Friday, 20 December 2019

ಶ್ರೀಶ ಗುಣ ದರ್ಪಣ ಮಹಾಲಕ್ಷ್ಮಿ ದೇವಿ ಸ್ತುತಿ ಶ್ರೀ ವಾದಿರಾಜ ವಿರಚಿತಮ್ shreesha guna darpana by vadirajaru

ಶ್ರೀ ಶ್ರೀಶಗುಣದರ್ಪಣ (ಶ್ರೀ ಮಹಾಲಕ್ಷ್ಮಿ ದೇವಿ ಸ್ತುತಿ )

ಯಾ ಸುಗಂಧಸ್ಯನಾಸಾದಿ-ನವದ್ವಾರಾಽಖಿಲೇನ ಯಾ |
ದುರಾಧರ್ಷಾ ಸರ್ವಸಸ್ಯೋದಯಾರ್ಥಂ ಯಾ ಕರೀಷಿಣೀ || ೧ ||

ಯಾ ನಿತ್ಯಪುಷ್ಟಾ ಸರ್ವಾಂಗೈಃ
ಸೌಂದರ್ಯಾದಿಗುಣೈರಪಿ |
ಈಶ್ವರೀಂ ಸರ್ವಭೂತಾನಾಂ
ತಾಮಿಹೋಪಹ್ವಯೇ ಶ್ರಿಯಮ್ || ೨ ||

ಮಾತರ್ಲಕ್ಷ್ಮಿ ನಮಸ್ತುಭ್ಯಂ ಮಾಧವಪ್ರಿಯಮಾನಿನಿ |
ಯುವಾಂ ವಿಶ್ವಸ್ಯ ಪಿತರಾವಿತರೇತರಯೋಗಿನೌ || ೩ ||

ಸಮನಾ ಕಿಲ ಮಾತಸ್ತ್ವಮಮುನಾ ತತಯೋಗಿನೀ |
ಮಮ ನಾಥೇನ ದೇವಶ್ಚ ವಿಮನಾಶ್ಚ ನ ಸ ತ್ವಯಿ || ೪ ||

ತ್ವಂ ವೇದಮಾನಿನೀ ವೇದವೇದ್ಯಃ ಕಿಲ ಸ ತೇ ಪ್ರಿಯಃ |
ತ್ವಂ ಮೂಲಪ್ರಕೃತಿರ್ದೇವೀ ಸ ಚಾದಿಪುರುಷಃ ಕಿಲ || ೫ ||

ಯಸ್ತ್ವಾಮುರಸಿ ಧತ್ತೇಽಂಬ ಕೌಸ್ತುಭದ್ಯುತಿಭಾಸಿತೇ |
ಸತ್ವಾಂ ನೈವಾಚ್ಯುತಃ ಸರ್ವಸ್ಯಾತ್ಯಯೇ ಸತ್ಯಪಿ ತ್ಯಜೇತ್ || ೬ ||

ದೇವಿ ತ್ವಂ ಲಲನಾರತ್ನಂ ದೇವೋಽಸೌ ಪುರುಷೋತ್ತಮಃ |
ಯುವಾಂ ಯುವಾನೌ ಸತತಂ ಯುವಯೋರ್ನ ವಯೋಽಧಿಕಃ || ೭ ||

ತ್ವಂ ಪದ್ಮಿನೀಪದ್ಮವಕ್ತ್ರಾ ಪದ್ಮಾಕ್ಷೀ ಪದ್ಮವಿಷ್ಟರಾ |
ಪದ್ಮದ್ವಯಧರಾ ಪದ್ಮ ಕೋಶೋದ್ಯತ್‍ಸ್ತನಶೋಭನಾ || ೮ ||

ಪದ್ಮಹಸ್ತಾ ಪದ್ಮಪಾದಾ ಪದ್ಮನಾಭಮನಃಪ್ರಿಯಾ |
ಪದ್ಮೋದ್ಭವಸ್ಯ ಜನನೀ ಪದ್ಮಾ ಚ ವರವರ್ಣಿನೀ || ೯ ||

ಅಂಬಾಂ ಪೀತಾಂಬರಶ್ರೋಣೀಂ ಲಂಬಾಲಕಲಸನ್ಮುಖೀಂ |
ಬಿಂಬಾಧರೋಷ್ಠೀಂ ಕಸ್ತೂರಿ-ಜಂಬಾಲತಿಲಕಾಂ ಭಜೇ || ೧೦ ||

ರತ್ನೋದ್ದೀಪ್ತಸುಮಾಂಗಲ್ಯ-ಸೂತ್ರಾವೃತಶಿರೋಧರಾಮ್ |
ಕುಂಡಲಪ್ರಭಯೋದ್ದಂಡ-ಗಂಡಮಂಡಲಮಂಡಿತಾಮ್ || ೧೧ ||

ಕುಚಕಂಚುಕ ಸಂಚಾರಿ-ಹಾರನಿಷ್ಕಮನೋಹರಾಮ್ |
ಕಾಂಚೀ-ಕಿಂಕಿಣಿ-ಮಂಜೀರ-ಕಂಕಣಾದ್ಯೈರಲಂಕೃತಾಮ್ || ೧೨ ||

ಸುವರ್ಣಮಂಟಪೇ ರತ್ನಚಿತ್ರಸಿಂಹಾಸನೋತ್ತಮೇ |
ನಮಾಮಿ ಹರಿಣಾ ಸಾಕಮಿಂದಿರಾಂ ಕೃತಮಂದಿರಾಮ್ || ೧೩ ||

ಬ್ರಹ್ಮಾದ್ಯಾ ವಿಬುಧಶ್ರೇಷ್ಠಾಃ
ಬ್ರಹ್ಮಾಣ್ಯಾದ್ಯಾಃ ಸುರಾಂಗನಾಃ |
ಯಾಂ ಪೂಜಯಂತೇ ಸೇವಂತೇ
ಸಾ ಮಾಂ ಪಾತು ರಮಾ ಸದಾ || ೧೪ ||

ಸರ್ವಾಲಂಕಾರ ಭರಿತೌ ಸರ್ವಜ್ಞೌ ಸರ್ವಸದ್ಗುಣೌ |
ಶರ್ವಾದಿಸರ್ವಭಕ್ತೌಘ ಸರ್ವಸರ್ವಸ್ವದಾಯಕೌ || ೧೫ ||

ಸುಮುಖೌ ಸುಂದರತನೌ ಸುನಾಸೌ ಸುಖಚಿತ್ತನೂ |
ಸುರಾರಾಧಿತಪಾದಾಬ್ಜೌ ರಮಾನಾರಾಯಣೌ ಸ್ತುಮಃ || ೧೬ ||

ಚತುಷ್ಕಪರ್ದಾ ಯಾ ದೇವೀ ಚತುರಾಸ್ಯಾದಿಭಿಃ ಸ್ತುತಾ |
ಚತುರ್ವೇದೋದಿತಗುಣಾ ಚತುರ್ಮೂರ್ತೇರ್ಹರೇಃ ಪ್ರಿಯಾ || ೧೭ ||

ಘೃತಪ್ರತೀಕಾಂ ತಾಂ ನಿತ್ಯಂ ಘೃತಪೂರ್ಣಾನ್ನದಾಯಿನೀಮ್ |
ಯಥೇಷ್ಟವಿತ್ತದಾತ್ರೀಂ ಚ ನತೋಽಸ್ಮ್ಯಭಯದಾಂ ಶ್ರಿಯಮ್ || ೧೮ ||

ವಾದಿರಾಜೇನ ರಚಿತಂ ಶ್ರೀಶ್ರೀಶಗುಣದರ್ಪಣಮ್ |
ಇಮಂ ಸ್ತವಂ ಪಠನ್ ಮರ್ತ್ಯಃ ಶ್ರೀಮಾನ್ ಸ್ಯಾನ್ನಾತ್ರ ಸಂಶಯಃ || ೧೯ ||

|| ಇತಿ ಶ್ರೀವಾದಿರಾಯಯತಿಕೃತಂ ಶ್ರೀಶ್ರೀಶಗುಣದರ್ಪಣ ಸ್ತೋತ್ರಂ ಸಂಪೂರ್ಣಮ್ ||
*********


 ಇದನ್ನು ಈಗಲೂ ಸೋದೆಯ ತ್ರಿವಿಕ್ರಮ ದೇವರ ಗುಡಿಯಲ್ಲಿರುಮ ಮಹಾಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ ಮಾಡುವಾಗ ಪಠಿಸುವ ಪದ್ಧತಿಯಿದೆ. 



ಇದು ರಚನೆಯಾದುದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. 



 ಒಮ್ಮೆ ಕಡುಬಡವನೊಬ್ಬ ವಾದಿರಾಜರ ಬಳಿಗೆ ಬಂದು ದುಃಖ ದೈನ್ಯಗಳಿಂದ ತನ್ನ ದಾರಿದ್ರ್ಯ ರೋಗಕ್ಕೆ ಲಕ್ಷ್ಮೀಸ್ತುತಿಯೇ ಚಿಕಿತ್ಸೆ ಎಂದು ತಿಳಿದರು.  ತಾವೇ ಒಂದು ಸ್ತುತಿಯನ್ನು ರಚಿಸಿ, ಅವನಿಗೆ ಉಪದೇಶ ಮಾಡಿದರು. ’ಇದನ್ನು ಭಕ್ತಿಯಿಂದ ಪಾರಾಯಣ ಮಾಡು’ ಎಂದು ಅಪ್ಪಣೆ ಮಾಡಿದರು. ಶ್ರೀ ಶ್ರೀಶಗಣದರ್ಪಣವೆಂಬ ಈ ಲಕ್ಷ್ಮೀನರಾಯಣರ ಸ್ತೋತ್ರ ಸಂಪತ್ತನ್ನು ಕರುಣಿಸಿತು; ಭಕ್ತಿಯಿಂದ ಪಾರಾಯಣ ಮಾಡುತ್ತದದ ಅವನ ಸುತ್ತಲೂ ಬಂಗಾರದ ಮಳಯೇ ಸುರಿಯಿತು ಎಂದು ಹೇಳುತ್ತಾರೆ. ಇದರಿಂದ ವಾದಿರಾಜರ ಶಕ್ತಿ ಅಲ್ಲದೆ ಬಡವರಲ್ಲಿ ಅವರಿಗಿದ್ದ ಕರುಣೆಯೂ ತಿಳಿಯುತ್ತದೆ. 




 ಲಕ್ಷ್ಮೀಶೋಭಾನೆ ಎಂಬ ಅವರ ಕೃತಿ ಕನ್ನಡದಲ್ಲಿದೆ, ಇದು ಸತ್ತವರನ್ನೇ ಎತ್ತಿ ಬದುಕಿಸಿದ ಸಂಜೀವಿನಿ ಎಂದು ಪ್ರಸಿದ್ಧವಾಗಿದೆ. 



 ಅರಸಪ್ಪನಾಯಕನ ಅಳಿಯ ಸತ್ತುಹೋದ. ಆಗ ವಾದಿರಾಜರು ಲಕ್ಷ್ಮೀಶೋಭಾನೆಯನ್ನು ಹಾಡಿ ಲಕ್ಷ್ಮೀನಾರಾಯಣರನ್ನು ಪ್ರಾರ್ಥಿಸಿ, ಅವನನ್ನು ಬದುಕಿಸಿದರು ಎಂದು ಹೇಳುತ್ತಾರೆ. ಹೀಗೆ ಶ್ರೀ ವಾದಿರಾಜರ ಕೃತಿಗಳು ಒಂದೊಂದೂ ಮಹಮೆಯುಳ್ಳವಾಗಿವೆ. 


ಶ್ರೀ ವಾದಿರಾಜ ಗುರುಭೋ ನಮಃ
ಗುರುಗಳ ಸೇವೆಯಲ್ಲಿ..


ಎಸ್.ವಿಜಯ ವಿಠ್ಠಲ.


[2:21 PM, 7/31/2020] Prasad Karpara Group:

No comments:

Post a Comment