Wednesday 1 December 2021

ನಾರಾಯಣ ನಾರಾಯಣ ಜಯ ಗೋವಿಂದ ನಾರಾಯಣ ಸ್ತೋತ್ರಮ್ ಆದಿ ಶಂಕರಾಚಾರ್ಯ ಕೃತಂ NARAYANA NARAYANA JAYA GOVINDA NARAYANA STOTRAM by adi shankaracharya





ನಾರಾಯಣ ನಾರಾಯಣ ಜಯ ಗೋವಿಂದ ಹರೇ ||

ನಾರಾಯಣ ನಾರಾಯಣ ಜಯ ಗೋಪಾಲ ಹರೇ ||

ಕರುಣಾಪಾರಾವಾರ ವರುಣಾಲಯಗಂಭೀರ ನಾರಾಯಣ || 1 ||
ಘನನೀರದಸಂಕಾಶ ಕೃತಕಲಿಕಲ್ಮಷನಾಶನ ನಾರಾಯಣ || 2 ||

ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ನಾರಾಯಣ || 3 ||
ಪೀತಾಂಬರಪರಿಧಾನ ಸುರಕಳ್ಯಾಣನಿಧಾನ ನಾರಾಯಣ || 4 ||

ಮಂಜುಲಗುಂಜಾಭೂಷ ಮಾಯಾಮಾನುಷವೇಷ ನಾರಾಯಣ || 5 ||
ರಾಧಾಧರಮಧುರಸಿಕ ರಜನೀಕರಕುಲತಿಲಕ ನಾರಾಯಣ || 6 ||

ಮುರಳೀಗಾನವಿನೋದ ವೇದಸ್ತುತಭೂಪಾದ ನಾರಾಯಣ || 7 ||
ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ನಾರಾಯಣ || 8 ||

ವಾರಿಜಭೂಷಾಭರಣ ರಾಜೀವರುಕ್ಮಿಣೀರಮಣ ನಾರಾಯಣ || 9 ||
ಜಲರುಹದಳನಿಭನೇತ್ರ ಜಗದಾರಂಭಕಸೂತ್ರ ನಾರಾಯಣ || 10 ||

ಪಾತಕರಜನೀಸಂಹಾರ ಕರುಣಾಲಯ ಮಾಮುದ್ಧರ ನಾರಾಯಣ || 11 ||
ಅಘ ಬಕಹಯಕಂಸಾರೇ ಕೇಶವ ಕೃಷ್ಣ ಮುರಾರೇ ನಾರಾಯಣ || 12 ||

ಹಾಟಕನಿಭಪೀತಾಂಬರ ಅಭಯಂ ಕುರು ಮೇ ಮಾವರ ನಾರಾಯಣ || 13 ||
ದಶರಥರಾಜಕುಮಾರ ದಾನವಮದಸಂಹಾರ ನಾರಾಯಣ || 14 ||

ಗೋವರ್ಧನಗಿರಿ ರಮಣ ಗೋಪೀಮಾನಸಹರಣ ನಾರಾಯಣ || 15 ||
ಸರಯುತೀರವಿಹಾರ ಸಜ್ಜನ//ಋಷಿಮಂದಾರ ನಾರಾಯಣ || 16 ||

ವಿಶ್ವಾಮಿತ್ರಮಖತ್ರ ವಿವಿಧವರಾನುಚರಿತ್ರ ನಾರಾಯಣ || 17 ||
ಧ್ವಜವಜ್ರಾಂಕುಶಪಾದ ಧರಣೀಸುತಸಹಮೋದ ನಾರಾಯಣ || 18 ||

ಜನಕಸುತಾಪ್ರತಿಪಾಲ ಜಯ ಜಯ ಸಂಸ್ಮೃತಿಲೀಲ ನಾರಾಯಣ || 19 ||
ದಶರಥವಾಗ್ಧೃತಿಭಾರ ದಂಡಕ ವನಸಂಚಾರ ನಾರಾಯಣ || 20 ||

ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ನಾರಾಯಣ || 21 ||
ವಾಲಿವಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ನಾರಾಯಣ || 22 ||

ಮಾಂ ಮುರಳೀಕರ ಧೀವರ ಪಾಲಯ ಪಾಲಯ ಶ್ರೀಧರ ನಾರಾಯಣ || 23 ||
ಜಲನಿಧಿ ಬಂಧನ ಧೀರ ರಾವಣಕಂಠವಿದಾರ ನಾರಾಯಣ || 24 ||

ತಾಟಕಮರ್ದನ ರಾಮ ನಟಗುಣವಿವಿಧ ಸುರಾಮ ನಾರಾಯಣ || 25 ||
ಗೌತಮಪತ್ನೀಪೂಜನ ಕರುಣಾಘನಾವಲೋಕನ ನಾರಾಯಣ || 26 ||

ಸಂಭ್ರಮಸೀತಾಹಾರ ಸಾಕೇತಪುರವಿಹಾರ ನಾರಾಯಣ || 27 ||
ಅಚಲೋದ್ಧೃತಚಂಚತ್ಕರ ಭಕ್ತಾನುಗ್ರಹತತ್ಪರ ನಾರಾಯಣ || 28 ||

ನೈಗಮಗಾನವಿನೋದ ರಕ್ಷಿತ ಸುಪ್ರಹ್ಲಾದ ನಾರಾಯಣ || 29 ||
ಭಾರತ ಯತವರಶಂಕರ ನಾಮಾಮೃತಮಖಿಲಾಂತರ ನಾರಾಯಣ || 30 ||
***

ನಾರಾಯಣ ಸ್ತೋತ್ರ

ಪ್ರಸ್ತಾವನೆ:

ಆದಿ ಶಂಕರಾಚಾರ್ಯರು ರಚಿಸಿರುವ ನಾರಾಯಣ ಸ್ತುತಿಗಳಲ್ಲಿ ಈ ಸ್ತೋತ್ರವು ಅತ್ಯಂತ ಮಧುರ ಹಾಗೂ ಸುಲಲಿತವಾದದ್ದು. ಈ ಸ್ತೋತ್ರವನ್ನು ಮೊದಲು ಅದರ ಅಮ್ತರಾರ್ಥವನ್ನು ಅರಿತು  ಪ್ರತಿದಿನವೂ ಮುಂಜಾನೆ ಪಠಿಸಿದಲ್ಲಿ ಮನಸ್ಸಿಗೆ ಶಾಂತಿ, ಉಂಟಾಗಿ ಎಲ್ಲ ದುಷ್ಟ ಶಕ್ತಿಗಳು ದುಉರಾಗುವುದು ಹಾಗೂ ಆರೋಗ್ಯ ಮತ್ತು ಅಭ್ಯುದಯವು ದೊರಕುವುದು. 

ಶ್ಲೋಕ - 1 -  ಸಂಸ್ಕೃತದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ 
ಕನ್ನಡದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರಿ
ನಾರಾಯಣ ನಾರಾಯಣ ಜಯ ಗೋಪಾಲ ಹರಿ

ವಿವರಣೆ :

ಎಲ್ಲರನ್ನೂ ರಕ್ಷಿಸುವ ಹೇ ದೇವಾ ! ಗೋವಿಂದ ! ನಾರಾಯಣ ! ಜಯವಾಗಲಿ
ಹೇ ಗೋಪಾಲ ! ಎಲ್ಲರನ್ನೂ ರಕ್ಷಿಸುವವ, ನಾರಾಯಣ ! ಜಯವಾಗಲಿ

ಶ್ಲೋಕ - 2 -  ಸಂಸ್ಕೃತದಲ್ಲಿ :

ಕರುಣಾಪಾರಾವಾರ ವರುಣಾಲಯಗಂಭೀರ ನಾರಾಯಣ
ಘನನೀರದಸಂಕಾಶ ಕೃತಕಲಿಕಲ್ಮಷನಾಶನ ನಾರಾಯಣ
ಕನ್ನಡದಲ್ಲಿ :

ಕರುಣೆಯ ಕಡಲು ಸಾಗರದೊಲು ಗಂಭೀರ ನಾರಾಯಣ
ಘನನೀರದ ಶ್ಯಾಮನೆ ಕಲಿಕಲುಷ ವಿನಾಶನ ನಾರಾಯಣ

ವಿವರಣೆ :

ಹೇ ದಯಾಸಾಗರನೇ ಎಲ್ಲ ದೇವರುಗಳಲ್ಲಿ ಸಾಗರದಂತೆ ಭವ್ಯವಾದ ನಾರಾಯಣನೇ ! ದಟ್ಟವಾದ ಮೋಡಗಳಂತೆ ಕಂಗೊಳಿಸುವ ಹೇ ದೇವನೆ ! ಕಲಿಯುಗದ ಹಾನಿಕಾರಕ ಹಾಗೂ ನೀಚತನವನ್ನು ನಾಶಮಾಡುವ ಹೇ ದೇವನೆ !

ಶ್ಲೋಕ - 3 -  ಸಂಸ್ಕೃತದಲ್ಲಿ :

ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ನಾರಾಯಣ
ಪೀತಾಂಬರಪರಿಧಾನ ಸುರಕಲ್ಯಾಣನಿಧಾನ ನಾರಾಯಣ
ಕನ್ನಡದಲ್ಲಿ :

ಯಮುನಾತೀರ ವಿಹಾರಿ ಕೌಸ್ತುಭಮಣಿಶೋಭಿತ ನಾರಾಯಣ
ಪೀತಾಂಬರಧಾರಿ ಸುರಕಲ್ಯಾಣನಿಧಿಯೆ ನಾರಾಯಣ

ವಿವರಣೆ :

ಯಮುನಾ ನದಿಯ ದಡದಲ್ಲಿ ಗೋಪಾಲಕರೊಂದಿಗೆ ಆಟ ಪಾಟಗಳೊಂದಿಗೆ ನಲಿದಾಡಿದ ಹಾಗೂ ಸಾಗರ ಮಥನದಲ್ಲಿ ಉದ್ಭವಿಸಿದ ಹದಿನಾಲ್ಕು ರತ್ನಗಳಲ್ಲಿ ನಾಲ್ಕನೇ ರತ್ನವಾದ ಕೌಸ್ತುಭಮಣಿಯಿಂದ ಕೂಡಿದ ಮಾಲೆಯನ್ನು ಧರಿಸಿರುವ ಓ ! ನಾರಾಯಣನೇ !
ದೈವತ್ವವನ್ನು ಪ್ರತಿನಿಧಿಸುವ ಹಳದಿ ಬಣ್ಣದ ರೇಷ್ಮೆ ವಸ್ತ್ರವನ್ನು ಧರಿಸಿ ಎಲ್ಲ ದೇವಾನು ದೇವತೆಗಳಿಗೆ ಸದಾಚಾರಗಳ ಭಂಡಾರನಾದ ಓ ! ನಾರಾಯಣನೇ !

ಶ್ಲೋಕ - 4 -  ಸಂಸ್ಕೃತದಲ್ಲಿ :

ಮಂಜುಲಗುಂಜಾಭೂಷ ಮಾಯಾಮಾನುಷವೇಷ ನಾರಾಯಣ
ರಾಧಾಧರಮಧುರಸಿಕ ರಜನೀಕರಕುಲತಿಲಕ ನಾರಾಯಣ
ಕನ್ನಡದಲ್ಲಿ :

ಮಂಜುಳ ಗುಂಜೀಹಾರ ವಿಭೂಷಿತ ಮಾಯಾ ಮಾನುಷವೇಷ ನಾರಾಯಣ
ರಾಧೆಯಧರ ಮಧುರಾಮೃತರಸಿಕ ಯದುವರ ನಾರಾಯಣ

ವಿವರಣೆ :

ಮಹಾಲಕ್ಷ್ಮಿಯನ್ನು ಸಂಕೇತಿಸುವ ರಕ್ತವರ್ಣದ ಗುಂಜ ಮಣಿಗಳಿಂದ ಕೂಡಿದ ಮುದ್ದಾದ ಹಾರವನ್ನು ಧರಿಸಿರುವ ಹಾಗೂ ಬೇಕೆಂದಾಗ ಅದೃಷ್ಯ ಮಾನವನ ರೂಪವನ್ನು ಧರಿಸುವ ಹೇ ದೇವ ದೇವನೇ ! ಓ ! ನಾರಾಯಣ !
ಬೃಂದಾವನದಲ್ಲಿನ ರಾಧೆಯ ತುಟಿಗಳಿಂದ ಹೊರಸೂಸುವ ಜೇನನ್ನು ಸವಿದು ಆನಂದಿಸಿದ ಹಾಗೂ ಚಂದ್ರವಂಶದ ರಾಜಕುವರನೇ ! ಓ ! ನಾರಾಯಣನೇ !

ಶ್ಲೋಕ - 5 -  ಸಂಸ್ಕೃತದಲ್ಲಿ :

ಮುರಲೀಗಾನವಿನೋದ ವೇದಸ್ತುತಭೂಪಾದ ನಾರಾಯಣ
ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ನಾರಾಯಣ
ಕನ್ನಡದಲ್ಲಿ :

ವೇಣುಗಾನ ವಿನೋದಿ ವೇದನುತಪಾದ ನಾರಾಯಣ
ನವಿಲಗರಿ ಧರಿಸಿದ ಘನಫಣಿಶಿರ ನರ್ತಕ ನಾರಾಯಣ

ವಿವರಣೆ :

ಕೊಳಲಿನಿಂದ ಸುಶ್ರಾವ್ಯವಾದ ಗಾಯನವನ್ನು ಹೊರಡಿಸಿ ಅದರಿಂದ ಆನಂದತುಂದಿಲನಾದ ಹೇ ದೇವನೇ ! ನಿನ್ನ ಪವಿತ್ರ ಪಾದ ಪದ್ಮಗಳನ್ನು ವೇದಗಳೇ ವೈಭವಯುತವಾಗಿ ಹೊಗಳಿ ಸ್ತುತಿಸಿರುವುದು ಓ ನಾರಾಯಣನೇ ! ವರ್ಣ ವೈವಿಧ್ಯಮಯ ನೀಲಿ ಬಣ್ಣದ ಸುಂದರ ನವಿಲಿಗರಿಯನ್ನು ಧರಿಸಿರುವ ಹೇ ದೇವನೇ ! ವಿಷಪೂರಿತ ಕಾಳಿಂಗ ಸರ್ಪದ ಹೆಡೆಯ ಮೇಲೇರಿ ನರ್ತಿಸಿದ ಹೇ ದೇವನೇ ! ನಾರಾಯಣನೇ !

ಶ್ಲೋಕ - 6 -  ಸಂಸ್ಕೃತದಲ್ಲಿ :

ವಾರಿಜಭೂಷಾಭರಣ ರಾಜೀವರುಕ್ಮಿಣೀರಮಣ ನಾರಾಯಣ
ಜಲರುಹದಲನಿಭನೇತ್ರ ಜಗದಾರಂಭಕಸೂತ್ರ ನಾರಾಯಣ
ಕನ್ನಡದಲ್ಲಿ :

ಜಲಜಾಭರಣ ಭೂಷಿತ ಜಲಧಿಸುತೆಯ ರಮಣ ನಾರಾಯಣ
ಜಲರುಹದಳದೊಲು ನಯನ ಜಗದುಗಮ ಸೂತ್ರ ನಾರಾಯಣ

ವಿವರಣೆ :

ಕಮಲ ಪುಷ್ಪವನ್ನೆ ಆಭರಣವನ್ನಾಗಿ ಧರಿಸಿರುವ ಹಾಗೂ ಪದ್ಮ ಪುತ್ರಿ ರುಕ್ಮಿಣಿಯ ರಮಣನೇ  ಓ, ದೇವ ! ನಾರಾಯಣನೇ ! ಪದ್ಮಪುಷ್ಪದಂಥಹ ನೇತ್ರವುಳ್ಳವನೇ ವಿಶ್ವ ಸೃಷ್ಟಿಗೇ ಕಾರಣನೇ ಓ ದೇವ ! ನಾರಾಯಣನೇ !

ಶ್ಲೋಕ - 7 -  ಸಂಸ್ಕೃತದಲ್ಲಿ :

ಪಾತಕರಜನೀಸಂಹರ ಕರುಣಾಲಯ ಮಾಮುದ್ಧರ ನಾರಾಯಣ
ಅಘ ಬಕಹಯಕಂಸಾರೇ ಕೇಶವ ಕೃಷ್ಣ ಮುರಾರೇ ನಾರಾಯಣ
ಕನ್ನಡದಲ್ಲಿ :

ಪಾತಕರಜ ಸಂಹಾರಕ ಕರುಣಾಲಯ ಉದ್ಧರಿಸೆನ್ನನು ನಾರಾಯಣ
ಅಘ ಬಕಹಯ ಕಂಸಾರಿಯೆ ಕೇಶವ ಕೃಷ್ಣಮುರಾರಿ ನಾರಾಯಣ

ವಿವರಣೆ :

ದುಷ್ಕರ್ಮಗಳ ಕತ್ತಲಿನ ಕೂಪವನ್ನು ನಾಶಮಾಡುವ ಓ ದೇವನೇ ! ನಿನ್ನ ಕರುಣೆಯಿಂದ ನನ್ನನ್ನು ಉದ್ಧರಿಸುವ ನಾರಾಯಣನೇ ! ನಿನ್ನ ಸೋದರಮಾವನಾದ ಕಂಸನು ಕಳುಹಿಸಿದ  ಅಘಾಸುರ ಹಾಗೂ ಭಗಾಸುರರನ್ನು ಸಂಹರಿಸಿದವನೇ ಹಾಗೂ ಕಂಸನ ಪರಮ ವೈರಿಯೇ ಮುರಾಸುರನ ವೈರಿಯೇ ಓ ಕೇಶವಾ ಕೃಷ್ಣಾ ನಾರಾಯಣನೇ !

ಶ್ಲೋಕ - 8 -  ಸಂಸ್ಕೃತದಲ್ಲಿ :

ಹಾಟಕನಿಭಪೀತಾಂಬರ ಅಭಯಂ ಕುರು ಮೇ ಮಾವರ ನಾರಾಯಣ
ದಶರಥರಾಜಕುಮಾರ ದಾನವಮದಸಂಹಾರ ನಾರಾಯಣ
ಕನ್ನಡದಲ್ಲಿ :

ಮಿಸುನಿಯೊಲಿಹ ಪೀತಾಂಬರಧರ ಅಭಯ ಕೊಡೆನಗೆ ಮಾರಮಣ ನಾರಾಯಣ
ದಶರಥ ರಾಜಕುಮಾರ ರಕ್ಕಸಮದಸಂಹಾರ ನಾರಾಯಣ

ವಿವರಣೆ :

ಬಂಗಾರದಂತೆ ಝಗ ಝಗಿಸುವ ಹಳದಿ ಬಣ್ಣದ ಪೀತಾಂಬರವನ್ನು ಧರಿಸಿರುವ ಓ ದೇವನೇ ! ಲಕ್ಷ್ಮೀರಮಣ ನಾರಾಯಣನೇ ಕೃಪೆದೋರಿ ನನ್ನನ್ನು ರಕ್ಷಿಸು. ಓ ದೇವನೇ ದಶರಥ ರಾಜಕುಮಾರನೇ ಅಸುರರ ದರ್ಪವನ್ನು ನಾಶಮಾಡಿದವನೇ ಹೇ ನಾರಾಯಣನೇ !

ಶ್ಲೋಕ - 9 -  ಸಂಸ್ಕೃತದಲ್ಲಿ :

ಗೋವರ್ಧನಗಿರಿ ರಮಣ ಗೋಪೀಮಾನಸಹರಣ ನಾರಾಯಣ
ಸರಯೂತೀರವಿಹಾರ ಸಜ್ಜನ ಋಷಿಮಂದಾರ ನಾರಾಯಣ
ಕನ್ನಡದಲ್ಲಿ :

ಗೋವರ್ಧನಗಿರಿ ಪ್ರಿಯಕರ ಗೋಪೀಮಾನಸ ಚೋರ ನಾರಾಯಣ
ಸರಯೂ ತೀರ ವಿಹಾರ ಸುಜನರ ಸುರತರು ನಾರಾಯಣ

ವಿವರಣೆ :

ಗೋವರ್ಧನ ಪರ್ವತವನ್ನು ಉದ್ಧರಿಸಿದ ಓ ದೇವನೇ ! ಗೋಪಿಕಾ ಸ್ತ್ರೀಯರ ಚಿತ್ತ ಚೋರನೇ ಹೇ ನಾರಾಯಣನೇ ! ಓ ದೇವನೇ!  ಸರಯೂ ನದಿ ತೀರದಲ್ಲಿ ಆಡಿ ಬೆಳೆದವನೇ ಸಜ್ಜನರ ಆಸೆಗಳನ್ನು ಪೂರೈಸುವ ವೃಕ್ಷದಂತಿರುವ ಓ ದೇವನೇ ನಾರಾಯಣನೇ !

ಶ್ಲೋಕ - 10 - ಸಂಸ್ಕೃತದಲ್ಲಿ :

ವಿಶ್ವಾಮಿತ್ರಮಖತ್ರ ವಿವಿಧಪರಾಸುಚರಿತ್ರ ನಾರಾಯಣ
ಧ್ವಜವಜ್ರಾoಕುಶಪಾದ ಧರಣೀಸುತಸಹಮೋದ ನಾರಾಯಣ
ಕನ್ನಡದಲ್ಲಿ :

ಯತಿವಿಶ್ವಾಮಿತ್ರ ಯಜ್ಞ ಸುರಕ್ಷಕ ವಿವಿಧ ಸುಚರಿತ್ರ ನಾರಾಯಣ
ಧ್ವಜ ವಜ್ರಾಂಕುಶಪಾದ ಧರಣಿಸುತೆಯೊಡನೆ ಮೋದ ನಾರಾಯಣ

ವಿವರಣೆ :

ವಿಶ್ವಾಮಿತ್ರರ ಯಾಗವನ್ನು ರಕ್ಷಿಸಿ ಪರಿಪೂರ್ಣಗೊಳಿಸಿದ ಅನೇಕ ಉತ್ತಮ ಚರಿತ್ರೆಯುಳ್ಳ ನಾರಾಯಣನೇ !  ಪಾದಗಳಲ್ಲಿ ಧ್ವಜ ಹಾಗೂ ಧ್ವಜ ಸ್ತಂಭದ ಚಿನ್ಹೆಯುಳ್ಳ ಹೇ ದೇವನೇ ! ಭೂದೇವಿಯ ಮಗಳಿಂದ ಆನಂದವನ್ನು ಪಡೆದ ಹೇ ದೇವನೇ ನಾರಾಯಣನೇ!

ಶ್ಲೋಕ - 11-  ಸಂಸ್ಕೃತದಲ್ಲಿ :

ಜನಕಸುತಾಪ್ರತಿಪಾಲ ಜಯ ಜಯ ಸಂಸ್ಕೃತಿಲೀಲ ನಾರಾಯಣ
ದಶರಥವಾಗ್ಧೃತಿಭಾರ ದಂಡಕವನಸಂಚಾರ ನಾರಾಯಣ
ಕನ್ನಡದಲ್ಲಿ :

ಜನಕಸುತಾಲೋಲ ಜಯ ಜಯ ಸಂಸಾರಲೀಲ ನಾರಾಯಣ
ಜನಕವಚನಪಾಲಕ ವನದಂಡಕಸಂಚಾರಿ ನಾರಾಯಣ

ವಿವರಣೆ :

ಜನಕರಾಜನ ಪುತ್ರಿಗಾಗಿ ಕಾದುಕೊಂಡಿದ್ದ ಓ ದೇವನೇ ! ಜೀವನ ನಾಟಕದ ಆಟಗಳನ್ನು ನೋಡಿ ಆನಂದಿಸಿದ ದೇವನಿಗೆ ಜಯವಾಗಲಿ ಜಯವಾಗಲಿ ನಾರಾಯಣನೇ ! ದಶರಥ ರಾಜನ ಮಾತನ್ನು ಪಾಲಿಸಿದ ಓ ದೇವನೇ ! ದಟ್ಟವಾದ ದಂಡಕವನವನ್ನೆಲ್ಲ ಬರೀ ಕಾಲ್ನಡಿಗೆಯಲ್ಲಿ ಸಂಚರಿಸಿದ ಓ ದೇವನೇ ನಾರಾಯಣನೇ !

ಶ್ಲೋಕ - 12 -  ಸಂಸ್ಕೃತದಲ್ಲಿ :

ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ನಾರಾಯಣ
ವಾಲಿವಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ನಾರಾಯಣ
ಕನ್ನಡದಲ್ಲಿ :

ಮುಷ್ಟಿಕಚಾಣೂರರ ಮಣಿಸಿದ ಮುನಿಮನ ವಾಸಿ ನಾರಾಯಣ
ದುಷ್ಟ ವಾಲಿಯ ನಿಗ್ರಹಿಸಿ ವರ ಸುಗ್ರೀವಗನುಗ್ರಹಿಸಿದ ನಾರಾಯಣ

ವಿವರಣೆ :

ಕಂಸನ ಆಸ್ಥಾನದಲ್ಲಿ ಮುಷ್ಟಿಯುದ್ಧದಲ್ಲಿ ದುಷ್ಟ ಮುಷ್ಟಿಕ ಹಾಗೂ ಚಾಣೂರರನ್ನು ಸಂಹಾರ ಮಾಡಿದ ಓ ದೇವನೇ ! ಋಷಿ ಮುನಿಗಳ ಮನಸ್ಸಿನಲ್ಲಿ ನೆಲೆಸಿರುವ ಓ ದೇವನೇ ! ನಾರಾಯಣನೇ ! ಪರಾಕ್ರಮಿ ವಾಲಿಯನ್ನು ಸಂಹಾರ ಮಾಡಿ ಸುಗ್ರೀವನಿಗೆ ಸಹಾಯ ಮಾಡಿದ  ಓ ದೇವನೇ ! ನಾರಾಯಣನೇ !

ಶ್ಲೋಕ - 13 -  ಸಂಸ್ಕೃತದಲ್ಲಿ :

ಮಾಂ ಮುರಲೀಕರ ಧೀವರಪಾಲಯ ಪಾಲಯ ಶ್ರೀಧರ ನಾರಾಯಣ
ಜಲನಿಧಿ ಬಂಧನ ಧೀರ ರಾವಣಕಂಠವಿದಾರ ನಾರಾಯಣ
ಕನ್ನಡದಲ್ಲಿ :

ಕೊಳಲನು ಮಾಡೆನ್ನನು ಪಾಲಿಸು ಪಾಲಿಸು ಶ್ರೀಧರ ನಾರಾಯಣ
ಜಲಧಿನಿಬಂಧನ ಧೀರನೆ ದಶಶಿರಕಂಠವ ಸೀಳಿದ ನಾರಾಯಣ

ವಿವರಣೆ :

ಕೊಳಲನ್ನು ಕೈಯಲ್ಲಿ ಹಿಡಿದಿರುವ ಓ ಶೌರಿಯೇ ಲಕ್ಷ್ಮೀರಮಣನೇ ಸಹಾಯ ಮಾಡು ಸಹಾಯ ಮಾಡು ನಾರಾಯಣನೇ. ಸಾಗರದ ಮೇಲೆ ಸೇತುವೆ ನಿರ್ಮಿಸಿದ ಓ ದೇವನೇ ! ರಾವಣನ ದಶ ಶಿರಗಳನ್ನು ತರಿದ ನಾರಾಯಣನೇ !

ಶ್ಲೋಕ - 14 -  ಸಂಸ್ಕೃತದಲ್ಲಿ :

ತಾಟಕಮರ್ದನ ರಾಮ ನಟಗುಣವಿವಿಧ ಸುರಾಮ ನಾರಾಯಣ
ಗೌತಮಪತ್ನೀಪೂಜನ ಕರುಣಾಘನಾವಲೋಕನ ನಾರಾಯಣ
ಕನ್ನಡದಲ್ಲಿ :

ತಾಟಕಿಮರ್ದನ ರಾಮ ಸುರನಾಟ್ಯಗಾನಾರಾಮ ನಾರಾಯಣ
ಗೌತಮಸತಿ ಪೂಜಿತ ಕರುಣಾರಸ ಸೇಚನ ನಾರಾಯಣ

ವಿವರಣೆ :

ತಾಟಕಿಯ ಅಹಂಕಾರವನ್ನು ಸಂಹರಿಸಿದ ಓ ದೇವನೇ ! ದೇವಾನು ದೇವತೆಗಳು ಗಾನ ನಾಟ್ಯಗಳಿಂದ ವರ್ಣಿಸಲ್ಪಡುವ ಓ ದೇವನೇ ನಾರಾಯಣನೇ ! ಗೌತಮ ಪತ್ನಿ ಅಹಲ್ಯೆಯಿಂದ ಪೂಜಿಸಲ್ಪಟ್ಟ ಹೇ ದೇವನೇ ಕರುಣಾಪೂರಿತ ದೃಷ್ಟಿಯುಳ್ಳವನೇ ನಾರಾಯಣನೇ !

ಶ್ಲೋಕ - 15 -  ಸಂಸ್ಕೃತದಲ್ಲಿ

ಸಂಭ್ರಮಸೀತಾಹಾರ ಸಾತಕೇತಪುರವಿಹಾರ ನಾರಾಯಣ
ಅಚಲೋಧೃತಚಂಚತ್ಕರ ಭಕ್ತಾನುಗ್ರಹತತ್ಪರ ನಾರಾಯಣ
ಕನ್ನಡದಲ್ಲಿ :

ಜಾನಕೀಮನ ಚೋರ ಸಾಕೇತಪುರ ವಿಹಾರ ನಾರಾಯಣ
ಗೋವರ್ಧನಗಿರಿಧರ ಧೀರ ಭಕ್ತಾನುಗ್ರಹತತ್ಪರ ನಾರಾಯಣ

ವಿವರಣೆ :

ಜನಕರಾಜನ ಪ್ರೀತಿಯ ಪುತ್ರಿಯ ಮನವನ್ನು ಕದ್ದ ಓ ದೇವನೇ ! ಅಯೋಧ್ಯಾ ನಿವಾಸಿಯೇ ನಾರಾಯಣನೇ, ಪರ್ವತವನ್ನೇ ಮೇಲೆತ್ತಲು ಶಕ್ಯನಾದ ಓ ದೇವನೇ ! ಸದಾ ಭಕ್ತರನ್ನು ಆಶೀರ್ವದಿಸಲು ಉತ್ಸುಕನಾಗಿರುವ ಓ ದೇವನೇ ! ನಾರಾಯಣನೇ !

ಶ್ಲೋಕ - 16 -  ಸಂಸ್ಕೃತದಲ್ಲಿ :

ನೈಗಮಗಾನವಿನೋದ ರಕ್ಷಿತ ಸುಪ್ರಹ್ಲಾದ ನಾರಾಯಣ
ಭಾರತ ಯತಿವರಶಂಕರ ನಾಮಾಮೃತಮಖಿಲಾಂತರ ನಾರಾಯಣ
ಕನ್ನಡದಲ್ಲಿ :

ಸಾಮಗಾನವಿನೋದ ರಾಕ್ಷಸಸುತ ಪ್ರಹ್ಲಾದವರದ ನಾರಾಯಣ
ವರಶಂಕರರುಲಿದ ಹರಿನಾಮಸುಧಾಸಾರ ಜಗಸಕಲಕಾಧಾರ ನಾರಾಯಣ

ವಿವರಣೆ :

ಸಾಮಗಾನ ಪ್ರಿಯನಾದ ಓ ದೇವನೇ ! ಹಿರಣ್ಯ ಕಶಿಪುವಿನ ಪುತ್ರನಾದ ಪ್ರಹ್ಲಾದನನ್ನು ರಾಕ್ಷಸರಿಂದ ರಕ್ಷಿಸಿದವನೇ ಓ ನಾರಾಯಣನೇ ! ಆದಿ ಶಂಕರರು ರಚಿಸಿದ ಈ ಹರಿಯ ನಾಮದ ಅಮೃತ ಸಾರವು ಜಗತ್ತಿನ ಸಮಸ್ತರಿಗೂ ಶುಭವನ್ನುಂಟುಮಾಡಲಿ.

ಶ್ಲೋಕ - 17 -  ಸಂಸ್ಕೃತದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ    
ಕನ್ನಡದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ 

ವಿವರಣೆ :

ಎಲ್ಲರನ್ನೂ ರಕ್ಷಿಸುವ ಹೇ ದೇವಾ ! ಗೋವಿಂದ ! ನಾರಾಯಣ ! ಜಯವಾಗಲಿ
ಹೇ ಗೋಪಾಲ ! ಎಲ್ಲರನ್ನೂ ರಕ್ಷಿಸುವವ, ನಾರಾಯಣ ! ಜಯವಾಗಲಿ !
***

नारायण स्तोत्रम् 

श्री गणेशाय नमः ।
नारायण नारायण जय गोविन्द हरे ॥

नारायण नारायण जय गोपाल हरे ॥ ध्रु ॥

करुणापारावार वरुणालयगम्भीर ॥ नारायण ॥ १॥

घननीरदसङ्काश कृतकलिकल्मषनाश ॥ नारायण ॥ २॥

यमुनातीरविहार धृतकौस्तुभमणिहार ॥ नारायण ॥ ३॥

पीताम्बरपरिधान सुरकल्याणनिधान ॥ नारायण ॥ ४॥

मञ्जुलगुञ्जाभूष मायामानुषवेष ॥ नारायण ॥ ५॥

राधाधरमधुरसिक रजनीकरकुलतिलक ॥ नारायण ॥ ६॥

मुरलीगानविनोद वेदस्तुतभूपाद ॥ नारायण ॥ ७॥

बर्हिनिबर्हापीड नटनाटकफणिक्रीड ॥ नारायण ॥ ८॥

वारिजभूषाभरण राजिवरुक्मिणीरमण ॥ नारायण ॥ ९॥

जलरुहदलनिभनेत्र जगदारम्भकसूत्र ॥ नारायण ॥ १०॥

पातकरजनीसंहार करुणालय मामुद्धर ॥ नारायण ॥ ११॥

अघबकक्षयकंसारे केशव कृष्ण मुरारे ॥ नारायण ॥ १२॥

हाटकनिभपीताम्बर अभयं कुरु मे मावर ॥ नारायण ॥ १३॥

दशरथराजकुमार दानवमदसंहार ॥ नारायण ॥ १४॥

गोवर्धनगिरिरमण गोपीमानसहरण ॥ नारायण ॥ १५॥

शरयूतीरविहार सज्जनऋषिमन्दार ॥ नारायण ॥ १६॥

विश्वामित्रमखत्र विविधपरासुचरित्र ॥ नारायण ॥ १७॥

ध्वजवज्राङ्कुशपाद धरणीसुतसहमोद ॥ नारायण ॥ १८॥

जनकसुताप्रतिपाल जय जय संस्मृतिलील ॥ नारायण ॥ १९॥

दशरथवाग्धृतिभार दण्डकवनसञ्चार ॥ नारायण ॥ २०॥

मुष्टिकचाणूरसंहार मुनिमानसविहार ॥ नारायण ॥ २१॥

वालिविनिग्रहशौर्य वरसुग्रीवहितार्य ॥ नारायण ॥ २२॥ वालीनिग्रह

मां मुरलीकर धीवर पालय पालय श्रीधर ॥ नारायण ॥ २३॥

जलनिधिबन्धनधीर रावणकण्ठविदार ॥ नारायण ॥ २४॥

ताटीमददलनाढ्य नटगुणविविधधनाढ्य ॥ नारायण ॥ २५॥

गौतमपत्नीपूजन करुणाघनावलोकन ॥ नारायण ॥ २६॥

सम्भ्रमसीताहार साकेतपुरविहार ॥ नारायण ॥ २७॥

अचलोद्धृतिचञ्चत्कर भक्तानुग्रहतत्पर ॥ नारायण ॥ २८॥

नैगमगानविनोद रक्षःसुतप्रह्लाद ॥ नारायण ॥ २९॥ रक्षित सुप्रह्लाद

भारतीयतिवरशङ्कर नामामृतमखिलान्तर ॥ नारायण ॥ ३०॥

। इति श्रीमच्छङ्कराचार्यविरचितं नारायणस्तोत्रं सम्पूर्णम् ।
****
ನಾರಾಯಣಸ್ತೋತ್ರಮ್ 

ಶ್ರೀ ಗಣೇಶಾಯ ನಮಃ ।
ನಾರಾಯಣ ನಾರಾಯಣ ಜಯ ಗೋವಿನ್ದ ಹರೇ ॥
ನಾರಾಯಣ ನಾರಾಯಣ ಜಯ ಗೋಪಾಲ ಹರೇ ॥ ಧ್ರು ॥

ಕರುಣಾಪಾರಾವಾರ ವರುಣಾಲಯಗಮ್ಭೀರ ॥ 
ನಾರಾಯಣ ॥ 1॥

ಘನನೀರದಸಂಕಾಶ ಕೃತಕಲಿಕಲ್ಮಷನಾಶ ॥ 
ನಾರಾಯಣ ॥ 2॥

ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ॥ 
ನಾರಾಯಣ ॥ 3॥

ಪೀತಾಮ್ಬರಪರಿಧಾನ ಸುರಕಲ್ಯಾಣನಿಧಾನ ॥ 
ನಾರಾಯಣ ॥ 4॥

ಮಂಜುಲಗುಂಜಾಭೂಷ ಮಾಯಾಮಾನುಷವೇಷ ॥ 
ನಾರಾಯಣ ॥ 5॥

ರಾಧಾಧರಮಧುರಸಿಕ ರಜನೀಕರಕುಲತಿಲಕ ॥ 
ನಾರಾಯಣ ॥ 6॥

ಮುರಲೀಗಾನವಿನೋದ ವೇದಸ್ತುತಭೂಪಾದ ॥ 
ನಾರಾಯಣ ॥ 7॥

ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ॥ 
ನಾರಾಯಣ ॥ 8॥

ವಾರಿಜಭೂಷಾಭರಣ ರಾಜಿವರುಕ್ಮಿಣೀರಮಣ ॥ 
ನಾರಾಯಣ ॥ 9॥

ಜಲರುಹದಲನಿಭನೇತ್ರ ಜಗದಾರಮ್ಭಕಸೂತ್ರ ॥ 
ನಾರಾಯಣ ॥ 10॥

ಪಾತಕರಜನೀಸಂಹಾರ ಕರುಣಾಲಯ ಮಾಮುದ್ಧರ ॥ 
ನಾರಾಯಣ ॥ 11॥

ಅಘಬಕಕ್ಷಯಕಂಸಾರೇ ಕೇಶವ ಕೃಷ್ಣ ಮುರಾರೇ ॥ 
ನಾರಾಯಣ ॥ 12॥

ಹಾಟಕನಿಭಪೀತಾಮ್ಬರ ಅಭಯಂ ಕುರು ಮೇ ಮಾವರ ॥ 
ನಾರಾಯಣ ॥ 13॥

ದಶರಥರಾಜಕುಮಾರ ದಾನವಮದಸಂಹಾರ ॥ 
ನಾರಾಯಣ ॥ 14॥

ಗೋವರ್ಧನಗಿರಿರಮಣ ಗೋಪೀಮಾನಸಹರಣ ॥ 
ನಾರಾಯಣ ॥ 15॥

ಶರಯೂತೀರವಿಹಾರ ಸಜ್ಜನಋಷಿಮನ್ದಾರ ॥ 
ನಾರಾಯಣ ॥ 16॥

ವಿಶ್ವಾಮಿತ್ರಮಖತ್ರ ವಿವಿಧಪರಾಸುಚರಿತ್ರ ॥ 
ನಾರಾಯಣ ॥ 17॥

ಧ್ವಜವಜ್ರಾಂಕುಶಪಾದ ಧರಣೀಸುತಸಹಮೋದ ॥ 
ನಾರಾಯಣ ॥ 18॥

ಜನಕಸುತಾಪ್ರತಿಪಾಲ ಜಯ ಜಯ ಸಂಸ್ಮೃತಿಲೀಲ ॥ 
ನಾರಾಯಣ ॥ 19॥

ದಶರಥವಾಗ್ಧೃತಿಭಾರ ದಂಡಕವನಸಂಚಾರ ॥ 
ನಾರಾಯಣ ॥ 20॥

ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ॥ 
ನಾರಾಯಣ ॥ 21॥

ವಾಲಿವಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ॥ 
ನಾರಾಯಣ ॥ 22॥ ವಾಲೀನಿಗ್ರಹ

ಮಾಂ ಮುರಲೀಕರ ಧೀವರ ಪಾಲಯ ಪಾಲಯ ಶ್ರೀಧರ ॥ 
ನಾರಾಯಣ ॥ 23॥

ಜಲನಿಧಿಬನ್ಧನಧೀರ ರಾವಣಕಂಠವಿದಾರ ॥ 
ನಾರಾಯಣ ॥ 24॥

ತಾಟೀಮದದಲನಾಢ್ಯ ನಟಗುಣವಿವಿಧಧನಾಢ್ಯ ॥ 
ನಾರಾಯಣ ॥ 25॥

ಗೌತಮಪತ್ನೀಪೂಜನ ಕರುಣಾಘನಾವಲೋಕನ ॥ 
ನಾರಾಯಣ ॥ 26॥

ಸಮ್ಭ್ರಮಸೀತಾಹಾರ ಸಾಕೇತಪುರವಿಹಾರ ॥ 
ನಾರಾಯಣ ॥ 27॥

ಅಚಲೋದ್ಧೃತಿಚಂಚತ್ಕರ ಭಕ್ತಾನುಗ್ರಹತತ್ಪರ ॥ 
ನಾರಾಯಣ ॥ 28॥

ನೈಗಮಗಾನವಿನೋದ ರಕ್ಷಃಸುತಪ್ರಹ್ಲಾದ ॥ 
ನಾರಾಯಣ ॥ 29॥ ರಕ್ಷಿತ ಸುಪ್ರಹ್ಲಾದ

ಭಾರತೀಯತಿವರಶಂಕರ ನಾಮಾಮೃತಮಖಿಲಾನ್ತರ ॥ 
ನಾರಾಯಣ ॥ 30॥

। ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ 
ನಾರಾಯಣಸ್ತೋತ್ರಂ ಸಮ್ಪೂರ್ಣಮ್ ।
****

No comments:

Post a Comment