Tuesday, 1 October 2019

ಶಿವ ಪಂಚಾಕ್ಷರಿ ಮಂತ್ರ shiva panchakshari mantra


ಪಂಚಾಕ್ಷರಿ ಶಿವ ಮಂತ್ರ 

- "ಓಂ ನಮಃ ಶಿವಾಯ" - ಶಿವನಿಗೆ ಹೆಚ್ಚು ಅರ್ಪಿತವಾಗಿರುವ ಪವಿತ್ರ ಮಂತ್ರವಾಗಿದೆ. ಶಿವನಿಗೆ ನಾನು ವಂದಿಸುತ್ತೇನೆ ಎಂಬ ಅರ್ಥವನ್ನು ಇದು ಒಳಗೊಂಡಿದೆ. ನಿಮ್ಮ ದೇಹ ಮತ್ತು ಆತ್ಮವನ್ನು ಶುದ್ಧೀಕರಿಸಿ, ದೇವರ ವರವನ್ನು ಪಡೆದುಕೊಳ್ಳಲು ನಿತ್ಯವೂ ಇದನ್ನು 108 ಬಾರಿ ಪಠಿಸಬೇಕು.

ರುದ್ರ ಮಂತ್ರ

"ಓಂ ನಮೋ ಭಗವತೇ ರುದ್ರಾಯ"

ಶಿವನನ್ನು ಬಹುಬೇಗನೇ ಒಲಿಸಿಕೊಳ್ಳಲು ಈ ಮಂತ್ರ ಸಹಕಾರಿಯಾಗಿದೆ. ಶಿವನ ಕರುಣೆಯಿಂದ ನಿಮ್ಮ ಅಭಿಲಾಶೆ ಈಡೇರುವಂತಾಗಲು ಈ ಮಂತ್ರವನ್ನು ಪಠಿಸಿ.

ಶಿವ ಗಾಯತ್ರಿ ಮಂತ್ರ


"ಓಂ ತತ್ಪುರುಷಾಯ ವಿದ್‌ಮಹೇ

ಮಹಾ ದೇವಾಯ ಧೀಮಹಿ
ತನ್ನೋ ರುದ್ರಾ ಪ್ರಚೋದಯಾತ್"

ಗಾಯತ್ರಿ ಮಂತ್ರ ಮೂಲ ಸ್ವರೂಪದಲ್ಲಿದೆ. ಹಿಂದೂ ಧರ್ಮದಲ್ಲಿ ಹೆಚ್ಚು ಶಕ್ತಿಶಾಲಿ ಮಂತ್ರವಾಗಿದೆ. ಶಿವ ಗಾಯತ್ರಿ ಮಂತ್ರ ಕೂಡ ಹೆಚ್ಚು ಪ್ರಬಲವಾಗಿದೆ. ಶಿವನನ್ನು ಒಲಿಸಿಕೊಳ್ಳಲು ಮತ್ತು ಸಮಾಧಾನಕ್ಕಾಗಿ ಮಂತ್ರವನ್ನು ಪಠಿಸಿ.

ಶಿವ ಧ್ಯಾನ ಮಂತ್ರ

ಕರಾಚರಾನಕೃತಮ್ ವಾ ಕಾಯಜಂ ಕರ್ಮಜಂ ವಾ ಶ್ರವಾಣ್ಯಜ್ಞಂ ವಾ ಮಾನಸಂ ವಾ ಪರಧಂ

ವಿಹಿತಂ ವಿಹಿತಂ ವಾ ಸರ್ವ ಮೆತಾತ್ ಕ್ಷಮಸವ ಜಯ ಜಯ ಕರುಣಾಭ್ದೆ ಶ್ರೀ ಮಹಾದೇವ ಶಂಭೋ

ಶಿವನನ್ನು ಧ್ಯಾನಿಸಲು ಈ ಮಂತ್ರವನ್ನು ಪಠಿಸಿ. ನಾವು ಮಾಡಿರುವ ಎಲ್ಲಾ ಪಾಪಾ ಕಾರ್ಯಗಳಿಂದ ಇದು ಸಂರಕ್ಷಣೆಯನ್ನು ಮಾಡುತ್ತದೆ. ನಿಮ್ಮ ಆತ್ಮವನ್ನು ಶುದ್ಧೀಕರಿಸಲು ಈ ಮಂತ್ರವನ್ನು ಪಠಿಸಿ.

Pushpa Achar.
*******

No comments:

Post a Comment