ನವಗ್ರಹ ಕವಚ ಮತ್ತು ಕಾರ್ಯ ಸಿದ್ಧಿ ಗಣಪತಿ ಸ್ತೋತ್ರ
ಮನುಷ್ಯನಿಗೆ ಸುಖ ದುಃಖಗಳು ಗ್ರಹಗಳಿಂದಲೇ ಬರುವವು . ನಮಗೆ ಯಾವುದಾದರೂ ಗ್ರಹದೋಷಗಳು ಇದ್ದರೆ ಅರ್ಹತೆ ಇದ್ದರೂ ಉನ್ನತ ಸ್ಥಾನ ಸಿಗುವದಿಲ್ಲ , ಉದ್ಯೋಗ ದಲ್ಲಿ ಕಿರಕಿರಿ , ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಪ್ರಶಂಸೆ ಸಿಗುವದಿಲ್ಲ , ಅಷ್ಟೇ ಅಲ್ಲ ಮನೆಯಲ್ಲಿ ಹಣದ ತೊಂದರೆ ಇಲ್ಲದಿದ್ದರೂ ಅಸಮಾಧಾನ ಪರಿಸ್ಥಿತಿ , ಆರೋಗ್ಯ ತೊಂದರೆ. ಯಾವದೇ ಕಾರ್ಯಗಳು ಕೈಗೂಡದೇ ಇರುವದು... ಕೆಲವು ಸಲ ಹತಾಶೆ ಬಾವನೆ ಮನದಲ್ಲಿ ಮೂಡುವದು ಈ ತರಹದ ಸಮಸ್ಯೆ ಗಳಿಗೆ ಪ್ರತಿದಿನ ಜಾತಕ ತೊರಿಸುತ್ತಾ ಕೂಡಲು ಆಗುವದಿಲ್ಲ. ಅಕಸ್ಮಾತ್ ತೋರಿಸಿದಾಗ ಅವರು ಆಗಿನ ಸಮಯದ ಗ್ರಹ ದೋಷ ಪರಿಹಾರ ಹೇಳುತ್ತಾರೆ . ಗ್ರಹಗಳ ಚಲನೆ ಇದ್ದೇ ಇರುತ್ತೆ ಅದಕ್ಕಾಗಿ ನವಗ್ರಹಗಳ ಆರಾಧನೆ ಮಾಡಿಧಾಗ ನಮಗೆ ಗ್ರಹಗಳ ದೋಷದಿಂದ ಪರಿಹಾರ ಸಿಗುತ್ತೆ . ಇದು ನವಗ್ರಹ ಕವಚ , ಸ್ತೋತ್ರಗಳಲ್ಲಿ ಕವಚಗಳು ಶ್ರೇಷ್ಠ ಮತ್ತು ಬೇಗ ಫಲವನ್ನು ಕೊಡುತ್ತವೆ. ಈ ಕವಚ ಪ್ರತಿ ದಿನ ಒಂಬತ್ತು ಸಾರೆ ಪಠಣದಿಂದ ಆರೋಗ್ಯ , ಸಂಪತ್ತು ಮತ್ತು ಕಾರ್ಯ ಸಿದ್ಧಿ ಫಲಗಳು ಲಭಿಸುತ್ತವೆ....
ನವಗ್ರಹ ಕವಚ ...
ಶಿರೋ ಮೇ ಪಾತು ಮಾರ್ತಂಡಃ ಕಪಾಲಂ ರೋಹಿಣಿ ಪತಿಃ l
ಮುಖ ಮಂಗಾರಕಃ ಪಾತು ಕಂಠಂ ಚ ಶಶಿನಂದನಃ ll
ಬುದ್ಧಿಂ ಜೀವಃ ಸದಾ ಪಾತು ಹೃದಯಂ ಭೃಗುನಂದನಃ l
ಜಠರಂ ಚ ಶನಿಃ ಪಾತು ಜಿಹ್ವಾಂ ಮೇ ದಿತಿ ನಂದನಃ ll
ಪಾದೌ ಕೇತುಃ ಸದಾ ಪಾತು ವಾರಾಃ ಸರ್ವಾಂಗಮೇವಚ l
ತಿಥಯೋಅಷ್ಟೌ ದಿಶಃ ಪಾಂತು ನಕ್ಷತ್ರಾಣಿ ವಪುಃ ಸದಾ ll
ಅಂಸೌ ರಾಶಿಃ ಸದಾ ಪಾತು ಯೋಗಶ್ಚಸ್ಥೈರ್ಯಮೇವಚ l
ಸ ಚಿರಾಯು ಸುಖೀ ಪುತ್ರೀ ಯುದ್ಧೇ ಚ ವಿಜಯೀ ಭವೇತ್ l
ರೋಗಾತ ಪ್ರಮುಚ್ಯತೇ ರೋಗಿ ಬಂಧೋ ಮುಚ್ಯೇತ ಬಂಧನಾತ ll
ಶ್ರೀಯಂ ಚ ಲಭತೇ ನಿತ್ಯಂ ರಿಷ್ಟಿಸ್ತಸ್ಯ ನ ಜಾಯತೇ ll
ಯಃ ಕರೇ ಧಾರಯೇನಿತ್ಯಂ ತಸ್ಯ ರಿಸ್ಟಿರ್ನ ಜಾತತೇ l
ಪಠನಾತ್ ಕವಚಸ್ಯಾಸ್ಯ ಸರ್ವ ಪಾಪಾತ ಪ್ರಮುಚ್ಯತೇ ll
ಜೀವವತ್ಸಾ ಪುತ್ರವತೀ ಭವತ್ಯೇವ ನಸಂಶಯಃ ll
ಈ ನವಗ್ರಹ ಕವಚ ಅನ್ನುವಕ್ಕಿಂತ ಮೊದಲು
ಕಾರ್ಯಸಿದ್ಧಿ ಗಣಪತಿ ಸ್ತೋತ್ರ ವನ್ನು ಇಪ್ಪತ್ತೊಂದು ಸಲ ಹೇಳಿ ಮತ್ತು ಪ್ರತೀ ಮಂಗಳವಾರ ಇಪ್ಪತ್ತೊಂದು ನೆನೆದಕಡಲೆ ಹಾರವನ್ನು ಗಣಪತಿಗೆ ಇಷ್ಟಾರ್ಥ ಬೇಡಿಕೊಂಡು ಮನೆಯಲ್ಲಿ ಇರುವ ಗಣಪತಿ ಪೂಜೆಮಾಡಿ ಹಾರ ಹಾಕಿ ಬೇಗ ಇಷ್ಟಾರ್ಥ ಸಿದ್ಧಿಯಾಗುತ್ತವೆ...
ಕಾರ್ಯ ಸಿದ್ಧಿಗಣಪತಿ ಸ್ತೋತ್ರ
ಸಮುಖಶ್ಟೈಕ ದಂತಶ್ಚ ಕಫಿಲೋ ಗಜಕರ್ಣಕಃ l
ಲಂಭೋಧರಶ್ಚ ವಿಕಟೋ ವಿಘ್ನನಾಶೋ ಗಣಾದಿಪಃ ll
ಧೂಮ್ರಕೇತು ರ್ಗಣಾದ್ಯಕ್ಷೋ ಬಾಲಚಂದ್ರೋ ಗಜಾನನಃ l
ವಕ್ರತುಂಡಃ ಶೂರ್ಪಕರ್ಣೋ ಹೇರಂಬಃ ಸ್ಕಂದ ಪೂರ್ವಜಃll
ವಂಶವೃದ್ಧಿಕರ_ವಂಶಕವಚಮ
ಪೂರ್ವೇ ರಕ್ಷತು ವಾರಾಹೀ ಚ ಆಗ್ನೇಯ್ಯಾಂಬಿಕಾ ಸ್ವಯಮ್ l
ವಾರಾಹೀ ಪಶ್ಚಿಮೇ ರಕ್ಷೇದ್ವಾಯವ್ಯಾಂ ಚ ಮಹೇಶ್ವರೀ l
ಊರ್ದಂ ತು ಶಾರದಾ ರಕ್ಷೇದಧೋ ರಕ್ಷತು ಪಾರ್ವತೀ l
ಕಂಠಂ ರಕ್ಷತು ಚಾಮುಂಡಾ ಹೃದಯಂ ರಕ್ಷತಾ ಚ್ಛಿವಾ l
ಅಪರ್ಣಾ ಹ್ಯುದರಂ ರಕ್ಷೇತ ಕಟಿಂ ಬಸ್ತಿಂ ಶಿವಪ್ರೀಯಾ l
ಗುಲ್ಪೌ ಪಾದೌ ಸದಾ ರಕ್ಷೇದ್ ಬ್ರಹ್ಮಾಣಿ ಪರಮೇಶ್ವರೀ l
ನಮೋದೇವೈ ಮಹಾ ದೇವೈ ದುರ್ಗಾಯೈ ಸತತಂ ನಮಃ l
ದಕ್ಷಿಣೇ ಚಂಡಿಕಾ ರಕ್ಷೇ ನೈಋತ್ಯಾಮ್ ಶವವಾಹಿನೀ l
ಉತ್ತರೇ ವೈಷ್ಣವೀ ರಕ್ಷೇಧೀಶಾನೆ ಸಿಂಹವಾಹಿನೀ l
ಶಾಖಂಭರೀ ಶಿರೋ ರಕ್ಷೇನ್ಮುಖಂ ರಕ್ಷತು ಬೈರವಿ l
ಈಶಾನೀ ಚ ಭುಜೌ ರಕ್ಷೇತ ಕುಕ್ಷಿಂ ನಾಭಿಂ ಚ ಕಾಲಿಕಾ l
ಉರೂ ರಕ್ಷತು ಕೌಮಾರೀ ಜಯಾ ಜಾನುದ್ವಯಂ ತಥಾ l
ಸರ್ವಾಂಗಾನಿ ಸದಾ ರಕ್ಷೇದ್ದುರ್ಗಾ ದುರ್ಗಾತಿನಾಶಿನಿ l
ಪುತ್ರಸೌಖ್ಯಂ ದೇಹಿ ದೇಹಿ ಗರ್ಭರಕ್ಷಾಂ ಕುರುಷ್ವ ನಃ ll
ಒಂದು ಬಟ್ಟಲದಲ್ಲಿ ನೀರು ಬಲಗೈಯಲ್ಲಿ ಹಿಡಿದು ಒಂದು ಮಂಡಲದ ವರೆಗೆ ಅಂದರೆ ಪ್ರತಿದಿನ ಏಳುಸಾರೆ ಈ ಕವಚವನ್ನು ಹೇಳಿ ಅಭಿಮಂತ್ರಿಸಿದ ನೀರನ್ನು ಕುಡಿದರೆ ಸ್ತ್ರೀಯು ಗರ್ಭವತಿಯಾಗುವಳು ...
ಈ ಕವಚದಿಂದ ಅಭಮಂತ್ರಿಸಿದ ನೀರನ್ನು ಪ್ರದೂಷಕಾಲದಲ್ಲಿ ಸ್ತೀಗೆ ಪ್ರೋಕ್ಷಣೆ ಮಾಡಿದಲ್ಲಿ ಗರ್ಭ ದೋಷ ಗಳು ದೂರವಾಗುವವು.
******
No comments:
Post a Comment