Thursday, 2 December 2021

ನವಗ್ರಹ ಪೀಡಾಹರ ಸ್ತೋತ್ರಂ ಬ್ರಹ್ಮಾಂಡ ಪುರಾಣೋಕ್ತಂ NAVAGRAHA PEEDAHARA STOTRA in brahmanda purana







॥ ನವಗ್ರಹಪೀಡಾಹರಸ್ತೋತ್ರಮ್ ॥

ಗ್ರಹಾಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ ।
ವಿಷಮಸ್ಥಾನಸಂಭೂತಾಂ ಪೀಡಾಂ ಹರತು ಮೇ ರವಿಃ ॥ 1॥

ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ ।
ವಿಷಮಸ್ಥಾನಸಂಭೂತಾಂ ಪೀಡಾಂ ಹರತು ಮೇ ವಿಧುಃ ॥ 2॥

ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ ಸದಾ ।
ವೃಷ್ಟಿಕೃದ್ವೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ ॥ 3॥

ಉತ್ಪಾತರೂಪೋ ಜಗತಾಂ ಚನ್ದ್ರಪುತ್ರೋ ಮಹಾದ್ಯುತಿಃ ।
ಸೂರ್ಯಪ್ರಿಯಕರೋ ವಿದ್ವಾನ್ ಪೀಡಾಂ ಹರತು ಮೇ ಬುಧಃ ॥ 4॥

ದೇವಮನ್ತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ ।
ಅನೇಕಶಿಷ್ಯಸಮ್ಪೂರ್ಣಃ ಪೀಡಾಂ ಹರತು ಮೇ ಗುರುಃ ॥ 5॥

ದೈತ್ಯಮನ್ತ್ರೀ ಗುರುಸ್ತೇಷಾಂ ಪ್ರಾಣದಶ್ಚ ಮಹಾಮತಿಃ ।
ಪ್ರಭುಸ್ತಾರಾಗ್ರಹಾಣಾಂ ಚ ಪೀಡಾಂ ಹರತು ಮೇ ಭೃಗುಃ ॥ 6॥

ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ ।
ಮನ್ದಚಾರಃ ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ ॥ 7॥

ಮಹಾಶಿರಾ ಮಹಾವಕ್ತ್ರೋ ದೀರ್ಘದಂಷ್ಟ್ರೋ ಮಹಾಬಲಃ ।
ಅತನುಶ್ಚೋರ್ಧ್ವಕೇಶಶ್ಚ ಪೀಡಾಂ ಹರತು ಮೇ ಶಿಖೀ ॥ 8॥

ಅನೇಕರೂಪವರ್ಣೈಶ್ಚ ಶತಶೋಽಥ ಸಹಸ್ರಶಃ ।
ಉತ್ಪಾತರೂಪೋ ಜಗತಾಂ ಪೀಡಾಂ ಹರತು ಮೇ ತಮಃ ॥ 9॥

॥ ಇತಿ ಬ್ರಹ್ಮಾಂಡಪುರಾಣೋಕ್ತಂ ನವಗ್ರಹಪೀಡಾಹರಸ್ತೋತ್ರಂ ಸಮ್ಪೂರ್ಣಮ್ ॥
*****

ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ?

ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಾಗ ದೈವಕೃಪೆ ತಾನಾಗೇ ಲಭಿಸುತ್ತದೆ. ಅದು ಹೇಗೆ ಎಂದು ನೋಡೋಣ.

ರವಿಯ ಅನುಗ್ರಹ  : ಬೆಳಗಿನ ಜಾವ ಬೇಗನೆದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ಉಂಟಾಗುತ್ತದೆ. ಸೂರ್ಯನ ಕಿರಣದಲ್ಲಿರುವ 'ಡಿ' ಮತ್ತು 'ಇ' ಪ್ರೋಟೀನ್ನಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ. ದಿನವಿಡೀ ಮನಸ್ಸೂ ಉಲ್ಲಸಿತವಾಗಿರುತ್ತದೆ. 

ಚಂದ್ರನ ಅನುಗ್ರಹ  : ಚಂದ್ರನೆಂದರೆ ನೀರು. ಮನೆಯಲ್ಲಿ ಅಶೌಚ ಇರಬಾರದು. ಎಂಜಲು, ಮುಸುರೆ ಪಾತ್ರೆಗಳಿರಬಾರದು. ತಿಂದ ತಟ್ಟೆಗಳನ್ನು ಕೂಡಲೇ ತೊಳದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮನೆಯ ವಾತಾವರಣ ಶುಭ್ರವಾಗಿದ್ದರೆ ಮನಸ್ಸೂ ಶುಭ್ರವಾಗಿರುತ್ತದೆ.

ಕುಜನ ಅನುಗ್ರಹ  : ರಕ್ತಕ್ಕೆ ಅಧಿಪತಿ ಕುಜ. ಅನ್ನಾದಿ ಆಹಾರಗಳ ಸೇವನೆಯಿಂದ ರಕ್ತ ವೃದ್ಧಿಯಾಗುತ್ತದೆ. ಆ ಕಾರಣ 'ಅನ್ನಂ ಬ್ರಹ್ಮ' ಎಂಬ ವೇದವಾಕ್ಯವನ್ನು ಗೌರವಿಸಬೇಕು. ಆಹಾರ ಪದಾರ್ಥವನ್ನು ವೇಸ್ಟ್ ಮಾಡದಂತೆ ಜಾಗ್ರತೆ ವಹಿಸಬೇಕು. ನಿಯಮಿತವಾಗಿ ರಕ್ತ ದಾನವನ್ನು ಮಾಡಬೇಕು. ಅಶಕ್ತರಿಗೆ ಸಹಾಯ ಮಾಡಬೇಕು. 

ಬುಧನ ಅನುಗ್ರಹ  : ಬುಧ ಬುದ್ದಿಕಾರಕ. ಬುದ್ಧಿ ಹೀನನಾದರೆ ಮಾಡುವ ಕೆಲಸದಲ್ಲೂ ತೊಂದರೆ ಉಂಟಾಗುತ್ತದೆ. ಹಾಗಾಗಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ವಿವೇಕವಿರಬೇಕು. 

ಗುರುವಿನ ಅನುಗ್ರಹ  : ಗುರು ಸಕಲ ದೋಷ ನಿವಾರಕ. ಮಾರ್ಗಸೂಚಕ. ನಮ್ಮಲ್ಲೊಂದು ಲೋಕೋಕ್ತಿಯಿದೆ. 'ಕೋಶ ಓದಬೇಕು ಲೋಕ ಸುತ್ತಬೇಕು' ಅಂತ. ಅರಿವೇ ಗುರು ಎನ್ನುವಂತೆ ಸುತ್ತಣ ಪರಿಸರವನ್ನು ನೋಡಿ ಕಲಿಯಬೇಕು. ಗಿಡ, ಮರಗಳಿಗೆ ನೀರೆಯುವ ಮೂಲಕ ಅವುಗಳನ್ನು ಪೋಷಿಸಬೇಕು. 

ಶುಕ್ರನ ಅನುಗ್ರಹ  : ಶುಕ್ರನೆಂದರೆ ವೀರ್ಯ. ಪೌಷ್ಟಿಕದಾಯಕ ಆಹಾರ ಸೇವನೆಗೆ ಅಗತ್ಯವಾದ ಹಣ್ಣು, ತರಕಾರಿಗಳನ್ನು ಮನೆಗೆ ತರಬೇಕು. ಕುಟುಂಬ ಸೌಖ್ಯಕ್ಕೆ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು. 

ಶನಿಯ ಅನುಗ್ರಹ    : ಶನಿ ಕರ್ಮಾಧಿಪತಿ. ಕರ್ಮಸೂಚಕವಾದ ಪಾದರಕ್ಷೆಗಳನ್ನು ಮನೆಯಾಚೆಯೇ ಬಿಡಬೇಕು. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು. 

ರಾಹುವಿನ ಅನುಗ್ರಹ  : ಹೊರಗಿನ ಪಾಪ ಮನೆಯೊಳಗೆ ಎನ್ನುವ ಮಾತಿನಂತೆ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಕೈಕಾಲುಗಳನ್ನು ತೊಳೆದುಕೊಳ್ಳಿ. ಮೂತ್ರ ಅಥವಾ ಮಲ ವಿಸರ್ಜನೆಯ ನಂತರ ಶುದ್ಧಾಚಮನ ಮಾಡಿ. ಕೈಕಾಲುಗಳನ್ನು ತೊಳೆಯಿರಿ. 


ಕೇತುವಿನ ಅನುಗ್ರಹ  : ಅತಿಥಿ ದೇವೋ ಭವ ಎನ್ನುವುದು ಶಾಸ್ತ್ರೋಕ್ತಿ. ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದರಿಂದ ಉತ್ತಮ ಫಲಗಳನ್ನು ಕಾಣಬಹುದು.
*******



नवग्रह शांति मंत्र (Navgrah Shanti Mantra)
यह चमत्कारी मंत्र निम्न तरह से है |

ऊँ ब्रह्मा मुरारिस्त्रिपुरान्तकारी भानुः शशी भूमिसुतो बुधश्च ।
गुरुश्च शुक्रः शनि राहु केतवः सर्वे ग्रहा शान्तिकरा भवन्तु ।।


Correct the following bad practices:
ಈ ಅಭ್ಯಾಸಗಳು ನವಗ್ರಹಗಳ ಅನುಗ್ರಹಕ್ಕೆ ಕಾರಣ

ನಿಮ್ಮ ಈ ಒಂಭತ್ತು ಅಭ್ಯಾಸಗಳಿಂದ, ನವಗ್ರಹಗಳು  ನಿಮ್ಮ ಜೀವನ ಮತ್ತು ನಿಮ್ಮ ಮನೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತವೆ. 

ನವಗ್ರಹಗಳು ನಮ್ಮ ದೇಹದಲ್ಲಿ  ಹಾಗು ನಿತ್ಯದ ಜೀವನದಲ್ಲಿ ಸದಾ ಸಂಚರಿಸುತ್ತ; ಅವುಗಳ ಗೋಚರದಲ್ಲಿ ನಾವಿರುತ್ತೇವೆ.ಕೆಲವು ಕೆಟ್ಟ ಅಭ್ಯಾಸಗಳಿಂದ ನಾವು ನವಗ್ರಹಗಳ ಅವಕೃಪೆಗೆ ಕಾರಣರಾಗುತ್ತೇವೆ.ಅವುಗಳಿಗೆ ಪರಿಹಾರವೆಂದರೆ:--

೧. ನಮ್ಮ ಮನೆಗಳಿಗೆ ಯಾರಾದರೂ ಅತಿಥಿಗಳು-ಅಭ್ಯಾಗತರು ಬಂದಾಗ, ಅವರು ಅತಿಥಿಗಳಿರಲಿ ಅಥವಾ ಕೆಲಸದ ನೌಕರರು/ಆಳುಗಳಿರಲಿ ಅವರಿಗೆ ಕುಡಿಯಲು ಲೋಟದಲ್ಲಿ ಶುಧ್ಧ ನೀರನ್ನು/ಹಾಲನ್ನು ಕೊಡಬೇಕು.

ಹೀಗೆ ಶುಧ್ಧ ನೀರನ್ನು   ಕುಡಿಯಲು ಕೊಟ್ಟರೆ ರಾಹುಗ್ರಹದಿಂದ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ. ಜೀವನದಲ್ಲಿ ಯಾವುದೇ ತೊಂದರೆಗಳು/ಅಘಾತಕರ ಘಟನೆಗಳು ಸಂಭವಿಸುವುದಿಲ್ಲ.

೨. ನಿಮಗೆ ಎಲ್ಲಂದರೆ ಅಲ್ಲಿ ಉಗುಳುವ ಅಭ್ಯಾಸವಿದ್ದರೆ, ನಿಮಗೆ ಅಕಸ್ಮಾತ್ ಹೆಸರು ಮತ್ತು ಗೌರವ ಬಂದಲ್ಲಿ, ಅದು ಬಹಳ ದಿನ ಇರಲಾರದು. ಎಲ್ಲಂದರೆ ಅಲ್ಲಿ ಉಗುಳಿದರೆ ಬುಧಗ್ರಹದ ಅವಕೃಪೆ.

ಉಗುಳುವುದನ್ನು ಕೈ ತೊಳೆಯುವ ಬಚ್ಚಲಿನಲ್ಲಿ(wash basin) ಮಾತ್ರ ಉಗಳಬೇಕು. ಆಗ ಮಾತ್ರ ನಿಮ್ಮ ಹೆಸರು ಮತ್ತು ಗೌರವ ವೃಧ್ಧಿಯಾಗುತ್ತವೆ.

೩. ಕೆಲವರಿಗೆ ತಿಂಡಿ, ತಿನಿಸು, ಊಟ ಮಾಡಿದ ತಟ್ಟೆಗಳನ್ನು /ಪಾತ್ರೆಗಳನ್ನು ಹಾಗೆ ಇಡುವ ಅಭ್ಯಾಸ ಇರುತ್ತದೆ.  ಅಂತಹವರಿಗೆ ಜೀವನದಲ್ಲಿ ಗೆಲವು ಖಾಯಂ ಆಗಿ ಸಿಗುವುದಿಲ್ಲ. ಅಂಥಹವರು ನಿರಂತರ ಹೋರಾಟ ಮಾಡುತ್ತಿರಬೇಕು ಹಾಗೂ ಆದರೂ ಅವರಿಗೆ ಒಳ್ಳೆಯ ಹೆಸರು ಸಿಗುವುದಿಲ್ಲ.

ನೀವು ಉಪಯೋಗಿಸಿದ ತಟ್ಟೆ/ಲೋಟ/ಪಾತ್ರೆಗಳನ್ನು (ಸಾಧ್ಯವಾದಷ್ಟು) ಬೇಗ ತೊಳೆದು ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು.

ಹೀಗೆ ಮಾಡುವುದರಿಂದ  ಚಂದ್ರ ಮತ್ತು ಶನಿ ಗ್ರಹಗಳನ್ನು ಗೌರವಿಸಿದಂತಾಗಿ ಅವರುಗಳು ಸಂತೃಪ್ತರಾಗುತ್ತಾರೆ. 

ಇದರಿಂದ ನಿಮಗೆ ಮನಃಶಾಂತಿ ಸಿಗುತ್ತದೆ ಹಾಗೂ ಕೆಲಸದಲ್ಲಿ ಯಾವುದೇ ಅಡೆ-ತಡೆಗಳಿರುವುದಿಲ್ಲ.

೪. ನಮ್ಮ ಮನೆಗಳಲ್ಲಿ ಇರುವ ಗಿಡಗಳು ನಮ್ಮ ಕುಟುಂಬದ ಸದಸ್ಯರಿದ್ದಂತೆ. 

ಅವುಗಳಿಗೆ ನಮ್ಮ ಪ್ರೀತಿ ಮತ್ತು ಆರೈಕೆ ಅವಶ್ಯವಿದೆ. 

ನಿತ್ಯ ಮುಂಜಾನೆ ಮತ್ತು ಸಂಜೆ ಅವುಗಳಿಗೆ ನೀರು ಉಣಿಸಿದ್ದಲ್ಲಿ, ಗುರು, ಚಂದ್ರ ಮತ್ತು ಸೂರ್ಯ ಗ್ರಹಗಳನ್ನು ಆರಾಧಿಸಿ ಅವುಗಳ ಅನುಗ್ರಹ ಪಡೆದಂತೆ ಆಗುತ್ತದೆ.

ಇದರಿಂದ ನಮಗೆ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಅವುಗಳನ್ನು ನಿವಾರಣೆ ಮಾಡಿಕೊಳ್ಳುವ ಶಕ್ತಿ ಬರುತ್ದದೆ.

ದಿನ ನಿತ್ಯ ಮರಗಿಡಗಳಿಗೆ ನೀರು ಉಣಿಸುವವರಿಗೆ ಮಾನಸಿಕ ಸಮಸ್ಯೆ/ಖಿನ್ನತೆ, ಮಾನಸಿಕ ಒತ್ತಡಗಳು ಎಂದೆಂದಿಗೂ ಆಗುವುದಿಲ್ಲ..!.

೫. ಯಾರು ತಮ್ಮ ಪಾದರಕ್ಷೆ /ಚಪ್ಪಲಿ, ಕಾಲ ಕವಚ (shoes), ಕೈ ಕವಚಗಳು ಮತ್ತು ಕಾಲು ಚೀಲಗಳನ್ನು ಮನೆಗೆ ಬಂದಾಗ ಎಲ್ಲೆಂದರೆ ಅಲ್ಲಿ ಬಿಟ್ಟಿರುತ್ತಾರೆಯೋ/ಎಸೆದಿರುತ್ತಾರೆಯೋ ಅವರಿಗೆ ಅವರ ಶತ್ರುಗಳು ಹೆಚ್ಚಿನ ತೊಂದರೆ ಕೊಡುತ್ತಾರೆ‌. ಅವುಗಳನ್ನು ಮನೆಗೆ ಬಂದಾಗ ಸರಿಯಾದ ಜಾಗದಲ್ಲಿ ವ್ಯವಸ್ಥಿತವಾಗಿ ಇಟ್ಟಲ್ಲಿ ಗುರುವು ಪ್ರಸನ್ನನಾಗಿ ಶತ್ರುಗಳು ದೂರವಾಗಿ ಸಮಾಜದಲ್ಲಿ ನಿಮ್ಮ ಘನತೆ ಗೌರವಗಳು ಹೆಚ್ಚಾಗುತ್ತವೆ.

೬. ಹಾಸಿಗೆಯಿಂದ ಮುಂಜಾನೆ ಎದ್ದ ನಂತರ  ನಿಮ್ಮ ಹಾಸಿಗೆ ಸ್ವಚ್ಚವಾಗಿ ಇಟ್ಟು ಕೊಳ್ಳ ಬೇಕು, ಹಾಗೆ ಇಡದೇ, ನೀವು ಎದ್ದ ನಂತರ ಹಾಸಿಗೆಯ ಹೊದಿಕೆ, ನಿಮ್ಮ ಹೊದಿಕೆ, ತಲೆದಿಂಬುಗಳು ಅಸ್ತವ್ಯಸ್ತವಾಗಿದ್ದರೆ ನಿಮ್ಮನ್ನು ಶನಿ ಮತ್ತು ರಾಹುಗಳು ಕಾಡುತ್ತವೆ. ನೀವು ನಿತ್ಯ ಧರಿಸುವ ಬಟ್ಟೆಗಳು ಸ್ವಚ್ಚ ಇಲ್ಲದಿದ್ದರೆ ನಿಮ್ಮ ನಿತ್ಯದ ಕೆಲಸ ಕಾರ್ಯಗಳು ಎಂದೆಂದಿಗೂ ಸುಗಮವಾಗಿ ನಡೆನಯುವುದಿಲ್ಲ..!

ನೀವೂ ಮತ್ತು ನಿಮ್ಮ ಸುತ್ತಲಿನವರೂ ಸಂತೋಷವಾಗಿರುವುದಿಲ್ಲ.

ಇದನ್ನು ತಡೆಯಲು ನೀವು ಮುಂಜಾನೆ ಎದ್ದ ನಂತರ ನಿಮ್ಮ ಹಾಸಿಗೆಯನ್ನು ಸ್ವಚ್ಚವಾಗಿ ಇಟ್ಟುಕೊಂಡರೆ ನಿಮ್ಮ ದೈನಂದಿನ ಕೆಲಸಗಳು ಸುಗಮವಾಗಿ ನಡೆಯುತ್ತವೆ.

೭. ನಾವು ಯಾವಾಗಲೂ ನಮ್ಮ ಕಾಲುಗಳನ್ನು ಹಾಗೂ ಪಾದಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಸತ್ಯ ಸಂಗತಿಯೆಂದರೆ ನಾವುಗಳು ಯಾರೂ ಇದರ ಬಗ್ಗೆ ಗಮನ ಹರಿಸುವುದಿಲ್ಲ. ಕೈ ಕಾಲುಗಳನ್ನು ಮತ್ತು ಪಾದಗಳನ್ನು ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಮನೆಗೆ ಹೊರಗಿನಿಂದ ಬಂದಾಗ  ಮುಖ,  ಕೈ ಕಾಲುಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು.  ( ಸಾಧ್ಯವಾದರೆ ತೊಳೆದುಕೊಂಡೆ ಮನೆಯ ಒಳಗೆ ಪ್ರವೇಶಿಸಿದರೆ ಉತ್ತಮ )

ಇದರಿಂದ ನಿಮಗೆ ಮನಃಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಹಾಗೂ ಅನವಶ್ಯಕ ಸಿಟ್ಟು ಹಾಗೂ ಮನಸ್ಸಿಗೆ ಕಿರಿ-ಕಿರಿ ಆಗುವುದಿಲ್ಲ ಹಾಗೂ ದಿನಃ ಪೂರ್ತಿ ಸಂತೋಷವಾಗಿರುತ್ತೀರ.

ಇನ್ನಾದರೂ ಈ ಬಗ್ಗೆ ವ್ಯವಸ್ಥೆ ಮಾಡಿಕೊಂಡು, ಅದನ್ನು ಪಾಲಿಸಿ ಜೀವನದಲ್ಲಿ ಆಗುವ ಆಧ್ಬುತ ಬದಲಾವಣೆಗಳನ್ನು ಗಮನಿಸಿರಿ..!

೮. ನೀವು ಪ್ರತಿದಿನ ಮನೆಗೆ ಬರುವಾಗ ಮನೆಯಲ್ಲಿ ಉಪಯೋಗಿಸುವ ಯಾವುದಾದರೂ ವಸ್ತುವನ್ನು ಹೂವು/ಹಣ್ಣು/ತರಕಾರಿ ಕೈಯಲ್ಲಿ ಹಿಡಿದು ಮನೆಗೆ ತರಬೇಕು. 

ಹಾಗೆ ಮಾಡಿದರೆ ಅಂತಹ ಮನೆಯಲ್ಲಿ, ಮನೆಯ ಲಕ್ಷ್ಮಿಯು (ಸಂಪತ್ತಿನ ಅಧಿಪತಿ) ಮತ್ತು ಶುಕ್ರನು ಮನೆಯಲ್ಲಿ ಖಾಯಂ ಆಗಿ ನೆಲಸುತ್ತಾರೆ.

೯. ನೀವು ಉಪಹಾರ/ಊಟ ಮಾಡಿದ ತಟ್ಟೆಯಲ್ಲಿ ಯಾವತ್ತೂ  ಆಹಾರವನ್ನು ಉಳಿಸಬೇಡಿರಿ.

ಹಾಗೆ ಉಳಿಸಿದರೆ ನವಗ್ರಹಗಳೆಲ್ಲವೂ ನಿಮಗೆ ವಿರೋಧವಾಗಿ ನೀವು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.
********

No comments:

Post a Comment