Monday 7 October 2019

ಕನಕಧಾರ ಸ್ತೋತ್ರ ಆದಿ ಶಂಕರಾಚಾರ್ಯ ಕೃತಂ कनकधारा स्तोत्रम् KANAKADHARA STOTRA by adi shankaracharya ಅಂಗಂ ಹರೇಃ angam hareh





Kanaka Dhaaraa Stotram   


ರಚನ: ಆದಿ ಶಂಕರಾಚಾರ್ಯ

ವಂದೇ ವಂದಾರು ಮಂದಾರಮಿಂದಿರಾನಂದ ಕಂದಲಂ
ಅಮಂದಾನಂದ ಸಂದೋಹ ಬಂಧುರಂ ಸಿಂಧುರಾನನಮ್

ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀ 
ಭೃಂಗಾಂಗನೇವ ಮುಕುಳಾಭರಣಂ ತಮಾಲಮ್ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ 
ಮಾಂಗಲ್ಯದಾಸ್ತು ಮಮ ಮಂಗಳದೇವತಾಯಾಃ || 1 ||

ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ 
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ 
ಸಾ ಮೇ ಶ್ರಿಯಂ ದಿಶತು ಸಾಗರ ಸಂಭವಾ ಯಾಃ || 2 ||

ಆಮೀಲಿತಾಕ್ಷಮಧಿಗ್ಯಮ ಮುದಾ ಮುಕುಂದಮ್ 
ಆನಂದಕಂದಮನಿಮೇಷಮನಂಗ ತಂತ್ರಮ್ |
ಆಕೇಕರಸ್ಥಿತಕನೀನಿಕಪಕ್ಷ್ಮನೇತ್ರಂ 
ಭೂತ್ಯೈ ಭವನ್ಮಮ ಭುಜಂಗ ಶಯಾಂಗನಾ ಯಾಃ || 3 ||

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ 
ಹಾರಾವಳೀವ ಹರಿನೀಲಮಯೀ ವಿಭಾತಿ |
ಕಾಮಪ್ರದಾ ಭಗವತೋ‌உಪಿ ಕಟಾಕ್ಷಮಾಲಾ 
ಕಳ್ಯಾಣಮಾವಹತು ಮೇ ಕಮಲಾಲಯಾ ಯಾಃ || 4 ||

ಕಾಲಾಂಬುದಾಳಿ ಲಲಿತೋರಸಿ ಕೈಟಭಾರೇಃ 
ಧಾರಾಧರೇ ಸ್ಫುರತಿ ಯಾ ತಟಿದಂಗನೇವ |
ಮಾತುಸ್ಸಮಸ್ತಜಗತಾಂ ಮಹನೀಯಮೂರ್ತಿಃ 
ಭದ್ರಾಣಿ ಮೇ ದಿಶತು ಭಾರ್ಗವನಂದನಾ ಯಾಃ || 5 ||

ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ಪ್ರಭಾವಾತ್ 
ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಥಂ 
ಮಂದಾಲಸಂ ಚ ಮಕರಾಲಯ ಕನ್ಯಕಾ ಯಾಃ || 6 ||

ವಿಶ್ವಾಮರೇಂದ್ರ ಪದ ವಿಭ್ರಮ ದಾನದಕ್ಷಮ್ 
ಆನಂದಹೇತುರಧಿಕಂ ಮುರವಿದ್ವಿಷೋ‌உಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಥಂ
ಇಂದೀವರೋದರ ಸಹೋದರಮಿಂದಿರಾ ಯಾಃ || 7 ||

ಇಷ್ಟಾ ವಿಶಿಷ್ಟಮತಯೋಪಿ ಯಯಾ ದಯಾರ್ದ್ರ 
ದೃಷ್ಟ್ಯಾ ತ್ರಿವಿಷ್ಟಪಪದಂ ಸುಲಭಂ ಲಭಂತೇ |
ದೃಷ್ಟಿಃ ಪ್ರಹೃಷ್ಟ ಕಮಲೋದರ ದೀಪ್ತಿರಿಷ್ಟಾಂ 
ಪುಷ್ಟಿಂ ಕೃಷೀಷ್ಟ ಮಮ ಪುಷ್ಕರ ವಿಷ್ಟರಾ ಯಾಃ || 8 ||

ದದ್ಯಾದ್ದಯಾನು ಪವನೋ ದ್ರವಿಣಾಂಬುಧಾರಾಂ
ಅಸ್ಮಿನ್ನಕಿಂಚನ ವಿಹಂಗ ಶಿಶೌ ವಿಷಣ್ಣೇ |
ದುಷ್ಕರ್ಮಘರ್ಮಮಪನೀಯ ಚಿರಾಯ ದೂರಂ 
ನಾರಾಯಣ ಪ್ರಣಯಿನೀ ನಯನಾಂಬುವಾಹಃ || 9 ||

ಗೀರ್ದೇವತೇತಿ ಗರುಡಧ್ವಜ ಸುಂದರೀತಿ 
ಶಾಕಂಬರೀತಿ ಶಶಿಶೇಖರ ವಲ್ಲಭೇತಿ |
ಸೃಷ್ಟಿ ಸ್ಥಿತಿ ಪ್ರಳಯ ಕೇಳಿಷು ಸಂಸ್ಥಿತಾಯೈ 
ತಸ್ಯೈ ನಮಸ್ತ್ರಿಭುವನೈಕ ಗುರೋಸ್ತರುಣ್ಯೈ || 10 ||

ಶ್ರುತ್ಯೈ ನಮೋ‌உಸ್ತು ಶುಭಕರ್ಮ ಫಲಪ್ರಸೂತ್ಯೈ 
ರತ್ಯೈ ನಮೋ‌உಸ್ತು ರಮಣೀಯ ಗುಣಾರ್ಣವಾಯೈ |
ಶಕ್ತ್ಯೈ ನಮೋ‌உಸ್ತು ಶತಪತ್ರ ನಿಕೇತನಾಯೈ 
ಪುಷ್ಟ್ಯೈ ನಮೋ‌உಸ್ತು ಪುರುಷೋತ್ತಮ ವಲ್ಲಭಾಯೈ || 11 ||

ನಮೋ‌உಸ್ತು ನಾಳೀಕ ನಿಭಾನನಾಯೈ 
ನಮೋ‌உಸ್ತು ದುಗ್ಧೋದಧಿ ಜನ್ಮಭೂಮ್ಯೈ |
ನಮೋ‌உಸ್ತು ಸೋಮಾಮೃತ ಸೋದರಾಯೈ 
ನಮೋ‌உಸ್ತು ನಾರಾಯಣ ವಲ್ಲಭಾಯೈ || 12 ||

ನಮೋ‌உಸ್ತು ಹೇಮಾಂಬುಜ ಪೀಠಿಕಾಯೈ
ನಮೋ‌உಸ್ತು ಭೂಮಂಡಲ ನಾಯಿಕಾಯೈ |
ನಮೋ‌உಸ್ತು ದೇವಾದಿ ದಯಾಪರಾಯೈ
ನಮೋ‌உಸ್ತು ಶಾರ್ಂಗಾಯುಧ ವಲ್ಲಭಾಯೈ || 13 ||

ನಮೋ‌உಸ್ತು ದೇವ್ಯೈ ಭೃಗುನಂದನಾಯೈ 
ನಮೋ‌உಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋ‌உಸ್ತು ಲಕ್ಷ್ಮ್ಯೈ ಕಮಲಾಲಯಾಯೈ
ನಮೋ‌உಸ್ತು ದಾಮೋದರ ವಲ್ಲಭಾಯೈ || 14 ||

ನಮೋ‌உಸ್ತು ಕಾಂತ್ಯೈ ಕಮಲೇಕ್ಷಣಾಯೈ
ನಮೋ‌உಸ್ತು ಭೂತ್ಯೈ ಭುವನಪ್ರಸೂತ್ಯೈ |
ನಮೋ‌உಸ್ತು ದೇವಾದಿಭಿರರ್ಚಿತಾಯೈ
ನಮೋ‌உಸ್ತು ನಂದಾತ್ಮಜ ವಲ್ಲಭಾಯೈ || 15 ||

ಸಂಪತ್ಕರಾಣಿ ಸಕಲೇಂದ್ರಿಯ ನಂದನಾನಿ 
ಸಾಮ್ರಾಜ್ಯ ದಾನವಿಭವಾನಿ ಸರೋರುಹಾಕ್ಷಿ |
ತ್ವದ್ವಂದನಾನಿ ದುರಿತಾ ಹರಣೋದ್ಯತಾನಿ 
ಮಾಮೇವ ಮಾತರನಿಶಂ ಕಲಯಂತು ಮಾನ್ಯೇ || 16 ||

ಯತ್ಕಟಾಕ್ಷ ಸಮುಪಾಸನಾ ವಿಧಿಃ 
ಸೇವಕಸ್ಯ ಸಕಲಾರ್ಥ ಸಂಪದಃ |
ಸಂತನೋತಿ ವಚನಾಂಗ ಮಾನಸೈಃ 
ತ್ವಾಂ ಮುರಾರಿಹೃದಯೇಶ್ವರೀಂ ಭಜೇ || 17 ||

ಸರಸಿಜನಿಲಯೇ ಸರೋಜಹಸ್ತೇ 
ಧವಳತಮಾಂಶುಕ ಗಂಧಮಾಲ್ಯಶೋಭೇ |
ಭಗವತಿ ಹರಿವಲ್ಲಭೇ ಮನೋಙ್ಞೇ
ತ್ರಿಭುವನಭೂತಿಕರೀ ಪ್ರಸೀದಮಹ್ಯಮ್ || 18 ||

ದಿಗ್ಘಸ್ತಿಭಿಃ ಕನಕ ಕುಂಭಮುಖಾವಸೃಷ್ಟ 
ಸ್ವರ್ವಾಹಿನೀ ವಿಮಲಚಾರುಜಲಾಪ್ಲುತಾಂಗೀಮ್ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ 
ಲೋಕಧಿನಾಥ ಗೃಹಿಣೀಮಮೃತಾಬ್ಧಿಪುತ್ರೀಮ್ || 19 ||

ಕಮಲೇ ಕಮಲಾಕ್ಷ ವಲ್ಲಭೇ ತ್ವಂ 
ಕರುಣಾಪೂರ ತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ 
ಪ್ರಥಮಂ ಪಾತ್ರಮಕೃತಿಮಂ ದಯಾಯಾಃ || 20 ||

ದೇವಿ ಪ್ರಸೀದ ಜಗದೀಶ್ವರಿ ಲೋಕಮಾತಃ
ಕಳ್ಯಾಣಗಾತ್ರಿ ಕಮಲೇಕ್ಷಣ ಜೀವನಾಥೇ |
ದಾರಿದ್ರ್ಯಭೀತಿಹೃದಯಂ ಶರಣಾಗತಂ ಮಾಂ
ಆಲೋಕಯ ಪ್ರತಿದಿನಂ ಸದಯೈರಪಾಂಗೈಃ || 21 ||

ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ 
ತ್ರಯೀಮಯೀಂ ತ್ರಿಭುವನಮಾತರಂ ರಮಾಮ್ |
ಗುಣಾಧಿಕಾ ಗುರುತುರ ಭಾಗ್ಯ ಭಾಗಿನಃ
ಭವಂತಿ ತೇ ಭುವಿ ಬುಧ ಭಾವಿತಾಶಯಾಃ || 22 ||

ಸುವರ್ಣಧಾರಾ ಸ್ತೋತ್ರಂ ಯಚ್ಛಂಕರಾಚಾರ್ಯ ನಿರ್ಮಿತಂ 
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಕುಬೇರಸಮೋ ಭವೇತ್ ||
****


कनकधारा स्तोत्रम् 

अङ्गं हरेः पुलकभूषणमाश्रयन्ती
भृङ्गाङ्गनेव मुकुलाभरणं तमालम् ।
अङ्गीकृताखिलविभूतिरपाङ्गलीला
माङ्गल्यदास्तु मम मङ्गळदेवतायाः ॥ १॥

मुग्धा मुहुर्विदधती वदने मुरारेः
प्रेमत्रपाप्रणिहितानि गतागतानि ।
माला दृशोर्मधुकरीव महोत्पले या
सा मे श्रियं दिशतु सागरसम्भवायाः ॥ २॥

आमीलिताक्षमधिगम्य मुदा मुकुन्दं
आनन्दकन्दमनिमेषमनङ्गतन्त्रम् ।
आकेकरस्थितकनीनिकपक्ष्मनेत्रं
भूत्यै भवेन्मम भुजङ्गशयाङ्गनायाः ॥ ३॥

बाह्वन्तरे मधुजितः श्रितकौस्तुभे या
हारावलीव हरिनीलमयी विभाति ।
कामप्रदा भगवतोऽपि कटाक्षमाला
कल्याणमावहतु मे कमलालयायाः ॥ ४॥

कालाम्बुदाळिललितोरसि कैटभारेः
धाराधरे स्फुरति या तडिदङ्गनेव ।
मातुस्समस्तजगतां महनीयमूर्तिः
भद्राणि मे दिशतु भार्गवनन्दनायाः ॥ ५॥

प्राप्तं पदं प्रथमतः खलु यत्प्रभावान्-
माङ्गल्यभाजि मधुमाथिनि मन्मथेन ।
मय्यापतेत्तदिह मन्थरमीक्षणार्धं
मन्दालसं च मकरालयकन्यकायाः ॥ ६॥

विश्वामरेन्द्रपदविभ्रमदानदक्षं
आनन्दहेतुरधिकं मुरविद्विषोऽपि ।
ईषन्निषीदतु मयि क्षणमीक्षणार्ध-
मिन्दीवरोदरसहोदरमिन्दिरायाः ॥ ७॥

इष्टा विशिष्टमतयोऽपि यया दयार्द्र
दृष्ट्या त्रिविष्टपपदं सुलभं लभन्ते ।
दृष्टिः प्रहृष्टकमलोदरदीप्तिरिष्टां
पुष्टिं कृषीष्ट मम पुष्करविष्टरायाः ॥ ८॥

दद्याद्दयानुपवनो द्रविणाम्बुधारां
अस्मिन्नकिञ्चनविहङ्गशिशौ विषण्णे ।
दुष्कर्मघर्ममपनीय चिराय दूरं
नारायणप्रणयिनीनयनाम्बुवाहः ॥ ९॥

धीर्देवतेति गरुडध्वजसुन्दरीति   var  गरुडध्वजभामिनीति
शाकम्भरीति शशिशेखरवल्लभेति ।
सृष्टिस्थितिप्रलयकेलिषु संस्थितायै
तस्यै नमस्त्रिभुवनैकगुरोस्तरुण्यै ॥ १०॥

श्रुत्यै नमोऽस्तु शुभकर्मफलप्रसूत्यै
रत्यै नमोऽस्तु रमणीयगुणार्णवायै ।
शक्त्यै नमोऽस्तु शतपत्रनिकेतनायै
पुष्ट्यै नमोऽस्तु पुरुषोत्तमवल्लभायै ॥ ११॥

नमोऽस्तु नालीकनिभाननायै
नमोऽस्तु दुग्धोदधिजन्मभूम्यै ।
नमोऽस्तु सोमामृतसोदरायै
नमोऽस्तु नारायणवल्लभायै ॥ १२॥

नमोऽस्तु हेमाम्बुजपीठिकायै
नमोऽस्तु भूमण्डलनायिकायै ।
नमोऽस्तु देवादिदयापरायै
नमोऽस्तु शार्ङ्गायुधवल्लभायै ॥ १३॥

नमोऽस्तु देव्यै भृगुनन्दनायै
नमोऽस्तु विष्णोरुरसि स्थितायै ।
नमोऽस्तु लक्ष्म्यै कमलालयायै
नमोऽस्तु दामोदरवल्लभायै ॥ १४॥

नमोऽस्तु कान्त्यै कमलेक्षणायै
नमोऽस्तु भूत्यै भुवनप्रसूत्यै ।
नमोऽस्तु देवादिभिरर्चितायै
नमोऽस्तु नन्दात्मजवल्लभायै ॥ १५॥

सम्पत्कराणि सकलेन्द्रियनन्दनानि
साम्राज्यदानविभवानि सरोरुहाक्षि ।  var  सरोरुहाणि
त्वद्वन्दनानि दुरिताहरणोद्यतानि
मामेव मातरनिशं कलयन्तु मान्ये ॥ १६॥

यत्कटाक्षसमुपासनाविधिः
सेवकस्य सकलार्थसम्पदः ।
सन्तनोति वचनाङ्गमानसैः
त्वां मुरारिहृदयेश्वरीं भजे ॥ १७॥

सरसिजनिलये सरोजहस्ते
धवळतमांशुकगन्धमाल्यशोभे ।
भगवति हरिवल्लभे मनोज्ञे
त्रिभुवनभूतिकरि प्रसीद मह्यम् ॥ १८॥

दिग्घस्तिभिः कनककुम्भमुखावसृष्ट
स्वर्वाहिनी विमलचारुजलप्लुताङ्गीम् ।
प्रातर्नमामि जगतां जननीमशेष
लोकाधिनाथगृहिणीममृताब्धिपुत्रीम् ॥ १९॥

कमले कमलाक्षवल्लभे त्वं
करुणापूरतरङ्गितैरपाङ्गैः ।
अवलोकय मामकिञ्चनानां
प्रथमं पात्रमकृत्रिमं दयायाः ॥ २०॥

देवि प्रसीद जगदीश्वरि लोकमातः
कल्यानगात्रि कमलेक्षणजीवनाथे ।
दारिद्र्यभीतिहृदयं शरणागतं मां
आलोकय प्रतिदिनं सदयैरपाङ्गैः ॥ २१॥

स्तुवन्ति ये स्तुतिभिरमूभिरन्वहं
त्रयीमयीं त्रिभुवनमातरं रमाम् ।
गुणाधिका गुरुतरभाग्यभागिनो
भवन्ति ते भुवि बुधभाविताशयाः ॥ २२॥

॥ इति श्रीमद् शङ्कराचार्यकृत
श्री कनकधारास्तोत्रं सम्पूर्णम् ॥

अयं स्तवः स्वामिना शङ्करभगवत्पादेन ब्रह्मव्रतस्थेन कालटिनाम्नि
स्वग्राम एवाकिञ्चन्यपरिखिन्नाया द्विजगृहिण्या निर्धनत्वमार्जनाय
निरमायि । तेन स्तवेन प्रीता लक्ष्मीर्विप्रं विपुलधनदानेनाप्रीणयदिति
शञ्करविजयतः समाधिगम्यते, ``स मुनिर्मुरजित्कुटुम्बिनीं
पदचित्रैर्नवनीत कोमलैः ंअधुरैरूपतस्थिवां- स्तवैः''
इत्यादिना ॥ एते श्रीमन्मातुरभ्यर्थनया स्तवमेतमतनिषतेति
कालटिग्रामनिकटवर्तिनां विदुषां मतम् । तदारभ्य कर्णाकर्णिकया

तथानुश्रुतम् ।
**********

ಶ್ರೀ ಶಂಕರಾಚಾರ್ಯರು ರಚಿಸಿರುವ ಕನಕಧಾರ ಸ್ತೋತ್ರವು ಶ್ರೀ ಮಹಾಲಕ್ಷ್ಮಿಯನ್ನು ಸ್ತುತಿ ಮಾಡುತ್ತದೆ.ಈ ಸ್ತೋತ್ರವನ್ನು ಪಠಿಸಿದರೆ ಕಷ್ಟಗಳು ಹೋಗಿ, ಐಶ್ವರ್ಯ, ಸಂಪತ್ತು, ಅಭಿವೃದ್ಧಿ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಮಹಾಲಕ್ಷ್ಮಿಯ ಭಕ್ತರುಗಳಲ್ಲಿ ಇದೆ.ಇಲ್ಲಿ ‘ಕನ’ ಎಂದರೆ ಬಂಗಾರ ಮತ್ತು ‘ಧಾರ” ಎಂದರೆ ಧಾರಣೆ ಅಥವಾ ಹಿಡಿದಿರುವಾಕೆ ಎಂದರ್ಥ.

ಇದು ಮಹಾಲಕ್ಷ್ಮಿಯನ್ನು ಹೊಗಳಲು ಇರುವಂತಹ ಸ್ತೋತ್ರವಾಗಿದ್ದು ಕಯ್ಯಲ್ಲಿ ಚಿನ್ನವನ್ನು ಹಿಡಿದಿರುವಳೇ ಮಹಾಲಕ್ಷಿ ಎಂದು ವರ್ಣಿಸುತ್ತದೆ.
ಈ ಸ್ತೋತ್ರವನ್ನು ದಿನ ಪಠಿಸಿದರೆ, ಬಡತನ ನೀಗುವುದಂತೆ.ಶಂಕರಾಚಾರ್ಯರ ಬಾಲ್ಯ ಜೀವನದ ಶಿಕ್ಷಣ ದಿನಗಳಲ್ಲಿ ಗುರುಕುಲ ಪದ್ಧತಿಯಂತೆ ವಿದ್ಯಾರ್ಥಿಗಳು ಊಟಕ್ಕೆ ಬಿಕ್ಷೆ ಬೇಡಿ ತರಬೇಕಾಗಿತ್ತು.

ಹೀಗೊಂದುದಿನ ಪುಟ್ಟ ಶಂಕರ ಒಂದು ಮನೆಯ ಮುಂದೆ ನಿಂತು “ಭವತಿ ಭಿಕ್ಷಾಂದೇಹಿ” ಎಂದ. ಮನೆ ಯಾಕೆ ಕಡು ಬಡವಳು. ಎರಡುದಿನದಿಂದ ಊಟಮಾಡದೆ ನಿಶ್ಯಕ್ತಳಾಗಿದ್ದಳು.

”ಬಾಲಕ ಶಂಕರಾ, ನಿನ್ನಂತಹ ವಟುಗಳನ್ನು ಬರಿಗೈಲಿ ಕಳುಹಿಸಬಾರದು. ನನ್ನ ಮನೆಯೊಳಗೆ ಗಿಡದಿಂದ ಕೊಯಿದಿಟ್ಟ ಒಂದು ನೆಲ್ಲಿಕಾಯಿ ಮಾತ್ರವೇ ಇದೆ. ಅದನ್ನಾದರೂ ನಿನಗೆ ಭಿಕ್ಷೆನೀಡುತ್ತೇನೆ” . ಎಂದು ಶಂಕರನಿಗೆ ನೀಡಿದಳು.

ಭಿಕ್ಷೆ ಪಡೆದ ಶಂಕರನ ಮನಸ್ಸು ನೊಂದಿತು. ಎಂತಹ ದುಸ್ಥಿತಿ ಈಕೆಯದು. ಮನೆಯೋ ಮುರುಕು ಗುಡಿಸಲು!. ಮನಸ್ಸೋ ನಿರ್ಮಲ ಸೌಧ!!.ಈಕೆಯನ್ನು ಹೇಗಾದರೂ ಮಾಡಿ ಉದ್ಧರಿಸಬೇಕೆಂದು ಮಹಾಲಕ್ಷ್ಮಿಗೆ ಮೊರೆಯಿಟ್ಟು ಸ್ತುತಿಸಿದ.

 ಸ್ವತಃ ಶ್ಲೋಕ ರಚಿಸಿ ಮಹಾಲಕ್ಷ್ಮಿಯನ್ನು ಅನನ್ಯ ಬೇಡಿಕೊಂಡ.ಏನಾಶ್ಚರ್ಯ! ಲಕ್ಷ್ಮಿ ಪ್ರತ್ಯಕ್ಷಳಾಗಿ ಆ ಬಡವಿಯ ಮನೆಗೆ ಬಂಗಾರದ ನೆಲ್ಲಿಕಾಯಿಯನ್ನು ಸುರಿಸಿದಳು. ಈ ಸ್ತೋತ್ರಕ್ಕೆ ಕನಕಧಾರ ಸ್ತೋತ್ರ ಎಂದು ಹೆಸರಾಯಿತು.


ಶ್ರೀ ಜಗದ್ಗುರು ಆದಿಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರಂ - ಕನಕಧಾರಾ ಸ್ತೋತ್ರದ ವಿವರಣೆ

ಅಂಗಂ ಹರೇ ಪುಲಕಭೂಷಣಮಾಶ್ರಯಂತೀ 
ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲವಿಭೂತಿರಪಾಂಗಲೀಲಾ 
ಮಾಂಗಲ್ಯದಾಸ್ತು ಮಮ ಮಂಗಳದೇವತಾಯಾ || 1 ||

ತಮಾಲವೆಂಬ ಮರದ ಆಭರಣಪ್ರಾಯವಾದ ಮೊಗ್ಗನ್ನು ಆಶ್ರಯಿಸಿರುವ ಹೆಣ್ಣುದುಂಬಿಯಂತೆ – ಶ್ರೀ ಮಹಾವಿಷ್ಣುವಿನ ರೋಮಾಂಚಗೊಂಡ ಶರೀರವನ್ನು ಅವಲಂಬಿಸಿರುವ, ಮಂಗಳದೇವತೆಯಾದ ( ಮಹಾಲಕ್ಷ್ಮಿಯ ), ಸಮಸ್ತ ಐಶ್ವರ್ಯಗಳನ್ನೂ ಅಡಗಿಸಿಕೊಂಡಿರುವ ಕುಡಿಗಣ್ಣಿನ ನೋಟಗಳೆಂಬ ಲೀಲೆಯು ನನಗೆ ಮಂಗಳವನ್ನೀಯಲಿ.

ಮುಗ್ಧಾಮುಹುರ್ವಿದಧತೀ ವದನೇ ಮುರಾರೇ |
ಪ್ರೇಮತ್ರಪಾಪ್ರಣೀಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರಸಂಭವಾಯಾಃ || 2 ||

ಶ್ರೀ ಮಹಾವಿಷ್ಣುವಿನ ಮುಖದ ಕಡೆಗೆ ಪ್ರೇಮಪೂರ್ವಕವಾದ ನಾಚಿಕೆಯಿಂದ ನೋಟವನ್ನು ಬೀರುತ್ತಾ ಹಾಗೂ ಹಿಂದೆಗೆಯುತ್ತಾ ಮುಗ್ದವಾದ ರೀತಿಯಿಂದ ಚಲಿಸುತ್ತಿರುವ ಎರಡು ದೊಡ್ಡನೈದಿಲೆಗಳಂತೆ ಇರುವ – ಹಾಗೂ ಹೂಮಾಲೆಯನ್ನು ನೋಡುತ್ತಿರುವ ದುಂಬಿಯಂತೆ ಇರುವ ಸಾಗರಕನ್ನಿಕೆಯಾದ ಲಕ್ಷ್ಮಿಯ ಕಟಾಕ್ಷಗಳು ನನಗೆ ಐಶ್ವರ್ಯವನ್ನುಂಟು ಮಾಡಲಿ

ಅಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದಂ –
ಆನಂದಕಂದಮನಿಮೇಷಮನಂಗತಂತ್ರಮ್ |
ಅಕೇಕರಸ್ಥಿತಕನೀನಿಕಪಕ್ಷ್ಮನೇತ್ರಮ್
ಭೂತ್ಯೈಭವೇನ್ಮಮ ಭುಜಂಗಶಯಾಂಗನಾಯಾಃ || 3 ||

ಸ್ವಲ್ಪವೇ ಮುಚ್ಚಿದ ಕಣ್ಣುಳ್ಳ ಹಾಗೂ ಆನಂದಭರಿತನೂ ರೆಪ್ಪೆಯಾಡಿಸದವನೂ ಮನ್ಮಥಾವಿಷ್ಟನೂ ಆದ ಮುಕುಂದ – ವಿಷ್ಣುನನ್ನು ಅರಿತವಳಾದ ನಾಗಶಯನನ ಮಡದಿಯಾದ ಲಕ್ಷ್ಮಿಯ ಕುಡಿಗಣ್ಣಿನ ನೋಟವನ್ನು ಅವಲಂಬಿಸಿರುವ ರೆಪ್ಪೆಗಳುಳ್ಳ ನೇತ್ರವು ನನ್ನ ಐಶ್ವರ್ಯ ಸಂವೃದ್ಧಿಗೆ ಕಾರಣವಾಗಲಿ.

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀ ಚ ಹರಿನೀಲಮಣೀ ವಿಭಾತಿ |
ಕಾಮಪ್ರದಾ ಭವತೋಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಲಯಾಯಾಃ || 4 ||

ಮಧುಸೂದನನಾದ ವಿಷ್ಣುವಿನ ತೋಳುಗಳ ನಡುವೆ ಹಾಯ್ದ ಕೌಸ್ತುಭ ರತ್ನವನ್ನು ಆಶ್ರಯಿಸಿರುವ ಹಸಿರುಮಿಶ್ರವಾದ ಎರಡು ನೀಲಮಣಿಗಳುಳ್ಳ ಯಾವ ಹಾರವು ಹೋಳೆಯುತ್ತಿದೆಯೋ, ಮತ್ತು ಭಗವಂತನ ಹಾಗೂ ಕಮಲವಾಸಿನಿಯಾದ ದೇವಿಯ ಕುಡಿಗಣ್ಣುಗಳ ನೋಟಗಳ ಸಾಲು ( ಭಕ್ತರಿಗೆ ) ಇಷ್ಟಾರ್ಥಪ್ರದವಾಗಿ ಶೋಭಿಸುತ್ತಿರುವುದೋ – ಅದು ಸಹ ನನಗೆ ಕಲ್ಯಾಣವನ್ನುಂಟು ಮಾಡಲಿ.

ಕಾಲಾಂಬುದಾಲಿಲಲಿತೋರಸಿ ಕೈಟಭಾರೇ-
ರ್ಧಾರಾಧರಸ್ಫುರತಿ ಯಾ ತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿ
ಭದ್ರಾಣಿ ಮೇ ದಿಶತು ಭಾರ್ಗವನಂದನಾಯಾಃ || 5 ||

ಕೈಟಭಶತೃವಾದ ( ವಿಷ್ಣುವಿನ ) ಕಾಲಮೇಘದಂತೆ ಕಾಂತಿಯುಳ್ಳ ಸುಂದರವಾದ ಎದೆಯಲ್ಲಿ ಮಿಂಚಿನಬಳ್ಳಿಯಂತೆ ಹೊಳೆಯುತ್ತಿರುವ ಖಡ್ಗವಿದೆಯೋ, ಅದರೋಡನೆಯೇ ಎದೆಯಲ್ಲಿ ನೆಲೆಸಿರುವ ಸಮಸ್ತ ಜಗತ್ತಿಗೂ ತಾಯಿಯಾದ ಮಹಾಶ್ರೇಷ್ಠವಾದ ಭಾರ್ಗವಪುತ್ರಿಯ ದಿವ್ಯರೂಪವು ನನಗೆ ಮಂಗಳವನ್ನುಂಟು ಮಾಡಲಿ.

ಪ್ರಾಪ್ತಂ ಪದಂ ಪ್ತಥಮತಃ ಖಲು ಯತ್ಪ್ರಭಾವಾತ್
ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂದರಮೀಕ್ಷಣಾರ್ಥಂ
ಮಂದಾಲಸಾಕ್ಷಿ ಮಕರಾಕರಕನ್ಯಕಾಯಾಃ || 6 ||

ಯಾವ ದೇವಿಯ ಅನುಗ್ರಹ ದೃಷ್ಟಿಯಿಂದ ಮಧುಸೂದನನಲ್ಲಿ ಸ್ಥಾನವು ಮೊದಲ ಬಾರಿಗೆ ಮಂಗಳಕರವಾಗಿ ಮನ್ಮಥನಿಗೆ ದೊರಕಿತೋ ( ಆ ದೇವಿಯ ), ಸಮುದ್ರರಾಜನ ಕನ್ಯೆಯಾದ ಲಕ್ಷ್ಮಿಯ ಕಟಾಕ್ಷವು ಅಲ್ಪವಾಗಿಯಾದರೂ ಮೆಲ್ಲ ಮೆಲ್ಲನೆ ನನ್ನ ಮೇಲೆ ಹರಿಯುವಂತಾಗಲಿ.

ವಿಶ್ವಾಮರೇಂದ್ರಪದವಿಭ್ರಮದಾನದಕ್ಷ 
ಮಾನಂದಹೇತುರಧಿಕಂ ಮಧವಿದ್ವಿಷೋಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧ
 ಮಿಂದೀವರೋದರಸಹೋದರಮಿಂದಿರಾಯಾಃ || 7 ||

ಸಮಸ್ತದೇವತಾಶ್ರೇಷ್ಠರ ಪದವಿಗಳೆಂಬ ಸೌಭಾಗ್ಯವನ್ನು ಕೊಡುವದರಲ್ಲಿ ಸಮರ್ಥವಾದ, ಮತ್ತು ಮಧುಸೂದನನಿಗೂ ಹೆಚ್ಚಿನ ಆನಂದಕಾರಣವಾದ, ಕಮಲದ ಗರ್ಭದಂತೆ ಮೃದುವಾದ ಇಂದಿರಾದೇವಿಯ ಕಣ್ಣಿನ ನೋಟದ ಅರ್ಧ ಭಾಗದಲ್ಲಿ ಒಂದಿಷ್ಟಾದರೂ ನನ್ನಲ್ಲಿ ನೆಲೆಗೊಳ್ಳಲಿ.
ಇಷ್ಟಾವಿಶಿಷ್ಟಮತಯೋಪಿನರಾಯಯಾ ದ್ರಾಗ್ 
ದೃಷ್ಟಾಸ್ತ್ರಿವಿಷ್ಟಪದಂ ಸುಲಭಂ ಲಭಂತೇ |
ದೃಷ್ಟಿಃ ಪ್ರಹೃಷ್ಟಕಮಲೋದರದೀಪ್ತಿರೀಷ್ಟಾಂ ಪುಷ್ಟಿಂ 
ಕೃಪೀಷ್ಟಮಮ ಪುಷ್ಕರವಿಷ್ಟರಾಯಾಃ || 8 ||

ವಿಶೇಷವಾದ ಪಾಂಡಿತ್ಯವುಳ್ಳ (ದೇವಿಗೆ) ಪ್ರಿಯರಾದ ಮನಷ್ಯರಾರೂ ಒಮ್ಮೆ ದೇವಿಯ ದೃಷ್ಟಿಗೆ ಪಾತ್ರರಾದದ್ದೇ ಆದರೆ ಸುಲಭವಾಗಿ ಸ್ವರ್ಗಪದವಿಯನ್ನು ಹೊಂದುವರು. ಅರಳಿದ ಕಮಲದ ಒಳಭಾಗದಂತೆ ಕಾಂತಿಯುಳ್ಳ, ಕಮಲಾಸನೆಯಾದ ದೇವಿಯ ಅಂಥ ದೃಷ್ಟಿಯ ನನಗೆ ಪುಷ್ಟಿಯನ್ನುಂಟುಮಾಡಲಿ.

ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾ ಮಸ್ಮಿನ್ನ 
ಕಿಂಚನ ವಿಹಂಗಶಿಶೌ ವಿಷಣ್ಣೇ |
ದುಷ್ಕರ್ಮಘರ್ಮಮಪನೀಯ ಚಿರಾಯ 
ದೂರಾನ್ನಾರಾಯಣಪ್ರಣಯಿನೀನಯನಾಂಬುವಾಹಃ || 9 ||

ನಾರಾಯಣನ ಪ್ರಿಯೆಯಾದ ದೇವಿಯ ಕಟಾಕ್ಷಪ್ರವಾಹವು ಕೆಟ್ಟ ಕರ್ಮಗಳೆಂಬ ಬಿಸಿಲನ್ನು ನಿತ್ಯವಾಗಿ ದೂರವಾಗಿ ತೊಡೆದುಹಾಕಿ ವಿಷಾದದಿಂದ ಕೂಡಿರುವ ದರಿದ್ರವೆಂಬ ಪಕ್ಷಿಯ ಮರಿಯಾದ (ನನ್ನಲ್ಲಿ ) ದಯೆಯಿಟ್ಟು ಕೃಪೆಯಿಂದ ಗಾಳಿಯಿಂದ ಪ್ರೇರಿಸಲ್ಪಟ್ಟ ಐಶ್ವರ್ಯವೆಂಬ ಮಳೆಯ ಧಾರೆಯುನ್ನುಂಟುಮಾಡಲಿ.

ಗೀರ್ದೇವತೇತಿ ಗರುಡಧ್ವಜಸುಂದರೀತಿ 
ಶಾಕಂಭರೀತಿ ಶಶಿಶೇಖರವಲ್ಲಭೇತಿ |
ಸೃಷ್ಟಿಸ್ಥಿತಿಪ್ರಲಯಕೇಲಿಷು ಸಂಸ್ಥಿತಾಯೈ 
ತಸ್ಮೈ ನಮಸ್ತ್ರಿಭುವನೈಕಗುರೋಸ್ತರುಣ್ಯೈ || 10 ||

ವಾಗ್ಧೇವಿಯೆಂದೂ ಗರುಡಧ್ವಜನಾದ ವಿಷ್ಣುವಿನ ಪ್ರಿಯಳೆಂದೂ ಶಾಖಂಬರಿಯೆಂದೂ ಚಂದ್ರಶೇಖರನಾದ ಶಿವನ ಪತ್ನಿಯೆಂದೂ ಆಯಾ ಕಾಲಕ್ಕೆ ಎಂದರೆ ಸೃಷ್ಟಿ-ಸ್ಥಿತಿ-ಸಂಹಾರ ಲೀಲೆಗಳಲ್ಲಿ ತೋರಿಕೊಂಡಿರುವವಳಾದ, ಮೂರು ಲೋಕಕ್ಕೂ ಗುರುವಾದ ಶ್ರೀ ಮನ್ನಾರಾಯಣನ ಮಡದಿಯಾದ ಅಕೆಗೆ ವಂದನೆಗಳು.

ಶ್ರುತ್ಯೈಸಮೋಸ್ತು ಶುಭಕರ್ಮಫಲಪ್ರಸೂತ್ಯೈ 
ರತ್ಯೈ ನಮೋಸ್ತು ರಮಣೀಯಗುಣಾಶ್ರಯಾಯೈ |
ಶಕ್ತ್ಯೈ ನಮೋಸ್ತು ಶತಪತ್ರನಿಕೇತನಾಯೈ 
ಪುಷ್ಪೈ ನಮೋಸ್ತು ಪುರುಷೋತ್ತಮವಲ್ಲಭಾಯೈ || 11 ||

ಶುಭಕರ್ಮಗಳ ಫಲವನ್ನು ಉಂಟುಮಾಡುವ ಶ್ರುತಿರೂಪಳಾದ ದೇವಿಗೆ ನಮಸ್ಕಾರವು. ರಮಣೀಯವಾದ ಗುಣಗಳಿಗೆ ಆಶ್ರಯಳಾದ ರತತಿಗೆ ನಮಸ್ಕಾರಗಳು. ಕಮಲನಿವಾಸಿನಿಯಾದ ಶಕ್ತಿರೂಪಳಾದ ಲಕ್ಷ್ಮಿಗೆ ನಮಸ್ಕಾರಗಳು. ಪುರುಷೋತ್ತಮನ ಪತ್ನಿಯಾದ ಪುಷ್ಪಿದೇವಿಗೆ ನಮಸ್ಕಾರಗಳು.

ನಮೋಸ್ತು ನಾಲಿಕನಿಭಾನನಾಯೈ 
ನಮೋಸ್ತು ದಿಗ್ಧೋದಧಿಜನ್ಮಭೂಮ್ಯೈ |
ನಮೋಸ್ತು ಸೋಮಾಮೃತಸೋದರಾಯೈ 
ನಮೋಸ್ತು ನಾರಾಯಣವಲ್ಲಭಾಯೈ || 12 ||

ಕಮಲದಂತೆ ಸುಂದರವಾದ ಮುಖವುಳ್ಳ ದೇವಿಗೆ ನಮಸ್ಕಾರ. ಕ್ಷೀರಸಮುದ್ರವನ್ನು ಜನ್ಮಸ್ಥಾನವಾಗಿ ಹೊಂದಿರುವವಳಿಗೆ ನಮಸ್ಕಾರ. ಸಮುದ್ರಮಂಥನ ಕಾಲದಲ್ಲಿಯೇ ( ಲಕ್ಷ್ಮಿಯೊಡನೆ ) ಹುಟ್ಟಿದ ಚಂದ್ರ ಹಾಗೂ ಅಮೃತಗಳಿಗೆ ಸೋದರಿಯಾದವಳಿಗೆ ನಮಸ್ಕಾರ ನಾರಾಯಣನ ವಲ್ಲಭೆಗೆ ವಂದನೆಗಳು.

ನಮೋಸ್ತು ಹೇಮಾಂಭುಜಪೀಠಕಾಯೈ 
ನಮೋಸ್ತು ಭೂಮಂಡಲನಾಯಿಕಾಯೈ |
ನಮೋಸ್ತು ದೇವಾದಿದಯಾಪರಾಯೈ 
ನಮೋಸ್ತು ಶಾರ್ಙ್ಗೌಯುಧವಲ್ಲಭಾಯೈ || 13 ||

ಸುವರ್ಣಕಮಲಪೀಠವಾಸಿನಿಯಾದ, ಭೂಮಂಡಲಕ್ಕೆಲ್ಲ ಒಡೆಯಳಾದ, ದೇವಾದಿ ಸಮಸ್ತ ಜೀವಿಗಳಲ್ಲಿಯೂ ದಯೆಯುಳ್ಳ ಮತ್ತು ಶಾರ್ಙ್ಗವೆಂಬ ಬಿಲ್ಲನ್ನು ಧರಿಸಿರುವ ವಿಷ್ಣುವಿನ ಪತ್ನಿಯಾದ ದೇವಿಗೆ ನಮಸ್ಕಾರಗಳು.

ನಮೋಸ್ತು ದೇವ್ಯೈ ಭೃಗುನಂದನಾಯೈ 
ನಮೋಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋಸ್ತು ಲಕ್ಷ್ಮೈ ಕಮಲಾಲಯಾಯೈ 
ನಮೋಸ್ತು ದಾಮೋದರವಲ್ಲಭಾಯೈ || 14 ||

ಭೃಗುಪುತ್ರಿಯಾದ ದೇವಿಗೆ, ವಿಷ್ಣವಿನ ಹೃದಯವಾಸಿನಿಯಾದವಳಿಗೆ, ಕಮಲವಾಸಿನಿಯಾದ ಲಕ್ಷ್ಮಿಗೆ, ದಾಮೋದರನ ಪತ್ನಿಯಾದ ಮಹಾದೇವಿಗೆ ವಂದನೆಗಳು.

ನಮೋಸ್ತು ಕಾಂತ್ಯೈ ಕಮಲೇಕ್ಷಣಾಯೈ 
ನಮೋಸ್ತು ಭೂತ್ಯೈ ಭವನಪ್ರಸೂತ್ಯೈ |
ನಮೋಸ್ತು ದೇವಾದಿಭಿರರ್ಚಿತಾಯೈ 
ನಮೋಸ್ತು ನಂದಾತ್ಮಜವಲ್ಲಭಾಯೈ || 15 ||

ಕಮಲದಂತೆ ಕಂಗಳುಳ್ಳ ಪ್ರಕಾಶಮಾನಳಾದವಳಿಗೂ, ಜಗತ್ತನ್ನು ಹಡೆದಿರುವ ಮಹಿಮಾವಂತಳಿಗೂ ದೇವತೆಗಳೇ ಮೊದಲಾದವರಿಂದ ಪೂಜಿಸಲ್ಪಟ್ಟವಳಿಗೂ ನಂದಗೋಪನ ಮಜಗಳಾದ ದುರ್ಗೆಗೆ ಪ್ರಿಯಳಾಗಿಯೂ ಇರುವ ಮಹಾಲಕ್ಷ್ಮಿಗೆ ನಮಸ್ಕಾರಗಳು.

ಸಂಪತ್ಕರಾಣಿ ಸಕಲೇಂದ್ರಿಯ ನಂದನಾನಿ 
ಸಾಮ್ರಾಜ್ಯದಾನವಿಭವಾನಿ ಸರೋರುಹಾಣಿ |
ತ್ವದ್ವಂದನಾನಿ ದುರಿತಾಹರಣೋದ್ಯತಾನಿ 
ಮೂಮೇವ ಮಾತರನಿಶಂ ಕಲಯಂತು ಮಾನ್ಯೇ || 16 ||

ಸಂಪತ್ತುಗಳನ್ನು ನೀಡುವ, ಎಲ್ಲಾ ಇಂದ್ರಿಯಗಳಿಗೂ ಆನಂದವ ನ್ನುಂಟುಮಾಡುವ, ಸಾಮ್ರಾಜ್ಯ ಪದವಿಯನ್ನು ದಯಪಾಲಿಸುವ ನಿನ್ನ ಪಾದಕಮಲಗಳನ್ನು ನಮಸ್ಕರಿಸುವಿಕೆಯು ಸಕಲ ಪಾಪಗಳನ್ನೂ ಕಳೆಯುವುದರಲ್ಲಿ ಮುಂದಾಗಿರುವವು. ಎಲೌ ತಯೆ, ಮಾನನೀಯಳೆ, ಆ ವಂದನೆಗಳು ಯಾವಾಗಲೂ ನನಗೆ ಸಂಭವಿಸುತ್ತಿರಲಿ.

ಯತ್ಕಟಾಕ್ಷಸಮುಪಾಸನಾವಿಧಿಃ 
ಸೇವಕಸ್ಯ ಸಕಲಾರ್ಥಸಂಪದಃ |
ಸಂತನೋತಿ ವಚನಾಂಗಮಾನಸೈಸ್ತ್ವಾಂ 
ಮುರಾರಿಹೃದಯೇಶ್ವರೀಂ ಭಜೇ || 17 ||

ಯಾವ ದೇವಿಯ ಕುಡಿಗಣ್ಣಿನ ನೋಟದ ಚಿಂತನೆಯು ಸೇವಕನಾದ ಭಕ್ತನಿಗೆ ಸಮಸ್ತ ಇಷ್ಟಾರ್ಥಗಳನ್ನೂ ಕೊಡುವುದೋ ಅಂಥ, ಮರಾರಿಯಾದ ನಾರಾಯಣನ ಹೃದಯೇಶ್ವರಿಯಾದ ನಿನ್ನನ್ನು ಕಾಯೇನ-ಮನಸಾ-ವಾಚಾ ( ತ್ರಿಕರಣಗಳಿಂದಲೂ) ಭಜಿಸುವೆನು.

ಸರಸಿಜನಯನೇ ಸರೋಜಹಸ್ತೇ 
ಧವಲತಮಾಂಶುಕಗಂಧಮಾಲ್ಯಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿ
ಭುವನಭೂತಿಕರಿ ಪ್ರಸೀದ ಮಹ್ಯಮ್ || 18 ||

ಕಮಲದಂತೆ ಕಣ್ಣುಳ್ಳವಳೆ, ಕೈಯಲ್ಲಿ ಕಮಲವನ್ನು ಹಿಡಿದಿರುವವಳೆ, ಅತ್ಯಂತ ಶುಭ್ರವಾದ ವಸ್ತ್ರ, ಗಂಧ, ಹೂಮಾಲೆಗಳಿಂದ ಶೋಭಿಸುತ್ತಿರುವವಳೆ, ಪೂಜ್ಯಳೆ, ಶ್ರೀಹರಿಯ ಪ್ರಿಯಳೆ, ಮನೋಜ್ಞಳೆ, ಮೂರು ಲೋಕಗಳ ಐಶ್ವರ್ಯಗಳ ಐಶ್ವರ್ಯವನ್ನು ಕೊಡುವವಳೆ, ನನಗೆ ಪ್ರಸನ್ನಳಾಗು.

ದಿಗ್ ಹಸ್ತಿಭಿಃ ಕನಕಕುಂಭಮುಖಾವಸೃಷ್ಟ-
ಸ್ವರ್ವಾಹಿನೀವಿಮಲಚಾರುಜಲಾಪ್ಲುತಾಂಗೀಮ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ-
ಲೋಕಾಧಿನಾಥಗೃಹಿಣೀಮಮೃತಾಬ್ಧಿಪುತ್ರೀಮ್ || 19 ||

ದಿಗ್ಗಜಗಳ ( ಸೊಂಡಿಲುಗಳಲ್ಲಿರುವ) ಚಿನ್ನದ ಕಲಶಗಳ ಬಾಯಿಂದ ಸುರಿಯಲ್ಪಟ್ಟ ಆಕಾಶಗಂಗೆಯ ದಿವ್ಯಜಲದಿಂದ ತೋಯಿಸಲ್ಪಟ್ಟ ಶರೀರವುಳ್ಳವಳೂ, ಜಗತ್ತಿಗೇ ತಾಯಿಯೂ, ಸಮಸ್ತ ಲೋಕಗಳ ಒಡೆಯನಾದ ( ವಿಷ್ಣುವಿನ ) ಪತ್ನಿಯೂ, ಅಮೃತಸಮುದ್ರರಜನ ಮಗಳೂ ಆದ ದೇವಿಯನ್ನು ನಾನು ಪ್ರಾತಃಕಾಲದಲ್ಲಿ ವಂದಿಸುವೆನು.

ಕಮಲೇ ಕಮಲಾಕ್ಷವಲ್ಲಭೇ ತ್ವಂ 
ಕರುಣಾಪೂರತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ 
ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ || 20 ||

ಎಲೌ ಕಮಲಾದೇವಿಯ, ಕಮಲನಯನನಾದ ವಿಷ್ಣುವಿನ ಪ್ರಿಯಳೆ, ನೀನು ಕರುಣೆಯಿಂದ ತುಂಬಿದ ಚಂಚಲವಾದ ಕುಡಿನೋಡಗಳಿಂದ ನನ್ನನ್ನು ನೋಡುವವಳಾಗು. ದರಿದ್ರದಲ್ಲಿ ಮೊದಲಿಗನೂ ದಯೆತೋರಬೇಕಾದವರ ಗುಂಪಿನಲ್ಲಿ ಅರ್ಹನೂ ಕಪಟವಿಲ್ಲದವನೂ ನಾನಾಗಿರುವೆನಷ್ಟೆ?

ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ 
ತ್ರಯೀಮಯೀಂ ತ್ರಿಭುವನಮಾತರಂ ರಮಾಮ್ |
ಗುಣಾಧಿಕಾ ಗುರುತರಭಾಗ್ಯಭಾಜಿನೋ 
ಭವಂತಿ ತೇ ಭುವಿ ಬುಧಭಾವಿತಾಶಯಾಃ || 21 ||

ಯಾರು ಈ ದಿವ್ಯ ಸ್ತುತಿಗಳಿಂದ ವೇದಮಯಳೂ, ಮೂರು ಲೋಕಗಳ ತಾಯಿಯೂ ಆದ ರಮಾದೇವಿಯನ್ನು ಸ್ತೋತ್ರ ಮಾಡುವರೋ ಅವರು ಈ ಭೂಲೋಕದಲ್ಲಿ ಗುಣಸಂಪನ್ನರೂ ಅತ್ಯಧಿಕವಾದ ಐಶ್ವರ್ಯಯುಕ್ತರೂ, ವಿದ್ವಾಂಸರಿಂದ ಗೌರವಿಸಲ್ಪಡುವವರೂ ಆಗಿ ಸುಖಿಸುವರು.

|| ಇತಿ ಶ್ರೀ ಜಗದ್ಗುರು ಆದಿಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರಂ ಸಂಪೂರ್ಣಂ ||
********





No comments:

Post a Comment