Tuesday 1 October 2019

ಶಿವ ತಾಂಡವ ಸ್ತೋತ್ರಂ ರಾವಣ ವಿರಚಿತಮ್ chant SHIVA TANDAVA STOTRAM




ಶಿವತಾಂಡವ ಸ್ತೋತ್ರ ಪಠಿಸಿದರೆ:-
ಸಂಪತ್ತು ಮತ್ತು ಐಶ್ವರ್ಯ
ಇದನ್ನು ನೀವು ನಿಯಮಿತವಾಗಿ ಪಠಿಸಿದರೆ ಅದರಿಂದ ಸಂಪತ್ತು ಮತ್ತು ಎಲ್ಲಾ ರೀತಿಯ ಐಷಾರಾಮವು ನಿಮ್ಮದಾಗುವುದು. ಲೌಕಿಕ ಜೀವನದಲ್ಲಿ ನಿಮ್ಮ ಯಾವುದೇ ಆಸೆಗಳು ಈಡೇರದೆ ಇರುವುದಿಲ್ಲ.

ಕೌಟುಂಬಿಕ ಜೀವನದಲ್ಲಿ ಶಾಂತಿ ಹಾಗೂ ಸಂತೋಷ
ಇದು ಕೌಟುಂಬಿಕ ಜೀವನದಲ್ಲಿ ಶಾಂತಿ ಹಾಗೂ ಸಂತೋಷ ತಂದುಕೊಡುವುದು ಮಾತ್ರವಲ್ಲದೆ, ಆಕಾಂಕ್ಷೆಗಳನ್ನು ಪೂರೈಸಲು ನೆರವಾಗುವುದು. ಪತಿ ಹಾಗೂ ಪತ್ನಿಯು ಈ ಸ್ತೋತ್ರವನ್ನು ಪಠಿಸುವುದರಿಂದ ಪರಸ್ಪರ ಅನ್ಯೋನ್ಯತೆಯು ಹೆಚ್ಚಾಗಲಿದೆ. ಜ್ಞಾನೋದಯ ಆಗಬೇಕೆಂದು ಬಯಸುವವರು ಈ ಸ್ತೋತ್ರವನ್ನು ಜಪಿಸಬೇಕು

ಆರ್ಥಿಕ ಸಮಸ್ಯೆಗಳಿಗೆ ಶಿವ ತಾಂಡ ಸ್ತೋತ್ರ ಪರಿಹಾರ ನೀಡುವುದು
 ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಈ ಸ್ತೋತ್ರ ಪಠಿಸಿದರೆ ಎಲ್ಲಾ ರೀತಿಯ ಸಾಲದಿಂದ ಮುಕ್ತರಾಗಬಹುದು ಮತ್ತು ಭವಿಷ್ಯದಲ್ಲಿ ಸಾಲದ ಶೂಲಕ್ಕೆ ಸಿಲುಕದೆ ಇರುತ್ತೀರಿ.

ಮದುವೆಗೆ ಸಂಬಂಧಿಸಿದ ಸಮಸ್ಯೆಗಳು
ಮದುವೆಯಾಗಬೇಕೆಂದು ಇರುವವರಿಗೆ ಯಾವುದೇ ಸಮಸ್ಯೆಯಾಗುತ್ತಲಿದ್ದರೆ ಆಗ ಅವರು ಶಿವ ತಾಂಡವ ಸ್ತೋತ್ರವನ್ನು 51 ದಿನಗಳ ಕಾಲ ಜಪಿಸಬೇಕು. ಹೀಗೆ ಮಾಡಿದರೆ ಎಲ್ಲಾ ರೀತಿಯ ಸಮಸ್ಯೆಯು ನಿವಾರಣೆ ಆಗುವುದು.

ವೃತ್ತಿಪರ ಯಶಸ್ಸಿಗಾಗಿ ಶಿವ ತಾಂಡವ ಸ್ತೋತ್ರ ಪಠಿಸಿ
ಈ ಸ್ತೋತ್ರವು ವ್ಯಾಪಾರ ಮತ್ತು ವೃತ್ತಿಯಲ್ಲಿ ಉನ್ನತಿಗೇರಲು ನೆರವಾಗುವುದು. ನಿಮ್ಮ ವ್ಯಾಪಾರವು ಸರಿಯಾಗಿ ನಡೆಯದೆ ಇದ್ದರೆ ಆಥವಾ ನಿರಂತರ ಪ್ರಯತ್ನದ ಹೊರತಾಗಿಯೂ ವೃತ್ತಿಯಲ್ಲಿ ನಿಮಗೆ ಯಾವುದೇ ರೀತಿಯ ಯಶಸ್ಸು ಸಿಗದೆ ಇದ್ದರೆ ಈ ಸ್ತೋತ್ರವನ್ನು ಸುಮಾರು 41 ದಿನಗಳ ಕಾಲ ನಿರಂತರವಾಗಿ ಪಠಿಸಬೇಕು. ಇದು ನಿಮಗೆ ಪ್ರಗತಿ ಒದಗಿಸುವುದು.

ಸಂತಾನಭಾಗ್ಯವಿಲ್ಲದ ದಂಪತಿಗೆ ಒಳ್ಳೆಯ ಮದ್ದು ಸಂತಾನಭಾಗ್ಯ ಪಡೆಯುವ ಸಲುವಾಗಿಯೂ ನೀವು ಸ್ತೋತ್ರವನ್ನು ಪಠಿಸಬಹುದು. ಪ್ರದೋಶ ದಿನದಂದು ಶಿವತಾಂಡವ ಸ್ತೋತ್ರ ಪಠಿಸಿದರೆ ಅದರಿಂದ ದಂಪತಿಗೆ ಸಂತಾನ ಭಾಗ್ಯವು ಸಿಗುವುದು. 13ನೇ ದಿನವನ್ನು ಪ್ರದೋಷ ಎಂದು ಕರೆಯಲಾಗುತ್ತದೆ. ಇದನ್ನು ನಾವು ಶುಕ್ಲ ಪಕ್ಷ ತ್ರಯೋದಶಿ ಅಥವ ಕೃಷ್ಣ ಪಕ್ಷ ತ್ರಯೋದಶಿ ಎಂದು ಕರೆಯಲಾಗುತ್ತದೆ.
*****

ಶ್ರೀಶಿವತಾಂಡವಸ್ತೋತ್ರಮ್ ರಾವಣರಚಿತಮ್ 

   ॥ ಅಥ ರಾವಣಕೃತಶಿವತಾಂಡವಸ್ತೋತ್ರಮ್ ॥

               ॥ ಶ್ರೀಗಣೇಶಾಯ ನಮಃ ॥

ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೇ
  ಗಲೇಽವಲಮ್ಬ್ಯ ಲಮ್ಬಿತಾಂ ಭುಜಂಗತುಂಗಮಾಲಿಕಾಮ್ ।
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
  ಚಕಾರ ಚಂಡತಾಂಡವಂ ತನೋತು ನಃ ಶಿವಃ ಶಿವಮ್ ॥ 1॥

ಜಟಾಕಟಾಹಸಮ್ಭ್ರಮಭ್ರಮನ್ನಿಲಿಮ್ಪನಿರ್ಝರೀ-
     -ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ ।
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೇ
      ಕಿಶೋರಚನ್ದ್ರಶೇಖರೇ ರತಿಃ ಪ್ರತಿಕ್ಷಣಂ ಮಮ ॥ 2॥

ಧರಾಧರೇನ್ದ್ರನನ್ದಿನೀವಿಲಾಸಬನ್ಧುಬನ್ಧುರ
      ಸ್ಫುರದ್ದಿಗನ್ತಸನ್ತತಿಪ್ರಮೋದಮಾನಮಾನಸೇ ।
ಕೃಪಾಕಟಾಕ್ಷಧೋರಣೀನಿರುದ್ಧದುರ್ಧರಾಪದಿ
      ಕ್ವಚಿದ್ದಿಗಮ್ಬರೇ(ಕ್ವಚಿಚ್ಚಿದಮ್ಬರೇ) ಮನೋ ವಿನೋದಮೇತು ವಸ್ತುನಿ ॥ 3॥

ಜಟಾಭುಜಂಗಪಿಂಗಲಸ್ಫುರತ್ಫಣಾಮಣಿಪ್ರಭಾ
      ಕದಮ್ಬಕುಂಕುಮದ್ರವಪ್ರಲಿಪ್ತದಿಗ್ವಧೂಮುಖೇ ।
ಮದಾನ್ಧಸಿನ್ಧುರಸ್ಫುರತ್ತ್ವಗುತ್ತರೀಯಮೇದುರೇ
     ಮನೋ ವಿನೋದಮದ್ಭುತಂ ಬಿಭರ್ತು ಭೂತಭರ್ತರಿ ॥ 4॥

ಸಹಸ್ರಲೋಚನಪ್ರಭೃತ್ಯಶೇಷಲೇಖಶೇಖರ
     ಪ್ರಸೂನಧೂಲಿಧೋರಣೀ ವಿಧೂಸರಾಂಘ್ರಿಪೀಠಭೂಃ ।
ಭುಜಂಗರಾಜಮಾಲಯಾ ನಿಬದ್ಧಜಾಟಜೂಟಕ
     ಶ್ರಿಯೈ ಚಿರಾಯ ಜಾಯತಾಂ ಚಕೋರಬನ್ಧುಶೇಖರಃ ॥ 5॥

ಲಲಾಟಚತ್ವರಜ್ವಲದ್ಧನಂಜಯಸ್ಫುಲಿಂಗಭಾ-
    -ನಿಪೀತಪಂಚಸಾಯಕಂ ನಮನ್ನಿಲಿಮ್ಪನಾಯಕಮ್ ।
ಸುಧಾಮಯೂಖಲೇಖಯಾ ವಿರಾಜಮಾನಶೇಖರಂ
     ಮಹಾಕಪಾಲಿಸಮ್ಪದೇಶಿರೋಜಟಾಲಮಸ್ತು ನಃ  ॥ 6॥

ಕರಾಲಭಾಲಪಟ್ಟಿಕಾಧಗದ್ಧಗದ್ಧಗಜ್ಜ್ವಲ-
     ದ್ಧನಂಜಯಾಹುತೀಕೃತಪ್ರಚಂಡಪಂಚಸಾಯಕೇ ।
ಧರಾಧರೇನ್ದ್ರನನ್ದಿನೀಕುಚಾಗ್ರಚಿತ್ರಪತ್ರಕ-
    -ಪ್ರಕಲ್ಪನೈಕಶಿಲ್ಪಿನಿ ತ್ರಿಲೋಚನೇ ರತಿರ್ಮಮ ॥ 7॥

ನವೀನಮೇಘಮಂಡಲೀ ನಿರುದ್ಧದುರ್ಧರಸ್ಫುರತ್-
     ಕುಹೂನಿಶೀಥಿನೀತಮಃ ಪ್ರಬನ್ಧಬದ್ಧಕನ್ಧರಃ ।
ನಿಲಿಮ್ಪನಿರ್ಝರೀಧರಸ್ತನೋತು ಕೃತ್ತಿಸಿನ್ಧುರಃ
     ಕಲಾನಿಧಾನಬನ್ಧುರಃ ಶ್ರಿಯಂ ಜಗದ್ಧುರನ್ಧರಃ ॥ 8॥

ಪ್ರಫುಲ್ಲನೀಲಪಂಕಜಪ್ರಪಂಚಕಾಲಿಮಪ್ರಭಾ-
    -ವಲಮ್ಬಿಕಂಠಕನ್ದಲೀರುಚಿಪ್ರಬದ್ಧಕನ್ಧರಮ್ ।
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
     ಗಜಚ್ಛಿದಾನ್ಧಕಚ್ಛಿದಂ ತಮನ್ತಕಚ್ಛಿದಂ ಭಜೇ ॥ 9॥

ಅಖರ್ವ(ಅಗರ್ವ)ಸರ್ವಮಂಗಲಾಕಲಾಕದಮ್ಬಮಂಜರೀ
     ರಸಪ್ರವಾಹಮಾಧುರೀ ವಿಜೃಮ್ಭಣಾಮಧುವ್ರತಮ್ ।
ಸ್ಮರಾನ್ತಕಂ ಪುರಾನ್ತಕಂ ಭವಾನ್ತಕಂ ಮಖಾನ್ತಕಂ
     ಗಜಾನ್ತಕಾನ್ಧಕಾನ್ತಕಂ ತಮನ್ತಕಾನ್ತಕಂ ಭಜೇ ॥ 10॥

ಜಯತ್ವದಭ್ರವಿಭ್ರಮಭ್ರಮದ್ಭುಜಂಗಮಶ್ವಸ-
    -ದ್ವಿನಿರ್ಗಮತ್ಕ್ರಮಸ್ಫುರತ್ಕರಾಲಭಾಲಹವ್ಯವಾಟ್ ।
ಧಿಮಿದ್ಧಿಮಿದ್ಧಿಮಿಧ್ವನನ್ಮೃದಂಗತುಂಗಮಂಗಲ
     ಧ್ವನಿಕ್ರಮಪ್ರವರ್ತಿತ ಪ್ರಚಂಡತಾಂಡವಃ ಶಿವಃ ॥ 11॥

ದೃಷದ್ವಿಚಿತ್ರತಲ್ಪಯೋರ್ಭುಜಂಗಮೌಕ್ತಿಕಸ್ರಜೋರ್-
    -ಗರಿಷ್ಠರತ್ನಲೋಷ್ಠಯೋಃ ಸುಹೃದ್ವಿಪಕ್ಷಪಕ್ಷಯೋಃ ।
ತೃಣಾರವಿನ್ದಚಕ್ಷುಷೋಃ ಪ್ರಜಾಮಹೀಮಹೇನ್ದ್ರಯೋಃ
     ಸಮಂ ಪ್ರವರ್ತಯನ್ಮನಃ ಕದಾ ಸದಾಶಿವಂ ಭಜೇ ॥ 12॥

ಕದಾ ನಿಲಿಮ್ಪನಿರ್ಝರೀನಿಕುಂಜಕೋಟರೇ ವಸನ್
     ವಿಮುಕ್ತದುರ್ಮತಿಃ ಸದಾ ಶಿರಃ ಸ್ಥಮಂಜಲಿಂ ವಹನ್ ।
ವಿಮುಕ್ತಲೋಲಲೋಚನೋ ಲಲಾಮಭಾಲಲಗ್ನಕಃ
     ಶಿವೇತಿ ಮನ್ತ್ರಮುಚ್ಚರನ್ ಕದಾ ಸುಖೀ ಭವಾಮ್ಯಹಮ್ ॥ 13॥

ನಿಲಿಮ್ಪನಾಥನಾಗರೀಕದಮ್ಬಮೌಲಮಲ್ಲಿಕಾ-
     ನಿಗುಮ್ಫನಿರ್ಭರಕ್ಷರನ್ಮಧೂಷ್ಣಿಕಾಮನೋಹರಃ ।
ತನೋತು ನೋ ಮನೋಮುದಂ ವಿನೋದಿನೀಮಹರ್ನಿಶಂ
     ಪರಶ್ರಿಯಃ ಪರಂ ಪದಂತದಂಗಜತ್ವಿಷಾಂ ಚಯಃ ॥ 14॥

ಪ್ರಚಂಡವಾಡವಾನಲಪ್ರಭಾಶುಭಪ್ರಚಾರಣೀ
     ಮಹಾಷ್ಟಸಿದ್ಧಿಕಾಮಿನೀಜನಾವಹೂತಜಲ್ಪನಾ ।
ವಿಮುಕ್ತವಾಮಲೋಚನಾವಿವಾಹಕಾಲಿಕಧ್ವನಿಃ
     ಶಿವೇತಿ ಮನ್ತ್ರಭೂಷಣಾ ಜಗಜ್ಜಯಾಯ ಜಾಯತಾಮ್ ॥ 15॥

ಇದಮ್ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ
     ಪಠನ್ಸ್ಮರನ್ಬ್ರುವನ್ನರೋ ವಿಶುದ್ಧಿಮೇತಿಸನ್ತತಮ್ ।
ಹರೇ ಗುರೌ ಸುಭಕ್ತಿಮಾಶು ಯಾತಿ ನಾನ್ಯಥಾ ಗತಿಂ
     ವಿಮೋಹನಂ ಹಿ ದೇಹಿನಾಂ ಸುಶಂಕರಸ್ಯ ಚಿನ್ತನಮ್ ॥ 16॥

ಪೂಜಾವಸಾನಸಮಯೇ ದಶವಕ್ತ್ರಗೀತಂ
     ಯಃ ಶಮ್ಭುಪೂಜನಪರಂ ಪಠತಿ ಪ್ರದೋಷೇ ।
ತಸ್ಯ ಸ್ಥಿರಾಂ ರಥಗಜೇನ್ದ್ರತುರಂಗಯುಕ್ತಾಂ
     ಲಕ್ಷ್ಮೀಂ ಸದೈವ  ಸುಮುಖಿಂ ಪ್ರದದಾತಿ ಶಮ್ಭುಃ ॥ 17॥

   ॥ ಇತಿ ಶ್ರೀರಾವಣವಿರಚಿತಂ ಶಿವತಾಂಡವಸ್ತೋತ್ರಂ ಸಮ್ಪೂರ್ಣಮ್ ॥

The stotra is in panchachAmara Chanda, in which there are 16
varna-s per line, each line begins with a laghu and the laghu
and guru varna-s alternate. So there are eight LG (laghu-guru)
pairs, making up 16 syllables of each line.  The last shloka
is in Vasanta-tilakA metre.  Some of the versions of the stotra

carry 15-19 verses.

There are two additional verses seen in some version 

ನಮಾಮಿ ಪಾರ್ವತೀಪತಿಂ ನಮಾಮಿ ಜಾಹ್ನವೀಪತಿಂ
     ನಮಾಮಿ ಭಕ್ತವತ್ಸಲಂ ನಮಾಮಿ ಫಾಲಲೋಚನಮ್ ।
ನಮಾಮಿ ಚನ್ದ್ರಶೇಖರಂ ನಮಾಮಿ ದುಃಖಮೋಚನಂ
     ತದೀಯಪಾದಪಂಕಜಂ ಸ್ಮರಾಮ್ಯಹಂ ನಟೇಶ್ವರಮ್ ॥ 16॥

ರಾವಣೇನ ಕೃತಂ ಸ್ತೋತ್ರಂ ಯಃ ಪಠೇಚ್ಛಿವಸನ್ನಿಧೌ ।
ಪುತ್ರಪೌತ್ರಾದಿಕಂ ಸೌಖ್ಯಂ ಲಭತೇ ಮೋಕ್ಷಮೇವ ಚ ॥ 19॥

   ಇತಿ ದಶಕನ್ಧರವಿರಚಿತಂ ಶಿವತಾಂಡವಸ್ತೋತ್ರಂ ಸಮಾಪ್ತಮ್ ।

Also there are variations, for example, the last line
of verse 12 is also chanted as 
ಸಮಪ್ರವೃತ್ತಿಕಃ ಕದಾ ಸದಾಶಿವಂ ಭಜಾಮ್ಯಹಮ್ ॥ 12॥  or in 13
ವಿಲೋಲಲೋಲಲೋಚನೋ  instead of  ವಿಮುಕ್ತಲೋಲಲೋಚನೋ
Both alternatives are correct and there is no need to
document all kinds of variations seen in different prints.
*****


No comments:

Post a Comment