ಶ್ರೀಕುಂಡಲಗಿರಿಸೂರಿಗಳು ರಚಿಸಿದ ಶ್ರೀಮನ್ಯಾಯಸುಧಾಟಿಪ್ಪಣಿಯ ಮಂಗಳಾಚರಣ ಪದ್ಯಗಳು
ಶ್ರಿಯಃಕಾಂತಂ ಸಮ್ಯಗ್ ಗುಣಜಲನಿಧಿಂ ವೀತಕಲುಷಂ
ಜಗಜ್ಜನ್ಮಸ್ಥೇಮಪ್ರಭೃತಿದಮಾಮ್ನಾಯ ವಿದಿತಮ್ |
ಸದಾ ಸೇವ್ಯಂ ಸದ್ಭಿರ್ಹೃದಯಕಮಲೇ ಭಾನುಸದೃಶಂ
ಭಜೇ ದೇವಂ ನಾರಾಯಣಮಮಲಸೌಖ್ಯೋನ್ನತಿಕರಮ್ ||
ಯೇನಾಮ್ನಾಯಗಣಾಃ ಸುಖಾವಗತಯೇ ವ್ಯಸ್ತಾಃ ಪುರಾಣಂ ರವಿಃ
ಯಸ್ಮಾದಾವಿರಭೂತ್ತದರ್ಥಮಿತಯೇ ಸದ್ಬ್ರಹ್ಮಸೂತ್ರಂ ಮಹತ್ |
ಯೇನಾಕಾಶಿ ಪರಂ ಚ ತತ್ವಮಪರಂ ಧ್ವಾಂತಂ ನಿರಸ್ತಂ ಮುಹುಃ
ಸ ವ್ಯಾಸೋಽಸ್ತು ಹೃದಬ್ಜಗೋ ಮಮ ಸದಾ ಶ್ರೀಮಾನ್ಸುಬೋಧಾಕೃತಿಃ ||
ಅವ್ಯಾಜಕರುಣಾಸಿಂಧುರ್ಬಂಧುಃ ಸರ್ವಸತಾಂ ಗುರುಃ |
ಸ್ವಾಮೀ ಚ ವಾಜಿವದನಃ ಪ್ರೀಯತಾಂ ಚಿತ್ಸುಖಾಕೃತಿಃ ||
ಯೇನಾಜ್ಞಾನತಮೋನಿರಸ್ತಮಖಿಲಂ ಹೃದ್ದೇಶಗಂ ಗೋಗಣೈಃ
ತ್ರೈಯ್ಯಂತಾ ಸುಜನಾಶ್ಜ ಸೂತ್ರನಿಚಯಃ ಪದ್ಮಂ ಸಮುಜ್ಜೃಂಭಿತಮ್ |
ನಿರ್ದೋಷಾಖಿಲಪೂರ್ಣಸದ್ಗುಣಗಣೋ ನಾರಾಯಣಃ ಖ್ಯಾಪಿತಃ
ತಂ ವಂದೇ ಸುಮನೋಗುರುಂ ಮುನಿವರಂ ಶ್ರೀಮಧ್ವಭಾನುಂ ಸದಾ ||
ಪೀತ್ವಾ ಸುಧಾಂ ಯದೀಯಾಂ ತು ಸತ್ಸಂಪತ್ಯಾ ಸಮಾಸತೇ |
ವಿದ್ವಜ್ಜನಾ ನಿಸ್ಸಪತ್ನಂ ತಂ ಜಯಾರ್ಯಂ ಭಜೇಽನ್ವಹಮ್ ||
ಯತ್ಪ್ರಣೀತಪ್ರಬಂಧೇನ ಭಿದುರೇಣ ವಿಪಶ್ಚಿತಃ |
ಭೇತ್ತಾರೋ ವಾದಿಗೋತ್ರಾಣಾಂ ಸೇವೇ ತಂ ವ್ಯಾಸಯೋಗಿನಮ್ ||
ಸ್ವಾದಿಮಾನಂ ಸುಧಾಯಾ ಯಃ ಸಮ್ಯಗ್ ಜ್ಞಾಪಿತವಾನ್ ಭುವಿ |
ರಾಮಚಂದ್ರಗುರುಂ ನೌಮಿ ವಿದ್ವನ್ಮುಕುಟಮಂಡನಮ್ ||
ಸಭಾಸು ಜಯಸಂಪನ್ನಂ ಸರ್ವಶಾಸ್ತ್ರೇಷು ಕೋವಿದಮ್ |
ಲಕ್ಷ್ಮೀನಾಥಮುನಿಂ ಶಾಂತಂ ಮಮ ದೇಶಿಕಮಾಶ್ರಯೇ ||
ಸಂತೋ ಮಯಿ ಮಹಾತ್ಮಾನಃ ಶಾಸ್ತ್ರೇ ಸಂತು ದಯಾಲವಃ |
ಮದೀಯದೋಷಾನ್ವಿಸ್ಮೃತ್ಯ ಭಕ್ತಿಲೇಶೇನ ತೋಷಿತಾಃ ||
ವ್ಯಾಸತೀರ್ಥಪದಾಂಭೋಜಭಕ್ತಿಪೂರ್ಣೇನ ಧೀಮತಾ |
ಸೌಂದರ್ಯರಾಜಸನ್ನಾಮ್ನಾ ಪಂಡಿತೇನಾನುಮೋದಿತಃ ||
ಕುಂಡಲಾದಿಗಿರಿಃ ಸೂರಿಃ ಕೋಂಡಿಭಟ್ಟತನೂದ್ಭವಃ |
ಲಕ್ಷ್ಮೀನಾಥಮುನೇಃ ಶಿಷ್ಯೋ ವ್ಯಾಕರೋಮಿ ಸುಧಾಮಿಮಾಮ್ ||
ಯದ್ಯಪ್ಯೇಷಾ ಸುಧಾ ಪೂರ್ವದೇಶಿಕೈಸ್ತು ಪ್ರಪಂಚಿತಾ |
ತಥಾಪಿ ಸುಖಬೋಧಾರ್ಥಂ ಮಮಾಯಂ ಸಫಲಃ ಶ್ರಮಃ ||
*****
ಶ್ರೀಗುರುಭ್ಯೋ ನಮಃ
ಶ್ರೀಮದಾಚಾರ್ಯರ ಶ್ರೇಷ್ಠ ವಿದ್ಯಾಸಿಂಹಾಸವಾದ ಶ್ರೀವ್ಯಾಸರಾಜ ಮಠದ ಗೃಹಸ್ಥ ಟಿಪ್ಪಣೀಕಾರರ ಪರಂಪರೆಯಲ್ಲಿ ಮಿನುಗುವ ನಕ್ಷತ್ರದಂತಿರುವ ಮಹಾನುಭಾವರೇ ಶ್ರೀಕುಂಡಲಗಿರಿ ಸೂರಿಗಳು, ಮೂಲತಃ ಬೇಲೂರಿನವರಾದ ಕೋಂಡಿಭಟ್ಟರೆಂಬ ವಿದ್ವಾಂಸರ ಪುತ್ರರಾದ ಇವರು ವ್ಯಾಸತ್ರಯಟಿಪ್ಪಣೀಕಾರರಾದ ಶ್ರೀಲಕ್ಷ್ಮೀನಾಥತೀರ್ಥ ಶ್ರೀಪಾದಂಗಳವರಲ್ಲಿ ಶಾಸ್ತ್ರಾಭ್ಯಾಸವನ್ನು ನಡೆಸಿ, ಉದ್ದಾಮ ಪಂಡಿತರೆನಿಸಿ ಪಾಠ-ಪ್ರವಚನವನ್ನು ನಡೆಸುವುದು ಮಾತ್ರವಲ್ಲದೆ ಶ್ರೀಮನ್ಯಾಯಸುಧಾ, ನ್ಯಾಯಾಮೃತ, ಮೊದಲಾದ ಗ್ರಂಥಗಳಿಗೆ ಶ್ರೇಷ್ಠವಾದ ವ್ಯಾಖ್ಯಾನಗಳನ್ನು ರಚಿಸಿರುವರು, ಭಟ್ಟೋಜಿದೀಕ್ಷಿತರ, ಅಪ್ಪಯ್ಯದೀಕ್ಷಿತರ ಕೃತಿಗಳನ್ನು ಖಂಡಿಸಿ ಆಚಾರ್ಯರ ಸಿದ್ಧಾಂತವನ್ನು ಸ್ಥಾಪಿಸಿದ ಮಹನೀಯರು, ಶ್ರೀವ್ಯಾಸರಾಯರ ಅವತಾರಿಗಳಾದ ಶ್ರೀಮಂತ್ರಾಲಯ ಪ್ರಭುಗಳ ಸಮಕಾಲೀನರು, ತಮ್ಮ ಜೀವನವನ್ನೇ ಶ್ರೀಮದಾಚಾರ್ಯರ ಸಿದ್ಧಾಂತಸೇವೆಗೆ ಮುಡಿಪಾಗಿಟ್ಟ ಶ್ರೀಆಚಾರ್ಯರ ಆರಾಧನೆಯ ಪರ್ವಕಾಲದಲ್ಲಿ ಅವರಿಗೆ ಅನೇಕ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸೋಣ 28 jan 2021
******
No comments:
Post a Comment