Thursday 1 July 2021

ಶನೈಶ್ಚರ ಸ್ತೋತ್ರಮ್ ಬ್ರಹ್ಮಾಂಡ ಪುರಾಣೇ ದಶರಥ ಋಷಿಃ ವಿರಚಿತಮ್

 for procedure of pooja refer to

click--> ಶನಿ ದೇವ ಶನೈಶ್ಚರ ಜಯಂತಿ shani deva shanaishwara jayanti on vaishakha amavasya



ಶನೈಶ್ಚರ ಸ್ತೋತ್ರಮ್: 

ಶ್ರೀಗಣೇಶಾಯನಮಃ | ಅಸ್ಯಶ್ರೀಶನೈಶ್ಚರ ಸ್ತೋತ್ರಸ್ಯ | 
ದಶರಥ ಋಷಿಃ | ಶನೈಶ್ಚರೋ ದೇವತಾ | 
ತ್ರಿಷ್ಟುಪ್ ಛಂದಃ | ಶನೈಶ್ಚರ ಪ್ರೀತ್ಯಥ್ರ್ಯೇ ಜಪೇ ವಿನಿಯೋಗಃ | 
ದಶರಥ ಉವಾಚ | 
ಕೋಣೋಂತಕೋ ರೌದ್ರ ಯಮೋsಥ ಬಭ್ರುಃ 
ಕೃಷ್ಣಃ ಶನಿಃ ಪಿಂಗಲ ಮಂದ ಸೌರಿಃ | 
ನಿತ್ಯಂ ಸ್ಮೃತೋ ಯೋ ಹರತೇ ಚ ಪೀಡಾಂ 
ತಸ್ಮೈ ನಮಃ ಶ್ರೀರವಿನಂದನಾಯ | 1 | 
ಸುರಾಸುರಾಃ ಕಿಂಪುರುಷೋರಗೇಂದ್ರಾ 
ಗಂಧರ್ವವಿದ್ಯಾಧರಪನ್ನಗಾಶ್ಚ | 
ಪೀಡ್ಯಂತಿ ಸರ್ವೇ ವಿಷಮ ಸ್ಥಿತೇನ 
ತಸ್ಮೈ ನಮಃ ಶ್ರೀರವಿನಂದನಾಯ | 2 | 
ನರಾನರೇಂದ್ರಾಃ ಪಶವೋ ಮೃಗೇಂದ್ರಾ 
ವನ್ಯಾಶ್ಚ ಯೇ ಕೀಟಪತಂಗಬೃಂಗಾಃ | 
ಪೀಡ್ಯಂತಿ ಸರ್ವೇ ವಿಷಮ ಸ್ಥಿತೇನ 
ತಸ್ಮೈ ನಮಃ ಶ್ರೀರವಿನಂದನಾಯ | 3 | 
ದೇಶಾಶ್ಚ ದುರ್ಗಾಣಿವನಾನಿ ಯತ್ರ ಸೇನಾ
ನಿವೇಶಾಃ ಪುರಪತ್ತನಾನಿ | 
ಪೀಡ್ಯಂತಿ ಸರ್ವೇ ವಿಷಮ ಸ್ಥಿತೇನ 
ತಸ್ಮೈ ನಮಃ ಶ್ರೀರವಿನಂದನಾಯ | 4 | 
ತಿಲೈರ್ಯವೈರ್ಮಾಷಗುಡಾನ್ನ ದಾನೈರ್ಲೋಹೇನ 
ನೀಲಾಂಬರ ದಾನೇನ ತೋವಾ | 
ಪ್ರೀಣಾತಿಮಂತ್ರೈರ್ನಿಜವಾಸರೇಚ 
ತಸ್ಮೈ ನಮಃ ಶ್ರೀರವಿನಂದನಾಯ | 5 | 
ಪ್ರಯಾಗಕೂಲೇ ಯಮುನಾತಟೇ ಚ 
ಸರಸ್ವತೀ ಪುಣ್ಯಜಲೇ ಗುಹಾಯಾಮ್ | 
ಯೋಯೋಗಿನಾಂ ಧ್ಯಾನಗತಾsಪಿ ಸೂಕ್ಷ್ಮ
ಸ್ತಸ್ಮೈ ನಮಃ ಶ್ರೀರವಿನಂದನಾಯ | 6 | 
ಅನ್ಯಪ್ರದೇಶಾತ್ ಸ್ವಗೃಹಂ ಪ್ರವಿಷ್ಟ 
ಸ್ತದೀಯವಾರೇ ಸ ನರಃ ಸುಖೀಸ್ಯಾತ್ | 
ಗೃಹಾದ್ಗತೋ ಯೋ ನ ಪುನಃಪ್ರಯಾತಿ 
ತಸ್ಮೈ ನಮಃ ಶ್ರೀರವಿನಂದನಾಯ | 7 | 
ಸ್ರಷ್ಟಾ ಸ್ವಯಂ ಭೂರ್ಭುವನತ್ರಯಸ್ಯ 
ತ್ರಾತಾಹರೀಶೋ ಹರತೇ ಪಿನಾಕೀ | 
ಏಕಾಸ್ತ್ರಿಧಾ ಋಗ್ಯಜುಃಸಾಮ ಮೂರ್ತಿ 
ತಸ್ಮೈ ನಮಃ ಶ್ರೀರವಿನಂದನಾಯ | 8 | 
ಶನ್ಯಷ್ಟಕಂ ಯಃ ಪರಯತಃ ಪ್ರಭಾತೇ 
ನಿತ್ಯಂ ಸುಪುತ್ರೈಃ ಪಶು ಬಾಂಧವೈಶ್ಚ | 
ಪಠೇತುಸೌಖ್ಯಂ ಭುವಿ ಭೋಗಯುಕ್ತಃ 
ಪ್ರಾಪ್ನೋತಿ ನಿರ್ವಾಣ ಪದಂ ತದಂತೇ | 9 |
|| ಪಿಪ್ಪಲಾದ ಉವಾಚ || 
ನಮಸ್ತೇ ಕೋಣಸಂಸ್ಥಾಯ ಪಿಂಗಲಾಯ ನಮೋಸ್ತುತೇ | 
ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಸ್ತುತೇ || 
ನಮಸ್ತೇ ರೌದ್ರದೇಹಾಯ ನಮಸ್ತೇ ಚ ಅಂತಕಾಯ ಚ | 
ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ || 
ನಮಸ್ತೇ ಮಂದ ಸಂಜ್ಞಾಯ ಶನೈಶ್ಚರ ನಮೋಸ್ತುತೇ | 
ಪ್ರಸಾದಂ ಕುರು ದೇವೇಶ ದೀನಸ್ಯ ಪ್ರಣತಸ್ಯ ಚ || 
ಕೋಣಸ್ಥಃಪಿಂಗಲೋಬಭ್ರುಃ ಕೃಷ್ಣೋ ರೌದ್ರೋsಂತಕೋ ಯಮಃ | 
ಸೌರಿಃಶನೈಶ್ಚರೋ ಮಂದಃ ಪಿಪ್ಪಲಾದೇನ ಸಂಸ್ತುತಃ | 
ಏತಾನಿ ದಶನಾಮಾನಿ ಪ್ರಾತರುತ್ಥಾಯ ಯಃ ಪಠೇತ್ | 
ಶನೈಶ್ಚರ ಕೃತಾ ಪೀಡಾ ನ ಕದಾಚಿತ್ ಭವಿಷ್ಯತಿ || 11 || 
ಇತಿ ಬ್ರಹ್ಮಾಂಡ ಪುರಾಣೇ ಶನೈಶ್ಚರ ಸ್ತೋತ್ರಂ ಸಂಪೂರ್ಣಂ ||
***

ಶುಭ ಶನಿವಾರ ಶನೈಶ್ಚರ ಕೃಪೆಯಿಂದ ಶುಭಕರವಾಗಲಿ

ಅನಿಷ್ಟಗಳಿಂದ ಪಾರು ಮಾಡುವ ದಶರಥ ಕೃತ ಶನಿಸ್ತೋತ್ರ ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಿ ರಚಿಸಿದ ಶನಿಸ್ತೋತ್ರ ಮತ್ತು ಕನ್ನಡ ಸರಳ ಭಾವಾರ್ಥ ಇಲ್ಲಿದೆ. 

ಪಿಪ್ಪಲಾದ ಮುನಿ  ಶನಿದೇವನನ್ನು ಹತ್ತು ಹೆಸರುಗಳಿಂದ ಸ್ತುತಿಸಿದ್ದು, ಆ ಹತ್ತು ಹೆಸರುಗಳ ನಿತ್ಯಪಠಣ ನಮ್ಮನ್ನು ಶನಿಪೀಡೆಯಿಂದ ಪಾರುಮಾಡುತ್ತದೆ ಎನ್ನುತ್ತಾನೆ ದಶರಥ. 

ಅಸ್ಯ ಶ್ರೀ ಶನೈಶ್ಚರ ಸ್ತೋತ್ರಸ್ಯ | ದಶರಥ ಋಷಿಃ | ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ | ಶನೈಶ್ಚರ ಪ್ರೀತ್ಯರ್ಥಂ ಜಪೇ ವಿನಿಯೋಗಃ || 

ಭಾವಾರ್ಥಃ ಈ ಶನೈಶ್ಚರ ಸ್ತೋತ್ರದ ದ್ರಷ್ಟಾರ ಅಥವಾ ಕರ್ತೃ ದಶರಥನೂ, ಸ್ತೋತ್ರ ದೇವತೆ ಶನಿಯೂ ಆಗಿದ್ದಾರೆ. ಇದು ತ್ರಿಷ್ಟುಪ್ ಛಂದಸ್ಸಿನಲ್ಲಿ ರಚನೆಗೊಂಡಿದೆ. 

ಶನೈಶ್ಚರನನ್ನು ಸಂಪ್ರೀತಗೊಳಿಸುವ ಸಲುವಾಗಿ ಈ ಸ್ತೋತ್ರವನ್ನು ಪಠಿಸಲಾಗುತ್ತದೆ. ದಶರಥ ಉವಾಚ : 

ಕೋಣೋ ಅಂತಕೋ ರೌದ್ರಯಮೋSಥ ಬಭ್ರುಃ | ಕೃಷ್ಣಃ ಶನಿಃ ಪಿಂಗಲ ಮಂದ ಸೌರಿ || ನಿತ್ಯಂ ಸ್ಮೃತೋಯೋ ಹರತೇ ಚ ಪೀಡಾಂ | ತಸ್ಮೈನಮಃ ಶ್ರೀ ರವಿನಂದನಾಯ || 1 || 
ಭಾವಾರ್ಥ : ಕೋಣ, ಅಂತಕ, ರೌದ್ರ, ಯಮ, ಬಭ್ರು, ಕೃಷ್ಣ, ಶನಿ, ಪಿಂಗಲ, ಮಂದ, ಸೌರಿ ಎಂಬುದಾಗಿ (ಇವು ಶನಿದೇವನ ಹತ್ತು ಹೆಸರುಗಳು) ಅನುದಿನವೂ ಸ್ಮರಿಸುವುದರಿಂದ ಯಾರು ಸಂಪ್ರೀತನಾಗಿ ಪೀಡೆಗಳನ್ನು ಪರಿಹರಿಸುವನೋ ಅಂತಹಾ ರವಿತನಯನಿಗೆ ನನ್ನ ನಮಸ್ಕಾರಗಳು. 

ಸುರಾಸುರಾಃ ಕಿಂ ಪುರುಷೋರಗೇಂದ್ರಾ| ಗಂಧರ್ವ ವಿದ್ಯಾಧರ ಪನ್ನಗಾಶ್ಚ || ಪೀಡ್ಯಂತಿ ಸರ್ವೆ ವಿಷಮಸ್ಥಿತೇನ | ತಸ್ಮೈ ನಮಃ ಶ್ರೀರವಿನಂದನಾಯ || 2 ||
 ಭಾವಾರ್ಥ : ದೇವತೆಗಳು, ಅಸುರರು, ಕಿಂಪುರುಷರು, ಸರ್ಪ ಕುಲ, ಗಂಧರ್ವ – ವಿದ್ಯಾಧರರು, ಪನ್ನಗರೇ ಆದಿಯಾಗಿ ಯಾರು ಕೂಡಾ ವಿಷಮಸ್ಥಾನ ಸ್ಥಿತನಾಗಿರುವ ಇವನ ಪೀಡೆಯಿಂದ ತಪ್ಪಿಸಿಕೊಳ್ಳಳು ಸಾಧ್ಯವಿಲ್ಲ. ಅಂಥಹಾ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು.

 ನರಾನರೇಂದ್ರಾಃ ಪಶವೋಮೃಗೇಂದ್ರಾ | ವನ್ಯಾಶ್ಚಯೇ ಕೀಟ ಪತಂಗ ಭೃಂಗಾಃ || ಪೀಡ್ಯಂತಿ ಸರ್ವೆ ವಿಷಮಸ್ಥಿತೇನ | ತಸ್ಮೈ ನಮಃ ಶ್ರೀರವಿನಂದನಾಯ || 3 || ಭಾವಾರ್ಥ : ಮನುಷ್ಯರು, ರಾಜರು, ಪಶುಗಳು, ಮೃಗರಾಜ ಸಿಂಹನಾದಿಯಾಗಿ ಎಲ್ಲ ಪ್ರಾಣಿಗಳು, ಕೀಟಗಳು, ಪತಂಗಗಳು, ಭ್ರಮರಗಳು ಕೂಡಾ  ವಿಷಮಸ್ಥಾನ ಸ್ಥಿತನಾಗಿರುವ ಇವನಿಂದ ಪೀಡಿಸಲ್ಪಡುವರು. ಅಂತಹಾ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು. 

 ದೇಶಾಶ್ಚ ದುರ್ಗಾಣಿ ವನಾನಿಯತ್ರ | ಸೇನಾನಿವೇಶಾಃ ಪುರಪತ್ತನಾನಿ || ಪೀಡ್ಯಂತಿ ಸರ್ವೆ ವಿಷಮಸ್ಥಿತೇನ | ತಸ್ಮೈ ನಮಃ ಶ್ರೀರವಿನಂದನಾಯ || 4 || ಭಾವಾರ್ಥ: ದೇಶಗಳು, ಕೋಟೆ ಕೊತ್ತಲಗಳು, ವನಗಳು, ಸೈನಿಕರ ನೆಲೆಗಳು, ನಗರ – ಪಟ್ಟಣಗಳು ಇವೆಲ್ಲವೂ ವಿಷಮಸ್ಥಾನ ಸ್ಥಿತನಾಗಿರುವ ಇವನ ಬಾಧೆಗೆ ಒಳಗಾಗುವರು. ಅಂತಹಾ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು.  

ತಿಲೈರ್ಯವೈರ್ಮಾಷ ಗುಡಾನ್ನ ದಾನೈ | ರ್ಲೋಹೇನ ನೀಲಾಂಬರದಾನತೋ ವಾ || ಪ್ರೀಣಾತಿ ಮಂತ್ರೈರ್ನಿಜವಾಸರೇ ಚ | ತಸ್ಮೈ ನಮಃ ಶ್ರೀರವಿನಂದನಾಯ || 5 || 
ಭಾವಾರ್ಥ: ಶನೈಶ್ಚರನ ವಾರವಾಗಿರುವ ಶನಿವಾರದಂದು ಎಳ್ಳು, ಗೋಧಿ, ಉದ್ದು, ಬೆಲ್ಲ, ಅನ್ನದಾನಗಳನ್ನು ಮಾಡುವುದರಿಂದ; ಶನೈಶ್ಚರನ ಮಂತ್ರಗಳನ್ನು ಪಠಿಸುತ್ತಾ ಕಬ್ಬಿಣ, ನೀಲವರ್ಣದ ವಸ್ತ್ರಗಳನ್ನು ದಾನ ಮಾಡುವುದರಿಂದ ಅವನು ಸುಪ್ರೀತನಾಗುವನು. ಅಂತಹಾ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು.  

ಪ್ರಯಾಗ ಕೂಲೇ ಯಮುನಾತಟೇ ಚ | ಸರಸ್ವತಿ ಪುಣ್ಯ ಜಲೇ ಗುಹಾಯಾಮ್ || ಯೋ ಯೋಗೀನಾಂ ಧ್ಯಾನಗತೋSಪಿ ಸೂಕ್ಷ್ಮಃ | ತಸ್ಮೈ ನಮಃ ಶ್ರೀರವಿನಂದನಾಯ || 6 || 
ಭಾವಾರ್ಥ : ಪ್ರಯಾಗದ ದಂಡೆಯಯ ಮೇಲೆ, ಯಮುನಾ ನದಿಯ ದಡದಲ್ಲಿ, ಸರಸ್ವತಿ ನದಿಯ ಪುಣ್ಯ ತೀರ್ಥದಲ್ಲಿ, ಮತ್ತು ಗುಹೆಗಳಲ್ಲಿ ನೆಲೆಸಿರುವ ಮಹಾಯೋಗಿಗಳ ಧ್ಯಾನದ ಸೂಕ್ಷ್ಮರೂಪಿಯಾಗಿ ಯಾರು ಅಂತರ್ಗತರಾಗಿರುವರೋ ಅಂತಹಾ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು.  

ಅನ್ಯ ಪ್ರದೇಶಾತ್ ಸ್ವಗ್ರಹಂ ಪ್ರವಿಷ್ಟಃ | ತದೀಯ ವಾಸರೇ ನರಃ ಸುಖೀಸ್ಯಾತ್ || ಗ್ರಹಾದ್ಗತೋಯೋನ ಪುನಃ ಪ್ರಯಾತಿ | ತಸ್ಮೈ ನಮಃ ಶ್ರೀರವಿನಂದನಾಯ || 7 || ಭಾವಾರ್ಥ : ಶನಿವಾರದಂದು ಬೇರೆ ಊರಿನಿಂದ ತನ್ನ ಸ್ವಗೃಹಕ್ಕೆ ಬರುವ ಮನುಜನು ಸುಖಿಯಾಗುವನು. ಆ ದಿನ ಮನೆಯಿಂದ ಹೊರಗೆ ಹೋದವನು ಮತ್ತೆ ಬರಲಾರನು. ಇಂಥ ಫಲವನ್ನು ಉಂಟುಮಾಡುವ ಪ್ರಭಾವಶಾಲಿಯಾದ ರವಿಪುತ್ರನಿಗೆ ನನ್ನ ನಮಸ್ಕಾರಗಳು.

 ಸೃಷ್ಟಾ ಸ್ವಯಂ ಭೂರ್ಬುವನತ್ರಯಸ್ಯ | ತ್ರಾತಾ ಹರೀಶೋ ಹರಿತೇ ಪಿನಾಕಿ || ಏಕಸ್ತ್ರಿಧಾ ಋಗ್ಯಜುಃ ಸಾಮಮೂರ್ತಿಃ | ತಸ್ಮೈ ನಮಃ ಶ್ರೀರವಿನಂದನಾಯ || 8 || ಭಾವಾರ್ಥ : ಸ್ವರ್ಗ, ಮರ್ತ್ಯ, ಪಾತಾಳಗಳೆಂಬ ಮೂರು ಲೋಕಗಳನ್ನು ಸೃಷ್ಟಿಸಿದ ಬ್ರಹ್ಮ, ಪಾಲಕನಾದ ಶ್ರೀಹರಿ, ಲಯಕರ್ತನಾಗಿರುವ ಮಹಾದೇವ ಸ್ವರೂಪಿಯೂ; ಋಗ್ ಯಜು ಸಾಮಗಳೆಂಬ ವೇದತ್ರಯಗಳ ಮೂರ್ತರೂಪವೂ ಆಗಿರುವಂಥ ಪ್ರಭಾವಶಾಲಿ ರವಿಪುತ್ರನಿಗೆ ನನ್ನ ನಮಸ್ಕಾರಗಳು.  

ಶನ್ಯಷ್ಟಕಂ ಯಃ ಪ್ರಯತಃ ಪ್ರಭಾತೇ | ನಿತ್ಯಂ ಸುಪುತ್ರೈಃ ಪಶು ಬಾಂಧವೈಶ್ಚ || ಪಠೇತ್ತು ಸೌಖ್ಯಂ ಭುವಿಭೋಗಯುಕ್ತಃ |                                      ಪ್ರಾಪ್ನೋತಿ ನಿರ್ವಾಣ ಪದಂ ತದಂತೇ || 9 || 
ಭಾವಾರ್ಥ : ಶನೈಷ್ಚರನ ಈ ಅಷ್ಟಕ ಸ್ತೋತ್ರಗಳನ್ನು ಯಾರು ಪ್ರತಿದಿನವೂ ಉಷಃಕಾಲದಲ್ಲಿ ಪಠಿಸುವರೋ ಅವರು ಸದ್ಗುಣಿಗಳಾದ ಪುತ್ರರು, ಪಶುಗಳು, ಬಾಂಧವರುಗಳಿಂದ ಕೂಡಿ ಭೂಮಿಯಲ್ಲಿ ಸಮಸ್ತ ಭೋಗಗಳನ್ನು ಹೊಂದಿ, ಸುಖಸೌಖ್ಯಾದಿಗಳನ್ನು ಅನುಭವಿಸುವರು. ಅಷ್ಟು ಮಾತ್ರವಲ್ಲದೆ ಮರಣಾನಂತರ ಮೋಕ್ಷವನ್ನೂ ಹೊಂದುವರು. 

ಕೋಣಸ್ಥೈಃ ಪಿಂಗಲೋ ಬಭ್ರುಃ | ಕೃಷ್ಣೋರೌದ್ರೋ ಅಂತಕೋ ಯಮಃ || ಸೌರಿಃ ಶನೈಶ್ಚರೋ ಮಂದಃ | ಪಿಪ್ಪಲಾದೇನ ಸಂಸ್ತುತಃ || 10 || 
ಭಾವಾರ್ಥ: ಶನಿದೇವನನ್ನು ಪಿಪ್ಪಲಾದ ಮುನಿಯು ಕೋಣಸ್ಥ, ಪಿಂಗಲ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಸೌರಿ, ಶನೈಶ್ಚರ, ಮಂದ ಎಂಬ ಹೆಸರುಗಳಿಂದ ಸ್ತುತಿಸಿದ್ದಾರೆ. 

ಏತಾನಿ ದಶನಾಮಾನಿ | ಪ್ರಾತರುತ್ಥಾಯ ಯಃ ಪಠೇತ್ || ಶನೈಶ್ಚರ ಕೃತಾಪೀಡಾ | ನ ಕದಾಚಿತ್ ಭವಿಷ್ಯತಿ || 11 || ಭಾವಾರ್ಥ: ಉಷಃಕಾಲದಲ್ಲಿ ಎದ್ದು ಶನೈಶ್ಚರನ ಈ ಹತ್ತು ಹೆಸರುಗಳನ್ನು ಪಠಿಸುವವರಿಗೆ ಶನೈಶ್ಚರನಿಂದ ಯಾವುದೇ ಬಗೆಯ ಅನಿಷ್ಟವೂ ಉಂಟಾಗಲಾರದು. 
****


No comments:

Post a Comment