Tuesday 1 October 2019

ಶ್ರೀಪಶುಪತ್ಯಷ್ಟಕಮ್ ಪಂಡಿತ ಪೃಥಿವೀಪತಿ ವಿರಚಿತಮ್ pashupatyashtakam pashupati ashtakam


ಶ್ರೀಪಶುಪತ್ಯಷ್ಟಕಮ್ 

ಪಶುಪತಿಂದುಪತಿಂ ಧರಣೀಪತಿಂ |
ಭುಜಗಲೋಕಪತಿಂ ಚ ಸತೀಪತಿಮ್ ||
ಪ್ರಣತ ಭಕ್ತಾರ್ತಿಹರಂ ಪರಂ|
ಭಜರೇ ಮನುಜಾ ಗಿರಿಜಾಪತಿಮ್  ||೧||

ನ ಜನಕೋ ಜನನೀ ನ ಚ ಸೋದರೋ |
ನ ತನಯೋ ನ ಚ ಭೂರಿಬಲಮ್ ಕುಲಮ್ ||
ಅವತಿ ಕೋsಪಿ ನ ಕಾಲವಶಮ್ ಗತಮ್ |
ಭಜರೇ ಮನುಜಾ ಗಿರಿಜಾಪತಿಮ್  ||೨||

ಮುರಜಡಿಂಡಿಮ ವಾದ್ಯ ವಿಲಕ್ಷಣಂ |
ಮಧುರ ಪಂಚಮನಾದ ವಿಶಾರದಮ್ ||
ಪ್ರಮಥ ಭೂತ ಗಣೈರಪಿ ಸೇವಿತಂ |
ಭಜರೇ ಮನುಜಾ ಗಿರಿಜಾಪತಿಮ್  ||೩||

ಶರಣದಂ ಸುಖದಂ ಶರಣಾನ್ವಿತಂ |
ಶಿವ ಶಿವೇತಿ ಶಿವೇತಿ ನತಂ ನೃಣಾಮ್ ||
ಅಭಯದಂ ಕರುಣಾವರುಣಾಲಯಂ |
ಭಜರೇ ಮನುಜಾ ಗಿರಿಜಾಪತಿಮ್  ||೪||

ನರಶಿರೋರಚಿತಂ ಮಣಿಕುಂಡಲಂ
ಭುಜಗಹಾರಮುದಂ ವೃಷಭ ಧ್ವಜಮ್ ||
ಚಿತಿರಜೋಧವಲೀಕೃತ ವಿಗ್ರಹಂ  |
ಭಜರೇ ಮನುಜಾ ಗಿರಿಜಾಪತಿಮ್  ||೫||

ಮಖವಿನಾಶಕರಂ ಶಶಿಶೇಖರಂ |
ಸತತಮಧ್ವರಭಾಜಿ ಫಲಪ್ರದಮ್ ||
ಪ್ರಲಯದಗ್ದ ಸುರಾಸುರ ಮಾನವಂ |
ಭಜರೇ ಮನುಜಾ ಗಿರಿಜಾಪತಿಮ್  ||೬||

ಮದಮಪಾಸ್ಯ ಚಿರಂ ಹೃದಿ ಸಂಸ್ಥಿತಂ |
ಮರಣಜನ್ಮ ಜರಾಭಯ ಪೀಡಿತಮ್ ||
ಜಗದುದೀಕ್ಷ್ಯ ಸಮೀಪ ಭಯಾಕುಲಮ್ |
ಭಜರೇ ಮನುಜಾ ಗಿರಿಜಾಪತಿಮ್  ||೭||

ಹರಿವಿರಿಂಚಿ ಸುರಾಧಿಪ ಪೂಜಿತಂ|
ಯಮಜನೇಶಧನೇಶ ನಮಸ್ಕೃತಮ್ ||
ತ್ರಿನಯನಂ ಭುವನತ್ರಿತಯಾಧಿಪಂ |
ಭಜರೇ ಮನುಜಾ ಗಿರಿಜಾಪತಿಮ್  ||೮||

ಪಶುಪತೇರಿದಮಷ್ಟಕಮದ್ಭುತಂ |
ವಿರಚಿತಂ ಪೃಥಿವೀಪತಿ ಸೂರಿಣಾ ||
ಪಠತಿ ಸಂಶೃಣುತೇ ಮನುಜ: ಸದಾ |
ಶಿವಪುರೀಂ ವಸತೇ ಲಭತೇ ಮುದಮ್  ||೯||
|| ಇತಿ ಶ್ರೀ ಪಶುಪತ್ಯಷ್ಟಮ್  ||
********

೧.ಭಾವಾರ್ಥ:-ಎಲೈ ಮಾನವನೇ;ಸಮಸ್ತ ಪ್ರಾಣಿಗಳಿಗೂ ಸ್ವರ್ಗ,ಭುವಿ,ನಾಗಾದಿ ಲೋಕಗಳಿಗೂ ಒಡೆಯನಾಗಿರುವ  ದಾಕ್ಷಾಯಿಣಿಯ ಸ್ವಾಮಿ,ಆರ್ತ ಪ್ರಾಣಿಗಳ ಹಾಗೂ ಭಕ್ತ ಜನರ ಪೀಡಾ ಪರಿಹಾರಕ,ಪರಮ ಪುರುಷನೂ ಪಾರ್ವತೀ ವಲ್ಲಭನೂ ಆಗಿರುವ ಶಂಕರನನ್ನು ಭಜಿಸು.

೨.ಭಾವಾರ್ಥ:-ಎಲವೋ ಮನುಜನೇ; ಕಾಲನ ವಶದಲ್ಲಿರುವ ಈ ಜೀವನದಲ್ಲಿ ತಂದೆ,ತಾಯಿ,ಸೋದರ,ಮಕ್ಕಳು,ಬಂಧು ಬಳಗ,ಅಧಿಕಬಲ,ಸತ್ಕುಲದಬಲ,ಯಾವುದೂ ನಿನ್ನನ್ನು ರಕ್ಷಿಸಲಾರದು.ಆದ್ದರಿಂದ ನೀನು ಮಹಾಮಹಿಮನಾಗಿರುವ ಶಂಕರನನ್ನು ಭಜಿಸು.
೩.ಭಾವಾರ್ಥ:-ಹೇ ಮನುಜಾ;ಮೃದಂಗ,ಡಮರುಗಳನ್ನು ನುಡಿಸುವುದರಲ್ಲಿ ನಿಪುಣನೂ,ಪಂಚಮ ಸ್ವರದಲ್ಲಿ ಹಾಡುವುದರಲ್ಲಿ ಕುಶಲಿಗನೂ,ಪ್ರಮಥ ಹಾಗು ಭೂತ ಗಣಗಳಿಂದ ಸೇವೆಯನ್ನು ಸ್ವೀಕರಿಸುತ್ತಿರುವವನೂ ಆಗಿರುವ ಶಂಕರನನ್ನು ಭಜಿಸು.
೪.ಭಾವಾರ್ಥ:-ಮಾನವನೇ;ಯಾವಾತನು ಶರಣಾಗತರಿಗೆ ಶರಣಾಗಿ ಸುಖವನ್ನೂ ಅಭಯವನ್ನೂ ದಯಪಾಲಿಸುವನೋ,ಶಿವ ಶಿವ ಶಿವಾ ಎಂಬುದಾಗಿ ಮಾನವರು ಯಾರಿಗೆ ನಮಿಸುವರೋ,ಅಂತಹಾ ದಯಾನಿಧಿಯಾಗಿರುವ ಶಂಕರನನ್ನು ಭಜಿಸು.
೫.ಭಾವಾರ್ಥ:-ಹೇ ಮನುಜಾ; ಮಾನವನ ರುಂಡವನ್ನೂ,ಮಣಿಗಳ ಕುಂಡಲವನ್ನೂ ಹಾಗೂ ಸರ್ಪಗಳ ಹಾರವನ್ನೂ ಧರಿಸಿಕೊಂಡು ಚಿತಾಭಸ್ಮವನ್ನು ಲೇಪಿಸಿರುವ ದೇಹವುಳ್ಳವನೂ ವೃಷಭವನ್ನು ಲಾಂಛನವಾಗಿರಿಸಿಕೊಂಡವನೂ ಆಗಿರುವ ಶಂಕರನನ್ನು ಭಜಿಸು.
೬.ಭಾವಾರ್ಥ:-ಎಲೈ ಮಾನವಾ;ದಕ್ಷನ ಯಜ್ಞವನ್ನು ಹಾಳುಗೆಡವಿದವನೂ,ಶಿರದ ಮೇಲೆ ಚಂದ್ರನನ್ನು ಧರಿಸಿ ಪ್ರಕಾಶಿಸುವವನೂ,ಯಜ್ಞ ಕರ್ತ್ರುಗಳಿಗೆ ಯಾವತ್ತೂ ಸತ್ಫಲವನ್ನು ಕರುಣಿಸುವವನೂ,ಅಲ್ಲದೆ ಪ್ರಳಯ ಕಾಲಾಗ್ನಿಯಿಂದ ದೇವ ದಾನವ ದನುಜರನ್ನು ಸುಟ್ಟವನೂ ಆಗಿರುವ ಶಂಕರನನ್ನು ಭಜಿಸು.
೭.ಭಾವಾರ್ಥ:-ಹೇ ಮಾನವನೇ; ಹುಟ್ಟು,ಮುಪ್ಪು,ಸಾವುಗಳ ಭೀತಿಯಿಂದ ಪೀಡಿಸಲ್ಪಡುವ ಹಾಗೆಯೇ ಎದುರಾಗುವ ಸಂಕಷ್ಟಗಳಿಂದ ವ್ಯಾಕುಲಗೊಂಡಿರುವ ಜಗತ್ತನ್ನು ಕಂಡು ಹೃದಯದಲ್ಲಿ ಬಹುಕಾಲದಿಂದ ಶೇಖರಗೊಂಡಿರುವ ದರ್ಪವನ್ನು ತ್ಯಜಿಸಿದವನೂ ಆಗಿರುವ ಶಂಕರನನ್ನು ಭಜಿಸು.
೮.ಭಾವಾರ್ಥ:-ಎಲೈ ಮಾನವನೇ;ವಿಷ್ಣು,ಬ್ರಹ್ಮ ಹಾಗೂ ಸುರೇಂದ್ರರಿಂದ ಪೂಜಿಸಿಗೊಂಬವನೂ,ಯಮ ಮತ್ತು ಕುಬೇರರಿಂದ ನಮಸ್ಕರಿಸಿಕೊಂಬವನೂ ,ಮುಕ್ಕಣ್ಣನೂ ತ್ರಿಲೋಕದೊಡೆಯನೂ ಆಗಿರುವ ಶಂಕರನನ್ನು ಭಜಿಸು.
೯.ಭಾವಾರ್ಥ:-ಪಂಡಿತ ಪೃಥಿವೀಪತಿ ಎಂಬವನಿಂದ ರಚಿಸಲ್ಪಟ್ಟ ಈ ಅದ್ಭುತ ಪಶುಪತಿ ಅಷ್ಟಕಗಳನ್ನು ನಿತ್ಯವೂ ಯಾರು ಪಠಣ ಹಾಗೂ ಶ್ರವಣ ಮಾಡುವರೋ ಅವರು ಶಿವನ ಪಟ್ಟಣದಲ್ಲಿ ವಾಸ ಮಾಡುತ್ತಾ ಆನಂದವನ್ನು ಅನುಭವಿಸುವರು.
 || ಈ ರೀತಿಯಾಗಿ ಶ್ರೀ ಪಶುಪತಿ ಅಷ್ಟಕಗಳ ಭಾವಾರ್ಥವು  |
*********

No comments:

Post a Comment