shloka type in 2 minutes
ಋಣಮೋಚನಸ್ತೋತ್ರ
ಋಣವಿಮೋಚನ ಶ್ರೀ ನರಸಿಂಹ ಸ್ತೋತ್ರಂ
ಋಣವಿಮೋಚನ ಶ್ರೀ ನರಸಿಂಹ ಸ್ತೋತ್ರಂ
ಭಕ್ತರ ಸಾಲದ ಬಾಧೆಯ ಪರಿಹಾರಕ್ಕೆ ರಾಮಬಾಣದಂತಿರುವ, ಶ್ರೀವಾದಿರಾಜಗುರುಸಾರ್ವಭೌಮರು ಶ್ರೀನರಸಿಂಹಪುರಾಣದಿಂದ ತೆಗೆದು ಕಾರುಣ್ಯದಿಂದ ನಮಗೆ ನೀಡಿರುವ ದಿವ್ಯಸ್ತೋತ್ರ. ಇದರ ಅರ್ಥ ಮತ್ತು ಪಠಿಸುವ ಕ್ರಮವನ್ನು ವಿಸ್ತೃತವಾಗಿ ಉಪನ್ಯಾಸದಲ್ಲಿ ತಿಳಿಸಲಾಗಿದೆ.
ಶ್ರೀವಾದಿರಾಜಯತಿಪ್ರೋಕ್ತಂ
ಶ್ರೀನೃಸಿಂಹಪುರಾಣಸ್ಥಂ
ಋಣಮೋಚನಸ್ತೋತ್ರಮ್
ದೇವತಾಕಾರ್ಯಸಿದ್ಧ್ಯರ್ಥಂ ಸಭಾಸ್ತಂಭಸಮುದ್ಭವಮ್ I
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೧ II
ಲಕ್ಷ್ಮ್ಯಾಲಿಂಗಿತವಾಮಾಂಗಂ ಭಕ್ತಾನಾಂ ವರದಾಯಕಮ್ I
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೨ II
ಆಂತ್ರಮಾಲಾಧರಂ ಶಂಖ- ಚಕ್ರಾಬ್ಜಾಯುಧಧಾರಿಣಮ್ I
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೩ II
ಸ್ಮರಣಾತ್ ಸರ್ವಪಾಪಘ್ನಂ ಕದ್ರೂಜವಿಷನಾಶನಮ್ I
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೪ II
ಸಿಂಹನಾದೇನ ಮಹತಾ ದಿಗ್ದಂತಿಭಯನಾಶನಮ್ I
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೫ II
ಪ್ರಹ್ಲಾದವರದಂ ಶ್ರೀಶಂ ದೈತ್ಯೇಶ್ವರವಿದಾರಣಮ್ I
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೬ II
ಕ್ರೂರಗ್ರಹೈಃ ಪೀಡಿತಾನಾಂ ಭಕ್ತಾನಾಮಭಯಪ್ರದಮ್ I
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೭ II
ವೇದ-ವೇದಾಂತ-ಯಜ್ಞೇಶಂ ಬ್ರಹ್ಮ-ರುದ್ರಾದಿವಂದಿತಮ್ I
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೮ II
ಯ ಇದಂ ಪಠತೇ ನಿತ್ಯಂ ಋಣಮೋಚನಸಂಜ್ಞಿತಮ್ I
ಅನೃಣೀ ಜಾಯತೇ ಸದ್ಯೋ ಧನಂ ಶೀಘ್ರಮವಾಪ್ನುಯಾತ್ II ೯ II
ಇತಿ ಶ್ರೀವಾದಿರಾಜಯತಿಪ್ರೋಕ್ತಂ ಶ್ರೀನೃಸಿಂಹಪುರಾಣಸ್ಥಂ
ಋಣಮೋಚನಸ್ತೋತ್ರಮ್.
******
another (small changes are there)
another (small changes are there)
ಶ್ರೀನರಸಿಂಹಋಣಮೋಚನಸ್ತೋತ್ರ
ಓಂ ದೇವಾನಾಂ ಕಾರ್ಯಸಿಧ್ಯರ್ಥಂ ಸಭಾಸ್ತಮ್ಭಸಮುದ್ಭವಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 1॥
ಲಕ್ಷ್ಮ್ಯಾಲಿಂಗಿತವಾಮಾಂಗಂ ಭಕ್ತಾನಾಮಭಯಪ್ರದಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 2॥
ಪ್ರಹ್ಲಾದವರದಂ ಶ್ರೀಶಂ ದೈತೇಶ್ವರವಿದಾರಣಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 3॥
ಸ್ಮರಣಾತ್ಸರ್ವಪಾಪಘ್ನಂ ಕದ್ರುಜಂ ವಿಷನಾಶನಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 4॥
ಅನ್ತ್ರಮಾಲಾಧರಂ ಶಂಖಚಕ್ರಾಬ್ಜಾಯುಧಧಾರಿಣಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 5॥
ಸಿಂಹನಾದೇನ ಮಹತಾ ದಿಗ್ದನ್ತಿಭಯದಾಯಕಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 6॥
ಕೋಟಿಸೂರ್ಯಪ್ರತೀಕಾಶಮಭಿಚಾರಿಕನಾಶನಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ॥ 7॥
ವೇದಾನ್ತವೇದ್ಯಂ ಯಜ್ಞೇಶಂ ಬ್ರಹ್ಮರುದ್ರಾದಿಸಂಸ್ತುತಮ್ ।
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ಓಂ ॥ 8॥
ಇದಂ ಯೋ ಪಠತೇ ನಿತ್ಯಂ ಋಣಮೋಚಕಸಂಜ್ಞಕಮ್ ।
ಅನೃಣೀಜಾಯತೇ ಸದ್ಯೋ ಧನಂ ಶೀಘ್ರಮವಾಪ್ನುಯಾತ್ ॥ 9॥
॥ ಇತಿ ಶ್ರೀನೃಸಿಂಹಪುರಾಣೇ ಋಣಮೋಚನಸ್ತೋತ್ರಂ ಸಮ್ಪೂರ್ಣಮ್ ॥
|| ಇತಿ (ಶ್ರೀವಾದಿರಾಜತೀರ್ಥದೃಷ್ಟಂ) ಶ್ರೀನರಸಿಂಹಪುರಾಣೋಕ್ತ ಋಣಮೋಚನಸ್ತೋತ್ರಮ್ ||
|| ಇತಿ (ಶ್ರೀವಾದಿರಾಜತೀರ್ಥದೃಷ್ಟಂ) ಶ್ರೀನರಸಿಂಹಪುರಾಣೋಕ್ತ ಋಣಮೋಚನಸ್ತೋತ್ರಮ್ ||
*****
ಶ್ರೀವಾದಿರಾಜರಿಂದ ವಿರಚಿತವಾದ ಈ ದಿವ್ಯ ನೃಸಿಂಹ ಸ್ತೋತ್ರವು ಸಕಲ ಋಣಬಾಧೆಗಳನ್ನು ಪರಿಹಾರ ಮಾಡುವಂತಹದ್ದಾಗಿದೆ. ಈ ಸ್ತೋತ್ರದ ನಿತ್ಯ ಪಾರಾಯಣದಿಂದ ಶ್ರೀಪ್ರಾಪ್ತಿಯಾಗಿ ಸಾಲಬಾಧೆ, ಆರ್ಥಿಕ ಕಷ್ಟಗಳು ಶೀಘ್ರದಲ್ಲಿ ನಿವಾರಣೆಯಾಗುತ್ತವೆ.
“ ಋಣ “ ಎಂದಾಕ್ಷಣ ನಮಗೆ ಹೊಳೆಯುವದು “ ಸಾಲ “ ಎಂಬರ್ಥ! ಹೌದು! ಋಣ, ಒಂದು ಬಗೆಯ ಸಾಲವೇ ಸರಿ! ಪ್ರತಿ ಜನ್ಮದಲ್ಲೂ ನಾವು ಅನೇಕ ಬಗೆಯ ಋಣಕ್ಕೆ ಒಳಗಾಗುತ್ತೇವೆ. ಪ್ರತಿಜನ್ಮದಲ್ಲೂ, ಜನನದೊಟ್ಟಿಗೆ ಆರಂಭವಾಗುವ ನಮ್ಮ ಋಣಚಕ್ರ, ಆ ಜನ್ಮದ ಮರಣದೊಂದಿಗೆ ಮುಕ್ತಾಯವಾದರೂ, ಮತ್ತೆ ಮುಂದಿನ ಜನ್ಮದೊಂದಿಗೆ ಆರಂಭವಾಗುತ್ತದೆ. ನಾವು ಒಳಗಾಗುವ ಅನೇಕ ಋಣಗಳಲ್ಲಿ ಕೆಲವೊಂದು ಮುಖ್ಯವಾದ ಋಣಗಳು ಯಾವವೆಂದರೆ ಭೂಮಿಯ ಋಣ, ಜಲಋಣ, ಆಕಾಶ ಋಣ, ವಾಯು ಋಣ, ಅಗ್ನಿ ಋಣ, ತಂದೆತಾಯಿಯರ ಋಣ, ಜನ್ಮಸ್ಥಳದ ಋಣ, ಗುರು ಋಣ, ದೇವತಾ ಋಣ, ಬಂಧುಬಾಂಧವರ ಋಣ, ಸ್ನೇಹಿತರ ಋಣ, ಕಾಯಿಲೆಯ ಋಣ, ಸಾಲದ ಋಣ, ಪತಿ/ಪತ್ನಿಯ ಋಣ, ಮಕ್ಕಳ ಋಣ, ಮನೆಯ ಋಣ, ಇತ್ಯಾದಿ, ಇತ್ಯಾದಿ. ಈ ಎಲ್ಲಾ ಋಣಗಳಿಂದ ಬಿಡುಗಡೆಯಾದರೆ ಮಾತ್ರ ಮೋಕ್ಷ ಎನ್ನುವದು ಜ್ಞಾನಿಗಳ ಅಭಿಪ್ರಾಯ! ಪ್ರತಿಜನ್ಮದಲ್ಲೂ ಸಂಗ್ರಹಗೊಂಡು ಪರ್ವತದಷ್ಟಾಗಿರುವ ಈ ಋಣಗಳಿಂದ ಬಿಡುಗಡೆಯ ಮಾರ್ಗವನ್ನು ತೋರಿಸಿ, ಮುಂದೆ ಮೋಕ್ಷದ ಮಾರ್ಗದಲ್ಲಿ ಮುನ್ನಡೆಸುವವನೇ ಸದ್ಗುರು! ಕೆಲವು ಮಹನೀಯರ ಪ್ರಕಾರ “ ಗುರು “ ಎನ್ನುವ ಶಬ್ದದ ಒಂದು ವ್ಯಾಖ್ಯಾನ......” ಗು “ ಎಂದರೆ ಗುಪ್ತವಾಗಿರುವ, “ ರು “ ಎಂದರೆ ಋಣ, ಅಂದರೆ ಗುಪ್ತವಾಗಿರುವ ಋಣಗಳನ್ನು ಎತ್ತಿ ತೋರಿಸಿ, ಅವನ್ನು ಪರಿಹರಿಸಿಕೊಳ್ಳಲು ಮಾರ್ಗ ತೋರಿಸುವವನೇ ಗುರು! ಅಂತಹ ಸದ್ಗುರುಗಳು ನಮ್ಮ ಶ್ರೀ ಗುರುರಾಯರು! ಆದ್ದರಿಂದ, ಶ್ರೀ ಗುರುರಾಯರಿಗೆ ಶರಣಾಗಿ, ಅವರನ್ನು ಪ್ರಾರ್ಥಿಸಿ, ಸಮಸ್ತ ಬಗೆಯ ಋಣಗಳಿಂದ ಬಿಡುಗಡೆಗೊಳಿಸುವ ಅವರ ಅನುಗ್ರಹವನ್ನು ಸಂಪಾದಿಸುವದಕ್ಕೋಸ್ಕರ, ಅವರನ್ನು ಸ್ತುತಿಗೈಯ್ಯುವ ಸ್ತೋತ್ರವೊಂದನ್ನು, ಶ್ರೀ ಗುರುರಾಯರ ಅಂತರಂಗ ಭಕ್ತರಾದ ಶ್ರೀ ಕೃಷ್ಣಾವಧೂತರು ನಮ್ಮೆಲ್ಲರ ಉಪಯೋಗಕ್ಕಾಗಿ ರಚಿಸಿಕೊಟ್ಟಿದ್ದಾರೆ, ಅದುವೇ ಈ “ ಋಣಮೋಚನ ಸ್ತೋತ್ರ “!
ಯಾವದೇ ಸ್ತೋತ್ರವನ್ನು ಪಠಿಸುವಾಗಲೂ, ಪ್ರತೀಶ್ಲೋಕದ ಅರ್ಥವನ್ನು ವಿಸ್ತಾರವಾಗಿ ತಿಳಿದು, ಭಾವವನ್ನು ಮನಸ್ಸಿಗೆ ತಂದುಕೊಂಡು ಪಠಿಸಿದರೆ “ ನಿಶ್ಚಿತ ಫಲ “ ಎಂದು ಜ್ಞಾನಿಗಳು ಸಾರಿದ್ದಾರೆ.
ಶ್ರೀ ರಾಘವೇಂದ್ರಾರ್ಯ ಶ್ರೀ ರಾಘವೇಂದ್ರಾರ್ಯ
ಶ್ರೀ ರಾಘವೇಂದ್ರಾರ್ಯ ಪಾಹಿ ಪ್ರಭೋ ॥
॥ ಓಂ ಶ್ರೀ ರಾಘವೇಂದ್ರಾಯ ನಮಃ ॥
*****
No comments:
Post a Comment