Thursday 1 July 2021

ಕೃಷ್ಣ ಸ್ತೋತ್ರಮ್ ವಸುದೇವ ವಿರಚಿತಮ್

 || ವಸುದೇವಕೃತ ಶ್ರೀಕೃಷ್ಣಸ್ತೋತ್ರಮ್ ||

ವಸುದೇವ ಉವಾಚ:- 

ತ್ವಾಮತೀಂದ್ರಿಯ ಮವ್ಯಕ್ತಮಕ್ಷರಂ ನಿರ್ಗುಣಂ ವಿಭು: |

ಧ್ಯಾನಾಸಾಧ್ಯಂಚ ಸರ್ವೇಷಾಂ ಪರಮಾತ್ಮಾ ನಮೀಶ್ವರಮ್  ||೧||

ಸ್ವೇಚ್ಛಾಮಯಂ ಸರ್ವರೂಪಂ ಸ್ವೇಚ್ಛಾರೂಪಧರಂ  ಪರಮ್ |

ನಿರ್ಲಿಪ್ತಂ ಪರಮಮ್ ಬ್ರಹ್ಮ ಬೀಜರೂಪಂ ಸನಾತನಮ್ ||೨||

ಸ್ಥೂಲಾತ್ ಸ್ಥೂಲತರಂ ಪ್ರಾಪ್ತಮತಿ ಸೂಕ್ಷ್ಮಮದರ್ಶನಮ್ |

ಸ್ಥಿತಂ ಸರ್ವ ಶರೀರೇಷು ಸಾಕ್ಷಿರೂಪಮದೃಶ್ಯಕಮ್ ||೩||

ಶರೀರವಂತಂ ಸಗುಣಮಶರೀರಂ ಗುಣೋತ್ಕರಮ್ |

ಪ್ರಕೃತಿಂ ಪ್ರಕೃತೀಶಂ ಚ ಪ್ರಾಕೃತಂ ಪ್ರಕೃತೇ ಪರಮ್ ||೪||

ಸರ್ವೇಶಂ ಸರ್ವರೂಪಂ ಚ ಸರ್ವಾಂತರಮವ್ಯಯಮ್ |

ಸರ್ವಾಧಾರಂ ನಿರಾಧಾರಂ ನಿರ್ವ್ಯೂಹಂ ಸ್ತೌಮಿ ಕಿಂ ವಿಭುಮ್  ||೫||

ಅನಂತ: ಸ್ತವನೇsಶಕ್ತೋsಶಕ್ತಾ ದೇವೀ ಸರಸ್ವತಿ |

ಯಂ ಸ್ತೋತುಮಸಮರ್ಥಶ್ಚ ಪಂಚವಕ್ತೃ: ಷಡಾನನ:  ||೬||

ಚತುರ್ಮುಖೋ ವೇದಕರ್ತಾ ಯಂ ಸ್ತೋತುಮಕ್ಷಮ: ಸದಾ |

ಗಣೇಶೋ ನ ಸಮರ್ಥಶ್ಚ ಯೋಗೀಂದ್ರಾಣಾಂ ಗುರೋರ್ಗುರು: ||೭||

ಋಷಯೋ ದೇವತಾಶ್ಚೈವ ಮುನೀಂದ್ರ ಮನುಮಾನವಾ: |

ಸ್ವಪ್ನೇ ತೇಷಾಮದೃಶ್ಯಂ ಚ ತ್ವಾಮೇವಂ ಕೀ ಸ್ತುವಂತಿ ತೇ ||೮||

ಶ್ರುತಯ: ಸ್ತವನೇsಶಕ್ತಾ: ಕಿಂ ಸ್ತುವಂತಿ ವಿಪಶ್ಚಿತ: |

ವಿಹಾಯೈವಂ ಶರೀರಂ ಚ ಬಾಲೋ ಭವಿತು ಮಹರ್ಸಿ ||೯||

ವಸುದೇವಕೃತಂ ಸ್ತೋತ್ರಂ ತ್ರಿಸಂಧ್ಯಂ ಯ: ಪಠೇನ್ನರ: |

ಭಕ್ತಿದಾಸ್ಯಮವಾಪ್ನೋತಿ ಶ್ರೀಕೃಷ್ಣ ಚರಣಾಂಬುಜೇ ||೧೦||

ವಿಶಿಷ್ಟಪುತ್ರಂ ಲಭತೇ ಹರಿದಾಸಂ ಗುಣಾನ್ವಿತಂ |

ಸಂಕಟಂ ನಿಸ್ತರೇತ್ ತೂರ್ಣಂ ಶತ್ರುಭೀತ್ಯಾ ಪ್ರಮುಚ್ಯತೇ ||೧೧||

***

ವಸುದೇವ ಹೇಳುವನು:-

ತ್ವಾಮತೀಂದ್ರಿಯ ಮವ್ಯಕ್ತಮಕ್ಷರಂ ನಿರ್ಗುಣಂ ವಿಭು: |

ಧ್ಯಾನಾಸಾಧ್ಯಂಚ ಸರ್ವೇಷಾಂ ಪರಮಾತ್ಮಾ ನಮೀಶ್ವರಮ್  ||೧||

ಭಾವಾರ್ಥ:-ನೀನು ಇಂದ್ರಿಯಗಳಿಗೆ ತಿಳಿಯಲು ಅಸಾಧ್ಯನಾಗಿರುವವನು. ಅವ್ಯಕ್ತರೂಪನು. ಅವಿನಾಶಿಯು.ತ್ರಿಗುಣರಹಿತನು.ಸರ್ವತ್ರ ವ್ಯಾಪಿಸಿಕೊಂಡಿರುವವನು.ಧ್ಯಾನದಿಂದ ಆರಿಗೂ ವಶವಾಗದವನು.ಎಲ್ಲರಿಗೂ ಒಡೆಯನಾಗಿರುವ ಪರಮಾತ್ಮನೇ ನೀನಾಗಿರುವೆ.

ಸ್ವೇಚ್ಛಾಮಯಂ ಸರ್ವರೂಪಂ ಸ್ವೇಚ್ಛಾರೂಪಧರಂ  ಪರಮ್ |

ನಿರ್ಲಿಪ್ತಂ ಪರಮಮ್ ಬ್ರಹ್ಮ ಬೀಜರೂಪಂ ಸನಾತನಮ್ ||೨||

ಭಾವಾರ್ಥ:-ನೀನು ತನ್ನಿಚ್ಛೆಯುಳ್ಳವನು.ಸಮಸ್ತಸ್ವರೂಪಿಯು.ನಿನ್ನ ಸ್ವಂತ ಬಯಕೆಯಂತೆ ರೂಪನ್ನು ಧರಿಸುವವನು. ಮಹಾತ್ಮನು.ಅತೀಹೆಚಾಗಿ ಯಾವುದನ್ನೂ ಅಂಟಿಸಿಕೊಳ್ಳದವನು. ಸನಾತನ ಬೀಜ ಸ್ವರೂಪನಾಗಿ ಪರಬ್ರಹ್ಮನೇ ನೀನಾಗಿರುವೆ.

ಸ್ಥೂಲಾತ್ ಸ್ಥೂಲತರಂ ಪ್ರಾಪ್ತಮತಿ ಸೂಕ್ಷ್ಮಮದರ್ಶನಮ್ |

ಸ್ಥಿತಂ ಸರ್ವ ಶರೀರೇಷು ಸಾಕ್ಷಿರೂಪಮದೃಶ್ಯಕಮ್ ||೩||

ಭಾವಾರ್ಥ:-ನೀನು ಸ್ಥೂಲಕ್ಕಿಂತಲೂ ಅತಿ ಸ್ಥೂಲನು.ಸರ್ವ ವ್ಯಾಪಿಯಾದರೂ ಅತಿ ಸೂಕ್ಷ್ಮನು. ದೃಷ್ಟಿಗೆ ಗೋಚರವಾಗದವನು.ಸಮಸ್ತ ದೇಹಗಳಲ್ಲಿಯೂ ಸಾಕ್ಷಿರೂಪವಾಗಿ ನೆಲೆಯಾಗಿರುವವನು. ಅಂತೆಯೇ  ಅದೃಶ್ಯನು.

ಶರೀರವಂತಂ ಸಗುಣಮಶರೀರಂ ಗುಣೋತ್ಕರಮ್ |

ಪ್ರಕೃತಿಂ ಪ್ರಕೃತೀಶಂ ಚ ಪ್ರಾಕೃತಂ ಪ್ರಕೃತೇ ಪರಮ್ ||೪||

ಭಾವಾರ್ಥ:-ಸಾಕಾರ,ನಿರಾಕಾರ,ಸಗುಣ,ನಿರ್ಗುಣಗಳ ಸಮೂಹವೇ ನೀನಾಗಿರುವೆ. ಪ್ರಕೃತಿಯೇ ನೀನಾಗಿ ಪ್ರಕೃತಿಯ ನಿಯಮಗಳನ್ನು ರೂಪಿಸುವವನಾಗಿರುವೆ. ಪ್ರಕೃತಿಯಲ್ಲಿನ ಸಮಸ್ತ ವಸ್ತುಗಳಲ್ಲಿ ವ್ಯಾಪಿಸಿರುವೆ.ಆದರೂ ನೀನು ಪ್ರಕೃತಿಯಿಂದ ಹೊರಗಿನ ಸ್ಥಿತಿಗತಿಗಳಿಗೆ ಕಾರಣೀಭೂತನಾಗಿರುವೆ.

ಸರ್ವೇಶಂ ಸರ್ವರೂಪಂ ಚ ಸರ್ವಾಂತರಮವ್ಯಯಮ್ |

ಸರ್ವಾಧಾರಂ ನಿರಾಧಾರಂ ನಿರ್ವ್ಯೂಹಂ ಸ್ತೌಮಿ ಕಿಂ ವಿಭುಮ್  ||೫||

ಭಾವಾರ್ಥ:-ಒಡೆಯನೇ!ನೀನು ಸಮಸ್ತಕ್ಕೂ ಅಧೀಶನಾಗಿರುವೆ.ಸಮಸ್ತರೂಪನೂ ನೀನಾಗಿರುವೆ.ನೀನುಎಲ್ಲೆಡೆಯಲ್ಲಿಯೂ ವ್ಯಾಪಿಸಿಕೊಂಡಿರುವವನು. ನೀನು ನಾಶರಹಿತನು. ಸಮಸ್ತ ಸೃಷ್ಟಿಗೂ ಆಧಾರನು. ಅಂತೆಯೇ ಆಧಾರ ವಿರಹಿತನು. ನೀನು ತರ್ಕಗಳಿಗೆ ಆತೀತನಾದವನು. ಹೀಗಿರುವ ನಿನ್ನನ್ನು ನಾನದೆಂತು ಸ್ತುತಿಸಲಿ?

ಅನಂತ: ಸ್ತವನೇsಶಕ್ತೋsಶಕ್ತಾ ದೇವೀ ಸರಸ್ವತಿ |

ಯಂ ಸ್ತೋತುಮಸಮರ್ಥಶ್ಚ ಪಂಚವಕ್ತೃ: ಷಡಾನನ:  ||೬||

ಭಾವಾರ್ಥ:-ಸಹಸ್ರ ನಾಲಿಗೆಯುಳ್ಳ ಭಗವಾನ್ ಅನಂತನೆಂಬ ಮಹಾಶೇಷನು ಕೂಡಾ ನಿನ್ನನ್ನು ಸ್ತುತಿಸಲು ಸಾಮರ್ಥ್ಯವಿಲ್ಲದವನಾಗಿರುವನು.ವಾಗ್ದೇವಿ ಶಾರದೆಗೂ ನಿನ್ನನ್ನು ಸ್ತುತಿಸಲು ಸಾಮರ್ಥ್ಯವಿಲ್ಲ. ಪಂಚವದನ ಮಹಾದೇವನೂ, ಆರುಮೊಗಗಳುಳ್ಳ ಕಾರ್ತಿಕೇಯನೂ ನಿನ್ನನ್ನು ಸ್ತುತಿಸಲು ಅಸಮರ್ಥರಾದವರೇ ಆದವರು.

ಚತುರ್ಮುಖೋ ವೇದಕರ್ತಾ ಯಂ ಸ್ತೋತುಮಕ್ಷಮ: ಸದಾ |

ಗಣೇಶೋ ನ ಸಮರ್ಥಶ್ಚ ಯೋಗೀಂದ್ರಾಣಾಂ ಗುರೋರ್ಗುರು: ||೭||

ಭಾವಾರ್ಥ:-ವೇದಗಳನ್ನು ವ್ಯಕ್ತಪಡಿಸುವ ಬ್ರಹ್ಮನು ಕೂಡಾ ನಿನ್ನ ಸ್ತುತಿಸುವಿಕೆಯಲ್ಲಿ ಅಯೋಗ್ಯನೆನಿಸಿರುವವನು. ಹಾಗೆಯೇ ಮುನಿಶ್ರೇಷ್ಠರ ಗುರುಗಳಿಗೆ ಗುರುವಾದ ಶ್ರೀಗಣೇಶನು ಕೂಡಾ ನಿನ್ನನ್ನು ಸ್ತುತಿಸಲು ಅಸಮರ್ಥನಾಗಿರುವನು.

ಋಷಯೋ ದೇವತಾಶ್ಚೈವ ಮುನೀಂದ್ರ ಮನುಮಾನವಾ: |

ಸ್ವಪ್ನೇ ತೇಷಾಮದೃಶ್ಯಂ ಚ ತ್ವಾಮೇವಂ ಕೀ ಸ್ತುವಂತಿ ತೇ ||೮||

ಭಾವಾರ್ಥ:-ಹೀಗಿರುವಾಗ ಋಷಿಮುನಿಗಳು, ದೇವತೆಗಳು, ಶ್ರೇಷ್ಟ ಯೋಗಿಗಳು, ಶಾಸ್ತ್ರಕಾರರು, ಮಾನವರು ಅದೆಂತು ಸ್ತುತಿಸಬಲ್ಲರು? ನಿನ್ನನ್ನು ಅವರು ಎಂದೂ ಕಂಡಿರಲಾರರು.

ಶ್ರುತಯ: ಸ್ತವನೇsಶಕ್ತಾ: ಕಿಂ ಸ್ತುವಂತಿ ವಿಪಶ್ಚಿತ: |

ವಿಹಾಯೈವಂ ಶರೀರಂ ಚ ಬಾಲೋ ಭವಿತು ಮಹರ್ಸಿ ||೯||

ಭಾವಾರ್ಥ:-ವೇದಗಳೇ ನಿನ್ನನ್ನು ಸ್ತುತಿಸಲು ಶಕ್ತವಾಗದಿರುವಾಗ ವಿದ್ವಜ್ಜನರಾದರೂ ಅದೆಂತು ಸ್ತುತಿಸಲು ಸಾಧ್ಯ? ನೀನು ನಿನ್ನ ಈ ಶ್ರೇಷ್ಠಶರೀರವನ್ನು ತ್ಯಜಿಸಿ ಮಗುವಿನ ಸ್ವರೂಪವನ್ನು ಧರಿಸಬೇಕು ಎಂಬುದು ಮಾತ್ರಾ ನನ್ನ ಅರಿಕೆ.

ವಸುದೇವಕೃತಂ ಸ್ತೋತ್ರಂ ತ್ರಿಸಂಧ್ಯಂ ಯ: ಪಠೇನ್ನರ: |

ಭಕ್ತಿದಾಸ್ಯಮವಾಪ್ನೋತಿ ಶ್ರೀಕೃಷ್ಣ ಚರಣಾಂಬುಜೇ ||೧೦||

ಭಾವಾರ್ಥ:-ವಸುದೇವನಿಂದ ರಚಿತವಾದ ಈ ಸ್ತೋತ್ರವನ್ನು ಮೂರು ಸಂಧ್ಯಾಕಾಲಗಳಲ್ಲಿ ಪಠಿಸುವವರು ಶ್ರೀಕೃಷ್ಣನ ಚರಣಾರವಿಂದಗಳ ಊಳಿಗತ್ವದ ಮಹಾಭಾಗ್ಯವನ್ನು ಪಡೆಯುವರು.

ವಿಶಿಷ್ಟಪುತ್ರಂ ಲಭತೇ ಹರಿದಾಸಂ ಗುಣಾನ್ವಿತಂ |

ಸಂಕಟಂ ನಿಸ್ತರೇತ್ ತೂರ್ಣಂ ಶತ್ರುಭೀತ್ಯಾ ಪ್ರಮುಚ್ಯತೇ ||೧೧||

ಭಾವಾರ್ಥ:-ಆ ತೆರನಾಗಿ ದಾಸ್ಯತ್ವವನ್ನು ಪಡೆವಾತನಿಗೆ ಶ್ರೇಷ್ಠಗುಣದ ಹರಿಭಕ್ತನಾಗಿರುವ ಸುಪುತ್ರ ಭಾಗ್ಯವು ದೊರಕುವುದು. ಆತನು ಸಮಸ್ತ ಸಂಕಷ್ಟಗಳಿಂದ ಪಾರಾಗುವನು. ಆತನನ್ನು ಶತ್ರುಗಳ ಭೀತಿಯು ಕಾಡಲಾರದು.

***********************

               || ಇತಿ ವಸುದೇವಕೃತ ಶ್ರೀಕೃಷ್ಣಸ್ತೋತ್ರಮ್ ||

 || ಈ ರೀತಿಯಾಗಿ ವಸುದೇವನಿಂದ ರಚಿಸಲ್ಪಟ್ಟ ಶ್ರೀಕೃಷ್ಣಸ್ತೋತ್ರಗಳ ಭಾವಾರ್ಥವಾಗಿದೆ ||

***

No comments:

Post a Comment