Wednesday 30 June 2021

ನ್ಯಾಯಸುಧಾ ಸ್ತೋತ್ರಂ ಮಾದನೂರು ವಿಷ್ಣುತೀರ್ಥ (ಅರಣ್ಯಾಕಾಚಾರ್ಯ) ವಿರಚಿತಮ್

 || ನ್ಯಾಯಸುಧಾ ಸ್ತೋತ್ರ ||


ಯದು ತಾಪಸಲಭ್ಯಮನಂತಭವೈ ತದುತೋ ಪರತತ್ವ ಮಿಹೈಕ ಪದಾತ್ |

ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೧ ||


ವಿಹಿತಂ ಕ್ರಿಯತೇ ನನು ಯಸ್ಯ ಕೃತೇ ಸ ಚ ಭಕ್ತಿ ಗುಣೋ ಯದಿಹೈಕಪದಾತ್ |

ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೨ ||


ವನವಾಸಮುಖಂ ಯಾದವಾಪ್ತಿಫಲಂ ತದನಾರತಮತ್ರ ಹರಿಸ್ಮರಣಂ |

ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೩ ||


ನಿಗಮೈರವಿಭಾವ್ಯಮಿದಂ ವಸು ಯತ್ ಸುಗಮಂ ಪದಮೇಕಪದಾದಪಿ ತತ್

ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೪ ||


ಯದಲಭ್ಯಮನೇಕ ಭವೈ: ಸ್ವಗುರೋ: ಸುಪದಂ ಸ್ವಪದಂ ತದಿಹೈಕಪದಾತ್

ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೫ ||


ಗುರುಪಾದಸರೋಜರತಿಮ್ ಕುರುತೇ ಹರಿಪಾದವಿನಮ್ರಸುಧೀ: ಸ್ವಫಲಂ 

ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೬ ||


ಉದಯಾದಪಗಚ್ಛತಿ ಗೂಢತಮಃ ಪ್ರತಿಪಕ್ಷಕೃತಂ ಖಲುಯತ್ಸುಕೃತೇ 

ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೭ ||


ದಶಮಾಂತ್ಯಪತಿ: ಸದನಂ ನ ಕದಾsಪ್ಯಥ ಮುಂಚತಿ ಯತ್ ಸ್ವಯಮೇವ ರಸಾತ್ 

ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೮ ||


|| ಇತಿ ಶ್ರೀ ಮಾದನೂರು ವಿಷ್ಣುತೀರ್ಥ (ಅರಣ್ಯಾಕಾಚಾರ್ಯ) ಕೃತಂ ಶ್ರೀ ನ್ಯಾಯಸುಧಾ ಸ್ತೋತ್ರಂ ||

*****


by Prasadacharya

ಶ್ರೀಂ ಶ್ರೀ ಕಂ ಕಪಿಲಾಯ ನಮಃ 

    ಆಷಾಢ ಕೃಷ್ಣ panchami 28 July 2021


ಮಿಥ್ಯಾಸಿದ್ಧಾಂತ ದುರ್ಧ್ವಾಂತ ವಿಧ್ವಂಸನ ವಿಚಕ್ಷಣಃ /

ಜಯತೀರ್ಥಾಖ್ಯ ತರಣಿಃ ಭಾಸತಾಂ ನೋ ಹೃದಂಬರೇ//


ನಮ್ಮ ಮಾಧ್ವ ಪರಂಪರೆಯಲ್ಲಿ, ಶ್ರೀಮದಾಚಾರ್ಯರ ನಂತರದ ಸ್ಥಾನವನ್ನು ಶ್ರೀಮಟ್ಟೀಕಾಕೃತ್ಪಾದರಿಗೆ ಅತ್ಯಂತ ಗೌರವದಿಂದ ನೀಡುವುದಾಗಿದೆ... 


ವ್ಯಾಸ-ದಾಸ ಸಾಹಿತ್ಯ ಪರಂಪರೆಯಲ್ಲಿ ಶ್ರೀಮಟ್ಟೀಕಾಕೃತ್ಪಾದರನ್ನು ಪಾಡಿ ಪೊಗಳದವರು ಇಲ್ಲವೆಂಬುದು ಜಗದ್ವಿದಿತ. ಶ್ರೀಮದಾಚಾರ್ಯರ ಗ್ರಂಥಗಳಿಗೆ ಟೀಕಾ, ವ್ಯಾಖ್ಯಾನ ರಚನೆ ಮಾಡುವುದಕ್ಕೇ ಅವತಾರ ಮಾಡಿ ಬಂದ ದೇವಲೋಕಪತಿ ಇಂದ್ರದೇವರ ಅವತಾರಿಗಳಾದ ಶ್ರೀಮಟ್ಟೀಕಾಕೃತ್ಪಾದರ ಕಾರುಣ್ಯಕ್ಕೆ ಇಡೀ ಜೀವದ ಭಕ್ತಿಯಿಂದ ನಮಸ್ಕಾರ ಮಾಡುವುದಲ್ಲದೇ ನಮ್ಮ ಇಡೀ ಜೀವನವನ್ನು ಸಮರ್ಪಣೆ ಮಾಡಿದರೂ ಕಡಿಮೆಯೇ ಸರಿ.. ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಅನುವ್ಯಾಖ್ಯಾನಕ್ಕೆ ವಿಸ್ತೃತವಾದ ಮೇರುಗ್ರಂಥ ಶ್ರೀಮನ್ಯಾಯಸುಧಾ ವನ್ನು ದಯಪಾಲಿಸಿದವರಲ್ಲದೆ 18 ಟೀಕಾ ಗ್ರಂಥಗಳು,  ಹಾಗೂ 3 ಸ್ವಂತಂತ್ರ್ಯ ಗ್ರಂಥಗಳು ರಚನೆ ಮಾಡಿದ್ದಲ್ಲದೇ ಕನ್ನಡದಲ್ಲಿಯೂ ಕೃತಿರಚನೆ ಮಾಡಿದರೆಂದು ತಿಳಿದು ಬರ್ತದೆ... ಶ್ರೀಮದಾಚಾರ್ಯರ ಪ್ರೀತಿಯ ಶಿಷ್ಯರಾದ ಅಕ್ಷೋಭ್ಯತೀರ್ಥರ ಮುದ್ದು ಕಂದರೂ, ಶ್ರೀ ವಿದ್ಯಾಧಿರಾಜರ ಪರಮಪೂಜ್ಯ ಗುರುಗಳು ಆದ  ನಮ್ಮ ಗುರುಗಳು ಇಂದಿಗೂ ಭಕ್ತರನು ಸಲಹುತ್ತಿದ್ದಾರೆ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ...


ವರ್ಣಿಸಲಳವೇ ಗುಣಸಾಂದ್ರನ

ಕರ್ಣಜನಕ ಕೋಟಿ ತೇಜ

ಶ್ರೀಶಭಜಕ ಜಯಮುನೀಂದ್ರನ 

ಎಂದು ಶ್ರೀಮಚ್ಚಂದ್ರಿಕಾಚಾರ್ಯರು ಸ್ತುತಿಸಿದ ಪರಿ ಅತ್ಯಂತ ಮನೋಜ್ಞವಾದರೆ...


ಜ ಯೆಂದು ನುಡಿಯಲು ಜಯಶೀಲನಾಗುವ

ಯ ಯೆಂದು ನುಡಿಯಲು ಯಮನಂಜುವ

ತೀ ಯೆಂದು ನುಡಿದರೆ ತಿಮಿರಪಾತಕ ಹಾನಿ

ರ್ಥ ಯೆಂದು ನುಡಿದರೆ ತಾಪತ್ರಯ ಪರಿಹಾರ // 

ಎಂದು ನಮ್ಮ ಚಿಪ್ಪಗಿರಿ ವಾಸಿಗಳು ಶ್ರೀ ವಿಜಯ ಪ್ರಭುಗಳು ಸ್ತುತಿಸಿದ್ದಾರೆ... 

ಹೀಗೆ ನಮ್ಮ  ಹರಿದಾಸರೆಲ್ಲರೂ ಸ್ತುತಿಸಿದ್ದನ್ನು, ಆರಾಧಿಸಿದ್ದನ್ನು ಅವರ ಪದಗಳಲ್ಲಿ ನಾವು ಕಾಣುತ್ತೇವೆ.

ಶ್ರೀಮದಾಚಾರ್ಯರ ಪರಮಾನುಗ್ರಹ ಪಾತ್ರರಾದ ಶ್ರೀಮಟ್ಟೀಕಾಕೃತ್ಪಾದರ ಆರಾಧನೆ ಇಂದಿನಿಂದ ಮೂರುದಿನ. ಈ ಮಹಾ ಪರ್ವದಿನಗಳಲ್ಲಿ ಅವರ ಪರಮ ಪರಮ ಅನುಗ್ರಹ ಸದಾ ನಮ್ಮ ಸಮೂಹದಲಿ ಎಲ್ಲಾ ಸಜ್ಜನರಿಗೂ ಆಗಲೆಂದು ಅವರಲ್ಲಿ ಭಕ್ತಿಯಿಂದ  ಪ್ರಾರ್ಥನೆ ಮಾಡುತ್ತಾ...

ನಾದನೀರಾಜನದಿಂ ದಾಸಸುರಭಿ

***


No comments:

Post a Comment