Friday, 29 November 2019

ಶ್ರೀ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರ ಜಗನ್ನಾಥ ದಾಸ ವಿರಚಿತಮ್ sri raghavendra ashtakshara stotra by jagannatha dasa

ಶ್ರೀ ರಾಘವೇಂದ್ರ  ಅಷ್ಟಾಕ್ಷರ ಸ್ತೋತ್ರವನ್ನು  ಶ್ರೀ  ಜಗನ್ನಾಥ ದಾಸರು  ಸಾಮಾನ್ಯ ಜನರ ಮನೋವಾಂಚ್ಯಾರ್ಥಗಳೆಲ್ಲಾ    ಪೂರ್ಣಗೊಳ್ಳಲಿ  ಹಾಗೂ   ಪ್ರತ್ಯೇಕವಾಗಿ ಸ್ತ್ರೀಯರಿಗೆ   ಸಕಲ ಭಾಗ್ಯಗಳನ್ನು ಅನುಗ್ರಹಿಸುವ  ಶ್ರೇಷ್ಠವಾದ ಸ್ತೋತ್ರವನ್ನು   ಅರ್ಪಿಸಿದ್ದಾರೆ .

ಪ್ರತಿ ದಿನ  " ಶ್ರೀ ರಾಘವೇಂದ್ರಾಯ ನಮಃ " ಎಂದು  ೧೦೮(108)  ಬಾರಿ ಯಾರು ಸ್ತುತಿಸುತ್ತಾರೋ  ಅವರಿಗೆ  ಸಕಲ ಅಭೀಷ್ಟಗಳು ಲಭಿಸುವುದು .

ಗುರುರಾಜಾಷ್ಟಾಕ್ಷರಂ  ಸ್ಯಾತ್  ಮಹಾಪಾತಕನಾಶನಂ ।
ಏಕೈಕಮಕ್ಷರಮ್ ಚಾತ್ರ  ಸರ್ವಕಾಮ್ಯಾರ್ಥ  ಸಿದ್ಧಿಮ್ ।।೧।।

ರಕಾರೋಚ್ಚಾರಣಮಾತ್ರೇಣ  ರೋಗಹಾನಿರ್ನ  ಸಂಶಯಃ ।
ಘಕಾರೇಣ ಬಲಂ  ಪುಷ್ಟಿಃ  ಆಯುಃ  ತೇಜಶ್ಚ ವರ್ಧತೇ ।।೨।।

ವಕಾರೇಣಾತ್ರ  ಲಭತೇ  ವಾಂಛಿತಾರ್ಥಾನ್ನ  ಸಂಶಯಃ ।
ದ್ರಕಾರೇಣಘರಾಶಿಸ್ತು  ದ್ರಾವ್ಯತೇ ದೃತಮೇವ ಹಿ ।।೩।।

ಯಕಾರೇಣ  ಯಮಾಧ್ಬಾಧೋ  ವಾರ್ಯತೇ  ನಾತ್ರ ಸಂಶಯಃ ।
ನಕಾರೇಣ  ನರೇಂದ್ರಾಣಾಂ  ಪದಮಾಪ್ನೋತಿ  ಮಾನವಃ ।।೪।।

ಮಕಾರೇಣೈವ  ಮಾಹೇಂದ್ರಮೈಶ್ವರ್ಯಂ  ಯಾತಿ ಮಾನವಃ ।
ಗುರೋರ್ನಾಮ್ನಾಶ್ಚ  ಮಹಾತ್ಮ್ಯಂ  ಅಪೂರ್ವಂ   ಪರಮಾದ್ಭುತಮ್ ।।೫।।
  
ತನ್ನಾಮಸ್ಮರಣಾದೇವ  ಸರ್ವಾಭೀಷ್ಟಂ  ಪ್ರಸಿದ್ಯತಿ ।
ತಸ್ಮಾನಿತ್ಯಂ  ಪಠೇಧ್ಭಕ್ತ್ಯಾ  ಗುರುಪಾದರತಸ್ಸದಾ ।।೬।।

ಶ್ರೀ ರಾಘವೇಂದ್ರಾಯ ನಮಃ  ಇತ್ಯಾಷ್ಟಾಕ್ಷರ  ಮಂತ್ರತಃ ।
ಸರ್ವಾನ್ಕಾಮಾನ್ವ್ಯಾಪ್ನೋತಿ  ನಾತ್ರ ಕಾರ್ಯಾ ವಿಚಾರಣಾಃ ।।೭।।

ಅಷ್ಟೋತ್ತರಶತಾವೃತ್ತಿಂ  ಸ್ತೋತ್ರಸ್ಯಾಸ್ಯ  ಕರೋತಿ ಯಃ ।
ತಸ್ಯ ಸರ್ವಾರ್ಥಸಿದ್ಧಿಸ್ಯಾತ್  ಗುರುರಾಜಪ್ರಸಾದತಃ ।।೮।।

ಏತದಷ್ಟಾಕ್ಷರಸ್ಯಾತ್ರ  ಮಹಾತ್ಮ್ಯಂ  ವೇತ್ತಿ  ಕಃ ಪುಮಾನ್ ।
ಪಠನಾದೇವ  ಸರ್ವಾರ್ಥಸಿಧ್ಧಿರ್ಭವತಿ  ನಾನ್ಯಥಾ ।।೯।।

ಸ್ವಾಮಿನಾ  ರಾಘವೆಂದ್ರಾಕ್ಯಾ   ಗುರುಪಾದಾಬ್ಜಸೇವಿನಾ ।
ಕೃತಮಷ್ಟಾಕ್ಷರ  ಸ್ತೋತ್ರಂ  ಗುರುಪ್ರೀತಿಕರಂ  ಶುಭಮ್ ।।೧೦।।

।। ಇತಿ ಶ್ರೀ ಜಗನ್ನಾಥಾದಾಸಾರ್ಯವಿರಚಿತ ಶ್ರೀರಾಘವೇಂದ್ರಅಷ್ಟಾಕ್ಷರಸ್ತೋತ್ರಂ ಸಂಪೂರ್ಣಂ ।।

                                   ।। ಶ್ರೀ ಕೃಷ್ಣಾರ್ಪಣಮಸ್ತು ।।
********


ಅರ್ಥ : ಶ್ರೀ ಮದ್ರಾಘವೇಂದ್ರತೀರ್ಥ  ಗುರುಸಾರ್ವಭೌಮರ ' ಶ್ರೀ ರಾಘವೇಂದ್ರಾಯ ನಮಃ ' ಎಂಬ ಅಷ್ಟಾಕ್ಷರ ಮಂತ್ರವು  ಮಹಾಪಾತಕಗಳನ್ನು  ಕಳೆಯುವಂಥದಾಗಿದೆ. ಇದರಲ್ಲಿರುವ ಒಂದೊಂದು ಅಕ್ಷರವು  ಸರ್ವಕಾಮ್ಯಾರ್ಥಗಳನ್ನು  ಕೊಡುವಂಥದಾಗಿದೆ. 1

ಅರ್ಥ : ರಕಾರದ  ಉಚ್ಛಾರಣೆಯಿಂದ  ರೋಗಹಾನಿಯಾಗುವುದಲ್ಲಿ  ಸಂಶಯವಿಲ್ಲ . ಘಕಾರದ   ಉಚ್ಛಾರದಿಂದ  ಬಲ , ಪುಷ್ಟಿ , ಆಯುಷ್ಯ  ಮತ್ತು ತೇಜಸ್ಸು (ಶರೀರದ ಕಾಂತಿ ) ವರ್ಧಿಸುತ್ತದೆ. 2

ಅರ್ಥ : ವಕಾರೋಚ್ಛಾರಣದಿಂದ  ಭಕ್ತನು ವಾಂಛಿತಾರ್ಥಗಳನೆಲ್ಲ  ಪಡೆಯುತ್ತಾನೆ . ದ್ರಕಾರದ ಉಚ್ಛಾರಣದಿಂದ  ಪಾಪಗಳ ರಾಶಿಯು  ಕೂಡಲೇ  ನಿವಾರಣೆಯಾಗುತ್ತದೆ . 3

ಅರ್ಥ :  ಯಕಾರದ  ಉಚ್ಛಾರದಿಂದ  ಯಮ ಬಾಧೆಯು  ನಿಶ್ಚಿತವಾಗಿ  ನಿವಾರಿಸಲ್ಪಡುತ್ತದೆ . ನಕಾರದ  ಉಚ್ಛಾರದಿಂದ  ಭಕ್ತನು ರಾಜಪದವಿಯನ್ನು ( ಉನ್ನತ  ಅಧಿಕಾರದ ಸ್ಥಾನವನ್ನು) ಹೊಂದುತ್ತಾನೆ . 4

ಅರ್ಥ : ಮಕಾರೋಚ್ಛಾರದಿಂದ  ಇಂದ್ರನ ಐಶ್ವರ್ಯವನ್ನು  ಪಡೆಯುವನು. ಈ ರೀತಿ ಶ್ರೀಮದ್ರಾಘವೇಂದ್ರತೀರ್ಥ   ಗುರುಸಾರ್ವಭೌಮರ  ಹೆಸರಿನ ಮಹಾತ್ಮ್ಯವು  ಹಿಂದೆಂದೂ  ಕಾಣದಂತಹ  ಪರಮಾಶ್ಚರ್ಯಭರಿತದಿಂದ  ಒಳಗೊಂಡಿದೆ . 5

ಅರ್ಥ : ಅಷ್ಟಾಕ್ಷರ ಮಂತ್ರವನ್ನು  ಸ್ಮರಣೆ ಮಾತ್ರದಿಂದಲೇ  ಸರ್ವಾಭೀಷ್ಟವು  ಲಭಿಸುವುದು . ಆದ್ದರಿಂದ  ಗುರುವರ್ಯರ ಪಾದಗಳನ್ನು ಆಶ್ರಯಿಸಿದ  ಭಕ್ತನು  ಈ ಮಂತ್ರವನ್ನು ನಿತ್ಯವೂ ಭಕ್ತಿಯಿಂದ ಪಠನೆ ಮಾಡಬೇಕು . 6

ಅರ್ಥ : ಶ್ರೀ ರಾಘವೇಂದ್ರಾಯ ನಮಃ  ಎಂಬ  ಅಷ್ಟಾಕ್ಷರ ಮಂತ್ರ ಜಪವನ್ನು ಮಾಡುವುದರಿಂದ  ಭಕ್ತನು  ತನ್ನೆಲ್ಲಾ  ಅಭೀಷ್ಟಗಳನ್ನು ಪಡೆಯುವುದರಲ್ಲಿ   ಸಂಶಯವಿಲ್ಲಾ. 7

ಅರ್ಥ : ಯಾರು ಶ್ರೀ ಗುರು ಸಾರ್ವಭೌಮರ  ಸ್ತೋತ್ರವನ್ನು ೧೦೮ ಬಾರಿ ಪಠಿಸುವರೋ  ಅವರಿಗೆ  ಗುರುವರ್ಯರ  ಅನುಗ್ರಹದಿಂದ ಸಕಲಕಾಮನೆಗಳು  ಸಿಧ್ಧಿಸುತ್ತದೆ . 8

ಅರ್ಥ :  ಈ ಅಷ್ಟಾಕ್ಷರ  ಮಂತ್ರದ ಮಹಾತ್ಮೆಯನ್ನು  ಯಾವ ಭಕ್ತನು  ಸಂಪೂರ್ಣವಾಗಿ ತಿಳಿಯಲು 
ಸಮರ್ಥನಾದಾನು ? ಈ ಅಷ್ಟಾಕ್ಷರ ಮಂತ್ರ ಪಠನೆಯಿಂದ  ಮಾತ್ರವೇ  ಸರ್ವಾರ್ಥಗಳ  ಸಿಧ್ಧಿಯಾಗುತ್ತದೆ  ಬೇರೆ ಮಾರ್ಗದಿಂದ ಅದು ಸಾಧ್ಯವಿಲ್ಲ . 9

ಅರ್ಥ : ಶ್ರೀರಾಘವೇಂದ್ರ ತೀರ್ಥರೆಂಬ  ಗುರುವರ್ಯರ  ಪಾದಕಮಲಗಳನ್ನು  ಸದಾ ಸೇವಿಸುತ್ತಿರುವ  ಸ್ವಾಮಿರಾಯ ಎಂಬುವರಿಂದ , ಗುರುಗಳಿಗೆ  ಪೀತಿಯನ್ನುಂಟು  ಮಾಡುವ ಶುಭಕರವಾದ  ಈ ಅಷ್ಟಾಕ್ಷರ ಸ್ತೋತ್ರವು  ವಿರಚಿಸಲ್ಪಟ್ಟಿದೆ . 10
*******

No comments:

Post a Comment