Monday 30 September 2019

ಹನುಮಾನ್ ಶ್ರೀ ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ ಸುದರ್ಶನ ಸಂಹಿತಾಯಾಂ sri panchamukhi hanuman kavacha stotram by brahma in sudarshana samhita



ಶ್ರೀ ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ 

ಓಂ ಅಸ್ಯ ಶ್ರೀ ಪಂಚಮುಖಿ ಹನುಮತ್ ಕವಚ ಸ್ತೋತ್ರ 
ಮಹಾ ಮಂತ್ರಸ್ಯ ಬ್ರಹ್ಮಾ ಋಷಿ: |ಗಾಯತ್ರೀ ಛಂದ: |
ಶ್ರೀ ಹನುಮಾನ್ ದೇವತಾ | ರಾಂ ಬೀಜಂ | 
ಮಂ ಶಕ್ತಿ: |ಚಂದ್ರ ಇತಿ ಕೀಲಕಂ |
ಓಂ ರೌಂ ಕವಚಾಯ ಹುಂ |
ಹ್ರೌಂ ಅಸ್ತ್ರಾಯ ಫಟ್ ||

#ಈಶ್ವರ ಉವಾಚ

ಅಥ ಧ್ಯಾನಂ ಪ್ರವಕ್ಷ್ಯಾಮಿ ಶೃಣು ಸರ್ವಾಂಗ ಸುಂದರಂ |
ಯತ್ಕೃತ್ವಾ ದೇವ ದೇವೇಶಿ ಧ್ಯಾನ: ಹನುಮತ: ಪ್ರಿಯಂ ||೧||

ಪಂಚವಕ್ತ್ರಂ ಮಹಾಬೀಮಂ ಕಪಿಯೂಥ ಸಮನ್ವಿತಂ |
ಬಾಹುಬಿರ್ದಶಭಿರ್ಯುಕ್ತಂ ಸರ್ವ ಕಾಮಾರ್ಥ ಸಿದ್ಧಿದಂ ||೨||

ಪೂರ್ವಂತು ವಾನರಂ ವಕ್ತ್ರಂ ಕೋಟಿಸೂರ್ಯ ಸಮಪ್ರಭಂ |
ದಂಷ್ಠ್ರಾಕರಾಲವದನಂ ಭ್ರುಕುಟೀ ಕುಟಿಲೇಕ್ಷಣಂ ||೩||

ಅಸ್ಯೈವ ದಕ್ಷಿಣಂ ವಕ್ತ್ರಂ ನಾರಸಿಂಹ ಮಹಾದ್ಭುತಂ |
ಅತ್ಯುಗ್ರ ತೇಜೋವಪುಷಂ ಭೀಷಣಂ ಭಯನಾಶನಂ ||೪||

ಪಶ್ಚಿಮೇ ಗಾರುಡಂ ವಕ್ತ್ರಂ ವಕ್ರತುಂಡಂ ಮಹಾಬಲಂ |
ಸರ್ವನಾಶಪ್ರಶಮನಂ ಸರ್ವಭೂತಾದಿ ಕೃಂತನಂ ||೫||

ಉತ್ತರೇ ಸೌಕರಂ ವಕ್ತ್ರಂ ಕೃಷ್ಣ ದೀಪನಭೋಮಯಂ |
ಪಾತಾಲೇ ಸಿದ್ದಿವೇತಾಲಂ ಜ್ವರರೋಗಾದಿ ಕೃಂತನಂ ||೬||

ಊರ್ಧ್ವಂ ಹಯಾನನಂ ಘೋರಂ ದಾನವಾಂತ ಕರಂ ಪರಂ |
ಏನ ವಕ್ತ್ರೇಣ ವಿಪ್ರೇಂದ್ರ ತಾಟಕಾಯ ಮಹಾಹವೇ ||೭||

ದುರ್ಗತೇಶ್ಶರಣಂ ತಸ್ಯ ಸರ್ವಶತ್ರುಹರಂ ಪರಂ |
ಧ್ಯಾತ್ವಾ ಪಂಚಮುಖಂ ರುದ್ರಂ ಹನುಮಂತಂ ದಯಾನಿಧಿಂ ||೮||

ಖಡ್ಗಂ ತ್ರಿಶೂಲಂ ಖಟ್ವಾಂಗಂ ಪಾಶಮಂಕುಶಪರ್ವತಂ |
ಮುಷ್ಟೌಚ ಮೋದಕೌ ವೃಕ್ಷಂ ಧಾರಯಂತಂ ಕಮಂಡಲುಂ ||೯||

ಭಿಂದಿ ಪಾಲಂ ಜ್ಞಾನಮುದ್ರಾಂ ದಶಮಂ ಪುನಿಪುಂಗವ |
ಏತಾನ್ಯಾಯುಧ ಜಾಲಾನಿ ಧಾರಯಂ ತಂ ಭಯಾವಹಂ ||೧೦||

ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಂ |
ಸರ್ವೈಶ್ವರ್ಯಮಯಂ ದೇವಂ ಹನುಮದ್ವಿಶ್ವತೋ ಮುಖಂ ||೧೧||

ಪಂಚಾಸ್ಯಮಚ್ಯುತಮನೇತ ವಿಚಿತ್ರವರ್ಣಂ |
ವಕ್ತ್ರಂ ಸಶಂಖ ವಿಭೃತಂ ಕವಿರಾಜ ವೀರ್ಯಂ ||
ಪೀತಾಂಬರಾದಿ ಮುಕುಟೈರಪಿ ಶೋಭಿತಾಂಗಂ |
ಪಿಂಗಾಕ್ಷಮಂಜನಾಸುತಂ ಹ್ಯನಿಶಂ ಸ್ಮರಾಮಿ ||೧೨||

ಮರ್ಕಟಸ್ಯ ಮಹೋತ್ಸಾಹಂ ಸರ್ವ ಶೋಕವಿನಾಶನಂ |
ಶತೃ ಸಂಹಾರಕಂ ಚೈತಕ್ ಕವಚಂ ಹ್ಯಾಪದಂ ಚರೇತ್ ||೧೩||

||ಓಂ ಹರಿ ಮರ್ಕಟ ಮರ್ಕಟಾಯ ಫಟ್ ಸ್ವಾಹಾ||

ಓಂ ನಮೋ ಭಗವತೇ ಪಂಚವದನಾಯ
ಪೂರ್ವ ಕಪಿಮುಖಾಯ ಸಕಲ ಶತೃ ಸಂಹರಣಾಯ ಫಟ್ ಸ್ವಾಹಾ ||೧೪||

ಓಂ ನಮೋ ಭಗವತೇ ಪಂಚವದನಾಯ
ಉತ್ತರ ಮುಖಾಯ ಆದಿವರಾಹಾಯ
ಸಕಲ ಸಂಪತ್ಕರಾಯ ಫಟ್ ಸ್ವಾಹಾ ||೧೫||

ಓಂ ನಮೋ ಭಗವತೇ ಪಂಚವದನಾಯ
ಊರ್ಧ್ವಮುಖಾಯ ಹಯಗ್ರೀವಾಯ ಕಲಿಜನ ವಶ್ಯಕರಾಯ ಫಟ್ ಸ್ವಾಹಾ ||೧೬||

|| ಇತಿ ಶ್ರೀ ಸುದರ್ಶನ ಸಂಹಿತಾಯಾಂ ಚಿಂತಾಮಣಿ ರಾಮಭದ್ರ  ಅಧ್ಯಾಯೇ  ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ.
***
ಶ್ರೀ ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ ||
+++++++++++++++++++++++++++++++

ಓಂ ಅಸ್ಯ ಶ್ರೀ ಪಂಚಮುಖಿ ಹನುಮತ್ ಕವಚ ಸ್ತೋತ್ರ ಮಹಾ ಮಂತ್ರಸ್ಯ ಬ್ರಹ್ಮಾ ಋಷಿ: |
ಗಾಯತ್ರೀ ಛಂದ: |
ಶ್ರೀ ಹನುಮಾನ್ ದೇವತಾ | ರಾಂ ಬೀಜಂ | ಮಂ ಶಕ್ತಿ: |ಚಂದ್ರ ಇತಿ ಕೀಲಕಂ |
ಓಂ ರೌಂ ಕವಚಾಯ ಹುಂ |ಹ್ರೌಂ ಅಸ್ತ್ರಾಯ ಫಟ್ ||

ಭಾವಾರ್ಥ:- ಪಂಚಮುಖಿ ಹನುಮಾನ್ ಕವಚ ಸ್ತೋತ್ರ ಮಹಾ ಮಂತ್ರದ ಋಷಿ  ಬ್ರಹ್ಮ . ಇದು ಗಾಯತ್ರೀ ಛಂದಸ್ಸಿನಲ್ಲಿ ಇದ್ದು  ಹನುಮಂತನು ಇದರ ಉಪಾಸ್ಯ ದೇವತೆ.  "ರಾಂ" ಇದರ ಬೀಜಾಕ್ಷರ.  "ಮಂ"  ಇದರ ಶಕ್ತಿ;  "ಚಂದ್ರ" ಎಂಬುದು ಇದರ ಕೀಲಕ. "ರೌಂ" ಇದರ ಕವಚ.  "ಹ್ರೌಂ" ಈ ಸ್ತೋತ್ರಕ್ಕೆ ಬಾಣದ ಹಾಗೆ ಬಲ ಕೊಡುತ್ತದೆ.  " ಫಟ್ "
ಇದಕ್ಕೆ ರಕ್ಷಾತ್ಮಕವಾಗಿದೆ.

ಈಶ್ವರ ಉವಾಚ
ಭಾವಾರ್ಥ :- ಈಶ್ವರನು ಪಾರ್ವತೀ ದೇವಿಗೆ ಹೇಳುವನು

ಅಥ ಧ್ಯಾನಂ ಪ್ರವಕ್ಷ್ಯಾಮಿ ಶೃಣು ಸರ್ವಾಂಗ ಸುಂದರಂ |
ಯತ್ಕೃತ್ವಾ ದೇವ ದೇವೇಶಿ ಧ್ಯಾನ: ಹನುಮತ: ಪ್ರಿಯಂ ||೧||

ಪಂಚವಕ್ತ್ರಂ ಮಹಾಬೀಮಂ ಕಪಿಯೂಥ ಸಮನ್ವಿತಂ |
ಬಾಹುಬಿರ್ದಶಭಿರ್ಯುಕ್ತಂ ಸರ್ವ ಕಾಮಾರ್ಥ ಸಿದ್ಧಿದಂ ||೨||

ಪೂರ್ವಂತು ವಾನರಂ ವಕ್ತ್ರಂ ಕೋಟಿಸೂರ್ಯ ಸಮಪ್ರಭಂ |
ದಂಷ್ಠ್ರಾಕರಾಲವದನಂ ಭ್ರುಕುಟೀ ಕುಟಿಲೇಕ್ಷಣಂ ||೩||

ಅಸ್ಯೈವ ದಕ್ಷಿಣಂ ವಕ್ತ್ರಂ ನಾರಸಿಂಹ ಮಹಾದ್ಭುತಂ |
ಅತ್ಯುಗ್ರ ತೇಜೋವಪುಷಂ ಭೀಷಣಂ ಭಯನಾಶನಂ ||೪||

ಪಶ್ಚಿಮೇ ಗಾರುಡಂ ವಕ್ತ್ರಂ ವಕ್ರತುಂಡಂ ಮಹಾಬಲಂ |
ಸರ್ವನಾಶಪ್ರಶಮನಂ ಸರ್ವಭೂತಾದಿ ಕೃಂತನಂ ||೫||

ಉತ್ತರೇ ಸೌಕರಂ ವಕ್ತ್ರಂ ಕೃಷ್ಣ ದೀಪನಭೋಮಯಂ |
ಪಾತಾಲೇ ಸಿದ್ದಿವೇತಾಲಂ ಜ್ವರರೋಗಾದಿ ಕೃಂತನಂ ||೬||

ಊರ್ಧ್ವಂ ಹಯಾನನಂ ಘೋರಂ ದಾನವಾಂತ ಕರಂ ಪರಂ |
ಏನ ವಕ್ತ್ರೇಣ ವಿಪ್ರೇಂದ್ರ ತಾಟಕಾಯ ಮಹಾಹವೇ ||೭||

ದುರ್ಗತೇಶ್ಶರಣಂ ತಸ್ಯ ಸರ್ವಶತ್ರುಹರಂ ಪರಂ |
ಧ್ಯಾತ್ವಾ ಪಂಚಮುಖಂ ರುದ್ರಂ ಹನುಮಂತಂ ದಯಾನಿಧಿಂ ||೮||

ಖಡ್ಗಂ ತ್ರಿಶೂಲಂ ಖಟ್ವಾಂಗಂ ಪಾಶಮಂಕುಶಪರ್ವತಂ |
ಮುಷ್ಟೌಚ ಮೋದಕೌ ವೃಕ್ಷಂ ಧಾರಯಂತಂ ಕಮಂಡಲುಂ ||೯||

ಭಿಂದಿ ಪಾಲಂ ಜ್ಞಾನಮುದ್ರಾಂ ದಶಮಂ ಪುನಿಪುಂಗವ |
ಏತಾನ್ಯಾಯುಧ ಜಾಲಾನಿ ಧಾರಯಂ ತಂ ಭಯಾವಹಂ ||೧೦||

ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಂ |
ಸರ್ವೈಶ್ವರ್ಯಮಯಂ ದೇವಂ ಹನುಮದ್ವಿಶ್ವತೋ ಮುಖಂ ||೧೧||

ಪಂಚಾಸ್ಯಮಚ್ಯುತಮನೇತ ವಿಚಿತ್ರವರ್ಣಂ |
ವಕ್ತ್ರಂ ಸಶಂಖ ವಿಭೃತಂ ಕವಿರಾಜ ವೀರ್ಯಂ ||
ಪೀತಾಂಬರಾದಿ ಮುಕುಟೈರಪಿ ಶೋಭಿತಾಂಗಂ |
ಪಿಂಗಾಕ್ಷಮಂಜನಾಸುತಂ ಹ್ಯನಿಶಂ ಸ್ಮರಾಮಿ ||೧೨||

ಮರ್ಕಟಸ್ಯ ಮಹೋತ್ಸಾಹಂ ಸರ್ವ ಶೋಕವಿನಾಶನಂ |
ಶತೃ ಸಂಹಾರಕಂ ಚೈತಕ್ ಕವಚಂ ಹ್ಯಾಪದಂ ಚರೇತ್ ||೧೩||

||ಓಂ ಹರಿ ಮರ್ಕಟ ಮರ್ಕಟಾಯ ಫಟ್ ಸ್ವಾಹಾ||

ಓಂ ನಮೋ ಭಗವತೇ ಪಂಚವದನಾಯ
ಪೂರ್ವ ಕಪಿಮುಖಾಯ ಸಕಲ ಶತೃ ಸಂಹರಣಾಯ ಫಟ್ ಸ್ವಾಹಾ ||೧೪||

ಓಂ ನಮೋ ಭಗವತೇ ಪಂಚವದನಾಯ
ಉತ್ತರ ಮುಖಾಯ ಆದಿವರಾಹಾಯ
ಸಕಲ ಸಂಪತ್ಕರಾಯ ಫಟ್ ಸ್ವಾಹಾ ||೧೫||

ಓಂ ನಮೋ ಭಗವತೇ ಪಂಚವದನಾಯ
ಊರ್ಧ್ವಮುಖಾಯ ಹಯಗ್ರೀವಾಯ ಕಲಿಜನ ವಶ್ಯಕರಾಯ ಫಟ್ ಸ್ವಾಹಾ ||೧೬||
************************

|| ಇತಿ ಶ್ರೀ ಸುದರ್ಶನ ಸಂಹಿತಾಯಾಂ ಚಿಂತಾಮಣಿ ರಾಮಭದ್ರ  ಅಧ್ಯಾಯೇ  ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ ||
***************************

ಶ್ಲೋಕಗಳ ಭಾವಾರ್ಥ:- 

ಪಂಚಮುಖಿ ಹನುಮಂತಂಗೆ ೫ ಮುಖಗಳು  ೧೦ ತೋಳುಗಳೂ ಇದ್ದು ಭಕ್ತಾದಿಗಳಿಗೆ ಅನುಗ್ರಹ ನೀಡುವ ರೂಪದಲ್ಲಿ ಇದ್ದು. ಪೂರ್ವ ದಿಕ್ಕಿನಲ್ಲಿ ಮಂಗನ ಮುಖವೂ ; ದಕ್ಷಿಣ ದಿಕ್ಕಿನಲ್ಲಿ ನರಸಿಂಹ ದೇವರ ಮುಖವೂ ;  ತೇಜೋಮಯವಾಗಿ ಇದ್ದು. ಪಶ್ಚಿಮ ದಿಕ್ಕಿನಲ್ಲಿ ಗರುಡನ ಮುಖವೂ ; ಉತ್ತರ ದಿಕ್ಕಿನಲ್ಲಿ ಹಂದಿಯ ಮುಖವೂ ಇದ್ದು ನಾಗ ಭೇತಾಳಾದಿ ದುಷ್ಟ ಶಕ್ತಿಗಳನ್ನು ನಾಶ ಪಡಿಸುತ್ತಿದೆ. ಊರ್ಧ್ವ ಮುಖವು [ಮೇಲ್ಮೊಗ] ಕುದುರೆಯ ಮುಖವನ್ನು ಹೋಲುತ್ತಿದ್ದು ದೈತ್ಯ ಶಕ್ತಿಯನ್ನು ನಾಶ ಮಾಡುವ ಶಕ್ತಿ ಹೊಂದಿರುತ್ತದೆ.  ಈ ರೀತಿಯಾಗಿರುವಂತಹಾ ದಯಾನಿಧಿಯೂ  ದು:ಖ ನಿವಾರಕನೂ ಆಗಿರುವ ಪಂಚ ಮುಖಿ ಹನುಮನನ್ನು ಸ್ಮರಣೆ ಮಾಡಬೇಕು

   ಹನುಮಂತನ ಕೈಗಳಲ್ಲಿ  ಕತ್ತಿ , ತ್ರಿಶೂಲ , ಪಾಶ , ಮಂಚದ ಕಾಲುಗಳನ್ನು ಹೋಲುವ ಆಯುಧ ,ಅಂಕುಶ , ಬಂಡೆ, ಮೋದಕಂಗಳು ,ಮರ ,ಕಮಂಡಲು ,ಭಿಂದಿ ,ಹಾಗೂ ಜ್ಞಾನಮುದ್ರೆಯೂ ಇದ್ದು. ಈರೀತಿಯಾಗಿರುವ ಹನುಮಂತ  ದಿವ್ಯ ಮಂದಾರ ಹೂವಿನ ಮಾಲೆಯನ್ನು ಧರಿಸಿ ಸರ್ವ ಐಶ್ವರ್ಯವನ್ನು ದಯಪಾಲಿಸುವವನಾಗಿರುವನು. ಅಂತಹಾ ಪಂಚವದನ ;ಪಂಚ ವರ್ಣ, ಪೀತಾಂಬರ, ಕಿರೀಟಾದಿಗಳಿಂದ ಶೃಂಗಾರವಾಗಿರುವ ಆಂಜನೇಯ ಸ್ವಾಮಿಯನ್ನು ನಾನು ಧ್ಯಾನಿಸುತ್ತೇನೆ.  

ಕಪಿ ಸೈನ್ಯಕ್ಕೆ ಉತ್ಸಾಹವದಾಯಕನೂ ; ಎಲ್ಲಾ ಸಂಕಷ್ಟಗಳ ವಿನಾಶಕನೂ , ಶತೃ ಸಂಹಾರಕಾರಕನೂ ಆಗಿರುವ ಹನಮಂತನ ಕವಚ ಆಪತ್ ನಾಶಕವಾಗಿ ಚೈತನ್ಯವನ್ನು ಕೊಡುತ್ತದೆ.  ಕಪಿರೂಪದ ಹನುಮಂತನ ನಾಮಸ್ಮರಣೆಯು ಜಪಯಜ್ಞದ ಸ್ವಾಹಾಕಾರವಾಗಿದ್ದು  ಐದು ಮುಖಗಳನ್ನು ಹೊಂದಿ ಪೂರ್ವ ದಿಕ್ಕಿನ ಕಪಿ ಮೊಗವು ಶತೃ ಸಂಹಾರಕವಾಗಿದ್ದು.   ಉತ್ತರದಿಕ್ಕಿನ ಹಂದಿಯ ಮೊಗದ ಹನುಮಂತನ ನಾಮ ಸ್ಮರಣೆ ಸರ್ವ ಸಂಪತ್ಪ್ರದಾಯಕವಾಗಿದ್ದು. ಐದು ಮೊಗಗಳನ್ನು ಹೊಂದಿ ಮೇಲ್ಮೊಗನಾಗಿರುವ ಸಕಲ ಜನ ವಶೀಕರಣ ಶಕ್ತಿಯ ಅನುಗ್ರಹಿಸುವ ಹನುಮಂತನಿಗೆ ಸ್ವಾಹಾಕಾರ ಸಹಿತವಾಗಿ ನಮಸ್ಕಾರಗಳು.
***

ಹನುಮ ಪಂಚಮುಖಿ ರೂಪವನ್ನು ಧರಿಸಿದ ಕಥಾಸಾರಾಂಶ.... 

ದ್ವೈತ ಪಂಥವನ್ನು ಪರಿಪಾಲಿಸಿದ ಶ್ರೀ ಗುರು ರಾಘವೇಂದ್ರರಿಗೆ ಒಂದೊಮ್ಮೆ ತಪಸ್ಸನ್ನಾಚರಿಸುತ್ತಿರುವಾಗ ಹನುಮನು ಐದು ಮುಖಗಳ ಅವತಾರವನ್ನು ತಾಳಿ ದರ್ಶನ ಕೊಟ್ಟ, 

ತದನಂತರ ಗುರು ರಾಯರು ಆ ಪಂಚಮುಖಿ ಆಂಜನೇಯನ ವಿಗ್ರಹವನ್ನು ಅವರು ಧ್ಯಾನಿಸುತ್ತಿದ್ದ ಬೆಟ್ಟದ ಗುಹೆಯ ಬಂಡೆಯೊಂದರ ಮೇಲೆ ಚಿತ್ರಿಸಿದರು, ಅದೇ ಕ್ಷೇತ್ರ ಇಂದು ಪಂಚಮುಖಿ ಆಂಜನೇಯ ಕ್ಷೇತ್ರವಾಗಿ ಪ್ರಖ್ಯಾತವಾಗಿದೆ, ಈ ಕ್ಷೇತ್ರವಿರುವುದು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ.... 

ಅಸುರ ರಾಕ್ಷಸ ರಾವಣನು, ರಾಮನನ್ನು ಸೋಲಿಸಬೇಕೆಂದು ತನ್ನ ತಮ್ಮ ಹಾಗು ಪಾತಾಳದ ರಾಜನಾಗಿದ್ದ ಅಹಿರಾವಣನ ಸಹಾಯವನ್ನು ಬೇಡುತ್ತಾನೆ, ಅದಕ್ಕೊಪಿದ ಅಹಿರಾವಣನು ರಾವಣನ ಮೊತ್ತೊಬ್ಬ ತಮ್ಮ ಹಾಗು ಸಾತ್ವಿಕ ಸ್ವಭಾವವುಳ್ಳ ವಿಭೀಷಣನ ರೂಪ ತಳೆದು ರಾಮ ಲಕ್ಷ್ಮಣರು ವಿಶ್ರಮಿಸುತ್ತಿದ್ದ ಸ್ಥಳಕ್ಕೆ ಬರುತ್ತಾನೆ, ಆದರೆ ಅಲ್ಲಿ ಆಂಜನೇಯನಿರುವುದನ್ನು ಗಮನಿಸಿದ ಅಹಿರಾವಣನು ಅವನ ಹತ್ತಿರ ಹೋಗಿ ತಾನು ವಿಭೀಷಣನು ಹಾಗು ರಾವಣನಿಂದ ರಾಮ ಲಕ್ಷ್ಮಣರನ್ನು ರಕ್ಷಿಸುವುದಕ್ಕಾಗಿ ಬಂದಿರುವೆನೆಂದು ಒಪ್ಪಿಸುತ್ತಾನೆ.. 

 ‌        ‌       ‌       ‌      ‌      ‌    ‌     ‌                                              ಪಂಚಮುಖಿ ಹನುಮನ ಬಗ್ಗೆ ನಿಮಗೆಷ್ಟು ಗೊತ್ತು..? ವಾಸ್ತು ದೋಷವೇ ಇರದು..!

ಪಂಚಮುಖಿ ಹನುಮನೆಂದರೆ ಹನುಮಂತನ 5 ವಿವಿಧ ರೂಪಗಳು. ಪಂಚಮುಖಿ ಹನುಮನ ಪ್ರಾಮುಖ್ಯತೆಯೇನು ಗೊತ್ತಾ..? ಪಂಚಮುಖಿ ಹನುಮಂತನನ್ನು ಪೂಜಿಸುವುದರ ಪ್ರಯೋಜನವೇನು ತಿಳಿದಿದೆಯೇ..? ಪಂಚಮುಖಿ ಹನುಮನನ್ನು ಪೂಜಿಸುವುದು ಹೇಗೆ ತಪ್ಪದೇ ತಿಳಿದುಕೊಳ್ಳಿ..!
    
ರಾಮನ ಭಕ್ತ ಹನುಮನನ್ನು ಕಲಿಯುಗದ ದೇವರು ಎಂದು ಪರಿಗಣಿಸಲಾಗುತ್ತದೆ. ಪಂಚಮುಖಿ ಹನುಮಂತನು ತನ್ನ ಭಕ್ತರ ಎಲ್ಲಾ ನೋವುಗಳನ್ನು ನಾಶಪಡಿಸುತ್ತಾನೆ ಮತ್ತು ಅವರಿಗೆ ಶಕ್ತಿ, ಬುದ್ಧಿವಂತಿಕೆ ಮತ್ತು ಕಲಿಕೆಯ ಜ್ಞಾನವನ್ನು ಒದಗಿಸುತ್ತಾನೆ ಎಂದು ಹೇಳಲಾಗುತ್ತದೆ. ಭಗವಾನ್ ಹನುಮಂತನನ್ನು ಪಂಚಮುಖಿ ಆಂಜನೇಯನೆಂದು ಕರೆಯಲು ಕಾರಣವೇನು..? ಭಗವಾನ್‌ ಹನುಮನು ಪಂಚಮುಖಿ ರೂಪವನ್ನು ತೆಗೆದುಕೊಳ್ಳಲು ಕಾರಣವೇನು..? ಇಲ್ಲಿದೆ ಹನುಮನು ಪಂಚಮುಖಿ ಹನುಮನೆನಿಸಿಕೊಳ್ಳಲು ಕಾರಣ. 

ಈ ಕಾರಣದಿಂದಾಗಿ, ಭಗವಾನ್‌ ಹನುಮಂತನು ಪಂಚಮುಖಿ ರೂಪವನ್ನು ಧರಿಸಿದನು:

ಒಂದು ದಂತಕಥೆಯ ಪ್ರಕಾರ, ಪ್ರಭು ಶ್ರೀರಾಮ ಮತ್ತು ರಾವಣನ ನಡುವೆ ಯುದ್ಧ ನಡೆಯುತ್ತಿರುವಾಗ, ಸೋಲಿನಿಂದ ತನ್ನನ್ನು ತಪ್ಪಿಸಿಕೊಳ್ಳಲು ರಾವಣನು ತನ್ನ ಸಹೋದರ ಅಹಿರಾವಣನ ಸಹಾಯವನ್ನು ಕೋರಿದನು. ರಾವಣನ ಸಹೋದರ ಅಹಿರಾವಣ ತನ್ನ ತಂತ್ರದ ಮೂಲಕ ಪ್ರಭು ಶ್ರೀರಾಮನ ಸೈನ್ಯವನ್ನು ನಿದ್ರೆಗೆ ಜಾರುವಂತೆ ಮಾಡುತ್ತಾನೆ. ರಾಮ-ಲಕ್ಷ್ಮಣ ಒತ್ತೆಯಾಳುಗಳಂತೆ ತೆಗೆದುಕೊಂಡು ಪಾತಾಳ ಲೋಕಕ್ಕೆ ಕರೆದೊಯ್ದನು. ಈ ಸಂದರ್ಭದಲ್ಲಿ ಭಗವಾನ್‌ ಹನುಮಂತನು ಪಂಚಮುಖಿ ಅವತಾರವನ್ನು ಧರಿಸಿದ್ದರು. ರಾಮ - ಲಕ್ಷ್ಮಣರನ್ನು ಪಾತಾಳ ಲೋಕಕ್ಕೆ ಕರೆದುಕೊಂಡು ಹೋದ ನಂತರ, ಭಗವಾನ್‌ ಹನುಮನು ತನ್ನ ಪಂಚಮುಖಿ ರೂಪದಲ್ಲಿ ರಾವಣನ ಸಹೋದರ ಅಹಿರಾವಣನನ್ನು ಕೊಂದು ಭಗವಾನ್ ಶ್ರೀ ರಾಮನನ್ನು ಮತ್ತು ಲಕ್ಷ್ಮಣರನ್ನು ಪಾತಾಳ ಲೋಕದಿಂದ ಬಿಡುಗಡೆ ಮಾಡಿದರು.

ಇವು ಪಂಚಮುಖಿ ಹನುಮನ ಐದು ಮುಖಗಳು ಮತ್ತು ಅವುಗಳ ಪ್ರಾಮುಖ್ಯತೆ:

1. ಪಂಚಮುಖಿ ಹನುಮಂತನ ಮೊದಲ ರೂಪ ಕೋತಿಯ ಬಾಯುಳ್ಳ ರೂಪ. ಈ ರೂಪದಿಂದ ಹನುಮಂತನು ಶತ್ರುಗಳ ವಿರುದ್ಧ ಗೆಲುವನ್ನು ಸಾಧಿಸುತ್ತಾನೆ.

2. ಪಂಚಮುಖಿ ಹನುಮನ ಎರಡನೇ ರೂಪ ಗರುಡನ ಮುಖವುಳ್ಳ ರೂಪ. ಹನುಮನ ಈ ರೂಪವು ನಮ್ಮ ಜೀವನದ ಎಲ್ಲಾ ನೋವುಗಳನ್ನು ತೆಗೆದುಹಾಕುತ್ತದೆ.

3. ಪಂಚಮುಖಿ ಹನುಮಂತನ ಮೂರನೇ ರೂಪವು ವರಾಹ ರೂಪವಾಗಿದ್ದು, ಇದು ಖ್ಯಾತಿ, ಅಪಾರ ಶಕ್ತಿ ಮತ್ತು ದೀರ್ಘಾಯುಷ್ಯವನ್ನು ಜೀವನಕ್ಕೆ ತರುತ್ತದೆ.

4. ಪಂಚಮುಖಿ ಹನುಮಂತನ ನಾಲ್ಕನೇ ರೂಪವು ನರಸಿಂಹ ರೂಪವಾಗಿದ್ದು, ಈ ಮುಖವು ಒಬ್ಬರ ಭಯ ಮತ್ತು ಉದ್ವೇಗವನ್ನು ಕೊನೆಗೊಳಿಸುತ್ತದೆ.

5. ಪಂಚಮುಖಿ ಹನುಮನ ಐದನೇ ರೂಪವು ಅಶ್ವ ರೂಪವಾಗಿದ್ದು, ಈ ರೂಪವು ವ್ಯಕ್ತಿಯ ಎಲ್ಲಾ ಆಸೆಗಳನ್ನು ಬಹುಬೇಗ ಈಡೇರಿಸುತ್ತದೆ. 

ಪಂಚಮುಖಿ ಹನುಮಂತನನ್ನು ಪೂಜಿಸುವ ಪ್ರಯೋಜನಗಳು:

1. ಮನೆಯಲ್ಲಿ ವಾಸ್ತು ದೋಷವಿದ್ದರೆ ಆಗ ನೀವು ಮನೆಯಲ್ಲಿ ಪಂಚಮುಖಿ ಹನುಮಂತನ ವಿಗ್ರಹವನ್ನು ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯ ವಾಸ್ತು ದೋಷವು ಕೊನೆಗೊಳ್ಳುತ್ತದೆ.

2. ಮನೆಯಲ್ಲಿ ನಡೆಯುತ್ತಿರುವ ಯಾವುದೇ ರೀತಿಯ ಕೋರ್ಟು - ಕಛೇರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಗೆಲುವನ್ನು ಸಾಧಿಸಲು, ಪಂಚಮುಖಿ ಹನುಮನ ವಿಗ್ರಹದ ಮುಂದೆ ತುಪ್ಪದ ದೀಪವನ್ನು ಬೆಳಗಿ ಹನುಮಂತನನ್ನು ಪೂಜಿಸಬೇಕು. ಇದರಿಂದ ಗೆಲುವು ನಿಮ್ಮದಾಗುತ್ತದೆ.

3. ಯಾವುದೇ ಪರೀಕ್ಷೆಯಲ್ಲಿ ಅಥವಾ ಸಂದರ್ಶನದಲ್ಲಿ ಯಶಸ್ಸನ್ನು ಪಡೆಯಲು ಪಂಚಮುಖಿ ಹನುಮಂತನಿಗೆ ಲಡ್ಡುಗಳನ್ನು, ದಾಳಿಂಬೆ ಅಥವಾ ಇನ್ನಿತರ ಹಣ್ಣುಗಳನ್ನು ನೈವೇದ್ಯ ಮಾಡಬೇಕು.

ಪಂಚಮುಖಿ ಹನುಮನ ವಿಗ್ರಹಗಳು ತುಂಬಾ ವಿರಳ. ಆದರೆ, ಪಂಚಮುಖಿ ಹನುಮನನ್ನು ಪೂಜಿಸುವುದರಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಿಮಗೂ ಪಂಚಮುಖಿ ಹನುಮನ ಆಶಿರ್ವಾದ ಬೇಕೆಂದಾದಲ್ಲಿ ಇಂದಿನಿಂದಲೇ ಪಂಚಮುಖಿ ಹನುಮನನ್ನು ಪೂಜಿಸಲು ಆರಂಭಿಸಿ.

ಹೀಗೆ ಅಹಿರಾವಣನು ರಾಮಲಕ್ಷ್ಮಣರನ್ನು ಪಾತಾಳಕ್ಕೆ ತಂದು ಬಚ್ಚಿಡುತ್ತಾನೆ, ನಂತರ ನಿಜವಾದ ವಿಭೀಷಣನು ಬಂದಾಗ ವಾಸ್ತವ ಸಂಗತಿಯ ಅರಿವು ಹನುಮಂತನಿಗೆ ಆಗುತ್ತದೆ, ರಾಮಲಕ್ಷ್ಮಣರನ್ನು ಕ್ಷೇಮವಾಗಿ ಕರೆತರುವ ದಾಯತ್ವವನ್ನು ಹೊತ್ತುಕೊಂಡ ಹನುಮನು ಪಾತಾಳಕ್ಕೆ ಹೋಗಿ ಅಹಿರಾವಣನನ್ನು ಸಂಹರಿಸುವುದರ ಕುರಿತು ಎಲ್ಲ ವಿವರಣೆಯನ್ನು ವಿಭೀಷಣನಿಂದ ಪಡೆಯುತ್ತಾನೆ... ವಿವರಣೆ ಪಡೆದು ಪಾತಾಳದ ಕಡೆಗೆ ಹೊರಡುತ್ತಾನೆ..... 

ಅಹಿರಾವಣನನ್ನು ಕೊಲ್ಲಲು ಪಾತಾಳದಲ್ಲಿದ್ದ ಐದು ದೀಪಗಳನ್ನು ಏಕಕಾಲದಲ್ಲಿ ನಂದಿಸಬೇಕಾಗಿರುವುದರಿಂದ, ಹನುಮಂತನು ಶ್ರೀರಾಮನನ್ನು ಮನಸ್ಸಿನಲ್ಲಿ ಭಕ್ತಿಯಿಂದ ನೆನೆದು ಸ್ವತಃ ಹನುಮನು ಪೂರ್ವಕ್ಕೆ ಮುಖ ಮಾಡಿ, ದಕ್ಷಿಣಾಭಿಮುಖವಾಗಿ ನರಸಿಂಹನ ಮುಖವನ್ನು, ಪಶ್ಚಿಮಾಭಿಮುಖವಾಗಿ ಗರುಡನ ಮುಖವನ್ನು, ಉತ್ತರಾಭಿಮುಖವಾಗಿ ವರಾಹದ ಮುಖವನ್ನು, ಮೇಲ್ಮುಖವಾಗಿ ಹಯಗ್ರೀವ ಮುಖವನ್ನು ಪಡೆದು ಏಕಕಾಲಕ್ಕೆ ಜೋರಾಗಿ ಗಾಳಿಯನ್ನು ಊದಿ ಆ ಐದು ದೀಪಗಳನ್ನು ನಂದಿಸಿ ಅಹಿರಾವಣನನ್ನು ಸಂಹರಿಸಿ ರಾಮಲಕ್ಷ್ಮಣರನ್ನು ಕರೆತರುತ್ತಾನೆ, ಅಂದಿನಿಂದ ಹನುಮನು ಪಂಚಮುಖಿ ಆಂಜನೇಯನಾಗಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಿದ್ದಾನೆ.
*****

No comments:

Post a Comment