Saturday, 1 May 2021

ಶ್ರೀಪಾದರಾಜ ಸ್ತೊತ್ರಮ್ ವ್ಯಾಸರಾಜ ವಿರಚಿತಮ್

ವಾದಿಗಜಮಸ್ತಕಾಂಕುಶ ಸುಜನಬುಧಗೇಯ|

ಮೇದಿನಿಸುರವಂದ್ಯ ಶ್ರೀಪಾದರಾಯ||


ಸಕಲಶಾಸ್ತ್ರಕಲಾಪ ಸಂನ್ಯಾಸ ಕುಲದೀಪ|

ಸಕಲಸತ್ಯಸ್ಥಾಪ ಸುಜ್ಞಾನದೀಪ|

ಪಕಟಪಾವನರೂಪ ಅರಿಕುಜನಮತಲೋಪ

ನಿಶಟವರ್ಜಿತ ಪಾಪ ಕೀರ್ತಿಪ್ರತಾಪ


ಹರಿಪದಾಂಬುಜಭೃಂಗ ಪರಮತಾಹಿವಿಹಂಗ

ಪರಮಸುಗುಣಾಂತರಂಗ ಭವದುರಿತಭಂಗ

ಶರಣಕೀರ್ತೀತರಂಗ ಶತ್ರುತಿಮಿರಪತಂಗ

ಶರಣುಶುಭಚರಿತಾಂಗ

ಷಟ್ ಶಾಸ್ತ್ರ ಸಂಗ


ಸಿರಿಕೃಷ್ಣದಿವ್ಯಪಾದಾಬ್ಜಚಿಂತಾಲೋಲ

ವರಹೇಮವರ್ಣಮುನಿಪತಿಯ ಸುಕುಮಾರ

ಗುರುತಿಲಕ ಶ್ರೀಪಾದರಾಯ ಅಮಿತೋದ್ಧಾರ

ಶರಣುಸುರಧೇನು ಭಕ್ತಮಂದಾರ

*****

No comments:

Post a Comment