Wednesday, 20 November 2019

ಶ್ರೀ ಹಯಗ್ರೀವ ಪಂಚಕಮ್ ವಾದಿರಾಜ ವಿರಚಿತಮ್ hayagreeva panchakam


೧---
ಲಸದಾಸ್ಯ ಹಯಗ್ರೀವ ಲಸದೋಷ್ಟದ್ವಯಾರುಣ/
ಲಸದ್ದಂತಾವಲೀಶೋಭ ಹಯಗ್ರೀವ ಲಸತ್ ಸ್ಮಿತ//೧//

ಹೇ ಹಯವದನ! ನಿನ್ನ ಮುಖ ಶೋಭೆ, ದಂತಗಳು,ನಸುಗೆಂಪಾದ ತುಟಿ ಗಳು ಎಲ್ಲವೂ ದಿವ್ಯ ಕಾಂತಿ ಯಿಂದ ಕೂಡಿದೆ.

ಲಸತ್ಫಾಲ ಹಯಗ್ರೀವ ಲಸತ್ಕುಂತಲ ಮಸ್ತಕ/
ಲಸತ್ಕರ್ಣ ಹಯಗ್ರೀವ ಲಸನ್ನಯನ ಪಂಕಜ//೨//

ಹಯವದನ! ನಿನ್ನ ಹಣೆ, ಮುಂಗುರುಳು, ಶಿರಸ್ಸು,ಕರ್ಣಗಳು ,ತಾವರೆದಳದಂತೆ ಇರುವ ವಿಶಾಲ ನೇತ್ರಗಳು ಎಲ್ಲವೂ ಸೊಗಸಾಗಿದೆ.

೩-೪-

ಲಸದ್ವೀಕ್ಷ ಹಯಗ್ರೀವ ಲಸದ್ ಭ್ರೂಮಂಡಲದ್ವಯ/
ಲಸದ್ರ್ಗೀವ ಹಯಗ್ರೀವ ಲಸದ್ ಹಸ್ತ ಲಸದ್ಭುಜ//೩//

ಲಸತ್ಪಾರ್ಶ ಲಸತ್ಕೃಷ್ಠ ಕಕ್ಷಾ ಸಂಯುಗ ಸುಂದರ/
ಹಯಗ್ರೀವ ಲಸದ್ವಕ್ಷೋಸ್ತನ ಮಧ್ಯ ವಲಿತ್ರಯ//೪//.

ನಿನ್ನ ನೋಟ, ಹುಬ್ಬುಗಳು, ಸುಂದರ ವಾದ ಕೊರಳು,, ಹಸ್ತಗಳು, ಭುಜಗಳು, ನಿನ್ನ ದೇಹದಾಕಾರವೆಲ್ಲವೂ ಸುಂದರ ವಾಗಿವೆ.

೫--

ಹಯಗ್ರೀವ ಲಸತ್ಕುಕ್ಷೇ ಲಸದ್ರೋಮಲತಾಂಕಿತ/
ಹಯಗ್ರೀವ ಲಸನ್ನಾಭೇ ಲಸತ್ಕಟಿಯುಗಾಂತರ//೫//

ಹೇ ಹಯವದನ! ನಿನ್ನ ರೋಮದ ತೆಳುವಾದ ರೇಖೆಯಿಂದ ಶೋಭಿಸುವ,ಉದರ, ನಾಭಿ, ಸೊಂಟ ಎಲ್ಲವೂ ಸುಂದರ ವಾಗಿದೆ.
*************

ಶ್ರೀ ಭೂತರಾಜಾಯ ನಮಃ.

ಅಪಾದ ಮೌಲಿ ಪರ್ಯಂತಂ ಗುರೂಣಾಮಾಕೃತಿಂ ಸ್ಮರೇತ್/
ತೇನ ವಿಘ್ನಾ: ಪ್ರಣಶ್ಯಂತಿ ಸಿದ್ಧಂತಿ ಚ ಮನೋರಥಾ.://

ಪೃಥ್ವಿ ಮಂಡಲಮಧ್ಯಾಸ್ಥಾ ಪೂರ್ಣಬೋಧ ಮತಾನುಗಾ:
ವೈಷ್ಣವಾನ್ವಿಷ್ಣು ಹೃದಯ:ಸ್ತಾನ್ನಮಸ್ತೇ ಗುರೂನ್ಮಮ//.

ಅಭ್ರಮಂ ಭಂಗ ರಹಿತಂ ಅಜಡಂ ವಿಮಲಂ ಸದಾ/
ಆನಂದತೀರ್ಥ ಮತುಲಂ ಭಜೇ ತಾಪತ್ರಯಾಪಹಮ್//

ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ//.


ಶ್ರೀ ಭಾವೀ ಸಮೀರ ವಾದಿರಾಜರು ರಚಿಸಿದ ಹಯಗ್ರೀವ ಪಂಚಕಮ್.

ಶ್ರೀ ವಾದಿರಾಜರು ರಚಿಸಿದ ಹಯಗ್ರೀವ ಸ್ತೋತ್ರ ಮಂಜರೀ ಯಲ್ಲಿ ಮೂರನೇ ಸ್ತೋತ್ರ.

ಹಯಗ್ರೀವ ಸ್ತುತಿ:---

ಸಂತೋಷ ಪ್ರದ ಸ್ತೋತ್ರ- (೧೬-ನುಡಿಗಳಿಂದ ಕೂಡಿದೆ)-.
***************

ಶ್ರೀ ಹರಿ ಸಮರ್ಪಣೆ.

No comments:

Post a Comment