ಶ್ರೀವೇದವ್ಯಾಸ ಪ್ರಣೀತ-ಬ್ರಹ್ಮಕಾಂಡ ಗರುಡಮಹಾಪುರಾಣಮ್-ದ್ವಾದಶೋsಧ್ಯಾಯಃ
ಯಥಾ ಪ್ರಪಂಚಂ ಪ್ರವಿಜಾನಾತಿ ದೇವಃ ಸದಾ ಹ್ಯತೇಷೈಃ ಪ್ರವಿಶೇಷೈಶ್ಚ ಯುಕ್ತಮ್ |
ವೇದಾ ಯಥಾ ವಾ ಪ್ರವಿಜಾನಾತಿ ನಿತ್ಯಂ ಸ್ವಸ್ಯ ಸ್ವರೂಪಂ ನ ತಥಾ ಹರಿಂ ಚ||
ದೇವರು ಈ ಪ್ರಪಂಚವನ್ನು ಹೇಗೆ ಸಂಪೂರ್ಣವಾಗಿ ತಿಳಿದಿದ್ದಾನೆಯೋ ಮತ್ತು ಅಶೇಶ-ವಿಶೇಶವಾಗಿ ಅದರಲ್ಲಿ ಪ್ರವೇಶ ಮಾಡಿದ್ದಾನೆಯೋ , ಆ ರೀತಿಯಲ್ಲಿ ಬ್ರಹ್ಮದೇವರು ನಿತ್ಯ ಸ್ತೋತ್ರ ಮಾಡುತ್ತಿದ್ದರೂ , ತಮ್ಮ ಸ್ವರೂಪವನ್ನು ತಿಳಿದುಕೊಂಡಿದ್ದರೂ , ಪರಮಾತ್ಮನ ಸ್ವರೂಪವನ್ನು ಪೂರ್ಣ ಪ್ರಮಾಣದಲ್ಲಿ ತಿಳಿದುಕೊಂಡಿಲ್ಲ .
ಸ್ವಯೋಗ್ಯತಾಮನತಿಕ್ರಮ್ಯ ವೇದಾಃ ಹರೇಃ ಸ್ವರೂಪಂ ನ ವಿಜಾನಾತಿ ಸರ್ವಮ್|
ಸ್ವಯೋಗ್ಯರೂಪಂ ಸರ್ವದಾ ವೇತ್ತಿ ವಿಷ್ಣೋಃ ತತ್ರಾಜ್ಞಾನಂ ನಾಸ್ತಿ ಕಿಂಚಿದ್ವಿಜೇಂದ್ರ||೭||
ಬ್ರಹ್ಮದೇವರು ತಮ್ಮ ಯೋಗ್ಯತೆಯನ್ನು ಮೀರಿ ಶ್ರೀಹರಿಯ ಸ್ವರೂಪವನ್ನು ಎಲ್ಲವನ್ನೂ ತಿಳಿದಿರುವದಿಲ್ಲ . ಸ್ವಯೋಗ್ಯತಾನುಸಾರ ವಿಷ್ಣುವಿನ ರೂಪವನ್ನು ತಿಳಿದಿರುವರು . ಅಲ್ಲಿ ಸ್ವಲ್ಪವೂ ಅಜ್ಞಾನದ ಲವಲೇಶವೂ ಇಲ್ಲ .
ಯಾವತ್ಸ್ವರೂಪಂ ಚ ತಥೈವ ಲಕ್ಷ್ಮ್ಯಾ ವೇದಾ ನ ಜಾನಾತಿ ಕುತಸ್ತದನ್ಯೇ |
ತಯೋಃ ಸ್ವರೂಪಂ ನ ವಿಜಾನಾತಿ ಸರ್ವಂ ತಥಾಪಿ ವೇದಾಶ್ಚೈಕದೇಶೇ ಚ ನಿತ್ಯಮ್ ||೮||
ಪರಮಾತ್ಮನ ಸ್ವರೂಪವನ್ನು ಸ್ವತಃ ಶ್ರೀಲಕ್ಷ್ಮೀದೇವಿಯೇ ಸಾಕಲ್ಯೇನ ತಿಳಿದಿಲ್ಲ ಅಂದ್ಮೇಲೆ ಇನ್ನುಳಿದ ದೇವತೆಗಳು ಹಾಗೂ ಜ್ಞಾನಿಗಳು ತಿಳಿದಿಲ್ಲ ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ . ಆದರೂ ಸಹಿತ ಬ್ರಹ್ಮದೇವರು ಶ್ರೀಹರಿಯ ಸ್ವರೂಪದ ಏಕದೇಶವನ್ನು ಮಾತ್ರ ನಿತ್ಯವೂ ತಿಳಿದಿದ್ದಾರೆ .
ಜಾನಾತಿ ಲಕ್ಷ್ಮೀರ್ಹರಿರೂಪಂ ಚ ಯಾವತ್ ತಾವನ್ನ ಜಾನಾತಿ ವಿಧಿಃ ಖಗೇಂದ್ರ|
ಜ್ಞಾನೇ ವಿಧಾತುಶ್ಚ ಸ್ವಯೋಗ್ಯಭೂತೇ ನ ಚಿಂತನೀಯಂ ನಾಪಿ ಕ್ಷಣಾಧಿಕಂ ಚ ||೯||
ಲಕ್ಷ್ಮೀದೇವಿಯು ಪರಮಾತ್ಮನ ರೂಪಗಳನ್ನು ಎಷ್ಟು ತಿಳಿದಿದ್ದಾಳೋ ಅಷ್ಟು ಬ್ರಹ್ಮನು ತಿಳಿದಿಲ್ಲ . ಬ್ರಹ್ಮನ ಜ್ಞಾನವು ಅವನ ಯೋಗ್ಯತಾನುಸಾರ ಇದೆ , ಆದರೆ ಆ ಬ್ರಹ್ಮದೇವರ ಜ್ಞಾನ ಎಷ್ಟು ಅಂತ ಉಳಿದವರು ಒಂದು ಕ್ಷಣ ಕಾಲವೂ ಸಹ ಚಿಂತನೆ ಮಾಡಲು ಸಾಧ್ಯವಿಲ್ಲ .
ಅತೋ ವಿರಿಂಚಸ್ಯ ನ ಚಿಂತನೀಯೋ ಹ್ಯಜ್ಞಾನಲೇಶಃ ಕ್ವಾಪಿ ದೇಶೇ ಚ ಕಾಲೇ |
ನಾಡೀಂ ಸಮಾವಿಶ್ಯ ತದಾ ವಿರಿಂಚೋ ನ ವೇದ ನಾರಾಯಣ ಮೇ ಕವಚ್ಚ ||೧೦||
ಆದ್ದರಿಂದ ಬ್ರಹ್ಮದೇವರಲ್ಲಿ ಯಾವ ದೇಶದಲ್ಲೂ , ಕಾಲದಲ್ಲೂ ಅಜ್ಞಾನದ ಲವಲೇಶವನ್ನು ಚಿಂತಿಸಲೇಬಾರದು . ಕಮಲದ ನಾಳವನ್ನು ಪ್ರವೇಶಿಸಿದಾಗ ನಾರಾಯಣನನ್ನು ಮಾತ್ರ ತಿಳಿದಿಲ್ಲ ಎಂದು ತಿಳಿಯಬೇಕು .
ತದಾಶ್ರುಣೋತ್ತಮಂ ಕನಲಾಸನಃ ಪ್ರಭುಃ ತಪಸ್ತಪೇತಿ ದ್ವ್ಯಕ್ಷರಂ ಸಾದರೇಣ |
ಅಭಿಪ್ರಾಯಂ ತಸ್ಯ ಸಮ್ಯಗ್ವಿದಿತ್ವಾ ತಪಃ ಕುರು ತ್ವಂ ಹರಿತುಷ್ಟ್ಯರ್ಥಮೇವ ||೧೧||
ನಾರಾಯಣನು ಕಾಣಿಸದೇಇದ್ದ ಸಂದರ್ಭದಲ್ಲಿ ಬ್ರಹ್ಮದೇವರು ತಪ ತಪ ಎಂಬ ಎರಡು ಅಕ್ಷರಗಳನ್ನು ಆದರಪೂರ್ವಕವಾಗಿ ಕೇಳಿದರು ಅದರ ಅಭಿಪ್ರಾಯವನ್ನು ಸರಿಯಾಗಿ ತಿಳಿದುಕೊಂಡು , ಶ್ರೀಹರಿಯ ಪ್ರೀತಿಗೋಸ್ಕರವಾಗಿ ತಾವು ತಪಸ್ಸನ್ನು ಮಾಡಬೇಕು ಎಂಬುದನ್ನು ಅರ್ಥೈಸಿಕೊಂಡರು .
ತಪೋsಕರೋದ್ಧಪಾದೈಕನಿಷ್ಠೋ ಹರೇ ಪ್ರೀತ್ಯರ್ಥಂ ದಿವ್ಯ ಸಹಸ್ರವರ್ಷಮ್ |
ತತೋ ಹರಿಃ ಪ್ರಾದುರಾಸೀತ್ ಖಗೇಂದ್ರ ವರಂ ದಾತುಂ ಭಕ್ತವರಸ್ಯ ದಿವ್ಯಮ್ ||೧೨||
ಆಗ ಬ್ರಹ್ಮದೇವರು ಹರಿಪಾದೈಕನಿಷ್ಠರಾಗಿ ದೇವರ ಪ್ರೀತಿಗೋಸ್ಕರವಾಗಿ ದಿವ್ಯ ಸಹಸ್ರ ವರ್ಷ ಪರ್ಯಂತರ ತಪಸ್ಸನ್ನು ಆಚರಿಸಿದರು . ಆಗ ದೇವರು ಭಕ್ತಶ್ರೇಷ್ಠರಾದ ಬ್ರಹ್ಮದೇವರಿಗೆ ವರ ಕೊಡಲು ಅವರ ಮುಂದೆ ಪ್ರಾದುರ್ಭವಿಸಿದನು .
ತದಾ ವಿಷ್ಣುಂ ದೇವ ದೇವಂ ದದರ್ಶ ಚತುರ್ಭುಜಂ ತಂ ಜಲಜಾಯರಾಕ್ಷಮ್ |
ಶ್ರೀವತ್ಸಲಕ್ಷ್ಮ್ಯಂ ಗಲಶೋಭಿಕೌಸ್ತುಭಂ ಸಂಪಶ್ಯಂತಂ ಸುಪ್ರಸನ್ನಾರ್ದ್ರ ದ್ರಷ್ಟ್ಯಾ||೧೩||
ದೃಷ್ಟ್ವಾ ಹರಿಂ ಬ್ರಹ್ಮ ನಾರಾಯಣಂ ಚ ಪುರಸ್ಥಿತಃ ಭಕ್ತವಶ್ಯಂ ದಯಾಲುಮ್ |
ಸಮರ್ಚಯಾಮಾಸ ಮಹಾವಿಭೂತ್ಯಾ ಭಕ್ತ್ಯಾಹರೇ ಃ ಪಾದತೀರ್ಥಂ ದಧಾರ ||೧೪||
ಅಸ್ತೌನ್ ಮಹಾಭಾಗವತ ಪ್ರಧಾನೋ ಹರಿಂ ಗುರುಂ ಭಕ್ತಿ ವಿವರ್ಧಿತಾತ್ಮಾ ||
ಆಗ ಬ್ರಹ್ಮದೇವರು ಚತುರ್ಭುಜನಾದ , ಕಮದಂತೆ ಕಣ್ಣುಳ್ಳ , ಶ್ರೀವತ್ಸವೆಂಬ ಕೌಸ್ತುಭ ಮಣಿಯಿಂದ ಕೂಡಿದ ಹಾರವನ್ನು ಕಂಠದಲ್ಲಿ ಧಾರಣ ಮಾಡಿದ , ದೇವ ದೇವನಾದ ಶ್ರೀಮಹಾವಿಷ್ಣುವನ್ನು ಸುಪ್ರಸನ್ನವಾದ ಮನಸ್ಸಿನಿಂದ , ಆನಂದಾಶ್ರುಗಳಿಂದ ಕೂಡಿದ ದೃಷ್ಟಿಯಿಂದ ನೋಡಿದನು .
ಬ್ರಹ್ಮದೇವರು , ದಯಾಲುವಾದ , ಭಕ್ತರಿಗೆ ವಶ್ಯನಾದ , ತನ್ನ ಮುಂದೆ ಪ್ರತ್ಯಕ್ಷನಾದ ಶ್ರೀಹರಿಯನ್ನು ನೋಡಿ ಚನ್ನಾಗಿ ಪೂಜೆ ಮಾಡಿ ಭಕ್ತಿಪೂರ್ವಕವಾಗಿ ಪರಮಾತ್ಮನ ಪಾದೋದಕ ತೀರ್ಥವನ್ನು ಶಿರಸ್ಸಿನಲ್ಲಿ ಧಾರಣ ಮಾಡಿ ಮಹಾಭಾಗವತರಲ್ಲಿ ಪ್ರಧಾನರಾದ ಬ್ರಹ್ಮದೇವರು ತಮಗೆ ಗುರುವಾದ ಶ್ರೀಹರಿಯನ್ನು ಭಕ್ತಿಭರಿತರಾಗಿ ಸ್ತೋತ್ರ ಮಾಡಲು ಉಪಕ್ರಮಿಸಿದರು .
*******
No comments:
Post a Comment