ಸತ್ಕಾರ್ಯ ಪ್ರತಿಜ್ಞಾ
ಸರ್ವೇಂದ್ರಿಯಾಭಿಮಾನಿ ಶ್ರೀ: ಪ್ರಾಣಸಂಸ್ಥೇನ ವಿಷ್ಣುನಾ |
ಪ್ರೇರಿತ: ಶ್ರೀಶ ತುಷ್ಟ್ಯರ್ಥಂ ಕರಿಷ್ಯೇ ಕರ್ಮಚಾಖಿಲಮ್ ||೧||
ನಮೋವಸಾತ್ವಿಕಾ ದೇವಾ ವಿಷ್ಣು ಭಕ್ತಿಪರಾಯಣಾ: |
ಧರ್ಮಮಾರ್ಗೇ ಪ್ರೇರಯಂತು ಭವಂತ: ಸರ್ವ ಏವ ಹಿ ||೨||
ಉತ್ಪತ್ತಿಸ್ಥಿತಿ ಸಂಹಾರ ನಿಯತಿರ್ಜ್ಞಾನಮಾವೃತಿ: |
ಬಂಧಮೋಕ್ಷೌಚ ಪುರುಷಾದ್ ಯಸ್ಮಾತ್ ಸ ಹರಿರೇಕರಾಟ್ ||೩||
ತತ್ರ ತತ್ರ ಸ್ಥಿತ: ಸ್ವಾಮೀ ತತ್ತಚ್ಛಕ್ತೀ:ಪ್ರಬೋಧಯನ್ |
ಏಕ ಏವ ಮಹಾಶಕ್ತಿ: ಕುರುತೇ ಸರ್ವಮಂಗಲಾಮ್ ||೪||
ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ |
ಯದನುಗ್ರಹಿತ: ಸಂತಿ ನ ಸಂತಿ ಯದುಪೇಕ್ಷಯಾ ||೫||
ಸ್ವಾಮಿನ್ ಭಕ್ತೋsಸ್ಮಿ ತೇ ನಿತ್ಯಂ ಪ್ರಿಯಂತೇ ಕರವಾಣ್ಯಹಮ್ |
ಅಪ್ರಿಯೇ ಭವತೋ ನಾಥ ಮಾಯಾನ್ಮೇ ಮನ ಆದಿಕಮ್ ||೬||
ಪ್ರಾತ:ಪ್ರಭೃತಿ ಸಾಯಾಂತಂ ಸಾಯಾದಿ ಪ್ರಾತರಂತತ: |
ಯತ್ ಕರೋಮಿ ಜಗನ್ನಾಥ ತದಸ್ತು ತವ ಪೂಜನಮ್ ||೭||
ಶರೀರ ಚೇಷ್ಟಾಪಿ ಮಮ ಪ್ರಣಾಮ: |
ಸ್ತುತಿಸ್ತುವಾಗಿಂದ್ರಿಯ ವೃತ್ತಿರಸ್ತು ||
ಸರ್ವಾತ್ಮನೋ ವೃತ್ತಿರನುಸ್ಮೃತಿಸ್ತೇ |
ಸರ್ವಂ ತ್ವದಾರಾಧನಮೇವ ಭೂಯಾತ್ ||೮||
|| ಇತಿ ಸತ್ಕಾರ್ಯ ಪ್ರತಿಜ್ಞಾ || ||
**********
ಸತ್ಕಾರ್ಯ ಪ್ರತಿಜ್ಞಾ
1.ಭಾವಾರ್ಥ:-ಸಮಸ್ತ ಇಂದ್ರಿಯಗಳ ಅಭಿಮಾನಿ ದೇವತೆಯಾದ ಲಕ್ಷ್ಮಿ ಮತ್ತು ಪ್ರಾಣಶಕ್ತಿಯಾಗಿರುವ ವಿಷ್ಣುವಿನ ಪ್ರೇರಣೆಗೆ ಒಳಗಾಗಿ ನನ್ನೆಲ್ಲಾ ಕಾರ್ಯಗಳನ್ನು ಆ ಭಗವಂತನ ಪ್ರೀತಿಗೋಸ್ಕರವಾಗಿ ಮಾಡುವೆ.
2.ಭಾವಾರ್ಥ:-ಶ್ರೀಹರಿಯ ಭಕ್ತಿಯಲ್ಲಿ ತಲ್ಲೀನರಾಗಿರುವ ತತ್ವಾಭಿಮಾನಿ ದೇವಾನುದೇವತೆಗಳೇ ನಿಮಗಿದೋ ನನ್ನ ನಮಸ್ಕಾರಗಳು. ನೀವೆಲ್ಲರೂ ನಾನು ಧರ್ಮಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಿರಿ.
3.ಭಾವಾರ್ಥ:-ಸೃಷ್ಟಿ,ಸ್ಥಿತಿ,ಲಯಾದಿ ಲೋಕ ನಿಯಮಗಳಿಗೆ,ಜ್ಞಾನಾಜ್ಞಾನ, ಬಂಧನ ಹಾಗೂ ಮುಕ್ತಿಗಳಿಗೆ ಯಾರು ಕಾರಣರಾಗುವರೋ ಅಂತಹಾ ಶ್ರೀಹರಿಯು ಚಕ್ರವರ್ತಿಯಂತಿರುವನು.
4.ಭಾವಾರ್ಥ:-ಎಲ್ಲೆಂದರಲ್ಲಿ ವ್ಯಾಪಿಸಿರುವ ಆ ದೊರೆಯು ಆಯಾಯ ಶಕ್ತಿಗಳನ್ನು ಉದ್ದೀಪನಗೊಳಿಸುತ್ತಾ ತಾನು ಏಕಮೇವ ಮಹಾಶಕ್ತಿಯಾಗಿ ಸಮಸ್ತ ಶುಭವನ್ನು ಮಾಡುವನು.
5.ಭಾವಾರ್ಥ:-ವಸ್ತು,ಕ್ರಿಯೆ,ಕಾಲ,ಸ್ವಭಾವ ಹಾಗೂ ಜೀವ ಇವೆಲ್ಲವೂ ದೈವಾನುಗ್ರಹವಿದ್ದರೆ ಮಾತ್ರಾ ಅಸ್ಥಿತ್ವದಲ್ಲಿರುತ್ತವೆ. ದೈವಾನುಗ್ರಹವಿಲ್ಲದಿದ್ದರೆ ಯಾವುದೂ ಇರುವುದಿಲ್ಲ.
6.ಭಾವಾರ್ಥ:-ಸ್ವಾಮಿ ಪರಮಾತ್ಮನೇ;ನಾನು ನಿನ್ನ ಭಕ್ತನಿರುವೆ. ಅನುದಿನವೂ ನಿನಗೆ ಪ್ರಿಯವಾದ ಕಾರ್ಯಗಳನ್ನು ಮಾಡಬೇಕಾಗಿದೆ. ದೊರೆಯೇ, ಆದಕಾರಣ ನನ್ನ ಮನಸ್ಸು ಹಾಗೂ ಇಂದ್ರಿಯಾದಿಗಳು ಯಾವತ್ತೂ ನಿನಗೆ ಅಪ್ರಿಯವೆನಿಸುವಂತಹಾ ಕಾರ್ಯಗಳಲ್ಲಿ ತೊಡಗದಿರಲಿ.
7.ಭಾವಾರ್ಥ:-ಜಗದೊಡೆಯನೇ!ಮುಂಜಾನೆಯಿಂದ ಸಂಜೆಯವರೆಗಿನ ಹಗಲು ಹೊತ್ತಿನಲ್ಲಿ ಹಾಗೂ ಸಂಜೆಯಿಂದ ಮುಂಜಾನೆ ತನಕದ ರಾತ್ರಿ ಕಾಲದಲ್ಲಿ ನನ್ನಿಂದ ಏನೇನು ಕಾರ್ಯಗಳು ಮಾಡಲ್ಪಡುತ್ತವೆಯೋ ಅವೆಲ್ಲವೂ ನಿನ್ನ ಆರಾಧನೆಯಾಗಿರಲಿ.
8.ಭಾವರ್ಥ:-ಈ ನನ್ನ ದೇಹದ ಅಂಗಚಲನೆಗಳೆಲ್ಲವೂ ನಾನು ಮಾಡುವ ನಿನ್ನ ಸ್ತುತಿಗಳಾಗಲಿ.ನನ್ನೀ ನಾಲಿಗೆಯಿಂದಾಡುವ ನುಡಿಗಳೆಲ್ಲವೂ ನಿನ್ನ ಪ್ರಶಂಸೆಗಳಾಗಲಿ. ನನ್ನ ಸರ್ವಾವಯವಗಳ ಕಾರ್ಯಗಳೆಲ್ಲವೂ ನಿನ್ನ ಸ್ಮರಣೆಗಳಾಗಲಿ. ಈ ರೀತಿಯಾಗಿ ನಾನು ದಿನ ಪೂರ್ತಿ ಮಾಡುವ ಸಮಸ್ತ ಕರ್ಮಗಳು ನಿನ್ನಾರಾಧನೆಯಾಗಿರಲಿ.
|| ಇತಿ ಸತ್ಕಾರ್ಯ ಪ್ರತಿಜ್ಞಾ || ||
*******
No comments:
Post a Comment