ, ಹನುಮಾನ್ ಚಾಲೀಸವನ್ನು ರಾತ್ರಿ ಪಠಿಸುವುದರಿಂದ ಇದು ಜನರ ಜೀವನದಿಂದ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುತ್ತದೆ ಮತ್ತು ತಿಳಿದೂ / ತಿಳಿಯದೆಯೋ ಮಾಡಿದ ಪಾಪಗಳನ್ನು ತೆಗೆದುಹಾಕುತ್ತದೆ, ಮಹಾನ್ ಕಾರ್ಯಗಳನ್ನು ಸಾಧಿಸಬೇಕಾಗಿರುವವರು ಮಂಗಳವಾರ, ಗುರುವಾರ ಮತ್ತು ಶನಿವಾರದ ಮಂಗಳಕರ ರಾತ್ರಿ ಅಥವಾ ಮೂಲಾ ನಕ್ಷತ್ರದ ದಿನ ಹನುಮಾನ್ ಚಾಲೀಸವನ್ನು 1008 ಬಾರಿ ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು, ರಾತ್ರಿ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಉತ್ತಮ ಜೀವನದ ಎಲ್ಲಾ ಅಡೆತಡೆಗಳನ್ನು ತೆಗೆದು ಕಾಣಿಸುತ್ತದೆ ಮತ್ತು ಹನುಮಂತನ ರಕ್ಷಣೆ ಮತ್ತು ಕೃಪೆಗೆ ಪಾತ್ರರಾಗುತ್ತಾರೆ.
ಸಂಗ್ರಹ : ಜಯಂತಿ ನಾರಾಯಣ 

********


video of Madonna singing hanuman chalisa - poor 
दोहा Doha
श्री गुरु चरण सरोज रज नीज मन मुकरा सुधार, Shree Guru Charana Saroj Raja Nij Man Mukura Sudhari,
अरानाओं रघुवर विमला यशो जो दयाका पहला चारी, Barnau Raghuvar Bimal Jasu, Jo dhayak Phal Chari,
बूढी हीन तनु जानिके सुमिरौ पवन कुमार, Budhi heen tanu janike sumiro pavan kumar,
बल बूढी विद्या देहु मोंही हरहु कलेस विकार, Bal Buddhi Vidya Dehu Mohi, harahu kalesh vikaar
चालीसा Chalisa
जाया हनुमान गयान गुन सागर, Jai Hanuman Gyan Gun Sagar,
जाया कपीस तिहूँ लोक उजागर, Jai Kapis Tihun Lok Ujagar,
राम दूत अतुलिउट बल धामा, Ramdoot Atulit Bal Dhaamaa,
अनजानी - पुत्र पवन सुता नामा, Anjani Putra Pavansut naamaa,
महावीर विक्रम बजरंगी, Mahabir Bikram Bajrangi,
कुमति निवारा सुमति के संगी, Kumati Nivaar Sumati Ke Sangi,
कंचना वरना वीराजा सुवेसा , Kanchan Baran Biraaj Subesaa,
कनाना कुण्डला कुंचित केसा, Kanan kundal kunchit kesa,
हाथ वज्र अरु ध्वजा विराजे, Haath Bajra Aur Dhvaja Birajey,
कंधे मूंज जनेवु साजे, Kandhe Moonj Janeu saaje.
संकरा सुवना केसरी नंदन, Shankar Suvan Kesari Nandan,
तेजा प्रताप महा जग बंदन, Tej Pratap Maha Jag Vandan.
विद्यावान गुनी अति चातुर, Vidyavaan Guni Ati Chatur,
राम कजा करिबे को आतुर, Ram Kaj Karibe Ko Atur,
प्रभु चरित्र सुनिबे को रसिया, Prabhu Charittra Sunibe Ko Rasiya,
राम लखना सीता माना बसिया, Ram Lakhan Sita man basyia,
सुक्ष्म रूपा धरी सियाही दिखावा, Sukshma roop Dhari Siyanhi Dikhawa,
विकता रूपा धरी लंका जरावा, Bikat roop Dhari Lank Jarawa,
भीमा रूपा धरी असुर संहारे Bhim roop dhari asur sanhare,
रामचंद्र के कजा सवारे, Ramchandrajee Ke kaaj Savare,
लाया सजीवन लखना जियाये, Laye Sanjivan Lakhan Jiyaye,
श्री रघुवीर हरषी उर लाये, Shri Raghubir harashi ur laye,
रघुपति किन्ही बहुत बडाई, Raghupati Kinhi Bahut Badaai,
कहा भरता समां तुम प्रिया भाई, Tum Mum Priya Bharat Sam Bhai.
सहस वदन तुम्हारो यश गावे, Sahastra Badan Tumharo Jas Gaave,
अस कही श्रीपति कंठ लगावे, Asa kahi Shripati Kanth Laagave.
सनाकादिका ब्रह्मादी मुनीष, Sankadik Brahmadi Muneesa,
नारद सरदा सहित अहीसा, Narad Sarad Sahit Aheesa.’
यामा कुबेर दिगपाला जहाँ त,े Jam Kuber Digpal Jahan Te,
कवि कोविद कही सके कहाँ ते, Kabi Kabid Kahin Sake Kahan Te,
तुम उपकार सुग्रीविएना कीन्हा, Tum Upkar Sugrivahi Keenha,
राम मिलाये राजपद दीन्हा, Ram Milaye Rajpad Deenha,
तुम्हारो मंत्र विभीशाना माना, Tumharo Mantro Bibhishan Maana,
लंकेश्वर भये सबा जगा जन, Lankeshwar Bhaye Sab Jag Jaana,
युग सहस्र योजन पर भानु, Juug Sahastra Jojan Par Bhaanu,
लील्यो ताहि मधुरा फल जानू, Leelyo Taahi Madhur Phal Jaanu,
प्रभु मुद्रिका मेली मुख माहि, Prabhu Mudrika Meli Mukha Maaheen,
जलधि लांघी गए अचरज नही, Jaladhi Langhi Gaye Acharaj Naaheen,
दुर्गम काज जगत के जेते, Durgam Kaaj Jagat Ke Jete,
सुगम अनुग्रह तुम्हारे तेते, Sugam Anugrah Tumhre Tete,
राम दुलारे तुम रखवारे, Ram Duware Tum Rakhavare,
होत आग्न्य पिनु पैथारे, Hot Na Aagya Bin Paisare,
सब सुख लहै तुम्हारी शरण, Sab Sukh Lahen Tumhari Sarna,
तुम रक्षक कहू को डरा न, Tum Rakshak Kaahu Ko Dar naa,
आपना तेजा तुम्हारो आपे, Aapan Tej Samharo Aapei,
तीनो लोक हांका ते कम्पी, Tenau Lok Hank Te Kanpei.
भूत पिसाचा निकट नहीं आव,ेBhoot Pisaach Nikat Nahi Ave,
महाबीर जब नाम सुनावे, Mahabir Jab Naam Sunavei,
नसे रोग हरे सब पीरा, Nasei Rog Hare Sab Peera,
जपत निरंतर हनुमत बीरा, Japat Niranter Hanumant Beera,
संकट से हनुमान चुदवेय, Sankat Te Hanuman Chhudavei,
मन क्रम वचना ध्यान जो लाव,े Man Kram Bachan Dhyan Jo Lavei,
सब पर नामा तपस्वी रजा, Sub Par Ram Tapasvee Raaja,
तीन के कजा सकला तुम सजा, Tinke Kaaj Sakal Tum Saaja,
और मनोरथ जो कोई लावे, Aur Manorath Jo Koi Lave,
तासु अमिता जीवन हल पवई, Soi Amit Jivan Phal Pave.
चारों युग परताप तुम्हारा, Charo Juug Partap Tumhara,
है पारा सीधा जगाता उजियारा, Hai Parsiddha Jagat Ujiyara.
साधू संत के तुम रखवारे, Sadho Sant Ke Tum Rakhvare,
असुर निकंदाना राम दुल्हरे, Asur Nikandan Ram Dulare,
अष्ट सीधी नौ निधि के डाटा, Ashta Siddhi Nau Nidhi Ke Data,
असा वारा दीं जानकी माता, Asa Bar Din Janki Mata,
राम रसायन तुम्हारे पासा, Ram Rasayan Tumhare Pasa,
सादर तुम रघुपति के दस, Sadaa Raho Raghupati Ke Dasa,
तुम्हारे भजन राम को भावी, Tumhare Bhajan Ramko Pavei,
जन्मा जन्मा के दुख बीस रवी, Janam Janam Ke Dukh Bisravei,>
अन्ता काला रघुपति पुरा जाई, Anta Kaal Raghubar Pur Jai,
जहाँ जन्मा हरी - भक्तअ कहाई, Jahan Janma Hari Bhakta Kahai,
और देवता चिट्टा न धरई, Aur Devata Chitt Na Dharai,
हनुमता से यी सर्व सुखा करायी, Hanumant Sei Sarva Sukh Karai,
संकट कटे मिटे सब पीरा, Sankat Kate Mitey Sab Peera,
जो सुमिरि हनुमंत बल्बीरा , Jo Sumirei Hanumant Balbeera,
जय जय जय हनुमान गोसाई, Jai Jai Jai Hanuman Gosai,
कृपा करहु गुरुदेव की नीई, Kripa Karahu Gurudev Ki Naiee,
जो सत् बार पाठ कर कोई, Jo Sat Baar Paath Kar Koi,
छुतही बंदी महा सुख होई , Chhutahi Bandi Maha Sukh Hoi.
जो यह पढ़े हनुमान चालीसा , Jo Yah Padhe Hanuman Chalisa,
होय सिद्धइ सखी गौरीसा , Hoy Siddhi Sakhi Gaurisa,
तुलसीदास सदा हरी चेरा , Tulsidas Sada Hari Chera,
कीजे नाथ ह्रदय माह डेरा .Keeje Nath Hriday Mah Dera.
दोहा Doha
पवन तनया संकट हरन मंगला मूर्ति रूपा, Pavan Tanay Sankat Haran , Mangal Murti Roop.
राम लखन सीता सहित हृदय बसहु सुरभूप, Ram Lakhan Sita Sahit, Hriday Basahu Sur Bhoop.

***
in kannada translated version

1 ಶ್ರೀ ಗುರುವೇ ನಿನ್ನಡಿಯದೂಳಿನಲ್ಲಿ ತಲೆಯಿಟ್ಟು!
2 ಮನವೆಂಬ ಕನ್ನಡಿಯ ಒರೆಸಿ ಶುಚಿ ಮಾಡಿಟ್ಟು!
3 ರಘುವರನ ಮಹಿಮೆಯನು ಬಣ್ಣಿಸುತ ಹಾಡುವೆನು!.
4 ಚತುರ್ವಿಧ ಫಲದಾತ ಶ್ರೀ ರಾಮನ ಯಶೋಗಾನವನು!.
5 ಬುದ್ದಿ ಹೀನ ನಾನೆಂದು ತಿಳಿದು ಸ್ಮರಿಸುವೆ ಪವನ ಕುಮಾರ!
6 ಬಲ ಬುದ್ದಿ ವಿದ್ಯೆಗಳನಿತ್ತು ಕ್ಲೇಶವ ಕಳೆಯೋ ಎಲೆಧೀರ!.
7 ಜಯ ಹನುಮಂತನ ಜ್ಞಾನ ಸಾಗರನೆ!.
8 ಜಯ ಕಪೀಶ ಮುಲೋಕ ಪ್ರಕಾಶನೆ!
9 ರಾಮ ದೂತ ಆತುಲಿತ ಬಲವಂತ!
10 ಅಂಜನಿ ಪುತ್ರನೆ ಹೇ ಪವನಸುತ!
11 ಮಹಾ ವೀರ ವಿಕ್ರಮ ವರ ವಜ್ರಾoಗ ಬಲಿ!.
12 ಕುಮತಿ ನಿವಾರಿಸು ಸುಮತಿಯ ನೀಡುತಲಿ!.
13 ಚಿನ್ನದ ಬಣ್ಣವ ಹೊಂದಿಹ ವೇಶ!.
14 ಕರ್ಣ ಕುಂಡಲವು ಗುಂಗುರು ಕೇಶ!.
15 ಹಸ್ತದಿ ಧ್ವಜ ವಜ್ರವು ಕಂಗೊಳಿಸಿದೆ !.
16 ಹೆಗಲಲಿ ಹುಲ್ಲಿನ ಜನಿವಾರವಿದೆ!.
17 ಶಂಕರ ರೂಪನೆ ಕೇಸರಿ ಸುತನೆ!.
18 ತೇಜ ಪ್ರತಾಪನೆ ಜಗ ವಂದಿತನೆ!.
19 ವಿದ್ಯಾವಂತನು ನೀ ಅತಿ ಚತುರ!.
20 ರಾಮ ಕಾರ್ಯ ನೆರವೇರಿಪ ಆತುರ!.
21 ಪ್ರಭುವಿನ ಚರಿತೆಯ ಆಲಿಪ ರಸಿಕನೆ!.
22 ಸೀತಾರಾಮರ ಮನದಿ ವಾಸಿಪನೆ!.
23 ಸೂಕ್ಷ್ಮ ರೂಪವನು ಸೀತೆಗೆ ತೋರಿದೆ!.
24 ವಿಕಟ ವೇಷದಲಿ ಲಂಕೆಯ ಜ್ವಲಿಸಿದೆ!.
25 ಭೀಮ ರೂಪದಲಿ ಅಸುರರ ಕೊಂದೆ!.
26 ರಾಮನ ಕಾರ್ಯವ ನೆಡೆಸುತ ನಿಂದೆ!.
27 ಸಂಜೀವಿನಿ ತರಲು ಲಕ್ಷ್ಮಣ ಬದುಕಿದ!.
28 ರಾಮನು ಮುದದಲಿ ನಿನ್ನನು ಅಪ್ಪಿದ!.
29 ರಘುಪತಿ ನಿನ್ನನು ಬಹು ಕೊಂಡಾಡಿದ!.
30 ಅನುಜ ಭರತನಿಗೆ ಹೋಲಿಸಿ ನಲಿದ!.
31 ಸಹಸ್ರ ಮುಖಗಳು ನಿನ್ನ ನು ಹೊಗಳಲಿ!.
32 ಎಂದನು ಶ್ರೀಪತಿ ಅಲಂಗಿಸುತಲಿ!.
33 ಸನಕ ಬ್ರಹ್ಮದಿ ಮುನಿವರ್ಯರು!.
34 ಶೇಷ ಸಹಿತ ನಾರದ ಶಾರದೆಯರು!.
35 ಯಮ ಕುಬೇರ ದಿಕ್ಪಾಲಕ ಜನರು!.
36 ಕವಿ ಕೋವಿದರೂ ಹೊಗಳಲು ಸೋತರು!.
37 ನಿನ್ನ ಉಪಕಾರವು ಸುಗ್ರೀವ ನಿಗಾಯಿತು!.
38 ರಾಮನ ಮಿಲನವು ರಾಜ್ಯವ ತಂದಿತು!.
39 ಸಲಹೆಯ ಪಡೆಯೆ ವಿಭೀಷಣ ನಿನ್ನನು!.
40 ಜಗವರಿಯಿತು ಲಂಕಾ ಪತಿಯಾದುದನು!.
41 ರವಿಯಿರೆ ಸಹಸ್ರ ಯೋಜನ ದೊರದೆ!.
42 ಮಧುರ ಫಲ ವೆಂದು ತಿನ್ನಲು ಹೋದೆ!.
43 ಪ್ರಭುವಿನ ಮುದ್ರಿಕೆ ಬಾಯಲಿ ಹಿಡಿದೆ!.
44 ಜಲಧಿ ಲಂಘಿಸಿದೆ ನೀ ಛಲ ಬಿಡದೆ!.
45 ಕಷ್ಟದ ಕಾರ್ಯಗಳೆಲ್ಲವು ಸುಲಭ!.
46 ನಿನ್ನ ಅನುಗ್ರಹ ವಿಲ್ಲದೆ ದುರ್ಲಭ!.
47 ಪಾಲಕ ನೀನಿರೆ ರಾಮನ ದ್ವಾರದಿ!.
48 ಪ್ರವೇಶ ನೀಡುವೆ ಒಪ್ಪುತ ಭರದಿ!.
49 ನಿನ್ನಲಿ ಶರಣಾದವರಿಗೆ ಸುಖವು!.
50 ರಕ್ಷಕ ನೀನಿರಲೇತಕೆ ಭಯವು!.
51 ನೀನೇ ಸಮಾನ ನಿನ್ನಯ ತೇಜಕೆ!.
52 ಕಂಪಿಸದೇ ಮೂ ಲೋಕವು ಅದಕೆ!.
53 ಹನುಮನ ನಾಮವು ತಾರಕವೂ!.
54 ಭೂತ ಪಿಚಾಚಿ ಗೆ ಮಾರಕವು.
55 ನಶಿಸಿ ರೋಗವನು ಪೀಡೆಯ ಕಳೆವನು!.
56 ಜಪಿಸು ನಿರಂತರ ವೀರ ಹನುಮನನು!.
57 ಸಂಕಟ ಕಳೆವನು ಹನುಮನು ಸಹನಾ!.
58 ಭಜಿಪರ ಕಾಯಾ ವಾಚಾ ಮನಸಾ!.
59 ರಾಜ ಖುಷಿಯು ಶ್ರೀ ರಾಮನು ತಾನು!.
60 ಅವನ ಕಾರ್ಯಗಳ ಮಾಡುವೆ ನೀನು!.
61 ಭಕ್ತರ ಬಯಕೆಗಳೇನೇ ಇರಲಿ!.
62 ಕೃಪೆ ನೀ ತೋರಲು ಫಲಿತ ವಾಗಲಿ!.
63 ನಾಲ್ಕು ಯುಗಗಳು ನಿನ್ನ ಪ್ರತಾಪ!.
64 ಜಗವನು ಬೆಳಗಿದೆ ತೋರುತ ದೀಪ!.
65 ಸಾಧು ಸಂತರನು ರಕ್ಷಿಸುವವನೆ!.
66 ಅಸುರರ ಕೊಂದವ ರಾಮನ ಪ್ರಿಯನೇ!.
67 ಅಷ್ಟಸಿದ್ದಿ ನವನಿಧಿಗಳ ತರುವೆ.
68 ಸೀತಾ ಮಾತೆಯ ವರ ಬಲ ಎನುವೆ!.
69 ರಾಮ ರಸಾಯನ ಸವಿಯಲು ತಾನು!.
70 ರಘುಪತಿ ದಾಸಗೆ ಬೇಕ್ಕಿನ್ನೇನು!.
71 ನಿನ್ನನು ಭಜಿಸಲು ರಾಮನು ಸಿಗುವನು!.
72 ಜನುಮ ಜನುಮಗಳ ದುಃಖವ ಕಳೆವನು!.
73 ಅಂತ್ಯದಿ ರಾಮನ ಪುರವ ಸೇರುವರು!.
74 ಶ್ರೀ ಹರಿಯ ಚರಣದಲಿ ಸ್ಥಾನವಪಡೆದರು!.
75 ಇತರ ದೈವಗಳ ಚಿತ್ತದಿ ಸಡಿಲಿಸು!.
76 ಹನುಮನ ಸೇವಿಸುತಾ ಸುಖವನ್ನು ಗಳಿಸು!.
77 ಸಂಕಟ ಕಳೆವುದು ಪೀಡೆಯು ಹರಿವುದು!.
78 ಸ್ಮರಿಸಲು ಹನುಮನ ಬಲು ಬಲವಂತನ!.
79 ಜಯವೆನ್ನಿ ಶರಣೆನ್ನಿ ಗೋಸಾಯಿ ಹನುಮನಿಗೆ!.
80 ಕೃಪೆ ತೋರಿ ಕಾಯುತಿಹ ಗುರು ದೇವನ ಪರಮ ಪಾದಗಳಿಗೆ!.
81 ಪ್ರತಿ ದಿನವು ಪಠಿಸುತಿರೆ ನೂರು ಸಲ ಸೂಕ್ತಿ!.
82 ಬಂಧನದ ಬಿಡುಗಡೆಯು ಚಿರ ಸುಖವು ಪ್ರಾಪ್ತಿ!.
83 ನಲವತ್ತರ ಈ ಮಾಲೆ ಯ ಜಪಿಸಿರಿ!.
84 ಗೌರೀಶನೇ ಸಾಕ್ಷಿ ಸಿದ್ದಿಯ ಪಡೆಯಿರಿ!.
85 ಹರಿಯ ಚರಣವ ನಿರತ ನೆನೆಯುವ ದಾಸನೀ ತುಳಸಿ!.
86 ಶೂನ್ಯ ಹೃದಯವು ತುಂಬಿ ಬರುವುದು ನಿನ್ನಾಶ್ರಯಿಸಿ!.
87 ಪವನ ತನಯ ಸಂಕಟ ಹರನೆ ಮಂಗಳ ಮೂರುತಿ ರೂಪ!.
88 ರಾಮ ಲಕ್ಷ್ಮಣ ಸೀತಾ ಸಹಿತ ಹೃದಯದಿ ನೆಲಸೋ ಸುರ ಭೂಪ! 
***

DOHA

Shri Guru Charan Sarooja-raj Nija manu Mukura Sudhaari Baranau Rahubhara Bimala Yasha Jo Dayaka Phala Chari Budhee-Heen Thanu Jannikay Sumirow Pavana Kumara Bala-Budhee Vidya Dehoo Mohee Harahu Kalesha Vikaara Jai Hanuman gyan gun sagar Jai Kapis tihun lok ujagar . Ram doot atulit bal dhama Anjaani-putra Pavan sut nama . Mahabir Bikram Bajrangi Kumati nivar sumati Ke sangi . Kanchan varan viraj subesa Kanan Kundal Kunchit Kesha . Hath Vajra Aur Dhuvaje Viraje Kaandhe moonj janehu sajai . Sankar suvankesri Nandan Tej prataap maha jag vandan . Vidyavaan guni ati chatur Ram kaj karibe ko aatur . Prabucharitrasunibe-ko rasiya Ram Lakhan Sita man Basiya . Sukshma roop dhari Siyahi dikhava Vikatroopdhari lank jarava . Bhima roop dhari asur sanghare Ramachandra ke kaj sanvare . Laye Sanjivan Lakhan Jiyaye Shri Raghuvir Harashi ur laye . Raghupati Kinhi bahut badai Tum mam priye Bharat-hi-sam bhai . Sahas badan tumharo yash gaave Asa-kahi Shripati kanth lagaave . Sankadhik Brahmaadi Muneesa Narad-Sarad sahitAheesa . Yam Kuber Digpaal Jahan te Kavi kovidkahi sake kahan te . Tum upkar Sugreevahin keenha Ram milayerajpaddeenha . Tumharo mantra Vibheeshan maana Lankeshwar Bhaye Sub jag jana . Yug sahastra jojan par Bhanu Leelyo tahi madhur phal janu . Prabhu mudrikamelimukhmahee Jaladhi langhigayeachrajnahee . Durgaam kaj jagath ke jete Sugam anugraha tumhre tete . Ram dwaare tum rakhvare Hoat na agya binu paisare . Sub sukh lahae tumhari sar na Tum rakshak kahu ko dar naa . Aapan tej samharo aapai Teenhon lok hank te kanpai . Bhoot pisaach Nikat nahinaavai Mahavir jab naamsunavae . Nase rog harae sab peera Japat nirantar Hanumant beera . Sankat se Hanuman chudavae Man Karam Vachan dyan jo lavai . Sab par Ram tapasvee raja Tin ke kaj sakal Tum saja . Aur manorath jo koi lavai Sohi amitjeevan phal pavai . Charon Yug partap tumhara Hai persidh jagat ujiyara . Sadhu Sant ke tum Rakhware Asur nikandan Ram dulhare . Ashta-sidhi nav nidhikedhata As-var deen Janki mata . Ram rasayan tumhare pasa Sada raho Raghupati ke dasa . Tumhare bhajan Ram ko pavai Janam-janam ke dukh bisraavai . Anth-kaal Raghuvir pur jayee Jahan janam Hari-Bakht Kahayee . Aur Devta Chit nadharehi Hanumanth se hi sarvesukhkarehi . Sankat kate-mite sab peera Jo sumirai Hanumat Balbeera . Jai Jai Jai Hanuman Gosahin Kripa Karahu Gurudev ki nyahin . Jo sat bar path kare kohi Chutehi bandhi maha sukh hohi . Jo yah padhe Hanuman Chalisa Hoye siddhi sakhi Gaureesa . Tulsidas sada hari chera Keejai Nath Hridaye mein dera Pavan Tanay Sankat Harana Mangala Murati Roop Ram Lakhana Sita Sahita HridayBasahu Soor Bhoop

***

॥ दोहा ॥
श्री गुरु चरन सरोज रज,निज मनु मुकुर सुधारि।

बरनउं रघुबर विमल जसु,जो दायकु फल चारि॥

बुद्धिहीन तनु जानिकै,सुमिरौं पवन-कुमार।

बल बुद्धि विद्या देहु मोहिं,हरहु कलेश विकार॥

॥ चौपाई ॥
जय हनुमान ज्ञान गुण सागर।जय कपीस तिहुँ लोक उजागर॥

राम दूत अतुलित बल धामा।अंजनि-पुत्र पवनसुत नामा॥

महावीर विक्रम बजरंगी।कुमति निवार सुमति के संगी॥

कंचन बरन बिराज सुवेसा।कानन कुण्डल कुंचित केसा॥

हाथ वज्र औ ध्वजा बिराजै।काँधे मूँज जनेऊ साजै॥

शंकर सुवन केसरीनन्दन।तेज प्रताप महा जग वन्दन॥

विद्यावान गुणी अति चातुर।राम काज करिबे को आतुर॥

प्रभु चरित्र सुनिबे को रसिया।राम लखन सीता मन बसिया॥

सूक्ष्म रुप धरि सियहिं दिखावा।विकट रुप धरि लंक जरावा॥

भीम रुप धरि असुर संहारे।रामचन्द्र के काज संवारे॥

लाय सजीवन लखन जियाये।श्रीरघुवीर हरषि उर लाये॥

रघुपति कीन्ही बहुत बड़ाई।तुम मम प्रिय भरतहि सम भाई॥

सहस बदन तुम्हरो यश गावैं।अस कहि श्री पति कंठ लगावैं॥

सनकादिक ब्रह्मादि मुनीसा।नारद सारद सहित अहीसा॥

जम कुबेर दिकपाल जहां ते।कवि कोबिद कहि सके कहां ते॥

तुम उपकार सुग्रीवहिं कीन्हा।राम मिलाय राज पद दीन्हा॥

तुम्हरो मन्त्र विभीषन माना।लंकेश्वर भये सब जग जाना॥

जुग सहस्र योजन पर भानू।लील्यो ताहि मधुर फ़ल जानू॥

प्रभु मुद्रिका मेलि मुख माहीं।जलधि लांघि गए अचरज नाहीं॥

दुर्गम काज जगत के जेते।सुगम अनुग्रह तुम्हरे तेते॥

राम दुआरे तुम रखवारे।होत न आज्ञा बिनु पैसारे॥

सब सुख लहै तुम्हारी सरना।तुम रक्षक काहू को डरना॥

आपन तेज सम्हारो आपै।तीनों लोक हांक तें कांपै॥

भूत पिशाच निकट नहिं आवै।महावीर जब नाम सुनावै॥

नासै रोग हरै सब पीरा।जपत निरंतर हनुमत बीरा॥

संकट ते हनुमान छुड़ावै।मन क्रम वचन ध्यान जो लावै॥

सब पर राम तपस्वी राजा।तिन के काज सकल तुम साजा॥

और मनोरथ जो कोई लावै।सोइ अमित जीवन फ़ल पावै॥

चारों जुग परताप तुम्हारा।है परसिद्ध जगत उजियारा॥

साधु सन्त के तुम रखवारे।असुर निकन्दन राम दुलारे॥

अष्ट सिद्धि नवनिधि के दाता।अस बर दीन जानकी माता॥

राम रसायन तुम्हरे पासा।सदा रहो रघुपति के दासा॥

तुम्हरे भजन राम को पावै।जनम जनम के दुख बिसरावै॥

अन्तकाल रघुबर पुर जाई।जहाँ जन्म हरि-भक्त कहाई॥

और देवता चित्त न धरई।हनुमत सेई सर्व सुख करई॥

संकट कटै मिटै सब पीरा।जो सुमिरै हनुमत बलबीरा॥

जय जय जय हनुमान गोसाई।कृपा करहु गुरुदेव की नाई॥

जो शत बार पाठ कर कोई।छूटहिं बंदि महा सुख होई॥

जो यह पढ़ै हनुमान चालीसा।होय सिद्धि साखी गौरीसा॥

तुलसीदास सदा हरि चेरा।कीजै नाथ ह्रदय महँ डेरा॥

॥ दोहा ॥
पवनतनय संकट हरन,मंगल मूरति रुप।

राम लखन सीता सहित,ह्रदय बसहु सुर भूप॥
***



No comments:

Post a Comment