Thursday, 2 December 2021

ಶ್ರೀ ಮಾತೃ ಪಂಚಕಮ್ ಆದಿ ಶಂಕರಾಚಾರ್ಯ ಕೃತಂ मातृपंचकं MATRU PANCHAKAM by adi shankaracharya


from  3rd shloka 



ಶ್ರೀ ಮಾತೃಪಂಚಕಮ್ 

ಮುಕ್ತಾಮಣಿ ತ್ವಂ ನಯನಂ ಮಮೇತಿ
    ರಾಜೇತಿ ಜೀವೇತಿ ಚಿರ ಸುತ ತ್ವಮ್ ।
ಇತ್ಯುಕ್ತವತ್ಯಾಸ್ತವ ವಾಚಿ ಮಾತಃ
   ದದಾಮ್ಯಹಂ ತಂಡುಲಮೇವ ಶುಷ್ಕಮ್ ॥ 1॥

ಅಂಬೇತಿ ತಾತೇತಿ ಶಿವೇತಿ ತಸ್ಮಿನ್
   ಪ್ರಸೂತಿಕಾಲೇ ಯದವೋಚ ಉಚ್ಚೈಃ ।
ಕೃಷ್ಣೇತಿ ಗೋವಿನ್ದ ಹರೇ ಮುಕುನ್ದ
   ಇತಿ ಜನನ್ಯೈ ಅಹೋ ರಚಿತೋಽಯಮಂಜಲಿಃ ॥ 2॥

ಆಸ್ತಂ ತಾವದಿಯಂ ಪ್ರಸೂತಿಸಮಯೇ ದುರ್ವಾರಶೂಲವ್ಯಥಾ
   ನೈರುಚ್ಯಂ ತನುಶೋಷಣಂ ಮಲಮಯೀ ಶಯ್ಯಾ ಚ ಸಂವತ್ಸರೀ ।
ಏಕಸ್ಯಾಪಿ ನ ಗರ್ಭಭಾರಭರಣಕ್ಲೇಶಸ್ಯ ಯಸ್ಯಾಕ್ಷಮಃ
   ದಾತುಂ ನಿಷ್ಕೃತಿಮುನ್ನತೋಽಪಿ ತನಯಸ್ತಸ್ಯೈ ಜನನ್ಯೈ ನಮಃ ॥ 3॥

ಗುರುಕುಲಮುಪಸೃತ್ಯ ಸ್ವಪ್ನಕಾಲೇ ತು ದೃಷ್ಟ್ವಾ
   ಯತಿಸಮುಚಿತವೇಶಂ ಪ್ರಾರುದೋ ಮಾಂ ತ್ವಮುಚ್ಚೈಃ ।
ಗುರುಕುಲಮಥ ಸರ್ವಂ ಪ್ರಾರುದತ್ತೇ ಸಮಕ್ಷಂ
   ಸಪದಿ ಚರಣಯೋಸ್ತೇ ಮಾತರಸ್ತು ಪ್ರಣಾಮಃ ॥ 4॥

ನ ದತ್ತಂ ಮಾತಸ್ತೇ ಮರಣಸಮಯೇ ತೋಯಮಪಿವಾ
   ಸ್ವಧಾ ವಾ ನೋ ದತ್ತಾ ಮರಣದಿವಸೇ ಶ್ರಾದ್ಧವಿಧಿನಾ ।
ನ ಜಪ್ತ್ವಾ ಮಾತಸ್ತೇ ಮರಣಸಮಯೇ ತಾರಕಮನು-

   ರಕಾಲೇ ಸಮ್ಪ್ರಾಪ್ತೇ ಮಯಿ ಕುರು ದಯಾಂ ಮಾತುರತುಲಾಮ್ ॥ 5॥
*******
मातृपंचकं

मुक्तामणिस्तवं नयनं ममेति
राजेति जीवेति चिर सुत त्वम् ।
इत्युक्तवत्यास्तव वाचि मातः
ददाम्यहं तण्डुलमेव शुष्कम् ॥ १॥ 


अम्बेति तातेति शिवेति तस्मिन्
प्रसूतिकाले यदवोच उच्चैः ।
कृष्णेति गोविन्द हरे मुकुन्द


इति जनन्यै अहो रचितोऽयमञ्जलिः ॥2!!

आस्तां तावदियं प्रसूतिसमये 
दुर्वारशूलव्यथा नैरुच्यं तनुशोषणं मलमयी शय्या च संवत्सरी ।
एकस्यापि न गर्भभारभरणक्लेशस्य यस्याक्षमः

दातुं निष्कृतिमुन्नतोऽपि तनयस्तस्यै जनन्यै नमः ॥ ३॥

गुरुकुलमुपसृत्य स्वप्नकाले तु दृष्ट्वा
यतिसमुचितवेषं प्रारुदो त्वमुच्चैः ।
गुरुकुलमथ सर्वं प्रारुदत्ते समक्षं

सपदि चरणयोस्ते मातरस्तु प्रणामः ॥४!! 


न दत्तं मातस्ते मरणसमये तोयमपिवा
स्वधा वा नो दत्ता मरणदिवसे श्राद्धविधिना।
 न जप्त्वा मातस्ते
मरणसमये तारकमनु-

रकाले सम्प्राप्ते मयि *कुरु दयां मातुरतुलाम् ॥ ५॥
********


ಕಾಲಡಿ ಗ್ರಾಮದಲ್ಲಿ ಆದಿ ಶಂಕರರ ತಾಯಿ ఆర్యాంಬೆ ಮರಣ ಶಯ್ಯೆಯ ಮೇಲೆ ಇರುವಳು. ತನ್ನನ್ನು ನೆನೆಸಿಕೊಂಡ ತಕ್ಷಣ ಆಕೆಯ ಬಳಿಗೆ ಶಂಕರರು ಬಂದು ಉತ್ತರ ಕ್ರಿಯೆಗಳನ್ನು ಮಾಡುತ್ತಾರೆ.

ಆ ಸಂದರ್ಭದಲ್ಲಿ ಶಂಕರರು ಹೇಳಿದ ಐದು ಶ್ಲೋಕಗಳು. "ಮಾತೃಪಂಚಕ" ಎಂಬುದಾಗಿ ಪ್ರಸಿದ್ದವಾಗಿವೆ. 

1. ತಾತ್ಪರ್ಯ:

ಅಮ್ಮಾ!
" ನೀನು ನನ್ನ ಮುತ್ತು ಕಣೋ! ನನ್ನ ರತ್ನ ಕಣೋ!ನನ್ನ ಕಣ್ಣ ಬೆಳಕೋ ಎನ್ನಪ್ಪಾ!  ನೀನು ಚಿರಂಜೀವಿ ಯಾಗಿರ ಬೇಕು"  ಅಂತ ಪ್ರೇಮದಿಂದ ಎನ್ನ ಕರೆದ ನಿನ್ನ ಬಾಯಲ್ಲಿ ಈದಿನ ಕೇವಲ ಇಷ್ಟು ಶುಷ್ಕವಾದ ಅಕ್ಕಿಯ ಕಾಳುಗಳನ್ನು ಹಾಕುತ್ತಿದ್ದೇನೆ. ನನ್ನನ್ನು ಕ್ಷಮಿಸು.

2. ತಾತ್ಪರ್ಯ:

ಹಲ್ಲುಗಳಬಿಗಿಯಲ್ಲಿ ನನ್ನ ಪ್ರಸವಕಾಲದಲ್ಲಿ ಬಂದ ತಡೆಯಲಾಗದ ಬಾಧೆಯನ್ನು " ಅಮ್ಮಾ! ಅಯ್ಯಾ!ಶಿವಾ! ಕೃಷ್ಣಾ! ಹರೇ! ಗೋವಿಂದಾ!" ಎಂದುಕೊಳ್ಳುತ್ತಾ ಭರಿಸಿ ನನಗೆ ಜನ್ಮ ನೀಡಿದ ತಾಯಿಗೆ ನಾನು ನಮಸ್ಕರಿಸುತ್ತಿದ್ದೇನೆ.

3. ತಾತ್ಪರ್ಯ:

ಅಮ್ಮಾ!
ನನ್ನನ್ನು ಹೆತ್ತ ಸಮಯದಲ್ಲಿ ನೀನು ಎಂತಹ ಶೂಲವ್ಯಥೆಯನ್ನು (ಹೊಟ್ಟೆ ನೋವು) ಅನುಭವಿಸಿದೆಯೋ ಅಲ್ಲವೇ! ಕಳೆ (ಹೊಳಪು)  ಕಳೆದುಕೊಂಡು, ಶರೀರ ಶುಷ್ಕಿಸಿ ಇರುತ್ತದೆ.ಮಲದಿಂದ ಶಯ್ಯೆ ಮಲಿನವಾದರೂ - ಒಂದು ಸಂವತ್ಸರ ಕಾಲ ಆ ಕಷ್ಟವನ್ನು ಹೇಗೆ ಸಹಿಸಿದೆಯೋ ಅಲ್ಲವೇ! ಯಾರೂ ಅಂತಹ ಬಾಧೆಯನ್ನು ಸಹಿಸಲಾರರು. ಎಷ್ಟು ದೊಡ್ಡವನಾದರೂ ಮಗ ತಾಯಿಯ ರುಣ ತೀರಿಸ ಬಲ್ಲನೇ? ನಿನಗೆ ನಮಸ್ಕಾರ ಮಾಡುತ್ತಿದ್ದೇನೆ. 

4. ತಾತ್ಪರ್ಯ:

ನಿನ್ನ  ಕನಸಿನಲ್ಲಿ ನಾನು ಸನ್ಯಾಸಿವೇಷದಲ್ಲಿ ಕಾಣಿಸಿಕೊಂಡದ್ದೇಸರಿ ಬಾಧೆಪಟ್ಟು , ನಮ್ಮ ಗುರುಕುಲಕ್ಕೆ ಬಂದು ಗಟ್ಟಿಯಾಗಿ ನೀನು ಅತ್ತೆ. ಆ ಸಮಯದಲ್ಲಿ ನಿನ್ನ ದುಃಖ ಅಲ್ಲಿಯವರೆಲ್ಲರಿಗೂ  ಬಾಧೆ ಕಲಿಗಿಸಿತು. ಅಂತಹ ದೊಡ್ಡವ್ಯಕ್ತಿಯಾದ ನಿನ್ನ ಪಾದಗಳಿಗೆ ನಮಸ್ಕರಿಸುತ್ತಿದ್ದೇನೆ.

5. ತಾತ್ಪರ್ಯ:

ಅಮ್ಮಾ!
ಸಮಯ ಮಿಂಚಿಹೋದ ಮೇಲೆ ಬಂದೆನು. ನಿನ್ನ ಮರಣ ಸಮಯದಲ್ಲಿ ಸ್ವಲ್ಪ ನೀರು ಕೂಡಾ ನಾನು ನಿನ್ನ ಗಂಟಲೊಳಗೆ ಹಾಕಲಿಲ್ಲ. ಶ್ರಾದ್ಧವಿಧಿಯನ್ನು ಅನುಸರಿಸಿ "ಸ್ವಧಾ" ವನ್ನು ಕೊಡಲಿಲ್ಲ. ಪ್ರಾಣವು ಹೋಗುವ ಸಮಯದಲ್ಲಿ ನಿನ್ನ ಕಿವಿಯಲ್ಲಿ ತಾರಕಮಂತ್ರ ವನ್ನು ಓದಲಿಲ್ಲ. ನನ್ನನ್ನು ಕ್ಷಮಿಸು. ನನ್ನಲ್ಲಿ ಯಾವುದಕ್ಕೂ ಸಮಾನವಾಗದ ದಯೆ ತೋರು ತಾಯೇ!
***

No comments:

Post a Comment