Friday 1 October 2021

ಗಣಪತಿ ಗಣೇಶ ಕವಚ ಸ್ತೋತ್ರಮ್

 || ಶ್ರೀಗಣೇಶ ಕವಚ ಸ್ತೋತ್ರಮ್ ||


 || ಗೌರ್ಯುವಾಚ ||

ಏಷೋsತಿ ಚಪಲೋದೈತ್ಯಾನ್ ಬಾಲ್ಯೇsಪಿ ನಾಶಯತ್ಯಹೊ |

ಅಗ್ರೇ ಕಿಂ ಕರ್ಮ ಕರ್ತೇತೀ ಜಾನೇ ಮುನಿಸತ್ತಮ ||೧ ||


ಭಾವಾರ್ಥ:-ಗೌರೀ ದೇವಿಯು ಕೇಳುವಳು:- ಚಿಕ್ಕಂದಿನಲ್ಲಿಯೇ ಅತಿ ಚಪಲಿಗರಾಗಿರುವ ಈ ಅಸುರರನ್ನು ನಾಶಗೊಳಿಸಲು ಯಾವ ಕಾರ್ಯವನ್ನು ಮಾಡಬೇಕು ಮುನಿಪುಂಗವಾ?


ದೈತ್ಯಾ ನಾನಾವಿಧಾ ದುಷ್ಟಾ: ಸಾಧುದೇವ ದ್ರುಹ: ಖಲಾ: |

ಅತೋsಸ್ಯ ಕಂಠೆ ಕಿಂಚಿತ್ವಂ ರಕ್ಷಾರ್ಥಂ ಬದ್ಧುಮಹರ್ಸಿ  ||೨||


ಭಾವಾರ್ಥ:-ನಾನಾ ರೀತಿಯಲ್ಲಿ ದೈತ್ಯರು ಹಾಗೂ ದುಷ್ಟರು ಸಾಧುಗಳು ಮತ್ತು ದೇವತೆಗಳಿಗೆ ತಮ್ಮ ನೀಚಕಾರ್ಯಗಳಿಂದ ದ್ರೋಹವನ್ನು ಬಗೆಯುತ್ತಿದ್ದಾರೆ. ಅವರನ್ನು ರಕ್ಷಿಸಲು ನೀನು ತಕ್ಕವನಿರುವಿ. ಆದುದರಿಂದ ಸ್ವಲ್ಪ ಮಾರ್ಗದರ್ಶನವನ್ನು ಒದಗಿಸು ಮುನಿಪುಂಗವನೇ.


||ಮುನಿರುವಾಚ||


ಧಾಯೇತ್ಸಿಂಹಗತಂ ವಿನಾಯಕಮಮುಂ ದಿಗ್ಬಾಹುಮಾಧ್ಯೆ ಯುಗೆ |

ತ್ರೇತಾಯಂ ತು ಮಯೂರವಾಹನಮಮುಂ ಷಡ್ಬಾಹುಕಂ ಸಿದ್ಧಿದಮ್ ||

ದ್ವಾಪರೇ ತು ಗಜಾನನಂ ಯುಗಭುಜಂ ರಕ್ತಾಂಗರಾಗಂ ವಿಭುಂ |

ತುರ್ಯೆ ತು ದ್ವಿಭುಜಂ ಸಿತಾಂಗರುಚಿರಂ ಸರ್ವಾರ್ಥದಂ ಸರ್ವದಾ ||೩||


ಮುನಿಯು ಹೇಳಿದನು:- ಆದಿಯುಗದಲ್ಲಿ ಎಂದರೆ ಕೃತಯುಗದಲ್ಲಿ ಸಿಂಹವಾಹನನಾಗಿ,ದಿಕ್ಕುಗಳನ್ನು ಭುಜಗಳನ್ನಾಗಿಸಿಕೊಂಡವನಾದ ವಿನಾಯಕನು ತ್ರೇತಾಯುಗದಲ್ಲಿ ಮಯೂರವಾಹನಾಗಿ ಆರು ಭುಜಗಳನ್ನು ಹೊಂದಿ ಸಿದ್ಧಿ ಪ್ರದಾಯಕನೆನಿಸಿ,ದ್ವಾಪರಾಯುಗದಲ್ಲಿ ನಾಲ್ಕು ಭುಜಗಳನ್ನು ಹೊಂದಿ ಕೆಂಬಣ್ಣದವನಾಗಿ ಜಗದೊಡೆಯ ಗಜಾನನ ಎನಿಸಿ ಈ ಕಲಿ ಯುಗದಲ್ಲಿ ಎರಡು ಭುಜಗಳಿಂದ ಕೂಡಿದವನಾಗಿ ಬಿಳಿ ವರ್ಣದವನಾಗಿ ಸುಂದರ ರೂಪವುಳ್ಳವನಾದ ಸದಾ ಸಮಸ್ತ ಅರ್ಥಗಳನ್ನು ಕರುಣಿಸುವಂತಹಾ ಸರ್ವಾರ್ಥದನೆನಿಸಿರುವವನನ್ನು ಧ್ಯಾನಿಸಬೇಕು.


ವಿನಾಯಕ: ಶಿಖಾಂ ಪಾತು ಪರಮಾತ್ಮಾ ಪರಾತ್ಪರ: |

ಅತಿ ಸುಂದರ ಕಾಯಸ್ತು ಮಸ್ತಕಂ ಸುಮಹೋತ್ಕಟ: ||೪||


ಭಾವಾರ್ಥ:-ಪರಮಾತ್ಮನೂ ಪವಿತ್ರತಮನೂ ಆಗಿರುವ ವಿನಾಯಕನು ಚಂಡಿಕೆಯನ್ನೂ, ಅತಿ ಸುಂದರ ದೇಹದವನಾದ ಸುಮಹೋತ್ಕಟನು ಶಿರಸ್ಸನ್ನೂ ರಕ್ಷಿಸಲಿ.


ಲಲಾಟಂ ಕಶ್ಯಪ: ಪಾತು,ಭ್ರೂಯುಗಂ ತು ಮಹೋದರ: |

ನಯನೇ ಫಾಲಚಂದ್ರಸ್ತು ಗಜಾಸ್ಯಸ್ತ್ವೋಷ್ಠಪಲ್ಲವೌ ||೫||


ಭಾವಾರ್ಥ:-ಲಲಾಟವನ್ನು ಕಶ್ಯಪನೂ,ಮಹೋದರನು ಎರಡೂ ಹುಬ್ಬುಗಳನ್ನೂ,ಕಣ್ಣುಗಳನ್ನು ಫಾಲಚಂದ್ರನೂ,ಚಿಗುರನ್ನು ಹೋಲುವ ತುಟಿಯನ್ನು ಗಜಾಸ್ಯನೂ ರಕ್ಷಿಸಲಿ.


ಜಿವ್ಹಾಂ ಪಾತು ಗಣಕ್ರೀಡಶ್ಚಿಬುಕಂ ಗಿರಿಜಾಸುತ: |

ವಾಚಂ ವಿನಾಯಕ: ಪಾತು ದಂತಾನ್ ರಕ್ಷತ್ ವಿಘ್ನಹಾ ||೬||


ಭಾವಾರ್ಥ:-ಗಣಕ್ರೀಡನು ನಾಲಿಗೆಯನ್ನೂ,ಗಿರಿಜಾತನಯನು ಗಡ್ಡವನ್ನೂ,ವಿನಾಯಕನು ವಾಣಿಯನ್ನೂ,ಹಲ್ಲುಗಳನ್ನು ವಿಘ್ನಹಂತಾರನೂ ರಕ್ಷಿಸಲಿ.


ಶ್ರವಣೌ ಪಾಶಪಾಣಿಸ್ತು ನಾಸಿಕಾಂ ಚಿಂತಿತಾರ್ಥದ: |

ಗಣೇಶಸ್ತು ಮುಖಂ ಕಂಠಂ ಪಾತು ದೇವೋ ಗಣಂಜಯ: ||೭||


ಭಾವಾರ್ಥ:-ಪಾಶವನ್ನು ಕೈಯಲ್ಲಿ ಹಿಡಿದವನು ಕಿವಿಗಳನ್ನೂ,ಇಷ್ಟಾರ್ಥಗಳನ್ನು ಪೂರೈಸುವ ಚಿಂತಿತಾರ್ಥದನು ಮೂಗನ್ನೂ,ಗಣಗಳನ್ನು ಗೆದ್ದವನಾದ ದೇವನು ಕಂಠವನ್ನೂ[ಕೊರಳನ್ನೂ] ರಕ್ಷಿಸಲಿ.


ಸ್ಕಂಧೌ ಪಾತು ಗಜಸ್ಕಂಧ: ಸ್ತನೌ ವಿಘ್ನ ವಿನಾಶನ: |

ಹೃದಯಂ ಗಣನಾಥಸ್ತು ಹೇರಂಭೋ ಜಠರಂ ಮಹಾನ್  ||೮||


ಭಾವಾರ್ಥ:-ಗಜಸ್ಕಂಧನು ಹೆಗಲುಗಳನ್ನೂ ಸ್ತನಗಳನ್ನು ವಿಘ್ನ ವಿನಾಶಕನೂ, ಹೃದಯವನ್ನು ಗಣನಾಥನೂ,ಹೊಟ್ಟೆಯನ್ನು ಶ್ರೇಷ್ಠನಾದ ಹೇರಂಬನೂ ರಕ್ಷಿಸಲಿ.


ಧರಾಧರ: ಪಾತು ಪಾರ್ಶ್ವೌ ಪೃಷ್ಠಂ ವಿಘ್ನಹರ: ಶುಭ: | 

ಲಿಂಗಂಗುಹ್ಯಂ ಸದಾಪಾತು ವಕ್ರತುಂಡೊ ಮಹಾಬಲ: ||೯|| 


ಭಾವಾರ್ಥ:-ಎರಡೂ ಮಗ್ಗುಲುಗಳನ್ನು ಭೂಮಿಯನ್ನು ಧರಿಸಿದವನೂ ಹಿಂಬದಿಯನ್ನು ವಿಘ್ನವಿನಾಶಕನೂ ಶುಭನು ಲಿಂಗವನ್ನೂ ಹಾಗೂ ಗುಪ್ತಾಂಗವನ್ನು ವಕ್ರತುಂಡನೂ ಸದಾಕಾಲ ರಕ್ಷಿಸಲಿ.


ಗಣಕ್ರೀಡೊ ಜಾನುಜಂಘೆ ಊರೂಮಂಗಲಮೂರ್ತಿಮಾನ್ |

ಏಕದಂತೋ ಮಹಾಬುದ್ಧಿ: ಪಾದೌ ಗುಲ್ಪೌ ಸದಾsವತು ||೧೦||


ಭಾವಾರ್ಥ:-ಮೊಣಕಾಲುಗಳನ್ನು ಮತ್ತು ಗಂಟುಗಳನ್ನು ಗಣಕ್ರೀಡನೂ ತೊಡೆಗಳನ್ನು ಮಂಗಲಮೂರ್ತಿಯೂ,ಪಾದ ಹಾಗೂ ಪಾದಗಳ ಮಣಿಗಂಟುಗಳನ್ನು ಮಹಾಬುದ್ಧಿಶಾಲಿಯಾದ ಏಕದಂತನೂ ಸದಾಕಾಲ ರಕ್ಷಿಸಲಿ.


ಕ್ಷಿಪ್ರಪ್ರಸಾದನೋ ಬಾಹೂ ಪಾಣೀ ಆಶಾಪ್ರಪೂರಕ: |

ಅಂಗಲೀಶ್ಚ ನಖಾನ್ಪಾತು ಪದ್ಮ ಹಸ್ತೋsರಿನಾಶನ: ||೧೧||


ಭಾವಾರ್ಥ:-ಭುಜಗಳನ್ನು ಕೂಡಲೇ ಪ್ರಸಾದವನ್ನು ಕೊಡುವವನೂ, ಕೈಗಳನ್ನು ಇಚ್ಚೆಗಳನ್ನು ಈಡೇರಿಸುವವನೂ,ಪದ್ಮಹಸ್ತವುಳ್ಳವನಾದ ವೈರಿನಾಶಕನು ಉಗುರು ಬೆರಳುಗಳನ್ನೂ ಸದಾ ಕಾಲ ರಕ್ಷಿಸಲಿ


ಸರ್ವಾಂಗಾನಿ ಮಯೂರೇಶೋ ವಿಶ್ವವ್ಯಾಪಿ ಸದಾsವತು |

ಅನುಕ್ತಮಪಿ ಯತ್ ಸ್ಥಾನಂ ಧೂಮ್ರಕೇತು: ಸದಾsವತು ||೧೨||


ಭಾವಾರ್ಥ:-ವಿಶ್ವವ್ಯಾಪಿಯಾಗಿರುವ ಮಯೂರೇಶನು ಎಲ್ಲಾ ಅಂಗಗಳನ್ನೂ ಹಾಗೂ ಉಲ್ಲೇಕಿಸದಿರುವ ಸ್ಥಾನಗಳನ್ನು ಧೂಮ್ರಕೇತುವೂ ರಕ್ಷಿಸಲಿ.


ಆಮೋದಸ್ತ್ವ ಗ್ರತ: ಪಾತು ಪ್ರಮೋದ: ಪೃಷ್ಟತೊsವತು |

ಪ್ರಾಚ್ಯಾಂ ರಕ್ಷತು ಬುದ್ಧೀಶ: ಆಗ್ನೇಯ್ಯಾಂ ಸಿದ್ಧಿದಾಯಕ: ||೧೩||


ಭಾವಾರ್ಥ:-ಸುಖದಾಯಕನು ಮುಂಭಾಗವನ್ನೂ, ಆನಂದದಾಯಕನು ಹಿಂಭಾಗವನ್ನೂ ಪೂರ್ವದಿಗ್ಭಾಗದಲ್ಲಿ ಬುದ್ಧಿಪ್ರದಾಯಕನೂ,ಆಗ್ನೇಯದಲ್ಲಿ ಸಿದ್ಧಿಪ್ರದಾಯಕನೂ,......> 


ದಕ್ಷಿಣಸ್ಯಾಮುಮಾಪುತ್ರೋ ನೈಋತ್ಯಾಂ ತು ಗಣೇಶ್ವರ: |

ಪ್ರತೀಚ್ಯಾಂ ವಿಘ್ನಹರ್ತಾsವ್ಯಾದ್ವಾಯವ್ಯಾಂ ಗಜಕರ್ಣಕ: ||೧೪||


ಭಾವಾರ್ಥ:- ....ದಕ್ಷಿಣದಲ್ಲಿ ಉಮಾತನಯನೂ,ನೈಋತ್ಯದಲ್ಲಿ ಗಣೇಶ್ವರನೂ,ಪಶ್ಚಿಮದಲ್ಲಿ ವಿಘ್ನವಿನಾಶಕನೂ ವಾಯವ್ಯದಲ್ಲಿ ಗಜಕರ್ಣಕನೂ ರಕ್ಷಿಸಲಿ.


ಕೌಬೇರ್ಯಾಂ ನಿಧಿಪ: ಪಾಯಾದೀಶಾನ್ಯಾ ಮೀಶನಂದನ: |

ದಿವಾsವ್ಯಾ ದೇಕದಂತಸ್ತು ರಾತ್ರೌಸಂಧ್ಯಾಸು ವಿಘ್ನ ಹೃತ್ ||೧೫||


ಭಾವಾರ್ಥ:-ನಿಧಿಪನು ಕುಬೇರ[ಉತ್ತರ]ದಿಕ್ಕಿನಲ್ಲಿಯೂ,ಈಶಾನ್ಯದಲ್ಲಿ ಈಶತನಯನೂ,ಹಗಲು ಏಕದಂತನೂ,ಸಂಧ್ಯಾ-ರಾತ್ರೆಗಳಲ್ಲಿ ವಿಘ್ನಹರ್ತನೂ ಕಾಪಾಡಲಿ.


ರಾಕ್ಷಸಾಸುರ ವೇತಾಲ ಗ್ರಹ ಭೂತ ಪಿಶಾಚತ: |

ಪಾಶಾಂಕುಶಧರ: ಪಾತು ರಜ: ಸತ್ವತಮ: ಸ್ಮೃತಿ:  ||೧೬||


ಭಾವಾರ್ಥ:-ರಾಕ್ಷಸರು,ದೈತ್ಯರು,ಬೇತಾಳ,ದುಷ್ಟಗ್ರಹರು,ಭೂತ ಪಿಶಾಚಾದಿಗಳೆಲ್ಲವುಗಳಿಂದ ಸತ್ವ-ರಜ-ತಮ-ಸ್ಮೃತಿಗಳೊಡನೆ  ಪಾಶಾಂಕುಶಧಾರಿಯು ಕಾಯಲಿ.


ಜ್ಞಾನಂ ಧರ್ಮಂ ಚ ಲಕ್ಷ್ಮೀಂ ಚ ಲಜ್ಜಾಂ ಕೀರ್ತಿಂ ತಥಾ ಕುಲಮ್ |

ವಪುರ್ಧನಂ ಚ ಧಾನ್ಯಂ ಚ ಗೃಹದಾರಾನ್ಸುತಾನ್ ||೧೭||


ಭಾವಾರ್ಥ:ಜ್ಞಾನ,ಧರ್ಮ,ಸಂಪತ್ತು,ಲಜ್ಜೆ,ಕೀರ್ತಿ,ಕುಲ,ದೇಹ,ವಿತ್ತ,ಧಾನ್ಯ,ಮನೆ,ಸತಿ,ಮಕ್ಕಳು, ಸಭ್ಯರೇ ಆದಿಯಾಗಿ ಎಲ್ಲರನ್ನೂ ಸರ್ವಾಯುಧವನ್ನು ಧರಿಸಿದವನು ರಕ್ಷಿಸಲಿ.


ಸರ್ವಾಯುಧಧರ: ಪೌತ್ರಾನ್ ಮಯೂರೇಶೋsವತಾತ್ಸದಾ |

ಕಪಿಲೋsಜಾವಿಕಂ ಪಾತು ಗಜಾಶ್ವಾನ್ವಿಕಟೋsವತು ||೧೮||


ಭಾವಾರ್ಥ:-ಮೊಮ್ಮಕ್ಕಳನ್ನು ಮಯೂರೇಶನು ಸದಾ ರಕ್ಷಿಸಲಿ. ಆಜೀವನ ಪರ್ಯಂತ ಕಪಿಲನು ಕಾಪಾಡಲಿ. ವಿಕಟನು ಆನೆ-ಕುದುರೆ ಗಳನ್ನು ರಕ್ಷಿಸಲಿ.


ಭೂರ್ಜಪತ್ರೇ ಲಿಖಿತ್ವೇದಂ ಯ: ಕಂಠೇ ಧಾರಯೇತ್ಸುಧೀ: |

ನ ಭಯಂ ಜಾಯತೆ ತಸ್ಯ ಯಕ್ಷರಕ್ಷ: ಪಿಶಾಶಚ: ||೧೯||


ಭಾವಾರ್ಥ:-ಯಾವನು ಇದನ್ನು ಭೂರ್ಜಪತ್ರದಲ್ಲಿ ಬರೆದು ಕೊರಳಲ್ಲಿ ಧಾರಣೆ ಮಾಡುವನೋ ಅವನು ಯಕ್ಷ,ರಾಕ್ಷಸ,ಪಿಶಾಚಾದಿಗಳ ಭಯವಿಲ್ಲದೆ ನಿರ್ಭಯನಾಗುವನು.


ತ್ರಿಸಂಧ್ಯಂ ಜಪತೆ ಯಸ್ತು ವಜ್ರಸಾರತನುರ್ಭವೇತ್ |

ಯಾತ್ರಾಕಾಲೇ ಪಠೇದ್ಯಸ್ತು ನಿರ್ವಿಘ್ನೇನ ಫಲಂ ಲಭೇತ್  ||೨೦||


ಭಾವಾರ್ಥ:-ಮೂರು ಸಂಧ್ಯಾಕಾಲಗಳಲ್ಲಿ ಇದನ್ನು ಜಪಿಸುವವನು ವಜ್ರದೇಹಿಯಾಗುವನು.ಪ್ರಯಾಣಕಾಲದಲ್ಲಿ ಪಠಿಸುವವನು ಅಡೆತಡೆಗಳಿಲ್ಲದ ಫಲವನ್ನು ಹೊಂದುವವನಾಗುವನು.


ಯುದ್ಧಕಾಲೇ ಪಠೇದ್ಯಸ್ತು ವಿಜಯಂ ಚಾಪ್ನುಯಾತ್ ಧ್ರುವಮ್ |

ಮಾರಣೋಚ್ಚಾಟನಾಕರ್ಷ ಸ್ತಂಭಮೋಹನ ಕರ್ಮಣಿ ||೨೧||


ಭಾವಾರ್ಥ:-ಯುದ್ಧದ ಸಮಯದಲ್ಲಿ ಇದನ್ನು ಪಠಿಸುವವರು ವಿಜಯಶಾಲಿಗಳಾಗುವುದರಲ್ಲಿ ಸಂಶಯವಿಲ್ಲ.ಮಾರಣ,ಉಚ್ಚಾಟನ,ಆಕರ್ಷಣ,ಸ್ತಂಬನ,ಮೋಹನ ಇತ್ಯಾದಿ ಮಾಂತ್ರಿಕ ಕರ್ಮಗಳಿಗೆ.....>


ಸಪ್ತವಾರಂ ಜಪೇತದ್ದಿನಾನಾಮೇಕ ವಿಂಶತಿಮ್ |

ತತ್ತತ್ಫಲಮವಾಪ್ನೋತಿ ಸಾಧಕೋನಾತ್ರ ಸಂಶಯ:  ||೨೨||


ಭಾವಾರ್ಥ:-....ಪ್ರತಿದಿನವೂ ಏಳು ಸಲದಂತೆ ಇಪ್ಪತ್ತೊಂದು ದಿನ ಜಪಿಸುವ ಸಾಧಕನು ಸಂಶಯಾತೀತವಾಗಿ ಆಯಾಯ ಫಲಗಳನ್ನು ಪಡೆಯುವನು.


ಏಕವಿಂಶತಿವಾರಂ ಚ ಪಠೇತ್ತಾವದ್ದಿನಾನಿ ಯ: |

ಕಾರಾಗೃಹಗತಂ ಸದ್ಯೋ ರಾಜ್ಞಾ ವಧ್ಯಂ ಚ ಮೋಚಯೇತ್ ||೨೩||


ಭಾವಾರ್ಥ:-ಸೆರೆಮನೆಯಲ್ಲಿರುವ ವಧಾರ್ಹನು ಇಪ್ಪತ್ತೊಂದು ಸಲ ಇದನ್ನು ಪಠಿಸಿದಲ್ಲಿ ತತ್ಕ್ಷಣವೇ ಶಿಕ್ಷೆಯಿಂದ ಮುಕ್ತನಾಗುವನು.


ರಾಜದರ್ಶನವೇಲಾಯಾಂ ಪಠೇದೇತತ್ರಿವಾರತ: |

ಸ ರಾಜಾನಾಂ ವಶಂ ನೀತ್ವಾ ಪ್ರಕೃತೀಶ್ಚ ಸಭಾಂ ಜಯೇತ್  ||೨೪||


ಭಾವಾರ್ಥ:- ರಾಜದರ್ಶನಕ್ಕೆ ತೆರಳುವಾಗ ಇದನ್ನು ಮೂರು ಬಾರಿ ಪಠಿಸಿದ್ದೇ ಆದಲ್ಲಿ ರಾಜನನ್ನು ವಶಪಡಿಸಿಕೊಳ್ಳಬಹುದು.ಇದರ ಪಠನ ಮಾತ್ರದಿಂದ ಪ್ರಕೃತಿಯನ್ನೂ ಸಭೆಯನ್ನೂ ಗೆಲ್ಲಬಹುದು.


ಇದಂ ಗಣೇಶ ಕವಚಂ ಕಶ್ಯಪೇನ ಸಮೀರಿತಮ್ |

ಮುದ್ಗಲಾಯ ಚ ತೇ ನಾಥ ಮಾಂಡವ್ಯಾಯ ಮಹರ್ಷಯೇ ||೨೫||


ಭಾವಾರ್ಥ:-ಈ ಗಣೇಶ ಕವಚವನ್ನು ಕಶ್ಯಪ ಮಹರ್ಷಿಯು ಮುದ್ಗಲನಿಗೂ ಆತನು ಮಾಂಡವ್ಯ ಮುನಿಗೂ ಹೇಳಿದ್ದಾಗಿದೆ.


ಮಹ್ಯಂ ಸಪ್ರಾಹ ಕೃಪಯಾ ಕವಚಂ ಸರ್ವಸಿದ್ಧಿದಮ್ |

ನದೇಯಂ ಭಕ್ತಿಹೀನಾಯ ದೇಯಂ ಶ್ರದ್ಧಾವತೇ ಶುಭಮ್  ||೨೬||


ಭಾವಾರ್ಥ:-ಸರ್ವಸಿದ್ಧಿಪ್ರದವೂ ಶುಭಪ್ರದವೂ ಆಗಿರುವ ಈ ಕವಚವನ್ನು ಭಕ್ತಿಹೀನನಿಗೆ ನೀಡಲಾಗದು. ಶ್ರದ್ಧಾವಂತನಿಗೆ ನೀಡಬೇಕು.


ಅನೇನಾಸ್ಯ ಕೃತಾ ರಕ್ಷಾ ನ ಬಾಧಾsಸ್ಯ ಭವೇತ್ ಕ್ವಚಿತ್ |

ರಾಕ್ಷಸಾಸುರ ವೇತಾಲ ದೈತ್ಯದಾನವ ಸಂಭವಾ ||೨೭||


ಭಾವಾರ್ಥ:-ಈ ಕವಚವನ್ನು ರಕ್ಷೆಯಾಗಿಸಿಕೊಂಡವರಿಗೆ ಅಸುರ,ರಾಕ್ಷಸ,ದೈತ್ಯ ದಾನವ,ಬೇತಾಳಾದಿ ದುಷ್ಟ ಶಕ್ತಿಗಳಿಂದ ಉಂಟಾಗುವ ಬಾಧೆಗಳಿಂದ ರಕ್ಷಣೆ ದೊರಕುವುದು.

 || ಇತಿ ಶ್ರೀ ಗಣೇಶ ಕವಚ ಸ್ತೋತ್ರಮ್ || 

***

ವಿಘ್ನರಾಜ ಸಂಕಷ್ಟ ಚತುರ್ಥಿಯ ದಿನದಂದು ಮನೆಯಲ್ಲಿ ಪೂಜೆ ಮಾಡುವುದರಿಂದ ಋಣಾತ್ಮಕ ಪರಿಣಾಮಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ. ಅಷ್ಟೇ ಅಲ್ಲ, ಪೂಜೆಯಿಂದ ಮನೆಯಲ್ಲಿ ಶಾಂತಿಯೂ ಉಳಿಯುತ್ತದೆ. 


ಗಣೇಶನು ಮನೆಯ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತಾನೆ ಮತ್ತು ವ್ಯಕ್ತಿಯ ಎಲ್ಲಾ ಆಸೆಗಳನ್ನು ಪೂರೈಸುತ್ತಾನೆ. ಈ ಚಂದ್ರನ ದರ್ಶನವನ್ನೂ ಮಂಗಳಕರವೆಂದು ಪರಿಗಣಿಸಲಾಗಿದೆ. 


ಸೂರ್ಯೋದಯದಿಂದ ಆರಂಭವಾಗುವ ಸಂಕಷ್ಟಿಯ ಉಪವಾಸವು ಚಂದ್ರನನ್ನು ನೋಡಿದ ನಂತರವೇ ಕೊನೆಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. 13 ಸಂಕಷ್ಟ ಉಪವಾಸಗಳನ್ನು ವರ್ಷಪೂರ್ತಿ ಆಚರಿಸಲಾಗುತ್ತದೆ. 


|| ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ ||


ಪ್ರಥಮಂ ವಕ್ರತುಂಡಂಚ ಏಕದಂತಮಂ ದ್ವಿತೀಯಕಂ

ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಂ ಚತುರ್ಥಕಂ

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ

ಸಪ್ತಮಂ ವಿಘ್ನ ರಾಜಂ ಚ ಧೂಮ್ರವರ್ಣಂ ತಥಾಷ್ಟಕಂ

ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಂ

ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಂ |

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ

ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರೀಂ ಪ್ರಭೋ ||


ಭಾವಾರ್ಥ :  ಗೌರೀಪುತ್ರನಾದ ವಿನಾಯಕನಿಗೆ ನಾನು ಶಿರಬಾಗಿ ನಮಿಸುತ್ತೇನೆ. ಹೇ ದೇವ! ಪ್ರತಿನಿತ್ಯ ನಿನ್ನ ಸ್ಮರಣೆ ಮಾಡುವುದರಿಂದ ಆಯುಷ್ಯ ವೃದ್ಧಿಯೊಡನೆ ಸಕಲ ಇಷ್ಟಾರ್ಥಗಳೂ ನೆರವೇರುತ್ತವೆ.

ವಕ್ರತುಂಡ, ಏಕದಂತ, ಕೃಷ್ಣ ಪಿಂಗಾಕ್ಷ, ಗಜವಕ್ತ್ರ, ಲಂಬೋದರ, ವಿಕಟ, ವಿಘ್ನರಾಜ, ಧೂಮ್ರವರ್ಣ, ಫಾಲಚಂದ್ರ, ವಿನಾಯಕ, ಗಣಪತಿ, ಗಜಾನನ ಎಂಬ ಸಕಲ ಸನ್ಮಂಗಳ ಉಂಟುಮಾಡುವ 12 ಹೆಸರುಗಳನ್ನು ನಾನು ತ್ರಿಕರಣಪೂರ್ವಕವಾಗಿ  ತ್ರಿಸಂಧ್ಯಾ ಕಾಲದಲ್ಲೂ ಸ್ಮರಿಸುತ್ತೇನೆ. ಇದರಿಂದ ವಿಘ್ನ ಭಯ ನಿವಾರಣೆಯಾಗಿ, ಸರ್ವಸಿದ್ಧಿ ಲಭಿಸುವುದು

***



No comments:

Post a Comment