raghavendra stotra meaning of important shlokas
ಸಹಸ್ರಾರು ಮಂದಿ ರಾಯರಭಕ್ತರ ಪೈಕಿ ಬಿಚ್ಚಾಲೆಯ ಶ್ರೀ ಅಪ್ಪಣ್ಣಚಾರ್ಯರು ಒಬ್ಬರು. ರಾಯರಲ್ಲಿ 12 ವರ್ಷಗಳಕಾಲ ನ್ಯಾಯವೇದಾಂತ ಅಭ್ಯಾಸ ಮಾಡಿದವರು. ಗುರುಗಳೊಡನೆ ಸಂಚಾರ ಮಾಡುತ್ತಿದ್ದವರು.
ಗುರುಗಳ ಆಜ್ಞೆಯಂತೆ ಬಿಚ್ಚಾಲೆ ಗ್ರಾಮದಲ್ಲಿ ನೆಲೆಸಿ ಪಾಠ ಪ್ರವಚನ ನಡೆಸುತ್ತಾ ಗೃಹಸ್ಥ ಧರ್ಮ ಪಾಲನೆಯಲ್ಲಿದ್ದವರು. ಗುರುಗಳು ನವಾಬನಿಂದ ಪವಿತ್ರವಾದ ಮಂಚಾಲೆ ಗ್ರಾಮವನ್ನು ಪಡೆದು ಅಲ್ಲಿಯೇ ವಾಸಮಾಡುತ್ತಿದ್ದರು. ಅಪ್ಪಣ್ಣಚಾರ್ಯರು ಗುರುಗಳ ಅನುಮತಿ ಪಡೆದು ತೀರ್ಥಯಾತ್ರೆಗೆ ತೆರಳಿದರು. ಯಾತ್ರೆಯಿಂದ ಬಿಚ್ಚಾಲೆಗೆ ಹಿಂದಿರುಗುವ ಮೂರುದಿನ ಮೊದಲು ಶ್ರೀರಾಯರು ಬೃಂದಾವನ ಪರವೇಶ ಮಾಡಿದ ವಿಷಯ ತಿಳಿದು ಆಘಾತವಾಯಿತು. ದುಃಖದಿಂದ ಶ್ರೀಗಳ ಚರಮ ದರ್ಶನದ ಭಾಗ್ಯ ತಮಗೆ ದೊರೆಯಲಿಲ್ಲ ಎಂದೂ ಪರಿತಪಿಸಿ, ಈಜು ಬರೆದಿದ್ದರೂ ಪ್ರವಾಹದಿಂದ ಭೋರ್ಗರೆಯುತ್ತಿದ್ದ ತುಂಗಭದ್ರೆಗೆ ಹಾರಿ ಬೃಂದಾವನ ದರ್ಶನಾಕಾಂಕ್ಷಿ ಗಳಾಗಿ ಈಜಲು ಪ್ರಯತ್ನಿಸಿದರು. ಭವಸಾಗರವನ್ನೇ ದಾಟಿಸುವ ಶಕ್ತಿಯುಳ್ಳ ಗುರುಗಳು ಅವರನ್ನು ಸಂರಕ್ಷಿಸಿದರು.
ಅಪ್ಪಣ್ಣಾಚಾರ್ಯರು ಪುಳಿಕಿತರಾಗಿ
ಭಕ್ತಿಯಿಂದ ಮಾಡಿದ ಸ್ತೋತ್ರವೇ "ಶ್ರೀ ರಾಘವೇಂದ್ರ ಸ್ತೋತ್ರ" ಎಂದು ಪ್ರಸಿದ್ದಿ ಪಡೆಯಿತು.
" ಶ್ರೀ ಪೂರ್ಣಭೋದ ಗುರುತೀರ್ಥ ಪಯೋಬ್ದಿ ಪಾರ ಕಾಮಾರಿಮಾಕ್ಷ ವಿಷಮಾಕ್ಷ ಶಿರ: ಸ್ಪ್ರೇಶಂತೀ " ಎಂದೂ ಸ್ತೋತ್ರ ಆರಂಭಿಸಿದರು.
ದಡಕ್ಕೆ ಸೇರಿದಾಗ, " ರಾಜ ಚೋರ ಮಹಾವ್ಯಾಘ್ರ ಸರ್ಪನಕ್ರಾದಿ ಪೀಡನಮ್, ನ ಜಾಯತೇಸ್ಯ, ಸ್ತೋತ್ರಸ್ಯ ಪ್ರಭಾವನ್ನಾತ್ರಸಂಶಯಃ"
ಎಂದೂ ಉಚ್ಚರಿಸಿದರು.
ಇವಿಷ್ಟನ್ನು ಹೇಳುವ ಹೊತ್ತಿಗೆ ಗುರುರಾಜರು ನಮ್ಮನೆಲ್ಲ ಬಿಟ್ಟು ಬೃಂದಾವನಸ್ತರಾದರು ಎಂದು ಅಪ್ಪಣ್ಣಚಾರ್ಯರಿಗೆ ಅಲ್ಲಿ ನೆರೆದವರು ಹೇಳಿದಾಗ ಮತ್ತೆ ದುಃಖ ತಡೆಯಲಾಗದೆ ಅಪ್ಪಣ್ಣಚಾರ್ಯರು ತಾವೂ ಮಾಡಿದ ಸ್ತೋತ್ರದ ಫಲಸ್ತುತಿಯನ್ನು ಹೇಳುತ್ತಾರೆ.
ಯೋ ಭಕ್ತ್ಯಾ ಗುರುರಾಘವೇಂದ್ರ ಚರಣ ದ್ವಂದ್ವಂಸ್ಮರನ್ ಯಃ ಪಠತ್ ಸ್ತೋತ್ರಂ, ಧಿವ್ಯ ಮಿದಂ ಸದಾ ನಹಿ ನಹೀಭವೇತ್ತ ಸ್ಯಾ ಸುಖಂ ಕಿಂಚನ|
ಕಿಂ ತ್ವಿಷ್ಟಾರ್ಥ ಸಮೃದ್ಧಿ ರೇವ ಕಮಲಾನಾಥ ಪ್ರಸಾದೋ ದಯಾತ್.
ಕೀರ್ತಿ ದಿಗ್ವಿದಿತಾ ವಿಭೂತಿರತುಲಾ
ಎನ್ನುವಷ್ಟರಲ್ಲಿ ಗುರುರಾಜರು " ಸಾಕ್ಷಿ ಹಯಾ ಸೊsತ್ರಹಿ |
ಬೃಂದಾವನದೊಳಗಿಂದ ತಮ್ಮ ಸಮ್ಮತಿ ನೀಡಿದ ಸ್ತೋತ್ರ ಶ್ರೀರಾಘವೇಂದ್ರ ಸ್ತೋತ್ರ.
ಈ ಸ್ತೋತ್ರಕ್ಕೆ ಕೊನೆಯ ಏಳು ಅಕ್ಷರವನ್ನು ತಾವೇ ತುಂಬಿ 700 ವರ್ಷಗಳ ಪರ್ಯಂಕ ಭಕ್ತರ ಇಷ್ಟಾರ್ಥವನ್ನು ನೆರೆವೇರಿಸುತ್ತಿರುವ ಸಕಲ ಸಜ್ಜನರನ್ನೂ ಅನುಗ್ರಹಿಸುತ್ತಿರುವ ಶ್ರೀ ಗುರುರಾಜಾರಿಗೆ ಇಂದಿನಿಂದ ಒಂದು ಅಕ್ಷರ ನಮನ.
ಶ್ರೀ ಪೂರ್ಣಭೋದ ಪೆಯೊಧಿ ಪಾರ.
ಎಂದು ಆರಂಭ ವಾಗುವ ಸ್ತೋತ್ರ ಕೋಟ್ಯಾಂತರ ಮಂದಿ ಪಠಿಸಿದ್ದಾರೆ, ಮುಂದೆ ಪಠಿಸುತ್ತಾರೆ.
ಅಪ್ಪಣ್ಣಚಾರ್ಯರು ಆರಂಭದಲ್ಲಿ
ಶ್ರೀ ಗುರುರಾಯರ ವಾಣಿಯನ್ನು ಗಂಗಾ ಪ್ರವಾಹಕ್ಕೆ ಹೋಲಿಸಿ, ಶ್ರೀಮದಾಚಾರ್ಯರು ರಚಿಸಿದ ಸರ್ವ ಮೂಲ ಗ್ರಂಥಗಳಿಗೆ ಟಿಪ್ಪಣಿ ರಚಿಸಿದ ಶ್ರೀ ಗುರುರಾಯರು, ಗಂಗೆ ಬುಧ ನ ತಂದೆಯಾದ ಚಂದ್ರನ ಉಗಮ ಸ್ಥಾನವಾದ ಸಮುದ್ರವನ್ನು ಸೇರುತ್ತಾಳೋ ಹಾಗೆ ಶ್ರೀರಾಯರ ಧಿವ್ಯವಾಣಿ , ಗಂಗೆಯನ್ನು ಶಿರಸ್ಪರ್ಷದಿಂದ ಶಾಂತ ಮಾಡಿದ ಪರಮ ವೈಷ್ಣವಾಗ್ರಣಿ ಮಹಾರುದ್ರದೇವರನ್ನು ತಮ್ಮ ಪಾಂಡಿತ್ಯದಿಂದ ಮೆಚ್ಚಿಸಿದವರು.
ಇಲ್ಲಿ ಅಪ್ಪಣ್ಣಚಾರ್ಯರ ಗಂಗಾನದಿಯ ವರ್ಣನೆ ಶ್ರೀ ರಾಯರ ವಾಣಿಗೆ ಹೋಲಿಸಿದ್ದಾರೆ.
***
ಹಿಂದಿನ ಭಾಗದಲ್ಲಿ ಶ್ರೀ ಅಪ್ಪಣ್ಣಾಚಾರ್ಯರು ಶ್ರೀರಾಯರ ವಾಣಿಯನ್ನು ಪರಮ ಪವಿತ್ರವಾದ ಗಂಗೆಗೆ ಹೋಲಿಸಿದರು .
ಮುಂದೆ :
ಶ್ರೀ ರಾಘವೇಂದ್ರ ಸಕಲ ಪ್ರದಾತ ಸ್ವಪಾದಾ ಕಂಜ ದ್ವಯ ಭಕ್ತಿ ಮದ್ಭ್ಯ :
ಆಘಾದ್ರಿ ಸಂಭೇದನ ದೃಷ್ಟಿ ವಜ್ರ : ಕ್ಷಮಾ ಸುರೇಂದ್ರೋ
ವ ತು ಮಾಂ ಸದಾಯಾಂ
ಈ ಶ್ಲೋಕದಲ್ಲಿ ಗುರುಗಳ ಕಾರುಣ್ಯವನ್ನು ಮುಕ್ತಕಂಠ ದಿಂದ ಹೊಗಳುತ್ತಾ ಅಪ್ಪಣ್ಣಾಚಾರ್ಯರು ಶ್ರೀ ರಾಯರು ತಮ್ಮ ಪಾದಕಮಲಗಳನ್ನು ಸದಾ ಸ್ಮರಿಸುತ್ತ ಭಕ್ತಿಯಿಂದ ಮೊರೆಹೋದ ಸಜ್ಜನರಿಗೆ ಅವರ ಕರುಣಾಪೂರಿತ ದೃ ಷ್ಟಿಮಾತ್ರದಿಂದಲೇ ಪಾಪರಾಶಿಯೆoಬ
ಬೆಟ್ಟದ ಸಾಲನ್ನು ಪುಡಿ ಮಾಡುವ ವಜ್ರಾಯುಧದಂತೆ ಕೆಲಸಮಾಡುವ ಶ್ರೀ ರಾಘವೇಂದ್ರ ಗುರುಸಾರ್ವ ಭೌಮರು ನನ್ನನ್ನು ನಿರಂತರವಾಗಿ ಕಾಪಾಡಲಿ . ಎನ್ನುತ್ತಾರೆ ಅಪ್ಪಣ್ಣಾಚಾರ್ಯರು .
ಇಲ್ಲಿ ನನ್ನನ್ನು ಎಂದಿದ್ದರು ಸರ್ವ ಭಕ್ತರ ಪರವಾಗಿ ಕೇಳಿಕೊಂಡಿದ್ದಾರೆ .
ಸುಂದರವಾದ ಉಪಮೆ ನೀಡಿದ್ದಾರೆ ಆಚಾರ್ಯರು ,ರಾಯರ ದೃಷ್ಟಿಯನ್ನು ವಜ್ರಾಯುಧಕ್ಕೆ ಹೋಲಿಸಿದ್ದಾರೆ . ಶ್ರೀರಾಯರು ಬೃಂದಾವನಸ್ಥ ರಾದಾಗ
ಅವರ ಮರಿ ಮೊಮ್ಮಗ ಶ್ರೀನಿವಾಸಾಚಾರ್ಯರು ಕೇವಲ ಒಂದೂವರೆ ವರ್ಷದ ಮಗು ಮುಂದೆ ಅಸಾಧಾರಣ ಪಾಂಡಿತ್ಯವನ್ನು ಗಳಿಸಿದ್ದು ಈ ಸಂದರ್ಭದಲ್ಲಿ ಸ್ಮರಿಸಬಹುದು .
ಶ್ರೀ ಅಪ್ಪಣ್ಣಚಾರ್ಯರೂ ಶ್ರೀರಾಯರ ವಾಣಿಯನ್ನು ಜೀವ ನದಿ ಗಂಗೆಗೆ ಹೋಲಿಸಿದ್ದು ಉಚಿತವಾಗೇ ಇದೆ. ಕಾರಣ ಅಂದಿನ ಇಂದಿನ ಮುಂದಿನ , ವಿದ್ವಾಂಸರು ಶ್ರೀ ಮದ್ವ ಸಿದ್ಧಾಂತದ ಸವಿಯೂಟವನ್ನು ಆನಂದಿಸಿದ್ದರು, ಆನಂದಿಸುತ್ತಿದ್ದಾರೆ, ಮುಂದೆ ಆನಂದಿಸುತ್ತಾರೆ. ಶ್ರೀ ಆನಂದ ತೀರ್ಥರ ಶ್ರೀಮದ್ ಟೀಕಾಚಾರ್ಯರನ್ನು ಒಳಗೊಂಡಂತೆ ಗುರು ಪರಂಪರೆಯ ಧೀರ್ಘ ಗ್ರಂಥಗಳನ್ನು ಸ್ವಲ್ಪದರಲ್ಲೇ ಹೇಳುವ, ಕಿರು ಗ್ರಂಥಗಳನ್ನು ಹಿರಿದಾಗಿಸುವ ಸಾಮರ್ಥ್ಯ ರಾಯರದು.
ಒಬ್ಬ ವಿದ್ವಾಂಸರಿಂದ ಈ ವಿಶ್ಲೇಷಣೆ ಕೇಳಿದಾಗ ನನಗೆ ಗಂಗಾನದಿಯ ಹರಿವು, ಮನೆಯಲ್ಲಿಯ ಗಂಗಾ ತಾಲಿಯ ಪವಿತ್ರತೆಯ ಹೋಲಿಕೆ ಎರಡೂ ಗಂಗೆ ಶ್ರೀಹರಿಯ ಪಾದೋದ್ಭವೆ. ಎರಡೂ ಪವಿತ್ರವೇ.
ಶ್ಲೋಕ 4 ಶ್ರೀ ರಾಘವೇಂದ್ರೋ ಹರಿಪಾದ ಕಂಜ ನಿಷೇವಣಾಲಬ್ದ ಸಮಸ್ತ ಸಂಪತ್ |
ದೇವಸ್ವಭಾವೋ ದಿವಿಜದೃಮೋ s ಯಮಿಷ್ಟ ಪ್ರದೋ ಮೇ ಸತತಂ ಭೂಯಾತ್
ಅರ್ಥ : ಶ್ರೀಹರಿಯ ಪಾದ ಪದ್ಮಗಳ ಭಕ್ತಿ ಪೂರ್ಣ ಸೇವನೆಯಿಂದ, ಜ್ಞಾನ ಭಕ್ತಿ ವೈರಾಗ್ಯ ಒಳಗೊಂಡಂತೆ ಸಮಸ್ತ ಸಂಪತ್ತನ್ನೂ ಹೊಂದಿದ, ಸಾತ್ವಿಕ ಸ್ವಭಾವದವರಾದ, ದೇವ ವೃಕ್ಷ ಗಳಂತೆ,ಭಕ್ತರು ಬಯಸಿದ್ದನ್ನುಕೊಡುವಂತವರಾದ ಶ್ರೀರಾಘವೇಂದ್ರ ಗುರುಸಾರ್ವಭೌಮರು ಸರ್ವದಾ ನನಗೆ ಇಷ್ಟಾರ್ಥ ಕರುಣಿಸುವಂತಾಗಲಿ " ಎನ್ನುತ್ತಾರೆ.
ಇದು ಶ್ಲೋಕದ ಅರ್ಥವಾದರೂ, ಮೂರು ಜನ್ಮಗಳಲ್ಲಿ ಶ್ರೀರಾಯರು ಮಾಡಿದ ಭಗವಂತನ ಸೇವೆಯ ಉಲ್ಲೇಖ ಇದೆ. ಬಾಹ್ಲಿಕ ರಾಗಿದ್ದಾಗ ರಾಜರಾಗಿದ್ದರು
ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಎರಡುವಿಧ ಅಂದರೆ ಐಹಿಕ ಸಂಪತ್ತು ಅವರದಾಗಿತ್ತು. ಪ್ರಹ್ಲಾದರಾಗಿದ್ದಾಗ ಅಪಾರ ರಾಜ್ಯ ಸಂಪತ್ತೇ ಅವರದಾಗಿದ್ದಾಗ, ನರಸಿಂಹದೇವರನ್ನು " ದೇಹಿಮೇ ತವ ದಾಸ್ಯ ಯೋಗಂ " ಎಂದು ಮಾತ್ರ ಕೇಳಿಕೊಂಡವರು. ಮುಂದೆ ಸನ್ಯಾಸಿಯಾಗಿದ್ದರೂ ವಿಜಯನಗರ ಸಾಮ್ರಾಟ ಪದವಿ ಅನುಭವಿಸಿದವರು.
ಕೃಷ್ಣಾ ಗೀತೆಯಲ್ಲಿ ಉಲ್ಲೆಖಿಸಿದ ದೈವೀ ಸಂಪತ್ತಿನ ಗುಣಗಳು ರಾಯರಲ್ಲಿ ಇದ್ದವು. ಇಂಥಾ ಗುರುಗಳು ದೇವಲೋಕದ ಕಲ್ಪವೃಕ್ಷ, ಪಾರಿಜಾತದಂತೆ ಸೇವಿಸಿದವರ ಇಷ್ಟಾರ್ಥ ಸಲ್ಲಿಸುವಂತೆ, ಗುರು ಸಾರ್ವಭೌಮರು ಭಕ್ತರ ಸಕಲ ಅಭಿಷ್ಟಗಳನ್ನು ಪೂರೈಸುತ್ತಾರೆ ಎಂದು ಅಪ್ಪಣ್ಣಚಾರ್ಯರ ಅಭಿಪ್ರಾಯ.
ಶ್ರೀರಾಯರ ಲಕ್ಷಣಗಳು ಅಸಾಧಾರಣವಾದದ್ದು. ಸರ್ವ ಲಕ್ಷಣಗಳಿಂದ ಕೂಡಿದ್ದವರು ಎಂದು ನಾರಾಯಣಚಾರ್ಯ ವಿರಚಿತ " ಶ್ರೀರಾಘವೇಂದ್ರ ವಿಜಯದಲ್ಲಿ " ಹೇಳಿರುವಂತೆ ಈ ಪ್ರಸ್ತುತ ಶ್ಲೋಕ ಇದೆ.
ಒಂದೇ ಒಂದು ಉಪಮೆ ಕೊಡುವುದಾದರೆ ಸಲ್ಲಕ್ಷಣ ಉಳ್ಳ ವೆಂಕಟನಾಥನ ನಾಲಿಗೆಯೇ ಹಂಸ ತೂಲಿಕ ತಲ್ಪ ಎಂದು ಹೇಳಿ ಅದನ್ನು ವಿವರಿಸುತ್ತಾರೆ ಕವಿಗಳು. ಬಾಯಿಯಂಬ ಅಂತಪುರದ ಹಂಸತೂಲಿಕಾ ತಲ್ಪದಲ್ಲಿ ಶ್ರೀ ವಿದ್ಯಾ ದೇವತೆಯು ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಮುಂದೆ ಪರಮ ಹಂಸನಾಗಿ ಸಕಲ ವಿದ್ಯಾ ಪಾರಂಗತನಾದಾಗ, ಅವನ ನಾಲಿಗೆಯಲ್ಲಿ ಬಿಡುವಿಲ್ಲದೆ ನರ್ತಿಸಬೇಕಾಗಿದೆ. ನನಗೆ ವಿಶ್ರಾಂತಿಯೇ ದೊರೆಯುವುದಿಲ್ಲ ಎಂದು ವೀಣಾಪಾಣಿ ಸರಸ್ವತಿ ನಿರ್ಧರಿಸಿ ಈಗ ಮಲಗಿ ನಾಲಿಗೆಯಂಬ ಹಂಸತೂಲಿಕ ತಲ್ಪದಲ್ಲಿ ನೆಲೆಸಿದ್ದಾಳೆ. ಎಂದರು ಕವಿಗಳು
ಅದನ್ನೇ ಅಪ್ಪಣ್ಣಚಾರ್ಯರು ಈ ಶ್ಲೋಕದಲ್ಲಿ ವರ್ಣಿಸುತ್ತಾರೆ.
ಶ್ಲೋಕ :- ನೀರಸ್ತ ದೋಷೋ ನೀರವದ್ಯ ವೇಶಃ ಪ್ರತ್ಯರ್ಥಿ ಮೂಕತ್ವ ನಿಧಾನ ಭಾಷ :
ವಿದ್ವತ್ ಪರಿಜ್ಞೆಯ ಮಹಾ ವಿಶೇಷ ವಾಗ್ವೈಖರಿ ನಿರ್ಜಿತ ಭವ್ಯ ಶೇಷ :
ಅರ್ಥ :- ಅಪ್ಪಣ್ಣಚಾರ್ಯರು ಭಕ್ತ್ತಿಯಿಂದ ರಾಯರ ಗುಣಗಳನ್ನು ಹೇಳುತ್ತಾರೆ.
ಯಾವವಿಧವಾದ ಮಿಥ್ಯಾಜ್ಞಾನ, ವಿಪರೀತಜ್ಞಾನ ಸಂಶಯಜ್ಞಾನ ದೋಷರಹಿತರು.
ಯಾವ ದುರ್ಲಕ್ಷಣ ಗಳಿಲ್ಲದ ಭವ್ಯವಾದ ಶರೀರಉಳ್ಳವರು.
ತಮ್ಮ ಎದುರಾಗಿ ವಾದಿಸಲು ಬಂದ ಪ್ರತಿವಾದಿಗಳನ್ನು ಮೂಕ ವಿಸ್ಮಯರಾಗಿ ಮಾಡುವುದಕ್ಕೆ ಕಾರಣವಾದ ವಾಕ್ ಸಂಪತ್ ಉಳ್ಳವರು. ವಿದ್ವಾಂಸರಿಂದ ಅರಿಯಲು ಯೋಗ್ಯವಾದವರು ವಿಶೇಷ ಗುಣ ಉಳ್ಳವರು. ಮುಂದಿನ ಪದ ಬಹಳ ಚಮತ್ಕಾರವಾಗಿ ಬಳೆಸಿದ್ದಾರೆ ಒಂದೇ ಪದಕ್ಕೆ ಎರಡು ಅರ್ಥ ಬರುವಂತೆ ಪದ ಪ್ರಯೋಗ, ರಾಯರು ತಮ್ಮ ವಾಕ್ಸಾಮರ್ಥ್ಯ ದಿಂದ ಶೇಷನೆಂಬ ಮಾಯಾವಾದಿಯನ್ನು ಮಣಿಸಿದವರು ಎಂದಾದರೆ ಮತ್ತೊಂದು ಅರ್ಥ ತಮ್ಮ ವಾಕ್ ನಿಂದಾಗಿ ಶೇಷದೇವರನ್ನು ಮೆಚ್ಚಿಸಿದವರು, ಎನ್ನುತ್ತಾರೆ
ಇಂತಹ ರಾಘವೇಂದ್ರ ಯತಿಗಳು ಸತತವಾಗಿ ನಮ್ಮ ಇಷ್ಟಾರ್ಥಗಳನ್ನು ಪೂರೈಸಲಿ ಎನ್ನುತ್ತಾರೆ ಅಪ್ಪಣ್ಣಚಾರ್ಯರು.
ಶ್ರೀ ಗುರುರಾಜರ ಪಾದೋದಕ ಮಹಿಮೆ ಅಪಾರ ಆರಾಧನೆಗಳಲ್ಲಿ ವಿಶೇಷದಿನಗಳಲ್ಲಿ ಗುರುಗಳಿಗೆ ಪಾದಪೂಜೆ ಮಾಡಿ ಅವರ ಪಾದೋದಕವನ್ನು ಧಾರಣೆ ಮಾಡಲೂ ಸರತಿ ಯ ಸಾಲಿನಲ್ಲಿ ಭಕ್ತಜನ ನಿಂತಿರುತ್ತಾರೆ ಇಂದಿಗೂ ಅದು ಸರ್ವೇ ಸಾಮಾನ್ಯ.
ಶ್ರೀ ಅಪ್ಪಾಣ್ಣಾ ಚಾರ್ಯರು ಅಂದೇ ಪಾದೋದಕದ ಮಹಿಮೆಯನ್ನು ಕೊಂಡಾಡುತ್ತಾರೆ ಸ್ತೋತ್ರದ ಎಂಟನೆಯ ಶ್ಲೋಕ ಗುರುರಾಜರ ಪಾದೊದಕವನ್ನು ಕೊಂಡಾಡುತ್ತಾರೆ.
ಶ್ಲೋಕ :- ||ಯತ್ಪಾದೋದಕ ಸಂಚಯಹಃ
ಸುರನದಿ ಮುಖ್ಯಾಪಗಾ ಸಾದಿತಾ -
ಸಂಖ್ಯನುತ್ತಮ ಪುಣ್ಯಸಂಘ ವಿಲ ಸತ್ಪ್ರಖ್ಯಾತ ಪುಣ್ಯವಹಃ
ದುಸ್ತಾಪ ತ್ರಯ ನಾಶನೋ ಭುವಿ ಮಹಾ ವಂದ್ಯಾ ಸುಪುತ್ರಪ್ರದೋ
ವ್ಯಂಗ ಸ್ವಂಗಸ್ಮೃದ್ಧಿದೊ
ಗ್ರಹ ಮಹಾ ಪಾಪಹಾಸ್ತಮ್ ಶ್ರಯೇ ||
ಅರ್ಥ :- ಶ್ಲೋಕದಲ್ಲಿಶ್ರೀರಾಯರ ಪಾದೋದಕವನ್ನು ಅತ್ಯಂತ ಪವಿತ್ರವಾದ ಸುರನದಿ ತೀರ್ಥಗಳು ಸಂಖ್ಯೆರಹಿತವಾದ ಅಂದರೆಲೆಕ್ಕವಿಲ್ಲದ ಪುಣ್ಯ ರಾಶಿಗಳಿಗೂ ಮಿಗಿಲಾಗಿ ಶೋಭಿಸುವ ಶಾಸ್ತ್ರಗಳ ಸಮಾನ.
ನೀರು ಜಡ ಪದಾರ್ಥ ಅದಕ್ಕೆ ಜಲದೇವತೆ ಗಂಗೆ ಅಭಿಮಾನಿ ಅಂತೆಯೇ ಬೃಂದಾವನ ಅಭಿಷೇಕ ರಾಯರ ಪಾದೋದಕಅದರಲ್ಲಿ ಶ್ರೀಹರಿ ಜಾಹ್ನವಿ ಎಂಬರೂಪದದಿಂದ ಸನ್ನಿಹಿತ ವಾಗಿರುತ್ತಾನೆ ಆದ್ದರಿಂದ ಶ್ರೀ ರಾಯರ ಪಾದೊದಕ ಕ್ಕೆ ಈ ಶಕ್ತಿ
ಅಷ್ಟೇಅಲ್ಲ ಶ್ರೀರಾಯರ ಪಾದೋದಕ್ಕಕ್ಕೆ ಪ್ರಸಿದ್ಧ ಶಾಸ್ತ್ರದಿಂದ ಬರುವ ಪುಣ್ಯದ ರಾಶಿ ಕೊಡುವ ಶಕ್ತಿಇದೆ ಅಲ್ಲದೆ ಮೂರುತಾಪಗಳನ್ನು ಅಂದರೆ ಆದ್ಯಾತ್ಮಿಕ ಆದಿ ಭೌತಿಕಆದಿ ದೈವಿಕ ನಿರ್ಮೂಲನ ಮಾಡುವ ಶಕ್ತಿ ಪಾದೋದಕ ಹೊಂದಿದೆ. ಮಕ್ಕಳ ಫಲವೇ ಇಲ್ಲ ಎನ್ನುವಹೆಣ್ಣುಮಕ್ಕಳಿಗೆ ಉತ್ತಮ ಮಕ್ಕಳನ್ನು ಕೊಡುವ ಶಕ್ತಿ ಶ್ರೀರಾಯರ ಪಾದೋದಕಕ್ಕೆ ಇದೇ, ಹಾಗೆ ವಿಕಲಾಂಗರಿಗೆ
ಅವರವರ ಅಂಗಾಗಗಳಿಗೆ ಶಕ್ತಿ ತುಂಭುವ ಕೆಲಸ ಈ ರಾಯರ ಪಾದೋದಕ ಮಾಡುತ್ತದೆ. ಮಾತ್ತೇನು ದುಷ್ಟ ಗ್ರಹಗಳಿಂದ ಆಗುವ ಪೀಡೆ ಪರಿಹಾರ,ಬ್ರಹ್ಮಹತ್ಯದೋಷ ನಿವಾರಣಾ ಮಾಡುವಂ ತಹುದು.
ಇಂತಹ ಪಾದೋದಕ ಮಹಿಮೆಯುಳ್ಳ ಗುರುಗಳನ್ನು ನಾನು ಆಶ್ರಯಿಸುತ್ತೇನೆ ಎಂದು ಶ್ರೀ ಅಪ್ಪಣ್ಣಚಾರ್ಯರು ತುಂಬು ಭಕ್ತಿಯಿಂದ ಹೇಳುತ್ತಾರೆ
ಶ್ರೀ ಹರಿಗೆ ಅತ್ಯಂತ ಪ್ರೀತಿ ಪಾತ್ರರಾದ ಶ್ರೀ ರಾಯರ ಸ್ತೋತ್ರ ಬರೆಯುವ ಮುನ್ನ ಅವರಿಂದ ಅನವರತವೂ ಪ್ರಾರ್ಥನೆಗೊಳ್ಳುವ ಶ್ರೀಹರಿಯ ಕೃಷ್ಣಾವತಾರದ ಚಿಂತನೆ
ಗುರುಗಳು ತಮ್ಮ ಕೃತಿ "ಶ್ರೀ ಕೃಷ್ಣ ಚಾರಿತ್ರ್ಯ ಮಂಜರಿಯಲ್ಲಿ"
ಪ್ರಮೇಯಗಳನ್ನ ಒಂದನ್ನೂ ಬಿಡದೆ ನಿತ್ಯ ಪಾರಾಯಣಕ್ಕೆ ಶ್ರೀಮದ್ಭಾಗವತ ಚಿಂತನೆ ಮಾಡಿಕೊಟ್ಟಿದ್ದಾರೆ.
ಅದರಲ್ಲಿ,ಒಂದೇಶ್ಲೋಕದಲ್ಲಿ ಗುರುಗಳು ಭಗವಂತನ ಆಗಾಧ ಮಹಿಮೆಯನ್ನು ಜೋಡಿಸಿದ್ದಾರೆ
ವಿಷ್ಣು ಬ್ರಹ್ಮಾದಿ ದೇವೈ ಕ್ಷಿತಿ ಭರಹರಣೇ :ಪ್ರಾರ್ಥಿತಃ ಪ್ರಾದುರಾಸೀದ್ ದೇವಕ್ಯಾಂ ನಂದ ನಂದೀ ಶಿಶುವಧಾ ವಿಹಿತಂ ಪೂತಾನಾಂ ಯೋ ಜಘಾನ
ಉತ್ಥಾನೌತ್ಸುಕ್ಯಕಾಲೇ ರಥಚರಣಗತಂ ಚಾಸುರಂ ಪಾದಘಾತೈಶ್ಚಕ್ರಾ ವರ್ತಮ್
ಚ ಮಾತ್ರ ಗುರುರಿತಿ ನಿಹಿತೋ ಭೂತಲೇ ಸೊs ವತಾನ್ಮಾನ್
ಭೂಭಾರ ಹರಣ ಮಾಡುವುದಕ್ಕೆ ಬ್ರಹ್ಮಾದಿಗಳು ಪ್ರಾರ್ಥಿಸಿದ್ದರು ಆಗ ಪ್ರಕಟವಾದವನೇ ಕೃಷ್ಣ ದೇವಕಿಗೆ ಮಗನಾಗಿನಂದನಿಗೆ ಆನಂದಕೊಟ್ಟ ಕೃಷ್ಣ, ಶಿಶುವಧೆಯ ಉದ್ದೇಶಹೊಂದಿದ್ದ ಪೂತನ ಸಂಹಾರಕಾನಾಗಿ ರಥರೂಪದ ಶಕಟಾ ಸುರನನ್ನು ತನ್ನ ಪಾದದಿಂದ ತಾಡನಮಾತ್ರಾದಿಂದ
ಸಂಹರಿಸಿಸುಂಟರಗಾಳಿ ರೂಪದಿಂದ ಬಂದ ತೃಣಾ ವರ್ತನನ್ನು ಆಕಾಶದಿಂದಭೂಮಿಯಮೇಲೆ ಬೀಳುವಹಾಗೆ ಮಾಡಿ ಅವರಿಬ್ಬರಿಗೂ ಅಧೋಗತಿ ನೀಡಿದಕೃಷ್ಣ ನಮ್ಮನ್ನು ರಕ್ಷಣೆ ಮಾಡಲಿ
ಎಂದು ಶ್ರೀಮದ್ಭಾಗವತದ ಹಲವಾರು ಅಧ್ಯಾಯಗಳುಒಂದೇ ಶ್ಲೋಕದಲ್ಲಿ,ಕಲಿಯುಗದಲ್ಲಿ ಬಹಳ ಕ್ಷಿಪ್ರವಾಗಿ ಭಗವಾನ್ನಾಮ ಹಾಗೂ ಅವನ ಮಹಿಮೆ ಸ್ಮರಣೆಮಾಡುವುದ್ದನ್ನುತೋರಿಸಿಕೊಟ್ಟಿದ್ದಾರೆ.
ಶ್ರೀರಾಘವೇಂದ್ರಸ್ತೋತ್ರದ ೯ನೇ ಶ್ಲೋಕ ಹಿಂದಿನ ಪದ್ಯದಲ್ಲಿ ಶ್ರೀರಾಯರ ಅಭಿಷೇಕ ಜಲ ಎಷ್ಟು ಪವಿತ್ರವಾದದ್ದು ಎಂದು ವಿವರಿಸಿದ್ದಾರೆ ಅಪ್ಪಣ್ಣಾ ಚಾರ್ಯರು.ಪ್ರಸ್ತುತ ೯ನೇ ಶ್ಲೋಕದಲ್ಲಿ ಶ್ರೀಗುರುರಾಯರ ಪಾದದೂಳಿ ಧರಿಸದಿರುವವನಿಗೆ ಬ್ರಹ್ಮಜ್ಞಾನ ಸಿದ್ದಿಸುವುದಿಲ್ಲ ಎನ್ನುವ ಅಭಿಪ್ರಾಯ ಅವರದು. ಭಗವಂತನ ಪ್ರಸಾದ ಎಂದಿಗೂ ದೊರೆಯುವುದಿಲ್ಲ
ಶ್ಲೋಕ :- ಯತ್ಪಾದ ಕಂಜ ರಜಸಾ ಪರಿಭೂ ಷಿತಾಂ ಗಾ
ಯಾತ್ಪಾದಪದ್ಮ ಮಧುಪಾಯಿತ ಮಾನಸಾ ಯೇ
ಯತ್ ಪಾದ ಪದ್ಮ ಪರಿಕೀರ
ಶ್ರೀ ರಾಯರ ಪೂರ್ಣ ಪಾಂಡಿತ್ಯ ದಿಂದ ಪ್ರತಿವಾದಿಗಳ ಮುಖದ ಚಿಹ್ನೆ ಹೇಗೆ ಬದಲಾಗುತ್ತಿತ್ತು. ತಮ್ಮ ದಿಗ್ವಿಜಯವನ್ನು ಹರಿವಾಯುಗಳಿಗೆ ಅರ್ಪಿಸುತ್ತಿದ್ದ ಪರಿ . ವರ್ಣಿಸಿದ್ದಾರೆ.
ಶ್ರೀರಾಘವೇಂದ್ರ ಸ್ತೋತ್ರದ ಮುಂದಿನಭಾಗ ೧೦ ಮತ್ತು ೧೧ ನೇಶ್ಲೋಕದ ಆಂತರ್ಯ.
ಸಾಮಾನ್ಯವಾಗಿ ಯಾರಾದರೂ ಕೀರ್ತಿ ಯಶಸ್ಸು ಗಳಿಸಿ ಗಣ್ಯ ವ್ಯಕ್ತಿಯಾಗಿದ್ದರೆ ಇವರು ಯಾವ ವಂಶದವರು ಯಾರ ಪುತ್ರಇವರ ಗುರುಗಳು ಯಾರು ಎಂದೆಲ್ಲಾ ಪ್ರಶ್ನಿಸುತ್ತಾರೆ
ಅದಕ್ಕೆಉತ್ತರವಾಗಿ ಅಪ್ಪಣ್ಣಾ ಚಾರ್ಯರು ಪ್ರಸ್ತುತ ಶ್ಲೋಕದಲ್ಲಿ ಶ್ರೀರಾಯರ ಗುರುಗಳು, ಪರಮಗುರುಗಳನ್ನು ಸ್ಮರಣೆ ಮಾಡಿ ಮೂಲಗುರುಗಳ ಸಿದ್ಧಾಂತವನ್ನು ಎತ್ತಿ ಹಿಡಿಯುತ್ತಾರೆ.
ಸರ್ವ ಸ್ವತಂತ್ರೋsಸೌ ಶ್ರೀ ಮಧ್ವಮತ ವರ್ಧನಃ
ವಿಜಯೀಂದ್ರ ಕರಾಬ್ಜೋತ್ಥ ಸುಧೀಂದ್ರ ವರ ಪುತ್ರಕ :
ಶ್ರೀ ರಾಘವೇಂದ್ರೋಗುರುರಾಡ್ ಗುರುರ್ಮೇ ಸ್ಯಾದ್ಭಯಾಪಹಃ ಜ್ಞಾನ ಭಕ್ತಿ ಸುಪುತ್ರ ಯುಯೆ ರ್ಶ: ಶ್ರೀ ಪುಣ್ಯವರ್ದನ:
ಶ್ರೀಅಪ್ಪಣಾಚಾರ್ಯರು , ಅನ್ಯಾಪೇಕ್ಷೆಇಲ್ಲದ ಸ್ವತಂತ್ರ ಸಿದ್ದಾಂತ ವಾದ ಮದ್ವ ಮತವನ್ನು ಹೋಗಳುತ್ತಾ ಇಂತಾಮತವನ್ನು ಅಭಿವೃದ್ಧಿ ಪಡಿಸಿದವರು ಶ್ರೀ ರಾಯರು ಎನ್ನುವ ಅಭಿಪ್ರಾಯದೊಡನೆ ಇವರು ಶ್ರೀ ವಿಜಯೀಂದ್ರ ಕರಾಕಮಲ ಸಂಜಾತರಾದ ಶ್ರೀ ಸುಧೀಂದ್ರ ತೀರ್ಥರ ವರ ಕುಮಾರರು. ಶ್ರೀ ಹರಿಗುರುಗಳಲ್ಲಿ ಅಂತ :ಕರಣ ಪ್ರೇಮ ಸುಪುತ್ರಧೀರ್ಘಯುಸ್ಸು,ಕೀರ್ತಿ ಸಂಪತ್ತು ಸುಕೃತ ಅಭಿವೃದ್ಧಿ ಪಡಿಸುವವರು ಯತಿಗಳಲ್ಲಿ ಅತ್ಯಂತ ಶ್ರೇಷ್ಠರು ಆದ ಶ್ರೀ ರಾಘವೇಂದ್ರ ಗುರುಗಳು ನನ್ನ ಭಯವನ್ನು ಪರಿಹಾರ ಮಾಡಲಿ ಎನ್ನುತ್ತಾರೆ ಅಪ್ಪಣ್ಣಚಾರ್ಯರು. ಇಲ್ಲಿ ಭಯವೆಂದರೆ ಅಜ್ಞಾನದ ಭಯ ಎಂದು ಅಭಿಪ್ರಾಯ
ಮುಂದಿನ 14ನೇ ಶ್ಲೋಕದಲ್ಲಿ ಅವರ ಕರುಣೆ ಮುಂದುವರೆಸುತ್ತಾರೆ.
ಶ್ರೀರಾಯರು ಮೂರೂ ಅವತಾರದಲ್ಲಿ ಭಗವಂತನ ಕರುಣೆಗೆ ಪಾತ್ರರಾಗಿದ್ದರು. ಶ್ರೀ ರಾಘವೇಂದ್ರ ಸ್ವಾಮಿಗಳ ವೈರಾಗ್ಯ ಬಹಳ ಉನ್ನತವಾದದ್ದು. ಲೌಕಿಕ ವಿಷಯಗಳು ಅವರಿಗೆ ತೃಣಸಮಾನ.ಇಂದ್ರೀಯಗಳನ್ನುದಾಸರಾಗಿ ಮಾಡಿಕೊಂಡಿದ್ದವರು,ಆದ್ದರಿಂದ ಇಂತಹ ಮಹಿಮರನ್ನು ಆಶ್ರಯಿಸಿದರೆ ಭಗವಂತ ಶೀಘ್ರ ಓಗೊಟ್ಟು ಅವರಮೂಲಕ ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎನ್ನುವ ಶ್ರೀ ಅಪ್ಪಣ್ಣಚಾರ್ಯರ ನಿಲುವು . 14 ನೇ ಶ್ಲೋಕ ದಲ್ಲಿ
ಶ್ಲೋಕ 14 :- ಅಪರೊಕ್ಷೀತ ಶ್ರೀಶ : ಸಮುಪೇಕ್ಷಿತ ಭಾವಜ :
ಅಪೇಕ್ಷಿತ ಪ್ರದಾ ತಾನ್ಯೋ ರಾಘವೇಂದ್ರನ್ನ ವಿಧ್ಯತೆ
ಅರ್ಥ : ತಮ್ಮ ಜ್ಞಾನ ಭಕ್ತಿ ವೈರಾಗ್ಯ ದಿಂದ ಲಕ್ಷ್ಮೀ ಪತಿಯನ್ನು ಒಲಿಸಿಕೊಂಡವರು, (ಅಪರೋಕ್ಷಿಸಿಕೊಂಡವರು ) ಭಗವಂತನಲ್ಲಿ ಆಸಕ್ತಿ, ಲೌಕಿಕ ವಿಷಯಗಳಿಗೆ ಕಾರಣನಾದ ಮನ್ಮಥನನ್ನು ದೂರವಿಟ್ಟಿರುವವರು. ಸಜ್ಜನರ ಅಪೇಕ್ಷೆಯನ್ನು ಮಾನ್ಯ ಮಾಡಿ ಆದರದಿಂದ ಕೊಡುವವರು ಶ್ರೀ ರಾಯರ ಹೊರತು ಮತ್ತೊಬ್ಬರಿಲ್ಲ ಎಂದು ಶ್ರೀ ಅಪ್ಪಣ್ಣಾ ಚಾರ್ಯರು ತುಂಬು ಭಕ್ತಿಯಿಂದ ಅವರ ಗುಣಗಳನ್ನು ಮೆಲಕು ಹಾಕಿಕೊಂಡು ಬೃಂದಾವನ ಸಮೀಪಕ್ಕೆ ಬರುತ್ತಿದ್ದಾರೆ..
ಶ್ರೀ ಅಪ್ಪಣ್ಣ ಚಾರ್ಯರು ಪ್ರಸ್ತುತ ಪದ್ಯದಲ್ಲಿ ಶ್ರೀರಾಯರ ಗುಣಗಳನ್ನು ಹೋಗಳುತ್ತಾರೆ.ಶ್ರೀ ರಾಯರು ಯಾವ ಪ್ರತಿಫಲ ಅಪೇಕ್ಷೆ ಇಲ್ಲದೆ ತಮ್ಮ ಭಕ್ತವೃಂದದ ಅಭೀಷ್ಟಗಳನ್ನು ಈಡೇರಿಸಿ ದುಃಖಾದಿ ಕೋಟಲೇ ಗಳಿಂದ ಪಾರುಮಾಡುವ ಅವರು ದಯಾವಂತರು, ಸಕಲ ವಿಷಯದಲ್ಲೂ ಅವರು ಸರ್ವ ಶಕ್ತರು ಎಂದು ಕೊಂಡಾಡಿದ ಶ್ಲೋಕ ಇದು.
ಶ್ಲೋಕ :- ||ದಯಾ ದಾಕ್ಷಿಣ್ಯ ವೈರಾಗ್ಯ ವಾಕ್ಪಾಟುವ ಮುಖಾಂಕಿತಃ
ಶಾಪಾನುಗ್ರಹ ಶಕ್ತೋ ನ್ಯೋ ರಾಘವೇಂದ್ರ ನವಿದ್ಯತೆ.||
ಅರ್ಥ :- ದೀನ ದಲಿತರಲ್ಲಿ ದಯೆ, ನಡೆನುಡಿಗಳಲ್ಲಿ ಜನರಿಗೆ ಹಿತ ಉಂಟು ಮಾಡುವುದು, ಸಕಲ ಲೌಕಿಕ ವಿಷಯಗಳನ್ನು ತೊರೆದು ಭಗವಂತನಲ್ಲಿ ಮನಸ್ಸು ಕೇಂದ್ರೀಕರಿಸುವುದು, ಇವೇ ಮುಖ್ಯವಾದ ಸದ್ಗುಣಗಳಿಂದ, ಹಾಗೂ ದುಷ್ಟರಿಗೆ ಶಾಪ ಸಜ್ಜನರಿಗೆ ದಯೆ ತೋರಿಸುವಲ್ಲಿ ಸಮರ್ಥರಾದವರು ಶ್ರೀ ರಾಘವೇಂದ್ರ ಸ್ವಾಮಿಗಳ ಹೊರತು ಮತ್ತೊಬ್ಬರಿಲ್ಲ, ಇಲ್ಲವೇ ಇಲ್ಲ ಎಂದು ಅಪ್ಪಣ್ಣಚಾರ್ಯರು ಈ ಶ್ಲೋಕದಲ್ಲಿ ರಾಯರನ್ನು ಕೊಂಡಾಡಿದ್ದಾರೆ.
ಶ್ರೀ ರಾಘವೇಂದ್ರ ಸ್ತೋತ್ರದ 15 ಣೆ ಶ್ಲೋಕ.
ಶ್ರೀ ರಾಯರ ಕರುಣೆ ಹೇಗಿರುತ್ತದೆ ಎಂದರೇ
ದೇಹ ಹಾಗೂ ಮನಸ್ಸಿನ ಕಾಯಿಲೆಗಳನ್ನು ಕ್ಷಣಮಾತ್ರದಲ್ಲಿ ನಿರ್ಮೂಲನ ಮಾಡುವಂತವರು. ಅಂತಃಕರಣದಿಂದ ಭಜಿಸುವ ಭಕ್ತನನ್ನು ಉದ್ದಾರಮಾಡುವ ಗುರುಗಳು ಅವರು ಇಂತಾ ಗುರು ಸಾರ್ವಭೌಮರ ಕೃಪಾಕಟಾಕ್ಷಕ್ಕೆ ಒಳಗಾಗಿ ಎಂದು ಪ್ರಸ್ತುತ ಶ್ಲೋಕದಲ್ಲಿ ಅಪ್ಪಣ್ಣಚಾರ್ಯರು ಸ್ಪಷ್ಟಪಡಿಸುತ್ತಾರೆ.
ಶ್ಲೋಕ 15 :- ಅಜ್ಞಾನ ವಿಸ್ಮೃತಿ ಭ್ರಾಂತಿ ಸಂಶಯಾಪಸ್ಮೃತಿ, ಕ್ಷಯಾ:
ತಂದ್ರಕಂಪ ವಚ:ಕೌಂಟ್ಯ ಮುಖಾ ಯಃ ಚೇಂದ್ರಿಯೋದ್ಭವಾ:
ದೋಷಸ್ತೇ ನಾಶಮಾಯಾಂತಿ ರಾಘವೇಂದ್ರ ಪ್ರಸಾದತ:
ಅರ್ಥ : ತಿಳುವಿಕೆ ಇಲ್ಲದಿರುವುದು, ಮರೆಯುವಿಕೆ, ಅನ್ಯಥಾ ಜ್ಞಾನ ಅಥವ ವಿಪರೀತಜ್ಞಾನ, ಡೊಲಾಯಮಾನ ಮನಸು, (ಭಗವಂತನ ವಿಷಯದಲ್ಲಿ ) ಮೂರ್ಛೆ ರೋಗ
ಕ್ಷಯರೋಗ, ಕೈಕಾಲುಗಳ ಸ್ವಾದಿನತೆ ತಪ್ಪುವುದು, ದೇಹ ಕಂಪಿಸುವುದು, ಬಿಕ್ಕಳಿಕೆ ಮುಂತಾದ ಇಂದ್ರಿಯಗಳಿಂದ ಉಂಟಾದ
ಎಲ್ಲಾ ದೋಷಗಳು, ಶ್ರೀ ಗುರುರಾಘವೇಂದ್ರರ ಅನುಗ್ರಹದಿಂದ ನಾಶಹೊಂದುತ್ತದೆ. ಎಂದು ಶ್ರೀ ಅಪ್ಪಣ್ಣಚಾರ್ಯರು ಸ್ಪಷ್ಟವಾಗಿ ಪಡಿಸುತ್ತಾರೆ.
ಇಂದಿಗೂ ಈ ಪವಾಡಗಳು ಅಪ್ಪಣ್ಣಚಾರ್ಯರ ಸ್ತೋತ್ರವನ್ನು ದೃಡೀಕರಿಸುತ್ತಿದೆ.
ಶ್ರೀ ರಾಘವೇಂದ್ರ ಸ್ತೋತ್ರದ 16 ನೇ ಶ್ಲೋಕ
ಶ್ರೀ ರಾಘವೇಂದ್ರ ಸ್ತೋತ್ರದ 16 ನೇ ಶ್ಲೋಕ ಬೀಜಮಂತ್ರದಿಂದ ಕೂಡಿದೆ. ಹೆಣ್ಣು ಮಕ್ಕಳಿಗೆ ಇದರ ಉಚ್ಚಾರಣೇ ಸಮಂಜಸ ಅಲ್ಲ, ಅಧಿಕಾರಿಗಳು ಪ್ರಣವ ಪೂರ್ವಕವಾಗಿ ಉಚ್ಚರಿಸಬೇಕು ಎಂದು ಹಿರಿಯರ ಅಭೀಪ್ರಾಯ. ಆದ್ದರಿಂದ" ಶ್ರೀ " ಕಾರ ಹಾಕಿ ಗುರುಗಳ ಕಾರುಣ್ಯಕ್ಕೆ ಭಾಜಕವಾಗುವ ಆಸೆ. ಅದಲ್ಲದೆ ಈ ಸ್ತೋತ್ರದ ಅರ್ಥಗಳನ್ನು ಬರೆಯುವುದಕ್ಕೆ ಒಂದು ಪ್ರೇರಕ ಶಕ್ತಿಯ ಬಲವಾದ ಕಾರಣ ಇದೆ. ಅದನ್ನು ಸ್ತೋತ್ರದ ಕೊನೆಯ ಘಟ್ಟದಲ್ಲಿ ತಿಳಿಸಲು ಪ್ರಯತ್ನಿಸುತ್ತೇನೆ. ಪ್ರಣವ ಮಂತ್ರಗಳು ಮೊದಲಿಗೆ ಪರಮಾತ್ಮ ವಾಚಕವಾದದ್ದು, ಆದ್ದರಿಂದ ಶ್ರೀ ರಾಯರ ಅಂತರ್ಗತ ಶ್ರೀಹರಿಯು ರಾಯರಲ್ಲಿ ನಿಂತು ತದ್ವಾಚ್ಯನಾಗಿ ತದಾಶ್ರಯನಾಗಿ, ತತ್ಪ್ರೇರಕನಾಗಿ, ತದಂತರ್ಗತನಾಗಿ, ತದ್ಭಿನ್ನನಾಗಿ, ಸಕಲ ವ್ಯಾಪಾರವನ್ನೂ ಪ್ರೇರಿಸುತ್ತಾನೆ ಎಂಬ ಅಭಿಪ್ರಾಯ ಈ 16 ನೇ ಶ್ಲೋಕ ಒಳಗೊಂಡಿದೆ.
ಹಾಗೆ ಜ್ಞಾನಿಗಳ ಅಭಿಪ್ರಾಯದಲ್ಲಿ ಸ್ತೋತ್ರ ಕರ್ತೃವಾದ ಶ್ರೀ ಅಪ್ಪಣ್ಣಚಾರ್ಯರನ್ನು ಈ ಪ್ರಣವ ಮಂತ್ರಕ್ಕೆ ಋಷಿಗಳೆಂದು ಭಾವಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.
ಹಾಗೆಯೇ ಅಧಿಕಾರಿಗಳು ರಾಯರ ಅಷ್ಟಾಕ್ಷರ ಪ್ರಣವ ಪೂರ್ವಕ ಮಂತ್ರವನ್ನು ಜಪಮಾಡಿ, ಸ್ತ್ರೀಯರು ಶ್ರೀ ಕಾರವನ್ನು ಹಾಕಿ ಜಪಿಸಿದಾಗ ಸಮಸ್ತ ಇಷ್ಟಾರ್ಥಗಳೂ ಕರಗತವಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುವ ಸ್ತೋತ್ರ. *16 ನೇ ಸ್ತೋತ್ರ
(ಶ್ರೀ ) ರಾಘವೇಂದ್ರಾಯ ನಮ :
ಇತ್ಯಷ್ಟಾಕ್ಷರ ಮಂತ್ರತಃ
ಜಪಿತಾದ್ಭಾವ ವಿತಾನ್ನಿತ್ಯ ಮಿಷ್ಟಾರ್ಥ
ಸ್ಯುರ್ನ ಸಂಶಯಃ
ಇದರಭಾವಹೀಗಿದೆ ಶ್ರೀ ರಾಘವೇಂದ್ರ ಗುರುಗಳಿಗೆ ನಮಸ್ಕಾರ ಎಂಬ ಎಂಟು
ಅಕ್ಷರಗಳುಳ್ಳ ಮಂತ್ರದಿಂದ ಪ್ರತಿನಿತ್ಯ ಜಪಿಸುವುದರಿಂದ, ಮನಃ ಪೂರ್ವಕವಾಗಿ ಧ್ಯಾನ ಮಾಡುವುದರಿಂದ, ಸಕಲ ಮನೋಬಿಷ್ಟಗಳು ಪೂರೈಸುತ್ತದೆ.
ಇದರಲ್ಲಿ ಸ್ವಲ್ಪಕೂಡ ಸಂಶಯವಿಲ್ಲ ಎನ್ನುವ ಅಭಿಪ್ರಾಯ ಶ್ರೀ ಅಪ್ಪಣ್ಣಚಾರ್ಯರದು.
ಶ್ರೀ ರಾಘವೇಂದ್ರ ಸ್ತೋತ್ರದ 19ನೇಶ್ಲೋಕ
ಇಂದು ಪರಮ ಪವಿತ್ರವಾದ " ರಥಸಪ್ತಮಿ ಶ್ರೀರಾಯರ ಸನ್ನಿದಿಯಲ್ಲಿ ಈ ಶ್ಲೋಕವನ್ನು ಬರಿಯಲು ತುಂಬಾ ಹರ್ಷವಾಗುತ್ತದೆ.
ಪ್ರಸ್ತುತ ಶ್ಲೋಕದಲ್ಲಿ ಶ್ರೀ ಅಪ್ಪಣ್ಣಚಾರ್ಯರು ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಮದ್ವಮತದ ಚಂದ್ರ ಎಂದು ಕೊಂಡಾಡಿದ್ದಾರೆ.
19 ನೇ shloka
*ಆಗಮ್ಯಮಹಿಮಾ ಲೋಕೇ *ರಾಘವೇಂದ್ರ ಮಹಾ ಯಶಃ
ಶ್ರೀ ಮದ್ವಮತದುಗ್ದಾಬ್ದಿ ಚಂದ್ರೋsವತು ಸದಾsನಘ:
ಶ್ಲೋಕದ ಭಾವ
ಲೋಕದಲ್ಲಿ ಅಸಮಾನ ಕೀರ್ತಿಶಾಲಿಗಳಾದ ಅತ್ಯಂತ ಸಮೃದ್ಧಿಯಾದ ಶ್ರೀ ಮದ್ವಾಚಾರ್ಯರ ಮತವೆಂಬ ಕ್ಷೀರ ಸಮುದ್ರಕ್ಕೆ ಚಂದ್ರನಂತಿರುವ, ಪಾಪಗಳಿಂದ ದೂರರಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರು ಎಲ್ಲಾ ಕಾಲದಲ್ಲೂ ನಮ್ಮನ್ನು ಕಾಪಾಡಲಿ ಎನ್ನುತ್ತಾರೆ ಅಪ್ಪಣಾಚಾರ್ಯರು.
ಎಷ್ಟು ಚಮತ್ಕಾರವಾಗಿ ಬಹಳ ಕಡಿಮೆ ಪದಗಳಲ್ಲಿ ಶ್ರೀ ರಾಯರನ್ನು, ಚಂದ್ರೋದಯದಲ್ಲಿ ಸಮುದ್ರ ಉಕ್ಕೇರುವಂತೆ ಮದ್ವಮತವನ್ನು ತಮ್ಮ ಅಪ್ರತಿಮ ಜ್ಞಾನದಿಂದ ಸಮೃದ್ಧಿಗೊಳಿಸಿದವ ರು ಅದೂ ಪಾಪರಹಿತರಾದವರು. ಮದ್ವ ಮತವೇ ಒಂದು ಕ್ಷೀರ ಸಮುದ್ರ, ಅತ್ಯಂತ ಮನೋಹರ ನಾದ ಪಾಪಲೇಶವಿಲ್ಲದ ಚಂದ್ರನಂತೆ ಇರುವ ರಾಯರು, ಸರ್ವಕಾಲದಲ್ಲೂ ನಮ್ಮನ್ನು ಕಾಪಾಡಲಿ ಎಂದು ಶ್ರೀರಾಯರನ್ನು ಅಪ್ಪಣ್ಣಚಾರ್ಯರು ಪ್ರಾರ್ಥಿಸುತ್ತಾರೆ
ಶ್ರೀ ರಾಘವೇಂದ್ರ ಸ್ತೋತ್ರದ 20 ನೇ ಶ್ಲೋಕ.
ಗುರು ರಾಜರು ಬೃಂದಾವನ ಪ್ರವೇಶ ಮಾಡಿದರು ಎಂದು ತಿಳಿದು ಅಪ್ಪಣ್ಣಚಾರ್ಯರು ಮಾಂತ್ರಾಲಯಕ್ಕೆ ಪ್ರಾಣದ ಹಂಗು ತೊರೆದು ಓಡಿಬಂದರು. ಅವರ ಗುಣಗಳನ್ನು ನೆನೆಸುತ್ತಾ ಬಂದರು.
ಮುಂದೆ ತಮಗೆ ಗುರುಗಳಲ್ಲಿರುವ, ಅವರ ಬೃಂದಾವನ ದರ್ಶನದಿಂದ ಬರುವ ಪುಣ್ಯಗಳ ಪಟ್ಟಿಯನ್ನು ಕೊಡುತ್ತಾರೆ ಶ್ರೀ ಅಪ್ಪಣ್ಣಚಾರ್ಯರು ಪ್ರಸ್ತುತ ಶ್ಲೋಕದಲ್ಲಿ.
20 ನೇ ಶ್ಲೋಕ
ಸರ್ವಯಾತ್ರಾಫಲಾವಾಪ್ತೈ , ಯಥಾಶಕ್ತಿಪ್ರದಕ್ಷಿಣಂ
ಕರೋಮಿ ತವ ಸಿದ್ಧಸ್ಯ ವೃಂದಾವನಗತಂ ಜಲಂ
ಶಿರಸಾ ಧಾರಾಯಾಮ್ಯದ್ಯ ಸರ್ವತೀರ್ಥಫಲಾಪ್ತಯೇ
ಶ್ಲೋಕದ ಭಾವ :- ಸಕಲ ಪುಣ್ಯ ಕ್ಷೇತ್ರಗಳ ಯಾತ್ರೆಯ ಪುಣ್ಯ ಫಲಕ್ಕಾಗಿ ತಪಸಿದ್ದಿಯನ್ನು ಪಡೆದಿರುವ ನಿಮ್ಮ ಬೃಂದಾವನ ಪ್ರದಕ್ಷಿಣೆಯನ್ನು ಈಗ ನನ್ನ ಯೋಗ್ಯತೆಗೆ ತಕ್ಕಂತೆ ಮಾಡುತ್ತೇನೆ. ಸಕಲ ಪುಣ್ಯನದಿಗಳ ಸ್ನಾನದ ಫಲವನ್ನು ಪಡೆಯುವುದಕ್ಕೆ ಬೃಂದಾವನಕ್ಕೆ ಅಭಿಷೇಕವಾದ ಜಲವನ್ನು ಶಿರಸ್ಸಿನ ಮೇಲೆ ಧರಿಸುತ್ತೇನೆ, ಎನ್ನುತ್ತಾರೆ ಅಪ್ಪಣಾಚಾರ್ಯರು. ಬೃಂದಾವನ ದರ್ಶನದಿಂದ ಹರಿವಾಯುಗಳ ಸಹಿತವಾಗಿ ಭಕ್ತ ಜನಕ್ಕೆ ರಾಯರ ಅನುಗ್ರಹ ದೊರೆಯುವುದು ಎಂಬ ಸಂದೇಶ, ಸರ್ವಯಾತ್ರಫಲ ಎನ್ನುವಲ್ಲಿ ವೃಂದಾವನ ದರ್ಶನ, ಪ್ರದಕ್ಷಿಣ,ಅಭಿಷೇಕ ಜಲವನ್ನು ಪ್ರೊಕ್ಷಿಸುವುದರಿಂದ ಸರ್ವತೀರ್ಥ ಸ್ನಾನದ ಫಲ ದೊರೆಯುವುದೆಂದು ಹೇಳುತ್ತಾ ಅಪ್ಪಣ್ಣಚಾರ್ಯರು ತುಂಬು ಭಕ್ತಿಯಿಂದ ರಾಯರಿಗೆ ತಲೆ ಬಾಗುತ್ತಾರೆ
ಶ್ರೀ ರಾಘವೇಂದ್ರ ಸ್ತೋತ್ರದ 21ನೇ ಶ್ಲೋಕ .
ಈ ಶ್ಲೋಕದಲ್ಲಿ ಅಪ್ಪಣ್ಣಚಾರ್ಯರು , ಭಕ್ತಿಯಿಂದ ಶ್ರೀ ರಾಯರಿಗೆ ಮಾಡುವ ಒಂದೇ ಒಂದು ನಮಸ್ಕಾರದಿಂದ ಶ್ರೀ ಹರಿ ಪ್ರಸಾದ,ಶ್ರೀ ವಾಯುದೇವರ ಅನುಗ್ರಹ ತಂದುಕೊಡುತ್ತಾರೆ ಎನ್ನುವ ಅಭಿಪ್ರಾಯವನ್ನು ಈ ಶ್ಲೋಕದ ಮೂಲಕ ಹೇಳಿದ್ದಾರೆ. ಶ್ರೀ ರಾಯರನ್ನು ಕುರಿತು ಮಾಡಿದ ಸಂಕೀರ್ತನೆ ಸಕಲ ಆಗಮಗಳ ಜ್ಞಾನಸಿದ್ದಿಯಾಗುತ್ತದೆಂದು ಅವರ ಅಭಿಪ್ರಾಯ. ಶ್ಲೋಕ 21
ಸರ್ವಭಿಷ್ಟಾರ್ಥಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಂ|ತವಸಂಕೀರ್ತನಂ ವೇದಶಾಸ್ತ್ರರ್ಥ ಜ್ಞಾನಸಿದ್ದಯೇ |
ಶ್ಲೋಕದಭಾವ
ಸರ್ವ ಅಭೀಷ್ಟಗಳನ್ನು ದೊರೆಕಿಸಿಕೊಳ್ಳುವುದಕ್ಕಾಗಿ ಅಂದರೆ,(ಜ್ಞಾನ ಭಕ್ತಿ ವೈರಾಗ್ಯ ಒಳಗೊಂಡಂತೆ ) ಸಕಲ ಇಷ್ಟಾರ್ಥಗಳನ್ನು ಸಿದ್ದಿಸುವ ಸಲುವಾಗಿ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತೇನೆ, ಭಕ್ತಿಯಿಂದ ಕೂಡಿ ತಮ್ಮನ್ನು ಕುರಿತು ಸಂಕೀರ್ತನೆಯಲ್ಲಿ ತೊಡಗುವುದು
ವೇದಾದಿ ಸಚ್ಶಾಸ್ತ್ರ ಜ್ಞಾನ ಸಿದ್ದಿಗಾಗಿ
ಎನ್ನುತ್ತಾರೆ,ಅಪ್ಪಣ್ಣಚಾರ್ಯರು.
ವಿಧವಿಧವಾದ ಜನರು ಬೇರೆಬೇರೆ ಬೇಡಿಕೆಗಳನ್ನು ರಾಯರ ಮುಂದೆ ಇಡುತ್ತಾರೆ. ಅವರವರ ಅಭೀಷ್ಟಗಳನ್ನು ಪೂರೈಸುತ್ತಾರೆ ಗುರುಗಳು, ಆದರೆ ನಿರಂತರ ಗುರುಗಳ ಸಂಕೀರ್ತನೆಯಿಂದ ಯೋಗ್ಯರಿಗೆ,ಅರ್ಹರಿಗೆ ವೇದ ಶಾಸ್ತ್ರಗಳ ಸಿದ್ದಿಯನ್ನು ದಯಪಾಲಿಸುತ್ತಾರೆ ಎಂದು ಈ ಶ್ಲೋಕದ ಅಭಿಪ್ರಾಯವು
ಶ್ರೀಮದಾಚಾರ್ಯರ ಬದರಿ ಪಯಣದ ದಿನ ನಿನ್ನೆ. ಅವರ ಕುರಿತು ಅಕ್ಷರ ನಮನ ಆಯಿತು.
ಶ್ರೀರಾಯರನ್ನು ಉದ್ದ ಅಗಲ ಆಳ ಅರಿಯದ,ಭಯಂಕರ ವಿಷ ಜಂತುಗಳು ತುಂಬಿರುವ ಅಪಾಯಕಾರಿ ಸಮುದ್ರದಂತಿರುವ ಸಂಸಾರವೆಂಬ ಸಾಗರವನ್ನು ಸುರಕ್ಷಿತವಾಗಿ ದಾಟಿಸಿ ಎಂದು ಅಪ್ಪಣ್ಣಚಾರ್ಯರು ಬೇಡಿದಭಾಗ ನಿನ್ನೆಯ ಶ್ಲೋಕದ ಭಾವ. ಅಂತಹ ಸಂಸಾರ ಸಾಗರವನ್ನು ದಾಟುವ ಸಲಕರಣೆ, ನಾವೆ ಮದ್ವಮತದ ಸಿದ್ದಾಂತ. ಮದ್ವ ನವಮಿಗೂ, ಈ ಶ್ಲೋಕಕ್ಕೂ ಅವಿನಾಭಾವ ಸಂಬಂಧ ಇದೆ. ಇದು ಗುರುದ್ವಯರ ಕರುಣೆ.
ಮುಂದಿನ ಶ್ಲೋಕದಲ್ಲಿ ಅಪ್ಪಣ್ಣಚಾರ್ಯರು , ಶಾರಿರಕ ಮಾನಸಿಕ ರೋಗಗಳು ಶ್ರೀರಾಯರ ಅನುಗ್ರಹದಿಂದ ನಾಶವಾಗುತ್ತದೆ. ಎಂದು ಶ್ರೀರಾಘವೇಂದ್ರಸ್ತೋತ್ರದ ಫಲಸ್ತುತಿಯನ್ನು ಪ್ರಾರಂಭಿಸುತ್ತಾರೆ.
ಶ್ಲೋಕ23
ರಾಘವೇಂದ್ರಗುರುಸ್ತೋತ್ರಂ ಯಃ
ಪಠದ್ಭಕ್ತಿಪೂರ್ವಕಮ್
ತಸ್ಯ ಕುಷ್ಟಾದಿರೋಗಾಣಾಂ ನಿವೃತ್ತಿ
ಸ್ತ್ವ ರಾಯಾ ಭವೇತ್
ಶ್ಲೋಕದ ಭಾವ
ಯಾರು ಭಕ್ತಿಯಿಂದ ಗುರುರಾಜರ ಸ್ತೋತ್ರ ಪಾರಾಯಣ ಮಾಡುವನೋ, ಅಂತಹ ಭಕ್ತ ತೊನ್ನು ಮೊದಲಾದ ರೋಗಗಳಿಂದ ಆತಿ ಶೀಘ್ರದಲ್ಲಿ ಮುಕ್ತನಾಗುವನು, ಎನ್ನುತ್ತಾರೆ ಅಪ್ಪಣ್ಣಾ ಚಾರ್ಯರು.
ಅಂದು ಹೇಳಿದ ಮಾತುಗಳು ಮೂರು ಶತಮಾನಗಳು ಕಳೆದರು ಇಂದಿಗೂ ಸಹಸ್ರಾರು ಜನರ ಅನುಭವಕ್ಕೆ ಬಂದಿದೆ, ಎಂದರೆ ಹರಿವಾಯುಗಳಿಂದ ಪಡೆದ ಅನುಗ್ರಹವನ್ನು ಭಕ್ತ ಜನರಿಗೆ ಹಂಚುತ್ತಿರುವ ಅವರ ಔದಾರ್ಯಕ್ಕೆ ಶರಣು ಶರಣು.
ಎಲ್ಲಾ ಹರಿದಾಸರು ಈ ವೈದ್ಯರನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.
ಗುರು ಸ್ತೋತ್ರದ ಪ್ರಭಾವವನ್ನು ಮತ್ತಷ್ಟು ಹೇಳಿದ್ದಾರೆ ಮುಂದಿನ ಶ್ಲೋಕಗಳಲ್ಲಿ ಅಪ್ಪಣ್ಣಚಾರ್ಯರು .
ಶ್ರೀ ಜಗನ್ನಾಥ ದಾಸರು "ರೋಗಹರನೆ ಕೃಪಾ ಸಾಗರ ಶ್ರೀ ಗುರು ರಾಘವೇಂದ್ರ ಪರಿಪಾಲಿಸೋ" ಎಂದು ಭಕ್ತಿಯಿಂದ ಗುರುಗಳ ಕಾರುಣ್ಯ ಸ್ಮರಣೆ ಮಾಡಿದ್ದಾರೆ.
ಶ್ರೀ ಅಪ್ಪಣ್ಣಚಾರ್ಯರು ರಾಯರ ಭೌತಿಕದೇಹ ಮರೆಯದರೂ ಅವರ ಮಹಿಮೆಯನ್ನು ಕೊಂಡಾಡುತ್ತಿದ್ದಾರೆ
ಅವರ ಮಹಿಮೆಯಿಂದ ತುಂಬಿದ ಈ ಸ್ತೋತ್ರ ಪಠಣ,,ಯಾರು ಯಾರಿಗೆಲ್ಲಾ ಕಷ್ಟಗಳನ್ನು ಪರಿಹಾರಮಾಡಿ ಅವರನ್ನು ಉದ್ದಾರ ಮಾಡುತ್ತಾರೆ ಎಂದು ಅಪ್ಪಣ್ಣಾ ಚಾರ್ಯರು ನಿರೂಪಿಸುತ್ತಾ ಪ್ರಸ್ತುತ ಶ್ಲೋಕದಲ್ಲಿ
ಸಾಧನೆಗೆ ಆತಿ ಮುಖ್ಯವಾದ ಅಂಗ ಕುಂಟನಿಗೆ ಕಾಲಿನ ಶಕ್ತಿ ನೀಡಬಲ್ಲುದು ಅವರ ಸ್ತೋತ್ರದಿಂದ
ಎಂದು ಶ್ಲೋಕರೂಪವಾಗಿ ಹೇಳುತ್ತಾರೆ.
ಶ್ಲೋಕ 26
ಯದ್ಬೃಂದಾವನಮಾಸಾಧ್ಯ ಪಂಗು :ಖಂಜೋsಪಿ ವಾ ಜನಃ
ಸ್ತೋತ್ರೇಣಾನೇನ ಯಃ ಕುರ್ಯಾತ್
ಪ್ರದಕ್ಷಿಣ ನಮಸ್ಕೃತಿ
ಸ ಜಂಘಾಲೋ ಭವೇದೇವ ಗುರುರಾಜಾ ಪ್ರಸಾದತಃ
ಶ್ಲೋಕದ ಭಾವ
ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಬೃಂದಾವನಕ್ಕೆ ಕಾಲಿಲ್ಲದ, ಕಾಲಿದ್ದೂ ನಡೆಯಲು ಶಕ್ತಿ ಇಲ್ಲದವ, ಮೊಣಕಾಲಿನ ದೌರ್ಬಲ್ಯ ವಿರುವವನು ಈ ಸ್ತೋತ್ರದಿಂದ ಪ್ರದಕ್ಷಿಣೆ ನಮಸ್ಕಾರ ಮಾಡಿದರೆ ಅಂತಹವರು ಶ್ರೀ ಗುರುರಾಜರ ಪ್ರಸಾದದಿಂದ ಆತಿ ವೇಗವಾಗಿ ನಡೆಯುವಂತ ಶಕ್ತಿ ಉಳ್ಳವನು ಆಗುತ್ತಾನೆ. ಎಂದು ಅಪ್ಪಣ್ಣಾಚಾರ್ಯರು ತುಂಬು ಭಕ್ತಿಯಿಂದ ಆಶ್ವಾಸನೆ ಕೊಡುತ್ತಾರೆ
ಶ್ರೀ ಅಪ್ಪಣ್ಣ ಚಾರ್ಯರು, ತಾವು ಮಾಡುತ್ತಿರುವ ಗುರು ಸ್ತೋತ್ರದ ಮಹಿಮೆಯನ್ನು ಮುಂದುವರೆಸುತ್ತಾರೆ. ಅವರು ಮನುಜರ ಕಾಲಿಕ ಕರ್ಮಗಳು ಅಂದರೆ ನಿತ್ಯ ಕರ್ಮಗಳು ಹಾಗು ಪರ್ವಕಾಲದಲ್ಲಿ ಆಚರಿಸುವ ವಿಧಿಪೂರ್ವಕ ಕರ್ಮಗಳನ್ನು ಹೆಸರಿಸಿ ಇಂತಹ ಸಮಯದಲ್ಲಿ ಶ್ರೀ ಗುರು ಸ್ತೋತ್ರ ಪಠಿಸಿದರೆ ಅವನಿಗೆ ಯಾವ ಪೀಡೆಯೂ ಬರುವುದಿಲ್ಲ ಎನ್ನುತ್ತಾರೆ ಪ್ರಸ್ತುತ ಶ್ಲೋಕದಲ್ಲಿ
ಶ್ಲೋಕ 27
ಸೋಮ ಸೂರ್ಯೋಪರಾಗೇ ಚ ಪುಷ್ಯಾರ್ಕಾದಿಸಮಾಗಮೆ
ಯೋ ನುತ್ತಮಮ್ಇದಂ ಸ್ತೋತ್ರಮಷ್ಟೊತ್ತರ ಶತಂ ಜಪೇತ್
ಭೂತಪ್ರೇತ ಪಿಶಾಚಾದಿ ಪೀಡ ತಸ್ಯ ನ ಜಾಯತೆ |
ಶ್ಲೋಕದ ಭಾವ
ಚಂದ್ರ ಮತ್ತು ಸೂರ್ಯರ ಗ್ರಹಣಕಾಲದಲ್ಲಿ, ಪುಷ್ಯಾ ನಕ್ಷತ್ರ ಮತ್ತು ರವಿವಾರದಲ್ಲಿ, ನಕ್ಷತ್ರ ವ್ಯತಿಪಾತದಲ್ಲಿ, ವೈದ್ರುತಿ, ಪೂರ್ಣಿಮಾ ಅಮಾವಾಸ್ಯೆ ಮೊದಲಾದ ಪರ್ವಕಾಲದಲ್ಲಿ, ಯಾವ ಭಕ್ತನು ಶ್ರೀ ಗುರುರಾಜರ ಸ್ತೋತ್ರವನ್ನು ಭಕ್ತಿಯಿಂದ 108 ಸಲ ಜಪಮಾಡುತ್ತಾನೋ, ಅಂತಹ ವ್ಯಕ್ತಿಗೆ ಭೂತ ಪ್ರೇತ ಪಿಶಾಚಿಗಳ ಭಾದೆಯು ಎಂದೆಂದಿಗೂ ಉಂಟಾಗುವುದಿಲ್ಲ , ಎಂದು ಆಶ್ವಾಸನೆ ಕೊಡುತ್ತಾರೆ ಅಪ್ಪಣ್ಣಾಚಾರ್ಯರು.
ನಿತ್ಯ ಈ ಜೀವನ ಸಮರದಲ್ಲಿ ಶ್ರೀ ರಾಯರ ಅನುಗ್ರಹ "ಮರಳುಗಾಡಿನ ತಂಪುಜಲದಂತೆ".
ಪ್ರಸ್ತುತ ಶ್ಲೋಕದಲ್ಲಿ ಶ್ರೀ ಅಪ್ಪಣ್ಣಚಾರ್ಯರು ಬಹು ಗೂಢವಾದ ಅರ್ಥಗಳನ್ನು ತುಂಬಿ ಇಟ್ಟಿದ್ದಾರೆ. ಎಲ್ಲಾ ಗುರುರಾಜರ ಭಕ್ತರು ಕೇಳಿಕೊಳ್ಳುವ ವರ.
ಈ ಶ್ಲೋಕದಲ್ಲಿ ಗುರುರಾಜರ ಸೇವೆ ಮಾಡಿದವರಿಗೆ ಸತ್ಪುತ್ರರು ಜನಿಸುವರು ಎಂದಿದ್ದಾರೆ ಅಂದರೆ ಸತ್ಪುತ್ರರಿಲ್ಲದಿದ್ದರೆ ಯೋಗ್ಯ ಜೀವಿಗೂ ಉತ್ತಮ ಗತಿಯಿಲ್ಲವೇ? ಎಂಬ ಪ್ರಶ್ನೆಗೆ ಉತ್ತಮ ಉತ್ತರ ಸಿಗುತ್ತದೆ.
28 ನೇ ಶ್ಲೋಕ
ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರೋರ್ವೃಂದವನಾಂತಿಕೇ
ದೀಪಸಂಯೋಜನಾತ್ ಜ್ಞಾನಂ ಪುತ್ರಲಾಭೋ ಭವೇಧ್ರುವಂ
ಶ್ಲೋಕದ ಭಾವ
ಶ್ರೀ ಗುರುರಾಜರ ಸ್ತೋತ್ರವನ್ನು ಭಕ್ತಿ ಪುರಸ್ಸರವಾಗಿ ಅರ್ಥಾನುಸಂಧಾನ ಪೂರ್ವಕವಾಗಿ ಗುರುಗಳ ಬೃಂದಾವನದ ಬಳಿ ಮಾಡುವವಗೆ, ಹಾಗೂ ನಂದಾದೀಪವನ್ನು ಬೆಳಗುವವಗೆ, ಶ್ರೀ ಹರಿ ಗುರುಗಳ ಭಕ್ತಿಯ ಜ್ಞಾನ, ಯೋಗ್ಯ ಪುತ್ರರ ಲಾಭ ನಿಶ್ಚಯವಾಗಿಯೂ ಆಗೇ ಆಗುತ್ತದೆ. ಎಂದು ತಾತ್ಪರ್ಯ.
ಇದರಲ್ಲೇನು ಸ್ವಾರಸ್ಯ ಪುತ್ರ ಲಾಭ ಇಲ್ಲದೆ ಜೀವನವೇ ಇಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಇಲ್ಲಿ ಶ್ರೀ ಅಪ್ಪಣ್ಣಚಾರ್ಯರು ಆಂತರ್ಯ ಬೇರೇನೋ ಇರಬಹುದೇ ಎನಿಸುವುದು. ಪುತ್ರ ಎಂಬ ಪದವೇ ನಮ್ಮ ಜಿಜ್ಞಾಸೆಗೆ ಕಾರಣವಾಗುತ್ತದೆ.
ಒಬ್ಬ ಜೀವನಿಗೆ ಎಷ್ಟುಜನ್ಮ, ಅಷ್ಟೂಜನ್ಮದಲ್ಲಿ ಸತ್ಪುತ್ರರೇ ಜನಿಸುವರೇ, ಹಾಗಾದರೆ ಆಚಾರ್ಯರು ಇಲ್ಲಿ ಏನನ್ನೂ ಹೇಳಲು ಹೊರಟಿದ್ದಾರೆ ಎಂದರೇ ಜ್ಞಾನಿಗಳು ಹೇಳಿದಹಾಗೆ ನಿಜವಾದ ಪುತ್ರ ಶ್ರೀ ಹರಿ , ಭವಪಾಶ ಬಂಧಕ ಇಹ ಲೋಕದ ಪುತ್ರ ಭವ ಪಾಶದ ಮೋಚಕ ಶ್ರೀಹರಿ, ಇಲ್ಲಿ ಉಪಯೋಗಿಸಿದ ಜ್ಞಾನ ಶಬ್ದ ದೀಪವನ್ನು ಬೃಂದಾವನದ ಬಳಿ ಬೆಳಗುವುದರಿಂದ ಶ್ರೀಗುರುರಾಜರು
ಭಕ್ತರಿಗೆ ಹರಿವಾಯು ಗುರುಗಳಲ್ಲಿ ಯಥಾರ್ಥ ಜ್ಞಾನ ಕೊಡುವರೆಂದು ಅಭಿಪ್ರಾಯ.
ನನ್ನ ಪೂಜ್ಯ ತಂದೆಯವರು ಪುತ್ರ ಶಬ್ದಕ್ಕೆ, ಪುನ್ನಾಮ ನರಕದಿಂದ ಪಾರುಮಾಡಿ ಶಾಶ್ವತ ಸುಖರೂಪವಾದ ಮೋಕ್ಷವನ್ನು ಕೊಡುವ ಪ್ರಭು ಶ್ರೀ ಹರಿಯಲ್ಲದೆ ಇಹಲೋಕದ ಪುತ್ರರಲ್ಲ ಎಂದು ಅಭಿಪ್ರಾಯ ಪಡುತ್ತಿದ್ದರು.
ಬೃಂದಾವನದ ಮುಂದೆ ದೀಪ ಬೆಳಗುವವರಿಗೆ,ಶ್ರೀ ಗುರುರಾಜರು ಶ್ರೀ ಹರಿಯಲ್ಲಿ ವಿಶೇಷ ಜ್ಞಾನ,ಭಕ್ತಿಯನ್ನು ಕರುಣಿಸುವರೆಂಬ ಅಭಿಪ್ರಾಯ ಶ್ರೀ ಅಪ್ಪಣ್ಣಾಚಾರ್ಯರದು.
ಹಿಂದಿನ ಶ್ಲೋಕಗಳಲ್ಲಿ ಅಪ್ಪಣ್ಣಾಚಾರ್ಯರು ಸಾಧನೆಗೆ ಬೇಕಾದ ಇಂದ್ರಿಯಗಳು ಊನಗೋಂಡಿದ್ದರೇ ರಾಯರಿಗೆ ಶರಣು ಹೋದರೆ ಪರಿಹಾರ ಖಂಡಿತಾ ಇದೆ ಎಂದು ಹೇಳಿ ಹಾಗೆಜ್ಞಾನ ಭಕ್ತಿಗಳನ್ನೂ ದಯಪಾಲಿಸುವಂತ,ರಾಯರು ಕರುಣಾ ಸಮುದ್ರರು ಎಂದು ಕೊಂಡಾಡಿದ್ದಾರೆ.
ಪ್ರಸ್ತುತ ಶ್ಲೋಕದಲ್ಲಿ , ಶ್ರೀಹರಿಯ ರೂಪ ಗುಣಾದಿ ಕ್ರಿಯೆಗಳಲ್ಲಿ ಅಡಕವಾಗಿರುವ ಅನಂತ ಮಹಿಮೆಗಳನ್ನು ಶಾಸ್ತ್ರಮುಖೇನ ತಿಳಿದುಕೊಂಡು ದೃಢವಾಗಿ ಶ್ರೀಹರಿಯಲ್ಲಿ ಮಾಡುವ ಸ್ನೇಹ ಭಕ್ತಿ ಎನಿಸಿಕೊಳ್ಳುತ್ತದೆ. ಇಂತಹ ಭಕ್ತಿ ಈ ಸ್ತೋತ್ರ ಪಠಣ ಮಾಡುವುದರಿಂದ ಲಭಿಸುತ್ತದೆ ಎಂದು ಭರವಸೆ ಕೊಡುತ್ತಾರೆ ಅಪ್ಪಣ್ಣಾಚಾರ್ಯರು.
ಶ್ಲೋಕ 29
ಪರವಾದಿ ಜಯೋ ಧಿವ್ಯ ಜ್ಞಾನ, ಭಕ್ತ್ಯಾದಿವರ್ಧನಮ್
ಸರ್ವಭೀಷ್ಟ ಪ್ರವೃದ್ಧಿ: ಸ್ಯಾನ್ನಾತ್ರಕಾರ್ಯ ವಿಚಾರಣಾ
ಶ್ಲೋಕದ ಭಾವ
ಶ್ರೀಮದಾಚಾರ್ಯರ ಸಿದ್ಧಾಂತಗಳ
ಪರವಾಗಿ ಅನ್ಯ ಸಿದ್ಧಾಂತಿಗೊಳೊಡನೆ ವಾದಿಸುವ ಸಂದರ್ಭದಲ್ಲಿ ಜಯವನ್ನೂ, ಧಿವ್ಯವಾದ ಜ್ಞಾನ ಭಕ್ತಿ ವೈರಾಗ್ಯಗಳ
ಅಭಿವೃದ್ಧಿಯೂ, ಅಲ್ಲದೇ ಸಕಲ ಇಷ್ಟಾರ್ಥಗಳು ಉತ್ತಮವಾಗಿ ಕೈಗೂಡುತ್ತದೆ.
ಈ ವಿಷಯದಲ್ಲಿ ಪರೀಕ್ಷಿಸ ಬೇಕಾದ ಅವಶ್ಯಕತೆಯೇ ಇಲ್ಲ.
ಗುರುಗಳ ವಿಷಯದಲ್ಲಿ ಎಳ್ಳಷ್ಟು ಸಂಶಯ ಬೇಡ ಎನ್ನುವ ಭಾವ, ಹಾಗೂ "ಗುರು ಪ್ರಸಾದೋ ಬಲವಾನ್ "ಎನ್ನುವ ಆಶ್ವಾಸನೆ ಅಪ್ಪಣ್ಣಚಾರ್ಯರದು.
***
No comments:
Post a Comment