ಕೃಷ್ಣೋತ್ಕøಷ್ಟ ದಯಾಪುಷ್ಟ ಕೃಷ್ಣಾಪತಿ ಸುಹೃತ್‍ಪ್ರಿಯಂ |
ದೃಷ್ಟಾದೃಷ್ಟಪ್ರವಕ್ತಾರಮ್ ಕೃಷ್ಣಾಚಾರ್ಯ ಗುರುಂ ಭಜೇ ||
ಶುಭದಂ ಸೇವಮಾನಾನಾಂ ಅಭಯಪ್ರದಮಥಿನಾಂ |
ಇಭರಾಮಪುರಾಗಾರಂ ಕೃಷ್ಣಾಚಾರ್ಯ ಗುರುಂ ಭಜೇ ||
ರೋಗಾದ್ಯುಪದ್ರವಾರ್ತಾನಾಂ ಭೋಗಾಯತನ ಸೌಖ್ಯದಂ |
ಯೋಗಾಯೋಗಸಮಂ ಶಾಂತಂ ಕೃಷ್ಣಾಚಾರ್ಯ ಗುರುಂ ಭಜೇ||
ಭೂತಪ್ರೇತ ಗ್ರಹಶ್ವೇತ ವಾತ ಪಿತ್ತ ವ್ರಣಾದಯ: |
ಭೀತಾಗಚ್ಛಂತಿ ಯಸ್ಮಾತ್ತಂ ಕೃಷ್ಣಾಚಾರ್ಯ ಗುರುಂ ಭಜೇ ||
ಶ್ರೀಭೂದೇವಗಣೈ: ಪೂಜ್ಯಂ ಶ್ರೀ ಭೂಮಾಧಿಷಾಯುತಂ |
ಭೂಮೀಶಾದೃಷ್ಟವಿಭವಂ ಕೃಷ್ಣಾಚಾರ್ಯ ಗುರುಂ ಭಜೇ ||
ಭರತೀಶಪದದ್ವಂದ್ವ ಸಾರಸ ಭ್ರಮರಾಯಿತಂ |
ಸುರವತ್ಕಾಂತಿಸಂಪನ್ನಂ ಕೃಷ್ಣಾಚಾರ್ಯ ಗುರುಂ ಭಜೇ ||
ಶ್ರೀರಾಘವೇಂದ್ರಚಿತ್ತಜ್ಞಂ ಸಾರಮಾತ್ತವದಾವದಂ |
ದೂರೀಕೃತದುರಾಚಾರಂ ಕೃಷ್ಣಾಚಾರ್ಯ ಗುರುಂ ಭಜೇ ||
ಶಿಷ್ಟೇಷ್ಟಜನಸಂತುಷ್ಟಂ ವೃಷ್ಣೀಶಾಂಘ್ರಿಸಮಾಶ್ರಿತಂ |
ಕಷ್ಟನಾಶಂ ಸ್ವಭಕ್ತಾನಾಂ ಕೃಷ್ಣಾಚಾರ್ಯ ಗುರುಂ ಭಜೇ ||
ಅಷ್ಟಶ್ಲೋಕಮಯೀಂಮಾಲಾಂ ಕೃಷ್ಣಾಚಾರ್ಯ ಸ್ತವಾಭಿದಾಂ |
ಇಷ್ಟಸಿದ್ಧಿಲಬೇತ್ಸದ್ಯೋ ನಿಷ್ಠಯಾಜಪಕೃನ್ನರ ||
ಬಾಲಿಶೇನಕೃತಾಮಾಲಾ ಕಾಲೀನಾಥಪದಾಂಬುಜೇ |
ಲೋಲಷಟ್ಪದವದ್ಭೂಷಾಸ್ಯಾತ್ ಸತಾಂ ಭಜತಾಂ ಮುದೇ ||
|| ಶ್ರೀ ಕೃಷ್ಣಾರ್ಪಣಮಸ್ತು ||
************
ಶ್ರೀ ಇಭರಾಮಪುರ ಅಪ್ಪಾವರ ಅಷ್ಟಕ ಅರ್ಥ ಸಹಿತವಾಗಿ ಬರೆದು ಹಾಕುವ ಪುಟ್ಟ ಪ್ರಯತ್ನ ಶ್ರೀ ಅಪ್ಪಾವರ ದಯೆಇಂದ.
🙏🙏🙏🙏
|| ಶ್ರೀಮದ್ ಇಭರಾಮಪುರ ಕೃಷ್ಣಾರ್ಯಾಷ್ಟಕಮ್ ||
🙇♂🙇♂🙇♂🙇♂
ಕೃಷ್ಣೋತ್ಕಷ್ಟ ದಯಾಪುಷ್ಟ ಕೃಷ್ಣಾಪತಿ ಸುಹೃತ್‍ಪ್ರಿಯಂ |
ದೃಷ್ಟಾದೃಷ್ಟಪ್ರವಕ್ತಾರಮ್ ಕೃಷ್ಣಾಚಾರ್ಯ ಗುರುಂ ಭಜೇ|| |1||
ಶ್ರೀ ಕೃಷ್ಣನ ಶ್ರೇಷ್ಠ ವಾದ ದಯೆ ಇಂದ ಪುಷ್ಟರಾದ, ದ್ರೌಪದಿ ಪತಿಯಾದ ಭೀಮಸೇನ ದೇವರ ಪ್ರೀತಿ ಪಾತ್ರರಾದ, ಭೂತ, ವರ್ತಮಾನ, ಭವಿಷ್ಯತ್, ಗಳನ್ನು ಚೆನ್ನಾಗಿ ತಿಳಿದಿರುವ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏
ಶುಭದಂ ಸೇವಮಾನಾನಾಂ ಅಭಯಪ್ರದಮಥಿನಾಂ |
ಇಭರಾಮಪುರಾಗಾರಂ ಕೃಷ್ಣಾಚಾರ್ಯ ಗುರುಂ ಭಜೇ| ||2||
ಸೇವಿಸುವವರಿಗೆ ಶುಭವನ್ನು ನೀಡುವ,ಬೇಡುವವರಿಗೆ ಅಭಯವನ್ನು ಕೊಡುವ ಇಭರಾಮಪುರ ದಲ್ಲಿ ಇರುವಂತಹ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏🙏🙏
ರೋಗಾದ್ಯುಪದ್ರವಾರ್ತಾನಾಂ ಭೋಗಾಯತನ ಸೌಖ್ಯದಂ |
ಯೋಗಾಯೋಗಸಮಂ ಶಾಂತಂ ಕೃಷ್ಣಾ ಕೃಷ್ಣಾಚಾರ್ಯ ಗುರುಂ ಭಜೇ|| ||3||
ರೋಗವೇ ಮೊದಲಾದ ಉಪದ್ರವ ಗಳಿಂದ ಪೀಡಿತರಾದವರಿಗೆ, ಹೆಚ್ಚಿನ ಸುಖವುಂಟು ಮಾಡುವ ಸುಖದುಃಖಗಳಲ್ಲಿ ಸ್ಥಿತಪ್ರಜ್ಞರಾದ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏🙏🙏
ಭೂತಪ್ರೇತ ಗ್ರಹಶ್ವೇತ ವಾತ
ಪಿತ್ತ ವ್ರಣಾದಯ: |
ಭೀತಾಗಚ್ಛಂತಿ ಯಸ್ಮಾತ್ತಂ ಕೃಷ್ಣಾಚಾರ್ಯ ಗುರುಂ ಭಜೇ|| ||4||
ಭೂತ, ಪ್ರೇತ,ಗ್ರಹ,ತೊನ್ನು, ವಾತ,ಪಿತ್ತ, ವೃಣ, ಮೊದಲಾದವು ಯಾರ ಸ್ಮರಣೆ ಮಾತ್ರದಿಂದ ಹೆದರಿ ಓಡುತ್ತವೆಯೋ ಅಂತಹ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏🙏🙏
ಶ್ರೀಭೂದೇವಗಣೈ: ಪೂಜ್ಯಂ ಶ್ರೀ ಭೂಮಾಧಿಷಣಾಯುತಂ |
ಭೂಮೀಶಾದೃಷ್ಟವಿಭವಂ ಕೃಷ್ಣಾಚಾರ್ಯ ಗುರುಂ ಭಜೇ|| |||5||
ಬ್ರಾಹ್ಮಣರ ಗುಂಪಿನಿಂದ ಪೂಜಿಸಲ್ಪಡುವ, ಅತಿಶಯವಾದ ಪ್ರಜ್ಞೆ ಯುಳ್ಳ ಎಂದರೆ ಬೃಹಸ್ಪತ್ಯಾಚಾರ್ಯರಂತಿರುವ ,ರಾಜ ವೈಭವದಿಂದ ಕೂಡಿರುವ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏
ಭಾರತೀಶಪದದ್ವಂದ್ವ ಸಾರಸ ಭ್ರಮರಾಯಿತಂ |
ಸುರವತ್ಕಾಂತಿಸಂಪನ್ನಂ ಕೃಷ್ಣಾಚಾರ್ಯ ಗುರುಂ ಭಜೇ| |||6||
ಭಾರತೀ ಪತಿಯಾದ ಮುಖ್ಯ ಪ್ರಾಣನ ಪಾದ ಕಮಲಗಳೆರಡರಲ್ಲಿ ದುಂಬಿಯಂತಿರುವ ದೇವತೆಗಳಂತೆ ಪ್ರಕಾಶಮಾನರಾದ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏🙏
ಶ್ರೀರಾಘವೇಂದ್ರಚಿತ್ತಜ್ಞಂ ಸಾರಮಾತ್ರವದಾವದಂ |
ದೂರೀಕೃತದುರಾಚಾರಂ ಕೃಷ್ಣಾಚಾರ್ಯ ಗುರುಂ ಭಜೇ|| ||7|
ಶ್ರೀ ರಾಘವೇಂದ್ರರ ಮನಸ್ಸು ಅರಿತಿರುವ, ಯಥಾರ್ಥ ವಾದುದನ್ನು ಉಪದೇಶಿಸುವ, ದುರಾಚಾರಗಳನ್ನು ದೂರ ಮಾಡುವಂತಹ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏
ಶಿಷ್ಟೇಷ್ಟಜನಸಂತುಷ್ಟಂ ವೃಷ್ಣೀಶಾಂಘ್ರಿಸಮಾಶ್ರಿತಂ |
ಕಷ್ಟನಾಶಂ ಸ್ವಭಕ್ತಾನಾಂ ಕೃಷ್ಣಾಚಾರ್ಯ ಗುರುಂ ಭಜೇ||8||
ಶ್ರೀ ಕೃಷ್ಣನ ಪಾದಗಳನ್ನು ಚೆನ್ನಾಗಿ ಆಶ್ರಯಿಸಿ, ಯೋಗ್ಯರಾದ, ಮತ್ತು ಪ್ರೀತಿ ಪಾತ್ರರಾದ ತಮ್ಮ ಭಕ್ತರ ಕಷ್ಟವನ್ನು ನಾಶಮಾಡಿ, ಸಂತೋಷ ಕೊಡುವ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏🙏🙏
ಅಷ್ಟಶ್ಲೋಕಮಯೀಂಮಾಲಾಂ ಕೃಷ್ಣಾಚಾರ್ಯ ಸ್ತವಾಭಿದಾಂ |
ಇಷ್ಟಸಿದ್ಧಿಲಭೇತ್ಸದ್ಯೋ ನಿಷ್ಠಯಾಜಪಕೃನ್ನರಃ ||
||9||
ಶ್ರೀ ಕೃಷ್ಣಾಚಾರ್ಯರ ಸ್ತೋತ್ರ ವೆನಿಸಿಕೊಂಡ ಎಂಟು ಶ್ಲೋಕ ವುಳ್ಳ ಈ ಮಾಲೆಯನ್ನು ನಿಷ್ಠೆ ಇಂದ ಜಪಿಸುವ ನರನು ಅಲ್ಪಕಾಲದಲ್ಲಿಯೇ ಇಷ್ಟಾರ್ಥ ವನ್ನು ಹೊಂದುತ್ತಾನೆ.
🙏🙏🙏🙏🙏
ಬಾಲಿಶೇನಕೃತಾಮಾಲಾ ಕಾಲೀನಾಥಪದಾಂಬುಜೇ |
ಲೋಲಷಟ್ಪದವದ್ಭೂಷಾಸ್ಯಾತ್ ಸತಾಂ ಭಜತಾಂಮುದೇ ||
||10||
ಬಾಲ ಬುದ್ದಿಯಿಂದ ಮಾಡಲ್ಪಟ್ಟ ಈ ಮಾಲೆಯು,ಕಾಲಿಂದಾದೇವಿಯ ಒಡೆಯನಾದ ಶ್ರೀ ಕೃಷ್ಣನ ಪಾದ ಕಮಲದಲ್ಲಿ ಆಸಕ್ತವಾದ ದುಂಬಿಯಂತೆ,ಸಜ್ಜನರಿಂದ ಧರಿಸಲ್ಪಟ್ಟು ಭಜಿಸುವವರಿಗೆ ಸಂತೋಷವನ್ನು ಉಂಟು ಮಾಡುತ್ತದೆ.
🙏ಶ್ರೀ ಕೃಷ್ಣಾರ್ಪಣಮಸ್ತು🙏
********
Tumba dhanyavadagalu mattu namaskaragalu
ReplyDelete