Friday 1 October 2021

ಗಂಟಲಿನ ಕಫ ನಿವಾರಣೆ

 ಗಂಟಲಿನ ಕಫ ನಿವಾರಣೆಗೆ ಸರಳ ಮನೆಮದ್ದು..!


1/ 10

ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಲ್ಲಿ ಕೆಮ್ಮು ಹಾಗೂ ಕಫದ ಸಮಸ್ಯೆಗಳು ಕೂಡ ಒಂದು. ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ಮುಖ ಮಾಡುವವರೇ ಹೆಚ್ಚು. ಕೆಲ ಔಷಧಿಗಳ ಮೂಲಕ ಕೆಮ್ಮಿನ ಸಮಸ್ಯೆಯಿಂದ ಪಾರಾದರೂ, ಕಫ ಇನ್ನಿಲ್ಲದಂತೆ ಕಾಡುತ್ತಿರುತ್ತದೆ.


2/ 10

ಇಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಮನೆಯಲ್ಲೇ ಇರುವ ಕೆಲ ಪದಾರ್ಥಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ...


3/ 10

- ಕಫದ ಸಮಸ್ಯೆಯಿದ್ದರೆ ಬಿಸಿ ನೀರಲ್ಲಿ ಉಪ್ಪು ಹಾಕಿ ದಿನಕ್ಕೆ ಎರಡು-ಮೂರು ಬಾರಿ ಬಾಯಿ ಮುಕ್ಕಳಿಸಿ, ಇದರಿಂದ ಗಂಟಲಿನ ಕಫ ಕರಗುತ್ತದೆ.


4/ 10

- ನಿರಂತರ ಕಫದ ಸಮಸ್ಯೆ ಕಾಡುತ್ತಿದ್ದರೆ ನಿಂಬೆ ಹಣ್ಣಿನ ರಸಕ್ಕೆ ಕಪ್ಪು ಉಪ್ಪು ಅಥವಾ ಸೈಂಧವ ಉಪ್ಪು ಸೇರಿಸಿ. ಅದರೊಂದಿಗೆ ಕರಿಮೆಣಸಿನ ಪುಡಿ ಮಿಶ್ರಣ ಮಾಡಿ ಆ ರಸವನ್ನು ಸೇವಿಸಿದ್ರೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.


5/ 10

- ಕಫ ಕರಗಲು ಹಸಿ ಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ 3 - 4 ಬಾರಿ ಸೇವಿಸಿ. ಇದರಿಂದ ಶೀಘ್ರದ ಕಫ ಕರಗುವುದು.


6/ 10

- ಅರಿಶಿನ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಕುಡಿಯುತ್ತಿರುವುದರಿಂದ ಕೂಡ ಕಫದ ಸಮಸ್ಯೆ ಶಮನವಾಗುತ್ತದೆ.


7/ 10

- ಹಸಿ ಶುಂಠಿಯನ್ನು ಕುದಿಸಿ ಅದಕ್ಕೆ ಚಕ್ಕೆ ಸೇರಿಸಿ ಕಷಾಯ ಮಾಡಿ ದಿನಕ್ಕೆ 2-3 ಬಾರಿ ಕುಡಿಯುವುದರಿಂದ ಸಹ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.


8/ 10

- ಜೇನುತುಪ್ಪಕ್ಕೆ ಕರಿಮೆಣಸಿನ ಪುಡಿ ಮಿಶ್ರ ಮಾಡಿ ದಿನಕ್ಕೆ 3-4 ಬಾರಿ ಸೇವಿಸುವುದರಿಂದ ಸಹ ಗಂಟಲ ಕಫ ಕರಗುತ್ತದೆ.


9/ 10

- ಹಸಿ ಕ್ಯಾರೆಟ್​ನ್ನು ಗಟ್ಟಿ ಜ್ಯೂಸ್‌ ಆಗಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಸಹ ಗಂಟಲಿನ ಕಫ ನಿವಾರಣೆಯಾಗುತ್ತದೆ.


10/ 10

- ಒಣ ಶುಂಠಿ, ಕರಿಮೆಣಸು ಹಾಗೂ ಬೆಲ್ಲ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಸಹ ಕಫ ಸಮಸ್ಯೆಗೆ ಪರಿಹಾರ ಕಾಣಬಹುದು


ದೊಡ್ಡ ಪತ್ರೆ/ಅಜವಾನದ ಎಲೆಯನ್ನು ಬಿಸಿಮಾಡಿ, ಒಂದು ಚಮಚದಷ್ಟು ರಸ ತೆಗೆದು ಒಂದು ಹರಳು ಉಪ್ಪು ಅಥವ ಅರ್ಧಚಮಚ ಜೇನುನ್ನು ಬೆರೆಸಿ ದಿನಕ್ಕೆ ಮೂರು ಸಲ ಸೇವಿಸಿದರೆ  ಕಫ ಕರಗಿ ಬರುತ್ತದೆ. ಮಕ್ಕಳಿಗೆ ಇದರ ಅರ್ಧದಷ್ಟು, ಚಿಕ್ಕಮಗುವಿಗೆ ಕಾಲು ಚಮಚದಷ್ಟು ಕೊಡಬೇಕು. ನಾಲ್ಕೈದು ದಿವಸ ಈ ರೀತಿ ತೆಗೆದುಕೊಳ್ಳಬೇಕು.


ಓಂಕಾಳು/ಅಜವಾನದ ಕಾಳು ಒಂದು ಚಮಚದಷ್ಟು ನೀರಿನಲ್ಲಿ ಅರೆದು, ಬಿಸಿಮಾಡಿ, ವಿಳ್ಳೆದೆಲೆ ಮೇಲೆ ಹಾಕಿ ಎದೆ, ಪಕ್ಕೆಲಬು, ಬೆನ್ನಿಗೆ ಶಾಖ ಕೊಡುವುದರಿಂದ ಕಫ ಕರಗುವುದು. ದಿನಕ್ಕೆ ಮೂರು ಸಲದಂತೆ, ಕೆಮ್ಮು ಕಡಿಮೆಯಾಗುವವರೆಗೆ ಮಾಡುತ್ತಿರಬೇಕು. ಇದೇ ರೀತಿ

ಸಾಸಿವೆಕಾಳನ್ನು(ಅರ್ಧಚಮಚದಷ್ಟು) ಅರೆದು ಬಿಸಿಮಾಡಿ ಉಪಯೋಗಿಸಬಹುದು.

***


No comments:

Post a Comment