Friday 1 October 2021

ಶ್ರೀ ದುರ್ಗಾ ಸ್ತುತಿ

   ಶ್ರೀ ದುರ್ಗಾ ಸ್ತುತಿ # 


ಸರ್ವ ಮಂಗಲ  ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ

ಶರಣ್ಯೇ ತ್ರಂಬಿಕೆ ಗೌರೀ ನಾರಾಯಣಿ ನಮೋಸ್ತುತೆ!

ಶರಣಾಗತ ದೀನಾರ್ಥ ಪರಿತ್ರಾನ ಪರಾಯಣೇ

ಸರ್ವಸ್ಯಾರ್ತಿ ಹರೇ ದೇವಿ ನಾರಾಯಣಿ ನಮೋಸ್ತುತೆ!

ಸರ್ವ ಸ್ವರೂಪೇ ಸರ್ವೇಶೇ  ಸರ್ವ ಶಕ್ತಿ ಸಮನ್ವಿತೇ

ಭಯೇಭ್ಯಸ್ರಾಹಿ ನೋ ದೇವಿ ದುರ್ಗೆ ದೇವಿ ನಮೋಸ್ತುತೆ! 


ಯಾವುದೇ ಕಷ್ಟಕ್ಕೆ ಸಿಲುಕಿದರು ನಮ್ಮ ಪೂರ್ವಿಕರು ದೈವ ಕೃಪೆಯ ಮೋಲಕವೇ ಎದುರಿಸಿದ್ದಾರೆ. ಈ ಸ್ತೋತ್ರ ಸಪ್ತಶತಿಯ 11ನೇ ಅಧ್ಯಾಯದಲ್ಲಿ ಬರುತ್ತದೆ ಅತ್ಯಂತ ಪ್ರಭಾವಶಾಲಿ ಸ್ತೋತ್ರವಾಗಿದೆ.  ಈ ಸರಳವಾದ ಸ್ತೋತ್ರವನ್ನು ಪ್ರತಿದಿನ ಬೆಳಿಗ್ಗೆ, ಸಂಜೆ ಹಾಗೂ ರಾತ್ರಿ ಮಲಗುವಾಗ ದೇವರ ಮುಂದೆ  ಇದನ್ನು ಹೇಳಿ ಆಕೆಗೆ ಶರಣಾದರೆ,  ದುರ್ಗಾಪರಮೇಶ್ವರಿ ಅವರ 

ಕಷ್ಟವನ್ನು ಮಂಜಿನಂತೆ ಕರಗಿಸಿ ಕೈ ಹಿಡಿದು ಕಾಪಾಡುತ್ತಾಳೆ. 


#ದೇವಿ #ಸ್ತುತಿ (ಅರ್ಥ ಸಹಿತ)


ಯಾ ದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||


ಯಾವ ದೇವಿ ವಿಷ್ಣು ಮಾಯೆಯೆಂದು ಎಲ್ಲ ಭೂತಳಲ್ಲೂ ನೆಲಸಿರವಳೋ

ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.


ಯಾ ದೇವೀ ಸರ್ವಭೂತೇಷು ಚೇತನೇತ್ಯಭಿಧೀಯತೇ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||


ಯಾವ ದೇವಿ ಚೈತನ್ಯದ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ

ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.


ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||


ಯಾವ ದೇವಿ ಶಕ್ತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ

ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.


ಯಾ ದೇವೀ ಸರ್ವಭೂತೇಷು ಶಾಂತಿ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||


ಯಾವ ದೇವಿ ಶಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ

ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.


ಯಾ ದೇವೀ ಸರ್ವಭೂತೇಷು ಶ್ರದ್ಧಾ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||


ಯಾವ ದೇವಿ ಶ್ರದ್ಧೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ

ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.


ಯಾ ದೇವೀ ಸರ್ವಭೂತೇಷು ಕಾಂತಿ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||


ಯಾವ ದೇವೀ ಕಾಂತಿ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ

ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.


ಯಾ ದೇವೀ ಸರ್ವಭೂತೇಷು ದಯಾ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||


ಯಾವ ದೇವಿ ದಯೆಯ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ

ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.


ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||


ಯಾವ ದೇವಿ ಮಾತೃ ರೂಪದಲ್ಲಿ ಎಲ್ಲ ಭೂತಳಲ್ಲೂ ನೆಲಸಿರವಳೋ

ಆಕೆಗಿದೋ ನಮ್ಮ ನಮಸ್ಕಾರ, ನಮ್ಮ ನಮಸ್ಕಾರ, ನಮ್ಮ ನಮಸ್ಕಾರ.


ಸರ್ವಮಂಗಲ ಮಾಂಗಲ್ಯೆ ಶಿವೇ ಸರ್ವಾರ್ಥಸಾಧಿಕೆ |ಶರಣ್ಯೆ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ ||


ಸರ್ವಮಂಗಲಮಯೀ ಶಿವೇ ಸಕಲಾಭಿಷ್ಟ ಸಾಧಿಕೇ

ಆತ್ರಯದಾತೆಯೆ, ತ್ರಿಯಂಬಕೆ, ಗೌರಿ, ನಾರಾಯಣಿ ನಿನಗಿದೋ ನಮ್ಮ ನಮಸ್ಕಾರ.


ಸೃಷ್ಟಿಸ್ಥಿತಿ ವಿನಾಶಾನಾಂ ಶಕ್ತಿಭೂತೇ ಸನಾತನೀ |ಗುಣಾಶ್ರಯೇsಗಣಮಯೇ ನಾರಾಯಣಿ ನಮೋಸ್ತು ತೇ ||


ಸೃಷ್ಟಿಸ್ಥಿತಿ ವಿನಾಶಕಾರಣಿ, ಶಕ್ತಿಮಯೀ ದೇವಿ.

ತ್ರಿಗುಣಾತ್ಮಕೆಯಾಗಿಯೂ ಅದನ್ನು ಮೀರಿಹೆ, ನಿನಗಿದೋ ನಮ್ಮ ನಮಸ್ಕಾರ.


ಶರಣಾಗತದೀನಾರ್ತ ಪರಿತ್ರಾಣ ಪರಾಯಣೇ |ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಸ್ತು ತೇ ||


ಶರಣು ಬಂದ ದೀನರಿಗೂ ಆರ್ತರಿಗೂ ನೀನೆ ಶರಣು ದೇವಿ

ಎಲ್ಲ ಜೀವಿಗಳ ಎಲ್ಲ ದಃಖವನ್ನೂ ಪರಿಹರಿಪ ನಿನಗಿದೋ ನಮ್ಮ ನಮಸ್ಕಾರ.


ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ |ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಸ್ತು ತೇ ||

***


ಶಕ್ತಿ ಮಾತೆ ದುರ್ಗಾದೇವಿ :- 


ಶಾಖಾಪುರ  ಗ್ರಾಮದಲ್ಲಿ ವಿಶಾಲವಾದ ದುರ್ಗಾದೇವಿಯ ದೇವಸ್ಥಾನವಿದ್ದು

ದುರ್ಗಾಮಾತೆ  ಪೂಜೆಯನ್ನು ಗ್ರಾಮದ  ಹರಿದಾಸ  ಎಂಬುವನು ವಿಶೇಷ ಶ್ರದ್ಧಾ ಭಕ್ತಿ ಹಾಗೂ ನಿಷ್ಠೆಯಿಂದ ದೇವಿಯ ಸೇವೆ ಮಾಡುತ್ತಿದ್ದನು. 


ಮನೆಯಲ್ಲಿ ಪತ್ನಿ ಸುಧಾ ಮಗ ರವಿ ಜೊತೆ ನೆಮ್ಮದಿಯಿಂದ ಜೀವನ ಮಾಡುತ್ತಿದ್ದನು. ನವರಾತ್ರಿ ಹಬ್ಬ ಬಂದಿತು. ದುರ್ಗಾದೇವಿ ಪೂಜೆಯನ್ನು ವಿಶೇಷವಾಗಿ ಮಾಡಲು ಗ್ರಾಮದ ಜನರ ಜೊತೆ ಸಾಕಷ್ಟು ತಯಾರಿ ನಡೆಸಿದನು. ಮಂದಿರಕ್ಕೆ ಬರುವ ಭಕ್ತರಿಗೆ ಯಾವ ತೊಂದರೆಯೂ ಆಗದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿದನು. 


ಮೊದಲ ದಿನದ ನವರಾತ್ರಿ ಹಿಂದಿನ ದಿನ ರಾತ್ರಿ ಶ್ರೀಹರಿ ಮಲಗಿರುವಾಗ, ಕನಸಿನಲ್ಲಿ ದುರ್ಗಾದೇವಿ ಬಂದಂತಾಗಿ, ಹರಿದಾಸ ನೀನು  ಕುಟುಂಬದವರು ನನ್ನನ್ನು ಚೆನ್ನಾಗಿ ಆರಾಧಿಸುತ್ತಾ ನಡೆದು ಬಂದಿದ್ದೀರಿ  ನಾನು ಸಂತುಷ್ಟ ಳಾಗಿದ್ದೇನೆ. ಆದರೆ ನನಗೆ ಈ ಗ್ರಾಮದಲ್ಲಿರಲು ಇಷ್ಟವಿಲ್ಲ ನನ್ನನ್ನು ಇಲ್ಲಿಂದ ಬೇರೆ ಕಡೆ ಕರೆದುಕೊಂಡು ಹೋಗಿ ಬೇರೆ ಕಡೆ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಸು ಎಂದಳು. ಶ್ರೀ ಹರಿ,  ದೇವಿಗೆ ಕೈಮುಗಿದು, ಅಮ್ಮ ,ತಾಯಿ ಈ ಗ್ರಾಮದಿಂದ ನಿನಗೆ  ಯಾವ ತೊಂದರೆ ಆಗಿದೆ ಹಾಗೂ ಗ್ರಾಮದವರ ಮೇಲೆ ನಿನಗೆ ಏಕೆ ಕೋಪ ಎಂದು ಕೇಳಿದನು. 


ತಾಯಿ ಭಗವತಿಯು ಮಾತನಾಡಿ, ಭಕ್ತಾ, ನಿನ್ನ  ಗ್ರಾಮದ ಜನರು ನನ್ನನ್ನು ಚೆನ್ನಾಗಿ ಆರಾಧಿಸುತ್ತಾರೆ. ನನಗಾಗಿ ಬೇಕಾದಷ್ಟು ಸೇವೆಯನ್ನು ಮಾಡುತ್ತಾರೆ.

ಆದರೆ ಯಾರಿಗೂ ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟುವುದು ಬೇಡ ಎನ್ನುತ್ತಾರೆ. ಹುಟ್ಟಿದ ಹೆಣ್ಣು ಮಕ್ಕಳನ್ನು ಮಾರುತ್ತಾರೆ. 


ಯಾವ ಸ್ಥಳದಲ್ಲಿ 

ಸ್ತ್ರೀಯರಿಗೆ ಮತ್ತು ಮಕ್ಕಳಿಗೆ ಪ್ರೀತಿ ಗೌರವ ಕೊಡುವುದಿಲ್ಲವೋ ಅಲ್ಲಿ ನೆಲೆಸಿರಲು ನನಗೆ ಸಾಧ್ಯವಿಲ್ಲ. ನನ್ನ ಪೂಜೆ  ಮಾಡುತ್ತಾರೆ ಬೇಕು ಬೇಕಾದ ಅಭೀಷ್ಟಗಳನ್ನು ನೆರವೇರಿಸಲು ಕೇಳಿಕೊಳ್ಳುತ್ತಾರೆ. ಆದರೆ ಮನೆಯಲ್ಲಿ  ಹೆಣ್ಣು ಮಕ್ಕಳು ಬೇಡ ಎನ್ನುತ್ತಾರೆ ಆದ್ದರಿಂದ ನನಗೆ ಇಲ್ಲಿರಲು ಇಷ್ಟವಿಲ್ಲ ಎಂದು ಅದೃಶ್ಯಳಾದಳು. 


ಹರಿದಾಸನಿಗೆ  ಎಚ್ಚರವಾಯಿತು. ಎದ್ದವನೇ ಪತ್ನಿ ಸುಧಾ ಗೆ ತಾನು ಕಂಡ ಸ್ವಪ್ನವನ್ನು  ತಿಳಿಸಿದ. ಆಕೆಯು, ನೋಡಿ ಇದು ಬಹಳ ಮುಖ್ಯವಾದ ವಿಚಾರ ಆದ್ದರಿಂದ  ಗ್ರಾಮದ ಮುಖ್ಯಸ್ಥರಿಗೆ ತಿಳಿಸಿಬಿಡಿ ಎಂದಳು. ಹರಿದಾಸ ಗ್ರಾಮದ ಮುಖ್ಯಸ್ಥರಿಗೆ  ತಿಳಿಸುತ್ತಿದ್ದಂತೆ ನಿಧಾನವಾಗಿ ಈ ವಿಷಯ ಊರಿಗೇ ಹರಡಿತು. 


ಗ್ರಾಮದ ಜನರೆಲ್ಲರೂ ದೇವಸ್ಥಾನದಲ್ಲಿ  ಸೇರಿದರು. ಗ್ರಾಮದ ಮುಖ್ಯಸ್ಥ  ಹರಿದಾಸನಿಗೆ ಬಿಟ್ಟ ಕನಸಿನ  ವೃತ್ತಾಂತವನ್ನು ಗ್ರಾಮದವರಿಗೆ ಹೇಳಿ ನಮ್ಮ ಗ್ರಾಮವನ್ನು ಯಾವ ರೀತಿ ರಕ್ಷಿಸಬೇಕು ನೀವೇ ಹೇಳಿ ಎಂದನು. ಆದರೆ ಕೆಲವರು ಅವರವರಲ್ಲೇ ಮಾತಾಡಿಕೊಂಡು, ಮುಖ್ಯಸ್ಥರೇ, ಈ ಪಂಡಿತರು ಸುಳ್ಳು ಹೇಳುತ್ತಿದ್ದಾನೆ ಇಷ್ಟು ವರ್ಷಗಳಿಂದ ನಾವು ಸೇವೆ ಮಾಡಿಕೊಂಡು ಬಂದಿದ್ದೇವೆ ಮಳೆ, ಬೆಳೆ, ಆರೋಗ್ಯ ಎಲ್ಲವೂ ಗ್ರಾಮದಲ್ಲಿದೆ. ನಮಗೆ ಬೀಳದ ಸ್ವಪ್ನ ಇವನಿಗೆ ಬಿದ್ದಿದೆ ಎಂದರೆ ನಂಬುವುದು ಹೇಗೆ? ಆದ್ದರಿಂದ ಇವನು ಹೇಳಿದ್ದೆಲ್ಲ ಸುಳ್ಳು ಎಂದು ಹೊರಟು ಹೋದರು. 


ಆಗ ಗ್ರಾಮದ ಮುಖ್ಯಸ್ಥನು ಹರಿದಾಸನಿಗೆ,  ಜನಗಳ ಮಾತು ಹೀಗಿರುವಾಗ ಅವರೀಗ  ಯಾವುದನ್ನು ನಂಬುವುದಿಲ್ಲ ಆದುದರಿಂದ ನಮ್ಮ ಗ್ರಾಮದ ರಕ್ಷಣೆಗಾಗಿ ನೀನೆ ರಾಜನ ಹತ್ತಿರ ಹೋಗಿ ಎಲ್ಲ ವಿಚಾರವನ್ನು ಹೇಳಿ ಏನಾದರೂ ಉಪಾಯ ಮಾಡಲು ತಿಳಿಸು  ಎಂದನು. 


ಮುಂದಿನ ಕೆಲವೇ ದಿನಗಳಲ್ಲಿ ಹರಿದಾಸನು ರಾಜನನ್ನು ಕಾಣಲು ಅರಮನೆಗೆ ಬಂದು, ತನ್ನ ಸ್ವಪ್ನ ವೃತ್ತಾಂತವನ್ನು ದರ್ಬಾರ್ ನಲ್ಲಿ ರಾಜನಿಗೆ  ತಿಳಿಸಿದನು.ಎಲ್ಲವನ್ನು ತಿಳಿದು ಯೋಚಿಸಿದ ರಾಜನು, ಗ್ರಾಮ ದೇವತೆ ಭಗವತಿ ಗ್ರಾಮದ ಮೇಲೆ ಕೋಪ ಮಾಡಿಕೊಂಡರೆ, ಅದು ರಾಜ್ಯಕ್ಕೂ ನಷ್ಟವಾಗುತ್ತದೆ. 


ತಕ್ಷಣ ರಾಜನು  ಇಬ್ಬರ ಸೈನಿಕರನ್ನು ಕರೆದು,  ಶಾಖಾಪುರ ಗ್ರಾಮದಲ್ಲಿ ,ಹುಟ್ಟಿದ ಹೆಣ್ಣು ಮಗುವಿಗೆ ತೊಂದರೆ ಮಾಡುವುದಾಗಲಿ, ಭ್ರೂಣ ಹತ್ಯೆ,ಮತ್ತು ಪ್ರಾಣಿ ಹತ್ಯೆಗಳನ್ನು ಮಾಡಿದ್ದು ಕಂಡುಬಂದಲ್ಲಿ  ಕೂಡಲೇ ಅವರಿಗೆ ಕಠಿಣ ಶಿಕ್ಷೆ ವಿಧಿಸಿ ಕಾರಾಗೃಹಕ್ಕೆ ತಳ್ಳುವುದಾಗಿ ಎಚ್ಚರಿಕೆ ಕೊಟ್ಟು,  ಗ್ರಾಮದ ಮೂಲೆ ಮೂಲೆ ಯನ್ನು ಬಿಡದೆ ಎಚ್ಚರದಿಂದ  ಕಾವಲು ಕಾಯುತ್ತಾ ಇರಬೇಕು ಎಂದು ಆಜ್ಞೆ ಮಾಡಿದನು. ಈಗ ಹರಿದಾಸನಿಗೆ ಸಮಾಧಾನವಾಗಿ ಸಂತೋಷದಿಂದ ರಾಜನಿಗೆ ನಮಸ್ಕರಿಸಿ ಗ್ರಾಮಕ್ಕೆ ಬಂದನು. 


ಗ್ರಾಮದ ಮುಖ್ಯಸ್ಥನಿಗೆ ವಿಷಯವನ್ನು ತಿಳಿಸಿದನು. ನೆಮ್ಮದಿಯಾದ ಮುಖ್ಯಸ್ಥರು, ಹರಿದಾಸ ನೀನು ದುರ್ಗಾದೇವಿಯ ಪರಮ ಭಕ್ತ. ನವರಾತ್ರಿ 9 ದಿನಗಳೂ ದೇವಿಗೆ ಅಖಂಡ ಜ್ಯೋತಿ ದೀಪವನ್ನು ಬೆಳಗಿ, ಹಗಲು ರಾತ್ರಿ ಯು

ದೀಪಾರಾಧನೆ, ವಿಶೇಷ ಪೂಜೆಯನ್ನು ಮಾಡು, ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯವನ್ನು  ಮಾಡಿ ಕೊಡುತ್ತೇನೆ ಎಂದರು.‌ ಇದನ್ನು ಕೇಳಿ ಸಂತಸಗೊಂಡ ಹರಿದಾಸ ಮನೆಗೆ ಬಂದು ಸುಧಾಗೆ  ತಿಳಿಸಿದನು. 


ಇಬ್ಬರು ಉತ್ಸಾಹ ಹಾಗೂ ಸಂತೋಷದಿಂದ ನವರಾತ್ರಿ 9 ದಿನಗಳು ದುರ್ಗಾದೇವಿ ದೇವಸ್ಥಾನದಲ್ಲಿ ಅಖಂಡ ಜ್ಯೋತಿ ಯನ್ನು ಬೆಳಗಿ, ಹಗಲು ರಾತ್ರಿ ಎಡೆಬಿಡದೆ ದೇವಿಯ ಧ್ಯಾನ ಪೂಜೆಗಳನ್ನು, ಶುದ್ಧ ಮಡಿಯಿಂದ ಮಾಡಿ, ದಿನಕ್ಕೊಂದು ವಿಶೇಷ ಅಲಂಕಾರ, ದೇವಿಯ ನೈವೇದ್ಯಕ್ಕೆ ಹಲವು ಬಗೆಯ ಪ್ರಸಾದಗಳನ್ನು ಮಾಡುತ್ತಾ , ಒಂಬತ್ತು ದಿನವೂ ನೇಮ ನಿಷ್ಠೆಗಳಿಂದ ಕಿಂಚಿತ್ತು ಲೋಪವಾಗದಂತೆ  ಕ್ರಮವಾಗಿ ಆಚರಿಸಿದರು. 


9ನೇ ದಿನ ರಾತ್ರಿ ಧ್ಯಾನದ ಸಮಯದಲ್ಲಿ  ಅಶರೀರವಾಣಿ  ಕೇಳಿದಂತೆ

ಭಾಸವಾಗಿ, ದೇವಿ ದುರ್ಗಾ ಮಾತೆ ಹರಿದಾಸ ಹಾಗೂ ಅವನ ಪತ್ನಿಯ ಮುಂದೆ ಪ್ರಕಟಗೊಂಡಳು. ಗಂಡ ಹೆಂಡತಿ ಇಬ್ಬರೂ ಭಕ್ತಿಯಿಂದ ವಿಧವಿಧವಾಗಿ ಪ್ರಾರ್ಥಿಸಿ ದೇವಿ ಪಾದ ಕಮಲಗಳಿಗೆ  ಶಿರಭಾಗಿ ನಮಸ್ಕರಿಸಿದರು. 


ಇಬ್ಬರಿಗೂ ಆಶೀರ್ವಾದ ಮಾಡಿದ ದೇವಿಯು ನಿಮ್ಮಿಬ್ಬರ ಪ್ರಯತ್ನಗಳು, ಕಠಿಣ ಉಪವಾಸ ವ್ರತ ಪೂಜೆಗಳಿಂದ ನನ್ನ ಕೋಪವೆಲ್ಲ ಶಾಂತಗೊಂಡಿದೆ ನಾನು ತೃಪ್ತಿಯಾಗಿದ್ದೇನೆ. ಇನ್ನು ಮುಂದೆ ಈ ಗ್ರಾಮದಿಂದ ಬೇರೆ ಕಡೆ ಹೋಗಲು  ಇಷ್ಟಪಡುವುದಿಲ್ಲ. ಇದೇ  ಮಂದಿರದಲ್ಲಿ  ನೆಲೆಸಿ ಭಕ್ತರನ್ನು ಕಾಯುತ್ತೇನೆ ಎಂದು ಹೇಳುತ್ತಲೇ, ಹರಿದಾಸ ದಂಪತಿಗೆ ಪ್ರಸಾದವನ್ನು  ಅನುಗ್ರಹಿಸಿ ಮಾಯವಾದಳು. 


ಮರುದಿನ ಬೆಳಿಗ್ಗೆ ಹರಿದಾಸನು  ಗ್ರಾಮದವರನ್ನೆಲ್ಲಾ ಕರೆಸಿ ದುರ್ಗಾಮಾತೆ

ಶಾಂತವಾಗಿರುವುದನ್ನು ಅವಳು ಅನುಗ್ರಹಿಸಿದ ವರ ಹಾಗೂ ಪ್ರಸಾದವನ್ನು 

ಗ್ರಾಮದ ನಿವಾಸಿಗಳಿಗೆ ತಿಳಿಸಿದನು.  


ರಾಜನ ಬಳಿಗೂ ಹೋಗಿ ಎಲ್ಲವನ್ನು ಹೇಳಿದನು. ಸ್ವತಃ ರಾಜನೇ ಶಾಖ ಗ್ರಾಮಕ್ಕೆ ಬಂದು, ಗ್ರಾಮದ ಜನತೆಯೊಡನೆ ದುರ್ಗಾದೇವಿಯ ಮಂದಿರಕ್ಕೆ ಬಂದು ದೇವಿಯಲ್ಲಿ ಕ್ಷಮೆ ಬೇಡಿದನು.  ಮತ್ತು ದೇವಿಯ  ಜಾತ್ರೆ -ಉತ್ಸವವನ್ನು ಸಂಭ್ರಮದಿಂದ ಆಚರಣೆಗೆ  ತಂದು  ಆಚರಿಸಿದನು. ಈ ರೀತಿಯಾಗಿ ಹರಿದಾಸನು ಯಾವುದನ್ನೂ  ಉದಾಸೀನಾ ಮಾಡದೆ ಮುನ್ನೆಚ್ಚರಿಕೆಯಿಂದ ಗ್ರಾಮದ  ದುರ್ಗಾದೇವಿಯನ್ನು ಗ್ರಾಮದಲ್ಲೇ ನೆಲೆಸುವಂತೆ ಮಾಡಿದನು. 

***

 

No comments:

Post a Comment