Wednesday 1 December 2021

ಲಲಿತಾ ಪಂಚಕಮ್ or ಪಂಚರತ್ನ ಸ್ತೋತ್ರಮ್ ಆದಿ ಶಂಕರಾಚಾರ್ಯ ಕೃತಂ ललिता पञ्चकम् LALITA PANCHAKAM or PANCHARATNA STOTRA by shankaracharya






ಶ್ರೀ ಲಲಿತಾ ಪಂಚರತ್ನ ಸ್ತೋತ್ರಮ್ or ಲಲಿತಾ ಪಂಚಕಮ್


ಪ್ರಾತ: ಸ್ಮರಾಮಿ ಲಲಿತಾ ವದನಾರವಿಂದಂ
ಬಿಂಬಾಧರಂ ಪೃಥುಲ ಮೌಕ್ತಿಕ ಶೋಭಿನಾಸಮ್ |
ಆಕರ್ಣ ಧೀರ್ಘ ನಯನಂ ಮಣಿಕುಂಡಲಾಢ್ಯಂ
ಮಂದಸ್ಮಿತಮ್ ಮೃಗಮದೋಜ್ವಲ ಭಾಲದೇಶಮ್  ||೧||

ಪ್ರಾತರ್ಭಜಾಮಿ ಲಲಿತಾ ಭುಜಕಲ್ಪವಲ್ಲೀಂ
ರಕ್ತಾಂಗುಲೀಯ ಲಸದಂಗುಲಿ ಪಲ್ಲವಾಢ್ಯಾಮ್ |
ಮಾಣಿಕ್ಯ ಹೇಮ ವಲಯಾಂಗದ ಶೋಭಮಾನಾಂ
ಪುಂಡ್ರೇಕ್ಷುಚಾಪ ಕುಸುಮೇಷು ಸೃಣೀರ್ದಧಾನಮ್  ||೨||

ಪ್ರಾತರ್ನಮಾಮಿ ಲಲಿತಾ ಚರಣಾರವಿಂದಂ
ಭಕ್ತೇಷ್ಟ ದಾನ ನಿರತಂ ಭವ ಸಿಂಧು ಪೋತಮ್ |
ಪದ್ಮಾಸನಾದಿ ಸುರನಾಯಕ ಪೂಜನೀಯಂ
ಪದ್ಮಾಂಕುಶ ಧ್ವಜ ಸುದರ್ಶನ ಲಾಂಛನಾಢ್ಯಮ್  ||೩||

ಪ್ರಾತ: ಸ್ತುವೇ ಪರಶಿವಾಂ ಲಲಿತಾಂ ಭವಾನೀಂ
ತ್ರಯಂತ ವೇದ್ಯ ವಿಭವಾಂ ಕರುಣಾನವದ್ಯಾಮ್ |
ವಿಶ್ವಸ್ಯ ಸೃಷ್ಟಿ ವಿಲಯ ಸ್ಥಿತಿ ಹೇತುಭೂತಾಂ
ವಿದ್ಯೇಶ್ವರೀಂ ನಿಗಮಮ ವಾಙ್ಮನಸಾತಿ ದೂರಾಮ್  ||೪||

ಲಲಿತೇ ತವ ಪುಣ್ಯ ನಾಮ
ಕಾಮೇಶ್ವರೀತಿ ಕಮಲೇತಿ ಮಹೇಶ್ವರೀತಿ |
ಶ್ರೀ ಶಾಂಭವೀತಿ ಜಗತಾಂ ಜನನೀ ಪರೇತಿ
ವಾಗ್ದೇವತೇತಿ ವಚಸಾ ತ್ರಿಪುರೇಶ್ವರೀತಿ  ||೫||

ಯ: ಶ್ಲೋಕ ಪಂಚಕಮಿದಂ ಲಲಿತಾಂಬಿಕಾಯಾ:
ಸೌಭಾಗ್ಯದಂ ಸುಲಲಿತಂ ಪಠತಿ ಪ್ರಭಾತೇ |
ತಸ್ಮೈ ದದಾತಿ ಲಲಿತಾ ಝಟಿತಿ ಪ್ರಸನ್ನಾ
ವಿದ್ಯಾಂ ಶ್ರಿಯಂ ವಿಮಲ ಸೌಖ್ಯಮನಂತ ಕೀರ್ತಿಮ್ ||೬ |

||ಇತಿ ಶ್ರೀಮಚ್ಛಂಕರಾಚಾರ್ಯ ವಿರಚಿತ ಶ್ರೀ ಲಲಿತಾ ಪಂಚರತ್ನ ಸ್ತೋತ್ರಮ್ ಪ್ರಾತರ್ವದಾಮಿ||
************

ललिता पञ्चकम्

प्रातः स्मरामि ललितावदनारविन्दं बिम्बाधरं पृथुलमौक्तिकशोभिनासम्  ।
आकर्णदीर्घनयनं मणिकुण्डलाढ्यं मन्दस्मितं मृगमदोज्ज्वलभालदेशम्  ॥ १॥

प्रातर्भजामि ललिताभुजकल्पवल्लीं रत्नाङ्गुळीयलसदङ्गुलिपल्लवाढ्याम्  ।
माणिक्यहेमवलयाङ्गदशोभमानां पुण्ड्रेक्षुचापकुसुमेषुसृणीःदधानाम्  ॥ २॥

प्रातर्नमामि ललिताचरणारविन्दं भक्तेष्टदाननिरतं भवसिन्धुपोतम्  ।
पद्मासनादिसुरनायकपूजनीयं पद्माङ्कुशध्वजसुदर्शनलाञ्छनाढ्यम्  ॥ ३॥

प्रातः स्तुवे परशिवां ललितां भवानीं त्रय्यन्तवेद्यविभवां करुणानवद्याम्  ।
विश्वस्य सृष्टविलयस्थितिहेतुभूतां विश्वेश्वरीं निगमवाङ्गमनसातिदूराम्  ॥ ४॥

प्रातर्वदामि ललिते तव पुण्यनाम कामेश्वरीति कमलेति महेश्वरीति  ।
श्रीशाम्भवीति जगतां जननी परेति वाग्देवतेति वचसा त्रिपुरेश्वरीति  ॥ ५॥

यः श्लोकपञ्चकमिदं ललिताम्बिकायाः सौभाग्यदं सुललितं पठति प्रभाते  ।
तस्मै ददाति ललिता झटिति प्रसन्ना विद्यां श्रियं विमलसौख्यमनन्तकीर्तिम्  ॥ ६॥


॥  इति श्रीमच्छङ्करभगवतः कृतौ ललिता पञ्चकम् सम्पूर्णम् ॥
*********

Video is from youtube Stothrapriyaa

Lalitha - better known as Sri Lalitha Maha Tripura Sundari, is the supreme goddess of the hindu pantheon more specifically to the shaktha cult.
Lalitha means the playful one, and the whole creation, it's functioning and delusion are but the divine play of the universal mother.
The Goddess is described to have a very beautiful ( maha lavanya ), ever youthful ( navayavvana ) form, her four hands equipped with the pasham ( noose ), ankusham ( goad ), ikshu kodandam ( sugercane bow ) and pancha baanam ( 5 floral arrows ). Seated on a pancha bramhasana ( a seat with bramha, vishnu, rudra and maheshwara as its four limbs, sada shiva forming its platform ), fanned by saraswathi and lakshmi on either side, she resides in the great city called Manidweepam.
The most sacred and popular yanthra in the hindu pantheon - the " Sri Chakra " is considered an embodiment of the supreme goddess and worshiped with utmost devotion.
Sri Lalitha Sahasranama is the most popular stothra rendered by hindus sings the praise of the goddess in 1008 epithets.
She is considered the feminine personification of the all pervading, omni potent absoulte bramha tatthwa. Worshipping her is sure to bestow the devotee with anthing and everything he wishes for.
The Lalitha Pancharathnam is a beautiful stothram composed by " Sri Adi ShankaraAcharya " in praise of the goddess, It is believed that those who chant this stothram in the morning, extolling the mother Lalitha - the Goddess of bliss, an incarnation for Goddess Parvathi - would get luck, knowledge riches, endless fame by the grace of Goddess Lalitha.
Rendered by shanmukha priya and hari priya duo ( popularly known as priya sisters )


Featured in this video are snaps taken on Lalitha Panchami - 5th day of navarathri, on which Saradamba was decorated as Lalitha Tripura Sundari and worshiped accordingly.
*******
ಪ್ರಾತ: ಸ್ಮರಾಮಿ ಲಲಿತಾ ವದನಾರವಿಂದಂ
ಬಿಂಬಾಧರಂ ಪೃಥುಲ ಮೌಕ್ತಿಕ ಶೋಭಿನಾಸಮ್ |
ಆಕರ್ಣ ಧೀರ್ಘ ನಯನಂ ಮಣಿಕುಂಡಲಾಢ್ಯಂ
ಮಂದಸ್ಮಿತಮ್ ಮೃಗಮದೋಜ್ವಲ ಭಾಲದೇಶಮ್  ||೧||

ಭಾವಾರ್ಥ :-ತೊಂಡೆಯ ಹಣ್ಣನ್ನು ಹೋಲುವ  ತುಟಿ; ದೊಡ್ಡ ಮುತ್ತಿನ ಮೂಗುತಿಯನ್ನು ಧರಿಸಿ ಶೋಭಿಸುವ ಮೂಗು; ಕಿವಿಯತನಕ ವಿಸ್ತರಿಸಿರುವ ವಿಶಾಲವಾಗಿರುವ ನಯನ ದ್ವಯಗಳು; ಕಿವಿಯಲ್ಲಿ ಮಣಿ ಕುಂಡಲಗಳು;  ಮಂದಹಾಸವನ್ನು ಬೀರುತ್ತಿರುವ  ತುಟಿಗಳು; ಹಾಗೂ ಹಣೆಯಲ್ಲಿ ಉಜ್ವಲವಾಗಿ ಬೆಳಗುತ್ತಿರುವ ಕಸ್ತೂರಿಯ ತಿಲಕ; ಇವುಗಳಿಂದೊಪ್ಪುವ ಲಲಿತಾ ಮಾತೆಯ ಮುಖಕಮಲವನ್ನು ನಾನು ಉಷ: ಕಾಲದಲ್ಲಿ ಸ್ಮರಿಸುತ್ತಿದ್ದೇನೆ.

ಪ್ರಾತರ್ಭಜಾಮಿ ಲಲಿತಾ ಭುಜಕಲ್ಪವಲ್ಲೀಂ
ರಕ್ತಾಂಗುಲೀಯ ಲಸದಂಗುಲಿ ಪಲ್ಲವಾಢ್ಯಾಮ್ |
ಮಾಣಿಕ್ಯ ಹೇಮ ವಲಯಾಂಗದ ಶೋಭಮಾನಾಂ
ಪುಂಡ್ರೇಕ್ಷುಚಾಪ ಕುಸುಮೇಷು ಸೃಣೀರ್ದಧಾನಮ್  ||೨||

ಭಾವಾರ್ಥ :-ಕೆಂಪು ಹರಳಿನ ಉಂಗುರವ ಧರಿಸಿ ಹೊಳೆಯುವ ಬೆರಳೆನ್ನುವ ಚಿಗುರುಗಳಿಂದ ಕೂಡಿದವಳೂ; ಮಾಣಿಕ್ಯದ ಬಳೆಗಳು ಹಾಗೂ ತೋಳ್ಬಂದಿಗಳಿಂದ ಶೋಭಾಯಮಾನಳಾಗಿರುವ ನಾಮ ಕಬ್ಬನ್ನು ಬಿಲ್ಲನ್ನಾಗಿಸಿ ಹೂವುಗಳನ್ನು ಬಾಣಗಳನ್ನಾಗಿಸಿ ತುಂಬಿರುವ ಬತ್ತಳಿಕೆಯನ್ನು ಹಿಡಿದಿರುವ ಲಲಿತಾಮಾತೆಯ ತೋಳುಗಳೆಂಬ ಕಲ್ಪಲತೆಯನ್ನು ನಾನು ಬೆಳಗ್ಗೆ ಭಜಿಸುತ್ತೇನೆ.

ಪ್ರಾತರ್ನಮಾಮಿ ಲಲಿತಾ ಚರಣಾರವಿಂದಂ
ಭಕ್ತೇಷ್ಟ ದಾನ ನಿರತಂ ಭವ ಸಿಂಧು ಪೋತಮ್ |
ಪದ್ಮಾಸನಾದಿ ಸುರನಾಯಕ ಪೂಜನೀಯಂ
ಪದ್ಮಾಂಕುಶ ಧ್ವಜ ಸುದರ್ಶನ ಲಾಂಛನಾಢ್ಯಮ್  ||೩||

ಭಾವಾರ್ಥ:-ಭಕ್ತರು ಅಪೇಕ್ಷಿಸುವ ಇಷ್ಟ ಫಲಗಳನ್ನು ಕರುಣಿಸುವುದರಲ್ಲಿ ತೊಡಗಿಸಿಕೊಂಡಿರುವವಳೂ;ಸಂಸಾರವೆನ್ನುವ ಸಾಗರವನ್ನು ದಾಟಲು ಹರಿಗೋಲಾಗಿರುವವಳೂ; ಬ್ರಹ್ಮಾದಿ ದೇವತಾವರೇಣ್ಯರಿಗೆ ಪೂಜನೀಯವಾಗಿರುವವಳೂ; ಕಮಲ, ಅಂಕುಶ, ಧ್ವಜ, ಸುದರ್ಶನ ಚಕ್ರ ಮೊದಲಾದ ಗುರುತುಗಳನ್ನು ಹೊಂದಿರುವವಳೂ ಆದ ಲಲಿತಾ ಮಾತೆಯ ಪಾದ ಕಮಲಗಳಿಗೆ ನಾನು ಉಷ: ಕಾಲದಲ್ಲಿ ನಮಸ್ಕರಿಸುತ್ತೇನೆ.

ಪ್ರಾತ: ಸ್ತುವೇ ಪರಶಿವಾಂ ಲಲಿತಾಂ ಭವಾನೀಂ
ತ್ರಯಂತ ವೇದ್ಯ ವಿಭವಾಂ ಕರುಣಾನವದ್ಯಾಮ್ |
ವಿಶ್ವಸ್ಯ ಸೃಷ್ಟಿ ವಿಲಯ ಸ್ಥಿತಿ ಹೇತುಭೂತಾಂ
ವಿದ್ಯೇಶ್ವರೀಂ ನಿಗಮಮ ವಾಙ್ಮನಸಾತಿ ದೂರಾಮ್  ||೪||

ಭಾವಾರ್ಥ:-ವೇದಾಂತಗಳಿಂದ ತಿಳಿದುಬರುವ ವೈಭವವನ್ನು ಹೊಂದಿರುವವಳೂ;ದಯಾನಿಧಿಯಾಗಿ ಶ್ಲಾಘನೀಯಳಾದವಳೂ; ಜಗದ ಉತ್ಪತ್ತಿ,ಪಾಲನೆ, ನಾಶಕ್ಕೆ ಕಾರಣೀ ಭೂತವಾಗಿರುವ ಶ್ರೀವಿದ್ಯಾ ಮಂತ್ರಕ್ಕೆ ದೇವತಾ ಸ್ವರೂಪಿಯೂ, ವೇದಗಳಿಗೆ ನಿಲುಕದವಳೂ ,ಮಾತು, ಮತ್ತು ಮನ್ನಸ್ಸಿಗೆ ಸಿಗದವಳೂ ;ಪರಮೇಶ್ವರನ ಒಡತಿಯೂ; ಜಗನ್ಮಾತೆಯೂ ಆಗಿರುವ ಲಲಿತಾ ಮಾತೆಯನ್ನು ನಾನು ಪ್ರಾತ:ಕಾಲದಲ್ಲಿ ಸ್ತುತಿಸುತ್ತೇನೆ.
ಲಲಿತೇ ತವ ಪುಣ್ಯ ನಾಮ
ಕಾಮೇಶ್ವರೀತಿ ಕಮಲೇತಿ ಮಹೇಶ್ವರೀತಿ |
ಶ್ರೀ ಶಾಂಭವೀತಿ ಜಗತಾಂ ಜನನೀ ಪರೇತಿ
ವಾಗ್ದೇವತೇತಿ ವಚಸಾ ತ್ರಿಪುರೇಶ್ವರೀತಿ  ||೫||

ಭಾವಾರ್ಥ:-ಕಾಮೇಶ್ವರಿ;ಕಮಲೆ;ಮಹೇಶ್ವರಿ;ಶಾಂಭವಿ;ಶ್ರೇಷ್ಠಳಾಗಿರುವ ಜಗಜ್ಜನನಿ; ವಾಗ್ದೇವಿ; ತ್ರಿಪುರೇಶ್ವರಿ ಎಂಬುದಾಗಿ ನಿನ್ನ ಪುಣ್ಯ ನಾಮಗಳನ್ನು ಲಲಿತಾ ಮಾತೆಯೇ ನಾನು ಬೆಳಗ್ಗಿನ ಹೊತ್ತು ಜಪಿಸುತ್ತೇನೆ.

ಯ: ಶ್ಲೋಕ ಪಂಚಕಮಿದಂ ಲಲಿತಾಂಬಿಕಾಯಾ:
ಸೌಭಾಗ್ಯದಂ ಸುಲಲಿತಂ ಪಠತಿ ಪ್ರಭಾತೇ |
ತಸ್ಮೈ ದದಾತಿ ಲಲಿತಾ ಝಟಿತಿ ಪ್ರಸನ್ನಾ
ವಿದ್ಯಾಂ ಶ್ರಿಯಂ ವಿಮಲ ಸೌಖ್ಯಮನಂತ ಕೀರ್ತಿಮ್ ||೬ ||

ಭಾವಾರ್ಥ:-ಯಾವಾತನು ಸೌಭಾಗ್ಯವನ್ನು ಒದಗಿಸುವ ಸುಂದರವಾದ ಹಾಗೂ ಸುಲಭವಾಗಿರುವ ಲಲಿತಾಂಬಿಕೆಯ ಈ ಐದು ಶ್ಲೋಕಗಳನ್ನು ಉಷ:ಕಾಲದಲ್ಲಿ ಪಠಿಸುವನೋ ಅವನಿಗೆ ತತ್ಕ್ಷಣ ಪ್ರಸನ್ನಳಾಗುವ ಲಲಿತಾ ಮಾತೆಯು ಸಂತೋಷದಿಂದ ವಿದ್ಯೆ,ಸಂಪತ್ತು,ಶೋಭೆ,ನಿರ್ಮಲವಾದ ಸೌಖ್ಯ, ಹಾಗೂ ಅಂತ್ಯವಿಲ್ಲದ್ದ ಕೀರ್ತಿಯನ್ನು ದಯಪಾಲಿಸುತ್ತಾಳೆ.

  || ಇತಿ ಶ್ರೀಮಚ್ಛಂಕರಾಚಾರ್ಯ ವಿರಚಿತ ಶ್ರೀ ಲಲಿತಾ ಪಂಚರತ್ನ ಸ್ತೋತ್ರಮ್ |
ಪ್ರಾತರ್ವದಾಮಿ||

************

No comments:

Post a Comment