Monday, 30 September 2019

ಧನ್ವಂತರೀ ಮಹಾಮಂತ್ರ ಮಧ್ವಾಚಾರ್ಯ ವಿರಚಿತಮ್ dhanvantri maha mantra by madwacharya in trantra sara


ಧನ್ವಂತರಿ ಮಹಾಮಂತ್ರ  (ತಂತ್ರಸಾರಸಂಗ್ರಹ)

|| ಧಂ ಧನ್ವಂತರಯೇ ನಮ: ||
ಸ್ವಯಮುದ್ದೇಶವಾನ್ ಪೂರ್ವವರ್ಣಪೂರ್ವೋ ನಮೋ ಯುತ: |
ಧಾನ್ವಂತರೋ ಮಹಾ ಮಂತ್ರ: ಸಂಸೃತಿವ್ಯಾಧಿನಾಶನ: || ೧ ||

ಚಂದ್ರೌಘಕಾಂತಿಮಮೃತೋರುಕರೈರ್ಜಗಂತಿ   
ಸಂಜೀವಯಂತಮಮಿತಾತ್ಮಸುಖಂ ಪರೇಶಂ |
ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ 
ಶೀತಾಂಶುಮಂಡಲಗತಂ ಸ್ಮರತಾಽತ್ಮಸಂಸ್ಥಂ || ೨ ||

ಮೂರ್ಧ್ನಿ ಸ್ಥಿತಾದಮುತ ಏವ ಸುಧಾಂ ಸ್ರವಂತೀಂ           
ಭ್ರೂಮಧ್ಯಗಾಚ್ಚ ತತ ಏವ ಚ ತಾಲುಸಂಸ್ಥಾತ್ |
ಹಾರ್ದಾಚ್ಚ ನಾಭಿಸದನಾದಧರಾಸ್ಥಿತಾಚ್ಚ   
ಧ್ಯಾತ್ವಾಽಭಿಪೂರಿತತನುರ್ದುರಿತಂ ನಿಹನ್ಯಾತ್ | ೩ |

ಅಜ್ಞಾನ ದು:ಖ ಭಯ ರೋಗ ಮಹಾವಿಷಾಣಿ     
ಯೋಗೋಽಯಮಾಶು ವಿನಿಹಂತಿ ಸುಖಂ ಚ ದದ್ಯಾತ್ |
ಉನ್ಮಾದವಿಭ್ರಮಹರ: ಪರತಶ್ಚ ಸಾಂದ್ರ 
ಸ್ವಾನಂದ ಮೇವೆ ಪದಮಾಪಯತಿ ಸ್ಮ ನಿತ್ಯಂ | ೪ |

ಧ್ಯಾತ್ವೈವ ಹಸ್ತತಲಗಂ ಸ್ವಮೃತಂ ಸ್ರವಂತಂ 
ದೇವಂ ಸ ಯಸ್ಯ ಶಿರಸಿ ಸ್ವಕರಂ ನಿಧಾಯ |
ಆವರ್ತಯೇನ್ಮನುಮಿಮಂ ಸ ಚ ವೀತರೋಗ: 
ಪಾಪಾದಪೈತಿ ಮನಸಾ ಯದಿ ಭಕ್ತಿ ನಮ್ರ: | ೫ |

ಶತಂ ಸಹಸ್ರಮಯುತಂ ಲಕ್ಷಂ ವಾಽಽರೋಗಸಂಕ್ಷಯಾತ್ |
ಇಮಮೇವ ಜಪೇನ್ಮಂತ್ರಂ ಸಾಧೂನಾಂ ದು:ಖಶಾಂತಯೇ | ೬ |

ಜ್ವರ ದಾಹಾದಿ ಶಾಂತ್ಯರ್ಥಂ ತರ್ಪಯೇನ್ಮುನುನಾಽಮುನಾ |
ಧ್ಯಾತ್ವಾ ಹರಿಂ ಜಲೇ ಸಪ್ತರಾತ್ರಾಜ್ಜೂರ್ತಿರ್ವಿನಶ್ಯತಿ || ೭ |

ಆಯುತಾಮೃತಸಮಿದ್ಧೋಮಾತ್ ಗೋಘೃತಕ್ಷೀರಸಂಯುತಾತ್ |
ಸರ್ವರೋಗಾ ವಿನಸ್ಯಂತಿ ವಿಮುಖೋ ನ ಹರೇರ್ಯದಿ || ೮ ||

ತಾಭಿರಸಾಂತ್ಯರ್ಥಮಪಾಮಾರ್ಗಾಹುತಿಕ್ರಿಯಾ |
ದ್ವಿಗುಣಾಽಮೃತಯಾ ಪಶ್ಚಾತ್ಯೇವಲೇನ ಘ್ರುತೇನ ವಾ | ೯ |

ಆಯುರ್ವಿವೃದ್ಧಯೇ ನಿತ್ಯಂ ಜನ್ಮ ನಕ್ಷತ್ರ ಏವ ವಾ |
ಚತುಶ್ಚತುರ್ಭಿರ್ದೂವಾಭಿ: ಕ್ಷೀರಾಜ್ಯಾಕ್ತಾಭಿರಿಷ್ಯತೇ | ೧೦ |

ಸರ್ವಕ್ರಿಯಾ ಹರೌ ಭಕ್ತೇ ಹರಿಭಕ್ತೈಸ್ಸ್ವನುಷ್ಠಿತಾ: |
ಗುರುಭಕ್ತೈ ಸದಾಚಾರೈ: ಫಲಂತ್ಯದ್ಧಾ ನ ಚಾನ್ಯಥಾ | ೧೧ |

Meaning:
Sloka.01.ಆಚಾರ್ಯ ಮಧ್ವರು ತಮ್ಮ ತಂತ್ರಸಾರಸಂಗ್ರಹದಲ್ಲಿ 72 ಮಂತ್ರಗಳನ್ನು ಹೇಳಿದ್ದು, ಅದರಲ್ಲಿ ಧನ್ವಂತರಿ ಮಹಾಮಂತ್ರವನ್ನೂ, ಸೇರಿಸಿದ್ದಾರೆ.  ಹತ್ತು ಶ್ಲೋಕಗಳಲ್ಲಿ ಧನ್ವಂತರಿ ಮಂತ್ರದ ಸ್ವರೂಪ, ಧ್ಯೇಯರೂಪ, ಧ್ಯಾನಶ್ಲೋಕ,  ಜಪ, ಹೋಮಗಳ ಫಲವನ್ನೂ ತಿಳಿಸಿರುವರು.   ನಮಗೆ ಯಾವ್ಯಾವುದರ ಅಪೇಕ್ಷೆ ಇದೆಯೋ ಅವೆಲ್ಲ ಧನ್ವಂತರಿ ಮಂತ್ರದ ಜಪ ಹೋಮಗಳಿಂದ ಈಡೇರುವುದೆಂದು ಹೇಳಿದ್ದಾರೆ –

Sloka.02.ಅನಂತಚಂದ್ರರ ಕಾಂತಿಯಿಂದ ಪ್ರಕಾಶಿಸುತ್ತಿರುವ, ತನ್ನ ಅಮೃತಸ್ರವವೆಂಬ ಕಿರಣಗಳಿಂದ ಜಗತ್ತಿಗೆ ಜೀವಕಳೆಯನ್ನು ತುಂಬುತ್ತಿರುವ, ರಮಾಬ್ರಮ್ಹಾದಿಗಳಿಗೂ ಒಡೆಯನಾದ ಪರಮಾತ್ಮನು ತನ್ನ ಬಲಗೈಯಲ್ಲಿ  ಜ್ಞಾನಮುದ್ರೆಯನ್ನೂ, ಎಡಕೈಯಲ್ಲಿ ಅಮೃತಪೂರ್ಣ ಕೊಡವನ್ನು ಹಿಡಿದಿರುವ, ಚಂದ್ರಮಂಡಲದಲ್ಲಿರುವ ಧನ್ವಂತರಿಯನ್ನು ತನ್ನೊಳಗೆ ನೆಲೆಸಿರುವನೆಂದು ಸ್ಮರಿಸಿರಿ.

Sloka.03.ತನ್ನ ಶಿರಸ್ಸಿನಲ್ಲಿ, ಹುಬ್ಬುಗಳ ನಡುವೆ, ಕಿರುನಾಲಿಗೆಯಲ್ಲಿ, ಹೃದಯದಲ್ಲಿ, ಹೊಕ್ಕುಳಿನಲ್ಲಿ ಮತ್ತು ಕೆಳಭಾಗದಲ್ಲಿ ಹೀಗೆ ಷಟ್ ಚಕ್ರಗಳಲ್ಲೂಸನ್ನಿಹಿತನಾದ ಧನ್ವಂತರಿಯಿಂದ ಸುರಿಯುತ್ತಿರುವ ಅಮೃತಧಾರೆಯನ್ನು ನೆನೆದು, ಆ ಅಮೃತಧಾರೆಯಲ್ಲಿ ತನ್ನ ಶರೀರವೆಲ್ಲ ತೊಯ್ದು ಪವಿತ್ರವಾದಂತೆ ಅನುಸಂಧಾನಿಸಿ ಜಪಿಸುವವನು ಎಲ್ಲ ದುರಿತಗಳನ್ನೂ ತಡೆಯಬಲ್ಲ.

Sloka.04.ಧನ್ವಂತರಿ ಮಂತ್ರವನ್ನು ಪ್ರತಿನಿತ್ಯ ಯಥಾಶಕ್ತಿ ಶ್ರದ್ಧೆಯಿಂದ ಜಪ ಮಾಡಿದರೆ,  ಅಜ್ಞಾನ, ದು:ಖ, ಭಯ, ಹಲವು ಬಗೆಯ ರೋಗಗಳು, ಮಾರಕವಾದ ವಿಷಗಳು ಇವನ್ನೆಲ್ಲ ಪರಿಹರಿಸಿ, ಸುಖವೀಯುವುದು.   

Sloka.05.ಒಬ್ಬ ಮಂತ್ರೋಪಾಸಕನು ಶ್ರದ್ಧಾ-ಭಕ್ತಿಯಿಂದ ಅಮೃತವನ್ನು ಸುರಿಸುತ್ತಿರುವ ಧನ್ವಂತರಿಯನ್ನು ಮನದಲ್ಲಿ ನೆನೆದು ರೋಗಿಯ ತಲೆಯ ಮೇಲಿ ಕೈಯನ್ನಿಟ್ಟು ಧನ್ವಂತರಿ ಮಹಾ ಮಂತ್ರವನ್ನು ಉಚ್ಚರಿಸಿದರೆ, ರೋಗವು ಪರಿಹಾರವಾಗುವುದು.   ಅಮೃತವನ್ನು ತಂದ ಧನ್ವಂತರಿಯನ್ನು ಸ್ತುತಿಸಿ ರೋಗಿಯ ತಲೆಯ ಮೇಲೆ ತನ್ನ ಕೈಯನ್ನಿಟ್ಟರೆ ರೋಗ ಪರಿಹಾರವಾಗುವುದಲ್ಲದೆ ಅದಕ್ಕೆ ಮೂಲವಾದ ಪಾಪವೂ ದೂರವಾಗುವುದು. 

Sloka.06.ಈ ಮಂತ್ರವನ್ನು ೧೦೦, ೧೦೦೦, ೧೦೦೦೦, ಲಕ್ಷ ಆವೃತ್ತಿ ರೋಗಿಗಳ ರೋಗ ನಿವೃತ್ತಿಗಾಗಿ ಜಪಿಸಬೇಕು.  ಸಜ್ಜನರ ದು:ಖ ಪರಿಹಾರಕ್ಕಾಗಿ ಈ ಮಂತ್ರವನ್ನೇ ಜಪಿಸಬೇಕು. 

Sloka.07.ಒಂದು ವಾರ ಕಾಲ ಪ್ರತಿನಿತ್ಯ ದಿನಕ್ಕೆ ಯಥಾಶಕ್ತಿ ಸಾವಿರಬಾರಿ “ಓಂ ಧನ್ವಂತರಿಯೇ ನಮ:” ಎಂದು ಜಪ ಮಾಡಿ ತರ್ಪಣ ಕೊಡಿರಿ ರೋಗಗಳು ಮಾಯವಾಗುತ್ತದೆ.
ಧನ್ವಂತರೋ ಮಹಾಮಂತ್ರ: ಸಂಸೃತಿವ್ಯಾಧಿನಾಶನ: | ಎಂದಿರುವ ಆಚಾರ್ಯರ ವಾಣಿಯಂತೆ ಧನ್ವಂತರಿ ಮಂತ್ರವು ಕ್ಷಣಿಕ ರೋಗಗಳನ್ನಷ್ಟೇ ಅಲ್ಲದೆ ಸಂಸಾರ ರೋಗವನ್ನೇ ಪರಿಹಾರ ಮಾಡುವ ಸಾಮರ್ಥ್ಯವುಳ್ಳದೆಂದಿದ್ದಾರೆ.  

Sloka.08.ರೋಗಿಯು ಭಗವಂತನಿಗೆ ನಿಶ್ಚಲ ಭಕ್ತನಾಗಿದ್ದರೆ ಧನ್ವಂತರಿ ಮಂತ್ರದಿಂದಲೇ ಗೋವಿನ ತುಪ್ಪ, ಕ್ಷೀರ, ಅಮೃತಬಳ್ಳಿ ಸಮಿತ್ತಿನಿಂದ ಹೋಮಿಸಿದರೆ, ಎಲ್ಲಾ ರೋಗಗಳೂ ನಾಶವಾಗುವುದು .

Sloka.09.ಭೂತ, ಪ್ರೇತ, ಪಿಶಾಚಾದಿಗಳ ಪೀಡೆ, ಅಪಮೃತ್ಯಾದಿಗಳ ಪರಿಹಾರಕ್ಕಾಗಿ,  ಉತ್ತರಣೆಯ ಸಮಿಧೆಗಳಿಂದ ಹೋಮವನ್ನು ಮಾಡಿ, ಅದಕ್ಕಿಂತ ಇಮ್ಮಾಡಿ  ಅಮೃತ ಬಳ್ಳಿಯ ಸಮಿಧೆಗಳಿಂದ ಅಥವಾ ಆಜ್ಯದಿಂದ ಹೋಮಿಸಬೇಕು. 

Sloka.10.ಆಯುಷ್ಯಾಭಿವೃದ್ಧಿಗಾಗಿ ಪ್ರತಿನಿತ್ಯವೂ, ಅಥವಾ ಜನ್ಮ ನಕ್ಷತ್ರ ದಿನದಲ್ಲಾಗಲೀ, ಆಕಳ ಹಾಲು ತುಪ್ಪ ಮಿಶ್ರವಾದ, ಕದಿರಿನ ಕುಡಿಗಳಿಂದ ಹೋಮಮಾಡಬೇಕು.

Sloka.11.ಹೋಮ ಮಾಡತಕ್ಕವನಿಗೆ ಹರಿಭಕ್ತ್ಯಾದಿ ಗುಣಗಳಿಲ್ಲದಿದ್ದರೆ ಸರ್ವಥಾ ಫಲಿಸದು.  ಸದಾಚಾರ ಸಂಪನ್ನರಾದ ಹರಿ ಗುರು ಭಕ್ತರಿಂದಲೇ ಜಪ ಹೋಮ ಮೊದಲಾದ ಸರ್ವಕ್ರಿಯೆಗಳೂ ಹರಿಸ್ಮರಣ ಪೂರ್ವಕ ಮಾಡಿರೆ ಫಲ ನಿಶ್ಚಯ.
++++++++++++

धन्वंतरि वेद मंत्र – ಧನ್ವಂತರಿ ವೇದ ಮಂತ್ರ –
अयं मे हस्तो भगवान् अयं मे भगवत्तर: ।
अयं मे विश्वभेषजोऽयं शिवाभिमर्शन: । ऋग्वेद ।
ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರ: |
ಅಯಂ ಮೇ ವಿಶ್ವಭೇಷಜೋಽಯಂ ಶಿವಾಭಿಮರ್ಶನ: | ಋಗ್ವೇದ |

Vaadiraaja Tirtha kruta Dashavatara stotra  :

ಧನ್ವಂತರೇಽಗರುಚಿ ಧನ್ವಂತರೇಽರಿತರು ಧನ್ವಂಸ್ತರಿ ಭವಸುಧಾ-
ಭಾನ್ವಂತರಾವಸಥ ಮನ್ವಂತರಾಧಿಕೃತ ತನ್ವಂತರೌಷಧನಿಧೇ |
ಧನ್ವಂತರಂಗ ಶುಗು ಧನ್ವಂತಮಾಜಿಷು ವಿತನ್ವನ್ಮಮಾಬ್ಧಿತನಯಾ-
ಸೂನ್ವಂತಕಾತ್ಮ ಹೃದ ತನ್ವಂತರಾವಯವ ತನ್ವಂತರಾತ್ರಿ ಜಲಧೌ ||

धन्वंतरेऽगरुचि धन्वंतरेऽरितरु धन्वंस्तरि भवसुधा-
भान्वंतरावसथ मन्वंतराधिकृत तन्वंतरौषधनिधे ।
धन्वंतरंग शुगु धन्वंतमाजिषु वितन्वन्ममाब्धितनया
सून्वंतकात्म हृद तन्वंतरावयव तन्वंतरात्रि जलधौ ॥

Sri Gopaladasaru did the ayurdaana to Jagannatha Dasaru with the shakthi of Dhanvantary Mantra only.

ಗೋಪಾಲದಾಸರ ಕೃತಿ :
ಆವ ರೋಗವೋ ಎನಗೆ ದೇವ ಧನ್ವಂತ್ರಿ      | ಪ |
ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ | ಅ.ಪ |

ಹರಿ ಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ
ಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆ
ಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ  | ೧ |

ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು
ಗುರುಹಿರಿಯರಂಘ್ರಿಗೆ ಶಿರ ಬಾಗದು
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ | ೨ |

ಅನಾಥ ಬಂಧು ಗೋಪಾಲವಿಠಲರೇಯ
ಎನ್ನ ಬಾಗದ ವೈದ್ಯ ನೀನೆಯಾದೆ
ಅನಾದಿ ಕಾಲದ ಭವರೋಗ ಕಳೆಯಯ್ಯಾ
ನಾನೆಂದಿಗು ಮರೆಯೇ ನೀ ಮಾಡಿದುಪಕಾರ | ೩ |
*********

No comments:

Post a Comment