ಶ್ರೀದತ್ತಾತ್ರೇಯಸ್ತೋತ್ರಮ್ (ನಾರದಪುರಾಣ)
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ ||೧||
ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರ ಹೇತವೇ |
ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಸ್ತುತೇ ||೧||
ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ |
ದಿಗಂಬರದಯಾಮೂರ್ತೇ ದತ್ತಾತ್ರೇಯ ನಮೋಸ್ತುತೇ ||೨||
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ ||೧||
ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರ ಹೇತವೇ |
ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಸ್ತುತೇ ||೧||
ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ |
ದಿಗಂಬರದಯಾಮೂರ್ತೇ ದತ್ತಾತ್ರೇಯ ನಮೋಸ್ತುತೇ ||೨||
ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ |
ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋಸ್ತುತೇ ||೩||
ಹ್ರಸ್ವದೀರ್ಘಕೃಶಸ್ಥೂಲ-ನಾಮಗೋತ್ರ-ವಿವರ್ಜಿತ |
ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋಸ್ತುತೇ ||೪||
ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ |
ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಸ್ತುತೇ ||೫||
ಆದೌ ಬ್ರಹ್ಮಾ ಮಧ್ಯ ವಿಷ್ಣುರಂತೇ ದೇವಃ ಸದಾಶಿವಃ |
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಸ್ತುತೇ ||೬||
ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ | ಜಿತೇಂದ್ರ್ರಿಯಜಿತಜ್ಞಾಯ ದತ್ತಾತ್ರೇಯ ನಮೋಸ್ತುತೇ ||೭||
ದಿಗಂಬರಾಯ ದಿವ್ಯಾಯ ದಿವ್ಯರೂಪಧ್ರಾಯ ಚ |
ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋಸ್ತುತೇ ||೮||
ಜಂಬುದ್ವೀಪಮಹಾಕ್ಷೇತ್ರಮಾತಾಪುರನಿವಾಸಿನೇ |
ಜಯಮಾನಸತಾಂ ದೇವ ದತ್ತಾತ್ರೇಯ ನಮೋಸ್ತುತೇ ||೯||
ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ |
ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋಸ್ತುತೇ ||೧೦||
ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ |
ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಸ್ತುತೇ ||೧೧||
ಅವಧೂತಸದಾನಂದಪರಬ್ರಹ್ಮಸ್ವರೂಪಿಣೇ |
ವಿದೇಹದೇಹರೂಪಾಯ ದತ್ತಾತ್ರೇಯ ನಮೋಸ್ತುತೇ ||೧೨||
ಸತ್ಯಂರೂಪಸದಾಚಾರಸತ್ಯಧರ್ಮಪರಾಯಣ |
ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋಸ್ತುತೇ ||೧೩||
ಶೂಲಹಸ್ತಗದಾಪಾಣೇ ವನಮಾಲಾಸುಕಂಧರ |
ಯಜ್ಞಸೂತ್ರಧರಬ್ರಹ್ಮನ್ ದತ್ತಾತ್ರೇಯ ನಮೋಸ್ತುತೇ ||೧೪||
ಕ್ಷರಾಕ್ಷರಸ್ವರೂಪಾಯ ಪರಾತ್ಪರತರಾಯ ಚ |
ದತ್ತಮುಕ್ತಿಪರಸ್ತೋತ್ರ ದತ್ತಾತ್ರೇಯ ನಮೋಸ್ತುತೇ ||೧೫||
ದತ್ತ ವಿದ್ಯಾಢ್ಯಲಕ್ಷ್ಮೀಶ ದತ್ತ ಸ್ವಾತ್ಮಸ್ವರೂಪಿಣೇ |
ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋಸ್ತುತೇ ||೧೬||
ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ |
ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋಸ್ತುತೇ ||೧೭||
ಇದಂ ಸ್ತೋತ್ರಂ ಮಹದ್ದಿವ್ಯಂ ದತ್ತಪ್ರತ್ಯಕ್ಷಕಾರಕಮ್ |
ದತ್ತಾತ್ರೇಯಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ ||೧೮|| ||
ಇತಿ ಶ್ರೀನಾರದಪುರಾಣೇ ನಾರದವಿರಚಿತಂ ದತ್ತಾತ್ರೇಯಸ್ತೋತ್ರಂ ಸುಸಂಪೂರ್ಣಮ್ ||
*****
*****
ದತ್ತಾತ್ರೇಯ ಅನುಗ್ರಹ ಪಡೆಯಲು
ದತ್ತಾತ್ರೇಯ ಸ್ತೋತ್ರಂ (ನಾರದ ಪುರಾಣ)
ಪ್ರಸ್ತಾವನೆ :
ದತ್ತಾತ್ರೇಯರು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಹಾಗೂ ಮಹೇಶ್ವರ ಮೂರೂ ದೇವರುಗಳ ಒಟ್ಟಾಗಿನ ಅವತಾರ. ಅತ್ರಿ ಮುನಿಗಳ ಪತ್ನಿಯಾದ ಮಾತೆ ಅನಸೂಯ ದೇವಿಯಿಂದಾಗಿ ದತ್ತಾತ್ರೆಯರು ಅವತಾರ ತಾಳಿದರು. ಒಂದು ಪೌರಾಣಿಕ ಹಿನ್ನೆಲೆಯ ಪ್ರಕಾರ ನಾರದ ಮುನಿಗಳು ಸರಸ್ವತಿ ಲಕ್ಷ್ಮಿ ಹಾಗೂ ಪಾರ್ವತಿಯರಿಗೆ ಸತಿ ಅನಸೂಯಾ ದೇವಿಯು ಅವರೆಲ್ಲರಿಗಿಂತ ಶ್ರೇಷ್ಠಳೆಂದು ತಿಳಿಸಿ ಅವರ ಮನಸ್ಸುಗಳನ್ನು ಕೆಡಿಸಿದರು. ಇದರಿಂದ ಅಸೂಯೆಗೊಂಡ ಮೂರೂ ದೇವಿಯರು ತಮ್ಮ ಪತಿಯರನ್ನು ಅನಸೂಯಳ ಬಳಿಗೆ ಕಳುಹಿಸಿದರು. ಅವರುಗಳು ಬಂದು ಸತಿ ಅನಸೂಯಳನ್ನು ವಿವಸ್ತ್ರಳಾಗಿ ತಮಗೆ ಭಿಕ್ಷೆ ನೀಡಬೇಕೆಂದು ಪ್ರಾರ್ಥಿಸಿದರು. ಆಗ ಅನಸೂಯಾ ದೇವಿಯು ಆ ಮೂವರನ್ನೂ ಸೇರಿಸಿ ಆಗತಾನೇ ಜನಿಸಿರುವ ಶಿಶುಗಳನ್ನಾಗಿ ಮಾಡಿದಳು. ಆ ಶಿಶುವೇ ದತ್ತಾತ್ರೇಯರು. ಮತ್ತೊಂದು ಕಥನದ ಪ್ರಕಾರ ವಿಶ್ವವನ್ನು ನಳಯಾನಿಯ ಶಾಪದಿಂದ ರಕ್ಷಿಸಲು ತ್ರಿಮೂರ್ತಿಗಳನ್ನು ಅನಸೂಯಳ ಬಳಿಗೆ ಹೋಗಲು ಒತ್ತಾಯ ಮಾಡಲಾಯಿತು. ಅದರಂತೆ ಅನಸೂಯಳು ತ್ರಿಮೂರ್ತಿಗಳನ್ನು ತನ್ನ ಶಿಶುವಾಗಬೇಕೆಂದು ಆಶಿಸಿದಳು. ಈ ಶಿಶುವೇ ದತ್ತಾತ್ರೇಯ (ವಿಷ್ಣು) ದೂರ್ವಾಸ (ಶಿವ ) ಹಾಗೂ ಚಂದ್ರ (ಬ್ರಹ್ಮ ) ಗಳ ಸಮಾಗಮ. ಈ ಮೂರೂ ಶಿಶುಗಳು ಅಳತೊಡಗಿದಾಗ ಅನಸೂಯಾ ದೇವಿಯು ಮೂರೂ ಶಿಶುಗಳನ್ನು ಒಮ್ಮೆಲೇ ಎತ್ತಿಕೊಂಡಳು, ಕೂಡಲೇ ಮೂರೂ ಶಿಶುಗಳು ಒಂದೇ ಶಿಶುವಾಗಿ ಮಾರ್ಪಟ್ಟವು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಾಗಿ ದತ್ತ ಪಂಥದವರು ದತ್ತಾತ್ರೇಯರನ್ನು ಆರಾಧಿಸುತ್ತಾರೆ. ದತ್ತಾತ್ರೇಯರನ್ನು ಧ್ಯಾನಮುದ್ರೆಯಲ್ಲಿ ವೇದಗಳನ್ನು ಪ್ರತಿನಿಧಿಸುವ ನಾಲ್ಕು ಶ್ವಾನಗಳ ಹಾಗೂ ದೇವಲೋಕದ ಕಾಮಧೇನುವು ಸುರಭಿಯಾಗಿ ಸುತ್ತುವರೆದಿರುವಂತೆ ತೋರಿಸಲಾಗಿದೆ.
ಶ್ಲೋಕ - 1 - ಸಂಸ್ಕೃತದಲ್ಲಿ : ಧ್ಯಾನಂ
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಂ
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ
ಕನ್ನಡದಲ್ಲಿ : ಧ್ಯಾನ ಶ್ಲೋಕ
ಪಾಂಡುರಂಗ ಜಟಾಧರಗೆ ಶೂಲವಿಡಿದ ಕೃಪಾನಿಧಿಗೆ
ಸರ್ವರೋಗ ಕಳೆವ ಮಹಿಮಗೆ ನಮೋ ದತ್ತಾತ್ರೇಯಗೆ
ವಿವರಣೆ :
ಜಡೆಗಟ್ಟಿದ ಕೂದಲನ್ನುಳ್ಳ ಶ್ವೇತವರ್ಣದ ದಯಾಸಾಗರನಾದ ಮತ್ತು ಸರ್ವ ರೋಗಗಳನ್ನೂ ಗುಣಪಡಿಸುವ ದತ್ತಾತ್ರೇಯರಿಗೆ ನನ್ನ ನಮನಗಳು.
ನ್ಯಾಸಂ :
ಅಸ್ಯ ದತ್ತಾತ್ರೇಯ ಸ್ತೋತ್ರ ಮಂತ್ರಸ್ಯ ಭಗವಾನ್ ನಾರದ ಋಷಿಃ,
ಅನುಷ್ಟುಪ್ ಛಂದ, ಶ್ರೀ ದತ್ತ ಪರಮಾತ್ಮ ದೇವತ,
ಶ್ರೀದತ್ತ ಪ್ರೀತ್ಯರ್ಥೇ ಜಪೇ ವಿನಿಯೋಗಃ
ಕನ್ನಡದಲ್ಲಿ :
ದತ್ತಾತ್ರೇಯ ಸ್ತೋತ್ರಕ್ಕೆ ಸಂಬಂಧಿಸಿದ ಮುನಿಗಳು ದೇವರ್ಷಿ ನಾರದರು, ಇದು ಅನುಷ್ಟುಪ್ ಛಂದಸ್ಸಿನಲ್ಲಿ ರಚಿತವಾಗಿದ್ದು ಇದು ದತ್ತಾತ್ರೇಯ ದೇವರನ್ನು ಸಂಬೋಧಿಸಲಾಗಿದೆ ಹಾಗೂ ಈ ಸ್ತೋತ್ರವನ್ನು ದತ್ತಾತ್ರೇಯರನ್ನು ಸಂತುಷ್ಟಿಗೊಳಿಸಲು ಪ್ರಾರ್ಥಿಸಲಾಗಿದೆ.
ಶ್ಲೋಕ - 2 - ಸಂಸ್ಕೃತದಲ್ಲಿ :
ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರ ಹೇತವೇ
ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಜಗದುಗಮ ಕಾರಣಗೆ ಸ್ಥಿತಿಲಯಗಳ ಕರ್ತಗೆ
ಭವದ ಪಾಶ ಬಿಡಿಸುವವಗೆ ನಮೋ ದತ್ತಾತ್ರೇಯಗೆ
ವಿವರಣೆ :
ವಿಶ್ವವನ್ನು ಸೃಷ್ಟಿಸಿದ ದತ್ತಾತ್ರೇಯರಿಗೆ ನಮನಗಳು ಮತ್ತು ವಿಶ್ವದ ರಕ್ಷಣೆ ಹಾಗೂ ವಿನಾಶಕ್ಕೆ ಕಾರಣರು ಹಾಗೂ ಇವರು ಕರ್ಮ ಬಂಧನದಿಂದ ನಮ್ಮನ್ನು ಬಿಡುಗಡೆಗೊಳಿಸುವರು.
ಶ್ಲೋಕ - 3 - ಸಂಸ್ಕೃತದಲ್ಲಿ :
ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ
ದಿಗಂಬರದಯಾಮೂರ್ತೇ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಹುಟ್ಟು ಮುಪ್ಪು ಮೆಟ್ಟುವವಗೆ ದೇಹಶುದ್ಧಿಗೈವಗೆ
ದಿಕ್ಕ ಹೊದ್ದ ದಯಾಮೂರ್ತಿ ನಮೋ ದತ್ತಾತ್ರೇಯಗೆ
ವಿವರಣೆ :
ವೃದ್ಧಾಪ್ಯ ಹಾಗೂ ಪುನರ್ಜನ್ಮಗಳನ್ನು ನಾಶಪಡಿಸುವ ದತ್ತಾತ್ರೇಯರಿಗೆ ವಂದನೆಗಳು ಹಾಗೂ ನಮ್ಮ ದೇಹವನ್ನು ಶುದ್ಧೀಕರಿಸುವ ಮತ್ತು ಕರುಣಾಮಯಿ ಹಾಗೂ ಇವರು ದಿಕ್ಕುಗಳನ್ನೇ ವಸ್ತ್ರಗಳನ್ನಾಗಿ ಧರಿಸಿರುವರು.
ಶ್ಲೋಕ - 4 - ಸಂಸ್ಕೃತದಲ್ಲಿ :
ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ
ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಕರ್ಪೂರದುರಿಯ ದೇಹಕಾಂತಿ ಬ್ರಹ್ಮಪಾತ್ರಧಾರಿಗೆ
ವೇದಶಾಸ್ತ್ರ ಪಾರಂಗತಗೆ ನಮೋ ದತ್ತಾತ್ರೇಯಗೆ
ವಿವರಣೆ :
ದೇಹವನ್ನೇ ಶುದ್ಧ ಕರ್ಪೂರದಂತೆ ಹೊಳೆಯುವಂತೆ ಇರುವ ದತ್ತಾತ್ರೇಯರಿಗೆ ನಮಸ್ಕಾರಗಳು, ಬ್ರಹ್ಮನ ರೂಪವನ್ನು ಹೊಂದಿರುವವರು, ವೇದ ಶಾಸ್ತ್ರಗಳಲ್ಲಿ ಪರಿಣತರು.
ಶ್ಲೋಕ - 5 - ಸಂಸ್ಕೃತದಲ್ಲಿ :
ಹ್ರಸ್ವದೀರ್ಘಕೃಶಸ್ಥೂಲ ನಾಮಗೋತ್ರ ವಿವರ್ಜಿತ
ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಕಿರಿದು ಉದ್ದ ಸಪುರ ತೋರ ನಾಮ ಗೋತ್ರ ಮೀರಿದವಗೆ
ಪಂಚಭೂತ ಬೆಳಗುವನಿಗೆ ನಮೋ ದತ್ತಾತ್ರೇಯಗೆ
ವಿವರಣೆ :
ಹಿರಿದು, ಕಿರಿದುಗಳಿಂದ ಬಿಡುಗಡೆ ಹೊಂದಿರುವ ದತ್ತಾತ್ರೇಯರಿಗೆ ಸಹಸ್ರ ಪ್ರಣಾಮಗಳು, ಅಲ್ಲದೇ ಸಣ್ಣದು, ದೊಡ್ಡದು, ಹೆಸರು, ವಂಶ ಹಾಗೂ ಪ್ರಕಾಶಗಳಾದ ಪಂಚಭೂತಗಳಿಂದ ಬಿಡುಗಡೆಗೊಂಡಿರುವರು.
ಶ್ಲೋಕ - 6 - ಸಂಸ್ಕೃತದಲ್ಲಿ :
ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ
ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಯಜ್ಞದ ಫಲ ಭೋಕ್ತೃಗೆ ಅಗ್ನಿ ಸ್ವರೂಪಿಗೆ
ಯಜ್ಞರೂಪಧರನಿಗೆ ನಮೋ ದತ್ತಾತ್ರೇಯಗೆ
ವಿವರಣೆ :
ಯಜ್ಞದ ಹವಿಸ್ಸನ್ನು ಸೇವಿಸುವ ಹಾಗೂ ತಾನೇ ಯಜ್ಞನಾಗಿರುವ ದತ್ತಾತ್ರೇಯರಿಗೆ ಪ್ರಣಾಮಗಳು, ಹಾಗೂ ಸ್ವತಃ ಯಜ್ಞರೂಪವನ್ನು ಹೊಂದುವ , ಯಜ್ಞವನ್ನು ಪ್ರೀತಿಸುವ ಮಹಾ ಋಷಿಗಳು ದತ್ತಾತ್ರೇಯರು.
ಶ್ಲೋಕ - 7 - ಸಂಸ್ಕೃತದಲ್ಲಿ :
ಆದೌ ಬ್ರಹ್ಮಾ ಮಧ್ಯೇ ವಿಷ್ಣುರಂತೇ ದೇವಃ ಸದಾಶಿವಃ
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಮೊದಲು ಬ್ರಹ್ಮ ನಡುವೆ ವಿಷ್ಣು ಸದಾಶಿವನು ಕೊನೆಗೆ
ತ್ರಿಮೂರ್ತಿರೂಪ ಧರಿಸಿದವಗೆ ನಮೋ ದತ್ತಾತ್ರೇಯಗೆ
ವಿವರಣೆ :
ಪ್ರಾರಂಭದಲ್ಲಿ ಬ್ರಹ್ಮನು, ಮಧ್ಯದಲ್ಲಿ ವಿಷ್ಣುವು, ಹಾಗೂ ಕೊನೆಯಲ್ಲಿ ಸದಾಶಿವನು, ಉಳ್ಳ ಸುಂದರ ದೈವೀ ತ್ರಿಮೂರ್ತಿಗಳಿಂದ ಕೂಡಿದ ದತ್ತಾತ್ರೇಯರಿಗೆ ನನ್ನ ನಮನಗಳು.
ಶ್ಲೋಕ - 8 - ಸಂಸ್ಕೃತದಲ್ಲಿ :
ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ
ಜಿತೇಂದ್ರಿಯಜಿತಜ್ಞಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಭೋಗದ ನೆಲೆ ತಾನೆ ಭೋಗ ಯೋಗವನ್ನೆ ಮೆರೆವ ಯೋಗ್ಯ
ಪರಮಜ್ಞಾನಿ ಜಿತೇಂದ್ರಿಯಗೆ ನಮೋ ದತ್ತಾತ್ರೇಯಗೆ
ವಿವರಣೆ :
ಆನಂದದ ಮಂದಿರ, ಯಾರು ಆನಂದಿತರು, ಯಾರು ಯೋಗ ಪಟುವು, ಯಾರು ಇಂದ್ರಿಯಗಳನ್ನು ಜಯಿಸಿದ ಜ್ಞಾನಿಗಳೋ, ಆ ದತ್ತಾತ್ರೇಯರಿಗೆ ಸಹಸ್ರ ಪ್ರಣಾಮಗಳು.
ಶ್ಲೋಕ - 9 - ಸಂಸ್ಕೃತದಲ್ಲಿ :
ದಿಗಂಬರಾಯ ದಿವ್ಯಾಯ ದಿವ್ಯರೂಪಧರಾಯ ಚ
ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ದಿಗಂಬರಗೆ ದಿವ್ಯನಿಗೆ ದಿವ್ಯರೂಪಧರನಿಗೆ
ಸತ್ಯ ಶುದ್ಧ ಪರಬ್ರಹ್ಮ ನಮೋ ದತ್ತಾತ್ರೇಯಗೆ
ವಿವರಣೆ :
ದಿಕ್ಕುಗಳನ್ನೇ ವಸ್ತ್ರವನ್ನಾಗಿ ಧರಿಸಿರುವ , ದೈವೀ ಶಕ್ತಿಯುಳ್ಳ , ಯಾರು ದೈವೀರೂಪವನ್ನು ಕೊಡಬಲ್ಲರೋ, ಯಾರು ಸದಾ ಉದಯಿಸುತ್ತಿರುವ ದೈವೀ ಬ್ರಹ್ಮಮ್, ಆ ಮಹಾಮಹಿಮರಾದ ದತ್ತಾತ್ರೇಯರಿಗೆ ನನ್ನ ನಮಸ್ಕಾರಗಳು.
ಶ್ಲೋಕ - 10 - ಸಂಸ್ಕೃತದಲ್ಲಿ :
ಜಂಬೂದ್ವೀಪ ಮಹಾಕ್ಷೇತ್ರ ಮತಾಪುರನಿವಾಸಿನೇ
ಜಯಮಾನಸತಾಂ ದೇವ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಜಂಬೂದ್ವೀಪ ಪುಣ್ಯತಾಣ ಮತಾಪುರ ನಿವಾಸಿಗೆ
ಜಯವು ಮನದೊಳಿರುವ ದೇವ ನಮೋ ದತ್ತಾತ್ರೇಯಗೆ
ವಿವರಣೆ :
ಜಂಬೂದ್ವೀಪದ ಮಾತಾಪುರ ನಿವಾಸಿಯಾದ ದತ್ತಾತ್ರೇಯರಿಗೆ ನಮನಗಳು ಹಾಗೂ ಮನಸ್ಸುಗಳ ದೈವವಾದ ದತ್ತಮಹಾರಾಜರಿಗೆ ಜಯವಾಗಲಿ.
ಶ್ಲೋಕ - 11 - ಸಂಸ್ಕೃತದಲ್ಲಿ :
ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ
ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಹಳ್ಳಿಮನೆಗಳಲ್ಲಿ ತಿರುಪೆ ಹೇಮಪಾತ್ರೆ ಕರದೊಳು
ಎಲ್ಲ ಸ್ವಾದವುಳ್ಳ ಭಿಕ್ಷೆ ನಮೋ ದತ್ತಾತ್ರೇಯಗೆ
ವಿವರಣೆ :
ಹಳ್ಳಿಗಳಲ್ಲಿನ ಮನೆಗಳಿಂದ ಅನೇಕ ವಿಧದ ರುಚಿಗಳುಳ್ಳ ಭಿಕ್ಷೆಯನ್ನು ಬಂಗಾರದ ಪಾತ್ರೆಯಲ್ಲಿ ಪಡೆದುಕೊಂಡ ದತ್ತಾತ್ರೇಯರಿಗೆ ನಮನಗಳು.
ಶ್ಲೋಕ - 12 - ಸಂಸ್ಕೃತದಲ್ಲಿ :
ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ
ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಬ್ರಹ್ಮಜ್ಞಾನವೆ ಮುದ್ರೆ ಬುವಿಯು ಗಗನ ವಸ್ತ್ರ
ಜ್ಞಾನವೆ ಘನವಾದವಗೆ ನಮೋ ದತ್ತಾತ್ರೇಯಗೆ
ವಿವರಣೆ :
ಬ್ರಹ್ಮಜ್ಞಾನ ಮುದ್ರೆಯನ್ನು ಪ್ರಕಟಿಸುವ , ಹಾಗೂ ಯಾರ ವಸ್ತ್ರವು ಭೂಮಿ ಮತ್ತು ಆಕಾಶವೇ ಆಗಿದೆಯೋ , ಯಾರು ಪರಿಶುದ್ಧವಾದ ಜ್ಞಾನವನ್ನು ಮಾತ್ರ ಬೋಧಿಸುವರೋ, ಆ ದತ್ತಮಹಾರಾಜರಿಗೆ ಅನಂತಾನಂತ ವಂದನೆಗಳು.
ಶ್ಲೋಕ - 13 - ಸಂಸ್ಕೃತದಲ್ಲಿ :
ಅವಧೂತ ಸದಾನಂದ ಪರಬ್ರಹ್ಮಸ್ವರೂಪಿಣೇ
ವಿದೇಹದೇಹರೂಪಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಅವಧೂತ ಸದಾನಂದಗೆ ಪರಬ್ರಹ್ಮ ಸ್ವರೂಪಿಗೆ
ದೇಹರಹಿತ ರೂಪಗೆ ನಮೋ ದತ್ತಾತ್ರೇಯಗೆ
ವಿವರಣೆ :
ಯಾರು ಅವಧೂತನೋ, ಯಾರಿಗೆ ದಿವ್ಯ ಬ್ರಹ್ಮನ ರೂಪವಿರುವುದೋ, ಮತ್ತು ಶರೀರ ರಹಿತ ಶರೀರ ರೂಪವಿರುವುದೋ, ಆ ದತ್ತಾತ್ರೇಯರಿಗೆ ನಮನಗಳು.
ಶ್ಲೋಕ - 14 - ಸಂಸ್ಕೃತದಲ್ಲಿ :
ಸತ್ಯರೂಪ ಸದಾಚಾರ ಸತ್ಯಧರ್ಮಪರಾಯಣ
ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಸತ್ಯರೂಪ ಸದಾಚಾರ ಸತ್ಯಧರ್ಮ ಪರಾಯಣಗೆ
ಸತ್ಯದಿ ನೆಲೆನಿಂತವನಿಗೆ ನಮೋ ದತ್ತಾತ್ರೇಯಗೆ
ವಿವರಣೆ :
ಯಾರಿಗೆ ಸತ್ಯ ರೂಪವಿರುವುದೋ, ಯಾರು ಒಳ್ಳೆಯ ವರ್ತನೆಯನ್ನೇ ಅನುಸರಿಸುವರೋ, ಯಾರು ನೈಜ ಧರ್ಮದ ಶಕ್ತಿಯುತ ಅನುಯಾಯಿಗಳೋ , ಮತ್ತು ಸಾಮಾನ್ಯವಾಗಿ ಯಾವಾಗಲೂ ಸತ್ಯವನ್ನೇ ಅವಲಂಬಿಸಿರುತ್ತಾರೋ, ಆ ದತ್ತಾತ್ರೇಯರಿಗೆ ನಮಸ್ಕಾರಗಳು.
ಶ್ಲೋಕ - 15 - ಸಂಸ್ಕೃತದಲ್ಲಿ :
ಶೂಲಹಸ್ತಗದಾಪಾಣೇ ವನಮಾಲಾಸುಕಂಧರ
ಯಜ್ಞಸೂತ್ರಧರಬ್ರಹ್ಮನ್ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಕರದಿ ಶೂಲ ಗದೆಯ ಪಿಡಿದು ಮಗಮಗಿಪ ಮಾಲೆ ತೊಟ್ಟವಗೆ
ಯಜ್ಞಸೂತ್ರಧಾರನಿಗೆ ನಮೋ ದತ್ತಾತ್ರೇಯಗೆ
ವಿವರಣೆ :
ಯಾರು ತಮ್ಮ ಹಸ್ತಗಳಲ್ಲಿ ಗದೆ ಹಾಗೂ ಶೂಲಗಳನ್ನು ಹಿಡಿದುಕೊಂಡಿರುವರೋ, ಯಾರು ಕಾಡಿನ ಸುವಾಸನಾಭರಿತ ಪುಷ್ಪಮಾಲೆಯನ್ನು ಧರಿಸಿರುವರೋ, ಮತ್ತು ಯಾರು ಬ್ರಹ್ಮ ಯಜ್ಞವನ್ನು ಸಂಘಟಿಸುತ್ತಾರೋ, ಆ ದತ್ತಮಹಾರಾಜರಿಗೆ ಪ್ರಣಾಮಗಳು.
ಶ್ಲೋಕ - 16 - ಸಂಸ್ಕೃತದಲ್ಲಿ :
ದತ್ತ ವಿದ್ಯಾಢ್ಯ ಲಕ್ಷ್ಮೀಶ ದತ್ತಸ್ವಾತ್ಮಸ್ವರೂಪಿಣೇ
ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ವಿದ್ಯಾನಿಧಿಗೆ ಲಕುಮಿಪತಿಗೆ ದತ್ತನಾತ್ಮ ರೂಪಗೆ
ಗುಣ ನಿರ್ಗುಣ ರೂಪನಿಗೆ ನಮೋ ದತ್ತಾತ್ರೇಯಗೆ
ವಿವರಣೆ :
ಯಾರು ಜ್ಞಾನವನ್ನು ಕರುಣಿಸುತ್ತಾರೋ ಯಾರು ಲಕ್ಷ್ಮಿಯ ಪತಿಯೋ ಯಾರು ಸ್ವಯಂ ಆತ್ಮಸ್ವರೂಪಿಯೋ ಯಾರು ಗುಣಗಳ ಹಾಗೂ ಗುಣರಹಿತ ಆಕಾರವನ್ನು ಹೊಂದಿರುವರೋ ಆ ದತ್ತಾತ್ರೇಯರಿಗೆ ಪ್ರಣಾಮಗಳು.
ಶ್ಲೋಕ - 17 - ಸಂಸ್ಕೃತದಲ್ಲಿ : ಫಲಶ್ರುತಿ :
ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾದಾಯಕಂ
ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋsಸ್ತುತೇ
ಕನ್ನಡದಲ್ಲಿ :
ಶತ್ರುನಾಶಕವೀ ಸ್ತೋತ್ರ ಜ್ಞಾನ ವಿಜ್ಞಾನ ದಾಯಕ
ಎಲ್ಲ ಪಾಪ ನೀಗುವುದಿದು ನಮೋ ದತ್ತಾತ್ರೇಯಗೆ
ವಿವರಣೆ :
ಈ ಸ್ತೋತ್ರ ಪಾರಾಯಣವು ಶತ್ರು ನಾಶವನ್ನು ಮಾಡುತ್ತದೆ, ಧಾರ್ಮಿಕ ಮತ್ತು ವೈಜ್ಞಾನಿಕ ವಿವೇಚನೆಯನ್ನು ನೀಡುತ್ತದೆ, ಮತ್ತು ಎಲ್ಲ ಪಾಪಗಳನ್ನು ಪರಿಹರಿಸುತ್ತದೆ. ಆ ದತ್ತಾತ್ರೇಯರಿಗೆ ಸಹಸ್ರ ನಮನಗಳು
***
No comments:
Post a Comment