Wednesday 1 December 2021

ಸೂರ್ಯಾಷ್ಟಕಮ್ SURYASHTAKAM




ಸೂರ್ಯಾಷ್ಟಕಮ್


ಆದಿದೇವ ನಮಸ್ತುಭ್ಯಂ ಪ್ರಸೀದಮಮ ಭಾಸ್ಕರ |

ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋsಸ್ತು ತೇ ||೧||


ಭಾವಾರ್ಥ:-ಹೇ!ಆದಿದೇವನಾಗಿರುವ ಭಾಸ್ಕರನೇ;ನಿನಗಿದೋ ಪ್ರಣಾಮಗಳು.ನೀನು ನನ್ನ ಬಗ್ಗೆ ಪ್ರಸನ್ನನಾಗು. ಹೇ! ದಿವಾಕರನೇ;ನಿನಗೆ ನನ್ನ ನಮಸ್ಕಾರಗಳು. ಎಲೈ ಪ್ರಭಾಕರನೇ; ನಿನಗೆ ನನ್ನ ನಮನಗಳು.


ಸಪ್ತಾಶ್ವ ರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಮ್ |

ಶ್ವೇತಂ ಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೨||


ಭಾವಾರ್ಥ:-ಏಳು ಕುದುರೆಗಳುಳ್ಳ ರಥವನ್ನೇರಿದವನೂ, ಅಪ್ರತಿಮ ತೇಜಸ್ವೀಯೂ, ಹಸ್ತದಲ್ಲಿ ಶ್ವೇತಕಮಲವನ್ನು ಧರಿಸಿರುವವನೂ,ಕಶ್ಯಪ ತನಯನೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.


ಲೋಹಿತಂ ರಥಮಾರೂಢಮ್ ಸರ್ವಲೋಕ ಪಿತಾಮಹಮ್ |

ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೩||


ಭಾವಾರ್ಥ:-ಕೆಂಬಣ್ಣದ ರಥವನ್ನೇರಿದನೂ, ಸಮಸ್ತ ಲೋಕಗಳ ಪಿತಾಮಹನೂ, ಮಹಾಪರಾಧಗಳನ್ನು ಪರಿಹರಿಸುವಾತನೂ,ಭಗವಂತನೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.


ತ್ರೈಗುಣ್ಯಂ ಚ ಮಹಾಶೂರಂ ಬ್ರಹ್ಮವಿಷ್ಣುಮಹೇಶ್ವರಂ |

ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೪||


ಭಾವಾರ್ಥ:-ಸತ್ವ,ರಜ,ತಮೋಗುಣಗಳೆಂಬ ಮೂರು ಗುಣಗಳುಳ್ಳಾತನೂ,ಬ್ರಹ್ಮ,ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿ ರೂಪನೂ, ಮಹಾಪರಾಧಗಳ ಪರಿಹಾರಕನೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.


ಬೃಂಹಿಂತಂ ತೇಜ: ಪುಂಜಂ ಚ ವಾಯುಮಾಕಾಶಮೇವ ಚ |

ಪ್ರಭುಂ ಚ ಸರ್ವ ಲೋಕಾನಾಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೫||


ಭಾವಾರ್ಥ:-ಬೃಹತ್ತಾಗಿರುವ ಕಾಂತಿಯ ಸಮೂಹವೇ ಆಗಿರುವವನೂ, ವಾಯ್ವಾಕಾಶರೂಪಿಯೂ, ಸಮಸ್ತ ಲೋಕಾಧಿಪತಿಯೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.


ಬಂಧೂಕ ಪುಷ್ಪಸಂಕಾಶಂ ಹಾರಕುಂಡಲ ಭೂಷಿತಮ್ |

ಏಕ ಚಕ್ರಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೬||


ಭಾವಾರ್ಥ:-ಕೆಂಬಣ್ಣದ ದಾಸವಾಳ ಪುಷ್ಪದಂತೆ ಪ್ರಕಾಶ ಹೊಂದಿರುವಾತನೂ, ಕಂಠಾಭರಣ, ಕಿವಿಯಾಭರಣಗಳಿಂದ  ಅಲಂಕೃತಗೊಂಡವನೂ, ಏಕಚಕ್ರಧಾರಿಯೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.


ತಂ ಸೂರ್ಯಂ ಜಗತ್ಕರ್ತಾರಂ ಮಹಾತೇಜ: ಪ್ರದೀಪನಮ್ |

ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೭||


ಭಾವಾರ್ಥ:-ಜಗತ್ತಿನ ನಿರ್ಮಾಪಕನೂ ಬೃಹತ್ತಾಗಿರುವ ತೇಜೋ ರಾಶಿಯಿಂದ ಪ್ರಕಾಶಿಸುತ್ತಿರುವವನೂ, ಮಹಾಪರಾಧಗಳ ಪರಿಹಾರಕನೂ ಆಗಿರುವ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.


ತಂ ಸೂರ್ಯ ಜಗತಾಂ ನಾಥಂ ಜ್ಞಾನವಿಜ್ಞಾನ ಮೋಕ್ಷದಮ್ |

ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ||೮||


ಭಾವಾರ್ಥ:-ಆ ಸೂರ್ಯನು ವಿಶ್ವಕ್ಕೆ ಅಧಿಪತಿಯು.ಜ್ಞಾನ-ವಿಜ್ಞಾನ-ಮೋಕ್ಷಗಳನ್ನು ದಯಪಾಲಿಸುವವನೂ ಮಹಾಪರಾಧಗಳ ಪರಿಹಾರಕನೂ ಆಗಿರುವವನು. ಅಂತಹಾ ಸೂರ್ಯದೇವನಿಗೆ ನಾನು ನಮಸ್ಕರಿಸುವೆನು.

***********************

  || ಇತಿ ಶ್ರೀ ಸೂರ್ಯಾಷ್ಟಕಮ್ ||  || ಈ ರೀತಿಯಾಗಿ ಶ್ರೀ ಸೂರ್ಯಾಷ್ಟಕಗಳ ಭಾವಾರ್ಥವಾಗಿದೆ ||

***




ಸೂರ್ಯ ಅಷ್ಟಕವು ಭಗವಾನ್ ಸೂರ್ಯನಿಗೆ ಅರ್ಪಿತವಾದ ವೇದ ಗ್ರಂಥವಾದ ಸಾಂಬಾ ಪುರಾಣದಲ್ಲಿದೆ. ಇದು ಸೂರ್ಯನ ವಿಭಿನ್ನ ಲಕ್ಷಣಗಳನ್ನು ಹೊಗಳುವ 8 ಪದ್ಯಗಳನ್ನು ಒಳಗೊಂಡಿದೆ. ಈ ಸ್ತೋತ್ರವನ್ನು ಪ್ರತಿದಿನ ಜಪಿಸುವುದರಿಂದ ಗ್ರಹದಿಂದ ಅಥವಾ ಇತರ ಗ್ರಹಗಳಿಂದ ಯಾವುದೇ ದುಷ್ಟ ಪ್ರಭಾವಗಳನ್ನು ತೆಗೆದುಹಾಕಬಹುದು, ಬಡವರು ಶ್ರೀಮಂತರಾಗಬಹುದು ಮತ್ತು ಮಕ್ಕಳಿಲ್ಲದವರು ಮಕ್ಕಳನ್ನು ಹೊಂದಬಹುದು ಎಂದು ಸ್ತೋತ್ರದ ಫಲಪ್ರದ ಭಾಗದಲ್ಲಿ ಹೇಳಲಾಗಿದೆ. ಇದಲ್ಲದೆ, ಸೂರ್ಯನಿಗೆ ಮೀಸಲಾದ ದಿನದಂದು, ಕೊಬ್ಬಿನ ಆಹಾರಗಳು, ಆಲ್ಕೋಹಾಲ್ ಮತ್ತು ಮಾಂಸವನ್ನು ಮುಟ್ಟದ ಮಹಿಳೆಯರಿಗೆ ಕಾಯಿಲೆ, ದುಃಖ ಅಥವಾ ಬಡತನದಿಂದ ಮುಟ್ಟಲಾಗುವುದಿಲ್ಲ ಮತ್ತು ಅಂತಿಮವಾಗಿ ಸೂರ್ಯನ ಪ್ರವೇಶವನ್ನು ಹೊಂದಿರುತ್ತದೆ.

Surya Ashtakam in Kannada – ಶ್ರೀ ಸೂರ್ಯಾಷ್ಟಕಂ

ಸಾಂಬ ಉವಾಚ |

 
ಆದಿದೇವ ನಮಸ್ತುಭ್ಯಂ ಪ್ರಸೀದ ಮಭಾಸ್ಕರ
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಸ್ತುತೇ

ಸಪ್ತಾಶ್ವ ರಧ ಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ
ಶ್ವೇತ ಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ಲೋಹಿತಂ ರಧಮಾರೂಢಂ ಸರ್ವ ಲೋಕ ಪಿತಾಮಹಂ
ಮಹಾಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ತ್ರೈಗುಣ್ಯಂ ಚ ಮಹಾಶೂರಂ ಬ್ರಹ್ಮ ವಿಷ್ಣು ಮಹೇಶ್ವರಂ
ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ಬೃಂಹಿತಂ ತೇಜಸಾಂ ಪುಂಜಂ ವಾಯು ಮಾಕಾಶ ಮೇವಚ
ಪ್ರಭುಂಚ ಸರ್ವ ಲೋಕಾನಾಂ ತಂ ಸೂರ್ಯಂ ಪ್ರಣಮಾಮ್ಯಹಂ

ಬಂಧೂಕ ಪುಷ್ಪ ಸಂಕಾಶಂ ಹಾರ ಕುಂಡಲ ಭೂಷಿತಂ
ಏಕ ಚಕ್ರಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ವಿಶ್ವೇಶಂ ವಿಶ್ವ ಕರ್ತಾರಂ ಮಹಾ ತೇಜಃ ಪ್ರದೀಪನಂ
ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ತಂ ಸೂರ್ಯಂ ಜಗತಾಂ ನಾಧಂ ಜ್ನಾನ ವಿಜ್ನಾನ ಮೋಕ್ಷದಂ
ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ಸೂರ್ಯಾಷ್ಟಕಂ ಪಠೇನ್ನಿತ್ಯಂ ಗ್ರಹಪೀಡಾ ಪ್ರಣಾಶನಂ
ಅಪುತ್ರೋ ಲಭತೇ ಪುತ್ರಂ ದರಿದ್ರೋ ಧನವಾನ್ ಭವೇತ್

ಆಮಿಷಂ ಮಧುಪಾನಂ ಚ ಯಃ ಕರೋತಿ ರವೇರ್ಧಿನೇ
ಸಪ್ತ ಜನ್ಮ ಭವೇದ್ರೋಗೀ ಜನ್ಮ ಕರ್ಮ ದರಿದ್ರತಾ

ಸ್ತ್ರೀ ತೈಲ ಮಧು ಮಾಂಸಾನಿ ಹಸ್ತ್ಯಜೇತ್ತು ರವೇರ್ಧಿನೇ
ನ ವ್ಯಾಧಿ ಶೋಕ ದಾರಿದ್ರ್ಯಂ ಸೂರ್ಯ ಲೋಕಂ ಸ ಗಚ್ಛತಿ

ಇತಿ ಶ್ರೀ ಶಿವಪ್ರೋಕ್ತಂ ಶ್ರೀ ಸೂರ್ಯಾಷ್ಟಕಂ ಸಂಪೂರ್ಣಂ
****



No comments:

Post a Comment