Monday 30 September 2019

ಆದಿತ್ಯ ಹೃದಯಮ್ ಅಗಸ್ತ್ಯ ಋಷಿಃ ವಿರಚಿತಮ್ ADITYA HRUDAYAM BY AGASTYA RISHI





Aditya Hrudayam Stotra ಆದಿತ್ಯ ಹೃದಯಂ
ಧ್ಯಾನಮ್
ನಮಸ್ಸವಿತ್ರೇ ಜಗದೇಕ ಚಕ್ಷುಸೇ ಜಗತ್ಪ್ರಸೂತಿ ಸ್ಥಿತಿ ನಾಶಹೇತವೇ
ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇವಿರಿಂಚಿ ನಾರಾಯಣ ಶಂಕರಾತ್ಮನೇ

ಸ್ತೋತ್ರಮ್

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || 1 ||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||

ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್ || 4 ||

ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್ || 5 ||

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ || 6 ||

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ || 7 ||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ || 8 ||

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ || 9 ||

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ || 10 ||

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋ‌உಂಶುಮಾನ್ || 11 ||

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋ‌உದಿತೇಃ ಪುತ್ರಃ ಶಂಖಃ ಶಿಶಿರನಾಶನಃ || 12 ||

ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || 13 ||

ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ || 14 ||

ನಕ್ಷತ್ರ ಗ್ರಹ ತಾರಾಣಾಮ್ ಅಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋ‌உಸ್ತು ತೇ || 15 ||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || 16 ||

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || 17 ||

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || 18 ||

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || 19 ||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || 20 ||

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋ‌உಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ || 21 ||

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || 22 ||

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ || 23 ||

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || 24 ||

ಫಲಶ್ರುತಿಃ

ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್-ನಾವಶೀದತಿ ರಾಘವ || 25 ||

ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || 26 ||

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ || 27 ||

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋ‌உಭವತ್-ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || 28 ||

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || 29 ||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋ‌உಭವತ್ || 30 ||

ಅಧ ರವಿರವದನ್-ನಿರೀಕ್ಷ್ಯ ರಾಮಂ 
ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ 
ಸುರಗಣ ಮಧ್ಯಗತೋ ವಚಸ್ತ್ವರೇತಿ || 31 ||

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮಿಕೀಯೇ ಆದಿಕಾವ್ಯೇ ಯುದ್ದಕಾಂಡೇ ಪಂಚಾಧಿಕ ಶತತಮ ಸರ್ಗಃ ||
********



ಆದಿತ್ಯ ಹೃದಯ ಸ್ತೋತ್ರವನ್ನು ಏಕೆ ಪಠಿಸಬೇಕು..? ಇದರ ಪ್ರಯೋಜನವೇನು..?

ಆದಿತ್ಯ ಹೃದಯ ಸ್ತೋತ್ರವನ್ನು ಜಪಿಸುವುದು ಎಷ್ಟು ಪರಿಣಾಮಕಾರಿ..? ಜನರು ದಿನಕ್ಕೆ ಒಮ್ಮೆಯಾದರೂ ಇದನ್ನು ಏಕೆ ಪಠಿಸಬೇಕು..? ಇದಲ್ಲದೆ, ಭಾನುವಾರದಂದು ಇದನ್ನು ಏಕೆ ವಿಶೇಷವಾಗಿ ಜಪಿಸಬೇಕು..?

ಹಿಂದೂ ಸಂಪ್ರದಾಯದ ಪ್ರಕಾರ ಭೂಮಿ, ಬೆಂಕಿ, ಗಾಳಿ ಮತ್ತು ಇತರ ನೈಸರ್ಗಿಕ ಶಕ್ತಿಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಸೂರ್ಯನೂ ಕೂಡ ಒಬ್ಬ. ಸೂರ್ಯನು ಅದಿತಿಯ ಮಗನಾದ ಕಾರಣ ಆತನನ್ನು ಆದಿತ್ಯ ಎಂದೂ ಕರೆಯುತ್ತಾರೆ. ಸೂರ್ಯನು ಭೂಮಿಯ ಮೇಲಿನ ಜೀವಗಳ ಆತ್ಮದಂತೆ ಎಂದು ಹೇಳಲಾಗಿದೆ. ಆದಿತ್ಯ ಹೃದಯ ಸ್ತೋತ್ರವು ಸಾರ್ವಕಾಲಿಕ ಅತ್ಯಂತ ಶಕ್ತಿಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ. ಇದು ಸೂರ್ಯ ದೇವನಿಗೆ ಸಮರ್ಪಿತವಾಗಿದೆ ಮತ್ತು ಜ್ಯೋತಿಷ್ಯದ ಪ್ರಕಾರ ಸೂರ್ಯ ಬಲ ಇಲ್ಲದ ರಾಶಿಯವರಿಗೆ ಈ ಸ್ತೋತ್ರ ಹೆಚ್ಚು ಪರಿಣಾಮಕಾರಿ. 

ಪುರಾಣದಲ್ಲೂ ಕೂಡ ಆದಿತ್ಯ ಹೃದಯ ಸ್ತೋತ್ರದ ಬಗ್ಗೆ ಉಲ್ಲೇಖಿಸಲಾಗಿದೆ ಎಂದರೆ ನೀವು ಆಶ್ಚರ್ಯಚಕಿತಾರಾಗಬಹುದು..? ಕೆಲವು ಉತ್ತರಗಳನ್ನು ಪುರಾಣಗಳಲ್ಲಿ ಉತ್ತಮವಾಗಿ ಹೇಳಲಾಗಿದೆ. ಇದು ಪೌರಾಣಿಕದ ರಾಮಾಯಣ ಕಾಲದ ಬಗ್ಗೆ, ಹೆಚ್ಚು ನಿರ್ದಿಷ್ಟವಾಗಿ ರಾಮ ಮತ್ತು ರಾವಣನ ನಡುವಿನ ಅಂತಿಮ ಯುದ್ಧದ ಸಮಯದ ಬಗ್ಗೆ ತಿಳಿಸುತ್ತದೆ.

​ರಾಮನಿಂದ ಆದಿತ್ಯ ಹೃದಯ  ಪಠಣೆ

ಮೊದಲ ಹಂತದ ಯುದ್ಧದಲ್ಲಿ ರಾವಣನನ್ನು ಸೋಲಿಸುವ ಶ್ರೀ ರಾಮನ ಪ್ರಯತ್ನ ವಿಫಲವಾಗುತ್ತದೆ. ತನ್ನ ಶತ್ರುವಾದ ರಾವಣನನ್ನು ಸೋಲಿಸುವ ಪ್ರಯತ್ನ ವ್ಯರ್ಥವಾಯಿತಲ್ಲ ಎಂಬ ಕೊರಗು ಶ್ರೀ ರಾಮನನ್ನು ಕಾಡುತ್ತದೆ. ಒಂದು ಹಂತದಲ್ಲಿ ಶ್ರೀ ರಾಮನಿಗೆ ಉಳಿದಿದ್ದು ನಿರಾಶೆ ಮತ್ತು ಆಯಾಸ ಮಾತ್ರ. ಈ ಸಮಯದಲ್ಲಿ ನೊಂದ ರಾಮನು ದೀರ್ಘ ತಪ್ಪಸ್ಸು ಮಾಡುತ್ತಾನೆ. ಇದನ್ನು ಕಂಡ ಅಗಸ್ತ್ಯರು, ರಾಮನನ್ನು ಉತೇಜಿಸುತ್ತಾರೆ. ನಂತರ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುತ್ತಾ ಸೂರ್ಯನಿಗೆ ತನ್ನ ಪ್ರಾರ್ಥನೆ ಸಲ್ಲಿಸುವಂತೆ ಅಗಸ್ತ್ಯ ಮಹಾ ಋಷಿಗಳು ಹೇಳಿಕೊಡುತ್ತಾರೆ. ರಾಮನು ಅಗಸ್ತ್ಯ ಮಹಾ ಋಷಿಗಳು ಹೇಳಿದ್ದಂತೆಯೇ ಶ್ರೀ ರಾಮನು ಮಾಡುತ್ತಾನೆ. ಇದನ್ನು ಮಾಡುತ್ತಿದ್ದಂತೆ ರಾಮನು ಅತ್ಯಂತ ಶಕ್ತಿದಾಯದ ಮತ್ತು ನಿರ್ಣಾಯಕ ಹೋರಾಟಕ್ಕೆ ಸಿದ್ಧನಾಗುತ್ತಾನೆ. ಆದಿತ್ಯ ಹೃದಯ ಸ್ತೋತ್ರ ಪಠಣದಿಂದ ನೀವು ಅಂದುಕೊಂಡ ಕೆಲಸ ಕಾರ್ಯ ಪೂರ್ಣಗೊಳಿಸಿಕೊಳ್ಳಬಹುದು. ಅದಕ್ಕಾಗಿಯೇ ಶ್ರೀ ರಾಮನೂ ಕೂಡ ಯುದ್ಧಕ್ಕೆ ಮುನ್ನ ಸ್ತೋತ್ರವನ್ನು ಪಠಿಸುತ್ತಾನೆ.

​ನಿರ್ದಿಷ್ಟವಾಗಿ ಭಾನುವಾರವೇ ಏಕೆ ಪಠಿಸಬೇಕು.?

ಜ್ಯೋತಿಷ್ಯದ ಪ್ರಕಾರ, ವಾರದ ಪ್ರತಿ ದಿನವೂ ಒಂದು ದೇವರು ಅಥವಾ ಒಂದು ಗ್ರಹಕ್ಕೆ ಅರ್ಪಿತವಾಗಿರುತ್ತದೆ. ಶನಿವಾರದಂದು ಶನಿ ದೇವನಿಗಾಗಿ ಮತ್ತು ಮಂಗಳವಾರ ಹನುಮಂತನಿಗೆ. ಹಾಗೆಯೇ, ಭಾನುವಾರ ಭಗವಾನ್ ಸೂರ್ಯನಿಗೆ ಅರ್ಪಿಸಲಾಗಿದೆ. ಭಾನುವಾರ ಸೂರ್ಯನಿಗೆ ಅರ್ಪಿಸಲಾಗಿರುವುದರಿಂದ ಅವನನ್ನು ಕುರಿತು ಪ್ರಾರ್ಥಿಸಲು ಅದಕ್ಕಿಂತ ಬೇರೆ ಶುಭ ದಿನ ಉಂಟೆ...? ನೀವು ಪ್ರತಿನಿತ್ಯ ನಿಮ್ಮದೇ ಕೆಲಸದಲ್ಲಿ ಮಗ್ನರಾಗಿರುತ್ತೀರಿ. ಬೆಳಗ್ಗೆ ಎದ್ದರೆ ಕಚೇರಿಯ ಒತ್ತಡ ಮೊದಲಾದ ಕಾರ್ಯಗಳ ಬಗ್ಗೆ ನಿಮಗೆ ಗಮನ ಇರುತ್ತದೆ. ಭಾನುವಾರ ನೀವು ಬಿಡುವಾಗಿರುವ ಕಾರಣ ಆ ದಿನ ನೀವು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬಹುದಾಗಿದೆ.

​ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದಾಗುವ ಪ್ರಯೋಜನಗಳು

ನಮಗೆ ಏನಾದರೂ ಪ್ರಯೋಜನವಾಗುವವರೆಗೆ ನಾವು ಎಂದಿಗೂ ಯಾವುದರ ಬಗ್ಗೆಯೂ ಆಸಕ್ತಿ ವಹಿಸುವುದಿಲ್ಲ. ಆದಿತ್ಯ ಹೃದಯ ಸ್ತೋತ್ರವು ಅಸಂಖ್ಯಾತ ವಿಶ್ವಾಸಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ. ಅಂತಹ ಪ್ರಯೋಜನಗಳು ಇಲ್ಲಿವೆ.

- ಭಗವಾನ್ ಸೂರ್ಯನ ಆಶೀರ್ವಾದದಿಂದ ನಿಮ್ಮ ಕಾರ್ಯಗಳು ಮತ್ತು ಪ್ರಯತ್ನಗಳಲ್ಲಿ ಯಶಸ್ವಿಯಾಗಲು ಸ್ತೋತ್ರವು ನಿಮಗೆ ಸಹಾಯ ಮಾಡುತ್ತದೆ.

- ಇದು ನಿಮ್ಮಲ್ಲಿನ ಆತಂಕಗಳನ್ನು ತೆಗೆದುಹಾಕುತ್ತದೆ.

- ಇದು ನಿಮ್ಮ ಜೀವನದ ಹಾದಿಗೆ ಧೈರ್ಯವನ್ನು ತರುತ್ತದೆ.

- ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದ ಕಷ್ಟದ ದಿನಗಳಲ್ಲಿ ನಿಮ್ಮನ್ನು ಉನ್ನತೀಕರಿಸಲಾಗುತ್ತದೆ ಮತ್ತು ಆಳವಾದ ಅತೃಪ್ತಿಯಿಂದ ನಿಮ್ಮನ್ನು ಉಳಿಸುತ್ತದೆ.

- ನಿಮ್ಮ ಪಾಪಗಳನ್ನು ನಾಶಮಾಡುವುದರ ಜೊತೆಗೆ ಅದು ನಿಮ್ಮನ್ನು ಸ್ವಯಂ ಅನುಮಾನಗಳಿಂದ ದೂರ ಮಾಡುತ್ತದೆ.

- ಆದಿತ್ಯ ಹೃದಯ ಸ್ತೋತ್ರವು ಜೀವನದಲ್ಲಿ ಸಮೃದ್ಧಿ ಮತ್ತು ಸ್ಪಷ್ಟತೆಯನ್ನು ತರುತ್ತದೆ.

- ಸ್ತೋತ್ರವು ನಿಮ್ಮನ್ನು ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸ ಮೂಡುವಂತೆ ಮಾಡುತ್ತದೆ.

- ಈ ಸ್ತೋತ್ರವು ನಿಮ್ಮನ್ನು ರೋಗ ಮುಕ್ತವಾಗಿರಿಸುತ್ತದೆ ಮತ್ತು ಅನೇಕ ಗಂಭೀರ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

​ಆದಿತ್ಯ ಹೃದಯ ಸ್ತೋತ್ರ ಪಠಿಸುವ ವಿಧಾನ

ಪ್ರಾರಂಭದಲ್ಲಿ ಇದು ಸ್ವಲ್ಪ ಕಷ್ಟ ಆಗಬಹುದು. ಆದರೆ ಒಮ್ಮೆ ನೀವು ನಿರಂತರವಾಗಿ ಅಭ್ಯಾಸ ಮಾಡಿದರೆ ಅದರ ಸೆಳವನ್ನು ಎಂದಾದರೂ ಅನುಭವಿಸಬಹುದು. ಭಗವಾನ್ ಸೂರ್ಯನಿಗೆ ನಿಮ್ಮ ಕೃತಜ್ಞತೆಯನ್ನು ಅರ್ಪಿಸಿ. ಕೇಳುವಾಗ ನಿಮ್ಮ ಸ್ವಾರ್ಥವನ್ನು ಪಕ್ಕಕ್ಕಿಡಿ. ಪ್ರಪಂಚದ ಒಳಿತಿಗಾಗಿ ಸ್ವಲ್ಪ ಪ್ರಾರ್ಥಿಸಿ. ಪ್ರತಿ ದಿನ ನಿಮ್ಮ ದಿನದ ಹತ್ತು ನಿಮಿಷಗಳನ್ನು ಭಗವಾನ್ ಸೂರ್ಯನಿಗೆ ಕೊಡುವುದು ಮತ್ತು ಈ ದೈವಿಕ ಸ್ತೋತ್ರವನ್ನು ಪಠಿಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಆದ್ದರಿಂದ, ಯಾವುದಕ್ಕೂ ಕಾಯಬೇಡಿ. ಭಾನುವಾರವನ್ನು ಸೂರ್ಯನಿಗಾಗಿ ಅರ್ಪಿಸಿ. ನಿಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಆರಂಭಿಸಿ. ‌   ‌    
***

ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ಬರುವ 107 ನೆಯ ಸರ್ಗದಲ್ಲಿ ಆದಿತ್ಯ ಹೃದಯ ಮಹರ್ಷಿ ಅಗಸ್ತ್ಯರಿಂದ ಪ್ರಭು ಶ್ರೀರಾಮಚಂದ್ರನಿಗೆ ಉಪದೇಶವಾದ ಕುರಿತ ಉಲ್ಲೇಖ ನಮಗೆ ಲಭಿಸುತ್ತದೆ.

ದೇವತೆಗಳೊಡನೆ ಯುದ್ಧವನ್ನು ವೀಕ್ಷಿಸಲು ಆಗಮಿಸಿದ್ದ ಅಗಸ್ತ್ಯ ಮಹರ್ಷಿಗಳು ಯುದ್ಧದಲ್ಲಿ ದಣಿದು ಮುಂದೆ ಯುದ್ಧ ಸನ್ನದ್ಧನಾಗಿ ರಾವಣ ವಧೆಯ ಕುರಿತು ಕಂಗೆಟ್ಟು ದಿಕ್ಕುತೋಚದೆ ನಿಂತಿದ್ದ ರಾಮನನ್ನು ಕಂಡು ಉಪದೇಶಿಸಿದ ಮಂತ್ರ ಸದೃಶ್ಯವಾದ ಸ್ತೋತ್ರವೇ ಆದಿತ್ಯ ಹೃದಯ.

ಆದಿತ್ಯ ಹೃದಯ ಮಂತ್ರೋಪದೇಶ, ಹಾಗೂ ಅದರ ಜಪ ಶ್ರೀರಾಮನಲ್ಲಿ ಹೊಸ ಉತ್ಸಾಹ ತುಂಬಿತು. ಶ್ರೀ ರಾಮನ ಜಪಬಲದಿಂದ ಆದಿತ್ಯದೇವನು ಪ್ರತ್ಯಕ್ಷನಾಗುತ್ತಾನೆ. ರಾಮಚಂದ್ರನಿಗೆ ಮನೋಬಲವನ್ನು ಜಾಗೃತಗೊಳಿಸಿ ಅನುಗ್ರಹಿಸುತ್ತಾನೆ. ಶ್ರೀರಾಮನನ್ನು ನೋಡಿ ಮನದುಂಬಿ, ಸಂತಸದಿಂದ ಕೂಡಿದ ಆದಿತ್ಯ ದೇವನು ಎಲ್ಲ ದೇವತೆಗಳ ಸಮೂಹದಲ್ಲಿ ತಾನೂ ನಿಂತು, ಬೇಗ ಯುದ್ಧ ಮಾಡು ಎಂಬ ಮಾತನ್ನು ಹೇಳಿದನು.

ಇದರಿಂದ ಸುಪ್ತಾವಸ್ಥೆಯಲ್ಲಿದ್ದ ರಾಮನ ಆತ್ಮ ಸ್ಥೈರ್ಯ ಜಾಗೃತಾವಸ್ಥೆಯಲ್ಲಿ ಪ್ರಕಟವಾಯಿತು. ರಾವಣನನ್ನು ನಿಶ್ಚಯವಾಗಿ ಸಂಹರಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತು. ಶ್ರೀರಾಮನು ತನ್ನ ಶಕ್ತಿಯನ್ನೆಲ್ಲಾ ಒಂದುಗೂಡಿಸಿ, ಆ ರಾವಣನನ್ನ ಸಂಹಾರ ಮಾಡುವುದಾಗಿ ಸಂಕಲ್ಪವನ್ನ ಮಾಡಿದನು. ಇದರ ಗೂಢಾರ್ಥ ಯಾವುದೇ ಕಾರ್ಯಕ್ಕಾಗಲೀ ಇಚ್ಛಾಶಕ್ತಿಯ ಜ್ಞಾನಶಕ್ತಿಯ – ಕ್ರಿಯಾಶಕ್ತಗಳ ಸಮ್ಮಿಲನ ಅಗತ್ಯ ಎಂಬುದು ಸ್ಪಷ್ಟ.

ಸವಿತೃ (ಆದಿತ್ಯ) ಮಂತ್ರೋಪದೇಶದ ನಂತರ ಅಗಸ್ತ್ಯರ ಸೂಚನೆಯಂತೆ ಬ್ರಹ್ಮಾಸ್ತ್ರ ಹೂಡಿದ ರಾಮನ ಬಾಣದಲ್ಲಿ ಸವಿತೃಶಕ್ತಿ ಜಾಗೃತವಾಗುತ್ತದೆ. ರಾಮ ಪ್ರಯೋಗಿಸಿದ ಬಾಣದಿಂದ ರಾವಣನ ಕವಚ ಛೇದನವಾಗಿ ರಾವಣ ಸಾಯುತ್ತಾನೆ. ಅಗಸ್ತ್ಯರಿಂದ ಉಪದೇಶಿಸಿಸಲ್ಪಟ್ಟ ಆದಿತ್ಯ ಹೃದಯದಿಂದ ರಾವಣನ ವಧೆ ಮಾಡುವ ಶ್ರೀರಾಮನ ತಪಸ್ಸು ಪೂರ್ಣವಾಗುತ್ತದೆ.

ದೇವತಾ ಕಾರ್ಯದ ಸಿದ್ಧಿಗೋಸ್ಕರ, ಭೂಮಿಯ ಮೇಲೆ ಅವತರಿಸಿದ ಶ್ರೀರಾಮನ ಜಯಕ್ಕಾಗಿ ಎಲ್ಲ ದೇವತೆಗಳೂ ಒಂದಲ್ಲ ಒಂದು ರೀತಿ ಸಹಕರಿಸಿದರು. ಇದರಲ್ಲಿ ಆದಿತ್ಯನ ಪಾತ್ರ ತುಂಬಾ ಪ್ರಮುಖವಾದುದು. ಶ್ರೀರಾಮಾವತಾರದ ಉದ್ದೇಶ ದುಷ್ಟ ಸಂಹಾರ, ರಾವಣ ವಧೆ. ಇದರಲ್ಲಿ ಒದಗಿದಂತಹ ಕ್ಲೇಶವನ್ನು ಪರಿಹರಿಸಿ ರಾಮನಲ್ಲಿ ಹೊಸ ಚೈತನ್ಯ ಮೂಡಿಸಿದವನೇ ಆದಿತ್ಯ ದೇವ.

ಅವಧ್ಯ ಎಂದು ವರ ಪಡೆದ ಈ ಮಹಾನ್ ತಪಸ್ವಿಯಾದ
ದಶಕಂಠ ರಾವಣ ಸಂಹಾರ ಎಂಬುದು ಸಾಮಾನ್ಯ ಸಂಗತಿ ಅಲ್ಲ. ಮಹಾತಪಸ್ವಿ, ಬ್ರಹ್ಮ ಜ್ಞಾನಿಗಳಾದ ಅಗಸ್ತ್ಯರ ನೆರವು ಶ್ರೀಮನ್ನಾರಯಣನಾದ ಶ್ರೀ ರಾಮನಿಗೂ ಬೇಕಾಗಿ ಬಂತು. ಇಲ್ಲಿ ಗುರಿ ಮತ್ತು ಗುರುವಿನ ಮಹತ್ವ ಅಡಕವಾಗಿರುವುದನ್ನು ಗಮನಿಸಬಹುದಾಗಿದೆ. ಗುರುವಿನ ಅನುಗ್ರಹ, ಉಪದೇಶದ ಹಿರಿಮೆಯನ್ನು ಲೋಕಕ್ಕೆ ಶ್ರೀ ಪ್ರಭು ರಾಮಚಂದ್ರ ಈ ಪ್ರಸಂಗದಲ್ಲಿ ಸ್ಪಷ್ಟ ಪಡಿಸಿದ ರೀತಿ ಅಮೋಘ.

ಸನಾತನ ರಹಸ್ಯ ಅಡಗಿರುವ 31 ಶ್ಲೋಕಗಳುಳ್ಳ

ಆದಿತ್ಯ ಹೃದಯವೆಂಬ ಈ ಮಹಾಸ್ತುತಿಯನ್ನು ನಿತ್ಯ ಪಠಿಸುವುದರಿಂದ ನಮ್ಮ ಮನಃಶಾಂತಿಯನ್ನು ಕದಡುವ, ಸ್ವಾಸ್ಥ್ಯಕ್ಕೆ ಪತಿಬಂಧಕರೂಪ ವಾಗಿರುವ ಭಾವನೆಗಳನ್ನು ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯ (ಅರಿಷಡ್ವರ್ಗ) ಗಳೆಂಬ ಅಂತಃಶತ್ರುಗಳು ನಾಶವಾಗುತ್ತಾರೆ. ಜಯ ಲಭಿಸುವುದು, ಆತ್ಮವಿಶ್ವಾಸ ಹೆಚ್ಚುತ್ತದೆ, ಆಯಸ್ಸು ವೃದ್ಧಿಯಾಗುತ್ತದೆ. ಅಕ್ಷಯವಾದ ಪರಮ ಮಂಗಳವುಂಟಾಗುವುದು.

******
video is from youtube uploaded by Rajshri Soul

Aditya Hrudayam, is a devotional hymn associated with Aditya or the Sun God (Surya) and was recited by the sage Agastya to Rāma on the battlefield before fighting the demon king Rāvana. Agastya teaches Rāma, who is fatigued after the long battle with various warriors of Lanka, the procedure of worshipping the Sun God for strength to defeat the enemy. These verses belong to Yuddha Kānda in the Rāmāyana as composed by Agastya and compiled by Vālmīki.

********

ಆದಿತ್ಯ ಗಾಯತ್ರಿ

ಓಂ ಭಾಸ್ಕರಾಯ  ವಿದ್ಮಹೇ ಮಹದ್ದ್ಯುತಿಕರಾಯ  ಧೀಮಹಿ । ತನ್ನೋ ಆದಿತ್ಯಃ  ಪ್ರಚೋದಯಾತ್ ।।


ಆದಿತ್ಯ ದೇವತಾ ಮಂತ್ರಃ 


ಘೃಣಿಸ್ಸೂರ್ಯ  ಆದಿತ್ಯೋ   ನ  ಪ್ರಭಾವಾತ್ಯಕ್ಷರಮ್ । ಮಧುಕ್ಷರಂತಿ   ತದ್ರಸಮ್ । ಸತ್ಯಂ ವೈ  ತದ್ರಸಮಾಪೋ  ಜ್ಯೋತೀ
 ರಸೋsಮೃತಂ  ಬ್ರಹ್ಮ  ಭೂರ್ಭುವಸ್ಸುರೋಹಮ್ ।।


 ಮುನ್ನುಡಿ 

 ಸೂರ್ಯದೇವನ  ಸ್ತುತಿಯಾದ  ಆದಿತ್ಯಹೃದಯವು  ಅಗಸ್ತ್ಯ ಮುನಿಗಳ  ಕೃತಿಯೆಂದು  ಪ್ರಸಿದ್ಧ . ಇದು ವಾಲ್ಮೀಕಿ ರಾಮಾಯಣದ  ಯುದ್ಧಕಾಂಡದಲ್ಲಿ ಬರುವುದು .
            
                               ಮೊದಲನೆಯ ಎರೆಡು  ಶ್ಲೋಕಗಳು  ಈ ಸ್ತೋತ್ರವು ಶ್ರೀಮಾರನಿಗೆ  ಅರ್ಪಿತವಾದಾಗಿನ ಸನ್ನಿವೇಶವನ್ನು ವರ್ಣಿಸುತ್ತವೆ . ರಾವಣನ ಸಾರಥಿಯು  ತನ್ನೊಡೆಯನ  ಪ್ರಾಣ ರಕ್ಷಣೆಗಾಗಿ  ರಥವನ್ನು  ರಣರಂಗದಿಂದ ದೂರ  ಒಯ್ದ ಕಾರಣ, ಶ್ರೀ ರಾಮ  ರಾವಣರ ಸಂಗ್ರಾಮದಲ್ಲಿ  ಅನಿರೀಕ್ಷಿತ  ವಿರಾಮ ಒದಗಿತ್ತು . ಆಗ  ಮನುಷ್ಯ ಮಾತ್ರನಿಂದ ಜಯಸಲಸಾಧ್ಯನಾದ ಪ್ರಬಲ  ರಾವಣನ ಸಂಹಾರದ ಪರಿಯನ್ನು  ಕುರಿತು ಆಲೋಚನ  ರತನಾಗಿದ್ದ  ಶ್ರೀರಾಮಚಂದ್ರ , ದೇವತೆಗಳಿಂದಲೂ  ಅಜೇಯನಾಗುವ  ವರವನ್ನು  ಬೇರೆ ಪಡೆದಿದ್ದ  ರಾವಣ . ಶ್ರೀರಾಮನಿಗೆ  ತನ್ನ ದೈವತ್ವದ  ಅರಿವಿದ್ದರೂ , ತನ್ನ ಅವತರಣದ  ಕಾರ್ಯಸಿದ್ಧಿಗಾಗಿ  ಮನುಷ್ಯತ್ವದ  ಮೇಲೆ  ಒತ್ತು ನೀಡಿ  ದುಷ್ಟಸಂಹಾರವನ್ನು  ಮಾಡಬೇಕಿತ್ತು .

                              ಇಂತಹ ದ್ವಂದ್ವದಲ್ಲಿ  ಸಿಲುಕಿದ  ಶ್ರೀರಾಮನಿಗೆ  ಈ ಸ್ತೋತ್ರದ ಮೂಲಕ  ವೇದಾಂತದ ತತ್ತ್ವವಾದ  "ಜೀವೋ ಬ್ರಹ್ಮೈವ  ನಾಪರಃ " 'ಜೀವಾತ್ಮನೂ  ಪರಮಾತ್ಮನೂ  ಒಂದೇ , ಬೇರೆಯಲ್ಲ 'ಎಂಬುದನ್ನು  ಅಗಸ್ತ್ಯ ಮಹರ್ಷಿಗಳು
ಉಪದೇಶಿಸಿದರು . ಮನುಷ್ಯಸಾಮಾನ್ಯರ  ವಿಷಯದಲ್ಲಿ  ಹೇಳುವುದಾದರೆ ,ಅವರು ದೈವತ್ವಕ್ಕೆ ಏರುತ್ತಾರೆ ; ಅದೇ  ಅವತಾರ ಪುರುಷರ  ಬಗ್ಗೆ ಹೇಳುವುದಾದರೆ  ಅವರು ಮಾನವತ್ವಕ್ಕೆ  ಇಳಿದು ಬರುತ್ತಾರೆ .

                              ಆದಿತ್ಯ  ಹೃದಯದ ೩-೫  ಶ್ಲೋಕಗಳು  ಉದ್ದೇಶ ಮತ್ತು ಫಲದಲ್ಲಿ  ಗಾಯತ್ರೀಮಂತ್ರಕ್ಕೆ  ಸಮವಾದರೂ  ಆರಧಿಸಬೇಕಾದ  ಆ ದಿವ್ಯ ಪ್ರಭೆಯ  (ವರೇಣ್ಯಂ ಭರ್ಗಃ ) ವರ್ಣನೆಯಲ್ಲಿ  ವಿಸ್ತೃತವಾಗಿದೆ . ಜ್ಞಾನಿಗಳಾದ ಅಗಸ್ತ್ಯ  ಮುನಿಗಳಿಗೆ  ಶ್ರೀರಾಮ ,ಭಗವಾನ್ ವಿಷ್ಣುವಿನ ಅವತಾರವೆಂಬುವದರಲ್ಲಿ  ಸಂಶಯವಿರಲಿಲ್ಲ . ಸಾಧಾರಣ ಮನುಷ್ಯರಿಗೆ  ಗುರುವು ಗಾಯತ್ರೀ  ಮಂತ್ರೋಪದೇಶವನ್ನು  ಮಾಡುವಂತೆ  ಶ್ರೀರಾಮನಿಗೆ  ಸನಾತನವೂ  ಗುಹ್ಯವೂ  ಆದ ಆದಿತ್ಯ  ಹೃದಯವನ್ನು  ಉಪದೇಶಿಸಲಾಯಿತು . ತನ್ನ  ದೈವತ್ವದ  ಅರಿವಿದ್ದ  ಶ್ರೀರಾಮನು  ಮನುಷ್ಯರಿಗೆ  ಸಾಧಕ ಮತ್ತು ಸಾಧ್ಯ (ಪರಬ್ರಹ್ಮ )ಗಳ  ಅಭೇದವನ್ನು  ತಿಳಿಸಲು  ಇಚ್ಛಿಸಿದ . ಶ್ರದ್ಧಾನ್ವಿತರಾಗಿ  ಈ ಸ್ತೋತ್ರವನ್ನು  ಪಠಿಸಿದಾಗ  ಸಾಧನಾಪಥದಲ್ಲಿ  ಬರುವ  ಅಡೆತಡೆಗಳೆಲ್ಲ  ಪರಿಹಾರವಾಗಿ  ಇಷ್ಟ  ಪ್ರಾಪ್ತಿಯಾಗುವುದು .

                              ಪರಬ್ರಹ್ಮನಲ್ಲಿ  ಐಖ್ಯವಾಗುವ  ಭಗವಂತನ ವಿವಿಧ  ರೂಪಗಳ  ವರ್ಣನೆಯನ್ನು ೬-೧೪  ಶ್ಲೋಕಗಳಲ್ಲಿ ಹೇಳಲಾಗಿದೆ . ೧೬-೨೧  ಶ್ಲೋಕಗಳಲ್ಲಿರುವ  ನಮನಗಳು  ಸ್ಥೂಲ  ಮತ್ತು ಸೂಕ್ಷ್ಮ ರೂಪಗಳು  ಒಂದಾಗುವುದನ್ನು  ಸೂಚಿಸುತ್ತವೆ . ಹೀಗೆ ಶ್ರೀರಾಮನಿಗೆ  ೨೬ ಮತ್ತೆ ೨೭ನೆಯ  ಶ್ಲೋಕಗಳಲ್ಲಿ  ನೀಡಿರುವ  ಆದಿತ್ಯಧ್ಯಾನವನ್ನು   ಕುರಿತ ಉಪದೇಶವು 'ತತ್  ತ್ವಂ ಅಸಿ ' ಮಹಾವಾಕ್ಯದ  ಅನುಭೂತಿಯತ್ತ ಕರದೊಯ್ಯುತ್ತದೆ .

                              ಒಟ್ಟಿನಲ್ಲಿ ಆದಿತ್ಯನು  ತನ್ನ ಮಾನವ ಪ್ರತಿರೂಪಿ  ಶ್ರೀರಾಮನಿಗೆ ಉದ್ದೇಶ್ಯವನ್ನು  ತ್ವರಿತವಾಗಿ  ಪೂರೈಸಿ  ಎಲ್ಲರಿಗೂ  ಆನಂದವನ್ನುಂಟು  ಮಾಡುವಂತೆ  ಕೊನೆಯ ಶ್ಲೋಕದಲ್ಲಿ ಪ್ರೇರೇಪಿಸುತ್ತಾನೆ .

                              ಹೆಚ್ಚು ಜನರು  ಈ ಸ್ತೋತ್ರವನ್ನು  ಶ್ರದ್ಧಾಭಕ್ತಿಗಳಿಂದ  ಪಠಿಸಿ  ತನ್ಮೂಲಕ  ಪರಬ್ರಹ್ಮನಲ್ಲಿ  ಐಖ್ಯವಾಗುವ  ಪಥದಲ್ಲಿ  ಮುಂದೆ ಸಾಗಲಿ .


                                              ಆದಿತ್ಯ ಹೃದಯ

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || 1 ||
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಾಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||

೧-೨. ದೇವತೆಗಳೊಡನೆ  ಯುದ್ಧವನ್ನು ವೀಕ್ಷಿಸಲು  ಬಂದಿದ್ದ ಭಗವಾನ್ ಅಗಸ್ತ್ಯ  ಋಷಿಗಳು  ಯುದ್ಧದಲ್ಲಿ ದಣಿದಿದ್ದ , ಮುಂದೆ ಯುದ್ಧ ಸನ್ನದ್ಧನಾಗಿ  ನಿಂತಿರುವ  ರಾವಣನನ್ನು ಕಂಡು ಚಿಂತಿತನಾಗಿದ್ದ ರಾಮನನ್ನು ಕಂಡು ಇಂತೆಂದರು :

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||

೩.  ಎಲೈ ರಾಮನೇ ,ಮಹಾಬಾಹುವೇ  ,ಯಾವುದರಿಂದ ನೀನು  ಯುದ್ಧದಲ್ಲಿ  ಎಲ್ಲ  ಶತ್ರುಗಳನ್ನು  ಜಯಸುತ್ತಿಯೋ  ಆ ಸನಾತನ  ರಹಸ್ಯವನ್ನು  ಕೇಳು.

ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ  ಶುಭಮ್ || 4 ||

೪. ಆದಿತ್ಯ ಹೃದಯವೆಂಬ  ಈ ಮಹಾಸ್ತುತಿಯನ್ನು  ನಿತ್ಯವೂ  ಪಠಿಸಿದರೆ  ನಿನ್ನ ಎಲ್ಲ ಶತ್ರುಗಳೂ  ನಾಶವಾಗುತ್ತಾರೆ , ನಿನಗೆ ಜಯ ಲಭಿಸುವುದು  ಮತ್ತು  ಅಕ್ಷಯವಾದ ಪರಮ  ಮಂಗಳವುಂಟಾಗುವುದು .

ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್ || 5 ||

೫. ಇದು ಎಲ್ಲ ಮಂಗಳಕ್ಕೂ  ಮಂಗಳಕರವಾದುದು , ಎಲ್ಲ ಪಾಪಗಳನ್ನು  ನಾಶ ಮಾಡುವಂತಹುದು ,ಚಿಂತೆ - ಶೋಕಗಳನ್ನು
ಪರಿಹರಿಸಿವಂತಹುದು  ಮತ್ತು ದೀರ್ಘಾಯಸ್ಸನ್ನು  ನೀಡುವಂತಹುದು .

ರಶ್ಮಿಮಂತಂ  ಸಮುದ್ಯಂತಂ  ದೇವಾಸುರ  ನಮಸ್ಕೃತಂ |
ಪೂಜಯಸ್ವ  ವಿವಸ್ವಂತಮ್  ಭಾಸ್ಕರಂ ಭುವನೇಶ್ವರಮ್ || ೬||


೬. ದೇವಾಸುರರಿಂದ ನಮಸ್ಕರಿಸಲ್ಪಡುವ , ರಶ್ಮಿಗಳಿಂದ  ಕೂಡಿದ ,ತನ್ನ ಪ್ರಭೆಯಿಂದ ಬೇರೆ ಬೆಳಗುವ  ವಸ್ತುಗಳನ್ನು  ಕಳೆಗುಂದಿಸುವ , ಜಗತ್ತಿಗೆ ಒಡೆಯನಾದ , ಉದಯಸುತ್ತಿರುವ ಭಾಸ್ಕರನನ್ನು  ಪೂಜಿಸು .

 ಸರ್ವದೇವಾತ್ಮಕೋ  ಹ್ಯೇಷಃ  ತೇಜಸ್ವೀ  ರಶ್ಮಿಭಾವನಃ   |
 ಏಷ ದೇವಾಸುರಗಣಾಂಲ್ಲೋಕಾನ್  ಪಾತಿ  ಗಭಸ್ತಿಗಭಸ್ತಿಭಿಃ   || ೭ ||

೭.  ಅವನು ಎಲ್ಲ ದೇವತೆಗಳನ್ನೂ  ಪ್ರತಿನಿಧಿಸುತ್ತಾನೆ . ಅವನು ತೇಜಸ್ವಿ ಮತ್ತು  ತನ್ನ ಕಿರಣಗಳಿಂದ  ಎಲ್ಲರನ್ನು ಪೋಷಿಸುತ್ತಿರುವನು . ಅವನು ತನ್ನ ಶಕ್ತಿಯುತ  ಕಿರಣಗಳಿಂದ ದೇವಾಸುರರನ್ನೂ  ಲೋಕಗಳನ್ನೂ  ರಕ್ಷಿಸುತ್ತಿರುವನು .

ಏಷ  ಬ್ರಹ್ಮಾ   ಚ ವಿಷ್ಣುಶ್ಚ  ಶಿವಃ ಸ್ಕಂದಃ  ಪ್ರಜಾಪತಿಃ   |
 ಮಹೇಂದ್ರೋ  ಧನದಃ  ಕಾಲೋ  ಯಮಃ  ಸೋಮೋ  ಹ್ಯಪಾಂ ಪತಿಃ   || ೮ ||

೮. ಅವನೇ ಬ್ರಹ್ಮ ,ವಿಷ್ಣು , ಶಿವ ,ದೇವಸೇನಾಪತಿ  ಸ್ಕಂದ , ಪ್ರಜಾಪತಿ  ಮತ್ತು ಮಹೇಂದ್ರ , ಕುಬೇರನೂ  ಅವನೇ .  ಅವನೇ  ಕಾಲ ಮತ್ತು  ಯಮ .  ಸೋಮ ಮತ್ತು ವರುಣರು  ಅವನೇ .

ಪಿತರೋ ವಸವಃ  ಸಾಧ್ಯಾ  ಹ್ಯಶ್ವಿನೌ  ಮರುತೋ  ಮನುಃ   |
 ವಾಯುರ್ವಹ್ನಿಃ  ಪ್ರಜಾಪ್ರಾಣಃ  ಋತುಕರ್ತಾ  ಪ್ರಭಾಕರಃ  ||೯||

೯.  ಅವನೇ  ಪಿತೃಗಳು , ಅಷ್ಟವಸುಗಳೂ  ಅವನೇ , ಸಾಧ್ಯರೂ ಅಶ್ವಿನೀ  ದೇವತೆಗಳೂ   ಮರುದ್ಗಣಗಳೂ  ಮತ್ತು  ಮನುವೂ ಅವನೇ . ಅವನೇ ವಾಯು ಮತ್ತು ಅಗ್ನಿ . ಎಲ್ಲರ ಪ್ರಾಣಶಕ್ತಿಯೂ ಅವನೇ.  ಆರು  ಋತುಗಳನ್ನು ಉಂಟುಮಾಡುವ  ಪ್ರಭಾಕರನೂ  ಅವನೇ .

ಆದಿತ್ಯಃ  ಸವಿತಾ  ಸೂರ್ಯಃ ಖಗಃ ಪೂಷಾ  ಗಭಸ್ತಿಮಾನ್   |
ಸುವರ್ಣಸದ್ರುಶೋ  ಭಾನುರ್ಹಿರಣ್ಯರೇತಾ  ದಿವಾಕರಃ   ||೧೦||


೧೦. ಅವನೇ ಅದಿತಿಪುತ್ರ ,ವಿಶ್ವಕರ್ತಾ ,ಕ್ರಿಯೋತ್ತೇಜಕ ,ಆಕಾಶದಲ್ಲಿ ಚಲಿಸುವವನು ,ಪೋಷಕನು ,ಎಲ್ಲ ದಿಕ್ಕುಗಳನ್ನು  ಬೆಳಗುವವನು ,ಸ್ವರ್ಣಮಯ ಪ್ರಭೆಯುಳ್ಳವನು , ವಿಶ್ವೋತ್ಪ್ಪತ್ತಿಯ ಬೀಜ  ಮತ್ತು ಹಗಲನ್ನು  ಉಂಟು ಮಾಡುವವನು .


ಹರಿದಶ್ವಃ ಸಹಸ್ರಾರ್ಚಿಃ  ಸಪ್ತಸಪ್ತಿರ್ಮರೀಚಿಮಾನ್  
ತಿಮಿರೋನ್ಮಥನಃ  ಶಂಭುಸ್ತ್ವಷ್ಟಾ   ಮಾರ್ತಾಂಡ  ಅಂಶುಮಾನ್  ||೧೧||

೧೧. ಅವನು ಹಸಿರು ಕುದುರೆಗಳುಳ್ಳವನು  (ಸರ್ವವ್ಯಾಪಿ ),ಅಸಂಖ್ಯ  ಕಿರಣಗಳುಳ್ಳವನು ,ಏಳು  ಇಂದ್ರಿಯಗಳ  (ಎರೆಡು  ಕಣ್ಣು , ಎರೆಡು  ಕಿವಿ ,ಎರೆಡು  ಮೂಗು  ಮತ್ತು ಒಂದು ನಾಲಿಗೆ ) ಶಕ್ತಿ ,ಕತ್ತಲೆಯನ್ನು  ಹೋಗಲಾಡಿಸುವವನು ,ಸಂತೋಷವನ್ನುಂಟು  ಮಾಡುವವನು ,ಭಕ್ತರ ಅಶುಭವನ್ನು ಹೋಗಲಾಡಿಸುವವನು ,ನಿರ್ಜೀವ
ಜಗದಂಡಕ್ಕೆ   ಪ್ರಾಣದಾಯಕನು ಮತ್ತು ಕಿರಣಗಳಿಂದ  ಕೂಡಿರುವವನು .

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋ‌உದಿತೇಃ ಪುತ್ರಃ ಶಂಖಃ ಶಿಶಿರನಾಶನಃ || ೧೨ ||

 ೧೨.  ಅವನೇ ಹಿರಣ್ಯಗರ್ಭನು ,ಶೀತಲನೂ  ತಪಿಸುವವನೂ ಅವನೇ, ಉಜ್ವಲ  ಕಿರಣಗಳುಳ್ಳ  ರವಿಯೂ  ಅವನೇ .ಒಳಗೆ
ಅಗ್ನಿಯನ್ನು  ಧರಿಸಿದ ಅದಿತಿ ಪುತ್ರನು ಅವನು .ಅತ್ಯಂತ  ಶುಭಾದಾಯಕನೂ  ಜಡತೆಯನ್ನು ನಾಶಮಾಡುವವನೂ  ಅವನು .

ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || ೧೩||

೧೩. ಅವನು ಆಕಾಶಕ್ಕೆ  ಒಡೆಯನು ,ತಮಸ್ಸನ್ನು  ಹೋಗಲಾಡಿಸುವವನು ,ಋಕ್ -ಯಜಸ್-ಸಾಮವೇದಗಳಲ್ಲಿ ಪಾರಂಗತನಾದವನು,  ಮಳೆಯನ್ನು  ಸುರಿಸುವವನು,ನೀರಿನ ಮಿತ್ರನು  ಮತ್ತು ವಿಂಧ್ಯಪರ್ವತ  ಶ್ರೇಣಿಯನ್ನು  ದಾಟಿದವನು .

ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ || ೧೪ ||


೧೪. ಅವನು ಯಾವಾಗಲೂ  ಸೃಷ್ಟಿಕ್ರಿಯೆಯಲ್ಲಿ  ನಿರತನಾದವನು (ಬ್ರಹ್ಮಾ ),ಮಂಡಲಾಕಾರನು (ಕೌಸ್ತುಭದಿಂದ  ಶೋಭಿಸುವ  ವಿಷ್ಣು ), ಮತ್ತು ಎಲ್ಲವನ್ನೂ  ನಾಶ ಮಾಡುವವನು  (ಶಿವ ). ಅವನು ಪಿಂಗಳವರ್ಣವುಳ್ಳವನು ( ಉದಯಿಸುವ ಸೂರ್ಯ ), ಮತ್ತು ಎಲ್ಲವನ್ನೂ ತಪಿಸುವವನು . ಅವನೇ ಕ್ರಾಂತದರ್ಶಿ ,ವಿಶ್ವಸ್ವರೂಪ ,ಮಹಾತೇಜನು ,ಎಲ್ಲಾರಿಗೂ  ಪ್ರಿಯನಾದವನು  ಮತ್ತು ಎಲ್ಲ ಕ್ರಿಯೆಗಳನ್ನೂ  ಹುಟ್ಟಿಸುವವನು .

ನಕ್ಷತ್ರ ಗ್ರಹ ತಾರಾಣಾಮ್ ಅಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋ‌உಸ್ತು ತೇ || ೧೫||

೧೫.  ನಕ್ಷತ್ರಗ್ರಹ ತಾರಾಗಣಗಳಿಗೆ   ಅವನು ಅಧಿಪನು  ಮತ್ತು  ವಿಶ್ವ್ದಲ್ಲಿರುವುದಕ್ಕೆಲ್ಲಾ  ಮೂಲಪುರುಷನು . ಎಲ್ಲ ತೇಜಸ್ಸುಗಳಿಗೆ  ಅವನೇ ಮೂಲ ತೇಜಸ್ಸು . ದ್ವಾದಶರೂಪದಲ್ಲಿ  ಆವಿರ್ಭವಿಸಿರುವ  ನಿನಗೆ ನಮಸ್ಕಾರ .

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || ೧೬||

೧೬. ಪೂರ್ವಾಚಲದೇವತೆಗೆ ನಮಸ್ಕಾರ , ಪಶ್ಚಿಮಾಚಲದೇವತೆಗೆ  ನಮಸ್ಕಾರ, ಜ್ಯೋತಿರ್ಗಣಗಳ  ಒಡೆಯನಿಗೂ  ಹಗಲಿನ ಒಡೆಯನಿಗು  ನಮಸ್ಕಾರ .

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || ೧೭ ||

೧೭. ಜಯವನ್ನುಂಟು  ಮಾಡುವವನಿಗೂ  ಐಶ್ವರ್ಯಪ್ರದನಿಗೂ  ಹಳದಿ ಕುದುರೆಯುಳ್ಳವನಿಗೂ ನಮಸ್ಕಾರ ,ಅಸಂಖ್ಯ ಕಿರಣಗಳುಳ್ಳ  ಆದಿತ್ಯನಿಗೆ  ನಮಸ್ಕಾರ .

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || ೧೮ ||

೧೮. ಉಗ್ರನಿಗೂ ,ವೀರನಿಗೂ , ವೇಗವಾಗಿ ಚಲಿಸುವವನಿಗೂ ನಮಸ್ಕಾರ, ತಾವರೆಯನ್ನು ಅರಳಿಸುವವನಿಗೂ  ಮಾರ್ತಾಂಡನಿಗೂ  ನಮಸ್ಕಾರ .

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || ೧೯ ||

೧೯. ಬ್ರಹ್ಮಾ ಶಿವ  ಅಚ್ಯುತರ ಒಡೆಯನಿಗೂ ,ಸೂರ್ಯನಿಗೂ ,ಎಲ್ಲವನ್ನೂ  ಬೆಳಗುವ ಮತ್ತು ಎಲ್ಲವನ್ನೂ  ಭಕ್ಷಿಸುವ  ಆದಿತ್ಯವರ್ಚಸ್ಸಿಗೂ  ಮತ್ತು  ಭಯಂಕರ  ಶರೀರವುಳ್ಳವನಿಗೂ  ನಮಸ್ಕಾರ .

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || ೨೦ ||

೨೦. ತಮೋನಾಶಕನಿಗೂ,ಹಿಮನಾಶಕನಿಗೂ , ಶತ್ರುನಾಶಕನಿಗೂ ,ಅನಂತಾತ್ಮನಿಗೂ ,ಕೃತಘ್ನರನ್ನು ನಾಶ ಮಾಡುವವನಿಗೂ  ,ದೇವನಿಗೂ  ಮತ್ತು ಜ್ಯೋತಿಗಳ ಒಡೆಯನಿಗೂ  ನಮಸ್ಕಾರ .

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋ‌உಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ || ೨೧ ||

೨೧. ಕರಗಿದ ಚಿನ್ನದಂತೆ  ಬೆಳಗುತ್ತಿರುವವನಿಗೂ , ಅಗ್ನಿಸ್ವರೂಪನಿಗೂ ,ವಿಶ್ವಕರ್ಮನಿಗೂ  ಕತ್ತಲೆಯನ್ನು  ನಾಶಮಾಡುವವನಿಗೂ ವಿಶ್ವಸಾಕ್ಷಿಯಾದ ಜ್ಯೋತಿರ್ಮಯನಿಗೂ  ನಮಸ್ಕಾರ .

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || ೨೨ ||

೨೨. ಅವನೇ ಎಲ್ಲವನ್ನೂ  ನಾಶಮಾದುತ್ತಾನೆ , ಮತ್ತೆ ಅವನೇ ಎಲ್ಲವನ್ನೂ  ಪುನಃ ಸೃಷ್ಟಿಸುತ್ತಾನೆ . ಅವನೇ ತನ್ನ ಕಿರಣಗಳ ಮೂಲಕ ನೀರನ್ನು  ಸೆಳದುಕೊಂಡು ,ಅದನ್ನು ಬಿಸಿಮಾಡಿ ( ಮೋಡವಾಗಿ ಪರಿವರ್ತಿಸಿ) ಮಳೆಯ ರೂಪದಲ್ಲಿ   ಸುರಿಸುವನು .

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ || ೨೩ ||

೨೩.  ಅವನು ಎಲ್ಲರ ಹೃದಯದಲ್ಲಿ ನೆಲಸಿದ್ದು  ಎಲ್ಲರೂ  ನಿದ್ರಿಸಿರುವಾಗ  ಅವನು ಎಚ್ಚರದಲ್ಲಿರುತ್ತಾನೆ .ಅವನೇ ಅಗ್ನಿಹೋತ್ರ
ಮತ್ತು ಅಗ್ನಿಹೊತ್ರಿಗಳಿಗೆ ದೊರೆಯುವ ಫಲವೂ  ಅವನೇ .

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || ೨೪ ||


೨೪. ಅವನೇ ವೇದಗಳಾಗಿರುವನು . ಎಲ್ಲ ಕರ್ಮಗಳೂ  ಮತ್ತು ಕರ್ಮಫಲವೂ  ಅವನೇ ಆಗಿರುವನು . ಪ್ರಪಂಚದಲ್ಲಿರುವ ಎಲ್ಲಾ  ಕೃತ್ಯಗಳಿಗೂ ಈ ರವಿಯೇ ಒಡೆಯ .


                                                          ಫಲಶೃತಿ 


ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿತ್ -ನಾವಶೀದತಿ ರಾಘವ || ೨೫ ||

 ೨೫. ಎಲೈ ರಾಘವನೇ, ಕಷ್ಟ ಕಾಲದಲ್ಲಿ ,ಸಂಕಟ ಪರಿಸ್ಥಿತಿಯಲ್ಲಿ ,ಅರಣ್ಯ ಮಧ್ಯದಲ್ಲಿ ಸಿಕ್ಕಿಕೊಂಡು  ಭಯಗೊಂಡಿರುವಾಗ ಮನುಷ್ಯನು ಈ  ಸ್ತೋತ್ರವನ್ನು ಪಠಿಸಿದರೆ  ಅವನು ದುಃಖಕೀಡಾಗುವುದಿಲ್ಲಾ .

ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || ೨೬ ||

೨೬.  ದೇವದೇವನಾದ  ಜಗತ್ಪತಿಯಾದ  ಇವನನ್ನು ಪೂಜಿಸು . ಮೂರು ಬಾರಿ ಈ ಸ್ತೋತ್ರವನ್ನು ಜಪಿಸಿದರೆ  ಯುಧ್ಧದಲ್ಲಿ  ನೀನು  ಜಯಶಾಲಿಯಾಗುತ್ತಿಯಾ .

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ || ೨೭ ||

೨೭. ಎಲೈ ಮಹಾಬಾಹುವೇ, ಇದೇ  ಕ್ಷಣದಲ್ಲಿ ನೀನು ರಾವಣನನ್ನು   ಕೊಲ್ಲುತ್ತೀಯ - ಹೀಗೆ ಹೇಳಿ ಅಗಸ್ತ್ಯನು ಎಲ್ಲಿಂದ ಬಂದನೋ ಅಲ್ಲಿಗೆ ಹಿಂದಿರುಗಿದನು .

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋ‌உಭವತ್-ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || ೨೮ ||

೨೮. ಇದನ್ನು ಕೇಳಿ ಮಹಾತೇಜಸ್ವಿಯಾದ ರಾಘವನು ನಿಶ್ಚಿಂತನಾದನು . ಪುನಃ ಚೇತರಿಸಿಕೊಂಡು ಅತ್ಯುತ್ಸಾಹದಿಂದ  ಸುಪ್ರೀತನಾದನು .

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || ೨೯ ||

೨೯. ಆದಿತ್ಯನನ್ನೇ  ನೋಡುತ್ತ  ಜಪವನ್ನು ಮಾಡಿ  ರಾಘವನು ಅತ್ಯಂತ ಹರ್ಷಗೊಂಡನು . ಮೂರು ಬಾರಿ ಆಚಮನ ಮಾಡಿ ಶುಚಿಯಾಗಿ  ವೀರ್ಯವಂತನಾದ ಅವನು ಧನುಸ್ಸನ್ನು ಎತ್ತಿಕೊಂಡನು .

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋ‌உಭವತ್ || ೩೦ ||

೩೦. ರಾವಣನನ್ನು ನೋಡಿ ಸಂತೋಷದಿಂದ  ಯುದ್ಧಕ್ಕೆ ಮುಂದೆ ಬಂದನು . ಅವನನ್ನು ವಧಿಸುವ  ನಿರ್ಧಾರದಿಂದ ಸರ್ವಯತ್ನದಲ್ಲಿ ತೊಡಗಿದನು .


ಅಧ ರವಿರವದನ್-ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ || ೩೧ ||

೩೧.  ರಾಕ್ಷಸಾಧಿಪನ ನಾಶವು  ಸನ್ನಿಹಿತವಾಗಿರುವದನ್ನು  ತಿಳಿದುಕೊಂಡು  ಸುರಗಣಮಧ್ಯದಲ್ಲಿದ್ದ  ಸೂರ್ಯನು ಆನಂದದಿಂದ ರಾಮನನ್ನು  ನೋಡುತ್ತಾ ಸಂತೋಷಚಿತ್ತನಾಗಿ  'ತ್ವರೆಮಾಡು ' ಎಂದು  ಅವನಿಗೆ ಹೇಳಿದನು .


 ಇತ್ಯಾರ್ಷೇ  ಶ್ರೀಮದ್ರಾಮಾಯಣೇ  ವಾಲ್ಮೀಕಿ  ವಿರಚಿತ ಆದಿಕಾವ್ಯೇ  ಯುದ್ಧಕಾಂಡೇ  ಆದಿತ್ಯಹೃದಯಂ  ನಾಮ  ಸಪ್ತೋತ್ತರ ಶತತಮಃ  ಸರ್ಗಃ ಸಂಪೂರ್ಣಂ ।।
**********


Benefits  Of Chanting  Aditya  Hrudayam:

Any time in a day after taking bath in the morning upto evening which suits you. which is especially nourishing and healing for the heart. The importance given because if one recites this slokas will get satisfaction of works and get success if done with devotion and faith. happiness, liberation and knowledge and will remove the related sins and with hold sorrows.


One can understand how important is Sun worship when remembering that the Lord Rama himself was taught the Aditya Hridaya Stotram by the great sage Agastya in a critical moment.

It is stated in Skanda purana that one has to pray to Surya Bhagavan for happiness and welfare. The Samba purana declared that Samba the son of Jambavati could get himself cured of his leprosy by worshipping Lord Surya. Aditya Hrudayam are the slokas or A Hymn to Sun God.

Aditya hrudayam contains the innovative hymns with many secrets and hidden meanings. It is said that Consciousness in the man and in the cosmos Sun is the same. Absolute consciousness is being understood only with the help of speech. These mystic words are interwoven in the Aditya Hrudaya slokas.

The Aditya Hridayam, is a hymn in glorification of the Sun or Surya. The mystical hymn is directed to the Sun God, the illustrious lord of all victories.
who is Aditya ? Aditya @ surya is Universe. He is Atma Swaroopa. Surya had originated long before creation. He created the two worlds as self effulgent. He is the Lord of the astral plane. He is supreme to all worlds. He is the repository of intelligence. Every thing in this world is being created by Sun God. The entire Creation of life is his. He has created food and water. He is a truthful ruler. He is the leader of all worlds. He is self illuminating, Electricity, Vedas, truth, and yajnas. The three worlds have originated by Bhagavan Surya. He is the cause of water. He is Amruta Svarupa. He bestows excellent power of action.

The Adityta-Hridyam Hymn is part of the Yuddha Kanda of Valmiki Ramayana (the chapter of war) and contains 31 slokas.

Nama Suryaya Santaya Sarvaroga Nivarine |
Ayu rarogya maisvairyam dehi devah jagatpate ||

Oh! Lord Surya, ruler of the universe, you are the remover of all diseases, the repository of peace I bow to you. May you bless your devotees with longevity, health and wealth.

Rama went to exile at the behest of his father King Dasaradha. In the forest Ravana adducted Sita the wife of Rama who waged a righteous war against Ravana to bring back his wife Sita from the clutches of Rakshasa Ravana. In this Context he fought the battle against Ravana. Sage Agastya came there at that time to initiate this Aditya hrudayam to Sri Rama in the irreconceivable situation in the battle for his victory. Savita (Surya) is the God for Gayatri Mantra.
what is the need of Agastiya maharishi to come and teach Aditya hrudaya to Rama ?

Maharishi Agastya was one of those that came there with deva host to witness the wonderful battle between Rama and Ravana. He observed that Ravana was fatigued after a hard fight but faced Rama once again with boundless anger. Agastyar also noted that Rama himself was sunk in thought how to overcome Ravana without revealing his supreme divinity. The Ravana came there on his car eager to renew the fight, Maharishi Agastyar noted it and said '' Rama, you will overcome Ravana even now, be no anxious, but you will do well to increase your infirm prowess by worshipping the sun-god through the Aditya hrudaya. ''

In Aditya hrudayam there are thirty Slokas in total and the benefits.

In this the first and second sloka depicts the arrival of sage Agastya to Sri Rama. The third stated the greatness of the Stotra, the fourth sloka explained about happiness, liberation and knowledge. The fifth will remove the related sins and with hold sorrows.

From Sixth to fifteenth the description pertains to self effulgence and impresses that one pervading out side and inside is same.

From Sixteenth to twentieth slokas are very important for mantra Japa. Here cosmic greatness of Sun God Surya as the internal Caitanya in us is high lighted. Further the creator is one and not two is impressed. The human body consists Sapta Dhatu’s and in this dwells, only paramatma.

The Slokas from Twenty to twenty four are Mantra Slokas extolling Sun God. From twenty fifth to thirtieth the method of recital by Sri Rama and invoking God to bless him with the requisite strength for the victory in the battle field is stated.


                                                                                                                                                           


Aditya Hridayam, or Aditya Hrdaya, is a hymn dedicated to Lord Surya (Sun God) Valmiki Ramayana. Aditya Hridaya consists of 31 verses and is found in the 107th chapter of Yuddha Kanda of Ramayan. It was narrated to Lord Rama by Sage Agastya to energize him in the battle against Ravana.Aditya means ‘Sun’ and Hridayam means ‘heart or the essence’.


English Translation of Aditya Hridayam from Ramayana along with Sanskrit Text

Tato yuddha parishrantam samare chintaya sthitam |
Ravanam chagrato drishtva yuddhaya samupasthitam || 1 ||
Sri Rama, who standing absorbed in deep thought on the battle-field, exhausted by the fight and facing Ravana who was duly prepared for the war.
Daiva taishcha samagamya drashtu mabhya gato ranam |
Upagamya bravidramam agastyo bhagavan rishihi || 2 ||
The glorious sage Agastya, who had come in the company of gods to witness the encounter (battle) now spoke to Rama as follows:
Rama rama mahabaho shrinu guhyam sanatanam |
Yena sarvanarin vatsa samare vijayishyasi || 3 ||
'O Rama', 'O Mighty armed elegant Rama', listen carefully to the eternal secret by which, 'O my child', you shall conquer all your enemies on the battle field and win against your adversaries.
Aditya-hridayam punyam sarva shatru-vinashanam |
Jayavaham japen-nityam akshayyam paramam shivam || 4 ||
By chanting the Aditya Hridayam which is very auspicious and highly beneficial, you will be victorious in battle. This holy hymn dedicated to the Sun God will result in destroying all enemies and bring you victory and permanent happiness.
Sarvamangala-mangalyam sarva papa pranashanam |
Chintashoka-prashamanam ayurvardhana-muttamam || 5 ||
This supreme prayer is the best amongst auspicious verses, it will destroy all sins, dispel all doubts, alleviate worry and sorrow, anxiety and anguish, and increase the longevity of life. It is a guarantee of complete prosperity.
Rashmi mantam samudyantam devasura-namaskritam |
Pujayasva vivasvantam bhaskaram bhuvaneshvaram || 6 ||
Worship the sun god, the ruler of the worlds and lord of the universe, who is crowned with effulgent rays, who appears at the horizon and brings light, who is revered by the denizens of heaven (devas) and asuras alike.
Sarva devatmako hyesha tejasvi rashmi-bhavanah |
Esha devasura gananlokan pati gabhastibhih || 7 ||
Indeed, He is the very embodiment of all Gods. He is self-luminous and sustains all with his rays. He nourishes and energizes the inhabitants of all the worlds as well as the host of Gods and demons by his Rays.
Esha brahma cha vishnush cha shivah skandah prajapatihi |
Mahendro dhanadah kalo yamah somo hyapam patihi || 8 ||
He is Brahma, Vishnu, Shiva, Skanda, Prajapati, the mighty Indra, Kubera, Kala (eternal time), Yama, Soma (the moon god that nourishes), and Varuna (the lord of sea and ocean).
Pitaro vasavah sadhya hyashvinau maruto manuh |
Vayurvahnih praja-prana ritukarta prabhakarah || 9 ||
Indeed, he is Pitris (ancestors, manes), the eight Vasus, the Sadhyas, the twin Aswins (physicians of Gods), the Maruts, the Manu, Vayu (the wind God), Agni (the fire God), Prana (the Life breath of all beings), the maker of six seasons and the giver of light.

adityah savita suryah khagah pusha gabhastiman |
Suvarnasadrisho bhanur-hiranyareta divakarah || 10 ||

He is the Son of Aditi (the mother of creation), the Sun God who transverse the heavens, he is of brilliant golden color, the possessor of a myriad rays, by illuminating all directions he is the maker of daylight. He is the all pervading, shining principle, the dispeller of darkness, exhibiting beautiful sight with golden hue.
Haridashvah sahasrarchih saptasapti-marichiman |
Timironmathanah shambhu-stvashta martanda amshuman || 11 ||
He has seven horses yoked to his chariot, shines with brilliant light having infinite rays, is the destroyer of darkness, the giver of happiness and prosperity, mitigator of the sufferings and is the infuser of life. He is the Omnipresent One who pervades all with immeasurable amount of rays.
Hiranyagarbhah shishira stapano bhaskaro ravihi |
Agni garbho'diteh putrah shankhah shishira nashanaha || 12 ||
He is Hiranyagarbha born of Aditi of a golden womb, He is Sisirastapana the destroyer of the cold, snow and fog, illuminator, Ravi, bearer of the fire and conch, He is the remover of ignorance and giver of fame.

Vyomanathastamobhedi rigyajussamaparagaha |
Ghanavrishtirapam mitro vindhya-vithiplavangamaha || 13 ||
He is the Lord of the firmament and ruler of the sky, remover of darkness. the master of the three vedas Rig, Yaju, Sama, he is a friend of the waters (Varuna) and causes abundant rain. He swiftly courses in the direction South of Vindhya-mountains and sports in the Brahma Nadi.
Atapi mandali mrityuh pingalah sarvatapanaha |
Kavirvishvo mahatejah raktah sarva bhavodbhavaha || 14 ||
He, whose form is circular and is colored in yellow and red hues, is intensely brilliant and energetic. He is a giver of heat, the cause of all work, of life and death. He is the destroyer of all and is the Omniscient one sustaining the universe and all action.           
nakshatra grahataranam-adhipo vishva-bhavanah |
tejasamapi tejasvi dvadashatman namo'stu te || 15 ||
He is the lord of the constellations, stars and planets and the origin of every thing in the universe. Salutations to Aditya who appears in twelve forms (in the shape of twelve months of the year) and whose glory is described in his twelve names.
Namah purvaya giraye pashchimayadraye namah|
Jyotirgananam pataye dinaadhipataye namah || 16 ||
Salutations to the Lord of sunrise and sunset, who rises at the eastern mountains and sets in the western mountains. Salutations to the Lord of the Stellar bodies and to the Lord of daylight.
Jayaya jaya bhadraya haryashvaya namo namah |
Namo namah sahasramsho adityaya namo namah || 17 ||
Oh! Lord of thousand rays, son of Aditi, Salutations to you, the bestower of victory, auspiciousness and prosperity, Salutations to the one who has colored horses to carry him.
Nama ugraya viraya sarangaya namo namah |
Namah padma prabodhaya martandaya namo namah || 18 ||
Salutations to Martandaya the son of Mrukanda Maharisi, the terrible and fierce one, the mighty hero, the one that travels fast. Salutations to the one whose appearance makes the lotus blossom (also the awakener of the lotus in the heart).
Brahmeshanachyuteshaya suryayadityavarchase |
Bhasvate sarva bhakshaya raudraya vapushe namaha || 19 ||
Salutations to the Lord of Brahma, Shiva and Vishnu, salutations to Surya the sun god, who (by his power and effulgence) is both the illuminator and devourer of all and is of a form that is fierce like Rudra.
Tamoghnaya himaghnaya shatrughnayamitatmane |
Kritaghnaghnaya devaya jyotisham pataye namaha || 20 ||
Salutations to the dispeller of darkness, the destroyer of cold, fog and snow, the exterminator of foes; the one whose extent is immeasurable. Salutations also to the annihilator of the ungrateful and to the Lord of all the stellar bodies, who is the first amongst all the lights of the Universe.
Taptacami karabhaya vahnaye vishvakarmane |
Namastamo'bhinighnaya ravaye (rucaye) lokasakshine || 21 ||
Salutations to the Lord shining like molten gold, destroying darkness, who is the transcendental fire of supreme knowledge, who destroys the darkness of ignorance, and who is the cosmic witness of all merits and demerits of the denizens who inhabit the universe. Salutations to Vishvakarma the architect of the universe, the cause of all activity and creation in the world.
Nashayat yesha vai bhutam tadeva srijati prabhuh|
Payatyesha tapatyesha varshatyesha gabhastibhih || 22 ||
Salutations to the Lord who creates heat by his brilliant rays. He alone creates, sustains and destroys all that has come into being. Salutations to Him who by His rays consumes the waters, heats them up and sends them down as rain again.
Esha supteshu jagarti bhuteshu parinishthitaha |
Esha evagnihotram cha phalam chaivagnihotrinam || 23 ||
Salutations to the Lord who abides in the heart of all beings keeping awake when they are asleep. Verily he is the Agnihotra, the sacrificial fire and the fruit gained by the worshipper of the Agnihotra.
Vedashcha kratavashcaiva kratunam phalam eva cha |
Yani krityani lokeshu sarva esha ravih prabhuh || 24 ||
The Sun God (Ravi) is the origin and protector of the four Vedas (Rig, Yajur, Sama, and Atharva), the sacrifices mentioned in them and the fruits obtained by performing the sacrifices. He is the Lord of all action in this universe and decides the Universal path.
Ena-mapatsu krichchreshu kantareshu bhayeshu cha |
Kirtayan purushah kashchinnavasidati raghava || 25 ||
Listen Oh Rama! Oh Raghava, scion of the Raghu dynasty, any person, singing the glories of Surya in great difficulties, during affliction, while lost in the wilderness, and when beset with fear, will not come to grief (or loose heart).
Pujayasvaina-mekagro devadevam jagatpatim |
Etat trigunitam japtva yuddheshu vijayishyasi || 26 ||
If you worship this lord of the universe, the God of all Gods, with concentrated mind and devotion by reciting this hymn (Aditya-Hridayam) thrice, you will emerge victorious in the battle.
Asmin kshane mahabaho ravanam tvam vadhishyasi |
Evamuktva tada'gastyo jagama cha yathagatam || 27 ||
O mighty armed one, you shall triumph over Ravana this very moment. After blessing Lord Rama thus, and predicting that He would slay (the demon) Ravana, sage Agastya took leave and returned to his original place.
Etachchrutva mahateja nashtashoko'bhavattada |
Dharayamasa suprito raghavah prayatatmavan || 28 ||
Having heard this, that great warrior Raghava, feeling greatly delighted, became free from grief. His clouds of worry thus dispelled, the lustrous Lord Rama obeyed the sayings of sage Agastya with great happiness. With composed mind he retained this hymn in his memory, ready to chant the Aditya Hridayam.
Adityam prekshya japtva tu param harshamavaptavan |
Trirachamya shuchirbhutva dhanuradaya viryavan || 29 ||
Having performed Achamanam (sipping water thrice) and being purified, Rama gazing at the sun with devotion, recited the hymn Aditya Hridayam thrice, then that great hero Raghava was thrilled and lifted his bow.
Ravanam prekshya hrishtatma yuddhaya samupagamat |
Sarvayatnena mahata vadhe tasya dhrito'bhavat || 30 ||
Lord Rama thus cheered, seeing Ravana coming to fight, put forth all his effort with a determination to kill him.
Atha ravi-ravadan-nirikshya ramam
Mudita manah paramam prahrishyamanaha |
Nishicharapati-sankshayam viditva
Suragana-madhyagato vachastvareti || 31||
Then knowing that the destruction of Ravana was near, the Sun-God Aditya, surrounded by all the Gods in heaven, looked at Rama with delighted mind and exclaimed 'Hurry up' - 'Be quick'.                               

Lyrics  In  Kannada:
ಆದಿತ್ಯ  ಹೃದಯಂ  

ರಚನೆ: ಅಗಸ್ತ್ಯ ಋಶಿ
ಧ್ಯಾನಮ್

ನಮಸ್ಸವಿತ್ರೇ ಜಗದೇಕ ಚಕ್ಷುಸೇ
ಜಗತ್ಪ್ರಸೂತಿ ಸ್ಥಿತಿ ನಾಶಹೇತವೇ
ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇ
ವಿರಿಂಚಿ ನಾರಾಯಣ ಶಂಕರಾತ್ಮನೇ
ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ ||೧||
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || ೨ ||
ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || ೩ ||
ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್ || ೪||
ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್ || ೫ ||
ರಶ್ಮಿಮಂತಂ  ಸಮುದ್ಯಂತಂ  ದೇವಾಸುರ  ನಮಸ್ಕೃತಂ |
 ಪೂಜಯಸ್ವ  ವಿವಸ್ವಂತಮ್  ಭಾಸ್ಕರಂ ಭುವನೇಶ್ವರಮ್ || ೬|| 
ಸರ್ವದೇವಾತ್ಮಕೋ  ಹ್ಯೇಷಃ  ತೇಜಸ್ವೀ  ರಶ್ಮಿಭಾವನಃ   |
ಏಷ ದೇವಾಸುರಗಣಾಂಲ್ಲೋಕಾನ್  ಪಾತಿ  ಗಭಸ್ತಿಗಭಸ್ತಿಭಿಃ   || ೭ || 
ಏಷ  ಬ್ರಹ್ಮಾ   ಚ ವಿಷ್ಣುಶ್ಚ  ಶಿವಃ ಸ್ಕಂದಃ  ಪ್ರಜಾಪತಿಃ   |
ಮಹೇಂದ್ರೋ  ಧನದಃ  ಕಾಲೋ  ಯಮಃ  ಸೋಮೋ  ಹ್ಯಪಾಂ ಪತಿಃ   || ೮ || 
 ಪಿತರೋ ವಸವಃ  ಸಾಧ್ಯಾ  ಹ್ಯಶ್ವಿನೌ  ಮರುತೋ  ಮನುಃ   |
ವಾಯುರ್ವಹ್ನಿಃ  ಪ್ರಜಾಪ್ರಾಣಃ  ಋತುಕರ್ತಾ  ಪ್ರಭಾಕರಃ  ||೯||    
 ಆದಿತ್ಯಃ  ಸವಿತಾ  ಸೂರ್ಯಃ ಖಗಃ ಪೂಷಾ  ಗಭಸ್ತಿಮಾನ್   |
 ಸುವರ್ಣಸದ್ರುಶೋ  ಭಾನುರ್ಹಿರಣ್ಯರೇತಾ ದಿವಾಕರಃ   ||೧೦||
ಹರಿದಶ್ವಃ ಸಹಸ್ರಾರ್ಚಿಃ  ಸಪ್ತಸಪ್ತಿರ್ಮರೀಚಿಮಾನ್   |
ತಿಮಿರೋನ್ಮಥನಃ  ಶಂಭುಸ್ತ್ವಷ್ಟಾ   ಮಾರ್ತಾಂಡ  ಅಂಶುಮಾನ್  ||೧೧||                                     ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
                                     
ಅಗ್ನಿಗರ್ಭ உದಿತೇಃ ಪುತ್ರಃ ಶಂಖಃ ಶಿಶಿರನಾಶನಃ || ೧೨ ||
ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || ೧೩||
ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ || ೧೪ ||
ನಕ್ಷತ್ರ ಗ್ರಹ ತಾರಾಣಾಮ್ ಅಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋ‌உಸ್ತು ತೇ || ೧೫||
ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || ೧೬||
                                     
ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || ೧೭ ||
ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || ೧೮ ||
ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || ೧೯ ||
ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || ೨೦ ||
ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋ‌உಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ || ೨೧ ||
ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || ೨೨ ||
ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ || ೨೩ ||
ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || ೨೪ ||
ಫಲಶೃತಿಃ

ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್-ನಾವಶೀದತಿ ರಾಘವ || ೨೫ ||
ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || ೨೬ ||
ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ || ೨೭ ||
ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋ‌உಭವತ್-ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || ೨೮ ||
ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || ೨೯ ||
ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋ‌உಭವತ್ || ೩೦ ||
ಅಧ ರವಿರವದನ್-ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ || ೩೧ ||

ಇತ್ಯಾರ್ಷೇ  ಶ್ರೀಮದ್ರಾಮಾಯಣೇ  ವಾಲ್ಮೀಕಿ  ವಿರಚಿತ ಆದಿಕಾವ್ಯೇ  ಯುದ್ಧಕಾಂಡೇ  ಆದಿತ್ಯಹೃದಯಂ  ನಾಮ  ಸಪ್ತೋತ್ತರ ಶತತಮಃ  ಸರ್ಗಃ ಸಂಪೂರ್ಣಂ ।।
**********

ಆದಿತ್ಯ ಹೃದಯ ಸ್ತೋತ್ರಮ್   (ಅರ್ಥ ಸಹಿತವಾಗಿ)

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಂ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಂ ||೧||

ರಾವಣನ ಜೊತೆ ಯುದ್ಧ ಮಾಡಿ ಬಳಲಿ, ಚಿಂತೆಯಿಂದ ಯುದ್ಧ ಭೂಮಿಯಲ್ಲಿ ನಿಂತ, ಯುದ್ಧ ಮಾಡಲು ಸಿದ್ಧನಾಗಿ ಮುಂದೆ ನಿಂತ ರಾವಣನನ್ನು ನೋಡಿ ಇವನನ್ನು ಗೆಲ್ಲುವುದು ಹೇಗೆ ಎಂದು ಯೋಚಿಸುತ್ತಿದ್ದ ರಾಮನನ್ನು ನೋಡಿ ಅಗಸ್ತ್ಯರು.

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಂ |
ಉಪಾಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ ||೨||

ದೇವತೆಗಳೊಡನೆ ಈ ಅದ್ವಿತೀಯವಾದ ಯುದ್ಧವನ್ನು ನೋಡುತ್ತಿದ್ದ ಮಹರ್ಷಿ ಅಗಸ್ತ್ಯರು ಶ್ರೀರಾಮನ ಸಮೀಪ ಬಂದು ಮುಂದೆ ಹೇಳುವಂತೆ ತಿಳಿಸಿದರು.

ರಾಮ! ರಾಮ! ಮಹಾಬಾಹೋ! ಶೃಣು ಗುಹ್ಯಂ ಸನಾತನಂ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ ||೩||

ಮಹಾವೀರನಾದ ರಾಮಚಂದ್ರ, ನಾನು ಹೇಳುವ ಈ ಸನಾತನ ರಹಸ್ಯವನ್ನು ಶ್ರದ್ಧೆಯಿಂದ ಆಲಿಸು. ಇದರಿಂದ ನಿನ್ನ ಎಲ್ಲಾ ಶತೃಗಳನ್ನೂ ಯುದ್ಧದಲ್ಲಿ ಜಯಿಸಬಹುದು.

ಆದಿತ್ಯ ಹೃದಯಂ ಪುಣ್ಯಂ ಸರ್ವ ಶತ್ರು ನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯ್ಯಂ ಪರಮಂ ಶಿವಂ ||೪||

"ಆದಿತ್ಯ ಹೃದಯ" ಎಂಬ ಈ ಪುಣ್ಯಕರವಾದ ಸ್ತೋತ್ರ ಶತ್ರುಗಳನ್ನು ನಾಶ ಮಾಡಬಲ್ಲದು. ಸದಾ ಗೆಲುವನ್ನೇ ತಂದುಕೊಡುವುದು. ಶಾಶ್ವತ ಹಾಗೂ ಮಂಗಳಕರವಾದ ಫಲವನ್ನು ಇದು ತಂದು ಕೊಡುತ್ತದೆ.

ಸರ್ವ ಮಂಗಲ ಮಾಂಗಲ್ಯಂ ಸರ್ವ ಪಾಪಪ್ರಣಾಶನಂ |
ಚಿಂತಾಶೋಕಪ್ರಶನಂ ಆಯುರ್ವರ್ಧನಮುತ್ತಮಂ ||೫||

ಮಂಗಳಕರವಾದ ಸ್ತೋತ್ರಗಳಲ್ಲೆಲ್ಲಾ ಇದು ಬಹಳ ಶುಭಪ್ರದವಾಗಿದೆ. ಎಲ್ಲಾ ಪಾಪಗಳನ್ನೂ ಕಳೆಯುವುದು ಈ ಸ್ತೋತ್ರ. ಚಿಂತೆ, ದುಃಖಗಳನ್ನು ಅಡಗಿಸಿ, ಆಯುಸ್ಸನ್ನು ಹೆಚ್ಚಿಸುವ ಉತ್ತಮವಾದ ಮಂತ್ರವಿದು.

("ಸೂರ್ಯಾದಾರೋಗ್ಯವರ್ಧನಂ" ಎಂಬ ಅನುಭವದ ಮಾತು ಇದೆ. ಅಂದರೆ ಸೂರ್ಯ ದೇವನು ಆರೋಗ್ಯಕ್ಕೆ ಕಾರಕ. ಆತನು  ವಿಶ್ವ ಮಾನವರ, ಜಂತುಗಳ ಹಾಗೂ ಪ್ರಾಣಿಗಳ ಆರೋಗ್ಯವನ್ನು ವರ್ಧನ , ಅರ್ಥಾತ್ ಹೆಚ್ಚು ಮಾಡುತ್ತಾನೆ. ಆಯುರ್ವೇದದಲ್ಲಿ ಕೂಡಾ ಸೂರ್ಯ ನಮಃಸ್ಕಾರಕ್ಕೆ ತುಂಬಾ ಪ್ರಾಶಸ್ತ್ಯವಿದೆ. ಸೂರ್ಯನ ಕಿರಣಗಳು ಎಂತಹ ಕಾಯಿಲೆಗಳನ್ನೂ ಗುಣ ಪಡಿಸಬಲ್ಲದು. ಬೆಳಗಿನ ಸೂರ್ಯೋದಯದಿಂದ ಹಿಡಿದು ಸುಮಾರು ಒಂದು ಗಂಟೆಯ ಕಾಲದವರೆಗೆ, ಹಾಗೂ ಸಂಜೆಯ ವೇಳೆ ಸೂರ್ಯಾಸ್ತಮದಿಂದ ೧ ಗಂಟೆ ಮುಂಚೆಯೇ ಕುಳಿತಿದ್ದರೆ, ಅಂದರೆ ಬರಿ ಮೈಗೆ ಸೂರ್ಯನ ಈ ಹೊಂಬಣ್ಣದ ಕಿರಣಗಳನ್ನು ತಾಕಿಸಿದರೆ, ಈ ಕಿರಣಗಳು ಮೈಯ ಚರ್ಮದ ಮೇಲೆ ಬಿದ್ದು, ಚರ್ಮದ ಮೇಲಿನ ಎಗ್ಗೆಸ್ಟೆರೋಲ್ ಎನ್ನುವುದು, ಡಿ- ಜೀವಾತುವಾಗಿ ಪರಿವರ್ತಿಸುವುದು ನಿಮಗೆಲ್ಲಾ ತಿಳಿದ ವಿಚಾರವೇ. ಅಂದರೆ ಈ ಕಿರಣಗಳಿಗೆ ಮೈಯನ್ನು ಒಡ್ಡಿದ್ದಲ್ಲಿ, ನಿಮಗೆ ಬೇರೆ ವಿಟಾಮಿನ್ "ಡಿ" ಮಾತ್ರೆಗಳ ಅವಶ್ಯಕತೆಯೇ ಇಲ್ಲ. ಆದ್ದರಿಂದಲೇ ಅವನ ಪ್ರಾರ್ಥನೆ ಬಹಳ ಮಂಗಳಕರವಾದದ್ದು.)

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಂ
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಂ   ||೬||

ಹೊಮ್ಮುವ ಕಿರಣಗಳನ್ನು ಪಡೆದ, ತನ್ನ ಸಂಪೂರ್ಣ ಬಿಂಬದೊಡನೆ ಮೇಲೆದ್ದು ಬರುವ, ಸುರ-ಅಸುರ ಇಬ್ಬರಿಂದಲೂ ವಂದ್ಯನಾದ, ಪ್ರಕಾಶವನ್ನು ನೀಡುವ, ಈ ಲೋಕಕ್ಕೆ ಸ್ವಾಮಿಯಾದ ಸೂರ್ಯದೇವನನ್ನು ವಂದಿಸು.

(ಸೂರ್ಯ ದೇವ ಕರ್ಮ-ಕಾಲ ಸಾಕ್ಷಿ. ಅವನು ಎಲ್ಲವನ್ನೂ ಸುಟ್ಟು ಹಾಕುತ್ತಾನೆ. ಹೀಗಾಗಿ ಆತನಿಗೆ ದೇವ-ದಾನವ ಭೇದವಿಲ್ಲ. ಎಲ್ಲಾ ಲೋಕಗಳ ಮೇಲೂ ಆತನದು ಸಮ ದೃಷ್ಟಿ.)

ಸರ್ವ ದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿ ಭಾವನಃ  |
ಏಷ ದೇವಾಸುರಗಣಾನ್ ಲೋಕಾನ್ ಪಾತಿ ಗಭಸ್ತಿಭಿ: ||೭||

ಎಲ್ಲಾ ದೇವತೆಗಳೂ ಸೂರ್ಯನಲ್ಲಿದ್ದಾರೆ. ಇವನದು ನಿಜವಾದ ತೇಜಸ್ಸು. ಈತನ ಕಿರಣಗಳೇ ಜನರಿಗೆ ಶ್ರೇಯಸ್ಸನ್ನು ಕೊಡುತ್ತದೆ. ತನ್ನ ಶುಭ ಕಿರಣಗಳಿಂದ ದೇವ, ಅಸುರ, ಮಾನವ ಹಾಗೂ ಎಲ್ಲಾ ಲೋಕಗಳನ್ನೂ ಸೂರ್ಯದೇವನು ಕಾಪಾಡುತ್ತಾನೆ.

(ಸೂರ್ಯಕಿರಣಗಳಲ್ಲಿನ ಸತ್ವಗುಣಗಳು ಅಪಾರ. ಇವು ನಮ್ಮಲ್ಲಿ ಚಟುವಟಿಕೆಯನ್ನು ತುಂಬುತ್ತದೆ. ಆರೋಗ್ಯದ ಕಳೆ ನಮಗೆ ಬರುತ್ತದೆ. ಸೂರ್ಯನ ದೃಷ್ಟಿಯಲ್ಲಿ ಎಲ್ಲರೂ ಸಮಾನರು.)

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂಪತಿಃ ||೮||

ಆದಿತ್ಯನಾದ ಸೂರ್ಯ ಎಲ್ಲಾ ದೇವತೆಗಳ ಪ್ರತಿನಿಧಿ. ಬ್ರಹ್ಮ, ವಿಷ್ಣು , ಶಿವ, ಸುಬ್ರಹ್ಮಣ್ಯ, ಇಂದ್ರ, ಕುಬೇರ, ಯಮ, ವರುಣ, ಸೋಮ ಎಲ್ಲವೂ ಈತನೇ.

ತ್ರಿಮೂರ್ತಿಗಳು, ಅಷ್ಟ ದಿಕ್ಪಾಲಕರು ಹಾಗೂ ಇತರ ಪ್ರಧಾನ ದೇವತೆಗಳ ಶಕ್ತಿಯೆಲ್ಲಾ ಸೂರ್ಯನಲ್ಲಿ ಕೇಂದ್ರೀಕೃತವಾಗಿದೆ. ಸೂರ್ಯನಿಲ್ಲದೆ ನೀರಿಲ್ಲ, ನೀರಿಲ್ಲದೆ ಬೆಳೆಯಿಲ್ಲ, ಬೆಳೆಯಿಲ್ಲದೆ ಅನ್ನವಿಲ್ಲ, ಅನ್ನವಿಲ್ಲದೆ ಪ್ರಾಣವಿಲ್ಲ. ಹೀಗಿರುವಾಗ ಸಕಲ ದೇವತೆಗಳ ಶಕ್ತಿ ಸೂರ್ಯನಲ್ಲಿ ಸಾಂದ್ರಿತವಾಗಿದೆ ಎನ್ನುವುದು ಸತ್ಯ.

ಸೃಷ್ಟಿಯನ್ನು ಪ್ರಚೋದಿಸುವ ಬ್ರಹ್ಮ, ಶಕ್ತಿಯನ್ನು ಪಾಲನೆಮಾಡಿ ಕೃಪೆ ತೋರುವ ವಿಷ್ಣುಶಕ್ತಿ, ನಿರ್ದೆಯೆಯಿಂದ ನಾಶಪಡಿಸುವಂತಹ ರುದ್ರ ಶಕ್ತಿ ಕೂಡ ಸೂರ್ಯನಲ್ಲಿದೆ. ಎಲ್ಲಾ ದಿಕ್ಕುಗಳಲ್ಲೂ ಸೂರ್ಯನು ತನ್ನ ಕಿರಣವನ್ನ ಬೀರಿ, ಶಕ್ತಿಯನ್ನು ಧಾರೆಯನ್ನು ಎರೆಯುವ ಅಪಾರ ಕರುಣೆ ಆತನಿಗಿದೆ.

(ಸೂರ್ಯನ ಕರುಣೆ, ಕೃಪೆಯಿಂದಲೇ ಈ ಜಗತ್ತು ಉಳಿದಿದೆ. ಅವನ ಚಂಡ ಕಿರಣಗಳಿಂದಲೇ ಇದು ನಾಶವಾದೀತು.

ಪಿತರೊ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣ ಋತುಕರ್ತಾ ಪ್ರಭಾಕರಃ   ||೯||

ದೇವತಾ ಗಣಗಳಾದ ಪಿತೃ, ವಸು, ಸಾಧ್ಯರು, ಮರುತಗಳು, ಅಶ್ವಿನಿದೇವತೆಗಳು, ಮನು, ಅಗ್ನಿ, ಪ್ರಾಣವಾಯು, ಋತುಗಳನ್ನು ತನ್ನ ನಿಯಂತ್ರಣದಲ್ಲಿರಿಸುವ ಪ್ರಭಾಕರ ಎಲ್ಲವೂ ಈತನೇ.

(ದೇವಗಣಗಳ ಹಿಂದಿನ ಚೋದಕ ಶಕ್ತಿ ಸೂರ್ಯದೇವ. ಸೂರ್ಯನಿಲ್ಲದೆ ಈ ಜೀವನ, ಜಗತ್ತು ನಿಸ್ತೇಜ ಹಾಗೂ ಜಡತ್ವವಾಗಿರುತ್ತದೆ. ಆಗ ದಿಕ್ಕುಗಳೂ ಅರ್ಥ ಹೀನವಾಗುತ್ತವೆ.)

ಇಲ್ಲಿಂದ ಆದಿತ್ಯ ಹೃದಯ ಮಂತ್ರ ಪ್ರಾರಂಭ:-

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣ ಸದೃಶೋ ಭಾನುಃ ಸ್ವರ್ಣರೇತಾ ದಿವಾಕರಃ  ||೧೦||

(ಇನ್ನು ಮುಂದೆ ಅಗಸ್ತ್ಯರು ಸೂರ್ಯದೇವನ ಪುಣ್ಯಕರ ನಾಮಗಳನ್ನು ಹೇಳುತ್ತಾರೆ.)

ಆದಿತ್ಯ :- ಅದಿತಿಯ ಪುತ್ರ ಎಂಬರ್ಥವಾದರೂ, ತನ್ನ ಕಡೆಗೆ ಎಲ್ಲರನ್ನೂ ಸೆಳೆಯುವಂತಹ ಚುಂಬಕ ಶಕ್ತಿ ಎಂಬ ಗಹನವಾದ ಅರ್ಥವೂ ಇದೆ. ದಿತಿ, ಸತಿ ಉದರದಿ ಕುತುಕದಿ ಸಾರುತೆ ಹಿತಾಕಾರದಿಂ ಮೆರೆವ, ಮನಕಿದೋ ಮುದವಾದುದು. ಇದರ ಅರ್ಥವೇನೆಂದರೆ,  ಅದಿತಿಯ ಮಕ್ಕಳು ದೇವತೆಗಳು. ದಿತಿಯ ಮಕ್ಕಳು ರಾಕ್ಷಸರು. ಅದೇ ಅದಿತಿಯ ಮಗನು ಸೂರ್ಯ ದೇವನು.
ಸವಿತಾ :- ಸವಿತೃ ಅಂದರೆ ಭೂಮಿಯನ್ನು ಆಳುವವನು ಎಂದರ್ಥ. ಭೂಮಿಯ ಎಲ್ಲಾ ಆಗು ಹೋಗುಗಳಿಗೆ ನಿಯಂತ್ರಕನಾದವನು.
ಸೂರ್ಯ :- ಎಲ್ಲರನ್ನೂ, ಎಲ್ಲವನ್ನೂ ಪ್ರೇರೇಪಿಸುವ, ಚಟುವಟಿಕೆಯನ್ನು ತುಂಬುವವ.
ಖಗ :- ನಭೋ ಮಂಡಲದಲ್ಲಿ ಸಂಚರಿಸುವವ.
ಪೂಷಾ :  ಲೋಕ ರಕ್ಷಕನಾದ (ಉಪನಿಷತ್ತಿನಲ್ಲಿ "ತತ್ವಂ ಪೂಷನ್ ಅಪಾವೃಣು" ಎಂದಿದೆ. ಸತ್ಯದ ಕಾಂತಿಯುತ ಮುಖವನ್ನು ತೆರೆದು ತೋರಿಸುವ  ದೇವತೆ ಪೂಷನ್)
ಗಭಸ್ತಿಮಾನ್ :- ಶುಭ್ರ ಕಿರಣಗಳನ್ನು ಹೊಂದಿದ ಸೂರ್ಯ ಕಿರಣಗಳ ಕಾಂತಿ ಅನಾದೃಶ.
ಸುವರ್ಣಸದೃಶ:- ಆದಿತ್ಯ ದೇವನ ಕಾಂತಿ ಬಂಗಾರದಂತೆ ಹೊಳೆಯುತ್ತಿದೆ. ಬಂಗಾರ ಎನ್ನುವ ಹೋಲಿಕೆ ನಮಗೆ ಸುಲಭವಾಗಿ ಅರ್ಥವಾಗಲು ಮಾತ್ರ. ಉತ್ತಮ ವಸ್ತುಗಳನ್ನು ಬಂಗಾರದ ಜೊತೆ ಹೋಲಿಸುವುದರಿಂದ ಈ ರೀತಿ ಇಲ್ಲಿ ಹೋಲಿಸಿದ್ದಾರೆ ಅಷ್ಟೇ.
ಭಾನು :- ಎಲ್ಲಾ ಕಡೆ ಹರಡಿದ ಪ್ರಕಾಶವುಳ್ಳ.
ಸ್ವರ್ಣರೇತಾ :-  ಈ ಬ್ರಹ್ಮಾಂಡವು ಬಂಗಾರದ ಮೊಟ್ಟೆಯಂತೆ ತೇಜಸ್ಸಿನ ಪುಂಜವಾಗಿದೆ. ಇದರ ಸೃಷ್ಟಿ ಆದಿತ್ಯನಿಂದ. ಆತನೇ ಇದಕ್ಕೆ ಮೂಲ ಬೀಜ.
ದಿವಾಕರ:- ಹಗಲು ಆಗುವುದು ಕೂಡ ಸೂರ್ಯನಿಂದಲೇ.

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್   |
ತಿಮಿರೋನ್ಮಥನಃ ಶಂಭುಃಸ್ತ್ವಷ್ಟಾ ಮಾರ್ತಾಂಡ ಅಂಶುಮಾನ್ ||೧೧||

(ಆದಿತ್ಯನನ್ನ ಹೀಗೂ ಕರೆಯುವುದುಂಟು.)

ಹರಿದಶ್ವ:- ಈತನ ರಥದ  ಕುದುರೆಗಳ ಬಣ್ಣ ಹಸಿರು. ಹಸಿರು ಸೃಷ್ಟಿಯ ಗೆಲುವಿನ ಸಂಕೇತ.
ಸಹಸ್ರಾರ್ಚಿ:- ಆದಿತ್ಯನ ಕಿರಣಗಳು ಸಾವಿರಾರು, ಅಸಂಖ್ಯ.
ಸಪ್ತಸಪ್ತಿ :- ಈತನ ಕುದುರೆಗಳು ಏಳು. ಇವು ಏಳು ಲೋಕಗಳನ್ನು ಪ್ರತಿನಿಧಿಸುತ್ತವೆ. ಎಲ್ಲಾ ಕಡೆ ಆದಿತ್ಯನ ಪ್ರಭಾವವಿದೆ.
ಮರೀಚಿಮಾನ್ :- ಕಿರಣಗಳನ್ನು ಮೈದುಂಬಿಕೊಂಡ.
ತಿಮಿರೋನ್ಮಥನ :- ಕತ್ತಲೆಯನ್ನು ಹೊಡೆದಟ್ಟುವ.
ಶಂಭು :- ಸುಖವನ್ನು ದಯಪಾಲಿಸುವ.
ತ್ವಷ್ಟಾ :- ದುಃಖವನ್ನು ಕಳೆಯುವ, ಲವಲವಿಕೆಯನ್ನ ತರುವ.
ಮಾರ್ತಾಂಡ :- ನಾಶ ಹೊಂದಿದ ಬ್ರಹ್ಮಾಂಡದಿಂದೆದ್ದು ಬಂದು ಮತ್ತೆ ಅದನ್ನು ಸೃಸ್ಟಿಸುವವನು.
ಅಂಶುಮಾನ್ :- ವಿಸ್ತಾರವಾದ, ಹರಡಿದ ಕಿರಣಗಳನ್ನು ಹೊಂದಿದವನು.

ಹಿರಣ್ಯಗರ್ಭಃ ಶಿಶಿರಃ      ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋsದಿತೇಃ ಪುತ್ರಃ ಶಂಖಃ ಶಿಶಿರನಾಶನಃ ||೧೨||

ಹಿರಣ್ಯಗರ್ಭ :- ಬ್ರಹ್ಮನ ಶಕ್ತಿ ಪಡೆದ. ತನ್ನೊಳಗೆ ದಿವ್ಯ ಸಂಪತ್ತು, ಜ್ಞಾನ ಮತ್ತು ತೇಜಸ್ಸುಗಳನ್ನು ತುಂಬಿಕೊಂಡ.
ಶಿಶಿರ:- ತಂಪುಗೊಳಿಸುವ, ತಾನಿತ್ತ ಮಳೆಯಿಂದ ಭೂಮಿಯನ್ನು ತಂಪಾಗಿಸುವ.
ತಪನ:- ಎಲ್ಲಾ ಕಡೆ ತಾಪವನ್ನುಂಟುಮಾಡುವ.
ಭಾಸ್ಕರ :-ಪ್ರಕಾಶವನ್ನು ನೀಡುವ.
ರವಿ :- ಎಲ್ಲರಿಂದ ಸ್ತುತ್ಯನಾದ
ಅಗ್ನಿಗರ್ಭ:-ತನ್ನೊಳಗೆ ಅಗ್ನಿಯನ್ನು ಇರಿಸಿಕೊಂಡವ
ಆದಿತೇಃಪುತ್ರಃ :- ಅದಿತಿಯ ಮಗ. ಈ ಆದಿತ್ಯನಿಗೆ ಕಶ್ಯಪರು ತಂದೆ. ಅದಿತಿ ತಾಯಿ. ಇವರೇ ಆದಿ ದಂಪತಿಗಳು.
ಶಂಖ :- ಅಸ್ತಮಾನವಾಗುವಾಗ ಶಾಂತ ಭಾವವನ್ನು ತಾಳುವವ.
ಶಿಶಿರನಾಶನ :- ಮಂಜನ್ನು ಕರಗಿಸುವವನು.

ವ್ಯೋಮನಾಥಸ್ತಮೋಭೇದಿ ಋಗ್ಯಜುಃ ಸಾಮಪಾರಗಃ |
ಘನವೃಸ್ಟಿರಪಾಂಮಿತ್ರೋ ವಿಂಧ್ಯ ವೀಥೀಪ್ಲವಂಗಮಃ ||೧೩||

ವ್ಯೋಮ :- ಆಕಾಶ ಗಗನಮಂಡಲಕ್ಕೆ ಸ್ವಾಮಿ ಇವನು.
ತಮೋಭೇದೀ :- ಕತ್ತಲೆಯನ್ನು ಸೀಳಿಕೊಂಡು ಬರುವವ. ಸೂರ್ಯನಿದ್ದಡೆ, ಕತ್ತಲೆಗೆ ಜಾಗವೇ ಇಲ್ಲ. ಅಂತೆಯೇ ಜ್ಞಾನವಿದ್ದಲ್ಲಿ ಮೂಢ ನಂಬಿಕೆಗೆ ಜಾಗವಿಲ್ಲ.
ಋಗ್ಯಜುಃಸಾಮಪಾರಗಃ :- ಋಗ್, ಯಜುಸ್, ಸಾಮ ವೆನ್ನುವ ಈ ಮೂರು ವೇದಗಳ ಸಾರವನ್ನು ಅರಿತವನು.
ಘನವೃಷ್ಟಿ :- ಹೆಚ್ಚು, ಹೆಚ್ಚು ಮಳೆಯನ್ನು ತರಿಸುವವ.
ಅಪಾಂಮಿತ್ರೋ:- ನೀರಿನ ಗೆಳೆಯ. ಸೂರ್ಯನ ಪ್ರಭಾವದಿಂದ ಮೋಡಗಳು ಕರಗಿ ನೀರಾಗಿ ಮಳೆ ಸುರಿಯುತ್ತವೆ. ಮತ್ತೆ ಅದೇ ನೀರು ಸೂರ್ಯನ ಪ್ರಭೆಯಿಂದಾಗಿ ಆವಿಯಾಗಿ ಮೋಡವಾಗಿ ಪರಿಣಮಿಸುತ್ತದೆ. ಹೀಗೆ ಸೂರ್ಯ ನೀರಿನ ಮಿತ್ರ. ಅದಕ್ಕೆ ವೇದಗಳಲ್ಲಿ ಸೂರ್ಯನನ್ನು ಮಿತ್ರಾ-ವರುಣ ಎಂಬ ಜೋಡಿದೇವತೆಯನ್ನಾಗಿ ಹೇಳಿದೆ.
ವಿಂಧ್ಯ ವೀಥೀಪ್ಲವಂಗಮಃ :- ವಿಂಧ್ಯ ಪರ್ವತದ ದಾರಿಯಲ್ಲಿ ಬಲು ಬೇಗ ಸಂಚರಿಸುವ (ಸೂರ್ಯನ ಸಂಚಾರ ದಕ್ಷಿಣಾಯನದಲ್ಲಿ ಹೀಗೆ ಇರುತ್ತದೆ.)

ಆತಪೀ ಮಂಡಲೀ ಮೃತ್ಯುಃ ಪಿಂಗಲಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾಃ ರಕ್ತಃ ಸರ್ವಭವೋದ್ಭವಃ ||೧೪||

ಆತಪೀ :- ಬಿಸಿಲು ಉಂಟಾಗುವುದು ಈತನಿಂದಲೇ
ಮಂಡಲೀ:- ಸೂರ್ಯನ ಬಿಂಬ ಗುಂಡಾಗಿದೆ.
ಮೃತ್ಯು :- ಶತೃ ನಾಶಕನಾದ.
ಪಿಂಗಲಃ :- ಈತನ ಬಣ್ಣ ಹಳದಿ.
ಸರ್ವತಾಪನಃ :- ಎಲ್ಲಾ ವಸ್ತುಗಳಿಗೂ ತಾಪವನ್ನು ಕೊಡುವವ.
ಕವಿ :- ಮಹಾನ್ ಜ್ಞಾನಿಯಾದ
ವಿಶ್ವ :- ಪ್ರಪಂಚದಲ್ಲೆಲ್ಲಾ ಆವರಿಸಿದ.
ಮಹಾತೇಜಾ :- ಮಹಾನ್ ಕಾಂತಿಹೊಂದಿದ.
ರಕ್ತ:- ಎಲ್ಲರಿಗೂ ಬೇಕಾದವನಾದ, ಎಲ್ಲರ ಪ್ರೀತಿ ಪಾತ್ರನಾದ.
ಸರ್ವಭವೋದ್ಭವಃ :- ಎಲ್ಲಾ ವಸ್ತುಗಳ ಸೃಷ್ಟಿಗೆ ಕಾರಣನಾದವ.

(ಜಗತ್ತಿನ ಸೃಷ್ಠಿಗೆ ಸೂರ್ಯ ದೇವನು ಒಂದಲ್ಲಾ ಒಂದು ರೀತಿ ಕಾರಣನಾಗಿದ್ದಾನೆ. ಎಲ್ಲವೂ ಸೂರ್ಯನಿಂದಲೇ ಪ್ರಚೋದಿತವಾಗಿ ಹೊರಟಿದೆ ಎಂದು ಅರ್ಥ.)

ನಕ್ಷತ್ರ ಗ್ರಹತಾರಾಣಾಂ ಅದಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮಾನ್ ನಮೋsಸ್ತುತೇ ||೧೫||

ಸೂರ್ಯದೇವನು ನಕ್ಷತ್ರ, ಗ್ರಹ ಮತ್ತು ಎಲ್ಲಾ ಆಕಾಶ ಕಾಯಗಳಿಗೆ ಒಡೆಯನಾಗಿರುತ್ತಾನೆ. ಆತನೇ ವಿಶ್ವಭಾವನ. ಈ ಜಗತ್ತಿನ ಅಸ್ತಿತ್ವಕ್ಕೆ ಕಾರಣ.
ತೇಜಸಾಮಪಿ ತೇಜಸ್ವಿ :- ತೇಜೋವಂತ ವಸ್ತುಗಳಾದ ಅಗ್ನಿ ಮೊದಲಾದವಕ್ಕಿಂತ ತೇಜಸ್ಸನ್ನು ತೇಜಸ್ಸನ್ನು ಹೊಂದಿದವನು.
ದ್ವಾದಶಾತ್ಮನ್:-- ವರ್ಷದ ಹನ್ನೆರಡು ತಿಂಗಳನ್ನು ಪ್ರತಿನಿಧಿಸುವ (೧) ಇಂದ್ರ (೨) ಧಾತಾ (೩) ಭಗ (೪) ಪೂಷನ್ (೫) ಮಿತ್ರ (೬) ಆರ್ಯಮ (೭) ಆರ್ಚಿ (೮) ವಿವಸ್ವಾನ್ (೯) ತ್ವಷ್ಟೃ (೧೦) ಸವಿತಾ (೧೧) ವರುಣ (೧೨) ವಿಷ್ಣು- ಎಂಬೀ ಹನ್ನೆರಡು ರೂಪ ಉಳ್ಳವನು.

ಇಂತಹ ಸೂರ್ಯನಿಗೆ ನಮಃಸ್ಕಾರ.

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ ||೧೬||

ಬೆಳಗಿನ ಹೊತ್ತು ಪೂರ್ವಾದ್ರಿಯಲ್ಲೂ, ಸಂಜೆಯ ಹೊತ್ತು ಪಶ್ಚಿಮಾದ್ರಿಯಲ್ಲಿಯೂ ಶೋಭಿಸುವ , ಜ್ಯೋತಿರ್ಮಯ ವಸ್ತುಗಳಿಗೆ ಒಡೆಯನಾದ, ಹಗಲಿಗೆ ಸ್ವಾಮಿಯಾದ ಆದಿತ್ಯದೇವನಿಗೆ ನಮಸ್ಕಾರ.

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ  |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ||೧೭||

ಜಯ :- ಯಶಸ್ಸನ್ನು ಕೊಡುವವನು ಆದಿತ್ಯ
ಜಯಭದ್ರ :- ಯಶಸ್ಸನ್ನು ಹಾಗೂ ಶುಭವನ್ನು ಕೊಡುವವನು.
ಹರ್ಯಶ್ಚ :- ಹಸಿರು ಬಣ್ಣದ ಕುದುರೆಗಳಿರುವ.
ಸಹಸ್ರಾರು :- ಸಾವಿರಾರು ಕಿರಣಗಳಿಂದ
ಆದಿತ್ಯ :- ಅದಿತಿಯ ಪುತ್ರ ಹಾಗೂ ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಶಕ್ತಿಯುಳ್ಳವನಿಗೆ ನಮನಗಳು.

ನಮಃ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮ ಪ್ರಭೋದಾಯ ಮಾರ್ತಾಂಡಾಯ ನಮೋ ನಮಃ ||೧೮||

ಉಗ್ರ :- ಶತೃಗಳಿಗೆ ಭಯಂಕರನೂ
ವೀರ :- ಅತ್ಯಂತ ಶಕ್ತಿಶಾಲಿಯೂ
ಸಾರಂಗ :- ವೇಗವಾಗಿ ಚಲಿಸುವವನೂ
ಪದ್ಮಪ್ರಭೋದ :- ಕಮಲ ಪುಷ್ಪಗಳನ್ನು ಅರಳಿಸಬಲ್ಲ ಹಾಗೂ ಜ್ಞಾನ ಚಕ್ಷುವನ್ನು ಅರಳಿಸುವವ
ಮಾರ್ತಾಂಡ :- ಲಯದ ನಂತರ ಜಗತ್ತನ್ನು ಸೃಸ್ಟಿಸಲು ಮತ್ತೆ ಜನಿಸುವ ಆದಿತ್ಯನಿಗೆ ನಮಸ್ಕಾರ.

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾs ದಿತ್ಯ ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ||೧೯||

ಬ್ರಹ್ಮ, ವಿಷ್ಣು, ಮಹೇಶ್ವರ ರೆಂಬ ತ್ರಿಮೂರ್ತಿಗಳಿಗೆ ಪ್ರೇರಕ ಶಕ್ತಿಯಾದ, ಎಲ್ಲವನ್ನೂ ಭಕ್ಷಿಸುವ, ಘೋರ ರೂಪವುಳ್ಳ ಆದಿತ್ಯನಿಗೆ ನಮಸ್ಕಾರ. ಆದಿತ್ಯ ದೇವನೇ ಎಲ್ಲರ ಹಿಂದಿನ ಪ್ರೇರಕ ದೈವಶಕ್ತಿ. ಲಯಕಾಲದಲ್ಲಿ ಎಲ್ಲಾ ಜೀವಿಗಳನ್ನೂ ಭಕ್ಷಿಸಿ ತನ್ನ ಉದರದೊಳಗೆ ಸೇರಿಸಿಕೊಳ್ಳುವ ಶ್ರೀಮನ್ನಾರಾಯಣನು ಆದಿತ್ಯಮಂಡಲದಲ್ಲಿದ್ದಾನೆ.

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ  ||೨೦||

ತಮೋಘ್ನ :- ಕತ್ತಲೆಯನ್ನು ನಾಶ ಪಡಿಸುವವ
ಹಿಮಘ್ನ :- ಮಂಜನ್ನು ಕರಗಿಸುವವ
ಶತ್ರುಘ್ನ :- ಶತ್ರುಗಳನ್ನು ನಾಶ ಮಾಡುವವ
ಅಮಿತಾತ್ಮನೇ :- ಎಣೆಯಿಲ್ಲದ ಆತ್ಮ ಶಕ್ತಿಯುಳ್ಳ
ಕೃತಘ್ನಘ್ನ  :- ಕೃತಘ್ನರಾದವರನ್ನು ಸದೆ ಬಡಿಯುವವ
ಜ್ಯೋತಿಷಾಂಪತಿ:- ಜ್ಯೋತಿರ್ಮಯ ವಸ್ತುಗಳಿಗೆ ಒಡೆಯನಾದ.
ದೇವ :- ಪ್ರಕಾಶರೂಪನಾದ ಆದಿತ್ಯನಿಗೆ ನಮೋನಮಃ


ತಪ್ತಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋsಭಿನಿಘ್ನಾಯ ರವಯೇ ಲೋಕಸಾಕ್ಷಿಣೇ  ||೨೧||

ತಪ್ತಚಾಮೀಕರಾಭ  :- ಪುಟಕ್ಕೆ ಹಾಕಿದ ಬಂಗಾರದಂತೆ ಕಾಂತಿಯುಳ್ಳ
ವಹ್ನಯೇ  :- ಅಗ್ನಿಯಂತೆ ಎಲ್ಲಾ ವಸ್ತುಗಳನ್ನು ದಹಿಸುವ (ಮಾನವನ ಪಚನ ಶಕ್ತಿಯನ್ನು ಪ್ರಚೋದಿಸುವ)
ವಿಶ್ವಕರ್ಮ  :- ಸಕಲ ಕರ್ಮಗಳಿಗೂ ಕಾರಣನಾದ, ಸಾಕ್ಷಿಯಾದ.
ತಮೋಭಿನಿಘ್ನ  :- ಕತ್ತಲೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವವ.
ರವಿ  :- ಎಲ್ಲರ ಮೆಚ್ಚುಗೆಗೆ ಪಾತ್ರನಾದ
ಲೋಕಸಾಕ್ಷಿಣೇ   :- ಜಗತ್ತಿಗೆ ಆಗುಹೋಗುಗಳಿಗೆ ಪ್ರತ್ಯಕ್ಷ ಸಾಕ್ಷಿಯಾದ ಆದಿತ್ಯನಿಗೆ ನಮನ.

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ ||೨೨||

(ಆದಿತ್ಯ ಹೃದಯದ ನಂತರ ಆದಿತ್ಯ ಮಹಿಮೆಯನ್ನು ಅಗಸ್ತ್ಯರು ತಿಳಿಸುತ್ತಾರೆ.)

ಆದಿತ್ಯ ದೇವನು ಎಲ್ಲಾ ಜೀವಿಗಳನ್ನು ಸಂಹಾರ ಮಾಡುವ, ಸೃಷ್ಟಿ ಮಾಡುವ ಶಕ್ತಿಯುಳ್ಳವನು. ಇವನೇ ತನ್ನ ಕಿರಣಗಳಿಂದ ಸುಡುತ್ತಾನೆ. ಜಗತ್ತನ್ನು ಒಣಗಿಸಿಯೂ ಬಿಡುತ್ತಾನೆ. ತನ್ನ ಕಿರಣಗಳಿಂದ ಮಳೆ ಸುರಿಸುವವನೂ ಈತನೇ ಆಗಿದ್ದಾನೆ.

ಗಭಸ್ತಿ  :- ಜ್ಞಾನವೆಂಬ ಕಿರಣಗಳು. ಮರೀಚಿ ಎಂದರೂ ಇದೇ ಅರ್ಥ.
ವರ್ಷತಿ   :- ಎಂದರೆ ಜ್ನಾನದ ಸಂಪತ್ತನ್ನು ಕರುಣೆಯಿಂದ ಜಗತ್ತಿನ ಮೇಲೆ ಸುರಿಸುತ್ತಾನೆ. ಆದಿತ್ಯ ಮಂಡಲದಲ್ಲಿ ನೆಲಸಿದ ಶ್ರೀಮನ್ನಾರಾಯಣನಿಗೂ ಈ ವಿಶೇಷಣಗಳು ಹೆಚ್ಚು ಔಚಿತ್ಯದಿಂದ ಹೊಂದುತ್ತದೆ.

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿ ಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಂ ||೨೩||

ಸರ್ವ ಜೀವಿಗಳಲ್ಲಿಯೂ ಇರುವ ಆದಿತ್ಯ ದೇವನು ತಾನು ಸದಾ ಜಾಗೃತನಾಗಿ, ಮಲಗಿರುವ ಜೀವಿಗಳನ್ನು ಎಬ್ಬಿಸುತ್ತಾನೆ. ಯಜ್ಞ ಎಂಬ ಪದ ಆದಿತ್ಯನ ಹೆಸರೇ. ಯಜ್ಞದ ಫಲವೂ ಆ ದೇವತೆಯೇ ಆಗಿದ್ದಾನೆ.

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತಾನಿ ಲೋಕೇಷು ಸರ್ವಾಣ್ಯೇಷ ರವಿಃ ಪ್ರಭುಃ ||೨೪||

ವೇದಗಳು, ಯಜ್ಞಗಳು, ಆ ಯಜ್ಞಗಳಿಂದ ದೊರೆತ ಫಲ ಮತ್ತು ಜಗತ್ತಿನಲ್ಲಿ ನಡೆಯುವ ಎಲ್ಲಾ ಕೆಲಸಗಳ ಹಿಂದೆಯೂ ಆದಿತ್ಯನೇ ಇದ್ದಾನೆ. ಆದಿತ್ಯ ದೇವನು ಸರ್ವಾತ್ಮಕನೆನಿಸಿದ್ದಾನೆ.



"ಆದಿತ್ಯ ಹೃದಯ ಮಂತ್ರದ ಫಲಶ್ರುತಿ"

ಏನಮಾಪತ್ಶು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್ನಾವಸೀದತಿ ರಾಘವ  | ||೨೫||

ಮೇಲೆ ಹೇಳಿದ ಆದಿತ್ಯ ಹೃದಯವನ್ನು ಕಷ್ಟ ಕಾಲದಲ್ಲಿ, ಅಪರಿಚಿತವಾದ ಭಯಂಕರ ಕಾಡಿನಲ್ಲಿ ಹೋಗುವಾಗ, ಬಯವುಂಟಾದಾಗ ಹೇಳಿಕೊಳ್ಳುವ ಯಾವ ಪುರುಷನೂ ಕಷ್ಟಗಳಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ, ಅವನಿಗೆ ಎಂದೂ ಕೆಡಕಿಲ್ಲ. ಇದು ಸತ್ಯ.

ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಂ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ  ||೨೬||

ಅಗಸ್ತ್ಯರು ಮುಂದುವರಿಸಿದರು:- ದೇವದೇವನಾದ ಆದಿತ್ಯನನ್ನು ಒಂದೇ ಮನಸ್ಸಿನಿಂದ ಪೂಜಿಸು. ಈ ಆದಿತ್ಯ ಹೃದಯವನ್ನು ಮೂರು ಸಲ ಜಪಿಸಿದಲ್ಲಿ, ಯುದ್ಧಗಳಲ್ಲಿ ಜಯಶೀಲನಾಗುವೆ.

(ಶ್ರೀರಾಮನದು ಸೂರ್ಯವಂಶ. ಆದಿತ್ಯದೇವನ ಕರುಣೆಗೋಸ್ಕರ ಅಗಸ್ತ್ಯರು ಆತನಿಗುಪದೇಶಿಸಿದ್ದು ಆದಿತ್ಯಹೃದಯ. ಇದೇ ಶ್ರೀರಾಮನಿಗೆ ಸ್ಫೂರ್ತಿ ನೀಡಿದ ಮಂತ್ರಸದ್ಯ್ರಶ ಸ್ತೋತ್ರರತ್ನ. ಜಗತ್ತಿನ ಅನಿವಾರ್ಯ ಕಾರಣನಾದ ಆದಿತ್ಯದೇವನ ಹಿರಿಮೆ ಇದರಿಂದ ನಮಗೆ ತಿಳಿಯುತ್ತದೆ.)

ಆದಿತ್ಯ ಹೃದಯದ ಎಲ್ಲಾ ಮಂತ್ರಗಳನ್ನೂ, ಎಲ್ಲಾ ಪುಣ್ಯನಾಮಗಳನ್ನೂ ಶ್ರೀಮನ್ನಾರಾಯಣನಿಗೆ ಅನ್ವಯ ಮಾಡಬಹುದು. ಸೂರ್ಯ ಮಂಡಲದಲ್ಲಿನ ನಾರಾಯಣನನ್ನು ಆದಿತ್ಯನ ಮೂಲಕ ಧ್ಯಾನಿಸಿ, ಪೂಜಿಸುವುದೇ ಗಾಯತ್ರೀ ಮಂತ್ರದ ರಹಸ್ಯಾರ್ಥ. ಈ ಗಾಯತ್ರೀ ಮಂತ್ರವೇ ನಮ್ಮನ್ನು ಎಲ್ಲಾ ಕುತ್ತುಗಳಿಂದ ಪಾರುಮಾಡಬಲ್ಲದು. ದೈವ ಮಾರ್ಗದ ಕಡೆ ದಾರಿತೋರಬಲ್ಲದು.

ಅಸ್ಮಿನ್ ಕ್ಷಣೇ ಮಹಾಬಾಹೋ | ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತತೋsಗಸ್ತ್ಯೋ ಜಗಾಮ ಚ ಯಥಾsಗತಂ ||೨೭||

ಅಗಸ್ತ್ಯರು ಶ್ರೀರಾಮನಿಗೆ ಧೈರ್ಯ ತುಂಬಿದರು. ಈ ಕ್ಷಣದಲ್ಲಿಯೇ ರಾವಣನನ್ನು ನೀನು ಕೊಲ್ಲುತ್ತೀ. ಹೀಗೆ ಹೇಳಿ ಬಂದಂತೆಯೇ ಹೊರಟುಹೋದರು. ಆದಿತ್ಯಹೃದಯದ ಉಪದೇಶಕ್ಕಾಗಿಯೇ ರಾಮನ ಬಳಿ ಅಗಸ್ತ್ಯ ಮಹಾಮುನಿಗಳು ಬಂದದ್ದು. ದುಷ್ಟ ಶಿಕ್ಷಣದ ಮಹಾನ್ ಕಾರ್ಯದಲ್ಲಿ ದೈವ ಬಲದ ಜೊತೆ ತಮ್ಮ ತಪೋಬಲದ ಪ್ರೋತ್ಸಾಹವನ್ನೂ ಅವರು ನೀಡಿದರು.

ಏತಚ್ಛ್ರುತ್ವಾ ಮಹಾತೇಜಾ ನಷ್ಟಶೋಕೋsಭವತ್ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ ||೨೮||

ಅಗಸ್ತ್ಯರ ಉಪದೇಶವನ್ನು ಶ್ರದ್ಧೆಯಿಂದ ಆಲಿಸಿದ ರಾಮಚಂದ್ರ ಮಹಾತೇಜಶಾಲಿಯಾಗಿ ಬೆಳಗಿ, ತನ್ನ ಅಧೈರ್ಯವನ್ನು ಬಿಟ್ಟನು. ಸಂತೋಷದಿಂದ, ಹೊಸ ಹುರುಪಿನಿಂದ, ಈ ಆದಿತ್ಯ ಹೃದಯವನ್ನು, ಮನಸ್ಸಿನಲ್ಲಿ ನೆಲೆ ಮಾಡಿಕೊಂಡು ಧ್ಯಾನಿಸತೊಡಗಿದನು.

(ಯಾವುದೇ ಕಾರ್ಯಕ್ಕಾಗಲೀ ಮಂತ್ರ ಬಲದ ಜೊತೆಗೆ ಏಕಾಗ್ರತೆ ಹಾಗೂ ಮನೋಬಲ ಅಗತ್ಯ ಎಂಬ ಅರ್ಥ ಇಲ್ಲಿ ಸೂಚಿತವಾಗಿದೆ.

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ||೨೯||

ಆದಿತ್ಯನನ್ನು ನೋಡುತ್ತಾ, ಆದಿತ್ಯ ಹೃದಯವನ್ನು ಜಪಿಸಿ, ಸಂತೋಷ ಚಿತ್ತದಿಂದ ಕೂಡಿದ ಶ್ರೀರಾಮಚಂದ್ರನು ಮೂರು ಸಲ ಆಚಮನವನ್ನು ಮಾಡಿ, ಶುಚಿರ್ಭೂತನಾಗಿ ಹೊಸ ಶಕ್ತಿಯಿಂದ ಕೂಡಿ, ಧನುಸ್ಸನ್ನು ಯುದ್ಧಕ್ಕೆ ಅಣಿಮಾಡಿದನು.

(ಆದಿತ್ಯ ಹೃದಯ ಮಂತ್ರೋಪದೇಶ, ಹಾಗೂ ಅದರ ಜಪ ಶ್ರೀರಾಮನಲ್ಲಿ ಹೊಸ ಉತ್ಸಾಹ ತುಂಬಿತು. ಆತ್ಮ ಸ್ಥೈರ್ಯ ಹೆಚ್ಚಿತು. ರಾವಣನನ್ನು ನಿಶ್ಚಯವಾಗಿ ಕೊಲ್ಲಬಲ್ಲೆ ಎಂಬ ಧೈರ್ಯ ಮೂಡಿತು.

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗತಂ |
ಸರ್ವ ಯತ್ನೇನ ಮಹತಾ ವಧೇ ತಸ್ಯ ಧೃತೋsಭವತ್ ||೩೦||

ಯುದ್ಧ ಮಾಡಲು ಸಿದ್ಧನಾಗಿ ಬಂದ ರಾವಣನನ್ನು ನೋಡಿ ಹರ್ಷದಿಂದ ಕೂಡಿದವನಾದ ಶ್ರೀರಾಮನು ತನ್ನ ಪ್ರಯತ್ನವನ್ನು ಒಟ್ಟುಗೂಡಿಸಿ, ಆ ರಾವಣನನ್ನು ಸಂಹಾರ ಮಾಡುವುದಾಗಿ ಸಂಕಲ್ಪವನ್ನು ಮಾಡಿದನು.

(ರಾವಣ ವಧೆ ಎಂಬುದು ಸಾಮಾನ್ಯವಲ್ಲ. ಎಲ್ಲರಿಂದಲೂ ಅವಧ್ಯ ಎಂದು ವರ ಪಡೆದ ಈ ಮಹಾನ್ ತಪಸ್ವಿಯನ್ನು ಕೊಲ್ಲಲು ಮಹಾನ್ ತಪಸ್ವಿ, ಬ್ರಹ್ಮ ಜ್ಞಾನಿಯಾದ ಅಗಸ್ತ್ಯರ ನೆರವು ಶ್ರೀಮನ್ನಾರಯಣನಾದ ಶ್ರೀ ರಾಮನಿಗೂ ಬೇಕಾಗಿ ಬಂತು. ಇದು  ಭಗವಾನ್ ಶ್ರೀರಾಮಚಂದ್ರ ಲೋಕಕ್ಕೆ ಹಾಕಿ ಕೊಟ್ಟಂತಹ ಮೇಲ್ಪಂಕ್ತಿ. ಗುರುವಿನ ಅನುಗ್ರಹ, ಉಪದೇಶಕ್ಕೆ ಇರುವಂತಹ ಮಹಾನ್ ಸ್ಥಾನ, ಇದರಿಂದ ಸ್ಪಷ್ಟವಾಗುತ್ತದೆ. ಇದೊಂದು ಲೋಕೋತ್ತರ ಉದಾಹರಣೆ ಎನಿಸಿಕೊಂಡಿದೆ.)

ಅಥ ರವಿರವದನ್ನಿರೀಕ್ಷ್ಯ ರಾಮಂ ಮುದಿತಮಾನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣಮಧ್ಯ ಗತೋ ವಚಸ್ತ್ವರೇತಿ ||೩೧||

|| ಇತಿ ಶ್ರೀಮದ್ರಾಮಾಯಣೇ ಯುದ್ಧ ಕಾಂಡೇ
ನಾಮ ಸಪ್ತೋತ್ತರ ಶತತಮಃ ಸರ್ಗಃ ||

ಆದಿತ್ಯ ಹೃದಯಂ ಸಂಪೂರ್ಣಂ

(ಶ್ರೀ ರಾಮನ ಜಪಬಲದಿಂದ ಆದಿತ್ಯದೇವನು ಪ್ರತ್ಯಕ್ಷನಾಗುತ್ತಾನೆ. ರಾಮಚಂದ್ರನಿಗೆ ಪ್ರೋತ್ಸಾಹ, ಮನೋಬಲ ನೀಡಿ ಹರಸುತ್ತಾನೆ).
ಶ್ರೀರಾಮನನ್ನು ನೋಡಿ ಮನದುಂಬಿ, ಸಂತಸದಿಂದ ಕೂಡಿದ ಆದಿತ್ಯ ದೇವನು ಎಲ್ಲಾ ದೇವತೆಗಳ ಸಮೂಹದಲ್ಲಿ ತಾನೂ ನಿಂತು, ಬೇಗ ಯುದ್ಧ ಮಾಡು ಎಂಬ ಮಾತನ್ನು ಹೇಳಿದನು.
(ದೇವತಾ ಕಾರ್ಯದ ಸಿದ್ಧಿಗೋಸ್ಕರ, ಭೂಮಿಯ ಮೇಲೆ ಅವತರಿಸಿದ ಶ್ರೀರಾಮನ ಜಯಕ್ಕಾಗಿ ಎಲ್ಲಾ ದೇವತೆಗಳೂ ಒಂದಲ್ಲ ಒಂದು ರೀತಿ ಸಹಕರಿಸಿದರು. ಇದರಲ್ಲಿ ಆದಿತ್ಯನ ಪಾತ್ರ ತುಂಬಾ ಹಿರಿದು. ಶ್ರೀರಾಮಾವತಾರದ ಉದ್ದೇಶ ದುಷ್ಟ ಸಂಹಾರ, ರಾವಣ ವಧೆ. ಇದರಲ್ಲಿ ಒದಗಿದಂತಹ ಕ್ಲೇಶವನ್ನು ಪರಿಹರಿಸಿ ರಾಮನಲ್ಲಿ ಹೊಸ ಶಕ್ತಿ ಮೂಡಿಸಿದವನೇ ಸೂರ್ಯದೇವ.)
ಆದಿತ್ಯ ಹೃದಯದ ಮಂತ್ರವು ಎಂತಹ ಕಷ್ಟಗಳನ್ನಾದರೂ ಬಗೆ ಹರಿಸುವ ಶಕ್ತಿ ತನ್ನ ಹೊಂದಿದೆ.

ಇಲ್ಲಿಗೆ ಶ್ರೀಮದ್ರಾಮಾಯಣದ ಯುದ್ಧಕಾಂಡದಲ್ಲಿ ೧೦೭ನೆಯ ಸರ್ಗವಾದ ಆದಿತ್ಯ ಸ್ತೋತ್ರ ಮುಗಿಯಿತು.
***************





No comments:

Post a Comment